Tag: Vasanth Kumar

  • ‘ರುದ್ರಾಭಿಷೇಕಂ’ ಚಿತ್ರಕ್ಕೆ ಚಾಲನೆ:  ವೀರಗಾಸೆಯಲ್ಲಿ ವಿಜಯ ರಾಘವೇಂದ್ರ

    ‘ರುದ್ರಾಭಿಷೇಕಂ’ ಚಿತ್ರಕ್ಕೆ ಚಾಲನೆ: ವೀರಗಾಸೆಯಲ್ಲಿ ವಿಜಯ ರಾಘವೇಂದ್ರ

    ಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿ ಪ್ರೇಕ್ಷಕರನ್ನು ರಂಜಿಸಿವೆ. ಅದೇ ಹಾದಿಯಲ್ಲಿ ಇದೀಗ  ಮತ್ತೊಂದು ಸಿನಿಮಾ ಸೆಟ್ಟೇರಿದೆ. ಪ್ರತಿಭಾವಂತ ನಟ ವಿಜಯ ರಾಘವೇಂದ್ರ ಅವರು  ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ರುದ್ರಾಭಿಷೇಕಂ (Rudrabhishekam). ಈ ಚಿತ್ರದ ಮುಹೂರ್ತ ಸಮಾರಂಭ ದೇವನಹಳ್ಳಿ ಬಳಿಯ ವಿಜಯಪುರದ ಫಾರಂ ಹೌಸ್ ಒಂದರಲ್ಲಿ ಸರಳವಾಗಿ  ನೆರವೇರಿತು.

    ಮುಹೂರ್ತದ ನಂತರ ಮಾತನಾಡಿದ ವಿಜಯ ರಾಘವೇಂದ್ರ (Vijaya Raghavendra), ಇನ್ನೊಂದು ಒಳ್ಳೆಯ ಪ್ರಯತ್ನ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ತೆಗೆದುಕೊಂಡು ಹೋಗುವ ಕಥೆ. ಕಮರ್ಷಿಯಲ್ ಎಲಿಮೆಂಟ್ ಒಳಗೊಂಡಿದ್ದರೂ ಕೂಡ ಸಾಕಷ್ಟು ಡಿವೈನಿಟಿ ಇರುವ ಚಿತ್ರ. ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಾನ್ಸೆಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ  ಚಿತ್ರದಲ್ಲಿ ನನಗೆ  ಸಾಕಷ್ಟು ಗೆಟಪ್ ಗಳಿವೆ ಎಂದು ಹೇಳಿದರು.

     

    ನಿರ್ದೇಶಕ ವಸಂತ್ ಕುಮಾರ್ ಮಾತನಾಡುತ್ತ ನಾನು ಕಳೆದ ಎರಡುವರೆ ದಶಕಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ಹಲವಾರು ಚಿತ್ರಗಳಿಗೆ ಸಹನಿರ್ದೇಶನ, ಕಥೆ, ಚಿತ್ರಕಥೆ ಬರೆದಿದ್ದೇನೆ. ಇದೊಂದು ಟ್ರೆಡಿಷನಲ್ ಸಬ್ಜೆಕ್ಟ್. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಹೊಟಿದ್ದೇನೆ. ಒಂದೂವರೆ ವರ್ಷದಿಂದ ಸಾಕಷ್ಟು ರೀಸರ್ಚ್ ಮಾಡಿ ಈ ಕಥೆ ರೆಡಿ ಮಾಡಿಕೊಂಡಿದ್ದೇನೆ.  ಕಥೆ ಮಾಡಿಕೊಂಡು ಒಂದಷ್ಟು ಮಠಾಧೀಶರನ್ನು ಸಂಪರ್ಕಿಸಿದಾಗ ಅವರೆಲ್ಲ ಒಳ್ಳೆ ಪ್ರಯತ್ನ. ಗೆದ್ದೇ ಗೆಲ್ತೀಯ  ಎಂದು ಶುಭ ಹಾರೈಸಿದರು.

     

    ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ಇಲ್ಲಿ ಹೇಳುತ್ತಿದ್ದೇನೆ. ನಾನು ಕಥೆ ಮಾಡುವಾಗಲೇ  ವಿಜಯ ರಾಘವೇಂದ್ರ ಅವರನ್ನು ವೀರಗಾಸೆ ಗೆಟಪ್ ನಲ್ಲಿ ಕಲ್ಪಿಸಿಕೊಂಡೆ. ಈ ಸಮಯದಲ್ಲಿ ನನ್ನ ಹಲವಾರು ಸ್ನೇಹಿತರು ನಿರ್ಮಾಣದಲ್ಲಿ  ಕೈಜೋಡಿಸುತ್ತಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಒಂದೊಳ್ಳೆ ಸಿನಿಮಾ ಕಟ್ಟಿ ಕೊಡಬೇಕೆಂದುಕೊಂಡುದ್ದೇನೆ. ಮೊದಲ ಹಂತದಲ್ಲಿ ಇದೇ ಫಾರಂ ಹೌಸ್ ನಲ್ಲಿ 15 ದಿನ ಶೂಟ್ ಮಾಡುತ್ತಿದ್ದೇವೆ. ನಂತರ ಇಡೀ ಊರತುಂಬ ಆಲದಮರ, ಹಿಂದುಳಿದವರೇ ಇರುವಂಥ ಲೊಕೇಶನ್ ಹುಡುಕೊದಾಗ ಸಿಕ್ಕಿದ್ದೇ ಚಿಕ್ಕತದಮಂಗಲ. ಅಲ್ಲಿ ಜಾಸ್ತಿ ಇರುವುದೇ ವೀರಭದ್ರ ದೇವರ ಒಕ್ಕಲಿನವರು‌. ಅಲ್ಲಿ ಹೋಗಿ ಶೂಟಿಂಗ್ ಮಾಡಬೇಕೆಂದಾಗ ಇಡೀ ಊರ ಜನತೆ ನಮಗೆ  ಸಹಕಾರ ಕೊಡ್ತಿದಾರೆ ಎಂದು ಹೇಳಿದರು.

    ನಿರ್ದೇಶಕರ ಸ್ನೇಹಿತರಾದ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್  ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕರ ಒಂದು ಒಳ್ಳೆಯ ಪ್ರಯತ್ನಕ್ಕೆ ನಾವೆಲ್ಲ ಕೈ ಜೋಡಿಸಿರುವುದಾಗಿ ಅವರು ಹೇಳಿಕೊಂಡರು.

     

    ರುದ್ರಾಭಿಷೇಕಂ ಚಿತ್ರದ ನಾಯಕಿಯಾಗಿ ಮೈಸೂರು ಮೂಲದ ರಂಗಭೂಮಿ ಪ್ರತಿಭೆ ಪ್ರೇರಣಾ ನಟಿಸುತ್ತಿದ್ದಾರೆ. ಮತ್ತೊಬ್ಬ ದೈತ್ಯಪ್ರತಿಭೆ ಬಲ ರಾಜವಾಡಿ ಅವರು ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಲ್ಲದೆ ತಾರಕೇಶ್ವರ ಸೇರಿ ಅನೇಕ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ  ಮುತ್ತುರಾಜ್  ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

  • ‘ನೋಡದ ಪುಟಗಳ’ ಒಳಗಿದೆ ಅಸಲಿ ಕಹಾನಿ

    ‘ನೋಡದ ಪುಟಗಳ’ ಒಳಗಿದೆ ಅಸಲಿ ಕಹಾನಿ

    ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ‘ನೋಡದ ಪುಟಗಳು’ (Nodadha Putagalu) ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ‘ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲಿಷ್‌ದಲ್ಲಿ ಅಡಿಬರಹವಿದೆ. ಸುದ್ದಿ ಮಾಡುವ ಸಲುವಾಗಿ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್ ಮತ್ತು ಹಿರಿಯ ನಟ ಡಿಂಗ್ರಿನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

    ನವ ಪ್ರತಿಭೆ ಎಸ್.ವಸಂತ್‌ಕುಮಾರ್ (Vasanth Kumar) ಸಿನಿಮಾಕ್ಕೆ ರಚನೆ, ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತಃ ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್‌ನ್ನು ಕಲಿತುಕೊಂಡು, ಕೂಡ್ಲು ರಾಮಕೃಷ್ಣ, ಯೋಗಿ ಅಭಿನಯದ ‘ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದಾರೆ. ನಂತರ ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

    ವರ್ಷ ವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ಜರುಗುತ್ತವೆ. ಮುಂದೆ   ಇದರ ಆಧಾರದ ಮೇಲೆ ಸಣ್ಣ ಏಳೆಯನ್ನು ಬರೆದುಕೊಂಡು ಗೆಳೆಯನಿಗೆ ಹೇಳಿದ್ದಾರೆ. ಚೆನ್ನಾಗಿದೆ ಏಕೆ ಸಿನಿಮಾ ಮಾಡಬಾರದೆಂದು ಸಲಹೆ ನೀಡಿದ್ದಾರೆ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕಲಾವಿದರಿಗೆ ಕಥೆ ಹೇಳದೆ ಕುತೂಹಲ ಕಾಯ್ದಿರಿಸಿದ್ದಾರೆ. ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವು ಸೇರಿದರೆ ಕ್ಲೈಮಾಕ್ಸ್ ಆಗುತ್ತದೆ. ಆದರೆ ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳಲಿಕ್ಕೆ ಹೊರಟಿದ್ದೇನೆಂದು ನಿರ್ದೇಶಕರು ಸಣ್ಣ ಸುಳಿವನ್ನು ಬಿಟ್ಟುಕೊಟ್ಟರು.

    ನಾಯಕ ಪ್ರೀತಂ ಮಕ್ಕಿಹಳ್ಳಿ (Pritam Makkihalli), ನಾಯಕಿ ಕಾವ್ಯ ರಮೇಶ್ (Kavya Ramesh) ಇಬ್ಬರಿಗೂ ಎರಡನೇ ಅವಕಾಶ. ಉಳಿದಂತೆ ವಾಸು, ವಿಲಾಸ್‌ ಕುಲಕರ್ಣಿ, ಗೌತಂ.ಜಿ, ಅಶೋಕ್‌ ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಮೋಹನ್‌ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್‌ ಗೊಣಕಿ ಸಿ.ರಘುನಾಥ್ ಸಾಹಿತ್ಯದ ಹಾಡುಗಳಿಗೆ ವಿಘ್ನೇಶ್‌ ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎನ್, ಸಂಕಲನ ರಘುನಾಥ್.ಎಂ ಅವರದಾಗಿದೆ. ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.