Tag: Vasuki Vaibhav

  • ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ: ದೊಡ್ಮನೆಯಲ್ಲಿ ‘ಏನ್ ಕಿತ್ತು ದಬ್ಬಾಕ್ತಿಯೋ’ ಎಂದ ಗಾಯಕ

    ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ: ದೊಡ್ಮನೆಯಲ್ಲಿ ‘ಏನ್ ಕಿತ್ತು ದಬ್ಬಾಕ್ತಿಯೋ’ ಎಂದ ಗಾಯಕ

    ಬಾರಿ ಓಟಿಟಿಯಲ್ಲಿ ಶುರುವಾದ ಬಿಗ್ ಬಾಸ್ ಶೋ ನಿನ್ನೆಯಿಂದ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಅನ್ನು ಚಿತ್ರೀಕರಣ ಮಾಡುತ್ತಿದೆ. ಬಿಗ್ ಬಾಸ್ ಈ ಬಾರಿ ಶುರುವಾಗುವುದು ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭಬ್ ಹಾಡಿನಿಂದ ಎನ್ನುವುದು ವಿಶೇಷ. ಕಳೆದ ಸೀಸನ್ ನಲ್ಲಿ ಹಾಡಿನ ಮೂಲಕವೇ ಎಲ್ಲರನ್ನೂ ರಂಜಿಸಿದ್ದ ವಾಸುಕಿ, ಈ ಬಾರಿಯೂ ಅಂಥದ್ದೇ ಹೊಸದೊಂದು ಹಾಡಿನ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಹಾಗಂತ ಅವರು ಸ್ಪರ್ಧಿಯಲ್ಲ ಎನ್ನುತ್ತಿದೆ ಮೂಲಗಳು.

    ನಿನ್ನೆಯಷ್ಟೇ ಸುದೀಪ್ ಮತ್ತು ವಾಸುಕಿ ಬಿಗ್ ಬಾಸ್ ಮನೆಯ ಪರಿಚಯ ಮಾಡುವಂತ ಕಂತನ್ನು ಸೆರೆ ಹಿಡಿಯಲಾಗಿದೆ. ಅದಕ್ಕೂ ಮುನ್ನ ಸುದೀಪ್ ಅವರು, ವಾಸುಕಿಯನ್ನು ಕರೆದು ‘ಬಿಗ್ ಬಾಸ್ ಗಾಗಿ ಹಾಡೊಂದನ್ನು ಬರೆದುಕೊಡುತ್ತೀನಿ ಅಂದಿದ್ದರಂತೆ? ಎಲ್ಲಿದೆ ಹಾಡು ಎಂದು ಕೇಳುತ್ತಾರೆ. ಆಗ ವಾಸುಕಿ ಆ ಹಾಡನ್ನು ಇಲ್ಲಿಯೇ ಹಾಡುತ್ತೇನೆ ಎಂದು ಶುರು ಮಾಡುತ್ತಾರೆ. ‘ ಲಾಗಿನ್ ಮಾಡಿ ಬಲಗಾಲಿಟ್ಟು, ಲಾಗ್ ಔಟ್ ಯಾವಾಗ್ಲೊ ಯಾವಾನಿಗ್ಗೊತ್ತು. ಕ್ಯಾಮೆರಾ ನೋಡ್ತೈತೆ ಮುರ್ಹೊತ್ತು. ಏನ್ ಕಿತ್ ದಬಾಕ್ತಿಯೋ ಅದೆ ಸಂಪತ್ತು’ ಎನ್ನುವ ಸಾಲುಗಳಿಂದ ಶುರುವಾಗು ಸಾಂಗ್ ಹೇಳುತ್ತಾರೆ. ಇದನ್ನೂ ಓದಿ:ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

    ಹಾಡಿನ ನಂತರ ಬಿಗ್ ಬಾಸ್ ಮನೆಯೊಳಗೆ ವಾಸುಕಿ ಮತ್ತು ಸುದೀಪ್ ಕಾಲಿಡುತ್ತಾರೆ. ಥೇಟ್ ಸುದೀಪ್ ಅವರನ್ನೇ ಹೋಲುವಂತಹ ಮೂರ್ತಿ ಕಂಡು ವಾಸುಕಿ ಅಚ್ಚರಿಪಡುತ್ತಾರೆ. ಅದರ ಹಿನ್ನೆಲೆ ಕುರಿತು ಚರ್ಚೆಯೂ ಆಗುತ್ತದೆ. ಇಂದು ಸಂಜೆ ಏಳುಗಂಟೆಯಿಂದ ಬಿಗ್ ಬಾಸ್ ಕಾರ್ಯಕ್ರಮವು ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಈಗಾಗಲೇ ದೊಡ್ಮನೆ ಸೇರಿರುವ ಕೆಲವು ಹೆಸರುಗಳು ಬಹಿರಂಗಗೊಂಡಿವೆ. ಸಾಮಾನ್ಯ ಜನರಿಗಿಂತಲೂ ಈ ಬಾರಿಯೂ ಸೆಲೆಬ್ರಿಟಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಮೇಘನಾ ರಾಜ್, ಇದೀಗ ನಿರ್ಮಾಪಕಿಯಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ತಾವೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹಾಗಂತ ಇವರೊಬ್ಬರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿಲ್ಲ, ಬದಲಿಗೆ ಪನ್ನಗಾಭರಣ ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ.

    ಕಳೆದ ವರ್ಷ ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದ ಮೇಘನಾ ರಾಜ್, ಹೊಸದೊಂದು ಸುದ್ದಿ ಕೊಡಲಿದ್ದೇನೆ ಎಂದು ಹೇಳಿದ್ದರು. ಆನಂತರ ಒಟ್ಟಿಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ಮತ್ತೊಂದು ಫೋಟೋ ಹಂಚಿಕೊಂಡಿದ್ದ ಮೇಘನಾ, ಈ ಸಿನಿಮಾವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದು, ಪನ್ನಗಾಭರಣ ನಿರ್ಮಾಪಕರು ಎಂದು ಹೇಳಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಮೇಘನಾ ಕೂಡ ನಿರ್ಮಾಪಕಿಯಾಗುತ್ತಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪ್ರಮುಖ ಪಾತ್ರವನ್ನು ಮೇಘನಾ ರಾಜ್ ಅವರೇ ನಿರ್ವಹಿಸುತ್ತಿದ್ದಾರೆ. ವಾಸುಕಿ ವೈಭ‍ವ್ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸದ್ಯ ಕಾಂತ ಕನ್ನಲ್ಲಿ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದು, ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿದ್ದಾರಂತೆ. ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಟ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನಂತರ ಅಕ್ಷರಶಃ ನಲುಗಿ ಹೋಗಿದ್ದ ನಟಿ ಮೇಘನಾ ರಾಜ್, ಆ ನೋವಿನ ಜೊತೆ ಜೊತೆಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮದುವೆ ನಂತರವೂ ಮೇಘನಾ ನಟಿಸಬೇಕು ಅನ್ನುವುದು ಚಿರು ಆಸೆಯಾಗಿತ್ತು. ಹಾಗಾಗಿಯೇ ಮತ್ತೆ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈವರೆಗೂ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಮೇಘನಾ, ಇದೀಗ ಮತ್ತೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

    ಈ ಹಿಂದೆ ಕಾಂತ ಕನ್ನಳ್ಳಿ ಸಿನಿಮಾದಲ್ಲಿ ಮೇಘನಾ ಪಾತ್ರ ಮಾಡಿದ್ದರು. ಹಲವು ಕಂತುಗಳ ಶೂಟಿಂಗ್ ನಲ್ಲೂ ಭಾಗಿಯಾಗಿದ್ದರು. ಇದೀಗ ಮತ್ತೊಂದು ಸಿನಿಮಾಗಾಗಿ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾವನ್ನು ಚಿರು ಆತ್ಮೀಯ ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡುತ್ತಿದ್ದಾರೆ. ವಿಶಾಲ್ ಈ ಚಿತ್ರದ ನಿರ್ದೇಶಕರು. ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೇಘನಾ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ತಮ್ಮ ಟೀಮ್ ಜೊತೆಗಿನ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಮೇಘನಾ, ಒಂದು ಸಣ್ಣ ಆಲೋಚನೆ ಜುಲೈ 7ಕ್ಕೆ ನಿಜವಾಯಿತು. ಅಕ್ಟೋಬರ್ 2021ರಂದು ನಾವು ಈ ಪ್ರಾಜೆಕ್ಟ್ ಘೋಷಿಸಿದ್ದೇವೆ. ಇದೀಗ ಆ ಯೋಚನೆ ಲುಕ್ ಟೆಸ್ಟ್ ವರೆಗೂ ಬಂದಿದೆ ಎಂದೂ, ಸ್ಕ್ರಿಪ್ಟ್ ಕೆಲಸ ಮತ್ತೆ ಶುರುವಾಗಿದೆ ಎಂದೂ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ ಯವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ.  ಗಿರಿ ಅಂದರೆ ನಾನ್ನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ. ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಅದ್ಭುತವಾದ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ಗಂಟೆಗಳ ಕಾಲ ಸಂಪೂರ್ಣ ಮನೋರಂಜನೆಯಿರುವ ಸಿನಿಮಾ ನಮ್ಮದು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ರಿಷಭ್ ಶೆಟ್ಟಿ.

     

    ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್ “ಕಥಾಸಂಗಮ” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆನಂತರ ನಾನು ಹಾಗೂ ಅನಿರುದ್ಧ್ ಮಹೇಶ್ ಸೇರಿ ಈ ಚಿತ್ರ ನಿರ್ದೇಶನ‌ ಮಾಡಿದ್ದೇವೆ ಎಂದರು ಕರಣ್ ಅನಂತ್. ಮತ್ತೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ನಾನು ಈ ಚಿತ್ರದಲ್ಲಿ ಗಿರಿಜಾ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ‌ ಹುಡುಗಿ. ತಾಯಿ ಇರುವುದಿಲ್ಲ. ತಂದೆ ಹಾಗೂ ಅಣ್ಣ ಇರುತ್ತಾರೆ ಎಂದು ನಾಯಕಿ ರಚನಾ ಇಂದರ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

    ನನ್ನ ಪಾತ್ರ ಕೂಡ ಚೆನ್ನಾಗಿದೆ. ಖುಷಿ ಜೋಕುಮಾರಸ್ವಾಮಿ ನನ್ನ ಪಾತ್ರದ ಹೆಸರು ಎಂದರು ನಟಿ ತಪಸ್ವಿನಿ. ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ‌.‌ ಇದರಲ್ಲೂ ಅದೇ ಹೆಸರು. ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ದಿನೇಶ್ ಮಂಗಳೂರು. ನಾನು ಎಲ್ಲಾ‌ ಜವಾಬ್ದಾರಿಯನ್ನು ರಿಷಭ್ ಅವರಿಗೆ ನೀಡಿದ್ದೀನಿ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು.  ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಂದೇಶ್ ಎನ್. ರಿಷಭ್ ಶೆಟ್ಟಿ, ರಚನ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಭರತ್ – ಪ್ರದೀಪ್ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv

  • ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರು ಕಿಚನ್ ನಲ್ಲಿ ತಯಾರಾದ ಅಡುಗೆಯನ್ನು ಹೊಗಳದವರೇ ಇಲ್ಲ. ಅದರಲ್ಲೂ ಸ್ವತ ಸುದೀಪ್ ಅವರೇ ತಮ್ಮ ಕೈಯಾರ ಅಡುಗೆ ಮಾಡಿ ಬಡಿಸುತ್ತಾರೆ. ಆ ರುಚಿಯನ್ನು ಬಲ್ಲವರೇ ಬಲ್ಲರು. ಅವರ ಕಿಚನ್ ಕೂಡ ಹಾಗೆಯೇ ಇದೆ. ದೇಶ ವಿದೇಶಗಳ ಅಡುಗೆ ಪಾತ್ರೆಗಳನ್ನು ಅದು ಹೊಂದಿದೆ. ಹಾಗಾಗಿ ಕೇವಲ ದೇಶಿ ಆಹಾರ ಮಾತ್ರ ಅಲ್ಲಿ ಬೇಯುವುದಿಲ್ಲ. ವಿದೇಶ ಅಡುಗೆಗಳೂ ತಯಾರಾಗುತ್ತವೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಹಾಗಂತ ಕಿಚ್ಚ ಸುದೀಪ್ ಅಡುಗೆ ಮಾಡುವುದನ್ನು ಯಾವತ್ತೂ ನಿಲ್ಲಿಸಿಲ್ಲ. ಯಾವುದೇ ದೇಶಕ್ಕೆ ಹೋಗಲಿ ಉಳಿದುಕೊಂಡ ಹೋಟೆಲ್ ನ ಕಿಚನ್ ಗೆ ಭೇಟಿ ಮಾಡದೇ ಬರುವುದಿಲ್ಲವಂತೆ. ಅಡುಗೆ ಕೋಣೆ ಹೊಕ್ಕು, ಅಲ್ಲಿ ತಯಾರಾದ ವಿಶೇಷ ಭಕ್ಷ್ಯಗಳನ್ನು ನೋಡಿ, ಅದನ್ನು ತಯಾರು ಮಾಡುವ ರೀತಿ ತಿಳಿದುಕೊಳ್ಳುತ್ತಾರಂತೆ. ಅದನ್ನು ಟ್ರೈ ಕೂಡ ಮಾಡುತ್ತಾರೆ. ಹಾಗಾಗಿ ವಿವಿಧ ಬಗೆಯ ಅಡುಗೆಗಳು ಅವರಿಗೆ ಬರುತ್ತವೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನಿನ್ನೆಯಷ್ಟೇ ಡಾಲಿ ಧನಂಜಯ್ ಅವರು ಸುದೀಪ್ ಮನೆಗೆ ಹೋಗಿದ್ದಾರೆ. ಇವರ ಜತೆ ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಕಂ ಗಾಯಕ ವಾಸುಕಿ ವೈಭವ್, ಕಲಾ ನಿರ್ದೇಶಕ ಶಿವಕುಮಾರ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಇದ್ದಾರೆ. ಇವರೆಲ್ಲರೂ ಕಿಚ್ಚ ಸುದೀಪ್ ಅವರೇ ಅಡುಗೆ ತಯಾರಿಸಿ ಹೊಟ್ಟೆ ತುಂಬಾ ಬಡಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕಿಚ್ಚನ ಕೈ ರುಚಿ ಅನುಭವಿಸಿದ ಡಾಲಿ ಧನಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ. ಅಡುಗೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶಕ ವಾಸಕಿ ವೈಭವ್ ಕೂಡ ಅನುಮೋದಿಸಿದ್ದಾರೆ. ಈ ಟ್ವಿಟ್ ಗೆ ಅನೇಕರು ಮೆಚ್ಚಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

  • ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ ಗರುಡ ಗಮನ ವೃಷಬ ವಾಹನ ಚಿತ್ರಕ್ಕಾಗಿ ಪ್ರಶಸ್ತಿಗಳ ಬೇಟೆಯಾಡಿದ್ದಾರೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಹೀರೋ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿಸಿದ ಮೊದಲ ಚಿತ್ರಕ್ಕೆ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಮೂಲಕ ಸಂಭ್ರಮಿಸಿದ್ದಾರೆ. ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ ಪುಗ್ಸಟ್ಟೆ ಲೈಫ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದ್ದು, ಮೊದಲ ಸಿನಿಮಾದ ನಿರ್ದೇಶನಕಕ್ಕಾಗಿ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಪುಕ್ಸಟ್ಟೆ ಲೈಫು ಚಿತ್ರಕ್ಕಾಗಿ ಪ್ರಶಸ್ತಿ ಪಡೆದದ್ದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಪ್ರವೀಣ್ ಶ್ರೀಯಾನ್ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ GGVV ಗಾಗಿ ನಾಲ್ಕನೇ ಪ್ರಶಸ್ತಿ ಗಳಿಸಿದರು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್ ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ)ಈ ನಾಲ್ಕು ಪ್ರಶಸ್ತಿಗಳು ರಾಬರ್ಟ್ ಚಿತ್ರಕ್ಕಾಗಿ ಬಂದಿದ್ದು ಮತ್ತೊಂದು ವಿಶೇಷ.

    ಎ.ಹರ್ಷ ನಿರ್ದೇಶನದ ಭಜರಂಗಿ 2 ಮತ್ತು ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲು ಸಿನಿಮಾ ಸಲಗ ಮತ್ತು ಧನಂಜಯ್ ನಟನೆಯ ಬಡವ ರಾಸ್ಕಲ್ ತಲಾ ಮೂರು ಪ್ರಶಸ್ತಿ ಗಳಿಸಿವೆ. ಭಜರಂಗಿ 2 ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಬಡವ ರಾಸ್ಕಲ್ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ  ಮತ್ತು ಅತ್ಯತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. ನಟ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಬಂದಿವೆ.

    ಡಾ.ರಾಘವೇಂದ್ರ ಬಿಎಸ್ ಅವರು ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ಅರ್ಜುನ್ ಗೌಡ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅವರು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಅಕ್ಷಿ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಪಡೆದುಕೊಂಡಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ರಂಗದ ಸಾಕಷ್ಟು ತಾರೆಯರು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ವಿಜೇತರು ಪಟ್ಟಿ – 2022

    1. ಅತ್ಯುತ್ತಮ ಚಿತ್ರ

    ಪುಗ್ಸಟ್ಟೆ ಲೈಫ್

    1. ಅತ್ಯುತ್ತಮ ನಿರ್ದೇಶಕ

    ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟ

    ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟಿ

    ಗಾನವಿ ಲಕ್ಷ್ಮಣ್ (ಹೀರೋ)

    1. ಅತ್ಯುತ್ತಮ ಚಿತ್ರಕಥೆ

    ಗರುಡ ಗಮನ ವೃಷಭ ವಾಹನ

    1. ಅತ್ಯುತ್ತಮ ಪೋಷಕ ನಟ

    ರಂಗಾಯಣ ರಘು (ಬಡವ ರಾಸ್ಕಲ್)

    1. ಅತ್ಯುತ್ತಮ ಪೋಷಕ ನಟಿ

    ಸ್ಪರ್ಷ ರೇಖಾ (ಬಡವ ರಾಸ್ಕಲ್)

    1. ಅತ್ಯುತ್ತಮ ಬಾಲ ಕಲಾವಿದ

    ಮಾಸ್ಟರ್ ಮಿಥುನ್ (ಅಕ್ಷಿ)

    1. ಅತ್ಯುತ್ತಮ ಸಂಗೀತ ನಿರ್ದೇಶಕ

    ಅರ್ಜುನ್ ಜನ್ಯ (ರಾಬರ್ಟ್)

    1. ಅತ್ಯುತ್ತಮ ಹಿನ್ನೆಲೆ ಸಂಗೀತ

    ಚರಣ್ ರಾಜ್ (ಸಲಗ)

    1. ಅತ್ಯುತ್ತಮ ಗೀತ ಸಾಹಿತ್ಯ

    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) and ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)

    1. ಅತ್ಯುತ್ತಮ ಗಾಯಕ

    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಿದೆ, ಬಡವ ರಾಸ್ಕಲ್)

    1. ಅತ್ಯುತ್ತಮ ಗಾಯಕಿ

    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)

    1. ಅತ್ಯುತ್ತಮ ಛಾಯಾಗ್ರಹಣ

    ಸುಧಾಕರ್ ರಾಜ್ (ರಾಬರ್ಟ್)

    1. ಅತ್ಯುತ್ತಮ ಸಂಭಾಷಣೆ

    ಮಾಸ್ತಿ (ಸಲಗ)

    1. ಅತ್ಯುತ್ತಮ ಸಂಕಲನ

    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ಕಲಾ ನಿರ್ದೇಶನ

    ರವಿ ಸಂತೆಹೈಕ್ಳು (ಭಜರಂಗಿ 2)

    1. ಅತ್ಯುತ್ತಮ ನೃತ್ಯ ನಿರ್ದೇಶಕ

    ಭೂಷಣ್ (ರಾಬರ್ಟ್)

    1. ಅತ್ಯುತ್ತಮ ಸಾಹಸ ನಿರ್ದೇಶಕ

    ರವಿ ವರ್ಮಾ (ಭಜರಂಗಿ 2)

    1. ಅತ್ಯುತ್ತಮ ವಿಎಫ್ಎಕ್ಸ್

    ಶಿಬೀಶ್ and ಏಲಂಗೋ

    ಭಜರಂಗಿ 2

    1. ಅತ್ಯುತ್ತಮ ಚೊಚ್ಚಲ ಚಿತ್ರ

    ಪ್ರೇಮಮ್ ಪೂಜ್ಯಮ್

  • ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    – ರಘು ದೀಕ್ಷಿತ್, ವಾಸುಕಿ ವೈಭವ್ ಮತ್ತೆ ಮೋಡಿ

    ಟ ಸೂರಜ್ ಗೌಡ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ‘ನಿನ್ನ ಸನಿಹಕೆ’ ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ರಘು ದೀಕ್ಷಿತ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಬ್ಯೂಟಿಫುಲ್ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು ಸಿದ್ದಾರ್ಥ್ ಬೆಲ್ಮಣ್ಣು, ರಕ್ಷಿತಾ ಸುರೇಶ್ ಹಾಡಿಗೆ ಜೀವತುಂಬಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಮಳೆ ಮಳೆ ಲಿರಿಕಲ್ ವೀಡಿಯೋ ಸಾಂಗ್ ರಘು ದೀಕ್ಷಿತ್ ಕಂಠದಲ್ಲಿ ಮೋಡಿ ಮಾಡಿತ್ತು. ಇದೀಗ ಬಿಡುಗಡೆಯಾಗಿರುವ ‘ನೀ ಪರಿಚಯ’ ವೀಡಿಯೋ ಹಾಡು ಕೂಡ ಸೊಗಸಾಗಿ ಮೂಡಿ ಬಂದಿದ್ದು ಗಾನಪ್ರಿಯರು ಮತ್ತೆ ಮತ್ತೆ ಕೇಳುತ್ತಾ ತಲೆದೂಗುತ್ತಿದ್ದಾರೆ.

    ರಾಮ್ಕುಮಾರ್ ಪುತ್ರಿ ಧನ್ಯ ರಾಮ್ಕುಮಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಚೊಚ್ಚಲ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಒಂದು ಕಡೆ ರಾಜ್ ಕುಟುಂಬದ ಕುಡಿ ಮೊದಲ ಬಾರಿ ನಟಿಸಿರೋ ಚಿತ್ರ, ಇನ್ನೊಂದು ಕಡೆ ಮೊಟ್ಟ ಮೊದಲ ಬಾರಿಗೆ ಸೂರಜ್ ಗೌಡ ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶಕನಾಗಿಯೂ ಬಡ್ತಿ ಪಡೆದಿರೋದು ‘ನಿನ್ನ ಸನಿಹಕೆ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಚಂದನವನದಲ್ಲಿ ಹೆಚ್ಚು ಮಾಡಿದೆ.

    ಇದೊಂದು ರೊಮ್ಯಾಂಟಿಂಕ್ ಕಾಮಿಡಿ ಸಿನಿಮಾವಾಗಿದ್ದು ಸೂರಜ್ ಹಾಗೂ ಧನ್ಯಾ ರಾಮ್ ಕುಮಾರ್ ಜೋಡಿ ತುಂಬಾ ಮುದ್ದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಸೂರಜ್ ಗೌಡ ಆಕ್ಷನ್ ಹೀರೋ ಆಗಿಯೂ ತೆರೆ ಮೇಲೆ ಮಿಂಚಲಿದ್ದಾರೆ. ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರೀಕರಣ ಕಂಪ್ಲೀಟ್ ಮಾಡಿರೋ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕುಡ್ಲಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅಭಿಲಾಷ್ ಕಲತಿ ಛಾಯಾಗ್ರಹಣ ‘ನಿನ್ನ ಸನಿಹಕೆ’ ಚಿತ್ರಕ್ಕಿದೆ.

  • ವಾಸುಕಿ ಕೊರೊನಾ ಹಾಡಿಗೆ ಚಂದನವನದ ತಾರೆಯರ ಸಮಾಗಮ

    ವಾಸುಕಿ ಕೊರೊನಾ ಹಾಡಿಗೆ ಚಂದನವನದ ತಾರೆಯರ ಸಮಾಗಮ

    ಬೆಂಗಳೂರು: ಕೊರೊನಾ ಎಲ್ಲ ಕಡೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಕೊರೊನಾ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ಅವರು ಸುಂದರವಾದ ಹಾಡೊಂದನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಹಾಡಿದ್ದು, ಇದಕ್ಕೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಸಾಥ್ ನೀಡಿದ್ದಾರೆ.

    ಹೌದು. ಗಾಯಕ ವಾಸುಕಿ ವೈಭವ್ ಅವರು ಕೊರೊನಾ ಲಾಕ್‍ಡೌನ್ ನಡುವೆಯೂ ಕೂಡ ಕೊರೊನಾ ವಿರುದ್ಧ ನಗುತಲಿರು ಎಂಬ ಹೊಸ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಕನ್ನಡದ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ಸೇರಿದಂತೆ ಎಲ್ಲ ದಿಗ್ಗಜ ನಟ-ನಟಿಯರು ದನಿಯಾಗಿದ್ದಾರೆ. ಈ ಮೂಲಕ ಮನೆಯಲ್ಲೇ ನಗುತಲಿರೋಣ ಎಂಬ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ.

    https://www.instagram.com/p/B_FRUg1JYRV/

    ಕೊರೊನಾ ದೇಶದ ತುಂಬಾ ತಂಡವಾಡುತ್ತಿರುವ ಹೊತ್ತಿನಲ್ಲಿ ನಟ-ನಟಿಯರು ಸೇರಿ ಲಾಕ್‍ಡೌನ್‍ನಲ್ಲಿ ಬಂಧಿಯಾಗಿರುವ ಜನರ ಆತಂಕವನ್ನು ದೂರ ಮಾಡಿ ಹಾಡಿನ ಮೂಲಕ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ಚಿಂತೆ ದೂರ ಮಾಡಿ, ಭರವಸೆ ಮೂಡಿಸುವ ಈ ಹಾಡನ್ನು ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ರಮೇಶ್ ಅರವಿಂದ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಸಾಥ್ ಕೊಟ್ಟಿದ್ದಾರೆ.

    ದೇಶದಾದ್ಯಂತ ಎಲ್ಲೆಡೆ ಆತಂಕ ಸೃಷ್ಟಿಸಿರುವ ಕಿಲ್ಲರ್ ಕೊರೊನಾ ಭಯವನ್ನು ದೂರ ಮಾಡಲು ಹಾಡಿನ ಮೂಲಕ ಸ್ಟಾರ್ಸ್ ಒಂದಾಗಿದ್ದಾರೆ. ಪುನಿತ್ ರಾಜ್‍ಕುಮಾರ್ ನೀನೆ ತಾಯಿ ನೀನೇ ತಂದೇ ಭೂಮಿ-ತಾಯಿ ಎಲ್ಲಾ ನಿಂದೆ ಎಂದು ಡಾ.ರಾಜ್ ಹಾಗೂ ಪಾರ್ವತಮ್ಮ ಅವರ ಫೋಟೋ ಮುಂದೆ ನಿಂತು ಹಾಡಿನ ಆರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಪನ್ನಗಾಭರಣ ನಿರ್ದೇಶನ, ರಾಮರಾಮರೇ ಖ್ಯಾತಿಯ ಸತ್ಯ ಪ್ರಕಾಶ್ ಸಾಹಿತ್ಯ, ನಾಬಿನ್ ಪೌಲ್ ಸಂಗೀತ ಸಂಯೋಜನೆ, ರವಿ ಆರಾಧ್ಯ ಸಂಕಲನದ ಈ ಹಾಡಿನ ಸಾಲು ಮನಮುಟ್ಟುತ್ತಿದೆ.

    ಇದರಲ್ಲಿ ನಟಿ ರಕ್ಷಿತಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಡಾಲಿ ಧನಂಜಯ್, ಶ್ರದ್ಧಾ, ಪ್ರಣೀತಾ, ಐಂದ್ರಿತಾ, ದಿಗಂತ್, ಪ್ರಜ್ವಲ್, ಚಿರಂಜೀವಿ ಸರ್ಜಾ, ಮೇಘನಾ, ಅನುಪಮಾ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಅನೇಕರು ಈ ಹಾಡಿಗೆ ಜೀವ ತುಂಬಿದ್ದಾರೆ. ಲಾಕ್‍ಡೌನ್‍ನಲ್ಲಿದ್ದರೂ ನಾವೆಲ್ಲರೂ ಎಂದೆಂದಿಗೂ ಒಂದೇ ಎನ್ನುತ್ತಾ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ಹಾಗೂ ಸೈನಿಕರಿಗೆ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ನಗುತಾ ಮನೆಯಲ್ಲೇ ಸುರಕ್ಷಿತರಾಗೋಣ ಎಂಬ ಸಂದೇಶ ಸಾರಿದ್ದಾರೆ.

  • ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಕೊನೆಯ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ. ಕಿಚ್ಚನ ಚಪ್ಪಾಳೆ ಜೊತೆಗೆ ವಾಸುಕಿಗೆ ಸುದೀಪ್ ಅವರು ಉಡುಗೊರೆಯನ್ನು ನೀಡಿದ್ದಾರೆ.

    ‘ಬಿಗ್‍ಬಾಸ್ ಸೀಸನ್ 7’ ಶುರುವಾದಗಿನಿಂದ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ವಾರ ಪೂರ್ತಿ ಉತ್ತಮವಾಗಿ ಆಟವಾಡಿದ್ದ ಒಬ್ಬ ಸ್ಪರ್ಧಿಗೆ ಕಿಚ್ಚ ತಮ್ಮ ಚಪ್ಪಾಳೆಯನ್ನು ಕೊಡುತ್ತಾರೆ. ಅದೇ ರೀತಿ ಈ ವಾರ ಕೊನೆಯ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ.

    ಈ ವಾರ ಬಿಗ್‍ಬಾಸ್ ಟಾಸ್ಕ್ ಗಳು ತುಂಬಾ ಕಷ್ಟವಾಗಿತ್ತು. ಆದರೆ ನೀವು ತುಂಬಾ ಚೆನ್ನಾಗಿ ಆಟವಾಡಿದ್ದೀರಿ. ಅಲ್ಲದೇ ನಾಲ್ಕು ಪದಕಗಳನ್ನು ಗೆದ್ದು ಫಿನಾಲೆ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಇದು ಈ ಸೀಸನ್‍ನ ಕೊನೆಯ ಚಪ್ಪಾಳೆ ಎಂದು ವಾಸುಕಿಗೆ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

    ಕಳೆದ ಬಾರಿ ಚಪ್ಪಾಳೆ ಜೊತೆಗೆ ಸುದೀಪ್ ತಮ್ಮ ಜಾಕೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಂದೇ ಮುಂದಿನ ವಾರ ಇನ್ನೊಂದು ಉಡುಗೊರೆ ಇರುತ್ತದೆ ಎಂದು ಮನೆ ಮಂದಿಗೆ ಹೇಳಿದ್ದರು. ಅದರಂತೆ ವಾಸುಕಿ ವೈಭವ್‍ಗೆ ಸುದೀಪ್ ಆಕರ್ಷಕವಾದ ಬೆಲ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮನೆಯ ಸದಸ್ಯರು ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದರು. ಕಿಚ್ಚನ ಚಪ್ಪಾಳೆ ಸಿಕ್ಕಿದರೆ ಸಾಕು ನಾವು ಬಿಗ್‍ಬಾಸ್ ಗೆದ್ದಂತೆ. ಕಿಚ್ಚನ ಚಪ್ಪಾಳೆ ಸಿಕ್ಕ ಮರುದಿನವೇ ನಾವು ಮನೆಯಿಂದ ಹೊರಹೋದರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕುರಿ ಪ್ರತಾಪ್ ಹೇಳಿದರು. ಅದೇ ರೀತಿ ಮನೆಯ ಇತರ ಸದಸ್ಯರು ಕೂಡ, ನಿಮ್ಮ ಚಪ್ಪಾಳೆ ನಮ್ಮ ಪಾಲಿಗೆ ಅತ್ಯಮೂಲ್ಯ ಎಂದು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಇದಕ್ಕೆ ಸುದೀಪ್ ಸಹ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

  • ಟಿಕೆಟ್ ಟು ಫಿನಾಲೆ ಗೆದ್ದ ವಾಸುಕಿ

    ಟಿಕೆಟ್ ಟು ಫಿನಾಲೆ ಗೆದ್ದ ವಾಸುಕಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

    ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದರು. ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ಇದೀಗ ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿ ವಾಸುಕಿ ಆಯ್ಕೆಯಾಗಿದ್ದಾರೆ.

    ಈ ವಾರ ಟಿಕೆಟ್ ಟು ಫಿನಾಲೆ ಸ್ಪರ್ಧೆ ನಡೆದಿತ್ತು. ಅಂದರೆ ಬಿಗ್‍ಬಾಸ್ ಕಾಲಕಾಲಕ್ಕೆ ಟಾಸ್ಕ್ ಕೊಡುತ್ತಿದ್ದರು. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಿದ್ದರು. ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ವಾರ ಪೂರ್ತಿ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಗೆಲುತ್ತಾ ವಾಸುಕಿ ವೈಭವ್ ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಸುಕಿ ಮೊದಲ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ಟಾಸ್ಕ್ ಗಳಲ್ಲಿ ವಾಸುಕಿ ವೈಭವ್ ಗೆದ್ದು ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದರು. ಶೈನ್ ಎರಡು ಪದಕ ಗೆದ್ದಿದ್ದರು. ಅದೇ ರೀತಿ ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಮತ್ತು ಹರೀಶ್ ರಾಜ್ ನಾಲ್ವರು ಒಂದೊಂದು ಪದಕವನ್ನು ಗೆದ್ದಿದ್ದರು. ಆದರೆ ವಾಸುಕಿ ಉತ್ತಮವಾಗಿ ಆಟವಾಡಿ ನಾಲ್ಕು ಪದಕವನ್ನು ಗೆದ್ದುಕೊಂಡಿದ್ದಾರೆ.

    ಹೀಗಾಗಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಟಿಕೆಟ್ ಅನ್ನು ವಾಸುಕಿ ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.