Tag: Vasudava Maiya

  • ರಾಘವೇಂದ್ರ ಕೋ -ಆಪರೇಟಿವ್‌ ಬ್ಯಾಂಕ್‌ ಮಾಜಿ ಸಿಇಓ ಆತ್ಮಹತ್ಯೆ

    ರಾಘವೇಂದ್ರ ಕೋ -ಆಪರೇಟಿವ್‌ ಬ್ಯಾಂಕ್‌ ಮಾಜಿ ಸಿಇಓ ಆತ್ಮಹತ್ಯೆ

    ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ನಿವಾಸದಲ್ಲಿ  ವಾಸುದೇವ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆ ಮುಂದೆ ಕಾರಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಕಾರಿನಲ್ಲಿ ಮದ್ಯ ಸೇವಿಸಿದ್ದಾರೆ. ಮದ್ಯದಲ್ಲಿ ವಿಷವನ್ನು ಮಿಶ್ರಣ ಮಾಡಿರುವ ವಿಚಾರ ಈಗ ತಿಳಿದುಬಂದಿದೆ.

    ಬ್ಯಾಂಕ್ ವಿರುದ್ದ 1,400 ಕೋಟಿ ರೂ. ಅವ್ಯವಹಾರ ಕೇಳಿ ಬಂದಿತ್ತು. ಹಗರಣದಲ್ಲಿ ವಸುದೇವ ಮಯ್ಯ ಪ್ರಮುಖ ಆರೋಪಿಯಾಗಿದ್ದರು. ಜೂನ್ 18 ರಂದು ಎಸಿಬಿ ದಾಳಿ ಮಾಡಿತ್ತು. ದಾಳಿಯ ಬಳಿಕ ವಾಸುದೇವ ಮಯ್ಯ ಮನನೊಂದಿದ್ದರು.

    ವಾಸುದೇವ ಮಯ್ಯ 2012ರಿಂದ 2018ರವರೆಗಿನ ಬ್ಯಾಂಕು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ಕೋಟ್ಯಂತರ ರೂ. ಅವ್ಯವಹಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿತ್ತು. ರಾಘವೇಂದ್ರ ಬ್ಯಾಂಕಿನ ಸಿಇಒ ಆಗಿರುವ ಸಂತೋಷ ಅವರು ರಾಘವೇಂದ್ರ ಮಯ್ಯ ವಿರುದ್ಧ ದೂರು ನೀಡಿದ್ದರು.