Tag: Vatican City

  • ಮೇ 7ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ

    ಮೇ 7ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ

    ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ (Pope Francis) ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶ ಮೇ 7ರಿಂದ ಆರಂಭವಾಗಲಿದೆ.

    ಅನಾರೋಗ್ಯದಿಂದ ಏ.21 ರಂದು ನಿಧನರಾದ ಕ್ರಿಶ್ಟಿಯನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಏ.26ರಂದು ನೆರವೇರಿದೆ. ಅಂತ್ಯಕ್ರಿಯೆ ಬಳಿಕ ಸೋಮವಾರ ಕಾರ್ಡಿನಲ್‌ಗಳ ಅನೌಪಚಾರಿಕ ಸಭೆ ನಡೆಸಲಾಗಿತ್ತು. ಸಭೆಯಲ್ಲಿ 180ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶದ ದಿನಾಂಕ ಪ್ರಕಟಿಸಲಾಗಿದೆ.ಇದನ್ನೂ ಓದಿ:ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಹೊಸ ಪೋಪ್ ಆಯ್ಕೆಗೆ ಮತದಾನ ನಡೆಯಲಿದ್ದು, ಕಾರ್ಡಿನಲ್ ಕಾಲೇಜು ಎಂದು ಕರೆಯಲ್ಪಡುವ 135 ಮಂದಿಯ ಸಣ್ಣ ಗುಂಪು ಮತದಾನ ಮಾಡಲಿದೆ.

    ಹೊಸ ಪೋಪ್ ಆಯ್ಕೆ ಹೇಗೆ?
    ಪೋಪ್ ನಿಧನರಾದ 15 ರಿಂದ 20 ದಿನಗಳ ಬಳಿಕ ನೂತನ ಪೋಪ್ ಆಯ್ಕೆಯ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವಿಶ್ವದ ವಿವಿಧೆಡೆಯಿಂದ ವ್ಯಾಟಿಕನ್‌ಗೆ ಆಗಮಿಸುತ್ತಾರೆ. ಬಳಿಕ ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳು ಚರ್ಚೆ ನಡೆಸುತ್ತಾರೆ. ಸಿಸ್ಟೀನ್ ಛಾಪೆಲ್‌ನಲ್ಲಿ ಈ ಮತದಾನ ಪ್ರಕ್ರಿಯೆಯು ನಡೆಯುತ್ತದೆ.

    ಎಲ್ಲಾ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ. ಅವರ ಧಾರ್ಮಿಕ ಜ್ಞಾನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಒಬ್ಬರು ಮೂರನೇ ಎರಡಷ್ಟು ಮತ ಪಡೆಯುವವರೆಗೂ ದಿನದಲ್ಲಿ 2 ಬಾರಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಇದು ಒಂದೇ ದಿನದಲ್ಲಿ ಮುಗಿಯುವ ಪ್ರಕ್ರಿಯೆಯಲ್ಲ.ಇದನ್ನೂ ಓದಿ:Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    ಈ ಮತದಾನ ಪ್ರಕ್ರಿಯೆಯು ತುಂಬಾ ರಹಸ್ಯವಾಗಿ ನಡೆಯುತ್ತದೆ. ಈ ಉದ್ದೇಶದಿಂದ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದ ಸಂಪರ್ಕದಿಂದ ಅವರನ್ನು ದೂರ ಇಡಲಾಗುತ್ತದೆ. ಅಲ್ಲಿ ಫೋನ್ ಸೌಲಭ್ಯವೂ ಇರುವುದಿಲ್ಲ.

    ಕಪ್ಪು, ಬಿಳಿ ಹೊಗೆಯ ಸಂಕೇತ:
    ಜನರಿಗೆ ಪ್ರತಿದಿನವು ಪೋಪ್ ಆಯ್ಕೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಆಯ್ಕೆಯ ಮಾಹಿತಿಯನ್ನು ಕಪ್ಪು, ಬಿಳಿ ಹೊಗೆಯ ಸಂಕೇತದ ಮೂಲಕ ತಿಳಿಸಲಾಗುತ್ತದೆ. 3ನೇ 2ರಷ್ಟು ಮತ ಪಡೆದವರು ಪೋಪ್ ಆಗಿ ಆಯ್ಕೆ ಆಗುತ್ತಾರೆ. ಆಯ್ಕೆ ಆಗದೇ ಇರುವುದನ್ನು ಸೂಚಿಸಲು ಕಪ್ಪು ಹೊಗೆಯನ್ನು ಹೊರಬಿಡಲಾಗುತ್ತದೆ. ಆಯ್ಕೆ ಆಗಿರುವುದನ್ನು ಸೂಚಿಸಲು ಬಿಳಿ ಹೊಗೆಯನ್ನು ಹೊರಸೂಸಲಾಗುತ್ತದೆ. ಈ ಬಿಳಿ ಹೊಗೆ ಕ್ರೈಸ್ತ್ರರ ಅಧಿಕೃತ ಪೋಪ್ ಆಯ್ಕೆಯ ಸಂಕೇತವಾಗಿರುತ್ತದೆ.

    ಒಣ ಹುಲ್ಲುಗಳನ್ನು ಸುಡುವ ಮೂಲಕ ಕಪ್ಪುಹೊಗೆಯು ಕಾಣಿಸುತ್ತದೆ. ಬಿಳಿ ಹೊಗೆ ಕಾಣಿಸಲು ಹಸಿ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಆದರೆ ಈಗ ರಾಸಾಯನಿಕಗಳನ್ನು ಬಳಸುವ ಮೂಲಕ ಕಪ್ಪು ಹಾಗೂ ಬಿಳಿ ಹೊಗೆಯನ್ನು ತೋರಿಸಲಾಗುತ್ತದೆ. ಈ ಮತದಾನ ಪ್ರಕ್ರಿಯೆಯು ರಹಸ್ಯವಾಗಿರುವುದರಿಂದ ಮತದಾನದ ಪತ್ರಗಳನ್ನು ಸುಡಲಾಗುತ್ತದೆ.ಇದನ್ನೂ ಓದಿ:ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!

  • ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ

    ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ

    ವ್ಯಾಟಿಕನ್: ಸೋಮವಾರ ನಿಧನರಾದ ರೋಮನ್ ಕ್ಯಾಥೋಲಿಕ್‌ನ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಅವರ ಅಂತ್ಯಕ್ರಿಯೆ ಸೇಂಟ್ ಪೀಟರ್ಸ್ ಬೆಸಿಲಿಕಾದಿಂದ 4 ಕಿ.ಮೀ. ದೂರದಲ್ಲಿರುವ ರೋಮ್‌ನ ಬೆಸಿಲಿಕಾ ಡಿ ಸಾಂಟಾ ಮಾರಿಯಾ ಮ್ಯಾಗಿಯೋರ್‌ನಲ್ಲಿ (Santa Maria Maggiore Basilica) ವಿಶ್ವ ನಾಯಕರ ಸಮ್ಮುಖದಲ್ಲಿ ನಡೆದಿದೆ.

    ಅಂತ್ಯಕ್ರಿಯೆಗೂ ಮುನ್ನ ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್ ಸಿಟಿಯಲ್ಲಿ (Vatican City) ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿ ಸುಮಾರು 160 ದೇಶಗಳ ಗಣ್ಯರು ಅಂತಿಮ ದರ್ಶನ ಪಡೆದರು. ಸುಮಾರು ಎರಡೂವರೆ ಲಕ್ಷ ಜನರು ಅಂತಿಮ ನಮನ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..

    ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕದ ಧರ್ಮಗುರುಗಳಾದ ಪೋಪ್ ಅನಾರೋಗ್ಯದ ಕಾರಣ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಹಾಜರಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೋಪ್ ಕಾಣಿಸಿಕೊಂಡಿದ್ದರು. ವೈದ್ಯರು ಪೋಪ್ ಫ್ರಾನ್ಸಿಸ್ ಅವರಲ್ಲಿ ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿದ್ದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರನ್ನು ಬಗ್ಗು ಬಡಿಯಬೇಕು: ಶಾಸಕ ನಾರಾಯಣಸ್ವಾಮಿ

  • ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ವ್ಯಾಟಿಕನ್ ಸಿಟಿ: ಕ್ರೈಸ್ತ್ರರ (Christian) ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಸೋಮವಾರ ಬೆಳಗ್ಗೆ ಮೆದುಳಿನ ಪಾರ್ಶ್ವವಾಯು ಹಾಗೂ ಹೃದಯಾಘಾತದಿಂದ ನಿಧರಾಗಿದ್ದರು. ಇದೀಗ ಅದೇ ಸ್ಥಾನವನ್ನು ತುಂಬಲು ಹೊಸ ಪೋಪ್‌ರನ್ನು ಆಯ್ಕೆ ಮಾಡಲಾಗುತ್ತದೆ.

    ಹೊಸ ಪೋಪ್ ಆಯ್ಕೆ ಹೇಗೆ?
    ಪೋಪ್ ನಿಧನರಾದ 15 ರಿಂದ 20 ದಿನಗಳ ಬಳಿಕ ನೂತನ ಪೋಪ್ ಆಯ್ಕೆಯ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವಿಶ್ವದ ವಿವಿಧೆಡೆಯಿಂದ ವ್ಯಾಟಿಕನ್‌ಗೆ (Vatican City) ಆಗಮಿಸುತ್ತಾರೆ. ಬಳಿಕ ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳು ಚರ್ಚೆ ನಡೆಸುತ್ತಾರೆ. ಸಿಸ್ಟೀನ್ ಛಾಪೆಲ್‌ನಲ್ಲಿ ಈ ಮತದಾನ ಪ್ರಕ್ರಿಯೆಯು ನಡೆಯುತ್ತದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?

    ಎಲ್ಲಾ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ. ಅವರ ಧಾರ್ಮಿಕ ಜ್ಞಾನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಒಬ್ಬರು ಮೂರನೇ ಎರಡಷ್ಟು ಮತ ಪಡೆಯುವವರೆಗೂ ದಿನದಲ್ಲಿ 2 ಬಾರಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಇದು ಒಂದೇ ದಿನದಲ್ಲಿ ಮುಗಿಯುವ ಪ್ರಕ್ರಿಯೆಯಲ್ಲ. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲು

    ಈ ಮತದಾನ ಪ್ರಕ್ರಿಯೆಯು ತುಂಬಾ ರಹಸ್ಯವಾಗಿ ನಡೆಯುತ್ತದೆ. ಈ ಉದ್ದೇಶದಿಂದ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದ ಸಂಪರ್ಕದಿಂದ ಅವರನ್ನು ದೂರ ಇಡಲಾಗುತ್ತದೆ. ಅಲ್ಲಿ ಫೋನ್ ಸೌಲಭ್ಯವೂ ಇರುವುದಿಲ್ಲ. ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಕಪ್ಪು, ಬಿಳಿ ಹೊಗೆಯ ಸಂಕೇತ
    ಜನರಿಗೆ ಪ್ರತಿದಿನವು ಪೋಪ್ ಆಯ್ಕೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಆಯ್ಕೆಯ ಮಾಹಿತಿಯನ್ನು ಕಪ್ಪು, ಬಿಳಿ ಹೊಗೆಯ ಸಂಕೇತದ ಮೂಲಕ ತಿಳಿಸಲಾಗುತ್ತದೆ. 3ನೇ 2ರಷ್ಟು ಮತ ಪಡೆದವರು ಪೋಪ್ ಆಗಿ ಆಯ್ಕೆ ಆಗುತ್ತಾರೆ. ಆಯ್ಕೆ ಆಗದೇ ಇರುವುದನ್ನು ಸೂಚಿಸಲು ಕಪ್ಪು ಹೊಗೆಯನ್ನು ಹೊರಬಿಡಲಾಗುತ್ತದೆ. ಆಯ್ಕೆ ಆಗಿರುವುದನ್ನು ಸೂಚಿಸಲು ಬಿಳಿ ಹೊಗೆಯನ್ನು ಹೊರಸೂಸಲಾಗುತ್ತದೆ. ಈ ಬಿಳಿ ಹೊಗೆ ಕ್ರೈಸ್ತ್ರರ ಅಧಿಕೃತ ಪೋಪ್ ಆಯ್ಕೆಯ ಸಂಕೇತವಾಗಿರುತ್ತದೆ. ಇದನ್ನೂ ಓದಿ: ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು

    ಒಣ ಹುಲ್ಲುಗಳನ್ನು ಸುಡುವ ಮೂಲಕ ಕಪ್ಪುಹೊಗೆಯು ಕಾಣಿಸುತ್ತದೆ. ಬಿಳಿ ಹೊಗೆ ಕಾಣಿಸಲು ಹಸಿ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಆದರೆ ಈಗ ರಾಸಾಯನಿಕಗಳನ್ನು ಬಳಸುವ ಮೂಲಕ ಕಪ್ಪು ಹಾಗೂ ಬಿಳಿ ಹೊಗೆಯನ್ನು ತೋರಿಸಲಾಗುತ್ತದೆ. ಈ ಮತದಾನ ಪ್ರಕ್ರಿಯೆಯು ರಹಸ್ಯವಾಗಿರುವುದರಿಂದ ಮತದಾನದ ಪತ್ರಗಳನ್ನು ಸುಡಲಾಗುತ್ತದೆ.

  • 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    ಪ್ರಪಂಚದ ಅನೇಕ ದೇಶಗಳು ವಿವಿಧ ರೀತಿಯ ನಿಗೂಢ ವಿಷಯಗಳನ್ನು ಹೊಂದಿವೆ. ಅದರಲ್ಲಿ ಇಟಲಿಯ ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯೂ (Vatican City) ಒಂದು. ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮದ ಎಲ್ಲಾ ಮಹಾನ್ ಧಾರ್ಮಿಕ ಮುಖಂಡರು ಇಲ್ಲಿ ವಾಸಿಸುತ್ತಿದ್ದಾರೆ. ಪೋಪ್ ಇಲ್ಲಿ ಆಳ್ವಿಕೆ ನಡೆಸುತ್ತಾರೆ. ವಿವಿಧ ದೇಶಗಳಿಗೆ ಹೋಲಿಸಿದಾಗ ಈ ದೇಶವು ಒಂದು ವಿಭಿನ್ನತೆಯನ್ನು ಹೊಂದಿದೆ.

    ಕಳೆದ 95 ವರ್ಷಗಳಿಂದ ಒಂದೇ ಒಂದು ಮಗುವೂ ಇಲ್ಲಿ ಜನಿಸಿಲ್ಲ. ಹೌದು. ಫೆಬ್ರವರಿ 11, 1929 ರಂದು ದೇಶವನ್ನು ರಚಿಸಲಾಯಿತು. 95 ವರ್ಷಗಳು ಕಳೆದರೂ ಇಲ್ಲಿ ಒಂದೇ ಒಂದು ಮಗು ಜನಿಸದಿರುವುದು ಆಶ್ಚರ್ಯಕರವಾಗಿದೆ. ಇದು ವಿಶ್ವದ ಅತ್ಯಂತ ಚಿಕ್ಕ ದೇಶವೂ ಆಗಿದೆ. ಈ ಚಿಕ್ಕ ರಾಷ್ಟ್ರದಲ್ಲಿ, ಸುಮಾರು 800 ಜನರು ವಾಸಿಸುತ್ತಿದ್ದು, ಅದರಲ್ಲಿ ಕೇವಲ 30 ಮಹಿಳೆಯರು ಇದ್ದಾರೆ ಎನ್ನಲಾಗುತ್ತಿದೆ.

    ಈ ದೇಶ ರಚನೆಯಾದ ನಂತರ ಇಲ್ಲಿ ಯಾವುದೇ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿಲ್ಲ. ಆಸ್ಪತ್ರೆಗೆ ನಿರ್ಮಿಸುವಂತೆ ಹಲವಾರು ಬಾರಿ ವಿನಂತಿಸಲಾಯಿತು ಆದರೂ ಕೂಡ ಪ್ರತಿ ಬಾರಿ ಈ ಮನವಿಯನ್ನು ತಿರಸ್ಕರಿಸಲಾಗಿದೆ. ಇಲ್ಲಿ ಯಾರಾದರೂ ತೀವ್ರವಾಗಿ ಅಸ್ವಸ್ಥರಾದರೆ ಅಥವಾ ಮಹಿಳೆ ಗರ್ಭಿಣಿಯಾದರೆ, ಆಕೆಯನ್ನು ರೋಮ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

    ವ್ಯಾಟಿಕನ್ ಸಿಟಿಯಲ್ಲಿ ಆಸ್ಪತ್ರೆಯನ್ನು ತೆರೆಯದಿರಲು ನಿರ್ಧರಿಸಲು ಅದರ ಸಣ್ಣ ಗಾತ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಕಾರಣ ಎಂದು ಹೇಳಲಾಗುತ್ತದೆ. ವ್ಯಾಟಿಕನ್ ಸಿಟಿಯ ವಿಸ್ತೀರ್ಣ ಕೇವಲ 118 ಎಕರೆ. ಎಲ್ಲಾ ರೋಗಿಗಳು ಚಿಕಿತ್ಸೆಗಾಗಿ ರೋಮ್‌ನಲ್ಲಿರುವ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಿಗೆ ಹೋಗಬೇಕು.

    ಇಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ ಕಾರಣ ಯಾರೂ ಹೆರಿಗೆ ಮಾಡುವಂತಿಲ್ಲ. ಹಾಗಾಗಿ ವೈದ್ಯಕೀಯ ಸೌಲಭ್ಯಗಳು ಬೇಕಿದ್ದರೆ ಹೊರಗೆ ಹೋಗಬೇಕಾಗುತ್ತದೆ. ಸಹಜ ಹೆರಿಗೆಯನ್ನು ಮಾಡುವುದಾಗಲಿ ಅಥವಾ ಅದಕ್ಕೆ ಅನುಮತಿಸುವ ಅವಕಾಶ ಇಲ್ಲ. ಇಲ್ಲಿರುವ ಮಹಿಳೆ ಗರ್ಭ ಧರಿಸಿ ಹೆರಿಗೆಯ ಸಮಯ ಸಮೀಪಿಸುತ್ತಿದ್ದಂತೆ.. ಇಲ್ಲಿನ ನಿಯಮಗಳ ಪ್ರಕಾರ ಆಕೆ ಮಗುವಿಗೆ ಜನ್ಮ ನೀಡುವವರೆಗೂ ಇಲ್ಲಿಂದ ಹೊರಡಬೇಕು.

    ಇನ್ನೂ ವ್ಯಾಟಿಕನ್ ನಗರದಲ್ಲಿ ಪಿತೃತ್ವವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮವು ಪಾದ್ರಿಗಳ ಧಾರ್ಮಿಕ ನಂಬಿಕೆಗಳಲ್ಲಿ ಆಳವಾಗಿ ಬೇರೂರಿದೆ. ಅಲ್ಲಿನ ನಿವಾಸಿಗಳು ಪ್ರಧಾನವಾಗಿ ಪಾದ್ರಿಗಳನ್ನು ಮದುವೆಯಾಗುವುದನ್ನು ಅಥವಾ ಅವರೊಂದಿಗೆ ಮಕ್ಕಳು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ಸಾಮಾನ್ಯವಾಗಿ ಎತ್ತಿಹಿಡಿಯಲಾಗಿದ್ದರೂ, ಪಾದ್ರಿಗಳು ಈ ಪ್ರತಿಜ್ಞೆಯನ್ನು ಮುರಿದರೆ, ಮಕ್ಕಳ ಜನನಕ್ಕೆ ಅಪವಾದಗಳಿವೆ ಎಂದು ನಂಬಲಾಗಿದೆ.

    ಈ ನಿಯಮದಿಂದಾಗಿಯೇ ವ್ಯಾಟಿಕನ್ ಸಿಟಿಯಲ್ಲಿ 95 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ. ವ್ಯಾಟಿಕನ್ ನಗರದಲ್ಲಿ ಯಾರೂ ಶಾಶ್ವತ ಪೌರತ್ವವನ್ನು ಪಡೆಯುವುದಿಲ್ಲ, ಎಲ್ಲಾ ನಿವಾಸಿಗಳು ತಮ್ಮ ಅಧಿಕಾರಾವಧಿಯ ಅವಧಿಯವರೆಗೆ ಮಾತ್ರ ಇಲ್ಲಿಯೇ ಇರುತ್ತಾರೆ, ಅಲ್ಲಿಯವರೆಗೆ ಅವರಿಗೆ ತಾತ್ಕಾಲಿಕ ಪೌರತ್ವವನ್ನು ನೀಡಲಾಗುತ್ತದೆ.

  • ವ್ಯಾಟಿಕನ್ ಸಿಟಿ, ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ರಾಮ ಮಂದಿರ ನಿರ್ಮಾಣ

    ವ್ಯಾಟಿಕನ್ ಸಿಟಿ, ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ರಾಮ ಮಂದಿರ ನಿರ್ಮಾಣ

    – ರಾಮ ಮಂದಿರ ಟ್ರಸ್ಟ್‍ನಿಂದ ಯೋಜನೆ
    – ವಿಎಚ್‍ಪಿ ಪ್ಲ್ಯಾನ್‍ನಂತೆ ರಾಮನ ಮಂದಿರ ನಿರ್ಮಾಣ

    ನವದೆಹಲಿ: ರಾಮ ಮಂದಿರವನ್ನು ವ್ಯಾಟಿಕನ್ ಸಿಟಿ ಹಾಗೂ ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ನಿರ್ಮಿಸುವ ಯೋಜನೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಗಿದೆ.

    ನವದೆಹಲಿಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬುಧವಾರ ಸಭೆ ನಡೆಸಿತು. ಈ ವೇಳೆ ಸಮಿತಿಯ ಅಧ್ಯಕ್ಷರನ್ನಾಗಿ ನೃಪೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಯಿತು. ರಾಮ್ ದೇವಾಲಯ ನಿರ್ಮಾಣದ ದಿನಾಂಕವನ್ನು 15 ದಿನಗಳ ನಂತರ ನಿರ್ಧರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

    ಅಯೋಧ್ಯೆಯ ರಾಮ ದೇವಾಲಯ ಪ್ರದೇಶವು ವಿಶ್ವದ ಅತಿದೊಡ್ಡ ಸನಾತನ ಧರ್ಮ ಕೇಂದ್ರವಾಗಬೇಕೆಂದು ಟ್ರಸ್ಟ್ ಬಯಸಿದೆ. ಈ ನಿಟ್ಟಿನಲ್ಲಿ ರಾಮ ದೇವಾಲಯದ ಪ್ರದೇಶವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾದ ಮಸೀದಿಗಿಂತ ದೊಡ್ಡದಾಗಿ ನಿರ್ಮಿಸಬೇಕು ಟ್ರಸ್ಟ್ ಸದಸ್ಯರು ಬಯಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    111 ಎಕರೆ ಜಾಗದಲ್ಲಿ ರಾಮ ಮಂದಿರ:
    ಕ್ರಿಶ್ಚಿಯನ್ನರ ಪವಿತ್ರ ಕ್ಷೇತ್ರವಾದ ವ್ಯಾಟಿಕನ್ ಸಿಟಿ 110 ಎಕರೆ ಹಾಗೂ ಮುಸ್ಲಿಮರ ಮೆಕ್ಕಾ ಮಸೀದಿ 99 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಹೀಗಾಗಿ ಈ ಎರಡೂ ಧಾರ್ಮಿಕ ಕೇಂದ್ರಗಳಿಗಿಂತ ವಿಸ್ತಾರವಾದ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂದು ಟ್ರಸ್ಟ್ ಯೋಜಿಸುತ್ತಿದೆ. ಆದರೆ ಟ್ರಸ್ಟ್ ಪ್ರಸ್ತುತ ರಾಮ ಮಂದಿರ ನಿರ್ಮಾಣಕ್ಕೆ 70 ಎಕರೆ ಭೂಮಿಯನ್ನು ಹೊಂದಿದೆ. ಇದರಿಂದಾಗಿ ಟ್ರಸ್ಟ್‌ನ ಕೆಲ ಸದಸ್ಯರು, ಮಂದಿರ ಜಾಗದ ಸುತ್ತಮುತ್ತಲಿನ ಜಮೀನು ಖರೀದಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅರವಿಂದ ಆಶ್ರಮ 3 ಎಕರೆ ಜಮೀನು ನೀಡಲು ಸಿದ್ಧವಾಗಿದೆ. ಮೂಲಗಳ ಪ್ರಕಾರ 111 ಎಕ್ರೆ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ.

    ಏಕಾದಶಿ ವಿಶೇಷ:
    ಟ್ರಸ್ಟ್‌ನ ಮೊದಲ ಸಭೆ ನವದೆಹಲಿಯ ಕೆ.ಪರಶರನ್ ಅವರ ಮನೆಯಲ್ಲಿ ಏಕಾದಶಿ ದಿನವಾದ ಬುಧವಾರ ನಡೆಯಿತು. ಮುಂದಿನ ಸಭೆ 15 ದಿನಗಳ ನಂತರ ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ದಿನವೂ ಏಕಾದಶಿ ಆಗಿದೆ. ಮೂಲಗಳ ಪ್ರಕಾರ, ರಾಮ ದೇವಾಲಯದ ನಿರ್ಮಾಣಕ್ಕಾಗಿ ಸಂತರು ಏಕಾದಶಿ ದಿನವಾದ ಏಪ್ರಿಲ್ 4ರಂದು ಮುಹೂರ್ತವನ್ನು ಸೂಚಿಸಿದ್ದಾರೆ. ಪರಾಶರನ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಏಕಾದಶಿ ಹೊರತುಪಡಿಸಿ, ಇನ್ನೂ ಮೂರು ದಿನಾಂಕಗಳನ್ನು ನಿರ್ಮಾಣ ಪ್ರಾರಂಭಿಸಲು ಪರಿಗಣಿಸಲಾಗಿದೆ. ಮೊದಲ ದಿನಾಂಕ ಮಾರ್ಚ್ 25 ರಂದು (ಚೈತ್ರಾ ಪ್ರತಿಪದ), ಹಿಂದೂ ಹೊಸ ವರ್ಷವು ಈ ದಿನದಿಂದ ಪ್ರಾರಂಭವಾಗುತ್ತದೆ. ಇದಲ್ಲದೆ ಏಪ್ರಿಲ್ 2 (ರಾಮ ನವಮಿ) ಮತ್ತು ಏಪ್ರಿಲ್ 8 (ಹನುಮಾನ್ ಜಯಂತಿ) ಬಗ್ಗೆಯೂ ಚರ್ಚಿಸಲಾಗುತ್ತದೆ. ಆದರೆ ಸಂತರು ಏಕಾದಶಿಯನ್ನು ಏಪ್ರಿಲ್ 4ರಂದು ಆಚರಿಸಲು ಒತ್ತು ನೀಡುತ್ತಿದ್ದಾರೆ.

    ವಿಶ್ವ ಹಿಂದೂ ಪರಿಷತ್ ಸಿದ್ಧಪಡಿಸಿದ ದೇವಾಲಯದ ಮಾದರಿ ಮುಂದುವರಿಯುತ್ತದೆ ಎಂಬುದು ಟ್ರಸ್ಟ್‌ನ ಸದಸ್ಯರಲ್ಲಿ ಬಹುತೇಕ ಸಾಮಾನ್ಯ ಅಭಿಪ್ರಾಯವಾಗಿದೆ. ದೇವಾಲಯದ ಎತ್ತರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮಣ್ಣಿನ ಸಾಮಥ್ರ್ಯ ಪರಿಶೀಲಿಸಬೇಕು ಎಂದು ಟ್ರಸ್ಟ್‌ನ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

  • ಅಂದು ಹೊಡೆದು, ಇಂದು ಕಿಸ್ ಕೊಟ್ಟ ಪೋಪ್

    ಅಂದು ಹೊಡೆದು, ಇಂದು ಕಿಸ್ ಕೊಟ್ಟ ಪೋಪ್

    ವ್ಯಾಟಿಕನ್ ಸಿಟಿ: ಕೈ ಹಿಡಿದು ಎಳೆದ ಮಹಿಳೆಯೊಬ್ಬರಿಗೆ ಹೊಡೆದಿದ್ದ ಪೋಪ್ ಈಗ ಸನ್ಯಾಸಿನಿಯೊಬ್ಬರಿಗೆ ಕಿಸ್ ಕೊಟ್ಟು ಸುದ್ದಿಯಾಗಿದ್ದಾರೆ.

    ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪೋಪ್ ಅವರ ಕೈಯನ್ನು ಹಿಡಿದು ಎಳೆದಿದ್ದರು. ಇಂದರಿಂದ ಕೋಪಗೊಂಡ ಪೋಪ್, ಮಹಿಳೆಯ ಕೈಗೆ ಹೊಡೆದು ಹೊರಟುಹೋದಿದ್ದರು. ಆದರೆ ಈಗ ಪೋಪ್ ಅವರು ಸನ್ಯಾಸಿನಿಯೊಬ್ಬರಿಗೆ ಮುತ್ತು ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    ಚರ್ಚ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಸಭೆ ನಡೆದಿತ್ತು. ಈ ವೇಳೆ ಸನ್ಯಾಸಿನಿಯೊಬ್ಬರು ಸಭೆಗೆ ಆಗಮಿಸಿದ ಪೋಪ್ ಫ್ರಾನ್ಸಿಸ್ ಅವರಿಗೆ ಕಿಸ್ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಫ್ರಾನ್ಸಿಸ್ ಅವರು, ಕೊಡುತ್ತೇನೆ. ಆದರೆ ನೀವು ಕಚ್ಚುತ್ತೀರಿ ಎಂದರು. ಹೀಗಾಗಿ ಅಲ್ಲಿ ಸೇರಿದ್ದ ಜನರು ನಗೆಗಡಲಲ್ಲಿ ತೇಲಿದರು.

    ಮಾತು ಮುಂದುವರಿಸಿದ ಫ್ರಾನ್ಸಿಸ್ ಅವರು, ಶಾಂತವಾಗಿರಿ. ನಾನು ನಿಮಗೆ ಕಿಸ್ ನೀಡುತ್ತೇನೆ. ಆದರೆ ನೀವು ಶಾಂತವಾಗಿರಿ. ಕಚ್ಚಬೇಡಿ ಎಂದು ಮಹಿಳೆಯ ಬಳಿಗೆ ಹೋಗಿ ಸನ್ಯಾಸಿನಿಯ ಬಲ ಕೆನ್ನೆಗೆ ಮುತ್ತಿಕ್ಕಿದರು. ಆಗ ಸನ್ಯಾಸಿನಿಯು ಸಂಭ್ರಮಿಸುತ್ತಾ ಕ್ರೇಜಿ, ಪಾಪಾ ಎಂದು ಕೂಗಿ ಧನ್ಯವಾದ ತಿಳಿಸಿದರು.

  • ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    – ಕೋಪದ ನಡೆಗೆ ಕ್ಷಮೆಯಾಚನೆ

    ವ್ಯಾಟಿಕನ್ ಸಿಟಿ: ಕೈ ಹಿಡಿದು ಎಳೆದ ಮಹಿಳೆಯೊಬ್ಬರ ಮೇಲೆ ಪೋಪ್ ಕೆಂಡಾಮಂಡಲಾಗಿ ಆಕೆಯ ಕೈಗೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಂಗಳವಾರ ಹೊಸ ವರ್ಷದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪೋಪ್ ಅವರ ಕೈಯನ್ನು ಹಿಡಿದು ಎಳೆದಿದ್ದಾರೆ. ಇಂದರಿಂದ ಕೋಪಗೊಂಡ ಪೋಪ್, ಮಹಿಳೆಯ ಕೈಗೆ ಹೊಡೆದು ಹೊರಟುಹೋದರು.

    ಮಹಿಳೆಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೋಪ್ ಅವರು, ಬುಧವಾರ ಕ್ಷಮೆಯಾಚಿಸಿದರು. ಮಹಿಳೆ ಏಕಾಏಕಿ ಹಿಡಿದು ಏಳೆದಿದ್ದರಿಂದ ನಾನು ನನ್ನ ತಾಳ್ಮೆ ಕಳೆದುಕೊಂಡಿದ್ದೆ ಎಂದು ಪೋಪ್ ಹೇಳಿದ್ದಾರೆ.

    ಈ ಘಟನೆಯ ಫೋಟೋ, ವಿಡಿಯೋ ವೈರಲ್ ಆಗುತ್ತಿವೆ. ಈ ವಿಚಾರವಾಗಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಾನು ಕ್ಯಾಥೊಲಿಕ್ ಅಲ್ಲ. ಆದರೆ ಮಹಿಳೆ ಪೋಪ್ ಅವರ ಕೈ ಹಿಡಿದು ಎಳೆದಿದ್ದು ಸರಿಯಲ್ಲ. ಪೋಪ್ ಅವರು ನೋವಿನಿಂದ ಹೀಗೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಹಿಳೆ ತಪ್ಪು ಮಾಡಿದ್ದಾಳೆ. ಆದರೆ ಪೋಪ್ ವರ್ತನೆ ಅವರ ಸ್ಥಾನಕ್ಕೆ ಘನತೆಗೆ ಅನುಗುಣವಾಗಿಲ್ಲ. ಅವರು ತಾಳ್ಮೆಯಿಂದಿರಬೇಕು ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.