Tag: varuna

  • ವೋಲ್ಟೇಜ್ ಕಳೆದುಕೊಂಡ `ವರುಣಾ’ – ಬಿಜೆಪಿ ಸ್ಥಿತಿ ಅಯೋಮಯ..!

    ವೋಲ್ಟೇಜ್ ಕಳೆದುಕೊಂಡ `ವರುಣಾ’ – ಬಿಜೆಪಿ ಸ್ಥಿತಿ ಅಯೋಮಯ..!

    – ಕೆ.ಪಿ. ನಾಗರಾಜ್
    ಮೈಸೂರು: ರಾಜ್ಯ ರಾಜಕೀಯದ ಹೈವೋಲ್ಟೇಜ್ ಚುನಾವಣಾ ಕ್ಷೇತ್ರ ಅಂತಾ ಅನ್ನಿಸಿಕೊಂಡಿದ್ದ ವರುಣಾ ಕ್ಷೇತ್ರ ಈಗ ಹೈವೋಲ್ಟೇಜ್ ಇರಲಿ, ವೋಲ್ಟೇಜ್ ಕೂಡ ಇಲ್ಲದಂತಾಗಿ ಮಂಕಾಗಿದೆ. ಬಿಜೆಪಿಗೆ ಬಿಜೆಪಿಯೆ ಕೊಟ್ಟು ಕೊಂಡ ಸ್ಟ್ರೋಕ್ ಗೆ ವರುಣಾ ಚುನಾವಣಾ ಕದನ ಈಗ ಅಕ್ಷರಶಃ ಒನ್ ಸೈಡ್ ಮ್ಯಾಚ್. ಕಾಂಗ್ರೆಸ್ ಅಭ್ಯರ್ಥಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅತ್ಯಂತ ಸೇಫ್ ಆಗಿ ವಿಧಾನಸೌಧ ಪ್ರವೇಶಿಸುವುದು ಬಹುತೇಕ ನಿಶ್ಚಿತ. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಈ ರಾಜ್ಯದ ಅತ್ಯಂತ ಸೇಫ್ ಕ್ಷೇತ್ರವಾಗಿ ವರುಣಾ ಮಾರ್ಪಟ್ಟಿದೆ.

    ವಿಜಯೇಂದ್ರ ಯಾವಾಗ ಕ್ಷೇತ್ರಕ್ಕೆ ಎಂಟ್ರಿಕೊಟ್ಟರೋ ಅವತ್ತಿನಿಂದಲೇ ವರುಣಾ ಕದನಕ್ಕೆ ಹೈವೋಲ್ಟೇಜ್ ಪಾಸ್ ಆಗಿದ್ದು ಸತ್ಯ. ವಿಜಯೇಂದ್ರ ಎಂಟ್ರಿ ಮೈಸೂರು ಭಾಗದ ಕೆಲವು ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿಯಲ್ಲಿದ್ದು ಮೈಸೂರಿನ ಮೇಲೆ ಸದಾ ಒಂದು ಕಣ್ಣು ಇಟ್ಟಿರುವ ನಾಯಕರ ಕಣ್ಣು ಕೆಂಪು ಮಾಡಿತ್ತು. ಆದರೆ, ಮೈಸೂರು ಭಾಗದ ವೀರಶೈವ – ಲಿಂಗಾಯತ ಸಮುದಾಯದ ಜನ ವಿಜಯೇಂದ್ರರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಬಿಟ್ಟರು. ವಿಜಯೇಂದ್ರ ತಮ್ಮ ಮುಂದಿನ ನಾಯಕ ಅನ್ನೋ ರೀತಿಯಲ್ಲಿ ಮಾತಾಡೋಕೆ ಶುರು ಮಾಡಿದರು.

    ಹೇಳಿ ಕೇಳಿ ಈಗ ಮೈಸೂರು ಭಾಗದಲ್ಲಿ ವೀರಶೈವ – ಲಿಂಗಾಯತ ಸಮುದಾಯಕ್ಕೆ ಒಬ್ಬ ದೃಢ ನಾಯಕನ ಕೊರತೆ ಇದೆ. ರಾಜಶೇಖರಮೂರ್ತಿ, ಗುರುಪಾದಸ್ವಾಮಿ, ಕೆ. ಮಹದೇವ್, ಮಹದೇವಪ್ರಸಾದ್ ಅವರ ನಂತರ ಒಬ್ಬ ಸಮರ್ಥ ನಾಯಕನ ಕೊರತೆ ಈ ಸಮುದಾಯಕ್ಕೆ ಇದೆ. ವಿಜಯೇಂದ್ರ ಮೂಲಕ ಈ ಕೊರತೆ ನೀಗುತ್ತೆ ಅನ್ನೋ ಲೆಕ್ಕಚಾರದಲ್ಲಿ ಸಮುದಾಯದ ಇದ್ದದ್ದು ಸ್ಪಷ್ಟ. ಹೀಗಾಗಿಯೆ ವಿಜಯೇಂದ್ರ ಹೋದ ಕಡೆಯಲೆಲ್ಲಾ ಅದರಲ್ಲೂ ವೀರಶೈವ – ಲಿಂಗಾಯತರ ಪ್ರಾಬಲ್ಯ ಇರೋ ಹಳ್ಳಿಗಳಲ್ಲಿ ಅದ್ಧೂರಿ ಸ್ವಾಗತವೇ ದೊರೆತಿತ್ತು.

    ಆದರೆ, ಸಿನಿಮಾಕ್ಕಿಂತಲೂ ರೋಚಕವಾದ ತಿರುವು ನೀಡಿದ ಬಿಜೆಪಿ ವಿಜಯೇಂದ್ರ ಅವರ ತಂದೆಯ ಬಾಯಲ್ಲೇ ಮಗನಿಗೆ ಟಿಕೆಟ್ ಇಲ್ಲ ಅಂತಾ ಹೇಳಿಸಿ ದೊಡ್ಡ ಸಿಡಿಲನ್ನೇ ಬಡಿಸಿತ್ತು. ಇದು ಈಗ ಮುಗಿದ ಅಧ್ಯಾಯ. ಆದರೆ, ಈ ಅಧ್ಯಾಯದಿಂದ ಉಂಟಾಗಿರುವ ಅಲೆಗಳು ಸುಳಿಗಳಾಗಿ ಮಾರ್ಪಡುತ್ತಿವೆ. ಈ ಸುಳಿಯಲ್ಲಿ ಸಿಲುಕುತ್ತಿರುವುದು ಬಿಜೆಪಿ ಅಭ್ಯರ್ಥಿಗಳು. ಈ ಸುಳಿಯ ಸೆಳೆತ ಕಡಮೆ ಆಗದೆ ಇದ್ದರೆ ಮೈಸೂರು – ಚಾಮರಾಜ ನಗರ ಭಾಗದಲ್ಲಿ ಮೂರ್ನಾಲ್ಕು ಸ್ಥಾನ ಗೆಲ್ಲುವ ಲೆಕ್ಕ ಹಾಕಿರೋ ಬಿಜೆಪಿಗೆ ಮರ್ಮಾಘಾತವಾಗುವುದು ನಿಶ್ಚಿತ. ಈ ಸುಳಿಯ ಸೆಳೆತ ಕಡಮೆ ಮಾಡೋ ಶಕ್ತಿ ಸ್ವತಃ ವಿಜಯೇಂದ್ರಗೂ ಇಲ್ಲ ಎಂಬುದು ವಾಸ್ತವ ಸತ್ಯ

    `ನೋಟಾ ಕಡೆಗೆ ನೋಟ…!’
    ವಿಜಯೇಂದ್ರಗೆ ಟಿಕೆಟ್ ತಪ್ಪಿ ಟಿ. ಬಸವರಾಜಪ್ಪ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರೋ ಆ ಕ್ಷಣವೇ ವರುಣಾ ಬಿಜೆಪಿ ಕಾರ್ಯಕರ್ತರ ತಂತ್ರಗಳು ಬದಲಾದವು. ಇಷ್ಟು ದಿನ ಬಿಜೆಪಿಗೆ ಮತ ಹಾಕಿ ಅಂತಾ ಕೇಳುತ್ತಿದ್ದವರು ಈಗ ನೋಟಾ ಒತ್ತಿ ಅಂತಾ ಅಭಿಯಾನ ಆರಂಭಿಸಿದ್ದಾರೆ. ನೋಟಾ ಮತ ಹೆಚ್ಚಾದರೆ ಮರು ಚುನಾವಣೆ ನಡೆಯುತ್ತೆ ಅನ್ನೋದು ಈ ಕಾರ್ಯಕರ್ತರ ಕಲ್ಪನೆ. ಆದರೆ, ಕಾನೂನಾತ್ಮಕವಾಗಿ ಇದು ಸಾಧ್ಯವಿಲ್ಲ. ಆದರೂ, ತಮ್ಮ ಆಕ್ರೋಶವನ್ನು ಕಾರ್ಯಕರ್ತರು ಹೀಗೆ ವ್ಯಕ್ತಪಡಿಸುತ್ತಿರುವ ಕಾರಣ ಒನ್ಸ್ ಅಗೈನ್ ಇದು ಬಿಜೆಪಿ ಅಭ್ಯರ್ಥಿಗೆ ನಷ್ಟ ಉಂಟಾಗುತ್ತೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಿಯೂ ಬಿಜೆಪಿ ಠೇವಣಿ ಕಳೆದುಕೊಂಡಿತ್ತು. ಅಂತಹದರಲ್ಲಿ ಈಗ ಬಿಜೆಪಿ ಕಾರ್ಯಕರ್ತರೇ ನೋಟಾ ಅಭಿಯಾನ ನಡೆಸುತ್ತಿರುವುದು ನೋಡಿದರೆ ವರುಣಾದಲ್ಲಿ ಬಿಜೆಪಿ ಸ್ಥಿತಿ ಏನಾಗಬಹುದು ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ.  ಇದನ್ನು ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

     

    `ಲಡ್ಡು ಬಂದು ಬಾಯಿಗೆ ಬಿತ್ತು..!’
    ಈ ಬಾರಿ ವರುಣಾ ಕ್ಷೇತ್ರ ಕಾಂಗ್ರೆಸ್ ಗೆ ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋ ರೀತಿ ಆಗಿದೆ. ವಿಜಯೇಂದ್ರ ಸ್ಪರ್ಧೆ ಹಿನ್ನೆಲೆಯಲ್ಲಿ ಎದುರಾಗಿದ್ದ ಫೈಟ್ ಈಗ ಠುಸ್ ಪಟಾಕಿ ಅಂತಾಗಿದ್ದು ಸಿಎಂ ಪುತ್ರ ಡಾ. ಯತೀಂದ್ರ ಬಾಯಿಗೆ ಲಡ್ಡು ಬಿದ್ದಂತಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಈಗ ತಾವು ಎಷ್ಟು ಮತಗಳ ಅಂತರದಿಂದ ಗೆಲುತ್ತೇವೆ ಎಂಬ ಲೆಕ್ಕ ಹಾಕುತ್ತಿದೆ. ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಕಳೆದ ಬಾರಿ 20 ಸಾವಿರ ಅಂತರದಿಂದ ಗೆದ್ದಿದ್ದರು. ಈ ಬಾರಿ ಅದರ ಎರಡು ಪಟ್ಟು ಅಂತರದಿಂದ ಗೆಲ್ತೀವಿ ಅನ್ನೋ ಮನ:ಸ್ಥಿತಿಯಲ್ಲಿ ಕಾಂಗ್ರೆಸ್ ಪಾಳಯವಿದೆ. ಇದನ್ನು ಓದಿ: ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ಅತಂತ್ರರಾದ ರೇವಣ್ಣ ಸಿದ್ದಯ್ಯ…!
    ಸಿದ್ದರಾಮಯ್ಯ ವಿರುದ್ಧ ರಣತಂತ್ರ ರೂಪಿಸಲು ಕಾಂಗ್ರೆಸ್ ಬಿಟ್ಟು ಬಂದ ನಿವೃತ್ತ ಐಪಿಎಸ್ ಅಧಿಕಾರಿ ರೇವಣ್ಣಸಿದ್ದಯ್ಯ ಈಗ ಅತಂತ್ರರಾದಂತೆ ಕಾಣುತ್ತಿದ್ದಾರೆ. ವಿಜಯೇಂದ್ರ ಟಿಕೆಟ್ ತಪ್ಪುವ ಒಂದು ದಿನ ಮುಂಚೆ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ರೇವಣ್ಣಸಿದ್ದಯ್ಯ, ವರುಣಾದಲ್ಲಿ ಸಿಎಂ ಮಗನನ್ನು ಸೋಲಿಸೋಕೆ ವಿಜಯೇಂದ್ರ ಬೆಂಬಲಿಸುತ್ತೇನೆ. ಚಾಮುಂಡೇಶ್ವರಿಯಲ್ಲಿ ಸಿಎಂ ಸೋಲಿಸೋಕೆ ಜೆಡಿಎಸ್‍ನ ಜಿ.ಟಿ. ದೇವೇಗೌಡರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಆದರೆ, ರೇವಣ್ಣಸಿದ್ದಯ್ಯ ಮಾಡಿದ್ದ ಪ್ಲಾನ್ ಅನ್ನು ಬಿಜೆಪಿಯೇ ಉಲ್ಟಾ ಮಾಡಿದೆ. ಹೀಗಾಗಿ, ರೇವಣ್ಣಸಿದ್ದಯ್ಯ ಅತ್ತ, ಇತ್ತ, ಎತ್ತವೂ ಇಲ್ಲದಂತೆ ಅತಂತ್ರರಾಗಿಬಿಟ್ಟಿದ್ದಾರೆ.  ಇದನ್ನು ಓದಿ: ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    https://www.facebook.com/publictv/videos/2208282452522828/?q=Public%20TV%20varuna%20

  • ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಬೆಂಗಳೂರು: ಯತೀಂದ್ರ ಸಿಎಂ ಸಿದ್ದರಾಮಯ್ಯರ ಮಗ ಅನ್ನೋದು ಬಿಟ್ಟರೆ, ಬೇರೆ ಯಾವುದರಲ್ಲೂ ನನಗೆ ಸರಿ ಸಮಾನನಿಲ್ಲ ಅಂತಾ ವರುಣಾ ಕೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜು ಹೇಳಿದ್ದಾರೆ.

    ನಗರದ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿದ ಬಳಿಕ ನೀಡಿದ ಮಾತನಾಡಿದ ಬಸವರಾಜು, ನೂರಕ್ಕೆ ನೂರರಷ್ಟು ವರುಣಾದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಸದ್ಯ ವರುಣಾದಲ್ಲಿ ಪರಿಸ್ಥಿತಿ ಸರಿ ಇಲ್ಲ, ಆದ್ರೆ ಇನ್ನೆರೆಡು ದಿನ ಬಿಟ್ಟು ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರು ಬಂದು ಪ್ರಚಾರ ಮಾಡಲಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಬಿಜೆಪಿ ಶಕ್ತಿ ಏನು ಅನ್ನೋದನ್ನ ತೋರಿಸುವುದಕ್ಕೆ ಮುಂದಾಗಿದೆ ಅಂತಾ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಯಾರೋ ಕೆಲ ಕಿಡಿಗೇಡಿಗಳು ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನ ಮಾಡ್ತಿದ್ದಾರೆ. ಆದ್ರೆ ಅವರು ಯಾರು ಬಿಜೆಪಿ ಕಾರ್ಯಕರ್ತರಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಅಂತಹ ಕೆಲಸ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ರು.

  • ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಮೈಸೂರು: ವರುಣಾದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದಿರೋ ಸಿಟ್ಟು ಶಮನವಾಗಿಲ್ಲ. ಪ್ರತೀಕಾರವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ್‍ರನ್ನೇ ಸೋಲಿಸಿ ಮರು ಚುನಾವಣೆ ನಡೆಸೋ ಸಲುವಾಗಿ ನೋಟಾ ಚಲಾಯಿಸಬೇಕೆಂಬ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ

    ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವಾಗ 40 ರಿಂದ 50 ಸಾವಿರ ಜನರಿದ್ದರು. ಆದ್ರೆ ಅನಂತ್‍ಕುಮಾರ್, ಸಂತೋಷ್ ಕಡೆಯ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸುವಾಗ ಕೇವಲ 6 ಜನರಿದ್ದರು. ಇವರಿಬ್ಬರ ಗರ್ವಭಂಗ ಆಗ್ಬೇಕು. ವೀರಶೈವ-ಲಿಂಗಾಯತರ ಸ್ವಾಭಿಮಾನವನ್ನ ನೋಟಾ ಮೂಲಕ ತೋರಿಸಬೇಕಿದ್ದು, ಅವರ ಸ್ವಾಭಿಮಾನಕ್ಕೆ ಪೆಟ್ಟು ಕೊಡ್ಬೇಕಾದ್ರೆ ಬಿಜೆಪಿ ನೂರು ಸಲ ಯೋಚಿಸಬೇಕು. ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸೋದ್ರಿಂದ ಚಾಮರಾಜನಗರ ಮತ್ತು ಮೈಸೂರಿನ 9 ಕ್ಷೇತ್ರಗಳಲ್ಲಿ ಗೆಲುವಿಗೆ ಭಂಗ ಆಗುತ್ತದೆ ಅಂತ ಅನಂತ್‍ಕುಮಾರ್, ಸಂತೋಷ್ ನಿಮಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿರೋ ಕರಪತ್ರ ವೈರಲ್ ಆಗಿದೆ. ಇದನ್ನೂ ಓದಿ: ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ 25 ಸಾವಿರಕ್ಕಿಂತ ಹೆಚ್ಚು ನೋಟಾ ವೋಟ್ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರೇ ವಾಟ್ಸಾಪ್‍ನಲ್ಲಿ ಪ್ರಚಾರ ಮಾಡ್ತಿದ್ದಾರೆ. ಆದ್ರೆ, ಒಟ್ಟು ಮತಗಳ ಅರ್ಧಕ್ಕಿಂತಲೂ ಹೆಚ್ಚು ನೋಟಾ ಚಲಾಯಿಸಿದ್ರೂ ಮರು ಚುನಾವಣೆ ನಡೆಯಲ್ಲ. ಇದನ್ನೂ ಓದಿ:  ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

  • ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

    ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

    ಶಿವಮೊಗ್ಗ: ವರುಣಾ ಕ್ಷೇತ್ರದ ಕುರಿತು ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ. ಈಗ ವರುಣಾದಲ್ಲಿ ಏರ್ಪಟ್ಟಿದ್ದ ಗೊಂದಲ ಬಗೆ ಹರಿದಿದೆ ಅಂತ ಅಮಿತ್ ಶಾ ಸಂದಾನ ಬಳಿಕ ಮೊದಲ ಬಾರಿ ಬಿಎಸ್‍ವೈ ಮನೆಗೆ ಭೇಟಿ ಕೊಟ್ಟ ಈಶ್ವರಪ್ಪ ಹೇಳಿದರು.

    ಬಾದಾಮಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಮಾಡಿಕೊಂಡಿರುವ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ. ಸಿಎಂ ಅವರು ಇಲ್ಲಿ ಯಶಸ್ವಿ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವರ ಸಮುದಾಯದವರು ಹೆಚ್ಚು ಇದ್ದರೂ ಕೂಡ ಬದಾಮಿ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರೇ ಅಂದ್ರು. ಇದನ್ನೂ ಓದಿ; ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ವಿಜಯೇಂದ್ರ 20 ದಿನಗಳಲ್ಲಿ ವರುಣಾ ಕ್ಷೇತ್ರದಲ್ಲಿ ಹೆಚ್ಚಿನ ಜನಬೆಂಬಲ ಗಳಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರಿಯ ನಾಯಕರು ವಿಜಯೇಂದ್ರರನ್ನ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ

     

  • ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    ಬೆಂಗಳೂರು: ನನ್ನನ್ನು ಮನೆಮಗನಂತೆ ಕಂಡು ತುಂಬುಹೃದಯದಿಂದ ಬರಮಾಡಿಕೊಂಡ ನಿಮ್ಮ ವಾತ್ಸಲ್ಯಕ್ಕೆ ಚಿರಋಣಿ ಎಂದು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣಾ ಜನತೆಗೆ ಹೇಳಿದ್ದಾರೆ.

    ಕಳೆದೊಂದು ತಿಂಗಳಿನಿಂದ ವರುಣಾ ಕ್ಷೇತ್ರದ ಜನತೆ ತೋರುತ್ತಿರುವ ಅಪಾರ ಪ್ರೀತಿಗೆ ಮನಸೋತಿದ್ದೇನೆ. ಕ್ಷೇತ್ರದ ಜನರ ನೋವುಗಳಿಗೆ ಮುಂದೆಯೂ ನಾನು ಧ್ವನಿಯಾಗಿರುತ್ತೇನೆ. ನನ್ನ ಅಥವಾ ಪಕ್ಷದ ನಿರ್ಧಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ವರುಣಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದ ಎಲ್ಲ ಕಾರ್ಯಕರ್ತರು, ಸ್ಪರ್ಧಾಕಾಂಕ್ಷಿಗಳು ಹಾಗೂ ಮುಖಂಡರಿಗೆ ಕೃತಜ್ಞತೆಗಳು. ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಅಂತಿಮವಾಗಿದ್ದು, ಅದಕ್ಕೆ ಬದ್ಧವಾಗಿದ್ದುಕೊಂಡು ವರುಣಾದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದ್ದಾರೆ.

    ರಾಜ್ಯದ ಅಭಿವೃದ್ಧಿಗಾಗಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಇದೊಂದೇ ನಮ್ಮೆಲ್ಲರ ಗುರಿಯಾಗಿದ್ದು, ಇದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸೋಣ. ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಜಯೇಂದ್ರ ಅವರು ಈ ಹಿಂದೆ ಕೂಡ ಟ್ವೀಟ್ ಮಾಡಿದ್ದರು.

  • ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರಕ್ಕೆ ಬಂದು ಕೇವಲ 20 ದಿನ ಆಯ್ತು. ನಾನು 37 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ವರುಣಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಬಸವರಾಜು ಹೇಳಿದ್ದಾರೆ. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ವರುಣಾದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಿ ಪ್ರಚಾರ ಮಾಡಿಲ್ಲ. ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಅಷ್ಟೇ. ರಾಜ್ಯದ ಜನತೆ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕಿದೆ ಅಂತಾ ತಿಳಿದುಕೊಂಡಿರಬಹುದು. ಆದ್ರೆ ಹೈಕಮಾಂಡ್ ಈ ಮೊದಲೇ ನಾನೇ ವರುಣಾ ಕ್ಷೇತ್ರದ ಅಭ್ಯರ್ಥಿಯೆಂದು ಹೇಳಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

    ಯಡಿಯೂರಪ್ಪನವರು ಶಾಸಕರಾದ ಸಂದರ್ಭದಿಂದ ನಾವು ಕೆಲಸ ಮಾಡಿದ್ದೇನೆ. ಬಿಜೆಪಿಯ ಆಶೀರ್ವಾದ ನನ್ನ ಮೇಲಿದೆ. ನನಗೆ ಟಿಕೆಟ್ ನೀಡುವುದು ಎಲ್ಲ ನಾಯಕರ ತೀರ್ಮಾನವಾಗಿದ್ದು, ಕೇವಲ ಒಬ್ಬರು, ಇಬ್ಬರ ಹೆಸರು ಹೇಳೋದಕ್ಕೆ ಆಗಲ್ಲ ಅಂತಾ ಹೇಳಿದ್ರು. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ

    20 ದಿನಗಳಿಂದ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗುತ್ತಿತ್ತು. ಸೋಮವಾರ ವಿಜಯೇಂದ್ರ ಸಹ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಕೊನೆ ಕ್ಷಣದಲ್ಲಿ ನನ್ನ ಪುತ್ರ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತಾ ನಂಜನಗೂಡಿನಲ್ಲಿ ನಡೆದ ಸಮಾವೇಶದಲ್ಲಿ ಬಿಎಸ್‍ವೈ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ಸದ್ಯ ವರುಣಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರೋ ಬಸವರಾಜು ಅವರು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಕೇಂದ್ರ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಆಪ್ತ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಈಗ ಹರಿದಾಡುತ್ತಿದೆ. ಇದನ್ನೂಓದಿ: ಬಿಎಸ್‍ವೈ ಪುತ್ರನಿಗೆ ವರುಣಾ ಟಿಕೆಟ್ ಕೈ ತಪ್ಪಿಸಿದ್ದು ಯಾರು?: ಕುದಿಮೌನ ತಾಳಿದ ಬಿಎಸ್‍ವೈ

  • ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ಮೈಸೂರು: ವರುಣಾ ಕ್ಷೇತ್ರ ಟಿಕೆಟ್ ಹಂಚಿಕೆ ಬಿಜೆಪಿ ನಾಯಕರಲ್ಲಿ ಗೊಂದಲವನ್ನು ಉಂಟು ಮಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದ್ದಾರೆ.

    ನಗರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಅನಿವಾರ್ಯ ಸುದ್ದಿಗೋಷ್ಠಿಯಾಗಿದ್ದು ಮೈಸೂರು ಹಾಗೂ ಚಾಮರಾಜನಗರದ 15 ಮಂದಿ ಬಿಜೆಪಿ ಮುಖಂಡರ ಭವಿಷ್ಯಕ್ಕೆ ಕುತ್ತು ಬಂದಿದೆ. ನಾನು ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

    ನಾವು ಈಗಾಗಲೇ ಜಾವಡೇಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ. ರಾಜ್ಯಾಧ್ಯಕ್ಷ ಬಿಎಸ್‍ವೈ ಅವರನ್ನು ಒತ್ತಾಯಿಸಿದ್ದೇವೆ. ಅವರು ಕಾರ್ಯಕರ್ತರ ಮನವಿಗೆ ಮಣಿಯಲೇ ಬೇಕು. ವಿಜಯೇಂದ್ರ ತಂದೆಯಾಗಿ ಟಿಕೆಟ್ ನೀಡದೇ ಇದ್ದರೂ ಕ್ಷೇತ್ರದ ಕಾರ್ಯಕರ್ತರ ಒತ್ತಾಯಕ್ಕೆ ನೀಡಬೇಕು. ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ರಾಮ್ ದಾಸ್ ಅವರ ಬಳಿಯೂ ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮಾಡಿರುವ ಪ್ರಭಾವದಿಂದ ಸಿದ್ದರಾಮಯ್ಯ ಅವರ ಮಗ ಸೋಲುವುದು ನಿಶ್ಚಿತ. ಸಿಎಂ ಅವರು ಸಹ ಸೋಲುವುದು ಖಚಿತ. ಕ್ಷೇತ್ರದಲ್ಲಿನ ಎಲ್ಲಾ ನಾಯಕರು, ಟಿಕೆಟ್ ಆಕಾಂಕ್ಷಿಗಳು ಸಹ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ನಾಳೆ ಬೆಳಗ್ಗೆಯವರೆಗೂ ಸಮಯವಿದೆ ಎಲ್ಲವೂ ಸೂಕ್ತವಾಗಿ ನಡೆಯಲಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

     

     

  • ಮುಂದುವರಿದ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಮೈಸೂರಲ್ಲಿ ಮತ್ತೊಮ್ಮೆ ಲಾಠಿ ಚಾರ್ಜ್

    ಮುಂದುವರಿದ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಮೈಸೂರಲ್ಲಿ ಮತ್ತೊಮ್ಮೆ ಲಾಠಿ ಚಾರ್ಜ್

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡಿದ್ದ ಬಿಜೆಪಿ ನಾಯಕರಿಗೆ ವರುಣಾ ಕ್ಷೇತ್ರದ ಮಾತ್ರ ತಲೆನೋವಾಗಿ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

    ವರಣಾ ಕ್ಷೇತ್ರದ ಹಲವು ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ನಗರದ ಪ್ರೆಸಿಡೆಂಟ್ ಹೋಟೆಲ್ ಮುಂದೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಎಸ್ ಯಡಿಯೂರಪ್ಪ ಅವರು ಸದ್ಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಕಾರಣ ಪ್ರತಿಭಟನೆ ಬಿಸಿ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ನಡುವೆ ಬಿಎಸ್‍ವೈ ರನ್ನು ಭೇಟಿ ಮಾಡಲು ಬಂದ ಮಾಜಿ ಸಚಿವ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಮ್ ದಾಸ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಹೋಟೆಲ್ ಪ್ರವೇಶ ಮಾಡದಂತೆ ತಡೆದ ಘಟನೆಯೂ ನಡೆಯಿತು. ಇದನ್ನೂ ಓದಿ: ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ಹೋಟೆಲ್ ನಲ್ಲಿ ಮಾಜಿ ಡಿಸಿಎಂ ಆರ್ ಆಶೋಕ್, ಸಂಸದ ಪ್ರತಾಪ್ ಸಿಂಹ, ರೇವಣಾ ಸಿದ್ದಯ್ಯ ಸೇರಿದಂತೆ ಹಲವು ನಾಯಕರು ಬಿಎಸ್‍ವೈ ಅವರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

  • ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ

    ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ

    ಮೈಸೂರು: ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕು ಎಂದು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮನವಿ ಮಾಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿರುವ ಅವರು, ರಾಜ್ಯದ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿ ಯನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಿದ್ದು, ಅದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಹೇಳಿಕೊಂಡಿದ್ದಾರೆ.

    ಬಿಜೆಪಿಯ 4ನೇ ಪಟ್ಟಿ ಇಂದು ಬಿಡುಗಡೆ ಆಗಿದ್ದು, ಈ ಪಟ್ಟಿಯಲ್ಲೂ ವರುಣಾ ಮತ್ತು ಬಾದಾಮಿ ಟಿಕೆಟ್ ಘೋಷಣೆಯಾಗಿಲ್ಲ. ವರುಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯೇಂದ್ರ ಅಲ್ಲೇ ಒಂದು ಮನೆ ಬಾಡಿಗೆ ಪಡೆದು ಗೃಹಪ್ರವೇಶ ಮಾಡಿದ್ದರು.

    ಇಂದು ಮಧ್ಯಾಹ್ನ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ವರುಣಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ, ಪುತ್ರ ವಿಜಯೇಂದ್ರ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಎಸ್‍ವೈ ಹೇಳಿದ್ದರು. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

  • ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ಮೈಸೂರು: ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರ ಟಿಕೆಟ್ ನೀಡದಿರಲು ನಿರ್ಧರಿಸಿದ್ದು ನಾನೇ, ಇದರಲ್ಲಿ ಯಾವುದೇ ಕೇಂದ್ರ ನಾಯಕರು ಮಧ್ಯ ಪ್ರವೇಶಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ನಾನೇ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡುವಂತೆ ಹೇಳಿದ್ದೆ. ಆದರೆ ಕೇವಲ 15 ದಿನಗಳಲ್ಲಿ ವಿಜಯೇಂದ್ರ ಕ್ಷೇತ್ರದ ಜನರ ಪ್ರೀತಿಯನ್ನು ಗಳಿಸಿದ್ದು ನೋಡಿ ನನ್ನ ತೀರ್ಮಾನವನ್ನು ಬದಲಿಸಿದ್ದೇನೆ. ವಿಜಯೇಂದ್ರ ಅವರ ಸೇವೆ ಮೈಸೂರು ಭಾಗಕ್ಕೆ ಅಗತ್ಯವಿದ್ದು, ಕೇವಲ ವರುಣಾ ಕ್ಷೇತ್ರಕ್ಕೆ ಸಿಮೀತವಾಗದೇ ಚಾಮರಾಜನಗರ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಶ್ರಮಿಸುವಂತೆ ಸೂಚಿಸಿದ್ದಾಗಿ ಹೇಳಿರುವುದಾಗಿ ಬಿಎಸ್‍ವೈ ತಿಳಿಸಿದರು.

    ಬಿಜೆಪಿ ರಾಜ್ಯಾಧಕ್ಷರಾಗಿ ನನ್ನನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈ ವಿಚಾರದಲ್ಲಿ ಕೇಂದ್ರದ ಯಾವುದೇ ನಾಯಕರು ಹಾಗೂ ಹೈಕಮಾಂಡ್ ಈ ಕುರಿತು ನಿರ್ಧಾರ ಕೈಗೊಂಡಿಲ್ಲ. ಆರ್ ಎಸ್‍ಎಸ್ ನಾಯಕರು ಸಹ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ವರುಣಾ ಸೇರಿದಂತೆ ಮೈಸೂರಿನ ಇತರೇ ಎಲ್ಲಾ ಕ್ಷೇತ್ರಗಳ ಜನರು ಬಿಎಸ್‍ವೈ ಹಾಗೂ ವಿಜಯೇಂದ್ರ ಅವರೇ ಅಭ್ಯರ್ಥಿಗಳು ಎಂದು ಭಾವಿಸಿ ಯಾರೇ ಅಲ್ಲಿನ ಅಭ್ಯರ್ಥಿಯಾದರು ಮತ ನೀಡಿ ಎಂದು ಮನವಿ ಮಾಡಿದರು.

    ವರುಣಾ ಕ್ಷೇತ್ರದ ಕಾರ್ಯಕರ್ತರಲ್ಲಿ ನಮ್ಮ ವರ್ತನೆ ನೋವು ತಂದಿದೆ ಅದ್ದರಿಂದ ಅವರ ಕ್ಷಮೆ ಕೇಳುತ್ತೇವೆ. ನಾಳೆಯಿಂದ ವಿಜಯೇಂದ್ರ ಅವರು ಮತ್ತೆ ಕ್ಷೇತ್ರ ಪ್ರವಾಸವನ್ನು ಮುಂದುವರಿಸುತ್ತಾರೆ. ನಾನು ಸಹ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂದರು.ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ಈ ವೇಳೆಯು ಬಿಎಸ್‍ವೈ ಅವರನ್ನು ಮುತ್ತಿಗೆ ಹಾಕಿದ ಕಾರ್ಯಕರ್ತರು ವಿಜಯೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಕೈ ತಪ್ಪಿದ ವರುಣಾ ಕ್ಷೇತ್ರ ಟಿಕೆಟ್ – ಕಾರ್ಯಕರ್ತರ ತೀವ್ರ ಆಕ್ರೋಶ