Tag: Vasishtha simha

  • ಭಾವಿಪತಿಯ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ಹರಿಪ್ರಿಯಾ

    ಭಾವಿಪತಿಯ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ಹರಿಪ್ರಿಯಾ

    ವಾರದ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೀಗ ಟೆಂಪಲ್ ರನ್ ಮಾಡುತ್ತಿದ್ದರು. ಈ ನಡುವೆ ಕೊಂಚ ಬಿಡುವು ಮಾಡಿಕೊಂಡು ವಸಿಷ್ಠ ಸಿಂಹ ನಟಿಸುತ್ತಿರುವ ಲವ್ ಲಿ ಸಿನಿಮಾದ ಶೂಟಿಂಗ್ ಸೆಟ್‍ ಗೆ ಭೇಟಿ ನೀಡಿದ್ದಾರೆ. ಕೆಲ ಹೊತ್ತು ಚಿತ್ರೀಕರಣದ ಸ್ಥಳದಲ್ಲಿದ್ದು, ಸಮಯ ಕಳೆದಿದ್ದಾರೆ.

    ವಸಿಷ್ಠ ಸಿಂಹ ಅಭಿನಯದ love ಲಿ ಸಿನೆಮಾ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದೆ. ಅಲ್ಲದೇ, ಕೆಲ ದಿನಗಳಿಂದ ವಸಿಷ್ಠ ಕೂಡ ಉಡುಪಿಯಲ್ಲೇ ಬೀಡು ಬಿಟ್ಟಿದ್ದಾರೆ. ನಿಶ್ಚಿತಾರ್ಥ ಮುಗಿಸಿಕೊಂಡು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಭಾವಿ ಪತ್ನಿಯೊಂದಿಗೆ ದೇವಸ್ಥಾನಕ್ಕೂ ತೆರಳಿ ಆನಂತರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚೇತನ್ ಕೇಶವ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ವಸಿಷ್ಠ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

    ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮುನ್ನ ವಸಿಷ್ಠ ಮತ್ತು ಹರಿಪ್ರಿಯಾ ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ನಿಶ್ಚಿತಾರ್ಥ ನಂತರ ಕೆಲ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಿಂಹಪ್ರೀಯ ಸುತ್ತಾಡುತ್ತಿದ್ದಾರೆ. ಶೀಘ್ರ ಹಸೆಮಣೆ ಏರುವ ಬಗ್ಗೆ, ಮುಂದಿನ ಚಿತ್ರಗಳ ಬಗ್ಗೆ ಸ್ವಾಮೀಜಿ ಗೆ ವಶಿಷ್ಠಸಿಂಹ ಮಾಹಿತಿ ನೀಡಿದರು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವಿಸಿದರು.

    Live Tv
    [brid partner=56869869 player=32851 video=960834 autoplay=true]

  • ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ವಾರದ ಹಿಂದೆ ಎಂಗೇಜ್ ಆದ ಸ್ಯಾಂಡ್ ವುಡ್ ನ ಜೋಡಿ ಧಾರ್ಮಿಕ ಪ್ರವಾಸ ಮಾಡುತ್ತಿದೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ವಶಿಷ್ಠ ಸಿಂಹ ಮತ್ತು ಹರಿಪ್ರಿಯ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

    ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಸ್ಯಾಂಡಲ್‌ವುಡ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ನಿಶ್ಚಿತಾರ್ಥ ನಂತರ ಕೆಲ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಿಂಹಪ್ರಿಯ ಸುತ್ತಾಡುತ್ತಿದ್ದಾರೆ. ಶೀಘ್ರ ಹಸೆಮಣೆ ಏರುವ ಬಗ್ಗೆ, ಮುಂದಿನ ಚಿತ್ರಗಳ ಬಗ್ಗೆ ಸ್ವಾಮೀಜಿ ಗೆ ವಶಿಷ್ಠಸಿಂಹ ಮಾಹಿತಿ ನೀಡಿದರು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವಿಸಿದರು.

    Live Tv
    [brid partner=56869869 player=32851 video=960834 autoplay=true]

  • ‘ನಾಯಿಮರಿ’ಗಾಗಿ ಹುಟ್ಟಿತು ವಸಿಷ್ಠ-ಹರಿಪ್ರಿಯ ನಡುವಿನ ಪ್ರೇಮ

    ‘ನಾಯಿಮರಿ’ಗಾಗಿ ಹುಟ್ಟಿತು ವಸಿಷ್ಠ-ಹರಿಪ್ರಿಯ ನಡುವಿನ ಪ್ರೇಮ

    ಮೊನ್ನೆಯಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ವತಃ ವಸಿಷ್ಠ ಸಿಂಹ ಅವರೇ ಉಪಸ್ಥಿತರಿದ್ದು, ಮೂಗು ಚುಚ್ಚಿಸಿದ್ದರು. ಆನಂತರ ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ‘ಪಾರ್ಟನರ್’ ಎಂದೆಲ್ಲ ಬರೆದುಕೊಂಡಿದ್ದರು. ಇತ್ತೀಚೆಗೆ ಮತ್ತೊಂದು ಸುದ್ದಿ ಕೂಡ ಹೊರ ಬಂದಿತ್ತು. ಇಬ್ಬರೂ ಈಗಾಗಲೇ ದುಬೈ ಪ್ರವಾಸ ಮಾಡಿ ಶಾಪಿಂಗ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಫೋಟೋ ಕೂಡ ಹೊರ ಬಂದಿದೆ. ನಂತರ ಅಚ್ಚರಿ ಎನ್ನುವಂತೆ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು.

    ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗಿತ್ತು. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ  ಅರ್ಥ ಮಾಡಿಕೊಂಡರು ಎಂದು ಹೇಳಲಾಗಿತ್ತು. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಆದರೆ, ಇದೀಗ ಹರಿಪ್ರಿಯಾ ತಮ್ಮ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ತಮ್ಮ ಮತ್ತು ವಸಿಷ್ಠಿ ನಡುವೆ ಪ್ರೇಮ ಅಂಕುರವಾಗಲು ಕಾರಣ ನಾಯಿ ಮರಿ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹರಿಪ್ರಿಯಾ ಮನೆಯಲ್ಲಿ ಈಗಾಗಲೇ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಲಕ್ಕಿ ಸತ್ತ ನಂತರ ಹ್ಯಾಪಿಗಾಗಿ ಮತ್ತೊಂದು ನಾಯಿಯನ್ನು ತಂದುಕೊಟ್ಟಿದ್ದರಂತೆ ವಸಿಷ್ಠ. ಅದರ ಹೆಸರು ಕ್ರಿಸ್ಟಲ್. ಈ ಕಿಸ್ಟಲ್‍ ಕಾರಣಕ್ಕಾಗಿಯೇ ಹರಿಪ್ರಿಯಾ ಪ್ರೇಮಿಸೋಕೆ ಶುರು ಮಾಡಿದರಂತೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆ: ದುಬೈನಲ್ಲಿ ಕಾಣಿಸಿಕೊಂಡ ಜೋಡಿ

    ನಟಿ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆ: ದುಬೈನಲ್ಲಿ ಕಾಣಿಸಿಕೊಂಡ ಜೋಡಿ

    ಸ್ಯಾಂಡಲ್ ವುಡ್ ನ ಮತ್ತೊಂದು ಸ್ಟಾರ್ ಜೋಡಿಯು ಹೊಸ ಜೀವನಕ್ಕೆ ಅಡಿಯಿಡಲು ಮುಂದಾಗಿರುವ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ. ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೂ ಹರಿಪ್ರಿಯಾ ಆಗಲಿ ಅಥವಾ ವಸಿಷ್ಠ ಸಿಂಹ ಆಗಲಿ ಮದುವೆಯ ಬಗ್ಗೆ ಯಾವುದೇ ಖಚಿತತೆ ತಿಳಿಸಿಲ್ಲ. ಆದರೆ, ಈ ಸುದ್ದಿಗೆ ಪುಷ್ಠಿ ನೀಡುವಂತೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ.

    ಮೊನ್ನೆಯಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ವತಃ ವಸಿಷ್ಠ ಸಿಂಹ ಅವರೇ ಉಪಸ್ಥಿತರಿದ್ದು, ಮೂಗು ಚುಚ್ಚಿಸಿದ್ದರು. ಆನಂತರ ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ‘ಪಾರ್ಟನರ್’ ಎಂದೆಲ್ಲ ಬರೆದುಕೊಂಡಿದ್ದರು. ಇತ್ತೀಚೆಗೆ ಮತ್ತೊಂದು ಸುದ್ದಿ ಕೂಡ ಹೊರ ಬಂದಿತ್ತು. ಇಬ್ಬರೂ ಈಗಾಗಲೇ ದುಬೈ ಪ್ರವಾಸ ಮಾಡಿ ಶಾಪಿಂಗ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಫೋಟೋ ಕೂಡ ಹೊರ ಬಂದಿದೆ.

    ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗುತ್ತಿದೆ.

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ  ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಹರಿಪ್ರಿಯಾ-ವಸಿಷ್ಠ ಸಿಂಹ ಪ್ರೇಮ್ ಕಹಾನಿಗೆ ಈ ತೆಲುಗು ಸಿನಿಮಾ ಕಾರಣ

    ಹರಿಪ್ರಿಯಾ-ವಸಿಷ್ಠ ಸಿಂಹ ಪ್ರೇಮ್ ಕಹಾನಿಗೆ ಈ ತೆಲುಗು ಸಿನಿಮಾ ಕಾರಣ

    ಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆ ಆಗುತ್ತಿರುವ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗುತ್ತಿದೆ.

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ  ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

    ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.

    ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.

    ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಟ್ರೇಲರ್ ರಿಲೀಸ್

    ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಟ್ರೇಲರ್ ರಿಲೀಸ್

    ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಭರವಸೆಯ ಮುದ್ರೆ ಒತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ರನ್ನು ಡಿಜಿಟಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವೇದಿಕೆಯಲ್ಲಿ ನಾಯಕ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಡಿಸೆಂಬರ್ 2ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಟ್ರೇಲರ್ ಹೊತ್ತು ಬಂದ ಸಿನಿಮಾ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಿನಿಮಾದ ಕ್ಯೂರಿಯಾಸಿಟಿ ಹೊತ್ತ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು ಭರವಸೆ ಮೂಡಿಸಿದೆ. ಗುಲ್ಟು ಖ್ಯಾತಿಯ ನಟ ನವೀನ್ ಶಂಕರ್, ಐಶಾನಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ.

    ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟ ವಸಿಷ್ಠ ಸಿಂಹ ಚಿತ್ರದಲ್ಲಿ ಪ್ರತಿಯೊಂದು ಅಂಶಗಳು ಕೂಡ ಗಮನ ಸೆಳೆಯುತ್ತಿದೆ. ಯಂಗ್ ಟೀಂ ಸೇರಿಕೊಂಡು ಇಷ್ಟು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಟ್ಟಿದೆ ಅಂದ್ರೆ ತುಂಬಾ ಖುಷಿಯ ವಿಚಾರ. ಟ್ರೇಲರ್ ಬಹಳಾನೇ ಖುಷಿ ಕೊಡ್ತು. ಮ್ಯೂಸಿಕ್, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಚಿತ್ರದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ನಮ್ಮ ಸುತ್ತಮುತ್ತ ಇರುವವರ ಕಥೆಯೇ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾವಿದು. ಬಾಕ್ಸಿಂಗ್ ನಲ್ಲಿ ಅಪಾರ ಆಸಕ್ತಿ ಇರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಪ್ರೀತಿ, ಸೆಂಟಿಮೆಂಟ್ ಎಳೆಯನ್ನೂ ಹೊತ್ತ ಈ ಚಿತ್ರ ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ತಿಳಿಸಿದ್ರು.

    ಗುಳ್ಟು ನಂತರ ಕೇಳಿದ ಇಂಟ್ರಸ್ಟಿಂಗ್ ಸಬ್ಜೆಕ್ಟ್ ಇರುವ ಕಥೆ ಇದಾಗಿದೆ. ಚಿತ್ರದಲ್ಲಿ ಆದಿ ಪಾತ್ರವನ್ನು ನಿರ್ವಹಿಸಿದ್ದೇನೆ. ಬಾಕ್ಸಿಂಗ್ ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಹುಡುಗನ ಪಾತ್ರ. ಗುಳ್ಟು ಸಿನಿಮಾಗಿಂತ ಡಿಫ್ರೆಂಟ್ ಆದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ನಾಯಕ ನಟ ನವೀನ್ ಶಂಕರ್ ತಿಳಿಸಿದ್ರು. ನಿರ್ದೇಶಕರು ಕ್ರೈಂ ಡ್ರಾಮಾ ಸಿನಿಮಾ ಎಂದಾಗ ನಾನು ಸ್ವಲ್ಪ ಯೋಚನೆ ಮಾಡ್ದೆ, ಆದ್ರೆ ಕಥೆ ಕೇಳಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೂ ನಾನು ಮಾಡಿರುವ ಪಾತ್ರಕ್ಕಿಂತ ಕಂಪ್ಲೀಟ್ ಡಿಫ್ರೆಂಟ್ ಆಗಿರುವ ಪಾತ್ರ ನಿರ್ವಹಿಸಿದ್ದೇನೆ. ಶ್ರೇಯ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಡೋಂಟ್ ಕೇರ್ ಆಟಿಟ್ಯೂಡ್ ಇರುವ ಬೋಲ್ಡ್ ಹುಡುಗಿ ಪಾತ್ರ. ಈ ಚಿತ್ರದ ಭಾಗವಾಗಿರೋದಕ್ಕೆ ತುಂಬಾ ಖುಷಿ ಇದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಈ ಚಿತ್ರಕ್ಕೆ ಸಪೋರ್ಟ್ ಮಾಡಿ ಎಂದು ನಾಯಕ ನಟಿ ಐಶಾನಿ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಿರ್ಮಾಪಕ ಓಂಕಾರ್ ಮಾತನಾಡಿ ಸಿನಿಮಾ ನಿರ್ಮಾಣದ ಜೊತೆಗೆ ಡಿಸ್ಕೊ ಎಂಬ ನಟೋರಿಯಸ್ ಗ್ಯಾಂಗ್ ಸ್ಟಾರ್ ಪಾತ್ರ ಮಾಡಿದ್ದೇನೆ. ಸಿನಿಮಾದ ಸ್ಕ್ರೀನ್ ಪ್ಲೇ ತುಂಬಾ ಡಿಫ್ರೆಂಟ್ ಆಗಿದೆ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ ಆದ್ರಿಂದ ಸಿನಿಮಾ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಚಿತ್ರದ ಪ್ರತಿ ವಿಭಾಗದಲ್ಲೂ ಎಲ್ಲರೂ ಪರಿಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡ್ರು. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್ 2ರಂದು ಪ್ರೇಕ್ಷಕರ ಮನಗೆಲ್ಲಲು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಲವ್ ಲಿ’ ಸಿನಿಮಾದ ಶೂಟಿಂಗ್ ನಲ್ಲಿ ಮತ್ತೆ ಬ್ಯುಸಿಯಾದ ವಸಿಷ್ಠ ಸಿಂಹ

    ‘ಲವ್ ಲಿ’ ಸಿನಿಮಾದ ಶೂಟಿಂಗ್ ನಲ್ಲಿ ಮತ್ತೆ ಬ್ಯುಸಿಯಾದ ವಸಿಷ್ಠ ಸಿಂಹ

    ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ (Vasishtha Simha) ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ‘ಲವ್ ಲಿ’ (Love Li). ವಸಿಷ್ಠ  ಸಿಂಹ ಅಭಿಮಾನಿ ಬಳಗ ಕೂಡ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಪೋಸ್ಟರ್ ಗಳಲ್ಲಿ ವಸಿಷ್ಠ ಲುಕ್ ಸಖತ್ ಇಂಪ್ರೆಸ್ ಮಾಡಿದ್ದು ‘ಲವ್ ಲಿ’ ಸಿನಿಮಾ ಅಪ್ಡೇಟ್ ಗಳೂ ನಿರೀಕ್ಷೆ ಹೆಚ್ಚಿಸಿವೆ.  ಲವ್ ಲಿ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

    ನಾಗರಭಾವಿಯ ಕಿಂಗ್ಸ್ ಕ್ಲಬ್ ನಲ್ಲಿ ‘ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಕಿಂಗ್ಸ್ ಕ್ಲಬ್ ನಲ್ಲಿ ಆಫೀಸ್ ಸೆಟ್ ನಿರ್ಮಾಣ ಮಾಡಲಾಗಿದ್ದು ವಸಿಷ್ಠ ಸಿಂಹ, ಸಾಧುಕೋಕಿಲ (Sadhu Kokila), ನಟಿ ಸಮೀಕ್ಷಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.  ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ‘ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ (Chetan Keshav) ನಿರ್ದೇಶನವಿದೆ. ಇದೊಂದು ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ (Steffy Patel) ನಟಿಸುತ್ತಿದ್ದು, ಕೊರಿಯನ್ ವೆಬ್ ಸೀರೀಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೂಡ ಲವ್ ಲಿ ಚಿತ್ರತಂಡ ಸೇರಿಕೊಂಡಿದ್ದು, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಲವ್ ಲಿ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ನಟನೆಯ ‘ಓದೆಲಾ ರೇಲ್ವೇ ಸ್ಟೇಷನ್’ ತೆಲುಗು ಸಿನಿಮಾಗೆ ಪ್ರೇಕ್ಷಕ ಫಿದಾ

    ಕನ್ನಡದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ನಟನೆಯ ‘ಓದೆಲಾ ರೇಲ್ವೇ ಸ್ಟೇಷನ್’ ತೆಲುಗು ಸಿನಿಮಾಗೆ ಪ್ರೇಕ್ಷಕ ಫಿದಾ

    ತೀಕ್ಷ್ಣ ನೋಟ, ಗಮನ ಸೆಳೆಯುವ ಅಭಿನಯ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ಕಂಚಿನ ಕಂಠದ ಗಾಯಕ ಕಂ ನಾಯಕ ವಸಿಷ್ಠ ಸಿಂಹ ‘ಓದೆಲಾ ರೇಲ್ವೇ ಸ್ಟೇಷನ್’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಗೊತ್ತೇ ಇದೆ. ಈ ಚಿತ್ರ ಈಗ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಚಿಟ್ಟೆ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.

    ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಅಮೋಘವಾಗಿ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಸಿಂಹ ಗೆದ್ದಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ನಾಯಕನಾಗಿಯೂ ಹಾಗೂ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಅಂದಹಾಗೇ ‘ಓದೆಲಾ ರೇಲ್ವೇ ಸ್ಟೇಷನ್’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ. ಸದ್ಯ ವಸಿಷ್ಠ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೇವಿಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಾಲಿ ಧನಂಜಯ್ ತುಳಿಯಲು ಸಜ್ಜಾಗಿವೆಯಾ ಕಾಣದ ಕೈಗಳು?

    ಡಾಲಿ ಧನಂಜಯ್ ತುಳಿಯಲು ಸಜ್ಜಾಗಿವೆಯಾ ಕಾಣದ ಕೈಗಳು?

    ಡವ ರಾಸ್ಕಲ್ ಯಶಸ್ವಿ ಅಲೆಯಲ್ಲಿ ತೇಲುತ್ತಿರುವ ಡಾಲಿ ಧನಂಜಯ್ ಅವರನ್ನು ತುಳಿಯಲು ಸ್ಯಾಂಡಲ್ ವುಡ್ ನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಂತ ಸ್ವತಃ ಧನಂಜಯ್ ಅವರೇ ಮಾಧ್ಯಮವೊಂದಕ್ಕೆ ನೀಡಿದ ಆಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಡ್ ಬುಷ್’ ಸಿನಿಮಾಗೆ ಸಂಬಂಧಿಸಿದ ವಿವಾದವೊಂದರ ಕುರಿತು ಮಾತನಾಡಿರುವ ಅವರು ಕಾಣದ ಕೈಗಳು ಯಾಕೆ ಈ ರೀತಿ ಕೆಲಸ ಮಾಡುತ್ತಿವೆ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಡಾಲಿ ಧನಂಜಯ್ ‘ಹೆಡ್ ಬುಷ್’ ಚಿತ್ರಕ್ಕಾಗಿ ಹಣ ಮತ್ತು ಶ್ರಮ ಎರಡನ್ನೂ ಹೂಡಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಅಗ್ನಿ ಶ್ರೀಧರ್ ಅವರ ಪುಸ್ತಕವೊಂದನ್ನು ಆಧರಿಸಿ ಈ ಸಿನಿಮಾ ಬರುತ್ತಿದ್ದು, ಅದರಲ್ಲಿ ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಅವರ ಪಾತ್ರವೂ ಇದೆ. ಈ ಪಾತ್ರದ ಕುರಿತಾಗಿ ಜಯರಾಜ್ ಪುತ್ರ ಅಜಿತ್ ಆಕ್ಷೇಪವನ್ನು ವ್ಯಕ್ಯ ಪಡಿಸಿದ್ದಾರೆ. ತಮ್ಮ ಅನುಮತಿ ಇಲ್ಲದೇ ತಮ್ಮ ತಂದೆಯ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಗೂ ಹೋಗುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ನನಗೂ ಫಿಲ್ಮ್ ಚೇಂಬರ್ ನಿಂದ ಕರೆ ಬಂದಿತ್ತು. ನಾನು ಆಸ್ಪತ್ರೆಯಲ್ಲಿ ಇರುವ ಕಾರಣಕ್ಕಾಗಿ ಮೇ.13ರ ನಂತರ ಚೇಂಬರ್ ಗೆ ಬರುವುದಾಗಿ ತಿಳಿಸಿದ್ದೇನೆ. ಅಷ್ಟಕ್ಕೂ ನಾವು ಸಿನಿಮಾ ಮಾಡುವ ವಿಚಾರ ಅಜಿತ್ ಅವರಿಗೆ ಗೊತ್ತಿದೆ. ಅವರು ನನ್ನ ಒಳ್ಳೆಯ ಫ್ರೆಂಡ್. ಈ ಸಿನಿಮಾ ಮಾಡುವಾಗ ವಿಶ್ ಮಾಡಿದ್ದರು. ತಮ್ಮ ತಂದೆಯ ಪಾತ್ರವು ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದರು. ಆದರೆ, ದಿಢೀರ್ ಅಂತ ಹೀಗೆ ಕಂಪ್ಲೆಂಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರು ಹೀಗೆ ಮಾಡಿದ್ದಾರೆ ಅಂದರೆ, ಅದರ ಹಿಂದೆ ಕಾಣದ ಕೈಗಳು ಇವೆ ಅನಿಸುತ್ತದೆ’ ಎಂದಿದ್ದಾರೆ ಡಾಲಿ ಧನಂಜನ್. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಅವರು ಕೋರ್ಟ್, ಕಾನೂನು ಅಂತ ಹೋಗುವುದಾದರೆ ಅಥವಾ ಈ ಕುರಿತು ಏನೇ ಮಾತುಕತೆ ಇದ್ದರೆ ಅದನ್ನು ಅಗ್ನಿ ಶ್ರೀಧರ್ ಅವರ ಜತೆ ಮಾಡಬೇಕು. ನಾವು ಅವರ ಕೃತಿಯ ಹಕ್ಕು ಪಡೆದುಕೊಂಡೇ ಸಿನಿಮಾ ಮಾಡಿದ್ದೇವೆ. ಶ್ರೀಧರ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಮ್ಮ ಸಿನಿಮಾಗೂ, ಅಜಿತ್ ಅವರ ಆರೋಪಕ್ಕೂ ಸಂಬಂಧ ಇರದು. ಅವರು ಅಗ್ನಿ ಶ್ರೀಧರ್ ಅವರ ಜತೆಯೇ ಮಾತುಕತೆ ಆಡಬೇಕು ಎಂದಿದ್ದಾರೆ ಧನಂಜಯ್.