Tag: Vasu Nan Pakka Commercial

  • ಹಳ್ಳಿಯತ್ತ ಹೊರಟ ಕಮರ್ಷಿಯಲ್ ವಾಸು!

    ಹಳ್ಳಿಯತ್ತ ಹೊರಟ ಕಮರ್ಷಿಯಲ್ ವಾಸು!

    ಬೆಂಗಳೂರು: ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಗೆಲುವೊಂದನ್ನು ತಮ್ಮದಾಗಿಸಿಕೊಂಡ ಅನೀಶ್ ತೇಜೇಶ್ವರ್ ಪಕ್ಕಾ ಹಳ್ಳಿ ಲುಕ್ಕಿನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನಷ್ಟೇ ಟೈಟಲ್ ಪಕ್ಕಾ ಆಗಬೇಕಿರೋ ಈ ಚಿತ್ರವನ್ನು ಯಶಸ್ವಿ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ನಿರ್ದೇಶನ ಮಾಡಲಿದ್ದಾರೆ.

    ಇದುವರೆಗಿನ ಚಿತ್ರಗಳಲ್ಲಿ ಸ್ಟೈಲಿಶ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ಅನೀಶ್ ಈ ಚಿತ್ರದಲ್ಲಿ ಸಂಪೂರ್ಣವಾಗಿ ಹಳ್ಳಿ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿರೋ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಪ್ರಶಾಂತ್ ರಾಜಪ್ಪ ಸಂಭಾಷಣೆಕಾರರಾಗಿ ಗೆದ್ದಿದ್ದಾರೆ. ಅವರ ಕಾಮಿಡಿ ಕಿಕ್ಕಿಗೆ ಪ್ರೇಕ್ಷಕರೂ ಫಿದಾ ಆಗಿದ್ದಾರೆ. ಅಷ್ಟಕ್ಕೂ ಇದೀಗ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಅವರ ಪ್ರಧಾನ ಉದ್ದೇಶವಾಗಿದ್ದದ್ದು ನಿರ್ದೇಶನ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

    ಸಂಪೂರ್ಣವಾಗಿ ಹಳ್ಳಿಯಲ್ಲೇ ನಡೆಯುವ ಮಜವಾದ ಕಥೆಯೊಂದನ್ನು ಪ್ರಶಾಂತ್ ರಾಜಪ್ಪ ರೆಡಿ ಮಾಡಿಕೊಂಡಿದ್ದಾರೆ. ಈ ಕಥೆ ಹಳ್ಳಿಯ ಆಸುಪಾಸಿನ ಸಣ್ಣ ಪುಟ್ಟ ಪೇಟೆ ಬಿಟ್ರೆ ನಗರದ ಛಾಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಲಿದೆಯಂತೆ. ಈಗಾಗಲೇ ತಾಂತ್ರಿಕ ವರ್ಗದವರ ಆಯ್ಕೆ ಕಾರ್ಯ ಮುಗಿದಿದೆ. ಗಣೇಶನ ಹಬ್ಬದಂದು ಟೈಟಲ್ ಲಾಂಚ್ ಆಗಲಿದೆ. ಬೆಂಗಳೂರು ಸುತ್ತ ಮುತ್ತಲ ಹಳ್ಳಿಗಳಲ್ಲಿಯೇ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂದಿನ ತಿಂಗಳು ಬರುತ್ತೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’

    ಮುಂದಿನ ತಿಂಗಳು ಬರುತ್ತೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’

    ಬೆಂಗಳೂರು: ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಅಜಿತ್ ವಾಸನ್ ಉಗ್ಗಿನ – ನಿರ್ದೇಶನ, ಛಾಯಾಗ್ರಹಣ-ದಿಲೀಪ್ ಚಕ್ರವರ್ತಿ, ಸಂಗೀತ- ಅನೀಷ್ ಲೋಕನಾಥ, ಸಂಕಲನ – ಶ್ರೀಕಾಂತ್, ಸಾಹಸ- ವಿಕ್ರಂ ಮೋರ್, ನೃತ್ಯ – ಬಾಬಾ ಭಾಸ್ಕರ್, ಶೇಖರ್, ಶರತ್‍ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರಿದ್ದರೆ. ವಿಂಕ್ ವಿಷಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.

     

    ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ.