Tag: varuna

  • ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರ ಯಾವುದು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಆದರೆ ಪುತ್ರ ಯತೀಂದ್ರ ವರುಣಾದಿಂದಲೇ ತಂದೆ ಸ್ಪರ್ಧೆ ಮಾಡಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

    ಕೋಲಾರಾ? ವರುಣಾ ಈ ಪೈಕಿ ಯಾವುದನ್ನು ಆಯ್ಕೆ ಮಾಡಲಿ ಎಂಬ ಗೊಂದಲದಲ್ಲಿ ಸಿದ್ದರಾಮಯ್ಯ ಇದ್ದರೋ? ಅಥವಾ ವಿರೋಧಿಗಳು ಮತ್ತು ಹಿತಶತ್ರುಗಳ ದಾರಿ ತಪ್ಪಿಸಲು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೋ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಈಗ ಎಲ್ಲರೂ ಸಿದ್ದರಾಮಯ್ಯ ನಿಮ್ಮ ಕ್ಷೇತ್ರ ಯಾವುದಯ್ಯ ಎಂದು ಕೇಳುವಂತಾಗಿದೆ.

    ನಮ್ಮಪ್ಪ ವರುಣಾದಿಂದಲೇ ಸ್ಪರ್ಧೆ ಮಾಡಲಿ. ಕೋಲಾರ ಸೇರಿ ಹಲವು ಕ್ಷೇತ್ರಗಳು ಸಿದ್ದರಾಮಯ್ಯಗೆ ಸೇಫ್ ಇರಬಹುದು. ಆದರೆ ವರುಣಾದಿಂದಲೇ ಕಣಕ್ಕಿಳಿಯಲಿ ಎನ್ನುವುದು ನನ್ನಾಸೆ. ನಮ್ಮಪ್ಪ ವರುಣಾದಿಂದ ಕಣಕ್ಕಿಳಿದರೆ ನಾನು ಬೇರೆ ಕಡೆಯಿಂದ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ತಾನು ವರುಣಾದಿಂದ ಕಣಕ್ಕಿಳಿದರೆ ಯತೀಂದ್ರ ರಾಜಕೀಯ ಭವಿಷ್ಯ ಮಸುಕಾಗಬಹುದು ಎಂಬ ಆತಂಕವೂ ಸಿದ್ದರಾಮಯ್ಯನವರಿಗೆ ಇದ್ದಂತೆ ಕಾಣುತ್ತಿದೆ. ಮತ್ತೊಂದು ಕಡೆ ಕೋಲಾರದಲ್ಲಿ ಸಿದ್ದರಾಮಯ್ಯ ಆಪ್ತ ಬಳಗ ಬೂತ್ ಮಟ್ಟದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ. ಈ ಬೆಳವಣಿಗೆಗಳ ಬಗ್ಗೆ ಯತೀಂದ್ರ ಟೀಂ ಕಣ್ಣಿಟ್ಟಿರುವುದು ಸಿದ್ದರಾಮಯ್ಯ ಆಪ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಬಳಿಯೇ ಅಸಮಾಧಾನ ತೋಡಿಕೊಂಡಿದ್ದಾರಂತೆ. ಆದರೆ ಯತೀಂದ್ರ ಜೊತೆ ಹೊಂದಿಕೊಂಡು ಹೋಗ್ರಪ್ಪ ಎಂದು ಸಿದ್ದರಾಮಯ್ಯ ತಿಳಿಹೇಳಿದ್ದಾರಂತೆ. ಇದು ಯತೀಂದ್ರ ಗಮನಕ್ಕೂ ಬಂದಿದೆ. ನಿಮ್ಮ ವಿಚಾರದಲ್ಲಿ ನಾನು ರಿಸ್ಕ್ ತಗೊಳ್ಳಲ್ಲ. ಇಲ್ಲ ಅಂದರೆ ಕೋಲಾರ ಸಹವಾಸವೇ ನಮಗೆ ಬೇಡ ಅಂತಾ ಸಿದ್ದರಾಮಯ್ಯ ಬಳಿ ಯತೀಂದ್ರ ಖಡಕ್ಕಾಗಿ ಹೇಳಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

    ಮಗನ ಮಾತು ಕೇಳಿ ವರುಣಾಗೆ ಹೋಗ್ಬೇಕೋ? ಸ್ನೇಹಿತರ ಮಾತು ಕೇಳಿ ಕೋಲಾರಕ್ಕೆ ಹೋಗ್ಬೇಕೋ ಎಂಬ ಧರ್ಮ ಸಂಕಟದಲ್ಲಿ ಈಗ ಸಿದ್ದರಾಮಯ್ಯ ಸಿಲುಕಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅಭಿಮಾನಿಗಳು ಕೇಳಿದರೂ ನೋಡೋಣ ಸುಮ್ನಿರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದು ತ್ಯಾಗ ಒಂದು ಸೇಫ್‌ ಜಾಗ – ಆಪ್ತರ ಜೊತೆ ಮನ ಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ

    ಒಂದು ತ್ಯಾಗ ಒಂದು ಸೇಫ್‌ ಜಾಗ – ಆಪ್ತರ ಜೊತೆ ಮನ ಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ

    – ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ?
    – ವರುಣಾದಲ್ಲಿ ಯತೀಂದ್ರ ಸ್ಪರ್ಧೆ ಇಲ್ಲ?

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮುಂದಿನ ಚುನಾವಣೆಯಲ್ಲಿ(Election) ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಸಿದ್ದರಾಮಯ್ಯ ತಮ್ಮ ಕರ್ಮಭೂಮಿ ವರುಣಾ(Varuna) ಕ್ಷೇತ್ರದಲ್ಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

    ಹೌದು. ಕಳೆದ ಬಾರಿ ಪುತ್ರ ಯತೀಂದ್ರನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಬಾದಾಮಿಯಿಂದ(Badami) ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ಈ ಬಾರಿಯೂ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರಾ ಅಥವಾ ವರುಣಾದಲ್ಲೇ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ಆಪ್ತರ ಜೊತೆಗಿನ ಮತುಕತೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

    ಮೈಸೂರಿನ(Mysuru) ಆಪ್ತರ ಜೊತೆ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆಪ್ತರು, ನೀವು ಎಲ್ಲಿಂದ ಸ್ಪರ್ಧೆ ಮಾಡುತ್ತೀರಿ ಎನ್ನುವುದನ್ನು ಈಗಲೇ ದೃಢಪಡಿಸಿಕೊಳ್ಳಿ. ಕೊನೆ ಕ್ಷಣದಲ್ಲಿ ಗೊಂದಲ ಬೇಡ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಎರಡು ತಿಂಗಳಲ್ಲಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ, ಎಲ್ಲೂ ಕ್ಷೇತ್ರ ಹುಡುಕಿಕೊಂಡು ಹೋಗೋದು ಬೇಡ ವರುಣಾದಿಂದಲೇ ಸ್ಪರ್ಧೆ ಮಾಡಿ ಎಂದಿದ್ದಾರೆ.

    ವರುಣಾ ಬಗ್ಗೆಯೂ ಯೋಚನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಸಾರ್ ಯೋಚನೆ ಮಾಡಬೇಡಿ. ನೀವು ವರುಣಾದಿಂದ ಸ್ಪರ್ಧೆ ಮಾಡಿ. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಲಿ. ನೀವು ವರುಣಾದಿಂದ ಸ್ಪರ್ಧೆ ಮಾಡಿದರೆ ಗೆಲುವು ಸುಲಭ. ಯಾವ ರಿಸ್ಕ್ ಇರಲ್ಲ. ರಾಜ್ಯದ ಬೇರೆ ಕ್ಷೇತ್ರಗಳಿಗೆ ಓಡಾಡಬಹುದು. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ನಿಮಗೂ ಪ್ರಚಾರಕ್ಕೆ ಹೋಗಲು ಸಮಯವೂ ಸಿಗುತ್ತದೆ ಎಂದಿದ್ದಾರೆ.

    ಆಪ್ತರ ಈ ಮಾತಿಗೆ, ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರ ಬೇರೆ ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಅವನು ಕ್ಷೇತ್ರ ನೋಡಿಕೊಂಡು ವರುಣಾದಲ್ಲೇ ಇರುತ್ತಾನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

    ಬೆಂಬಲಿಗರು, ಯತೀಂದ್ರ ಅವರಿಗೆ ಅವಕಾಶ ಇರುತ್ತಲ್ಲ ಎಂದಾಗ ಸಿದ್ದರಾಮಯ್ಯ, ವರುಣಾ ನನ್ನ ಕ್ಷೇತ್ರ ಇದು ನನ್ನ ಕೊನೆಯ ಚುನಾವಣೆ. ನೋಡೋಣ ಏನೇನು ಆಗುತ್ತೆ ಅಂತ. ಬಟ್ ಒಂದಂತು ಕ್ಲಿಯರ್ ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರನೇ ಕ್ಷೇತ್ರ ನೋಡಿಕೊಳ್ಳುತ್ತಾನೆ. ಬೇರೆ ಕಡೆಯಿಂದ ಸ್ಪರ್ಧೆ ಮಾಡಲ್ಲ. ರಾಜ್ಯದ ಬೇರೆ ಬೇರೆ ಕಡೆ ಪ್ರಚಾರಕ್ಕೆ ತೆರಳಲು ನನಗೂ ಅನುಕೂಲವಾಗುತ್ತದೆ. ಯಾವುದಕ್ಕೂ ಇನ್ನು ಸಮಯವಿದೆ ಎಂದು ಹೇಳಿದ್ದಾರೆ.

    ಮೈಸೂರಿನ ಆಪ್ತರ ಮುಂದೆ ಮಾತನಾಡಿರುವ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಟ್ಟಿದ್ದು, ಕೊನೆಯ ಚುನಾಬಣೆಗೆ ತವರು ಜಿಲ್ಲೆಯ ಕರ್ಮಭೂಮಿ ವರುಣಾ ಕ್ಷೇತ್ರದ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಪ್ತರ ಮುಂದೆ ಮನಸ್ಸಿನ ಭಾವನೆ ಬಿಚ್ಚಿಟ್ಟ ಸಿದ್ದರಾಮಯ್ಯ ವರುಣಾ ಪ್ತೀತಿಯನ್ನು ಮುಕ್ತವಾಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಎಸ್‍ಟಿಎಸ್ ಭೇಟಿ

    ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಎಸ್‍ಟಿಎಸ್ ಭೇಟಿ

    – ಸೋಂಕಿತರೊಂದಿಗೆ ನೇರ ಚರ್ಚೆ ನಡೆಸಿದ ಉಸ್ತುವಾರಿ ಸಚಿವರು
    – ಉಪಹಾರ ವ್ಯವಸ್ಥೆ, ಚಿಕಿತ್ಸೆ ಬಗ್ಗೆ ಸೋಂಕಿತರಿಂದಲೇ ಮಾಹಿತಿ 

    ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದ ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಕೋವಿಡ್ ಸೋಂಕಿತರ ಬ್ಲಾಕ್ ಗಳಿಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ನಡೆಸಿದ ಸಚಿವರು, ಔಷಧ ಊಟೋಪಚಾರ ಸೇರಿದಂತೆ ಚಿಕಿತ್ಸೆಯ ವ್ಯವಸ್ಥೆಗಳ ಬಗ್ಗೆ ಖುದ್ದು ಸೋಂಕಿತರಿಂದ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ಧೈರ್ಯದಿಂದ ಎದುರಿಸಿದರೆ ರೋಗವನ್ನು ಅರ್ಧವಾಸಿ ಮಾಡಿಕೊಂಡಂತೆ ಆಗಲಿದೆ. ಸರ್ಕಾರ ಸಹ ನಿಮ್ಮ ಜತೆಗಿದೆ ಎಂಬ ಅಭಯವನ್ನು ಸಚಿವರು ನೀಡಿದರು.

    ಇದೇ ವೇಳೆ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಆರೊ?ಗ್ಯಾಧಿಕಾರಿಗಳಿಗೆ ಸಚಿವರಾದ ಸೋಮಶೇಖರ್ ಅವರು ಸೂಚಿಸಿದರು. ಅಲ್ಲದೆ ಯಾವುದೇ ರೀತಿಯ ಕೊರತೆಗಳಿದ್ದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ಆಸ್ಪತ್ರೆಯಲ್ಲಿ ನಿರ್ವಹಣೆ ಬಹಳ ಅಚ್ಚುಕಟ್ಟಾಗಿದೆ. ಪುರುಷರು ಮಹಿಳೆಯರು ಸೇರಿದಂತೆ ಒಟ್ಟು 4 ಕಡೆ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆಯೂ ಖುದ್ದು ಭೇಟಿ ಕೊಟ್ಟು ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಊಟದ ವ್ಯವಸ್ಥೆ, ಚಿಕಿತ್ಸೆ ವ್ಯವಸ್ಥೆ ಬಗ್ಗೆ ಕೇಳಿದ್ದೇನೆ. ಅವರಿಂದಲೂ ಸಹ ಉತ್ತಮವಾದ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ : 10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    ಮನೋರಂಜನೆಗೂ ಕೊರತೆ ಇಲ್ಲ: 
    ಔಷಧ ವಿತರಣೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ನೋಡಲ್ ಅಧಿಕಾರಿಗಳು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸಂಜೆ ವೇಳೆ ವಾಯುವಿಹಾರ ಮಾಡುವುದು, ಡಾನ್ಸ್ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನರಂಜನಾತ್ಮಕವಾಗಿ ಸಹ ಇಲ್ಲಿ ಸದಾ ಚಟುವಟಿಕೆಯಿಂದ ಇದ್ದಾರೆ. ಸೋಂಕಿತ ಮಹಿಳೆಯರು ತಾವು ಖುಷಿಯಿಂದ ಇರುವುದಾಗಿ ಹೇಳಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

    ಸಂಸದರು, ಆಕ್ಸಿಜನ್ ಮತ್ತು ಔಷಧ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಪ್ರತಾಪ್ ಸಿಂಹ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಪಬ್ಲಿಕ್‍ಟಿವಿ ಜ್ಞಾನದೀವಿಗೆಗೆ ದೇಣಿಗೆಗಳ ಮಹಾಪೂರ- ವಿಜಯೇಂದ್ರ ವತಿಯಿಂದ 136 ವಿದ್ಯಾರ್ಥಿಗಳಿಗೆ ಟ್ಯಾಬ್

    ಪಬ್ಲಿಕ್‍ಟಿವಿ ಜ್ಞಾನದೀವಿಗೆಗೆ ದೇಣಿಗೆಗಳ ಮಹಾಪೂರ- ವಿಜಯೇಂದ್ರ ವತಿಯಿಂದ 136 ವಿದ್ಯಾರ್ಥಿಗಳಿಗೆ ಟ್ಯಾಬ್

    ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಸ್‍ಎಸ್‍ಎಲ್‍ಸಿ ಮಕ್ಕಳ ಭವಿಷ್ಯವನ್ನು ಬೆಳಕಾಗಿಸುವ ಜ್ಞಾನದೀವಿಗೆ ಕಾರ್ಯಕ್ರಮದ ಭಾಗವಾಗಿ ಮೈಸೂರು ತಾಲೂಕಿನ ವರುಣಾದಲ್ಲಿನ ಸರ್ಕಾರಿ ಪ್ರೌಢಶಾಲೆಯ 136 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.

    ಬಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಷಾನದೀವಿಗೆ ಮಹಾ ಅಭಿಯಾನವನ್ನು ನಿಮ್ಮ ಪಬ್ಲಿಕ್ ಟಿವಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಇದಕ್ಕೆ ನೂರಾರು ದಾನಿಗಳು ದೇಣಿಗೆ ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ವಿಜಯೇಂದ್ರ ಅವರು ಕೂಡ ದೇಣಿಗೆ ನೀಡಿದ್ದಾರೆ. ಅವರ ಇಚ್ಛೆಯಂತೆ ನಿನ್ನೆ ವರುಣಾದ ಸರ್ಕಾರಿ ಪ್ರೌಢಶಾಲೆಯಲ್ಲಿ 136 ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು.

    ವರುಣಾದಲ್ಲಿನ ಸರಕಾರಿ ಪ್ರೌಢಶಾಲೆಯ 136 ಮಕ್ಕಳಿಗೆ ಟ್ಯಾಬ್ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಟ್ಯಾಬ್ ವಿತರಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೌಟಿಲ್ಯ ರಘು, ರೋಟರಿ ಮೈಸೂರು ಅಧ್ಯಕ್ಷ ಎಸ್. ಮಂಜೇಶ್ ಕುಮಾರ್ ಮುರುಗೇಶ್ ಈ ವೇಳೆ ಉಪಸ್ಥಿತರಿದ್ದರು.

    ಒಟ್ಟಿನಲ್ಲಿ ಮಕ್ಕಳ ಬಾಳು ಬೆಳಗಲು ಶುರುವಾದ ಈ ಮಹಾಯಜ್ಞಕ್ಕೆ ಸರ್ಕಾರದ ಸಹಕಾರ, ರೋಟರಿ ಸಹಯೋಗ, ದಾನಿಗಳ ನೆರವಿನಿಂದ ಈ ಜ್ಞಾನದೀವಿಗೆ ದೊಡ್ಡ ಬೆಳಕಾಗಿ ಹೊರ ಹೊಮ್ಮುತ್ತಿದೆ. ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಹುದು. ಒಂದು ಟ್ಯಾಬ್ ದರ 3495 ರೂಪಾಯಿ. ಬನ್ನಿ ಸಹಾಯ ಮಾಡೋಣ. ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ.

  • ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ – ಮಗನ ಮಾತು ಕೇಳದೇ ಕೆಟ್ಟೆ ಎಂದ್ರಂತೆ ಸಿದ್ದರಾಮಯ್ಯ

    ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ – ಮಗನ ಮಾತು ಕೇಳದೇ ಕೆಟ್ಟೆ ಎಂದ್ರಂತೆ ಸಿದ್ದರಾಮಯ್ಯ

    ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರದಲ್ಲಿ ಎಡವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನಿಲ್ಲದ ನೋವು ಕಾಡುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

    ಯಾಕಂದರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು 2018 ರ ವಿಧಾನಸಭಾ ಚುನಾವಣೆ ಎದುರಿಸಿದ ಸಿದ್ದರಾಮಯ್ಯರಿಗೆ ಹಿನ್ನಡೆಯ ಸೂಚನೆಯನ್ನು ಪುತ್ರ ಯತೀಂದ್ರ ಮೊದಲೇ ಕೊಟ್ಟಿದ್ದರು. ಈ ಎರಡು ತಪ್ಪು ನೀವು ಮಾಡುತ್ತಿದ್ದೀರಾ ಅದು ಸರಿ ಅಲ್ಲ ಎಂದಿದ್ದರು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದ ಮುಖಂಡರ ಬಳಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಈಗ ವರುಣ ಕ್ಷೇತ್ರದ ಶಾಸಕ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಗೊತ್ತಿಲ್ಲದವರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಡಾ.ಯಂತೀಂದ್ರ ಅವರೇ ಸಿದ್ದರಾಮಯ್ಯ ಅವರನ್ನು ಮೊದಲು ಎಚ್ಚರಿಸಿದ್ದರು ಎನ್ನಲಾಗಿದೆ.

    ಲಿಂಗಾಯತ ಪ್ರತ್ಯೇಕ ಧರ್ಮ ವಿಷಯಕ್ಕೆ ಕೈ ಹಾಕಬೇಡಿ ಅದು ನಿಮ್ಮ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು. ಸುಮ್ಮನಿದ್ದು ಬಿಡಿ ಎಂದು ಪುತ್ರ ಹೇಳಿದ್ದರಂತೆ. ಆಗ ಸಿದ್ದರಾಮಯ್ಯ ಅವರು ರಾಜಕೀಯ ಅನುಭವ ಇಲ್ಲದ ಯತೀಂದ್ರ ಏನೋ ಹೇಳುತ್ತಾನೆ. ನಿನಗೆ ಅದೆಲ್ಲ ಗೊತ್ತಾಗಲ್ಲ ಸುಮ್ಮನಿರು ಎಂದು ಪುತ್ರನಿಗೆ ಹೇಳಿದ್ದರು. ಇನ್ನು ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡುವುದಕ್ಕೂ ಯತೀಂದ್ರ ವಿರೋಧ ವ್ಯಕ್ತಪಡಿಸಿದ್ದರು. ಆಗಲೂ ಅದಕ್ಕೆ ಸಮಜಾಯಿಷಿ ನೀಡಿದ್ದ ಸಿದ್ದರಾಮಯ್ಯ, ರಾಜಕಾರಣದಲ್ಲಿ ಅದೆಲ್ಲಾ ಮಾಡಬೇಕಾಗುತ್ತೆ ನಿನಗೆ ಗೊತ್ತಾಗಲ್ಲ ಎಂದಿದ್ದರೆಂದು ತಿಳಿದು ಬಂದಿದೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯತೀಂದ್ರ, ರಾಜ್ಯದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಎರಡು ಪ್ರಬಲ ಸಮುದಾಯದವರು ಅವರನ್ನ ಎದುರು ಹಾಕಿಕೊಂಡು ಅಧಿಕಾರ ಹಿಡಿಯುವುದು ಕಷ್ಟ. ಅಲ್ಲದೆ ಮೈಸೂರಿನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಇರುವುದು ತಮ್ಮ ಗೆಲುವಿಗೂ ತೊಂದರೆ ಆಗಬಹುದು. ಆದ್ದರಿಂದ ಆ ಎರಡು ವಿಷಯಗಳಲ್ಲಿ ಜಾಗೃತೆಯ ಹೆಜ್ಜೆ ಇಡಿ ಎಂದು ಸಿದ್ದರಾಮಯ್ಯಗೆ ಯತೀಂದ್ರ ಹೇಳಿದ್ದರು ಎನ್ನಲಾಗಿದೆ.

    ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಾಗೂ ಒಕ್ಕಲಿಗರ ಸಿದ್ದರಾಮಯ್ಯ ಬಗೆಗಿನ ಕೋಪ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುವಂತೆ ಮಾಡಿತ್ತು. ರಾಜ್ಯದಲ್ಲಿ ಇದೇ ಕಾರಣಕ್ಕೆ ಕಾಂಗ್ರೆಸ್ ಗೆ ಹಿನ್ನಡೆ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಆಗುವಂತಾಯ್ತು. ತಂದೆಗೆ ಬುದ್ಧಿ ಹೇಳಿದ್ದ ಡಾ.ಯತೀಂದ್ರ ರಾಜಕೀಯ ಅನುಭವದ ಕೊರತೆ ನಡುವೆಯೂ ವರುಣ ಕ್ಷೇತ್ರದಲ್ಲಿ ಮೊದಲ ಯತ್ನದಲ್ಲೇ ಗೆದ್ದು ಶಾಸಕರಾಗಿದ್ದಾರೆ. ಈ ಎಲ್ಲಾ ಘಟನೆಗಳನ್ನ ತಮ್ಮ ಆಪ್ತರ ಬಳಿ ಇತ್ತೀಚೆಗೆ ಸಾಕಷ್ಟು ಬಾರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸಿದ್ದರಾಮಯ್ಯ ಒಳ್ಳೆಯವ್ರು, ಒಳ್ಳೆಯವ್ರು: ಮಹಿಳೆ ಸ್ಪಷ್ಟನೆ

    ಸಿದ್ದರಾಮಯ್ಯ ಒಳ್ಳೆಯವ್ರು, ಒಳ್ಳೆಯವ್ರು: ಮಹಿಳೆ ಸ್ಪಷ್ಟನೆ

    ಮೈಸೂರು: ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ದು, ಇವತ್ತು ಅವರು ನಮ್ಮ ಕ್ಷೇತ್ರಕ್ಕೆ ಬಂದಿದ್ದರು. ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೆ. ಆ ವೇಳೆ ನಾನು ಟೇಬಲ್ ಮೇಲೆ ಕೈ ಇಟ್ಟು ಮಾತನಾಡಿದ್ದೆ. ಆದ್ದರಿಂದ ಅವರಿಗೆ ಕೋಪ ಬಂದಿದೆ ಅಷ್ಟೇ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ತಿಳಿಸಿದ್ದಾರೆ.

    ಮಾಜಿ ಸಿಎಂ ಎದುರು ನಾನು ಆ ರೀತಿ ಕೋಪದಿಂದ ಮಾತನಾಡಬಾರದಿತ್ತು. ಪರಿಣಾಮ ಅವರಿಗೆ ಸಾರ್ವಜನಿಕ ಸಭೆಯಲ್ಲಿ ಅಸಮಾಧಾನ ಆಗಿದೆ. ಅಲ್ಲದೇ ಕ್ಷೇತ್ರದ ಶಾಸಕರು ಬರುತ್ತಿದ್ದ ಬಗ್ಗೆ ನಮಗೆ ಮಾಹಿತಿ ಇರುತ್ತಿರಲಿಲ್ಲ. ಆದ್ದರಿಂದ ಅದನ್ನು ಕೇಳಿದೆ. ನನಗೆ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡದೇ ಇದ್ದದ್ದು ಸಮಸ್ಯೆ ಕಾರಣವಾಗಿದೆ. ಇದಕ್ಕಿಂತ ಹೆಚ್ಚಿನ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ 

    ನಮ್ಮ ಊರಿನ ಹಲವರಿಗೆ ಶಾಸಕರು ಬರುವ ಮಾಹಿತಿ ಲಭಿಸುತ್ತಿರಲಿಲ್ಲ. ಶಾಸಕರ ಕೈ ಕೆಳಗೆ ಕಾರ್ಯನಿರ್ವಹಿಸುತ್ತಿರುವ ಜನರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ಈ ಗೊಂದಲ ನಿರ್ಮಾಣವಾಗಿದೆ. ಆದರೆ ಮಾಜಿ ಸಿಎಂ ಎದುರು ನಾನು ಏರು ಧ್ವನಿಯಲ್ಲಿ ಮಾತನಾಡಿದೆ ಇದು ಅವರ ಅಸಮಾಧಾನಗೊಂಡರು ಅಷ್ಟೇ ಎಂದು ತಿಳಿಸಿದರು. ಇದನ್ನು ಓದಿ: ಸಲುಗೆಯಿಂದ ತಾಳ್ಮೆ ಕಳೆದುಕೊಂಡಿದ್ದಾರೆ- ಅಪ್ಪನ ಪರವಾಗಿ ಯತೀಂದ್ರ ಕ್ಷಮೆಯಾಚನೆ

    ತಮ್ಮ ಕ್ಷೇತ್ರದಲ್ಲಿ ತಾಲೂಕು ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಲ್ಲದೇ ಶಾಸಕರು ಕೂಡ ಚುನಾವಣೆಯ ವೇಳೆ ಭೇಟಿ ನೀಡಿದ ಬಳಿಕ ಮತ್ತೆ ಕೇತ್ರದಲ್ಲಿ ಬಂದಿಲ್ಲ ಎಂದು ಮಹಿಳೆ ಸಭೆಯಲ್ಲಿ ಆರೋಪಿಸಿದ್ದರು. ಈ ವೇಳೆ ಗರಂ ಆದ ಸಿದ್ದರಾಮಯ್ಯ ಅವರು ಮಹಿಳೆಯಿಂದ ಮೈಕ್ ಕಿತ್ತುಕೊಂಡು ಮಾತನಾಡಿದ್ದರು. ಅಲ್ಲದೇ ನಮಗೆ ಮಾಹಿತಿ ನೀಡದೇ ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಸಿದ್ದರಾಮಯ್ಯ ಅವರು ರೌದ್ರವತಾರ ತೋರಿದ್ದರು.

    https://www.youtube.com/watch?v=SYhHfLYL3y8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಿರುಕು ಬಿಟ್ಟ ಕೊಠಡಿ, ಶಿಥಿಲಾವಸ್ಥೆ ಕಟ್ಟಡದಲ್ಲಿ ಪಾಠ- ಸಿದ್ದರಾಮಯ್ಯ ಮಗನ ಕ್ಷೇತ್ರದ ಶಾಲೆಯ ದುಸ್ಥಿತಿ

    ಬಿರುಕು ಬಿಟ್ಟ ಕೊಠಡಿ, ಶಿಥಿಲಾವಸ್ಥೆ ಕಟ್ಟಡದಲ್ಲಿ ಪಾಠ- ಸಿದ್ದರಾಮಯ್ಯ ಮಗನ ಕ್ಷೇತ್ರದ ಶಾಲೆಯ ದುಸ್ಥಿತಿ

    ಮೈಸೂರು: ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಈಗ ಅವರ ಮಗ ಪ್ರತಿನಿಧಿಸುತ್ತಿರೋ ವರುಣಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಗೆ ಬಂದಿದೆ.

    ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಪ್ರತಿನಿಧಿಸಿ ಈಗ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರೋ ವರುಣಾ ವಿಧಾನಸಭಾ ಕ್ಷೇತ್ರದಲ್ಲಿದೆ. ಮಕ್ಕಳು ಪ್ರಾಣದ ಹಂಗು ತೊರೆದು ಇಲ್ಲಿ ಪಾಠ ಪ್ರವಚನಗಳನ್ನ ಕೇಳುವ ದುಃಸ್ಥಿತಿ ಈ ಶಾಲೆಯಲ್ಲಿದೆ. 1ನೇ ತರಗತಿಯಿಂದ 5ನೇ ತರಗತಿವರೆಗೆ ಸುಮಾರು 100 ಮಕ್ಕಳು ಈ ಶಾಲೆಯಲ್ಲಿ ಜೀವ ಕೈಯಲ್ಲಿ ಬಿಗಿ ಹಿಡಿದುಕೊಂಡು ಓದುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    ಯಾವುದೇ ಕ್ಷಣದಲ್ಲಾದರೂ ಈ ಶಾಲೆಯ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. ಶಿಥಿಲವಾಗಿರುವ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಕಟ್ಟಡದಲ್ಲಿ ಭಾರೀ ಬಿರುಕುಗಳು ಇರುವ ಕಾರಣ ಶಾಲೆಯ ಹೊರಭಾಗದ ಜಗುಲಿಯೇ ಕ್ಲಾಸ್ ರೂಂಗಳಾಗಿದೆ. ಬಿಸಿಲು ಬಂದಾಗ ಬಿರುಕು ಬಿಟ್ಟ ಕೊಠಡಿಯಲ್ಲಿ ಮಕ್ಕಳು ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದನ್ನೂ ಓದಿ: ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ಒಂದರ್ಥದಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಜೀವದ ಹಂಗು ತೊರೆದು ಈ ಶಾಲೆಗೆ ಬರುತ್ತಿದ್ದಾರೆ. ಪರ್ಯಾಯ ಕಟ್ಟಡಕ್ಕಾಗಿ ಗ್ರಾಮಸ್ಥರು, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಸ್ಥಳೀಯ ಶಾಸಕರಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತ ಎಸ್‍ಡಿಎಂಸಿ ಸದಸ್ಯ ಎಸ್.ಟಿ.ರವಿ ಆರೋಪಿಸಿದ್ದಾರೆ.

    ಶಾಲಾ ಕಟ್ಟಡದ ಈ ಸ್ಥಿತಿ ಕಂಡು ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹೆದರುವ ಸ್ಥಿತಿ ಬಂದಿದೆ. ಖಾಸಗಿ ಶಾಲೆಗಳ ಹಾವಳಿಯ ಮಧ್ಯೆ ಈ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದ್ದರು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕುಮಾರ್ ಹೇಳಿದ್ದಾರೆ.

    ಈ ಸರ್ಕಾರಿ ಶಾಲೆ ಉಳಿಯಬೇಕು. ಇಲ್ಲಿನ ಮಕ್ಕಳು ನೆಮ್ಮದಿಯಾಗಿ ಪಾಠ ಕೇಳಬೇಕಾದರೆ ತುರ್ತಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರು ಮುಂದಾಗಬೇಕು. ಇಲ್ಲದೆ ಇದ್ದರೆ ಈ ಶಾಲೆ ಮುಚ್ಚಿ ಹೋಗುವುದು ನಿಶ್ಚಿತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮುಂಡೇಶ್ವರಿಯಲ್ಲಿ ಶನಿ, ರಾಹು, ಕೇತು ಸೇರಿ ನನ್ನನ್ನು ಸೋಲಿಸಿದ್ರು ಎಂದ ಸಿದ್ದರಾಮಯ್ಯ!

    ಚಾಮುಂಡೇಶ್ವರಿಯಲ್ಲಿ ಶನಿ, ರಾಹು, ಕೇತು ಸೇರಿ ನನ್ನನ್ನು ಸೋಲಿಸಿದ್ರು ಎಂದ ಸಿದ್ದರಾಮಯ್ಯ!

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಸೋಲಿನ ಶಾಕ್ ಇನ್ನೂ ಮರೆತಂತೆ ಕಾಣಿಸುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿದ್ದಂತೆ ಶನಿ, ರಾಹು, ಕೇತುಗಳೆಲ್ಲಾ ಒಟ್ಟುಗೂಡಿ ನನ್ನನ್ನು ಸೋಲಿಸಿದವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕಹಿಯನ್ನು ಮತ್ತೆ ಹೊರಹಾಕಿದ್ದಾರೆ. ಈ ಮೂಲಕ ತಮ್ಮನ್ನು ಸೋಲಿಸಿದ ಪ್ರತಿಸ್ಪರ್ಧಿಗಳನ್ನು ಶನಿ, ರಾಹು, ಕೇತುಗೆ ಹೋಲಿಸಿದರು.

    ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಮಾತು ಕೊಟ್ಟಿದ್ದರಿಂದ ವರುಣಾ ಕ್ಷೇತ್ರ ಬಿಟ್ಟು ಅಲ್ಲಿಗೆ ಹೋದೆ. ಆದರೆ ನನ್ನ ವಿರುದ್ಧವೇ ಉಳಿದ ರಾಜಕೀಯ ಪಕ್ಷಗಳು ತಂತ್ರ ಹೆಣೆದವು ಎಂದ ಅವರು, ಹೊಟ್ಟೆ ಕಿಚ್ಚಿಗೆ ಔಷಧಿ ಎಲ್ಲಾದರೂ ಉಂಟೇ, ಇದು ಹಾಗೇನೆ ಎಂದು ವ್ಯಂಗ್ಯವಾಡಿದರು.

    ಶಾಪಿಂಗ್ ಮೂಡ್: ಹೊಸಕೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಸಿದ್ದರಾಮಯ್ಯ ಅವರು ನೇರವಾಗಿ ಮೈಸೂರಿಗೆ ಆಗಮಿಸಿದರು. ಶಾಪಿಂಗ್ ಮೂಡ್ ನಲ್ಲಿದ್ದ ಅವರು, ನಗರದ ದೇವರಾಜ ಅರಸು ರಸ್ತೆಗೆ ತೆರಳಿ ಶಾಪಿಂಗ್ ಮಾಡಿದರು. ನೈಕ್ ಮಳಿಗೆಗೆ ಭೇಟಿ ನೀಡಿ, ಮುಂಜಾನೆಯ ವಾಯುವಿಹಾರಕ್ಕೆ ಅಗತ್ಯವಾದ ಬಟ್ಟೆಗಳು ಹಾಗೂ ಶೂ ಖರೀದಿಸಿದರು. ಈ ವೇಳೆ ಪುತ್ರ ಶಾಸಕ ಡಾ.ಯತೀಂದ್ರ ಹಾಗೂ ಸಂಸದ ಧ್ರುವನಾರಾಯಣ ಅವರು ಜೊತೆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಮೈಸೂರು: ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

    ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.

    ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು. ಇದನ್ನು ಓದಿ: ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ 30 ಸಾವಿರ ಅಂತರ ನೀಡಿದ್ದ ನೀವು, ನನ್ನ ಮಗನಿಗೆ ಅದರ ದುಪ್ಪಟ್ಟು ಮತ ನೀಡಿದ್ದೀರಿ. ಒಳ್ಳೆಯ ನಿರ್ಧಾರ ಮಾಡಿದ ನಿಮಗೆ ನನ್ನ ಧನ್ಯವಾದ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಒಳ್ಳೆ ಕೆಲಸ ಮಾಡಿದರೂ ಜನ ಏಕೆ ಆಶೀರ್ವಾದ ಮಾಡಲಿಲ್ಲ ಎಂದು ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಂಡು ಬಳಿಕ ತಮ್ಮ ವ್ಯಂಗ್ಯದ ಶೈಲಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ಕೂಡ ನಡೆಸಿದರು. ಇಷ್ಟೇಲ್ಲ ಆದರೂ ಒಮ್ಮೆಯೂ ಚಾಮುಂಡೇಶ್ವರಿ ಕ್ಷೇತ್ರದ ಹೆಸರು ಹೇಳದೆ ತಮ್ಮ ಸೋಲಿನ ನೋವನ್ನು ಹೇಳಿಕೊಳ್ಳದೇ ತಮ್ಮ ಒಳಗೆ ನುಂಗಿದರು.

     

     

  • ಮಾವನ ಪರ ಪ್ರಚಾರಕ್ಕಿಳಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

    ಮಾವನ ಪರ ಪ್ರಚಾರಕ್ಕಿಳಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ದಿಢೀರನೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾವನ ಪರ ಪ್ರಚಾರ ಮಾಡಲು ಶುರುಮಾಡಿದ್ದಾರೆ.

    ರಾಕೇಶ್ ಸಿದ್ದರಾಮಯ್ಯ ಅವರ ಪತ್ನಿ ಸ್ಮಿತಾ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ರಾಕೇಶ್ ನಿಧನರಾದಗಲೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳಲಿಲ್ಲ. ಈಗ ದಿಢೀರನೆ ಮಾವನ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವುದು ರಾಜಕೀಯದ ಬೇರೆ ಬೇರೆ ಲೆಕ್ಕಾಚಾರಕ್ಕೆ ದಾರಿ ಮಾಡಿ ಕೊಟ್ಟಿದೆ.

    ಸಿಎಂ ಅವರೇ ಹೇಳುವ ಪ್ರಕಾರ ಇದು ಅವರ ಕೊನೆ ಚುನಾವಣೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಸೊಸೆಗೆ ವಹಿಸುವ ಉದ್ದೇಶದಿಂದ ಸೊಸೆಯನ್ನು ನಿಧಾನವಾಗಿ ಕ್ಷೇತ್ರಕ್ಕೆ ಪರಿಚಯಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಮಗ ಯತೀಂದ್ರ ಗೆ ವರುಣಾ ಕ್ಷೇತ್ರ, ಸೊಸೆಗೆ ಚಾಮುಂಡೇಶ್ವರಿ ಕ್ಷೇತ್ರ ಎನ್ನುವ ಆಲೋಚನೆ ಸಿಎಂ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಕಾಣಿಸಿಕೊಳ್ಳದ ಸಿಎಂ ಸೊಸೆ ಏಕಾಏಕಿ ಮಾವನ ಪರ ಮತಯಾಚನೆ ಗೆ ಇಳಿಯೋದಕ್ಕೆ ಸಾಧ್ಯವಿಲ್ಲ. ಮನೆ ಮಂದಿಯನ್ನು ತಮ್ಮ ಗೆಲುವಿಗಾಗಿ ಓಡಾಡಿಸುವ ವ್ಯಕ್ತಿತ್ವ ಸಿಎಂ ಅವರದಲ್ಲ. ಯಾವುದೋ ರಾಜಕೀಯದ ಪ್ಲಾನ್ ನಿಂದಲೆ ಸೊಸೆಯನ್ನು ಸಿಎಂ ಪ್ರಚಾರಕ್ಕೆ ಇಳಿಸಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.