Tag: VD Savarkar

  • ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    • ಜಾಗೃತಿಗಾಗಿ ಸಾವರ್ಕರ್ ಕೃತಿ ಹಂಚಿಕೆ – ಯುವಕರಿಗೆ ಕಾರ್ಯಾಗಾರ

    ವಿಜಯಪುರ: ಗಣೇಶ ಹಬ್ಬದಂದು ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡಲು ವಿಚಾರ ಮಾಡಲಾಗಿದೆ ಎಂದು ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರಂಥ ರಾಷ್ಟ್ರ ನಾಯಕರನ್ನು ಯಾರೇ ಅವಮಾನ ಮಾಡಿದ್ರೂ ಸಹಿಸಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾವರ್ಕರ್ ಫೋಟೊವನ್ನು ಮುಸ್ಲಿಂ ಏರಿಯಾದಲ್ಲಿ ಹಾಕಬಾರದು, ಅವರ ಫೋಟೊವನ್ನು ಹಾಕಲೇಬಾರದು ಎಂಬ ಚಿಂತನೆಯನ್ನು ಹೊತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಈ ಬಾರಿ ಗಣೇಶ ಪೆಂಡಾಲ್‌ಗಳಲ್ಲಿ ಸಾವರ್ಕರ್ ಫೋಟೊ ಹಾಕಬೇಕು ಎಂದು ಗಜಾನನ, ಹಿಂದೂಪರ ಸಂಘಟನೆಗಳು ಹಾಗೂ ರಾಷ್ಟ್ರಭಕ್ತರು ಆಲೋಚನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಇಂದು ವಿಜಯಪುರದಲ್ಲಿ ಬೈಠಕ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಡ್ ಕಾಮೆಂಟ್ ಮಾಡಿದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ಕೊಟ್ಟ ಅನಸೂಯ

    ಗಣೇಶನನ್ನು ಕೂರಿಸುವಾಗ ಸಾವರ್ಕರ್ ಫೋಟೊ ಅನ್ನು ಇಡುವ ವಿಚಾರ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಪುಸ್ತಕವನ್ನು ತರಲಾಗಿದೆ. ಅದನ್ನು ಕಡಿಮೆ ಬೆಲೆಗೆ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಸಾವರ್ಕರ್ ಕುರಿತು ಯುವಕರಿಗೆ ಕಾರ್ಯಾಗಾರ ಮಾಡಲಾಗುತ್ತಿದೆ. ರಾಷ್ಟ್ರ ಪುರುಷರ ಬಗ್ಗೆ ಯಾರಾದ್ರೂ ಕೇವಲವಾಗಿ ಮಾತನಾಡಿದ್ರೆ ಅವರಿಗೆ ಪ್ರತಿಕ್ರಿಯೆ ಕೊಡಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    12 ವರ್ಷಗಳ ಕಾಲ ಕಾಲಾಪಾನಿ ಅಂತಹ ಜೈಲಿನಲ್ಲಿರುವಾಗ ಬೇರೆ ಅವಕಾಶಗಳೇ ಇರಲಿಲ್ಲ. ಆ ಸಂದರ್ಭದಲ್ಲಿ ಭಾರತದ ಕುರಿತು ಅವರು ತಮ್ಮದೇ ಶೈಲಿಯಲ್ಲಿ ತಮ್ಮದೇ ಕೃತಿಯಲ್ಲಿ ವರ್ಣಿಸಿದ್ದರು. ಅದನ್ನೇ ಪುಸ್ತಕದಲ್ಲಿ ತಿಳಿಸಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ವಿಶಾಲ ಮನಸ್ಸು ಎಲ್ಲರಿಗೂ ಇದೆ ಎಂದು ಟೀಕಾಕಾರರಿಗೆ ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಮಡಿಕೇರಿ: ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. `ಕೊಡಗಿನ ವಿರೋಧಿ, ಕೊಡವರ ವಿರೋಧಿ ಸಿದ್ದರಾಮಯ್ಯ’ ಎಂಬಿತ್ಯಾದಿ ಘೋಷಣೆಗಳ ಮೂಲಕ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿನ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದು ವಾತಾವರಣ ಉದ್ವಿಗ್ನಗೊಂಡಿದೆ. ಇದೇ ವೇಳೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಸಿದ್ದರಾಮಯ್ಯ ಶಾಂತಿ ಪ್ರಿಯ ಕೊಡಗಿಗೆ ಬರೋದು ಬೇಡ, ಶಾಂತಿಪ್ರಿಯ ನಾಡಿನಲ್ಲಿ ಕೋಮುಗಲಭೆ ಬೆಳೆಸಿದ್ದಾರೆ. ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದಾರೆ. 7 ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಬಲವಂತವಾಗಿ ಆಚರಿಸಿದ್ದರು. ಇದರಿಂದ ಜಿಲ್ಲೆಯಲ್ಲಿ ಎರಡು ಜನರ ಪ್ರಾಣ ಹೋದವು. ಅಂತಹವರು ಕೊಡಗಿಗೆ ಬರೋದು ಬೇಡ ಎಂದು ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಮಾಡಿಕೊಂಡಿದ್ದಾರೆ.

    ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು.

    ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕಲಬುರಗಿ: ಸರ್ಕಾರ  ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರೇ ಮಾತ್ರವೇ ಹಿಂದೂಗಳು ಸುರಕ್ಷಿತವಾಗಿರಲಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಶಿವಮೊಗ್ಗದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇಂತಹ ಘಟನೆಗಳಿಂದ ಹಿಂದೂ ಕಾರ್ಯಕರ್ತರು ಜರ್ಜರಿತವಾಗಿ ಓಡಾಡಲು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ದಾಳಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಹಿಂದೂ ಕಾರ್ಯಕರ್ತರೂ ಕೈಕಟ್ಟಿ ಕುಳಿತುಕೊಳ್ಳುವ ಕಾಲ ಈಗ ಇಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಕೊಡುವ ನಿಟ್ಟಿನಲ್ಲಿ ನಾವಿಂದು ವಿಚಾರ ಮಾಡಬೇಕಾಗಿದೆ. ಸರ್ಕಾರ ಶೂಟ್ ಅಂಡ್ ಸೈಟ್‌ಗೆ ಅನುಮತಿ ಕೊಟ್ಟರೆ ಮಾತ್ರವೇ ಹಿಂದೂಗಳು ಸುರಕ್ಷಿತವಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಶಿವಮೊಗ್ಗ-ಭದ್ರಾವತಿ ಘಟನೆ ನಂತರವೂ ಯಾರೊಬ್ಬರೂ ಹೇಳಿಕೆ ಕೊಡುತ್ತಿಲ್ಲ. ಹೇಳಿಕೆ ಕೊಡುವವರ ಬಾಯಿಗೆ ಸರ್ಕಾರವೇ ಬೀಗ ಹಾಕಿದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ಶಿವಮೊಗ್ಗ: ಸಾವರ್ಕರ್ ಫೋಟೋ ವಿವಾದದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ ಪ್ರೇಮ್‌ಸಿಂಗ್ ಸ್ನೇಹಿತನ ಸ್ಫೋಟಕ ಹೇಳಿಕೆಯಿಂದಾಗಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರೇಮ್ ಸಿಂಗ್ ಸ್ನೇಹಿತ ಉತ್ತಮ್ ಭಾಟಿ, ಪ್ರೇಮ್‌ಸಿಂಗ್ ಕೈಗೆ ರಾಕಿ, ಹಣೆಗೆ ತಿಲಕ ಇಟ್ಟುಕೊಂಡಿದ್ದಕ್ಕೆ ಚಾಕು ಇರಿದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಅಮೀರ್ ಅಹಮ್ಮದ್ ಸರ್ಕಲ್ ನಲ್ಲಿ ನಡೆದ ಗಲಾಟೆ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪೊಲೀಸರು 144 ಸೆಕ್ಷನ್ ಇದೆ ಎಂದು ಹೇಳಿದಾಗ ನಾವು ಅಂಗಡಿ ಬಂದ್ ಮಾಡಿದೆವು. ಇದೇ ವೇಳೆ ಏಕಾಏಕಿ ಗುಂಪಿನಲ್ಲಿ ಬಂದ ಹತ್ತು ಜನರು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ. ಕೈಗೆ ರಾಕಿ ಕಟ್ಟಿಕೊಂಡಿದ್ದಕ್ಕೆ, ಹಣೆಗೆ ತಿಲಕ ಇಟ್ಟಿದ್ದಕ್ಕೇ ಚಾಕು ಇರಿದಿದ್ದಾರೆ ಎಂದು ಉತ್ತಮ್ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಮುಬಾರಕ್ ಅರೆಸ್ಟ್: ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಬಾರಕ್‌ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    – ಸಂಕಲ್ಪಪತ್ರ ಹೆಸರಿನ ಪ್ರಾಣಳಿಕೆ ಬಿಡುಗಡೆ
    – 5 ವರ್ಷದಲ್ಲಿ 1 ಕೋಟಿ ಉದ್ಯೋಗ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಏರಿದರೆ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದೆ.

    ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದರು. 44 ಪುಟಗಳ ಸಂಕಲ್ಪ ಪತ್ರದ ಮೂಲಕ ಮತದಾರರಿಗೆ ಅನೇಕ ಭರವಸೆಗಳನ್ನು ಬಿಜೆಪಿ ನೀಡಲಾಗಿದೆ. ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.

    ಸಾವರ್ಕರ್ ಯಾರು?
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಜನಿಸಿದ್ದ ಸಾವರ್ಕರ್ ಹಿಂದೂ ಮಹಾಸಭಾವನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಭಾರತ ಪಾಕಿಸ್ತಾನ ವಿಭಜನೆ ಮಾಡಲು ಒಪ್ಪಿಗೆ ನೀಡಿದ್ದಕ್ಕೆ ಗಾಂಧೀಜಿ ಅವರನ್ನು ಕಟುವಾಗಿ ವಿರೋಧಿಸಿದ್ದರು. ನಾಥೂರಾಮ್ ಗೂಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಮತ್ತು ಗಾಂಧೀಜಿ ಹತ್ಯೆಯ ಮಾಸ್ಟರ್ ಮೈಂಡ್ ಸಾವರ್ಕರ್ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಅಡಿ ಸರ್ಕಾರ ಬಂಧಿಸಿದ್ದರೂ ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು.

    ಸಂಕಲ್ಪ ಪತ್ರದಲ್ಲಿ ಏನಿದೆ?
    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ. ಕೃಷಿಯಲ್ಲಿ ಬಳಸುವ ವಿದ್ಯುತ್ ಸೌರಶಕ್ತಿಯನ್ನು ಆಧರಿಸಿರುತ್ತದೆ ಮತ್ತು ರೈತರಿಗೆ 12 ಗಂಟೆಗಳಿಗಿಂತ ಹೆಚ್ಚಿನ ವಿದ್ಯುತ್ ಒದಗಿಸಲಾಗುವುದು. 2022ರ ವೇಳೆಗೆ 5 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೂಡಿಕೆ ಮಾಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

    ಗೋದಾವರಿ ಕಣಿವೆಯಿಂದ ಪಶ್ಚಿಮದಿಂದ ಹರಿಯುವ ನದಿಗಳ ನೀರನ್ನು ನಿಲ್ಲಿಸಿ ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ ಬರ ಪೀಡಿತ ಭಾಗಕ್ಕೆ ಸಾಗಿಸಲಾಗುತ್ತದೆ. ಈ ಮೂಲಕ ಮುಂಬರುವ 5 ವರ್ಷಗಳಲ್ಲಿ ಮಹಾರಾಷ್ಟ್ರವನ್ನು ಬರಗಾಲದಿಂದ ಮುಕ್ತಗೊಳಿಸುತ್ತೇವೆ. ಮೂಲ ಸೌಕರ್ಯಗಳಿಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.

    ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 30 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆ, ಪತ್ನಿ ಸಾವಿತ್ರಿಭಾಯಿ ಫುಲೆ ಹಾಗೂ ವಿಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.

  • ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಪಣಜಿ: ಗೋವಾದ 10ನೇ ತರಗತಿ ಪುಸ್ತಕದಲ್ಲಿದ್ದ ಮಾಜಿ ಪ್ರಧಾನಿ ಜವಹಾರ್ ಲಾಲ್ ಭಾವಚಿತ್ರದ ತಗೆದು ಆರ್‌ಎಸ್‌ಎಸ್ ಸಹ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಫೋಟೋ ಬಳಕೆ ಮಾಡಲಾಗಿದ್ದು, ಇದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‍ಎಸ್‍ಯುಐ) ಭಾರೀ ವಿರೋಧ ವ್ಯಕ್ತಪಡಿಸಿದೆ.

    10ನೇ ತರಗತಿಯ ಸಮಾಜವಿಜ್ಞಾನ ವಿಷಯ ಪುಸ್ತಕದಲ್ಲಿ ನೆಹರು ಫೋಟೋ ಇತ್ತು. ಅದು 1935ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಜವಹಾರ್ ಲಾಲ್ ನೆಹರು ಅವರು ಮಹಾತ್ಮಾ ಗಾಂಧೀಜಿ ಹಾಗೂ ಮೌಲಾನ್ ಅಬ್ದುಲ್ ಕಲಾಂ ಆಜಾದ್ ಜೊತೆಗೆ ಇದ್ದ ಭಾವಚಿತ್ರ. ಆದರೆ ನೆಹರು ಫೋಟೋ ತಗೆದು ಅಲ್ಲಿ ವಿ.ಡಿ.ಸಾರ್ವಕರ್ ಫೋಟೋ ಹಾಕಲಾಗಿದೆ ಎಂದು ದೂರಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಪಂತಿಯ ವಿಚಾರಗಳನ್ನು ಎತ್ತಿ ಹಿಡಿಯುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿಯವರು ಇತಿಹಾಸವನ್ನು ತಿರುಚಲು ಹಾಗೂ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‍ಎಸ್‍ಯುಐ ಗೋವಾ ರಾಜ್ಯ ಅಧ್ಯಕ್ಷ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ಸಿಗೆ ಸೇರಿದವರು ಎನ್ನುವ ಕಾರಣಕ್ಕೆ ಅವರ ಫೋಟೋವನ್ನು ತಗೆದು ಹಾಕಬಹುದು. 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವುದದು ಬಿಜೆಪಿ ವಾದವಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಿಜೆಪಿಯವರಿಗೆ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಫೋಟೋ ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ಉನ್ನತ ಹಾಗೂ ಮಾಧ್ಯಮಿಕ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಗಜಾನನ ಪಿ ಭಟ್ ತಿಳಿಸಿದ್ದು, ಇತ್ತ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಸಮಂತ್ ತನಿಖೆಗೆ ಆದೇಶ ನೀಡಿದ್ದಾರೆ.

    ವೃತ್ತಿ ಅನುಭವ ಹಾಗೂ ಹಿನ್ನಲೆ ಆಧಾರದ ಮೇಲೆ ಶಿಕ್ಷಕರನ್ನು ಪುಸ್ತಕದ ವಿಷಯ ಬದಲಾವಣೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ಕಡೆಗೂ ಬದಲಾವಣೆ ಮಾಡುವ ಅಧಿಕಾರ ಅವರಿಗೆ ಇರುವುದಿಲ್ಲ. ಅವಶ್ಯಕತೆ ಇರುವಲ್ಲಿ ವಿಷಯ ಬದಲಾವಣೆಗೆ ಸಲಹೆ ನೀಡಬಹುದು. ಆದರೆ ಅವರು ಏಕೆ ಫೋಟೋ ಬದಲಾವಣೆ ಮಾಡಿದರು ಎನ್ನುವುದು ತಿಳಿದಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಾಮಕೃಷ್ಣ ಸಮಂತ್ ತಿಳಿಸಿದ್ದಾರೆಂದು ವರದಿಯಾಗಿದೆ.

    ಮೇ ತಿಂಗಳಿನಲ್ಲಿ ಹೊಸ ಪಠ್ಯ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.