Tag: Vatican

  • ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ದೇವಸ್ಥಾನಕ್ಕೆ ಮಹಿಳೆಯರು ಯಾವ ರೀತಿ ಬರಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪಾಠ ಮಾಡಿದ್ದಾರೆ. ದೇವಸ್ಥಾನಕ್ಕೆ ಹುಡುಗಿಯೊಬ್ಬಳು ತುಂಡುಡುಗೆ ಧರಿಸಿಕೊಂಡು ಬಂದಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ದೇವಸ್ಥಾನಕ್ಕೆ (Temple) ಬರುವಾಗ ಸಭ್ಯ ರೀತಿಯ ಬಟ್ಟೆಗಳನ್ನು (Costume) ಧರಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.

    ತುಂಡುಡುಗೆ ಧರಿಸಿಕೊಂಡು ದೇವಸ್ಥಾನಕ್ಕೆ ಬರುವವರನ್ನು ಮೂರ್ಖರು ಎಂದು ಜರಿದಿರುವ ಕಂಗನಾ, ಧಾರ್ಮಿಕ ಸ್ಥಳಕ್ಕೆ ಬರುವವರ ವೇಷಭೂಷಣದ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದರ ಜೊತೆಗೆ ವ್ಯಾಟಿಕನ್ ಗೆ ಹೋಗಿದ್ದಾಗ ತಮಗಾದ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ.ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ‘ನಾನು ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ವ್ಯಾಟಿಕನ್ ಸಿಟಿಗೆ ಹೋಗಿದ್ದೆ. ನನಗೆ ಆವರಣದ ಒಳಗೂ ಬಿಡಲಿಲ್ಲ. ನಂತರ ಹೋಟೆಲ್ ವೊಂದಕ್ಕೆ ಹೋಗಿ ಬಟ್ಟೆ ಬದಲಿಸಿಕೊಂಡು ಹೋಗಬೇಕಾಯಿತು’ ಎಂದಿದ್ದಾರೆ ಕಂಗನಾ. ರಾತ್ರಿ ಧರಿಸುವಂತ ಬಟ್ಟೆಗಳನ್ನು ಸೋಮಾರಿಗಳು ಎಲ್ಲಲ್ಲೂ ಬಳಸುತ್ತಾರೆ ಎಂದು ಟೀಕಿಸಿದ್ದಾರೆ.

    ದೇವಸ್ಥಾನದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿಕೊಂಡು ಬರಬೇಕು ಎನ್ನುವ ಅರಿವು ಕೂಡ ಜನರಿಗೆ ಇರಬೇಕು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೆನಪಿಸಿಕೊಂಡು ಅದಕ್ಕೆ ಒಪ್ಪಬಹುದಾದ ಬಟ್ಟೆಗಳನ್ನು ಧರಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

  • 18ನೇ ಶತಮಾನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂಗೆ ಸಂತನ ಪಟ್ಟ!

    18ನೇ ಶತಮಾನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂಗೆ ಸಂತನ ಪಟ್ಟ!

    ಚೆನ್ನೈ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಕಸರತ್ತು ನಡೆಸುತ್ತಿದೆ. ಆದರೆ ಸ್ವಾತಂತ್ರ್ಯ ಪೂರ್ವದ ರಾಜರ ಆಳ್ವಿಕೆಯಲ್ಲಿ ಹೊರಗಿನವರ ದಾಳಿಗಳ ನಂತರ ಮತಾಂತರ ಪ್ರಕ್ರಿಯೆಗಳು ನಡೆದಿದ್ದವು. ಇದಕ್ಕೆ ನಿದರ್ಶನವೆಂಬಂತೆ ಅನೇಕ ಉದಾಹರಣೆಗಳಿವೆ.

    18ನೇ ಶತಮಾನದಲ್ಲಿ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ದೇವಸಹಾಯಂ ಎಂಬವರು ಮತಾಂತರಗೊಂಡಿದ್ದರು. ಅವರನ್ನು ಸಂತ ಎಂದು ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಈಚೆಗೆ ಘೋಷಿಸಿದ್ದಾರೆ. ಮತಾಂತರಗೊಂಡ ನಂತರ ಲಜಾರಸ್‌ ಆದ ದೇವಸಹಾಯಂ ಸಂತ ಎಂದು ಕರೆಯಲ್ಪಟ್ಟ ಮೊದಲ ಭಾರತೀಯ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಸಂಕಲ್ಪ

    ಈಗಿನ ಕನ್ಯಕುಮಾರಿಯಲ್ಲಿ ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ನೀಲಕಂದನ್‌ ಪಿಳ್ಳೈ (ದೇವಸಹಾಯಂ) ಜನಿಸಿದರು. ತಿರುವಾಂಕೂರ್ ಅರಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ 1745 ರಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ದೇವಸಹಾಯಂ ಮತ್ತು ಲಜಾರಸ್ ಎಂದು ನಾಮಾಂಕಿತರಾದರು.

    ದೇವಸಹಾಯಂ ಅವರು ತಮ್ಮ ಕ್ರಾಂತಿಕಾರಿ ನಿಲುವಿನ ಮೂಲಕ ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ನಿಂತರು. ಮತಾಂತರಗೊಂಡ ನಂತರ ಸಮಾಜದಿಂದ ಕಿರುಕುಳ ಅನುಭವಿಸಿದರು. ಕೊನೆಗೆ ಅವರನ್ನು ಹತ್ಯೆ ಮಾಡಲಾಯಿತು. ಇದನ್ನೂ ಓದಿ: ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ

    ಸಂತ ಎಂದು ಘೋಷಿಸಿದ್ದೇಕೆ?
    ಮಹಿಳೆಯೊಬ್ಬರು ಗರ್ಭ ಧರಿಸಿದ್ದರು. ಆದರೆ ಆಕೆಯ ಗರ್ಭದಲ್ಲಿರುವ ಭ್ರೂಣ ಮೃತಪಟ್ಟಿದ್ದು, ಯಾವುದೇ ಚಲನೆ ಕಾಣುತ್ತಿಲ್ಲ ಎಂದು ಘೋಷಿಸಿದ್ದರು. ಈ ವೇಳೆ ಮಹಿಳೆ ದೇವಸಹಾಯಂ ಅವರನ್ನು ನೆನೆದಾಗ ಆಕೆಯ ಗರ್ಭದಲ್ಲಿದ್ದ ಭ್ರೂಣ ಚಲನೆ ಪಡೆಯಿತು ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸಹಾಯಂ ಅವರನ್ನು ಸಂತ ಎಂದು ಘೋಷಿಸಲಾಗಿದೆ.

    ಹಿಂದೆ ಸಂತ ದೇವಸಹಾಯಂ ಸಮಾನತೆಗಾಗಿ ದನಿಯೆತ್ತಿದ್ದರು. ಜಾತಿವಾದ ಮತ್ತು ಕೋಮುವಾದದ ವಿರುದ್ಧ ಹೋರಾಡಿದ್ದರು. ಭಾರತದಲ್ಲಿ ಕೋಮುವಾದ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ದೇವಸಹಾಯಂ ಅವರ ಸಂತತ್ವವು ಪ್ರೇರಣೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು, ವ್ಯಾಟಿಕನ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ‘ದೇವರ ಹೆಸರಿನಲ್ಲಿ… ಈ ಹತ್ಯಾಕಾಂಡವನ್ನು ನಿಲ್ಲಿಸಿ’: ಪೋಪ್ ಫ್ರಾನ್ಸಿಸ್ ಮನವಿ

    ‘ದೇವರ ಹೆಸರಿನಲ್ಲಿ… ಈ ಹತ್ಯಾಕಾಂಡವನ್ನು ನಿಲ್ಲಿಸಿ’: ಪೋಪ್ ಫ್ರಾನ್ಸಿಸ್ ಮನವಿ

    ವ್ಯಾಟಿಕನ್: ಕಳೆದ 18 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ದಾಳಿಯನ್ನು ವಿರೋಧಿಸಿ ಯುದ್ಧವನ್ನು ಕೊನೆಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಇಂದು ಮನವಿ ಮಾಡಿದರು.

    ಏಂಜೆಲಸ್ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ನಾವು ವರ್ಜಿನ್ ಮೇರಿಗೆ ಪ್ರಾರ್ಥಿಸಿದ್ದೇವೆ. ಆಕೆಯ ಹೆಸರನ್ನು ಹೊಂದಿರುವ ನಗರವು ಮಾರಿಯುಪೋಲ್ ಉಕ್ರೇನ್ ನಾಶಪಡಿಸಿಕೊಳ್ಳಲು ಭೀಕರ ಯುದ್ಧ ನಡೆಯುತ್ತಿದೆ. ಪರಿಣಾಮ ಉಕ್ರೇನ್ ಹುತಾತ್ಮರ ನಗರವಾಗಿ ಮಾರ್ಪಟ್ಟಿದೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಣಬೀರ್ ಕಪೂರ್ ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ 

    ಮಕ್ಕಳು, ಮುಗ್ಧರು ಮತ್ತು ನಿರಾಯುಧ ನಾಗರಿಕರ ಬರ್ಬರ ಹತ್ಯೆ ಭಯಾನಕತೆಯನ್ನು ತಿಳಿಸುತ್ತೆ. ಪೂರ್ತಿ ನಗರಗಳನ್ನು ಸ್ಮಶಾನವಾಗಿ ಮಾಡುವ ಮೊದಲು ಅಪಾಯಕಾರಿ ಶಸ್ತ್ರಗಳನ್ನು ಕೊನೆಗೊಳಿಸಬೇಕು. ಮಕ್ಕಳು ಮತ್ತು ನಾಗರಿಕರನ್ನು ಕೊಲ್ಲುವ ‘ಅನಾಗರಿಕತೆ’ಯನ್ನು ನಾನು ಖಂಡಿಸುತ್ತೇನೆ. ದೇವರ ಹೆಸರಿನಲ್ಲಿ ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.

    ದೇವರ ಹೆಸರಿನಲ್ಲಿ, ನರಳುತ್ತಿರುವವರ ಕೂಗು ಎಲ್ಲರೂ ಕೇಳಲಿ. ಬಾಂಬ್ ದಾಳಿ ಮತ್ತು ಆಘಾತಕಾರಿ ದಾಳಿಗಳು ನಿಲ್ಲಲಿ. ಮಾನವೀಯತೆಯನ್ನು ಬೆಳಸಿಕೊಳ್ಳಲಿ. ದೇವರ ಹೆಸರಿನಲ್ಲಿ, ನಾನು ನಿಮ್ಮನ್ನು ಕೇಳುತ್ತೇನೆ, ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಕೇಳಿಕೊಂಡರು.

    ದೇವರು ಶಾಂತಿಯ ದೇವರು ಮಾತ್ರ, ಅವನು ಯುದ್ಧದ ದೇವರಲ್ಲ. ಹಿಂಸೆಯನ್ನು ಬೆಂಬಲಿಸುವವರು ಅವನ ಹೆಸರನ್ನು ಅಪವಿತ್ರಗೊಳಿಸುತ್ತಾರೆ. ದೇವರು ಎಂದೂ ಯುದ್ಧ ಕೇಳುವುದಿಲ್ಲವೆಂದು ತಿಳಿಸಿದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…! 

  • ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

    ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

    ವ್ಯಾಟಿಕನ್ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

    ಪೋಪ್ ಫ್ರಾನ್ಸಿಸ್ ಮತ್ತು ಪ್ರಧಾನಿ ಮೋದಿ ಜೊತೆ 20 ನಿಮಿಷ ಮಾತುಕತೆ ನಿಗದಿಯಾಗಿತ್ತು. ಆದರೆ ಇವರಿಬ್ಬರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ಮಾಡಿದ್ದಾರೆ. ಇದನ್ನೂ ಓದಿ: ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ

    ಪ್ರಮುಖವಾಗಿ ಕೋವಿಡ್-19, ಹವಾಮಾನ ವೈಪರೀತ್ಯ, ಬಡತನ ನಿರ್ಮೂಲನೆ ಸೇರಿದಂತೆ ಹಲವು ಮಹತ್ವದ ವಿಚಾರ ಚರ್ಚೆಗೆ ಬಂದಿತ್ತು ಎಂದು ಮೂಲಗಳಿಂದ ವರದಿಯಾಗಿದೆ. ಚರ್ಚೆ ವೇಳೆ ಮೋದಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್, ವಿದೇಶಾಂಗ ಸಚಿವರಾದ ಡಾ. ಎಸ್ ಜೈಶಂಕರ್ ಜೊತೆಗಿದ್ದರು. ಇದನ್ನೂ ಓದಿ: ತಂದೆ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

    ಈ ಬಗ್ಗೆ ಟ್ವಿಟ್ಟರ್‍ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ಪೋಪ್ ಫ್ರಾನ್ಸಿಸ್ ಅವರೊಂದಿಗೆ ಸೌಹಾರ್ದಯುತವಾದ ಭೇಟಿ ನಡೆಸಿದ್ದೇವು. ಅವರೊಂದಿಗೆ ಮಾತುಕತೆ ನಡೆಸಲು ಒಂದು ಅವಕಾಶ ಸಿಕ್ಕಿತು. ಈ ವೇಳೆ ಅವರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ