Tag: VD Savarkar

  • ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ

    ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ

    – ಸಾವರ್ಕರ್‌ ಬ್ರಿಟಿಷರ ಸೇವಕ ಎಂದಿದ್ದ ರಾಗಾ

    ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ (Supreme Court) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಭವಿಷ್ಯದಲ್ಲಿ ಸಾರ್ವಕರ್‌ (VD Savarkar) ಅವರಿಗೆ ಅವಮಾನ ಮಾಡುವ ಯಾವುದೇ ಹೇಳಿಕೆಗಳನ್ನು ನೀಡಿದರೆ ರಾಹುಲ್‌ ವಿರುದ್ಧ ಸ್ವಯಂ ಪ್ರೇರಿತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿದೆ.

    ಇಂದು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ ಮನಮೋಹನ್ ಅವರನ್ನೊಳಗೊಂಡ ಪೀಠ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ಪೀಠ ಸಾವರ್ಕರ್ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ವಿಚಾರಣೆಗೆ ತಡೆ ನೀಡಿತು. ಇದನ್ನೂ ಓದಿ: ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    ಆರಂಭದಲ್ಲೇ ಸಾವರ್ಕರ್ ಬ್ರಿಟಿಷರ ಸೇವಕ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ನ್ಯಾ. ದತ್ತ ಆಕ್ಷೇಪ ವ್ಯಕ್ತಪಡಿಸಿದರು. ಗಾಂಧೀಜಿ ವೈಸ್‌ರಾಯ್‌ಗೆ ಬರೆದ ಪತ್ರಗಳಲ್ಲಿ ʼನಿಮ್ಮ ನಿಷ್ಠಾವಂತ ಸೇವಕʼ ಎಂಬ ಪದವನ್ನು ಬಳಸಿದ್ದರಿಂದ ಮಹಾತ್ಮಾ ಗಾಂಧೀಜಿ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯಬಹುದೇ ಎಂದು ನ್ಯಾ. ದತ್ತ ಅವರು ರಾಹುಲ್‌ ಪರ ವಕೀಲ ಸಿಂಘ್ವಿ ಅವರಿಗೆ ಪ್ರಶ್ನಿಸಿದರು.

    ನಿಮ್ಮ ಕಕ್ಷಿದಾರರ ಅಜ್ಜಿ (ಇಂದಿರಾ ಗಾಂಧಿ) ಪ್ರಧಾನಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರರಾದ ಸಾವರ್ಕರ್ ಅವರನ್ನು ಹೊಗಳಿ ಪತ್ರವನ್ನು ಕಳುಹಿಸಿದ್ದಾರೆ ಎನ್ನುವುದು ನಿಮ್ಮ ಕಕ್ಷಿದಾರರಿಗೆ ತಿಳಿದಿದೆಯೇ ಎಂದು ಕೇಳಿದರು.

    ಭಾರತದ ಇತಿಹಾಸ ಅಥವಾ ಭೌಗೋಳಿಕತೆಯ ಬಗ್ಗೆ ನಿಮಗೆ ಏನೂ ತಿಳಿಯದೇ ಇರುವಾಗ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್‌ ವಿಚಾರಣೆಗೆ ತಡೆ ನೀಡಿತು.

    2022ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಸಾವರ್ಕರ್‌ ಅವರನ್ನು ಬ್ರಿಟಿಷರ ಸೇವಕ ಎಂಬುದಾಗಿ ಕರೆದಿದ್ದರು. ಈ ಹೇಳಿಕೆಯನ್ನು ಖಂಡಿಸಿ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆಗೆ ರಾಹುಲ್‌ ಗೈರಾಗಿದ್ದಕ್ಕೆ ಕೋರ್ಟ್‌ 200 ರೂ. ದಂಡ ವಿಧಿಸಿತ್ತು.

  • ನಾನು ಸಾವರ್ಕರ್‌ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ

    ನಾನು ಸಾವರ್ಕರ್‌ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ

    ವಿಜಯಪುರ: ನಾನು ಶಿವಾಜಿಯ ವಂಶಸ್ಥ, ರಾಣಾ ಪ್ರತಾಪರ ವಂಶಸ್ಥ, ನಾನು ಸಾರ್ವಕರ್‌ ವಂಶಸ್ಥ ನನ್ನನ್ನ ಜೈಲಿಗೆ ಹಾಕ್ತೀರಾ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಸಚಿವ ಎಂ.ಬಿ ಪಾಟೀಲ್‌ (MB Patil) ಅವರನ್ನ ಪ್ರಶ್ನಿಸಿದ್ದಾರೆ.

    ಎಂ.ಬಿ ಪಾಟೀಲ್‌ ಮತಕ್ಷೇತ್ರ ಬಬಲೇಶ್ವರದಲ್ಲಿ ನಡೆದ ಗೋ ಸಮಾವೇಶದಲ್ಲಿ ಸ್ವಕ್ಷೇತ್ರದ ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು

    ನೀವು ಆಯ್ಕೆ ಮಾಡಿರುವ ಶಾಸಕರು ಹೇಳ್ತಾರೆ, ಚಕ್ರವರ್ತಿ ಬಾಲ ಬಿಚ್ಚಿದ್ರೆ ಜೈಲಿಗೆ ಹಾಕ್ತೀವಿ ಅಂತ. ಅಯ್ಯೋ ಪುಣಾತ್ಮ ನಾನು ಶಿವಾಜಿಯ ವಂಶಸ್ಥ, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ (VD Savarkar) ವಂಶಸ್ಥ. ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು ನಾನು‌. ನನ್ನನ್ನ ಜೈಲಿಗೆ ಹಾಕ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ- ಚಂದನವನಕ್ಕೆ ಕಾಲಿಟ್ಟ ಅಳಿಯನಿಗೆ ಸುದೀಪ್ ಕಿವಿಮಾತು

    ಈ ಹಿಂದೆ ಪಠ್ಯ ಪುಸ್ತಕದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ. ಹಿಜಬ್‌, ಆಜಾನ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಕೆಲಸ ಮಾಡಿದರೆ ಸೂಲಿಬೆಲೆಯನ್ನ ಜೈಲಿಗೆ ಕಳುಹಿಸಲಾಗುವುದು ಎಂದು ಸಚಿವ ಎಂಬಿಪಿ ಎಚ್ಚರಿಕೆ ನೀಡಿದ್ದರು. ಆಗ ನಟ ರಾಜ್ಯಸಭಾ ಸದಸ್ಯ ಜಗ್ಗೇಶ್ ಸೂಲಿಬೆಲೆ ಪರವಾಗಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದರು. ಇದೀಗ ಎಂ.ಬಿ ಪಾಟೀಲ್ ಕ್ಷೇತ್ರದಲ್ಲೇ ಕಾರ್ಯಕ್ರಮ ಮಾಡಿ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.

  • ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    ಪಣಜಿ: ಸಾವರ್ಕರ್ (VD Savarkar) ಕುರಿತಾದ ವಿಚಾರಗಳನ್ನು ಪಠ್ಯಪುಸ್ತಕಗಳಿಂದ (Textbook) ಕೈಬಿಡುವ ಕಾಂಗ್ರೆಸ್ (Congress) ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ (Ranjit Savarkar) ಹೇಳಿದ್ದಾರೆ.

    ಗೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಾವರ್ಕರ್ ಅವರ ವಿಚಾರಗಳ ಮಾಹಿತಿ ಸಿಗುತ್ತದೆ. ಈಗಾಗಲೇ ಅವರ ಬರಹಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಬರಹಗಳನ್ನು ಕನ್ನಡದಲ್ಲೂ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಗೆ ತೆರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    ಯಾವುದನ್ನು ತಡೆಯಲು ಬಯಸುತ್ತೇವೆಯೋ ಅದು ಮತ್ತಷ್ಟು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಕ್ರಿಯೆಗೂ ಅದರ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬ ನ್ಯೂಟನ್‍ನ ಮೂರನೇ ನಿಯಮವನ್ನು ಉದಾಹರಣೆ ನೀಡಿದ್ದಾರೆ.

    ಕರ್ನಾಟಕದ (Karnataka) ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ನಡೆಸಲು ಮುಂದಾಗಿದೆ. 6 ರಿಂದ 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸರ್ಕಾರ ಅನುಮತಿ ನೀಡಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ಸಾವರ್ಕರ್ ಸೇರಿದಂತೆ ಇತರರ ಅಧ್ಯಾಯಗಳನ್ನು ತೆಗೆದುಹಾಕಿರುವ ಸರ್ಕಾರದ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: ಶಾಲಾ ಕಾಂಪೌಂಡ್ ಕುಸಿದು ವಿದ್ಯಾರ್ಥಿಗೆ ಗಂಭೀರ ಗಾಯ – 5 ಶಿಕ್ಷಕಿಯರಿಗೆ ಶೋಕಾಸ್ ನೋಟಿಸ್

  • ಹೆಡ್ಗೆವಾರ್, ಸೂಲಿಬೆಲೆ, ಸಾವರ್ಕರ್ ಪಾಠಗಳಿಗೆ ಕೊಕ್ – ಪಠ್ಯ ಪರಿಷ್ಕರಣೆಗೆ ಕಾಂಗ್ರೆಸ್ ಸಂಪುಟ ಅಸ್ತು

    ಹೆಡ್ಗೆವಾರ್, ಸೂಲಿಬೆಲೆ, ಸಾವರ್ಕರ್ ಪಾಠಗಳಿಗೆ ಕೊಕ್ – ಪಠ್ಯ ಪರಿಷ್ಕರಣೆಗೆ ಕಾಂಗ್ರೆಸ್ ಸಂಪುಟ ಅಸ್ತು

    ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆ ಕೈಬಿಡಲು ಕಾಂಗ್ರೆಸ್ ಸಚಿವ ಸಂಪುಟ (Congress Cabinet) ಒಪ್ಪಿಗೆ ನೀಡಿದೆ. ಈ ಮೂಲಕ RSS ಸ್ಥಾಪಕ ಹೆಡ್ಗೆವಾರ್, ವೀರ ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ಪಾಠಗಳಿಗೆ ಕೊಕ್ ಕೊಡಲಾಗಿದೆ.

    ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಪಠ್ಯ ಪರಿಷ್ಕರಣೆ (TextBook Revision) ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), 6 ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ: ಸಿಂಹ ಆರೋಪಕ್ಕೆ ಬೊಮ್ಮಾಯಿ ತಿರುಗೇಟು

    ಪಠ್ಯ ಪರಿಷ್ಕರಣೆಗೆ ಸಿಎಂ ಮಾರ್ಗದರ್ಶನ ಪಡೆಯಲಾಗಿದೆ. ಪ್ರಣಾಳಿಕೆಯಲ್ಲಿ ಪರಿಷ್ಕರಣೆ ಮಾಡೋದಾಗಿ ಹೇಳಿದ್ದೆವು. ಅದರಂತೆ ರಾಜಪ್ಪ ದಳವಾಯಿ, ರವೀಶ್ ಕುಮಾರ್, ಚಂದ್ರಶೇಖರ, ಅಶ್ವಥ್ ನಾರಾಯಣ, ರಾಜೇಶ್ ಅವರನ್ನೊಳಗೊಂಡ ಸಮಿತಿ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಆಗಿದೆ. ಪಠ್ಯ ಈಗಾಗಲೇ ಮಕ್ಕಳ ಕೈಗೆ ತಲುಪಿರೋದ್ರಿಂದ ವಾಪಸ್ ತರಿಸಿದ್ರೆ, ಹೊಸ ಪುಸ್ತಕಗಳನ್ನ ಪ್ರಿಂಟ್ ಮಾಡಿಸಿದ್ರೆ ಹೆಚ್ಚಿನ ಹಣ ಖರ್ಚಾಗುತ್ತೆ. ಆದ್ದರಿಂದ ಪೂರಕ ಪಠ್ಯ ಕೊಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    6ನೇ ತರಗತಿಯಿಂದ 10ನೇ ತರಗತಿ ವರೆಗೆ ಕೆಲವು ಪಾಠಗಳನ್ನ ಈ ಸಾಲಿನಿಂದಲೇ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಠ್ಯ ಪುಸ್ತಕ ಈಗಾಗಲೇ ಹಂಚಿಕೆ ಆಗಿದೆ. ಆದ್ದರಿಂದ ಹೆಚ್ಚುವರಿ ಪುಸ್ತಕಗಳನ್ನ ಶಾಲೆಗಳಿಗೆ ತಲುಪಿಸುತ್ತೇವೆ. ಅದರಲ್ಲಿ ಕೆಲವು ಶಿಷ್ಟಾಚಾರ ಇರುತ್ತವೆ. ಜ್ಯೋತಿ ಬಾಫುಲೆ, ಅಂಬೇಡ್ಕರ್ ಹಾಗೂ ನೆಹರೂ ಪಾಠಗಳು ಸೇರ್ಪಡೆ ಆಗಿರುತ್ತೆ. ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನ ಕೈಬಿಟ್ಟಿದ್ದೇವೆ. ಇದು ತಾತ್ಕಾಲಿಕ ಬದಲಾವಣೆ. ಮುಂದೆ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಜು.1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ: ಸರ್ಕಾರದ ವಿರುದ್ಧ ಬೊಮ್ಮಾಯಿ ಗುಡುಗು

    ಕನ್ನಡದಲ್ಲಿ 6 ರಿಂದ 10ನೇ ತರಗತಿ ಪಠ್ಯ ಪರಿಷ್ಕರಣೆ, ಸಮಾಜ ವಿಜ್ಞಾನದಲ್ಲಿ 6 ರಿಂದ 10ನೇ ತರಗತಿ ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. ಸಾವಿತ್ರ ಫುಲೆ ಪಠ್ಯ ಸೇರ್ಪಡೆ ಮಾಡಿದ್ದೇವೆ. `ಮಗಳಿಗೆ ಬರೆದ ಪತ್ರ’ ಪುನರ್ ಸೇರ್ಪಡೆ ಮಾಡಿದ್ದೇವೆ. ಸೇತುಬಂಧ ಅಂತಾ ಸಪ್ಲಿಮೆಂಟರಿ ಕೊಡ್ತೀವಿ. 10 ಸಭೆ ಮಾಡಿ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಶಿಕ್ಷಕರಿಗೂ ಏನು ಪಾಠ ಮಾಡಬೇಕು ಅಂತಾ ಹೇಳ್ತಿದ್ದೀವಿ. ಬಿಜೆಪಿ ಸರ್ಕಾರ ಮಾಡಿದ 75% ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. 75 ಸಾವಿರ ಶಾಲೆಗಳಿಗೆ ಪೂರಕ ಪಠ್ಯಗಳನ್ನ ಕಳುಹಿಸುತ್ತೇವೆ. ಇದರ ಮುದ್ರಣಕ್ಕೆ 10 ರಿಂದ 12 ಲಕ್ಷ ರೂ. ಆಗಬಹುದು. ಮುಂದಿನ ವರ್ಷ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡ್ತೀವಿ ಎಂದಿದ್ದಾರೆ.

    ಯಾವ ತರಗತಿಯ ಯಾವ ಪಠ್ಯಕ್ಕೆ ಬ್ರೇಕ್?
    * ಆರ್‌ಎಸ್‌ಎಸ್ ಸ್ಥಾಪಕ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಾಗಬೇಕು- 10 ನೇ ತರಗತಿ.
    * ಎಸ್.ಎಲ್. ಭೈರಪ್ಪ ಅವರು ಬರೆದಿರೋ `ನಾನು ಕಂಡಂತೆ ಬಿಜಿಎಲ್ ಸ್ವಾಮಿ’ ಪಾಠ – 9 ನೇ ತರಗತಿ.
    * ಚಕ್ರವರ್ತಿ ಸೂಲಿಬೆಲೆ ರಚಿತ ತಾಯಿ ಭಾರತೀಯ ಅಮರಪುತ್ರರು ಪಾಠ- 10ನೇ ತರಗತಿ.
    * ವೀರ ಸಾವರ್ಕರ್ ಕುರಿತ ಕಾಲವನ್ನು ಗೆದ್ದವರು ಪಾಠ- 8ನೇ ತರಗತಿ.
    * ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪಾಠ
    * `ಬಹುಮಾನ’ ಪದ್ಯ ಮತ್ತು `ಬೊಮ್ಮನಹಳ್ಳಿ ಕಿಂದರ ಜೋಗಿ’ ಪದ್ಯ-9 ನೇ ತರಗತಿ.
    * ಸ್ವದೇಶಿ ಸೂತ್ರದ ಸರಳ ಹಬ್ಬ ಪಾಠ-10 ನೇ ತರಗತಿ.
    * ಮಂಜೇಶ್ವರ ಗೋವಿಂದ್ ಪೈ ರಚಿತ `ನಾನು ಪ್ರಾಸ ಬಿಟ್ಟ ಕಥೆ’ ಪಾಠ- 10 ನೇ ತರಗತಿ.
    * `ಸೀಗಡಿ ಯಾಕೆ ಒಣಗಲಿಲ್ಲ’ ಮಕ್ಕಳ ಕಥೆ- ಪಂಜೆ ಮಂಗೇಶರಾಯರು ರಚಿತ ಪಠ್
    * ಜಮ್ಮು ಕಾಶ್ಮೀರದ ರಾಜ ವಂಶ ಕಾರ್ಕೋಟ ರಾಜಮನೆ ತನ ಪಾಠ, ಅಹೋಮ್ ರಾಜವಂಶ ಪಾಠ ಕೈ ಬಿಟ್ಟಿರೋ ಸರ್ಕಾರ

    ಯಾವುದು ಸೇರ್ಪಡೆ?
    * ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪರಿಷ್ಕರಣೆಯಲ್ಲಿ ಇದ್ದ ನೆಹರೂ ತಮ್ಮ ಮಗಳಿಗೆ ಬರೆದಿದ್ದ ಪತ್ರದ ಕುರಿತ `ಮಗಳಿಗೆ ಬರೆದ ಪತ್ರ’ ಪಠ್ಯ ಸೇರ್ಪಡೆ.
    * ಸಾವಿತ್ರಿಬಾ ಫುಲೆ ಅವರ ಪಠ್ಯ ಮರು ಸೇರ್ಪಡೆ.

  • Savarkar Controversy: ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಕೇಸ್‌

    Savarkar Controversy: ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಕೇಸ್‌

    ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸದ್ಯಕ್ಕೆ ಸಂಕಷ್ಟ ಬೆಂಬಿಡದಂತೆ ಕಾಣ್ತಿದೆ. ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್ (VD Savarkar) ಅವರ ಮೊಮ್ಮಗ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಹಿಂದೆ ರಾಹುಲ್‌ ಗಾಂಧಿ ಲಂಡನ್‌ಗೆ ತೆರಳಿದ್ದಾಗ ತಮ್ಮ ಭಾಷಣದಲ್ಲಿ ವಿ.ಡಿ ಸಾವರ್ಕರ್ ವಿರುದ್ಧ ತಪ್ಪು ಆರೋಪ ಮಾಡಿದ್ದಾರೆ ಎಂಬುದಾಗಿ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಮೊಮ್ಮಗ ಸತ್ಯಕಿ ಸಾವರ್ಕರ್ (Satyaki Savarkar) ತಿಳಿಸಿದ್ದಾರೆ. ಸತ್ಯಕಿ ಪರ ವಕೀಲರು ಸಿಟಿ ಸಿವಿಲ್‌ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ (IPC) ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೋರ್ಟ್‌ ಅಧಿಕಾರಿ ಇಂದು ಗೈರು ಹಾಜರಾಗಿದ್ದ ಕಾರಣ ಪ್ರಕರಣದ ಸಂಖ್ಯೆ ಪಡೆಯಲು ಶನಿವಾರ ಆಗಮಿಸುವಂತೆ ಸೂಚಿಸಲಾಗಿದೆ ಇನ್ನೂ ಕೇಸ್ ಸಂಖ್ಯೆ ಸಿಕ್ಕಿಲ್ಲ ಎಂದು ಸತ್ಯಕಿ ಸಾವರ್ಕರ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

    ರಾಗಾ ಹೇಳಿದ್ದೇನು?
    ಲಂಡನ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಸಾವರ್ಕರ್ ವಿಷಯ ಪ್ರಸ್ತಾಪಿಸಿದ್ದರು. ʻತಾವು ಹಾಗೂ ತಮ್ಮ 5-6 ಮಂದಿ ಸ್ನೇಹಿತರು ಸೇರಿ ಓರ್ವ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಆಗ ತಮಗೆ ಸಂತೋಷವಾಗಿತ್ತುʼ ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವುದಾಗಿ ರಾಹುಲ್ ಗಾಂಧಿ ಸಭೆಗೆ ತಿಳಿಸಿದ್ದರು. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

    2019ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ (Kolara) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಸೂರ್‌ ಜಿಲ್ಲಾ ನ್ಯಾಯಾಲಯ ರಾಹುಲ್‌ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. 2 ವರ್ಷ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.

  • ಬೆರಕೆ ಅಂದ್ರೆ ಏನು? ಆ ಸಿ.ಟಿ ರವಿಗೆ ಸದ್ಬುದ್ಧಿ ಇಲ್ಲ – ಸಿದ್ದರಾಮಯ್ಯ

    ಬೆರಕೆ ಅಂದ್ರೆ ಏನು? ಆ ಸಿ.ಟಿ ರವಿಗೆ ಸದ್ಬುದ್ಧಿ ಇಲ್ಲ – ಸಿದ್ದರಾಮಯ್ಯ

    ಬಾಗಲಕೋಟೆ: ಬೆರಕೆ ಅಂದ್ರೆ ಏನು? ಬೆರಕೆ ಅಂದ್ರೆ ಏನೂ ಅಂತಾನೆ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ (CT Ravi) ಕಲ್ಚರ್ ಇಲ್ಲ, ಸದ್ಬುದ್ಧಿ ಇಲ್ಲ, ಇರೋದೆಲ್ಲಾ ಬರೀ ಗೂಂಡಾ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹರಿಹಾಯ್ದಿದ್ದಾರೆ.

    `ಸಿದ್ದರಾಮಯ್ಯ ಒಬ್ಬ ಬೆರಕೆ ರಾಜಕಾರಣಿ, ಒಬ್ಬ ಮತಾಂಧ’ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಜಮಖಂಡಿ ತಾಲೂಕಿನ ಖಾಜಿಬೀಳಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆರಕೆ ಅಂದ್ರೆ ಏನೂ ಅಂತಾನೇ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ ಕಲ್ಚರ್ ಇಲ್ಲ, ಗೂಂಡಾ ಸಂಸ್ಕೃತಿ ಇರೋದು ಅವನಿಗೆ. ಅವರೆಲ್ಲಾ ಮನುಷ್ಯತ್ವ ಇಲ್ಲದೇ ಇರೋರು, ಬಾಯಿಗೆ ಬಂದಂತೆ ಮಾತಾಡ್ತಾರೆ. ಸಿ.ಟಿ ರವಿಗೆ ಮನುಷ್ಯತ್ವ, ಸದ್ಬುದ್ಧಿ ಯಾವುದೂ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

    ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾವರ್ಕರ್ (VD Savarkar) ಬಗ್ಗೆ ನಾನೇನು ಮಾತನಾಡಿಲ್ಲ. ಮಾತನಾಡೋದಕ್ಕೂ ಹೋಗಲ್ಲ. ನ್ಯಾಷನಲ್ ಲೀಡರ್ಸ್ ವಲ್ಲಭಭಾಯಿ ಫೋಟೊ ಹಾಕಿದ್ದಾರೆ. ಅಂದ್ಮೇಲೆ ನೆಹರೂ ಫೋಟೊ ಹಾಕಬೇಕೋ, ಬೇಡವೋ? ಮಹಾತ್ಮಾ ಗಾಂಧೀಜಿ ಅವರದ್ದು ಹಾಕಿದ್ದಾರೆ. ನೆಹರೂ ಫೋಟೊ ಹಾಕ್ಬೇಕೋ. ಬೇಡ್ವೊ? ಅಂಬೇಡ್ಕರ್ ಅವರದ್ದು ಹಾಕಿದ್ದಾರೆ, ಜಗಜೀವನ್ ರಾಮ್ ಫೋಟೊ ಹಾಕ್ಬೇಕೋ, ಬೇಡ್ವೋ? ಬಸವಣ್ಣ, ವಾಲ್ಮೀಕಿ, ಕನಕದಾಸರು, ನಾರಾಯಣಗುರು, ಶಿಶುನಾಳ ಶರೀಫರೂ ಇದ್ದಾರೆ. ಕುವೆಂಪು ಇದ್ದಾರೆ ಎಲ್ಲ ದಾರ್ಶನಿಕರದ್ದೂ ಹಾಕಬೇಕಿತ್ತಲ್ವಾ? ದಾರ್ಶನಿಕರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಲ್ವಾ? ಅಷ್ಟೇ ನಮ್ಮ ಡಿಮ್ಯಾಂಡ್ ಎಂದು ಹೇಳಿದ್ದಾರೆ. ಇದನ್ನು ಓದಿ: ವಿದೇಶಾಂಗ ಸಚಿವ ಜೈಶಂಕರ್ ಪುತ್ರನಿಗೆ ಚೀನಾ ಫಂಡಿಂಗ್ ಲಿಂಕ್ – ಕಾಂಗ್ರೆಸ್ ಗಂಭೀರ ಆರೋಪ

    `ಅಭ್ಯರ್ಥಿ ಘೋಷಣೆ ಮಾಡೋರ ವಿರುದ್ಧ ಶಿಸ್ತು ಕ್ರಮ ಕೈಗೊಳ್ತೀವಿ’ ಎಂಬ ಜಿ.ಪರಮೇಶ್ವರ ಹೇಳಿಕೆ ವಿಚಾರಕ್ಕೆ, ಅಭ್ಯರ್ಥಿಯನ್ನ ಘೋಷಣೆ ಮಾಡಲು ಪಕ್ಷದಲ್ಲಿ ಒಂದು ಪ್ರಕ್ರಿಯೆ ಇದೆ. ಅದರ ಪ್ರಕಾರವೇ ಮಾಡಬೇಕು. ನಾನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ: ಸುವರ್ಣಸೌಧದ(Suvarna Soudha) ವಿಧಾನಸಭೆ ಸಭಾಂಗಣದ ಒಳಗಡೆ ಸಾವರ್ಕರ್‌(Savarkar) ಸೇರಿ 7 ಮಂದಿಯ ಫೋಟೋವನ್ನು ಅನಾವರಣ ಮಾಡಲಾಗಿದೆ.

    ಮಹಾತ್ಮ ಗಾಂಧೀಜಿ, ಡಾ. ಬಿ.ಆರ್‌. ಅಂಬೇಡ್ಕರ್‌, ಲಾಲ್ ಬಹಾದ್ದೂರ್ ಶಾಸ್ತ್ರೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಸವಣ್ಣ, ಸ್ವಾಮಿ ವಿವೇಕಾನಂದ, ವಿ ಡಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ.

    ಮಾಧ್ಯಮಗಳನ್ನ ನಿರ್ಬಂಧ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸ್ಪೀಕರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಪೀಕರ್‌ ಕುಳಿತುಕೊಳ್ಳುವ ಆಸನದ ಮೇಲೆ ಬಸವಣ್ಣನ ಫೋಟೋ ಹಾಕಲಾಗಿದೆ.

    ಸಿದ್ದರಾಮಯ್ಯ ಕಿಡಿ:
    ಸ್ಪೀಕರ್ ಕಚೇರಿಯಿಂದ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನ್‌ ನಾಯಕರ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕುವುದು ಗೊತ್ತಾಯಿತು.

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಶಿವಮೊಗ್ಗ: ಹಿಂದೂಗಳು (Hindu Community) ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ (VD Savarkar) ಅವರ ಕನಸಾಗಿತ್ತು ಎಂದು ವಿ.ಡಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಅಶೋಕ್‌ ಸಾವರ್ಕರ್ (Satyaki Ashok Savarkar) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) `ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸಾವರ್ಕರ್ ಅವರಿಗೆ ಆಗಸ್ಟ್ 13 ರಂದು ಅಪಮಾನಿಸಲಾಗಿತ್ತು. ಶಿವಮೊಗ್ಗದ ಯುವ ದೇಶಪ್ರೇಮಿಗಳು ಇದನ್ನು ಮರೆಯಲಿಲ್ಲ. ಆದರೆ ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ ಅವರ ಕನಸಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಸಾವರ್ಕರ್ ಅವರ ಹಿಂದುತ್ವದ (Hinduism) ಮಂತ್ರ ವಾಕ್ಯ ಎಲ್ಲರೂ ಜ್ಞಾಪಕವಿಟ್ಟುಕೊಳ್ಳಬೇಕು. ಭಾರತದ ಮೇಲೆ ಅನೇಕ ಆಕ್ರಮಣಗಳಾಗಿವೆ. ಆದರೆ ಅನೇಕ ಮಹನೀಯರು, ಯೋಧರು, ಶಿವಾಜಿ ಮಹರಾಜ್, ರಾಣಪ್ರತಾಪ್ ಸಿಂಗ್‌ರಂತಹ ಪರಾಕ್ರಮಿಗಳು ಹಿಂದೂಸ್ಥಾನವನ್ನು ಉಳಿಸಲು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂದಿನ ಈ ದೀಪ ಬೆಳಗಿಸಿರುವುದು, ಇಡೀ ವಿಶ್ವವೇ ನೋಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆ – ಕೈ-ಕೈ ಹಿಡಿದು ಹೆಜ್ಜೆ ಹಾಕಿದ ರಾಹುಲ್, ರಮ್ಯಾ

    ಈ ಕಾರ್ಯಕ್ರಮದ ಮೂಲಕ ದೇಶಭಕ್ತರನ್ನು ಎಚ್ಚರಿಸುವ ಕೆಲಸವಾಗಬೇಕು. ಸಾವರ್ಕರ್ ಅವರು ಹೊಂದಿದ್ದ ಧೇಯೋದ್ದೇಶಗಳನ್ನು ನಾಡಿನೆಲ್ಲೆಡೆ ಮತ್ತೆ ಪಸರಿಸಬೇಕು. ಅನೇಕ ದುಷ್ಟಶಕ್ತಿಗಳು ದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿದ್ದು, ಇದನ್ನು ಮೆಟ್ಟಿ ನಿಲ್ಲುವ ಯೋಜನೆ ನಾವೆಲ್ಲರೂ ರೂಪಿಸಬೇಕು ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ

    ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ

    ಮುಂಬೈ: ಕಾಂಗ್ರೆಸ್ ನಾಯಕ (Congress Leader) ರಾಹುಲ್‌ಗಾಂಧಿ (Rahul Gandhi) ಅವರ ಪೋಸ್ಟರ್‌ಗೆ ಬಿಜೆಪಿ  ಕಾರ್ಯಕರ್ತರು ಚಪ್ಪಲಿ ಎಸೆಯುವ ಮೂಲಕ ಪ್ರತಿಭಟನೆ (Protest) ನಡೆಸಿದ್ದಾರೆ.

    `ಸಾವರ್ಕರ್ (VD Savarkar) ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಇದರಿಂದಾಗಿಯೇ ಅವರು ಪಿಂಚಣಿ ಪಡೆದುಕೊಳ್ಳುತ್ತಿದ್ದರು’ ಎಂಬ ರಾಹುಲ್‌ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ (BJP) ಕಾರ್ಯಕರ್ತರು ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ರಾಮ್‌ಕದಮ್ ಪಕ್ಷದ ಇತರ ಕಾರ್ಯಕರ್ತರೊಂದಿಗೆ `ಚಪ್ಪಲಿ ಎಸೆಯಿರಿ’ ಆಂದೋಲನ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ

    ರಾಹುಲ್‌ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರನೊಬ್ಬನನ್ನು ಅವಮಾನಿಸಿದ್ದಾರೆ. ಪದೇ ಪದೇ ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಸಹಿಸಲಾಗುವುದಿಲ್ಲ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – ಬೆಂಗಳೂರಿನ ಇಬ್ಬರು ಸೇರಿದಂತೆ 29 ಮಂದಿ ಸಾವು

    ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharath Jodo Yatra) ವೇಳೆ ರಾಹುಲ್ ಗಾಂಧಿ ಅವರು, `ಗಾಂಧಿ, ನೆಹರು ದೇಶಕ್ಕಾಗಿ ಹೋರಾಡಿದರು. ಆರ್‌ಎಸ್‌ಎಸ್ (RSS) ಹಾಗೂ ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದರು. ಬ್ರಿಟಿಷರಿಗೆ ಸಹಾಯ ಮಾಡಿದ್ದಕ್ಕಾಗಿಯೇ ಅವರಿಗೆ ಸ್ಟೈಫಂಡ್‌ ಸಿಕ್ಕಿತ್ತು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ

    ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ

    ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿ.ಡಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಯನ ಪೀಠ ಸ್ಥಾಪಿಸದಂತೆ ವಿವಿಧ ಸಂಘಟನೆಗಳ ಮುಖಂಡರು ವಿವಿ ಕುಲಪತಿಗೆ ಮನವಿ ಸಲ್ಲಿಸಿದ್ದಾರೆ.

    ಸಾವರ್ಕರ್ ಅಭಿಮಾನಿಗಳು ಬೇಕಿದ್ರೆ ಅವರ ಫೋಟೋವನ್ನು ಅವರವರ ಮನೆಯಲ್ಲಿ ಹಾಕಿಕೊಳ್ಳಲಿ,  ಅದರ ಹೊರತಾಗಿ ವಿವಿಯಲ್ಲಿ ಪೀಠ ಸ್ಥಾಪನೆ ಮಾಡುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾದ ತುಮಕೂರು ವಿವಿ

    ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಾವರ್ಕರ್ ಪೀಠ ಮಾಡುತ್ತೇವೆ ಎಂದು ವಿಶ್ವವಿದ್ಯಾನಿಲಯವನ್ನು ರಾಜಕಾರಣದ ಕೇಂದ್ರ ಮಾಡಲು ಹೊರಟಿರುವ ವಿವಿಯ ನಡೆ ನಿಜಕ್ಕೂ ನಾಚಿಕೆ ತರುವಂತದ್ದು. ವಿವಿಯಲ್ಲಿ ಈಗಾಗಲೇ 16 ಅಧ್ಯಯನ ಪೀಠಗಳಿವೆ. ಅವುಗಳನ್ನೇ ನಡೆಸಲು ಅನುದಾನ ಇಲ್ಲ, ಪೀಠೋಪಕರಣಗಳಿಲ್ಲ, ಇನ್ನೂ ಹೊಸ ಕ್ಯಾಂಪಸ್ ಕಟ್ಟಲು ಆಗಿಲಗಲ. ಇಂತಹ ಸಂಧರ್ಭದಲ್ಲಿ ರಾಜಕೀಯ ತೇವಲಿಗೆ ಪೀಠ ಮಾಡುತ್ತಿರುವುದು ವಿಶ್ವವಿದ್ಯಾನಿಲಯದ ಬೌದ್ಧಿಕ ದಾರಿದ್ರ್ಯ, ಹಾಗಾಗಿ ಪೀಠ ಸ್ಥಾಪನೆ ಪೀಠ ಸ್ಥಾಪನೆ ಮಾಡುವುದು ಬೇಡವೆಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]