ಬೆಂಗಳೂರು: ನಾನು ಕೋಲಾರ (Kolar) ಮತ್ತು ವರುಣಾದಲ್ಲಿ (Varuna) ನಿಂತುಕೊಳ್ಳುತ್ತೇನೆ ಎಂದಿದ್ದೆ. ಆದರೆ ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಎಂದಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಅವರು ಒಪ್ಪಿದರೆ ಎರಡೂ ಕಡೆಗಳಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಒಂದೇ ಅಪ್ಲಿಕೇಷನ್ ಇದ್ದು ಯಾವುದೇ ಗೊಂದಲವಿಲ್ಲದ ಕ್ಷೇತ್ರಗಳನ್ನು ಹೈಕಮಾಂಡ್ ಅವರು ಒಪ್ಪಿ ಬಿಡುಗಡೆ ಮಾಡಿದ್ದಾರೆ. ಯಾಕೆಂದರೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಆಗಿತ್ತು. ಅಲ್ಲದೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಕೂಡಾ ನಡೆದಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ಏನು ಚರ್ಚೆಗಳಾಗಿದ್ದವೋ ಅದು ಸೆಂಟ್ರಲ್ ಕಮಿಟಿಯಲ್ಲಿ ಚರ್ಚೆಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ – ವಯನಾಡಿನಲ್ಲಿ ಬ್ಲ್ಯಾಕ್ ಡೇ ಆಚರಣೆ
ಆರು ಶಾಸಕರ ಟಿಕೆಟ್ ಬಿಡುಗಡೆ ಆಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಪಟ್ಟಿ ಬಿಡುಗಡೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಅದು ಬಿಡುಗಡೆ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ: ಶರದ್ ಪವಾರ್
ಟಿಕೆಟ್ ಅನೌನ್ಸ್ ಮಾಡಲು ಸರ್ವೆ ರಿಪೋರ್ಟನ್ನು ಮಾನದಂಡವಾಗಿ ಇಟ್ಟುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವೆ ಮಾನದಂಡ ಅಲ್ಲ. ಕಾರ್ಯಕರ್ತರ ಅಭಿಪ್ರಾಯ ಇಲ್ಲಿ ಮುಖ್ಯವಾಗುತ್ತದೆ. ಕಾರ್ಯಾಧ್ಯಕ್ಷರು, ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯಗಳನ್ನು ಕೇಳಿ ಯಾರು ಉತ್ತಮ ಅಭ್ಯರ್ಥಿ ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?
ರಾಹುಲ್ ಗಾಂಧಿ (Rahul Gandhi) ಅನರ್ಹತೆ ಕುರಿತು ಮಾತನಾಡಿದ ಅವರು, ಇದೊಂದು ಕರಾಳದಿನ. ಮಾನನಷ್ಟ ಮೊಕ್ಕದ್ದಮ್ಮೆ (Defamation) ಪ್ರಕರಣದಡಿಯಲ್ಲಿ ಸ್ವತಂತ್ರ ಭಾರತದಲ್ಲಿ ಇಲ್ಲಿಯವರೆಗೆ ಯಾರಿಗೆ 2 ವರ್ಷ ಶಿಕ್ಷೆ ವಿಧಿಸಿದೆ? ಅವರಿಗೆ ರಾಹುಲ್ ಗಾಂಧಿಯವರ ಭಯವಿದೆ. ಅದಕ್ಕೆ ಅವರನ್ನು ಮುಗಿಸಲು ಹೊರಟಿದ್ದಾರೆ. ಅವರ ಹೆಸರು ಮತ್ತು ವ್ಯಕ್ತಿತ್ವವನ್ನು ಹಾಳು ಮಾಡಲು ಬಿಜೆಪಿ (BJP) ಹೊರಟಿದೆ. ಯಾವ ಕೋರ್ಟ್ ಅವರಿಗೆ ಅಪರಾಧದ ಶಿಕ್ಷೆ ನೀಡಿದೆಯೋ ಅದೇ ಕೋರ್ಟ್ ಅವರಿಗೆ ಒಂದು ತಿಂಗಳು ಸಮಯ ಕೂಡ ಕೊಟ್ಟಿದೆ. ತರಾತುರಿಯಲ್ಲಿ ಅವರನ್ನು ಅನರ್ಹ ಮಾಡಬೇಕಾದ ಅಗತ್ಯವೇನಿತ್ತು? ಭಾರತ್ ಜೋಡೋ ಯಾತ್ರೆಯಿಂದ (Bharath Jodo Yatra) ರಾಹುಲ್ ಗಾಂಧಿಯವರಿಗೆ ಒಳ್ಳೆಯ ವರ್ಚಸ್ಸಿತ್ತು. ಈ ಯಶಸ್ಸನ್ನು ಬಿಜೆಪಿಯವರಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಗಾಂಧಿ ಮತ್ತಷ್ಟು ಪಾಪ್ಯುಲರ್ ಆಗುತ್ತಾರೆ. ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ತಿಳಿದುಕೊಂಡಿದ್ದರೆ ಅವರು ಮೂರ್ಖರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚುನಾವಣೆಗೆ ಸ್ಪರ್ಧಿಸಿ ಸೋಲಬೇಕು ಎಂಬುದೇ ನನ್ನ ಆಸೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S. Eshwarappa) ಹೇಳಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತುದಿ ಬುಡ ಇಲ್ಲದ ಬಸ್ ಪ್ರಯಾಣ ಮಾಡಿಕೊಂಡು ಹೋಗುತ್ತಿದ್ದಾರೆ. ವರುಣಾದಿಂದ (Varuna) ಬಾದಾಮಿ, ಬಾದಾಮಿಯಿಂದ (Badami) ಕೋಲಾರ, ಕೋಲಾರದಿಂದ ಕುಷ್ಟಗಿ, ಕುಷ್ಟಗಿಯಿಂದ ವರುಣಾಕ್ಕೆ ಓಡಾಡುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್
ಮೊದಲು ಸಿದ್ದರಾಮಯ್ಯ ಹೈಕಮಾಂಡ್ ಎಲ್ಲಿ ಸೂಚಿಸಿದಲ್ಲಿ ನಿಲ್ಲುತ್ತೇನೆ ಎಂದಿದ್ದರು. ಈಗ ನನ್ನ ಹೆಂಡತಿ ಮಗ ಯಾವ ಕ್ಷೇತ್ರದಲ್ಲಿ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಕ್ಷೇತ್ರವೇ ಸಿಗದ ವಿಪಕ್ಷ ನಾಯಕರು ಬೇರೆಯವರಿಗೆ ಹೇಗೆ ಟಿಕೆಟ್ ಕೊಡುತ್ತಾರೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದರೂ ಅವರ ಪಕ್ಷದವರೇ ಅವರನ್ನು ಸೋಲಿಸುತ್ತಾರೆ. ದಲಿತರು, ಹಿಂದುಳಿದವರು, ಒಕ್ಕಲಿಗರು, ಲಿಂಗಾಯತರು ಈ ಬಾರಿ ಅವರನ್ನು ಸೋಲಿಸುತ್ತಾರೆ. ಅವರ ಅಧಿಕಾರದ ಅವಧಿಯಲ್ಲಿ 20 ಮಂದಿ ಹಿಂದೂ ಯುವಕರ ಕಗ್ಗೊಲೆ ನಡೆದಿದೆ. ಹೀಗಾಗಿ ಮುಸ್ಲಿಮರು ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಗೆ (Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ (Kolara) ಹಾಗೂ ವರುಣಾ (Varuna) ಕ್ಷೇತ್ರಗಳ ಪೈಕಿ ಎಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ ಎಂಬುದು ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದರ ಬೆನ್ನಲ್ಲೆ ಸಿದ್ದರಾಮಯ್ಯ ಈ ಎರಡೂ ಕ್ಷೇತ್ರಗಳನ್ನು ಪಕ್ಕಕ್ಕಿಟ್ಟು ಈಗ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಕೋಲಾರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಗೊಂದಲವಿರುವ ನಡುವೆಯೇ ಸಿದ್ದರಾಮಯ್ಯ ಇದೀಗ ಬಾದಾಮಿ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಶುಕ್ರವಾರ ಬಾದಾಮಿಗೆ ತೆರಳಲಿರುವ ಸಿದ್ದರಾಮಯ್ಯ ಅಲ್ಲಿ 500 ಕೋಟಿ ರೂ. ವೆಚ್ಚದ ಬಾದಾಮಿ-ಕೆರೂರು ಶಾಶ್ವತ ಕುಡಿಯವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸ್ವಕ್ಷೇತ್ರದಲ್ಲಿ ನಡೆಯಲಿರಯವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾಗಿಯಾಗುವುದರಲ್ಲಿ ಯಾವುದೇ ವಿಶೇಷ ಇಲ್ಲ. ಆದರೆ ಈ ಕಾರ್ಯಕ್ರಮದ ಬಳಿಕ ರೋಡ್ ಶೋ (Road Show) ನಡೆಸಲಿದ್ದಾರೆ. ಈ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಭರ್ಜರಿ ರೋಡ್ ಶೋಗೆ ಸಿದ್ಧತೆಗಳನ್ನು ಮಾಡಲಾಗಿದ್ದು, ಸಿದ್ದರಾಮಯ್ಯ ಅವರ ಈ ನಡೆ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್
ಬಾದಾಮಿ ನಗರದ ರಾಮದುರ್ಗ ಕ್ರಾಸ್‌ನಿಂದ ಎಪಿಎಂಸಿ ಆವರಣದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯಿಂದ ಪರೋಕ್ಷವಾಗಿ ಬಾದಾಮಿ ಮತದಾರರ ಮನಸ್ಥಿತಿ ಅಳೆಯಲು ಅವರು ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಈ ಬಾರಿ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಬಳಿಕ ಯು ಟರ್ನ್ ಹೊಡೆದು ವರುಣಾದಲ್ಲಿ ಕಣಕ್ಕಿಳಿಯಲು ಚಿಂತಿಸಿದ್ದರು. ಆದರೆ ಮತ್ತೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಇದರ ನಡುವೆಯೇ ಹಲವು ಕ್ಷೇತ್ರಗಳಿಂದ ಅವರಿಗೆ ಆಹ್ವಾನಗಳೂ ಬರತೊಡಗಿವೆ. ಇದನ್ನೂ ಓದಿ: ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ
ಈ ಬಾರಿ ನಾನು ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ. ಬೆಂಗಳೂರಿನಿಂದ ಬಾದಾಮಿ ಬಹಳ ದೂರದಲ್ಲಿದೆ. ಬೆಂಗಳೂರು ಹತ್ತಿರದಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ನಿಲ್ಲುತ್ತೇನೆ. ಹೀಗಾಗಿ ವರುಣಾ ಇಲ್ಲವೇ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ಕಲಬುರಗಿ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ್ (BR Patil) ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎನ್ನುವ ಮೂಲಕ ಆಳಂದ (Aland) ಕ್ಷೇತ್ರಕ್ಕೆ ಆಹ್ವಾನವಿಟ್ಟಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಳಂದ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಬರಿ ನಾಮೀನೇಷನ್ ಫೈಲ್ ಮಾಡಿ ಹೋದರೆ ಸಾಕು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ವರುಣಾ (Varuna) ಕ್ಷೇತ್ರದಲ್ಲಿ ನಿಲ್ಲಬೇಕು ಎನ್ನುವುದು ನಮ್ಮಲ್ಲರ ಆಶಯವಾಗಿದ್ದು, ಇದು ನನ್ನ ವೈಯಕ್ತಿಕ ಅಭಿಪ್ರಾಯ ಕೂಡ ಆಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದರ ಪ್ರಕಾರ ಹೋಗಬೇಕಾಗುತ್ತದೆ. ಇದೆಲ್ಲ ಊಹಾಪೋಹಾಗಳು, ಇನ್ನೂ ಅಧಿಕೃತವಾಗಿ ಯಾವುದೇ ಪಟ್ಟಿ ಬಿಡುಗಡೆ ಆಗಿಲ್ಲ ಎಂದರು. ಇದನ್ನೂ ಓದಿ:ಶಿವಮೊಗ್ಗ ಡಿಸಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಯುವಕ
ಸಿದ್ದರಾಮಯ್ಯ ಅವರು ರಾಜ್ಯದ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರ ಅಗತ್ಯ ನಮ್ಮ ರಾಜ್ಯಕ್ಕೆ ಇದೆ. ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಈ ಹಿಂದೆ ನಾವೆಲ್ಲಾ ಹೇಳಿದ್ದೆವು. ಜೊತೆಗೆ ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ತಂದೆ ವರುಣಾದಲ್ಲೇ ಸ್ಪರ್ಧೆಸಲಿ ಎಂದು ಹೇಳಿದ್ದಾರೆ. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದು ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ರಾಜುಗೌಡ
ನವದೆಹಲಿ: ಸಿದ್ದರಾಮಯ್ಯ (Siddaramaiah) ಕುರು`ಕ್ಷೇತ್ರ’ಕ್ಕೆ ಹೈಕಮಾಂಡ್ (High Command) ಟ್ವಿಸ್ಟ್ ನೀಡಿದೆ. ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಹೈಕಮಾಂಡ್ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ.
ಸಿದ್ದರಾಮಯ್ಯ ಕೋಲಾರದಿಂದ (Kolara) ಸ್ಪರ್ಧಿಸಲು ಸಿದ್ದರಿದ್ದರೂ ಹೈಕಮಾಂಡ್ ನಾಯಕರು ಮಾತ್ರ ರೆಡ್ ಸಿಗ್ನಲ್ ತೋರಿಸಿದ್ದಾರೆ. ನೀವು ವರುಣಾದಿಂದಲೇ (Varuna) ಸ್ಪರ್ಧಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಟಿ ನರಸೀಪುರದಿಂದ ಸುನೀಲ್ ಬೋಸ್ ಬೇಡ. ಹೆಚ್‍ಸಿ ಮಹದೇವಪ್ಪ ಕಣಕ್ಕಿಳಿಯಲಿ ಎಂದು ಹೈಕಮಾಂಡ್ ಹೇಳಿದೆ. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅನ್ಯಮಸ್ಕರಾಗಿಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದರೆ ನಿಮಗೆ ಈ ರೀತಿ ಹೇಳಿದ್ದು ಯಾರು? ನನ್ನ ಬಗ್ಗೆ ಚರ್ಚೆಯೇ ನಡೆದಿಲ್ಲ. ವರುಣಾದಲ್ಲಿ ಪುತ್ರ ಯತೀಂದ್ರ ನಿಲ್ಲುತ್ತಾನೆ. ಹೈಕಮಾಂಡ್ ಹೇಳಿದ ಕಡೆ ನಾನು ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಬೆನ್ನಲ್ಲೇ ಕೋಲಾರ ಪ್ರವಾಸ ರದ್ದು ಮಾಡಿದ ಸಿದ್ದರಾಮಯ್ಯ ತುರ್ತಾಗಿ ಕೋಲಾರ ನಾಯಕರನ್ನು ಮನೆಗೆ ಕರೆಸಿ ಗೌಪ್ಯ ಸಭೆ ಮಾಡಿದ್ದಾರೆ. ಆದರೆ ಈ ಸಭೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಶ್ರೀನಿವಾಸಗೌಡ ಸೇರಿ ಕೋಲಾರದ ಪ್ರಮುಖರೇ ಗೈರಾಗಿದ್ದರು. ಈ ಮೂಲಕ ಹೈಕಮಾಂಡ್ ತೀರ್ಮಾನವನ್ನು ವಿರೋಧಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ಹೇಳಿದ್ದೇನು?
ಕೋಲಾರದಲ್ಲಿ ನಡೆಸಿದ ಸರ್ವೇ ವರದಿ ನಿಮಗೆ ಪೂರಕವಾಗಿಲ್ಲ. ಸುಲಭವಾಗಿ ಗೆಲುವು ದಕ್ಕುವ ಸ್ಥಿತಿ ಇಲ್ಲ. ಕೋಲಾರ ನಾಯಕರ ಒಳ ಜಗಳ ನಿಮಗೆ ಸಮಸ್ಯೆಯಾಗುವ ಸಾಧ್ಯತೆ ಇದ್ದು ಕಠಿಣ ಶ್ರಮದ ಅಗತ್ಯವಿದೆ. ನಿಮ್ಮ ಪರ ಇಲ್ಲಿ ಕೆಲಸ ಮಾಡಲು ಗಟ್ಟಿ ನಾಯಕರ ಅಗತ್ಯವಿದೆ. ಆದರೆ ಕೋಲಾರದಲ್ಲಿ ಗಟ್ಟಿ ನಾಯಕರು ಇಲ್ಲ.
ಕೋಲಾರ ನಗರದಲ್ಲಿ ನಿಮ್ಮ ಪರ ಅಲೆ ಇದ್ದರೆ ಗ್ರಾಮೀಣ ಭಾಗದಲ್ಲಿ ಆ ಅಲೆ ಇಲ್ಲ. ಹಳ್ಳಿ ಭಾಗದಲ್ಲಿ ಜೆಡಿಎಸ್, ಬಿಜೆಪಿ ಪರ ಅಲೆಯಿದೆ. ಒಂದು ವೇಳೆ ನೀವು ಕೋಲಾರದಿಂದ ಸ್ಪರ್ಧಿಸಿದರೆ ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಕಟ್ಟಿ ಹಾಕಲು ಪ್ರಯತ್ನಿಸಬಹುದು. ಆಗ ನೀವು 15, 20 ದಿನ ಅಲ್ಲೇ ಪ್ರಚಾರ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ಸೇವೆ ಅಗತ್ಯವಾಗಿದೆ. ಈ ಕಾರಣಕ್ಕೆ ನೀವು ಕೋಲಾರ ಬದಲು ವರುಣಾದಿಂದಲೇ ಕಣಕ್ಕಿಳಿಯಬೇಕು. ಕೊನೆಯ ಚುನಾವಣೆಯ ಸಮಯದಲ್ಲಿ ಜಾಸ್ತಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ನಿಮ್ಮ ಪುತ್ರ ಯತೀಂದ್ರಗೆ ಮುಂದೆ ಸೂಕ್ತ ಅವಕಾಶ ನೀಡುತ್ತೇವೆ.
ಮೈಸೂರು: ವರುಣಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಒಬ್ಬರೇ ಅರ್ಜಿ ಹಾಕಿದ್ದಾರೆ. ಅವರನ್ನು 50 ಸಾವಿರ ಮತಗಳಿಂದ ಗೆಲ್ಲಿಸಿ ಎಂದು ಕಾರ್ಯಕರ್ತರು ಹಾಗೂ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಮನವಿ ಮಾಡಿದರು. ಆ ಮೂಲಕ ವರುಣಾ (Varuna) ಕ್ಷೇತ್ರದಲ್ಲಿ ಯತೀಂದ್ರ ಅವರಿಗೆ ಟಿಕೆಟ್ ಎಂಬುದನ್ನು ತಿಳಿಸಿದರು.
ಯತೀಂದ್ರ ಸಿದ್ದರಾಮಯ್ಯ ಚೆನ್ನಾಗಿ ಮಾತನಾಡಿದ್ದಾರೆ. ಅವರಷ್ಟು ನಾನು ಮಾತನಾಡಲು ಸಾಧ್ಯವಿಲ್ಲ. ಬಹಳ ಅನುಭವ ಇರುವ ರೀತಿ ಮಾತನಾಡಿದರು. ಯತೀಂದ್ರ ಸಿದ್ದರಾಮಯ್ಯ ನಿಮ್ಮ ಶಾಸಕರಾಗಿರುವುದು ಭಾಗ್ಯ. ಎಲ್ಲರ ಕೈ ಬಲಪಡಿಸಲು ನಾನು ಬಂದಿದ್ದೇನೆ. ಸಿದ್ದರಾಮಯ್ಯ ಎಲ್ಲಿಗೆ ಬೇಕಾದ್ರೂ ಹೋಗಿ ನಿಂತುಕೊಳ್ಳಲು ಶಕ್ತಿ ಕೊಟ್ಟಿದ್ದು ನೀವು. ನಿಮ್ಮ ಸಹಾಯ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: LPG ಬೆಲೆ 10 ಸಾವಿರ, ಹೋಗ್ರಪ್ಪ ಹೋಗ್ರಿ ಪಾಕಿಗೆ ಹೋಗಿ: ಯತ್ನಾಳ್
ಉತ್ತರ ಕರ್ನಾಟದಲ್ಲಿ ಸಿದ್ದರಾಮಯ್ಯ, ದಕ್ಷಿಣ ಕರ್ನಾಟಕದಲ್ಲಿ ನಾನು ಪ್ರಚಾರ ಮಾಡುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ನಾನು ಆ ಭಾಗಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ಯಡಿಯೂರಪ್ಪ ಸೀರೆ ಮತ್ತು ಸೈಕಲ್ ಬಿಟ್ರೆ ಬೇರೆ ಏನು ಕೊಡಲಿಲ್ಲ. ಲಂಚವಿಲ್ಲದೆ ಈ ಸರ್ಕಾರದಲ್ಲಿ ಯಾವ ಕೆಲಸ ಆಗುತ್ತಿಲ್ಲ. ಸಿದ್ದರಾಮಯ್ಯ, ಯತೀಂದ್ರ, ಧ್ರುವನಾರಾಯಣ ಅವರ ಕೈ ಬಲಪಡಿಸಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ. ಎರಡು ಸಾವಿರ ಬರಲಿಲ್ಲ ಅಂದ್ರೆ ನಿಮ್ಮ ಊರಿಗೆ ನಾನು, ಸಿದ್ದರಾಮಯ್ಯ ವೋಟ್ ಕೇಳಲು ಬರಲ್ಲ. ವರುಣಾ ಕ್ಷೇತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರನ್ನ 50 ಸಾವಿರ ಮತಗಳಿಂದ ಗೆಲ್ಲಿಸಿ ಎಂದು ಕೇಳಿಕೊಂಡರು.
ಈ ಕ್ಷೇತ್ರಕ್ಕೆ ಯತೀಂದ್ರ ಒಬ್ಬರೇ ಅರ್ಜಿ ಹಾಕಿದ್ದಾರೆ. ಆದರೂ ನಮ್ಮ ತಂದೆ ಬಂದು ಸ್ಪರ್ಧೆ ಮಾಡಲಿ ಎಂದರು. ಬಹಳ ಸಂತೋಷದಿಂದ ವರುಣಾ ಕ್ಷೇತ್ರಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಬಂದಿದ್ದೆ. ಟಿ.ನರಸೀಪುರ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನ ಮಾಡಿದ್ದಾರೆ. ಲೋಕೋಪಯೋಗಿ ಸಚಿವರಾಗಿ ಅತ್ಯತ್ತಮವಾದ ಕೆಲಸ ಮಾಡಿದ್ದಾರೆ. ನಮ್ಮ ನಾಯಕರು, ಅವರು ಕೈ ಕೆಳಗೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಕೆಲಸವನ್ನ ರಾಷ್ಟ್ರಮಟ್ಟದಲ್ಲಿ ಗುರುತು ಮಾಡುವ ಕೆಲಸ ಮಾಡಿದ್ದೀರಾ. ನಿಮಗೆ ಕೋಟಿ ನಮಸ್ಕಾರಗಳು ಎಂದರು. ಇದನ್ನೂ ಓದಿ: ಅಂದು ಬಡವರು ಡಿ.ಕೆ.ಶಿವಕುಮಾರ್ ಕಣ್ಣಿಗೆ ಕಾಣಲಿಲ್ಲವಾ – ಪ್ರತಾಪ್ ಸಿಂಹ ಪ್ರಶ್ನೆ
ದೇವರು ವರ ಹಾಗೂ ಶಾಪವನ್ನು ಕೊಡುವುದಿಲ್ಲ. ಆದರೆ ಅವಕಾಶ ಕೊಡುತ್ತಾನೆ, ಅದನ್ನು ಉಪಯೋಗಿಸಕೊಳ್ಳಲು ಬರಬೇಕು. ನಿಮ್ಮ ಆಶೀರ್ವಾದದಿಂದ ರಾಜ್ಯಕ್ಕೆ ಸಿಎಂ ಆಗಿದ್ದರು. ನಮ್ಮ ಸಿದ್ರಾಮಣ್ಣ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು 7 ಭಾರಿ ಗೆದ್ದಿದ್ದೇನೆ, ಸಿದ್ದರಾಮಯ್ಯ (Siddaramaiah) ಅವರು ಸಹ 7 ಸಲ ಗೆದಿದ್ದಾರೆ. ಅವರಿಗೆ ದೊಡ್ಡ ಅವಕಾಶ ಸಿಕ್ಕಿತು. ಗೆದ್ದಾಗ ಒಳ್ಳೆಯ ಕೆಲಸಗಳನ್ನ ಮಾಡಬೇಕು. ಮೈಸೂರು ಜಿಲ್ಲೆಯಲ್ಲಿ ದೇವರಾಜ ಅರಸ ಅವರನ್ನ ನೆನಪು ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಅಪ್ಪ ಸಿದ್ದರಾಮಯ್ಯ (Siddaramaiah) ಕೋಲಾರವೇ (Kolara) ಫಿಕ್ಸ್ ಅಂತಾರೆ. ಆದ್ರೆ ಪುತ್ರ ಯತೀಂದ್ರ (Yathindra Siddaramaiah) ವರುಣಾ (Varuna) ಕೂಡ ಲಿಸ್ಟ್‌ನಲ್ಲಿದೆ ಅಂತಾರೆ. ಸಿದ್ದರಾಮಯ್ಯ ಎರಡು ದೋಣಿ ಯಾನದಲ್ಲಿ ಯಾರಿಗೆ ಟಕ್ಕರ್, ಯಾರಗ್ತಾರೆ ಮಕ್ಕರ್ ಎಂಬ ಕುತೂಹಲ ಗರಿಗೆದರಿದೆ. ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ಅಪ್ಪ ಮಕ್ಕಳ ಮಾತಿನ ಅರ್ಥ ಹುಡುಕುತ್ತಾ ವಿರೋಧಿ ಪಾಳಯ ಗೊಂದಲದಲ್ಲಿದೆ.
ಈ ನಡುವೆ ಕೋಲಾರದಲ್ಲಿ ಸಿದ್ದು ಸ್ಪರ್ಧೆ ಇಲ್ಲ ಎಂಬ ಯಡಿಯೂರಪ್ಪ ಮಾತೇಕೆ ಎಂಬ ಹೊಸ ಚರ್ಚೆ ಶುರುವಾಗಿದೆ. ಸಿದ್ದು ವಿಚಾರದಲ್ಲಿ ಯಡಿಯೂರಪ್ಪ ಕಂಡಿದ್ದೇನು? ಬಿಎಸ್‌ವೈಗೇಕೆ (Yediyurappa) ಗೊತ್ತಾಯ್ತು ಆ ಗುಟ್ಟು ಸಿದ್ದು ಗುಟ್ಟಲ್ಲಿ ವಿಜಯೇಂದ್ರ (Vijayendra) ಭವಿಷ್ಯ ಅಡಗಿದೆಯಾ? ಎಂಬ ಹೊಸ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಹೆಚ್ಚು ಸೇಲ್ ಆಗ್ತಿವೆ. ರಾಜ್ಯ ರಾಜಕಾರಣದಲ್ಲಿ ಮಾಸ್ ಲೀಡರ್ ಸ್ಪರ್ಧೆ ವಿಚಾರದಲ್ಲಿ ಮೆಗಾ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪಕ್ಷ ತೊರೆಯುವುದು ಗ್ಯಾರಂಟಿ – ಸ್ಫೋಟಕ ಆಡಿಯೋ ವೈರಲ್
ಫೆಬ್ರವರಿ ಸರ್ವೇ ಆಧರಿಸಿಯೇ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ಸ್ಪಷ್ಟ ನಿರ್ಧಾರ ಸಾಧ್ಯತೆ ಇದೆ. ವಿಜಯೇಂದ್ರ ಭವಿಷ್ಯ ಸಿದ್ದರಾಮಯ್ಯ ಸ್ಪರ್ಧೆಯ ಮೇಲೆ ನಿಂತಿದೆ ಎಂಬ ಚರ್ಚೆಯೂ ಇದೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ವಿಜಯೇಂದ್ರ ಶಿಕಾರಿಪುರದಲ್ಲಿ ಮಾತ್ರ ಸ್ಪರ್ಧೆ ಮಾಡಬಹುದು. ಆದರೆ ಸಿದ್ದು ವರುಣಾದಲ್ಲಿ ಸ್ಪರ್ಧೆ ಮಾಡಿದ್ರೆ, ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಜೆಪಿ (BJP) ಹೈಕಮಾಂಡ್ ನಿರ್ಧಾರ ಸಾಧ್ಯತೆ ತೆಗೆದುಕೊಳ್ಳಬಹುದು.
ಹಾಗಾಗಿ ಪುತ್ರನ ಭವಿಷ್ಯದ ಬಗ್ಗೆ ಯೋಚಿಸಿ, ಸಿದ್ದು ವಿರುದ್ಧ ಯಡಿಯೂರಪ್ಪ ಅಸ್ತ್ರ ಪ್ರಯೋಗಿಸಿರಬಹುದು. ಸಿದ್ದರಾಮಯ್ಯ ರಾಜಕೀಯ ಒಳಸುಳಿವನ್ನ ಅರಿತು ಒಳಗುಟ್ಟು ಗೊತ್ತಾಗಿ ಹೇಳಿಕೆ ಕೊಟ್ಟಿರಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಇದನ್ನೂ ಓದಿ: ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನಾನೇ ಅಭ್ಯರ್ಥಿ: ಭವಾನಿ ರೇವಣ್ಣ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಈ ಬಾರಿ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಸ್ಪರ್ಧಿಸಿದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಐದು ದಿನಗಳ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ (Siddaramaiah) ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಕೋಲಾರದಿಂದ (Kolara) ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಹೈಕಮಾಂಡ್ ಒಪ್ಪಿಗೆ ಕೊಟ್ಟರೇ, ಟಿಕೆಟ್ ಕೊಟ್ಟರೇ ಎಂಬ ಮಾತನ್ನು ಸಿದ್ದರಾಮಯ್ಯ ಪದೇ ಪದೇ ಒತ್ತಿ ಹೇಳಿದ್ದರು. ಈ ವಿಚಾರ ಅದೇ ದಿನ ಚರ್ಚೆಗೆ ಗ್ರಾಸವಾಗಿತ್ತು. ಈಗ ಚಿಕ್ಕಮ್ಮದೇವಿಯ ದೈವವಾಣಿ ವೈರಲ್ ಆದ ನಂತರ ಈ ಮಾತಿಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ.
ಕೋಲಾರ ಕ್ಷೇತ್ರ ಘೋಷಣೆ ಅಂತಿಮವಲ್ಲ, ವರುಣಾ (Varuna) ಕ್ಷೇತ್ರಕ್ಕೂ ಬರಬಹುದು. ಎಲ್ಲಾ ವಿರೋಧಿಗಳು ಒಟ್ಟಾಗಿ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಅಪಾಯವಿದೆ. ವರುಣಾದಲ್ಲಿ ಸ್ಪರ್ಧಿಸಲಿ ಎಂಬುದು ನನ್ನ ಬಯಕೆ ಎಂದು ಯತೀಂದ್ರ ಹೇಳಿದ್ದಾರೆ.
ಸಿದ್ದು `ಡಬಲ್’ ತಂತ್ರಕ್ಕೆ ಕಾರಣಗಳೇನು?
ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್, ಬಿಜೆಪಿ ಪಣ ತೊಟ್ಟಿದ್ದು ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಜೆಡಿಎಸ್, ಬಿಜೆಪಿ ಒಳ ಮೈತ್ರಿ ಮಾಡಿಕೊಂಡು ಹೊಡೆತ ನೀಡುವ ಭಯ ಸಿದ್ದರಾಮಯ್ಯಗೆ ಎದುರಾಗಿದೆ. ಕೋಲಾರ ಮತ್ತೊಂದು ಚಾಮುಂಡೇಶ್ವರಿ ಉಪ ಸಮರದಂತಾಗುವ ಭೀತಿ ಸೃಷ್ಟಿಯಾಗಿದೆ.
ಕೋಲಾರ ಜಿಲ್ಲಾ ಕಾಂಗ್ರೆಸ್‍ನಲ್ಲಿರಮೇಶ್‍ಕುಮಾರ್, ಕೆಹೆಚ್ ಮುನಿಯಪ್ಪ ಮಧ್ಯೆ ವೈಮನಸ್ಸು ಇಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ ಶಮನ ಬಗೆ ಹರಿದಿಲ್ಲ ಎಂಬ ಮಾತು ವ್ಯಕ್ತವಾಗುತ್ತಿದೆ. ಒಂದು ವೇಳೆ ಚುನಾವಣೆಯ ವೇಳೆ ಶಮನ ಬಗೆ ಹರಿಯದೇ ಇದ್ದರೆ ಸಿದ್ದರಾಮಯ್ಯನವರಿಗೆ ಇದೇ ತಿರುಗುಬಾಣವಾಗುವ ಸಾಧ್ಯತೆಯಿದೆ.
ಕೋಲಾರದಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಬರುತ್ತದೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಕೋಲಾರ ಜೊತೆಗೆ ವರುಣಾ ಅಥವಾ ಬಾದಾಮಿಯಲ್ಲಿ ನಿಲ್ಲಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಂದು ಕಡೆ ನಿಂತರೆ ವಿರೋಧ ಜಾಸ್ತಿ ಇರುತ್ತದೆ. ಎರಡು ಕಡೆ ನಿಂತರೆ ವಿರೋಧ ಕಡಿಮೆ ಇರುತ್ತದೆ. ಈ ಕಾರಣಕ್ಕೆ ವಿರೋಧಿಗಳ ತಂತ್ರಗಾರಿಕೆ ಹತ್ತಿಕ್ಕಲು ಸಿದ್ದರಾಮಯ್ಯ `ಕೋಲಾರ’ ತಂತ್ರ ಹೂಡಿದ್ದಾರೆ. ಈ ಮೂಲಕ ವರುಣಾದಲ್ಲಿ ವಿರೋಧಿಗಳು ಒಗ್ಗೂಡುವುದನ್ನು ತಪ್ಪಿಸಲು ಸಿದ್ದು ಈ ಪ್ಲಾನ್ ಮಾಡಿರಬಹುದು ಎಂಬ ಮಾತು ಕೇಳಿ ಬಂದಿದೆ.
ಕಳೆದ ಬಾರಿ ಏನಾಗಿತ್ತು?
ವರುಣಾ ಕ್ಷೇತ್ರವನ್ನು ಯತೀಂದ್ರ ಅವರಿಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ ಬಾದಾಮಿಯಲ್ಲಿ ಶ್ರೀರಾಮುಲು ಭಾರೀ ಸ್ಪರ್ಧೆ ನೀಡಿದ್ದರೂ ಸಿದ್ದರಾಮಯ್ಯ 1,696 ಮತಗಳ ಅಂತರದಿಂದ ಜಯಗಳಿಸಿದ್ದರು.
Live Tv
[brid partner=56869869 player=32851 video=960834 autoplay=true]
ರಾಜ್ಯದ ಹಲವು ಕ್ಷೇತ್ರಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಾಯಿಸ್ತಾ ಇದ್ದಾರೆ. ನಾನು ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಎಲ್ಲಿ ಸ್ಪರ್ಧಿಸಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರ ಸೂಚನೆಯನ್ನು ನಾನು ಪಾಲಿಸ್ತೇನೆ ಅಷ್ಟೇ ಎಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳುವುದನ್ನು ಗಮನಿಸಿದ್ದೇವೆ. ಅಂದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಅವರು ಯಾವ ಕ್ಷೇತ್ರದಿಂದ ಸ್ಪರ್ದಿಸ್ತಾರೆ ಎನ್ನುವುದು ಖಚಿತವಾಗಿಲ್ಲ. ಇನ್ನೂ ಅವರು ಕ್ಷೇತ್ರದ ಹುಡುಕಾಟದಲ್ಲೇ ಇದ್ದಾರೆ.
ಇದನ್ನೇ ಅಸ್ತ್ರ ಮಾಡಿಕೊಂಡು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಕಾಲೆಳೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಾಕಾಂಕ್ಷಿಗಳು ಒಂದು ಕಡೆ ಜೋರಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ, ಕಾಂಗ್ರೆಸ್ ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ತರಬೇಕೆಂದು ಹೊರಟಿರುವ ಸಿದ್ದರಾಮಯ್ಯ ಅವರೇ ಕ್ಷೇತ್ರ ಹುಡುಕುತ್ತಿರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್ ಮಾಡೋದೇಕೆ?
ಮೈಸೂರಿನಲ್ಲಿ ಉಪನ್ಯಾಸಕರಾಗಿ, ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ರೈತ ಚಳುವಳಿಯ ನೇತಾರ ಪ್ರೊ.ನಂಜುಂಡಸ್ವಾಮಿ ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯಕ್ಕೆ ಸಿದ್ದರಾಮಯ್ಯ ಧುಮುಕಿದ್ರು. 1983 ರಿಂದ ಸತತವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿರುವ ಸಿದ್ದರಾಮಯ್ಯ, ರಾಜಕೀಯದಲ್ಲಿ ಏಳು-ಬೀಳುಗಳನ್ನು ಕಂಡಿದ್ದಾರೆ. 10 ಸಲ ವಿಧಾನಸಭೆಗೆ ಸ್ಪರ್ಧಿಸಿ 8 ಬಾರಿ ಗೆದ್ದಿರುವ ಅವರು, ಒಂದು ಸಲ 1991 ರಲ್ಲಿ ಕೊಪ್ಪಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ವಿರುದ್ಧ ಸೋತಿದ್ದಾರೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ, ಅತ್ಯಂತ ಹೆಚ್ಚು ಬಾರಿ ಹಣಕಾಸು ಖಾತೆ ಹೊಂದಿ ಬಜೆಟ್ ಮಂಡಿಸಿ, ಪ್ರತಿಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವರು, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಹೊಂದಿದ್ದಾರೆ. 2013 ರಿಂದ 2018 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಗಳಿಸಿದ ಜನಪ್ರಿಯತೆ ಅಪಾರವಾದದ್ದು.
ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ವಿಚಾರದಲ್ಲಿ ಮಾಡಿದ ಎಡವಟ್ಟು ಇಂದು ಅವರು ಕ್ಷೇತ್ರ ಹುಡುಕಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಸ್ವಕ್ಷೇತ್ರ ವರುಣಾವನ್ನು ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ತಮ್ಮ ಮೂಲ ಕ್ಷೇತ್ರವಾದ ಪಕ್ಕದ ಚಾಮುಂಡೇಶ್ವರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. ಕೊನೆಯ ಕ್ಷಣದಲ್ಲಿ ಸೋಲುವ ಸುಳಿವರಿತ ಸಿದ್ದರಾಮಯ್ಯ, ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ದೂರದ ಬದಾಮಿ ಕ್ಷೇತ್ರದಲ್ಲೂ ಸ್ಪರ್ದಿಸಬೇಕಾಯಿತು. ಹಾಲಿ ಸಿಎಂ ಆಗಿದ್ದುಕೊಂಡು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯ, ಬದಾಮಿ ಕ್ಷೇತ್ರದಲ್ಲಿ ಅದೃಷ್ಟವಶಾತ್ ಅಲ್ಪಮತಗಳಿಂದ ಗೆದ್ದು ಮರ್ಯಾದೆ ಉಳಿಸಿಕೊಂಡರು. ಪಕ್ಷವನ್ನೂ ಅಧಿಕಾರಕ್ಕೆ ತರಲಾಗದ ಅವರು, ಬದಾಮಿಯಲ್ಲೂ ಸೋತಿದ್ರೆ ರಾಜಕೀಯ ಭವಿಷ್ಯವೇ ಕೊನೆಗೊಳ್ಳುವ ಸಾಧ್ಯತೆ ಇತ್ತು. ಇದನ್ನೂ ಓದಿ: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?
ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಹೈಕಮಾಂಡ್ ಸೂಚನೆಗೆ ಕಟ್ಟು ಬಿದ್ದು, ಒಲ್ಲದ ಮನಸ್ಸಿನಿಂದ ಜೆಡಿಎಸ್‌ಗೆ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣರಾದರು. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಪರೋಕ್ಷ ಆಡಳಿತ ನಡೆಸುವ ಹಾದಿಯಲ್ಲಿಯೇ, ತಮ್ಮ ಆಪ್ತ ಬಳಗದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ಸರ್ಕಾರ ಪತನಗೊಳ್ಳುವಂತಾಯಿತು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮತ್ತೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಈ ಬಾರಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ಹೊತ್ತಿದ್ದಾರೆ. ಹೀಗಿರುವಾಗ, ಮುಂದಿನ ಚುನಾವಣೆಯಲ್ಲಿ ಅವರ ಸ್ಪರ್ಧೆಯ ಬಗ್ಗೆ ಗೊಂದಲ ಮಾತ್ರ ಇನ್ನೂ ಮುಂದುವರಿದಿದೆ.
ಪುತ್ರ, ಶಾಸಕ ಡಾ.ಯತೀಂದ್ರ ಅಂತೂ, ವರುಣಾ (Varuna) ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ತಂದೆಗೆ ಒತ್ತಾಯಿಸುತ್ತಿದ್ದಾರೆ. ಕೋಲಾರದ (Kolara) ಮುಖಂಡರು, ಕಾರ್ಯಕರ್ತರು ಅಲ್ಲಿ ಸ್ಪರ್ಧಿಸುವಂತೆ ದುಂಬಾಲು ಬಿದ್ದಿದ್ದಾರೆ. ಹಿಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವ ಒತ್ತಾಯ ಇದೆ. ಕೆಲವರಂತೂ ಸಿದ್ದರಾಮಯ್ಯ ಎಲ್ಲೂ ಸ್ಪರ್ಧಿಸದೇ ರಾಜ್ಯಾದ್ಯಂತ ಸುತ್ತಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಂದಾಗಿ ಪಕ್ಷವನ್ನು ಅಧಿಕಾರಕ್ಕೆ ತರಲಿ ಅಂತ ಸಲಹೆ ನೀಡಿದ್ದಾರೆ. ಆದರೆ ಜನರ ನಾಡಿಮಿಡಿತ ಏನು ಎಂದು ಅಧ್ಯಯನ ಮಾಡುತ್ತಿರುವ ಸಿದ್ದರಾಮಯ್ಯ, ಇನ್ನೂ ಬಹಿರಂಗವಾಗಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಗುಟ್ಟು ಬಿಟ್ಟುಕೊಡದ ಅವರ ತಂತ್ರಗಾರಿಕೆ ಏನು ಎಂಬುದು ನಿಗೂಢವಾಗಿದೆ. ಆದರೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಟ್ಟಿರುವ ಮಾಸ್ ಲೀಡರ್, ತಾವು ಗೆಲ್ಲಲು ಸುರಕ್ಷಿತ ಕ್ಷೇತ್ರ ಯಾವುದು ಎಂಬ ಗೊಂದಲದಲ್ಲಿ ಇರುವುದು ಮಾತ್ರ ವಿಪರ್ಯಾಸ. ಬೇರೆಯವರನ್ನು ಗೆಲ್ಲಿಸುವ ಈ ಮಾಜಿ ಸಿಎಂ, ತಮ್ಮನ್ನು ಗೆಲ್ಲಿಸುವವರು ಯಾರು ಎಂಬ ಚಿಂತೆಯಲ್ಲಿ ಇದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ
ಸದ್ಯದ ಪರಿಸ್ಥಿಯಲ್ಲಿ ವರುಣಾ ಅವರಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ. ಅವರಿಗೆ ಇರುವ ಜನಪ್ರಿಯತೆಗೆ ಕೋಲಾರದಲ್ಲಿ ಗೆಲ್ಲುವುದು ಕಷ್ಟವೇನೂ ಅಲ್ಲ. ನನ್ನನ್ನು ಸೋಲಿಸಲು ತುಂಬಾ ಜನ ಕಾದುಕುಳಿತಿದ್ದಾರೆ ಎಂಬ ಅವರ ಇತ್ತೀಚಿನ ಹೇಳಿಕೆಯ ಮರ್ಮ ಏನೆಂದು ಗೊತ್ತಿರುವ ವಿಷಯ. ಇದು ಸಿದ್ದರಾಮಯ್ಯ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದೆ. ಹಿತಶತ್ತುಗಳ ಕಾಟ, ರಾಜಕೀಯ ವಿರೋಧಿಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಯ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿರುವ ಸಿದ್ದರಾಮಯ್ಯ ಈ ಬಾರಿ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.
ಅಂತಿಮವಾಗಿ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಡಕ್ಕೆ ಜೋತು ಬಿದ್ದು ಕೋಲಾರದಲ್ಲಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು. ಒಟ್ಟಿನಲ್ಲಿ ಹಲವು ಸಲ ಇದು ತಮ್ಮ ಕೊನೆಯ ಚುನಾವಣೆ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿಯಂತೂ ಖಂಡಿತವಾಗಿ ಕೊನೆಯ ಚುನಾವಣೆ. ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿ, ಪಕ್ಷವನ್ನು ಅಧಿಕಾರಕ್ಕೆ ತಂದು ಸಿದ್ದರಾಮಯ್ಯ ದಡ ಸೇರುತ್ತಾರೆ ಎಂಬುದೇ ಅವರ ಬೆಂಬಲಿಗರ ನಿರೀಕ್ಷೆ.
Live Tv
[brid partner=56869869 player=32851 video=960834 autoplay=true]