Tag: Vasuki Vaibhav

  • ನಾನು ಹಾಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿಯಲ್ಲ: ಶೈನ್ ಬೇಸರ

    ನಾನು ಹಾಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿಯಲ್ಲ: ಶೈನ್ ಬೇಸರ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಶುರುವಾದಾಗಿನಿಂದ ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಇಬ್ಬರು ಒಳ್ಳೆಯ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಶೈನ್, ನಾನು ಹಾಕ್ಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿ ಅಲ್ಲ ಎಂದು ವಾಸುಕಿಗೆ ಹೇಳಿದ್ದಾರೆ.

    ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಶೈನ್, ವಾಸುಕಿ ಮತ್ತು ಭೂಮಿ ಮಾತನಾಡುತ್ತಿದ್ದರು. ಆಗ ಶೈನ್, ಫೈನಲ್ ಹತ್ತಿರ ಬರುತ್ತಿದ್ದಂತೆ ನೀವು ಹಾಕೊಡುತ್ತಿದ್ದೀರಾ, ಬೇಕಿದ್ದರೆ ಭೂಮಿ ಹತ್ತಿರ ಕೇಳಿ ಎಂದು ವಾಸುಕಿ ನನಗೆ ಹೇಳಿದ್ದಾರೆ. ನಾನು ನಿಮ್ಮ ಮತ್ತು ಅವರ ಮಧ್ಯೆ ಹಾಕೊಡುತ್ತಿದ್ದೀನಾ ಎಂದು ಬೇಸರದಿಂದ ಭೂಮಿ ಹತ್ತಿರ ಕೇಳಿದ್ದಾರೆ.

    ಆಗ ಭೂಮಿ ಹಾಗೇನು ಇಲ್ಲಾ ಶೈನ್. ಹರೀಶ್ ಸರ್ ಭೂಮಿ ಯಾವಾಗಲೂ ವಾಸುಕಿ ಹಿಂದೆ ಹೋಗುತ್ತಾಳೆ. ವಾಸುಕಿಗೆ ಹಾರ್ಡ್ ಡಿಸ್ಕ್ ಆಗಿದ್ದಾಳೆ ಎಂದು ಹೇಳಿದ್ದರು. ಬಳಿಕ ಪ್ರಿಯಾಂಕಾ ಅಮ್ಮ ಬಂದು ಹೋದ ನಂತರ ನೀನು ಯಾರೇ ಬಂದು ಹೋದರೂ ಅವರಿಬ್ಬರು ಹೇಗೆ ಕೂತಿದ್ದಾರೆ ನೋಡಿ ಎಂದಿದ್ದೆ. ಮತ್ತೆ ನೀನು ಕ್ಯಾಪ್ಟನ್ ಆದಾಗ ಹಾರ್ಡ್ ಡಿಸ್ಕ್ ಹೋಗುತ್ತಿದ್ದಾಳೆ ಎಂದು ಹೇಳಿದ್ದೆ ಅದಕ್ಕೆ ಬೇಸರವಾಗಿದ್ದು ಎಂದು ಹೇಳಿದ್ದಾರೆ.

    ಅದಕ್ಕೆ ಶೈನ್, ನಾನು ತಮಾಷೆ ಮಾಡಿದ್ದು, ಮೆಮೊರಿ ಟಾಸ್ಕ್ ನಲ್ಲಿ ನೀನು ತುಂಬಾ ಚೆನ್ನಾಗಿ ಆಟವಾಡಿದ್ದೆ. ಜೊತೆಗೆ ವಾಸುಕಿ ಯಾವುದೇ ಹಾಡು ಹೇಳಿದರೂ ನೆನಪಿನಲ್ಲಿಟ್ಟುಕೊಳ್ಳುತ್ತೀಯಾ, ಹೀಗಾಗಿ ನಾನು ಭೂಮಿ ಹಾರ್ಡ್ ಡಿಸ್ಕ್ ರೀತಿ, ಎಲ್ಲವನ್ನು ನೆನಪಿಕೊಟ್ಟುಕೊಳ್ಳುತ್ತಾರೆ ಎಂದು ಹೇಳಿದ್ದು. ಅದನ್ನ ಹಾಕೊಡುವುದು ಎಂದು ಹೇಳುತ್ತಾರಾ ಎಂದು ಭೂಮಿಗೆ ಪ್ರಶ್ನೆ ಮಾಡಿದ್ದಾರೆ.

    ನಾನಲ್ಲ ವಾಸುಕಿ ಹೇಳಿದ್ದು ಎಂದು ಭೂಮಿ ಹೇಳಿದ್ದಾರೆ. ಅದಕ್ಕೆ ಶೈನ್, ಎಲ್ಲವನ್ನು ನೆನಪಿಟ್ಟುಕೊಳ್ಳುತ್ತೀಯಾ ಎಂಬರ್ಥದಲ್ಲಿ ನಾನು ಹಾರ್ಡ್ ಡಿಸ್ಕ್ ಅಂತ ಹೇಳಿದ್ದು, ಅದು ಬಿಟ್ಟರೆ ನಿನ್ನ ಮತ್ತು ವಾಸುಕಿ ಮಧ್ಯೆ ಹಾಕೊಡಬೇಕು ಎಂದು ಹೇಳಿಲ್ಲ. ನಿಜವಾಗಲೂ ವಾಸುಕಿ ಫೈನಲ್ ಹತ್ತಿರ ಬರುತ್ತಿರಬಹುದು ಆದರೆ  ನಾನು ಹಾಕ್ಕೊಟ್ಟು ಮಜಾ ತೆಗೆದುಕೊಳ್ಳುವ ವ್ಯಕ್ತಿ ಅಲ್ಲ ಎಂದು ಶೈನ್ ಬೇಸರದಿಂದ ಹೇಳಿದ್ದಾರೆ.

  • ಶೈನ್-ವಾಸುಕಿ ಸ್ನೇಹವೇ ಚಂದನಾಗೆ ಮುಳುವಾಯ್ತಾ

    ಶೈನ್-ವಾಸುಕಿ ಸ್ನೇಹವೇ ಚಂದನಾಗೆ ಮುಳುವಾಯ್ತಾ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ 12ನೇ ವಾರ ಬಿಗ್ ಮನೆಯಿಂದ ಚಂದನಾ ಅವರು ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    84 ದಿನಗಳ ಕಾಲ ಬಿಗ್ ಮನೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಿದ್ದ ಚಂದನಾ ಈಗ ಬಿಗ್ ಮನೆಯ ಆಟ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಬಿಗ್‍ಬಾಸ್ ಪ್ರಾರಂಭವಾದ ಮೊದಲ ದಿನದಿಂದನೂ ಚಂದನಾ ಸ್ಟ್ರಾಂಗ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜೊತೆ ಚಂದನಾ ಉತ್ತಮ ಸ್ನೇಹ ಹೊಂದಿದ್ದರು. ಇದೀಗ ಆ ಸ್ನೇಹವೇ ಚಂದನಾ ಅವರಿಗೆ ಮುಳುವಾಯ್ತು ಅನ್ನಿಸುತ್ತದೆ.  ಇದನ್ನೂ ಓದಿ: ಶೈನ್‍ಗೆ ವಾರ್ನಿಂಗ್ ಕೊಟ್ಟ ಸುದೀಪ್

    ಬಿಗ್‍ಬಾಸ್ ಶುರುವಾದಗಿನಿಂದ ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಹೆಸರನ್ನೇ ತೆಗೆದುಕೊಳ್ಳುತ್ತಿದ್ದರು. ಇದು ಮನೆಯ ಇತರೆ ಸದಸ್ಯರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸ್ಪರ್ಧಿಗಳು ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ನಾಮಿನೇಟ್ ಮಾಡಿದ್ದರು. ಅಲ್ಲದೇ ಚಂದನಾ ಅವರು ವಾಸುಕಿ ಹಾಗೂ ಶೈನ್ ಶೆಟ್ಟಿಯನ್ನು ನಾಮಿನೇಟ್ ಮಾಡಲೂ ಹಿಂಜರಿಯುತ್ತಿದ್ದರು.

    ವಾಸುಕಿ ಮತ್ತು ಶೈನ್ ಮಾತ್ರ ಯಾವುದೇ ಮುಲಾಜಿಲ್ಲದೆ ಚಂದನಾರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಇದ್ಯಾವುದೂ ಚಂದನಾರ ಗಮನಕ್ಕೆ ಬರಲೇ ಇಲ್ಲ. ಅತಿಯಾಗಿ ಅವರಿಬ್ಬರನ್ನೂ ನೆಚ್ಚಿಕೊಂಡಿದ್ದೇ ಅವರ ಪಾಲಿಗೆ ಮುಳುವಾಯ್ತು ಅನ್ನಿಸುತ್ತದೆ. ಇತ್ತ ಮನೆಯಲ್ಲಿ ಚಂದನಾ ಅವರಿಗಾಗಿ ಆಡಲಿಲ್ಲ, ಬೇರೆಯವರನ್ನು ಉಳಿಸಲು ಆಡಿದರು ಎಂದು ಚಂದನಾ ಅಕ್ಕ ಸಹ ಹೇಳಿದ್ದಾರೆ.

  • ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ವಾಸುಕಿ ವೈಭವ್ ಅವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಈ ವಿಚಾರವನ್ನು ವಾಸುಕಿ ವೈಭವ್ ಅವರಿಗೆ ತಿಳಿಸಿದ್ದಾರೆ.

    ಹೌದು. ವಾಸುಕಿ ವೈಭವ್ ಅವರ ಅಪ್ಪನ ಸಂಬಂಧಿ ಶ್ರೀವಸ್ತಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಬಿಗ್‍ಬಾಸ್ ವಾಸುಕಿಯನ್ನು ರೂಮಿಗೆ ಕರೆದಿದ್ದರು. ಆಗ ವಾಸುಕಿ ನಿಮ್ಮ ಮನೆಯವರಿಂದ ಒಂದು ಸುದ್ದಿ ಬಂದಿದೆ. ಇದು ಪ್ರಮುಖವಾದ ಸುದ್ದಿಯಾಗಿದೆ. ಹಾಗಾಗಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಮಾವ ಶ್ರೀವಸ್ತಾ ಅವರು ತೀವ್ರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ.

    ಈ ಸುದ್ದಿ ತಿಳಿದು ತಕ್ಷಣ ವಾಸುಕಿ ಬಿಗ್‍ಬಾಸ್ ದಯವಿಟ್ಟು ನಾನು ಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮುಗಿದಿವೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ. ತಕ್ಷಣ ವಾಸುಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ. ನಂತರ ನೀವು ಇಚ್ಛಿಸಿದರೆ ಶೈನ್‍ನ ಕರೆಸುವುದಾಗಿ ಕೇಳಿದ್ದಾರೆ. ವಾಸುಕಿ ಕರೆಸಿ ಎಂದ ತಕ್ಷಣ ಬಿಗ್‍ಬಾಸ್ ಶೈನ್‍ನ ರೂಮಿಗೆ ಕರೆಸಿದ್ದಾರೆ. ವಾಸುಕಿಯ ಅಳುವಿನ ಶಬ್ದ ಕೇಳಿ ಶೈನ್ ಓಡಿ ಹೋಗಿ ವಾಸುಕಿಯನ್ನು ಏನಾಯಿತು ಎಂದು ಕೇಳಿದ್ದಾರೆ.

    ಆಗ ವಾಸುಕಿ ನಮ್ಮ ಸಂಬಂಧಿಯೊಬ್ಬರು ನಿಧನರಾಗಿದ್ದಾರೆ ಎಂದು ಹೇಳಿ ಜೋರಾಗಿ ಅತ್ತಿದ್ದಾರೆ. ಆಗ ಶೈನ್ ಸಮಾಧಾನ ಮಾಡಿದ್ದಾರೆ. ಆದರೂ ವಾಸುಕಿ ಜೋರಾಗಿ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ. ನಂತರ ಮನೆಯವರ ಬಳಿ ನಮ್ಮ ಅಪ್ಪನ ಸಂಬಂಧಿ ಮಾವ ಮೃತಪಟ್ಟಿದ್ದಾರೆ. ಅವರು ತುಂಬಾ ಬೇಕಾದವರು, ಹೋಗಬೇಕು ಎಂದು ಕೇಳಿದೆ. ಆದರೆ ಈಗಾಗಲೇ ಅಂತ್ಯಸಂಸ್ಕಾರ ಮುಗಿದಿದೆ ಎಂದು ಬಿಗ್‍ಬಾಸ್ ತಿಳಿಸಿದರು ಎಂದು ಮತ್ತೆ ಕಣ್ಣೀರು ಹಾಕಿದ್ದಾರೆ. ಆಗ ಮನೆಯವರೆಲ್ಲಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳಿ ಎಂದು ಹೇಳಿ ವಾಸುಕಿಯನ್ನು ಸಮಾಧಾನ ಪಡಿಸಿದ್ದಾರೆ.

  • ಶೈನ್, ವಾಸುಕಿಯನ್ನ ಟಾರ್ಗೆಟ್ ಮಾಡಿದ ನಾಲ್ವರು

    ಶೈನ್, ವಾಸುಕಿಯನ್ನ ಟಾರ್ಗೆಟ್ ಮಾಡಿದ ನಾಲ್ವರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರಲ್ಲಿ ಶೈನ್ ಶೆಟ್ಟಿ ಮತ್ತು ವಾಸುಕಿ ಅವರನ್ನು ನಾಲ್ವರು ಟಾರ್ಗೆಟ್ ಮಾಡಿದ್ದಾರೆ.

    ಬಿಗ್‍ ಮನೆಯಲ್ಲಿರುವ ತಮ್ಮ ಟಾರ್ಗೆಟ್ ಯಾರು ಎಂಬುವುದನ್ನು ತಿಳಿಸಲು ಬಿಗ್‍ಬಾಸ್ ಒಂದು ಚಟುವಟಿಕೆಯನ್ನು ನೀಡಿದ್ದರು. ಅದೇನೆಂದರೆ ಪ್ರತಿಯೊಬ್ಬರು ಮನೆಯಲ್ಲಿರುವವರಲ್ಲಿ ತಮ್ಮ ಟಾರ್ಗೆಟ್ ಅಂದರೆ ತಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು ಎಂಬುದನ್ನು ತಿಳಿಸಬೇಕಿತ್ತು. ಜೊತೆಗೆ ಅದಕ್ಕೆ ಸೂಕ್ತ ಕಾರಣ ಕೊಟ್ಟು ಅವರ ಮುಖಕ್ಕೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಬೇಕಿತ್ತು.

    ಆಗ ವಾಸುಕಿ, ಹರೀಶ್ ರಾಜ್, ಕಿಶನ್ ಮತ್ತು ಕುರಿ ಪ್ರತಾಪ್ ನಾಲ್ವರು ಶೈನ್ ಶೆಟ್ಟಿಯೇ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ಈ ಮನೆಯಲ್ಲಿ ಶೈನ್ ನಮಗೆ ಸ್ನೇಹಿತನಾಗಿದ್ದರೂ ಗೇಮ್ ಎಂದು ನೋಡಿದಾಗ ಪ್ರತಿಯೊಬ್ಬರಿಗೂ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಗೇಮ್ ಮಾತ್ರವಲ್ಲದೇ, ಬುದ್ಧಿ, ಪ್ಲಾನ್ ಮಾಡುವುದಲ್ಲಿಯೂ ಇವರೇ ಮುಂದೆ ಇದ್ದಾರೆ. ಹೀಗಾಗಿ ಈ ವಾರ ನಾವು ಶೈನ್ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಎಲ್ಲರೂ ಕಾರಣ ಕೊಟ್ಟಿದ್ದಾರೆ.

    ಇನ್ನೂ ಚಂದನ್ ಆಚಾರ್, ಪ್ರಿಯಾಂಕಾ, ಶೈನ್ ಶೆಟ್ಟಿ ಮತ್ತು ಭೂಮಿ, ವಾಸುಕಿ ವೈಭವ್ ನಮ್ಮ ಟಾರ್ಗೆಟ್ ಎಂದು ಹೇಳಿದ್ದಾರೆ. ದೀಪಿಕಾ ಕುರಿ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ್ದರೆ, ಚಂದನಾ, ಭೂಮಿ ಶೆಟ್ಟಿಯನ್ನು ನನ್ನ ಟಾರ್ಗೆಟ್ ಎಂದು ಹೇಳಿದ್ದಾರೆ.

    ಈ ವಾರ ಬಿಗ್‍ಮನೆಯಿಂದ ಹೋರಹೋಗಲು, ಕಿಶನ್, ಹರೀಶ್ ರಾಜ್, ಚಂದನಾ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ.

  • ತಮಾಷೆ ಮಾಡಲು ಹೋದ ಹರೀಶ್‍ಗೆ ಬಿಗ್ ಬಾಸ್ ಶಾಕ್

    ತಮಾಷೆ ಮಾಡಲು ಹೋದ ಹರೀಶ್‍ಗೆ ಬಿಗ್ ಬಾಸ್ ಶಾಕ್

    ಬೆಂಗಳೂರು: ತಮಾಷೆ ಮಾಡಲು ಹೋದ ಸ್ಪರ್ಧಿ ಹರೀಶ್ ರಾಜ್‍ಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ.

    ಬಿಗ್ ಬಾಸ್ ಮನೆಯ ಕ್ಯಾಪ್ಟನ್ ವಾಸುಕಿ ಹಾಗೂ ಹರೀಶ್ ಅವರನ್ನು ಸ್ಟೋರ್ ರೂಮಿಗೆ ಕರೆಯುತ್ತಾರೆ. ಈ ವೇಳೆ ಬಿಗ್ ಬಾಸ್ ಹರೀಶ್‍ಗೆ ಕ್ಯಾಮೆರಾ ನೀಡುತ್ತಾರೆ. ಕ್ಯಾಮೆರಾ ಎತ್ತುಕೊಂಡು ಹೋಗುವುದರ ಬದಲು ಹರೀಶ್, ವಾಸುಕಿ ಅವರಿಗೆ ಹೊರಗೆ ಕಳುಹಿಸಿ ಸ್ಟೋರ್ ರೂಮಿನಲ್ಲಿಯೇ ಇರುತ್ತಾರೆ. ಅಲ್ಲದೆ ನನಗೆ ಸ್ಟೋರ್ ರೂಮಿನ ಮೂಲಕ ಹೊರಗೆ ಕಳುಹಿಸಿದ್ದಾರೆ ಎಂದು ಮನೆಯ ಅವರ ಬಳಿ ಹೇಳಲು ಹರೀಶ್, ವಾಸುಕಿ ಅವರಿಗೆ ಹೇಳುತ್ತಾರೆ.

    ವಾಸುಕಿ, ಮನೆಯವರಿಗೆ ಹರೀಶ್ ಸ್ಟೋರ್ ರೂಮಿನಿಂದ ಹೊರಟು ಹೋದರು ಎಂದು ಹೇಳಿದ್ದಾರೆ. ಈ ರೀತಿ ಹೇಳುತ್ತಿದ್ದಂತೆ ಬಿಗ್ ಬಾಸ್ ಸ್ಟೋರ್ ರೂಮನ್ನು ಲಾಕ್ ಮಾಡಿದ್ದಾರೆ. ಹರೀಶ್ ಸ್ಟೋರ್ ರೂಮಿನೊಳಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ನಂತರ ಹರೀಶ್ ಜೋರಾಗಿ ಕಿರುಚುತ್ತಾ ನನ್ನನ್ನು ಹೊರಗೆ ಕರೆಸಿ ನಾನು ಇಲ್ಲಿ ಲಾಕ್ ಆಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳುತ್ತಿದ್ದಂತೆ ಬಿಗ್ ಬಾಸ್ ಸ್ಟೋರ್ ರೂಮಿನ ಬಾಗಿಲು ಓಪನ್ ಮಾಡಿದ್ದಾರೆ.

  • ಹೊಸ ವಿರಹ ಗೀತೆ ರಚಿಸಿದ ವಾಸುಕಿ

    ಹೊಸ ವಿರಹ ಗೀತೆ ರಚಿಸಿದ ವಾಸುಕಿ

    ಗಾಗಲೇ ಬಿಗ್‍ಬಾಸ್ ಮನೆಯಲ್ಲಿ ಎರಡು ಹಾಡುಗಳನ್ನು ಬರೆದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಸ್ಪರ್ಧಿ ವಾಸುಕಿ ವೈಭವ್, ಇದೀಗ ಮತ್ತೊಂದು ವಿರಹ ಗೀತೆಯನ್ನು ಬರೆದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ವಾಸುಕಿ ವೈಭವ್ ಸ್ಪರ್ಧಿಯಾಗಿದ್ದಾರೆ. ವಾಸುಕಿ ಹಾಡುತ್ತಿರುವ ಗೀತೆಯನ್ನು ವಾಹಿನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

    ಈ ವಾರದ ಕಳಪೆ ಆಟಗಾರಾಗಿ ರಕ್ಷಾ ಜೈಲು ಸೇರಿದ್ದರು. ಜೈಲಿನ ಹೊರಗೆ ಕುಳಿತಿರುವ ವಾಸುಕಿ ವಿರಹ ಗೀತೆಯನ್ನು ರಚನೆ ಮಾಡಿ ಹಾಡಿದ್ದಾರೆ. ವಾಸುಕಿ ಹಾಡು ಹೇಳುತ್ತಿದ್ದಂತೆ ಸಹ ಸ್ಪರ್ಧಿ ಶೈನ್ ಶೆಟ್ಟಿ ಮತ್ತು ರಕ್ಷಾ ಪ್ರೇಮ ಜೋಡಿಗಳ ರೀತಿಯಲ್ಲಿ ನಟಿಸಿದ್ದಾರೆ.

    ವಾಸುಕಿ ವೈಭವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಸಪ್ರ್ರೈಸ್ ನೀಡಿದ್ದರು. ಈ ಹಿಂದೆ ವಾಸುಕಿ ರಚಿಸಿದ್ದ, ಮನಸ್ಸಿಂದ ಯಾರು ಕೆಟ್ಟೋವರಿಲ್ಲ ಹಾಡಿಗೆ ಕಿಚ್ಚ ಸುದೀಪ್ ಜೀವ ನೀಡಿದ್ದರು. ವಾಸುಕಿ ಲಿರಿಕ್ಸ್ ಗೆ ಸುದೀಪ್ ಧ್ವನಿ ನೀಡಿರುವ ಹಾಡನ್ನು ಬಿಗ್‍ಬಾಸ್ ಮನೆಯಲ್ಲಿ ಪ್ಲೇ ಮಾಡಿದ್ದರು. ಹಾಡು ಕೇಳಿದ್ದ ಸ್ಪರ್ಧಿಗಳೆಲ್ಲ ಆಶ್ಚರ್ಯದ ಜೊತೆಗೆ ಖುಷಿಯಾಗಿ ಚಪ್ಪಾಳೆ ಹೊಡೆದಿದ್ದರು.

    ಕಿಚ್ಚ ಸುದೀಪ್ ತಮ್ಮ ರಚನೆಗೆ ಹಾಡಿಗೆ ಧ್ವನಿ ನೀಡಿದ್ದನ್ನು ಕೇಳಿದ ವಾಸುಕಿ ಒಂದು ಕ್ಷಣ ಭಾವುಕರಾದರು. ಇಷ್ಟು ವರ್ಷ ಮನೆಯಲ್ಲಿದ್ದರೂ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರಲಿಲ್ಲ. ಬಿಗ್‍ಬಾಸ್ ಮನೆಯಲ್ಲಿಯ ಹುಟ್ಟುಹಬ್ಬವನ್ನು ನಾನು ಮರೆಯಲ್ಲ. ಹಾಡಿಗೆ ಧ್ವನಿ ನೀಡಿದ ಸುದೀಪ್ ಮತ್ತು ಅವಕಾಶ ನೀಡಿದ ಬಿಗ್‍ಬಾಸ್ ಗೆ ವಾಸುಕಿ ವೈಭವ್ ಸಾಷ್ಟಾಂಗ ನಮಸ್ಕಾರ ಹಾಕಿದರು.

  • ಅಯ್ಯೋ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ: ಭೂಮಿ ರಿಕ್ವೆಸ್ಟ್

    ಅಯ್ಯೋ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ: ಭೂಮಿ ರಿಕ್ವೆಸ್ಟ್

    ಖಾಸಗಿ ವಾಹಿನಿಯಲ್ಲಿ ನಡೆಯುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಭೂಮಿ ತಮ್ಮ ಸಹಸ್ಪರ್ಧಿ ಚೈತ್ರಾ ಕೋಟುರ್ ಗೆ ನಿಮ್ಮ ಕಾಲಿಗೆ ಬೀಳ್ತೀನಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಶುಕ್ರವಾರದ ಸಂಚಿಕೆಯಲ್ಲಿ ಭೂಮಿ ಮತ್ತು ವಾಸುಕಿ ವೈಭವ್ ಬೆಂಚ್ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಚೈತ್ರಾ ಕೋಟುರ್ ಸಹ ಅಲ್ಲಿದ್ದರು. ಭೂಮಿ ಮಾತನಾಡುವಾಗ ವಾಸುಕಿ ಆಮೇಲೆ ಹೇಳು. ಈಗ ಬೇಡ, ಚೈತ್ರಾ ಇಲ್ಲಿಯೇ ಇದ್ದಾರೆಂಬ ಸನ್ನೆ ಮಾಡಿದರು. ಆದ್ರೂ ಭೂಮಿ ಮಾತ್ರ ತಮ್ಮ ಮಾತು ಮುಂದುವರಿಸಿದ್ದರು. ಕೊನೆಗೆ ವಾಸುಕಿ ಈಗ ಬೇಡ ಆಮೇಲೆ ಹೇಳು ಎಂದು ಜೋರಾಗಿಯೇ ಹೇಳಿದರು.

    ಅಲ್ಲಿಯೇ ಇದ್ದ ಚೈತ್ರಾ, ಯಾಕೆ ನಾನಿದ್ದರೆ ನಿಮಗೆ ತೊಂದರೆನಾ ಎಂದು ಪ್ರಶ್ನೆ ಮಾಡಿದರು. ಭೂಮಿಯೇ ಹೇಳಲು ಸಿದ್ಧವಿರುವಾಗ ನೀವೇಕೆ ಬೇಡ ಎಂದು ಹೇಳ್ತಿರಿ. ಈ ರೀತಿ ಮಾತನಾಡೋದು ಸರಿ ಅಲ್ಲ. ಹೀಗೆ ಮಾತನಾಡಿದ್ರೆ ನನ್ನ ಸ್ಥಾನದಲ್ಲಿರುವ ಯಾರಿಗೆ ಆದ್ರೂ ಬೇಸರ ಆಗುತ್ತೆ ಎಂದು ಅಸಮಾಧಾನ ಹೊರಹಾಕಿದರು.

    ಮನೆಯ ಎಲ್ಲ ಕಡೆಯೂ ಕ್ಯಾಮೆರಾಗಳಿವೆ. ಇಡೀ ಕರ್ನಾಟಕವೇ ನಿಮ್ಮ ಮಾತನ್ನು ಕೇಳುತ್ತಿರುವಾಗ ನಾನನಿದ್ದರೇನು ನಿಮಗೆ ತೊಂದರೆನಾ? ಭೂಮಿಯೇ ಹೇಳಲು ಸಿದ್ಧವಾಗಿರುವಾಗ ನೀವು ಏಕೆ ಬೇಡ ಎಂದು ಹೇಳುತ್ತೀರಿ. ಭೂಮಿಗೆ ತನ್ನ ಮಾತು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಈಗ ಬೇಡ ಎಂಬ ನಿಮ್ಮ ಮಾತು ನನಗೆ ನೋವು ತರಿಸಿತು ಎಂದು ಚೈತ್ರಾ ಬೇಸರ ವ್ಯಕ್ತಪಡಿಸಿದರು.

    ಮಾತಿಗೆ ಮಾತು ಕೊಡುವುದು ತುಂಬಾ ಸರಳ. ನಾನು ನಿಮ್ಮ ಮಾತುಗಳಿಗೆ ಇದೂವರೆಗೂ ಪ್ರತಿಕ್ರಿಯಿಸಿಲ್ಲ. ನಿಮ್ಮ ರೀತಿಯೇ ಸಾತ್ವಿಕವಾಗಿ ನಾನು ಮಾತನಾಡಿದ್ರೆ ನಿಮಗೆ ತಡೆದುಕೊಳ್ಳಲು ಆಗಲ್ಲ. ನಿಮ್ಮ ಮಾತುಗಳಿಗೆ ಟಾಂಗ್ ಕೊಡಲು ನನಗೆ ಇಷ್ಟವಿಲ್ಲ ಮತ್ತು ಭೂಮಿ ಹೇಳುವ ಮಾತು ಕೇಳಿಸಿಕೊಳ್ಳಲು ಮನಸ್ಸಿಲ್ಲ ಎಂದು ಚೈತ್ರಾಗೆ ವಾಸುಕಿ ವೈಭವ್ ಉತ್ತರ ನೀಡಿದರು.

    ಕೊನೆಗೆ ಚೈತ್ರಾ ಅಲ್ಲಿಂದ ಬಾತ್‍ರೂಮಿಗೆ ತೆರಳಿದರು. ಚೈತ್ರಾ ಅಲ್ಲಿಂದ ಹೋಗುತ್ತಿದ್ದಂತೆ ವಾಸುಕಿ, ನಿನಗೆ ನಾನು ಹೇಳಿದ್ದು ಕೇಳಿಸಲಿಲ್ವಾ? ಎಂದು ಭೂಮಿಗೆ ಕ್ಲಾಸ್ ತೆಗೆದುಕೊಂಡರು. ಇಷ್ಟರಲ್ಲಿಯೇ ಚೈತ್ರಾ ಮತ್ತೆ ಹೊರಗೆ ಬಂದರು. ನನಗೆ ಯಾರ ಭಯವೂ ಇಲ್ಲ ಎಂದು ವಾಸುಕಿ ಹೇಳುತ್ತಿದ್ದಾಗ ಇಬ್ಬರ ಮಧ್ಯೆ ಪ್ರವೇಶಿಸಿದ ಚೈತ್ರಾ ಮತ್ತೆ ಸ್ಪಷ್ಟನೆ ಕೊಡಲು ಮುಂದಾದರು. ಕೊನೆಗೆ ಭೂಮಿಯೇ, ಅಯ್ಯೋ ಚೈತ್ರಾ ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡಿ ಎಂದು ಹೇಳಿ ಇಬ್ಬರ ಕೋಳಿ ಜಗಳಕ್ಕೆ ಅಂತ್ಯ ಹಾಡಿದರು.

  • ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ

    ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಇತ್ತೀಚೆಗೆ ಕಿಶನ್ ಸ್ಪರ್ಧಿ ಚಂದನಾ ಅವರಿಗೆ ಮುತ್ತು ನೀಡಿದ್ದರು. ಈ ಬಗ್ಗೆ ಮಾತನಾಡುತ್ತಿದ್ದ ಶೈನ್ ಶೆಟ್ಟಿ ಮುತ್ತು ಕೊಡು ಎಂದು ಚಂದನಾಗೆ ಹೇಳಿದಾಗ ಗಾಯಕ ವಾಸುಕಿ ಓಡಿ ಹೋಗಲು ಮುಂದಾದರು.

    ಸ್ಪರ್ಧಿಗಳಾದ ಶೈನ್, ವಾಸುಕಿ ಹಾಗೂ ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಚಂದನಾರಿಗೆ ಕಿಶನ್ ಮುತ್ತು ನೀಡಿದರ ಬಗ್ಗೆ ಕೇಳಿದ್ದಾರೆ. ಬಳಿಕ ಈ ವಿಷಯವನ್ನು ನೀನು ನನ್ನ ಬಳಿ ಏಕೆ ಹೇಳಿಲಿಲ್ಲ ಎಂದು ಪ್ರಶ್ನಿಸಿದಾಗ ಚಂದನಾ ನನಗೆ ಈ ವಿಷಯವನ್ನು ದೊಡ್ಡ ಸುದ್ದಿ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಈ ಬಗ್ಗೆ ಯಾರ ಬಳಿಯೂ ಹೇಳಲಿಲ್ಲ ಎಂದು ಉತ್ತರಿಸಿದ್ದಾರೆ.

    ಬಳಿಕ ಶೈನ್, ಕಿಶನ್ ನಿನಗೆ ಎಲ್ಲಿ ಮುತ್ತು ಕೊಟ್ಟರು. ಅವನು ನಿನಗೆ ಮುತ್ತು ಕೊಟ್ಟಾಗ ನಿನಗೆ ಹೇಗೆ ಎನಿಸಿತ್ತು. ಇದು ನಿನ್ನ ಮೊದಲ ಮುತ್ತಾ? ಎಂದು ಪ್ರಶ್ನಿಸಿದ್ದಾರೆ. ಆಗ ಚಂದನಾ, ಕಿಶನ್ ನನಗೆ ಕೆನ್ನೆ ಮೇಲೆ ಮುತ್ತು ಕೊಟ್ಟನು. ಸೀರಿಯಲ್‍ನಲ್ಲಿ ಒಬ್ಬರು ಒಂದು ಬಾರಿ ಮಾತ್ರ ಮುತ್ತು ಕೊಟ್ಟಿದ್ದರು ಅಷ್ಟೇ. ಅದನ್ನು ಬಿಟ್ಟು ಬೇರೆ ಯಾರೂ ನನಗೆ ಮುತ್ತು ನೀಡಿರಲಿಲ್ಲ ಎಂದು ಹೇಳಿದ್ದಾರೆ.

    ಚಂದನಾ ಈ ರೀತಿ ಹೇಳುತ್ತಿದ್ದಂತೆ ಶೈನ್, ವಾಸುಕಿಗೆ ಒಂದು ಮುತ್ತು ಕೊಡು ಎಂದಿದ್ದಾರೆ. ಈ ವೇಳೆ ಚಂದನಾ ಪಕ್ಕದಲ್ಲಿಯೇ ಕುಳಿತ್ತಿದ್ದ ವಾಸುಕಿ ಎದ್ದು ಓಡಿ ಹೋಗಲು ಮುಂದಾದರು. ಬಳಿಕ ಶೈನ್ ಹಾಗೂ ಚಂದನಾ ನೀವು ಭೂಮಿಗೆ ಮುತ್ತು ನೀಡಲಿಲ್ವಾ ಎಂದು ಹೇಳಿದ್ದಾರೆ. ಆಗ ವಾಸುಕಿ ನಾನು ಅವರಿಗೆ ಮುತ್ತು ನೀಡಲಿಲ್ಲ, ಅವರೇ ನನಗೆ ಮುತ್ತು ನೀಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಚಿಕೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿಲ್ಲ. ಬದಲಾಗಿ ಅನ್‍ಸೀನ್‍ನಲ್ಲಿ ಪ್ರಸಾರವಾಗಿತ್ತು.

    ಕಳೆದ ವಾರ ಬಿಗ್‍ಬಾಸ್ ಮನೆಯ ಮಂದಿಗೆಲ್ಲಾ ಒಂದು ಟಾಸ್ಕ್ ಕೊಟ್ಟಿದ್ದರು. ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕು ಎಂಬ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ಮಧ್ಯೆ ಜೋರಾಗಿ ಜಗಳ, ಗಲಾಟೆ ನಡೆದಿದೆ. ಕೊನೆಗೆ ಬಿಗ್‍ಬಾಸ್ ಈ ಟಾಸ್ಕ್ ನಿಂದ ಬ್ರೇಕ್ ಕೊಟ್ಟಿದ್ದರು. ಆಗ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್‍ನಲ್ಲಿ ನಡೆದ ಜಗಳದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

    ಟಾಸ್ಕ್ ಮಾಡುವಾಗ ಚಂದನಾ, ಕಿಶನ್‍ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‍ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಸ್ಪರ್ಧಿಗಳಿಬ್ಬರ ಲಿಪ್ ಲಾಕ್ ನೋಡಿ ವಾಸುಕಿ ಶಾಕ್

    ಸ್ಪರ್ಧಿಗಳಿಬ್ಬರ ಲಿಪ್ ಲಾಕ್ ನೋಡಿ ವಾಸುಕಿ ಶಾಕ್

    ಬೆಂಗಳೂರು: ಬಿಗ್ ಬಾಸ್ ಸೀಸನ್ -7ರಲ್ಲಿ ಸ್ಪರ್ಧಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಅದನ್ನು ನೋಡಿ ಗಾಯಕ ವಾಸುಕಿ ವೈಭವ್ ಶಾಕ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ನಟಿಯರಾದ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ್ದಾರೆ. ಇದನ್ನು ನೋಡಿದ ವಾಸುಕಿ ವೈಭವ್ ಶಾಕ್ ಆಗಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿದ್ದಾರೆ. ಇದೇ ವೇಳೆ ಕಣ್ಣು ಉಜ್ಜಿಕೊಂಡು ಬರುತ್ತಿದ್ದ ವಾಸುಕಿ ಇಬ್ಬರು ಲಿಪ್ ಲಾಕ್ ಮಾಡುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಈ ಬಗ್ಗೆ ವಾಸುಕಿ ನಟ ಹರೀಶ್ ಅವರ ಬಗ್ಗೆ ಹೇಳಿದ್ದಾರೆ.

    ವಾಸುಕಿ, ಹರೀಶ್ ಅವರ ಬಳಿ ಹೋಗಿ, ಇವರಿಬ್ಬರು ಸರಿಯಿಲ್ಲ. ನಾನು ಬೆಳಗ್ಗೆ ನಿದ್ದೆ ಕಣ್ಣಿನಲ್ಲಿ ಎದ್ದು ಸ್ಟೋರ್ ರೂಮಿನಲ್ಲಿ ನಿಂತಿದ್ದೆ. ಈ ವೇಳೆ ಇಬ್ಬರು ಲಿಪ್ ಲಾಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದಾ ಎಂದು ಹರೀಶ್ ಪ್ರತಿಕ್ರಿಯಿಸಿದಾಗ ಭೂಮಿ ಹಾಗೂ ದೀಪಿಕಾ ಮತ್ತೆ ಲಿಪ್ ಲಾಕ್ ಮಾಡಿದ್ದಾರೆ. ನಾನು ಅವರಿಬ್ಬರು ಮುತ್ತು ಕೊಡುವುದನ್ನು ನೋಡಿದ್ದಕ್ಕೆ ನೀವು ಏಕೆ ನೋಡಿದ್ದೀರಿ ಎಂದು ಹೇಳಿದ್ದಾರೆ ಎಂದರು. ಬಳಿಕ ಬೇಕಾದರೆ ನೀವಿಬ್ಬರು ಲಿಪ್ ಲಾಕ್ ಮಾಡ್ಕೊಳ್ಳಿ ಎಂದು ದೀಪಿಕಾ ಹೇಳಿದ್ದಾರೆ.

    ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ ದೃಶ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಆದರೆ ಈ ದೃಶ್ಯವನ್ನು ವೂಟ್‌ನಲ್ಲಿ ನೋಡಬಹುದಾಗಿದೆ.

    ಮಂಗಳವಾರ ಬಿಗ್‌ಬಾಸ್ ಮನೆಯ ಮಂದಿಗೆಲ್ಲಾ ಒಂದು ಟಾಸ್ಕ್ ಕೊಟ್ಟಿದ್ದರು. ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕು ಎಂಬ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ಮಧ್ಯೆ ಜೋರಾಗಿ ಜಗಳ, ಗಲಾಟೆ ನಡೆದಿದೆ. ಕೊನೆಗೆ ಬಿಗ್‌ಬಾಸ್ ಈ ಟಾಸ್ಕ್‌ನಿಂದ ಬ್ರೇಕ್ ಕೊಟ್ಟಿದ್ದರು. ಆಗ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ನಲ್ಲಿ ನಡೆದ ಜಗಳದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

    ಟಾಸ್ಕ್ ಮಾಡುವಾಗ ಚಂದನಾ ಕಿಶನ್‌ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‌ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.