Tag: varuna

  • ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದರೆ ಆದೇಶ ಪಾಲಿಸಲು ನಾನು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನುಡಿದಿದ್ದಾರೆ

    ಲೋಕಸಭೆಗೆ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕೆಂದು ಬೆಂಬಲಿಗರು ಒತ್ತಾಯಿಸಿರುವ ವಿಚಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ, ತಂದೆಯವರಾಗಲಿ ಚರ್ಚೆ ನಡೆಸಿಲ್ಲ. ಪಕ್ಷ ಸೂಚಿಸಿದ್ರೆ ಆದೇಶ ಪಾಲಿಸಲು ಸಿದ್ಧ ಎಂದಿದ್ದಾರೆ.

    ಚುನಾವಣೆಗೆ ಇನ್ನೂ 8 ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಮೀಪ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ. ಆದ್ದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದ್ರೆ ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್

    ಸರ್ಕಾರಿ ಸ್ಥಾನಮಾನದ ನಿರೀಕ್ಷೆ:
    ವರುಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚು ಸಮಯ ಕೊಡಲಾಗದ ಹಿನ್ನೆಲೆಯಲ್ಲಿ ಸರ್ಕಾರಿ ಸ್ಥಾನಮಾನದ ನಿರೀಕ್ಷೆಯಲ್ಲಿ ಯತೀಂದ್ರ ಅವರು ಇದ್ದಾರೆ. ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಯತೀಂದ್ರ ಸರ್ಕಾರಿ ಸ್ಥಾನಮಾನದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

    ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ. ತಂದೆಯವರು ಸಿಎಂ ಆಗಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನು ನೋಡಲು ಬರುವ ರಾಜ್ಯದ ಜನರನ್ನೆಲ್ಲ ಅವರು ಭೇಟಿಯಾಗಬೇಕು. ಆದ್ದರಿಂದ ವರುಣ ಕ್ಷೇತ್ರದ ಮತದಾರರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಜನರ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಬೇಕಿದೆ. ಅಧಿಕಾರಿಗಳಿಗೆ ಹೇಳಿ ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಇರಬೇಕು ಎಂದರು.

    ನನಗೆ ಯಾವುದಾದರೂ ಚಿಕ್ಕದಾದ ಸ್ಥಾನಮಾನ ನೀಡಿದರೂ ಸಹಕಾರ ಆಗುತ್ತದೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ. ಆದರೂ ಅಂತದ್ದೇ ಸಣ್ಣ ಹುದ್ದೆ ಈ ಬಾರಿ ನೀಡಿದರೂ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ (Assembly Election Result) ಆರಂಭಕ್ಕೂ ಮುನ್ನ ಬೆಳ್ಳಂಬೆಳಗ್ಗೆ ಚಾಮರಾಜನಗರ (Chamarajanagar)  ಹಾಗೂ ವರುಣ (Varuna) ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ (V Somanna) ನಾಡದೇವತೆ ಮೊರೆ ಹೋಗಿದ್ದಾರೆ.

    ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿದ ಸೋಮಣ್ಣ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿಯ ಮೊದಲ ಪೂಜೆ ಕಾರ್ಯದಲ್ಲೇ ಸೋಮಣ್ಣ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ವರುಣ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಚಾಮರಾಜನಗರದ ಜೊತೆಗೆ ವರುಣ ಕ್ಷೇತ್ರವನ್ನೂ ಸೋಮಣ್ಣ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದೀಗ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ನಾಡದೇವತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates

  • ಸರ್ವೇಗಳು ಹೇಳ್ತಿರೋವಂತೆ ನಮಗೇ ಬಹುಮತ ಖಚಿತ – ಕರಾವಳಿಯಲ್ಲಿ ಸೀಟು ಹೆಚ್ಚಳ: ಸಿದ್ದರಾಮಯ್ಯ

    ಸರ್ವೇಗಳು ಹೇಳ್ತಿರೋವಂತೆ ನಮಗೇ ಬಹುಮತ ಖಚಿತ – ಕರಾವಳಿಯಲ್ಲಿ ಸೀಟು ಹೆಚ್ಚಳ: ಸಿದ್ದರಾಮಯ್ಯ

    ಮೈಸೂರು: ನಮಗೆ ಬಹುಮತ ಬರೋದು ಖಚಿತವಾಗಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸರ್ವೆಗಳೂ ಅದನ್ನೇ ಹೇಳ್ತಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರೋದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿಧಾನಸಭಾ ಚುನಾವಣೆ (Assembly Election) ಮತದಾನ ಅಂತಿಮಗೊಂಡು ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಮಾತನಾಡಿದ ಸಿದ್ದರಾಮಯ್ಯ, ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು. ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ. ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು ಎಂದು ಹೇಳಿದರು.

    ವರುಣಾದಲ್ಲಿ ನಾನು ಬಹಳ ಸುಲಭವಾಗಿ ಗೆಲುವು ದಾಖಲಿಸಲಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿಯಿದೆ. ಇಲ್ಲಿ ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ. ಸೋಮಣ್ಣ ಅವರಿಗೆ ವರುಣಾದ ಜನ ಯಾಕೆ ವೋಟ್ ಹಾಕಬೇಕು? ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರು ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ. ಅದು ಬಿಟ್ಟರೆ ದುಡ್ಡಿನ ರಾಜಕೀಯ ಮಾಡಿದ್ದಾರೆ. ವರುಣಾದಲ್ಲಿ ಜೆಡಿಎಸ್‌ನವರೆಲ್ಲರೂ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ ನಾನು ಸುಲಭವಾಗಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಕ್ಸಿಟ್ ಪೋಲ್‍ನಲ್ಲಿ ನಂಬಿಕೆ ಇಲ್ಲ, 141 ಸ್ಥಾನ ಗೆಲ್ತೀವಿ: ಡಿಕೆ ಶಿವಕುಮಾರ್

    ರೆಸಾರ್ಟ್ ರಾಜಕೀಯದ ಅವಶ್ಯಕತೆ ಇದೆಯಾ? ನಿಮ್ಮ ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಾ? ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಎಲ್ಲರೂ ಬಹುಮತ ಕೊಡುತ್ತಿರುವಾಗ ಶಾಸಕರ ರಕ್ಷಣೆ ಎಲ್ಲಿಂದ ಬರುತ್ತದೆ? ಯಾಕೆ ಇಂತಹ ಪ್ರಶ್ನೆ ಕೇಳಿ ಸುದ್ದಿ ಹಬ್ಬಿಸುತ್ತೀರಾ? ನೀನು ಬಿಜೆಪಿ ವ್ಯಕ್ತಿನಾ? ನಿನಗೇಕೆ ಇಂತಹ ಅನುಮಾನಗಳು ಬರಬೇಕು? ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಬಹುಮತ ಇದೆ. ನಾವು ಬಹುಮತದೊಂದಿಗೆ ಸರ್ಕಾರ ಮಾಡುತ್ತೇವೆ. ಇಂತಹ ಪ್ರಶ್ನೆಗಳನ್ನು ಕೇಳಿ ಗೊಂದಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಗುಡುಗಿದರು. ಇದನ್ನೂ ಓದಿ: ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

  • ಕಾರಿನ ಮೇಲೆ ನಿಂತಿದ್ದ ಸಚಿವ ಸೋಮಣ್ಣರನ್ನು ಕೆಳಗೆ ಬೀಳಿಸಿದ ಸುದೀಪ್ ಅಭಿಮಾನಿ

    ಕಾರಿನ ಮೇಲೆ ನಿಂತಿದ್ದ ಸಚಿವ ಸೋಮಣ್ಣರನ್ನು ಕೆಳಗೆ ಬೀಳಿಸಿದ ಸುದೀಪ್ ಅಭಿಮಾನಿ

    ಚಾಮರಾಜನಗರ: ಬಿಜೆಪಿ (BJP) ಪಕ್ಷದಿಂದ ನಟ ಸುದೀಪ್ (Sudeep) ಸಚಿವ ವಿ.ಸೋಮಣ್ಣ (V Somanna) ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ (Chamarajanagar) ನಾಯಕರು ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಸುದೀಪ್ ಹತ್ತಿರ ಹೋಗಲು ಧಾವಿಸಿದ ಅಭಿಮಾನಿ (Fan) ಸೋಮಣ್ಣ ಅವರನ್ನು ಬಿಳಿಸಿರುವ ಪ್ರಸಂಗ ನಡೆದಿದೆ.

    ಸಚಿವ ಸೋಮಣ್ಣ, ಕೊಳ್ಳೇಗಾಲ ಎನ್ ಮಹೇಶ್, ಗುಂಡ್ಲುಪೇಟೆ ನಿರಂಜನ್ ಕುಮಾರ್, ಹನೂರು ಪ್ರೀತನ್ ನಾಗಪ್ಪ ಪರ ಸುದೀಪ್ ಚಾಮರಾಜನಗರಲ್ಲಿ ರೋಡ್ ಶೋ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲಕ ರೋಡ್ ಶೋ ಆರಂಭ ಮಾಡಲಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ರೋಡ್ ಶೋ ನಡೆದಿದೆ.

    ರೋಡ್ ಶೋ ವೇಳೆ ಸಚಿವ ಸೋಮಣ್ಣ ಹಾಗೂ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು. ಆಗ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದಾನೆ. ಬಳಿಕ ಆತ ಆಯತಪ್ಪಿದ್ದು, ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಸೋಮಣ್ಣ ಕೂಡಾ ಬಿದ್ದಿದ್ದು, ಅವರನ್ನು ಸುದೀಪ್ ಕಾರಿನ ಟಾಪ್‌ನಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದರು. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ಅಬ್ಬರದ ಪ್ರಚಾರದಲ್ಲಿ ನಟ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಂತೇಮರಹಳ್ಳಿಯ ವೃತ್ತದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

  • ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ನಾನೂ ಕೂಡ ಶಿವಣ್ಣನ ಅಭಿಮಾನಿ : ಉಲ್ಟಾ ಹೊಡೆದ ಸಂಸದ ಸಿಂಹ

    ಟ ಶಿವರಾಜ್ ಕುಮಾರ್ ವಿರುದ್ಧ ನಿನ್ನೆಯಷ್ಟೇ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಪುನೀತ್ ರಾಜ್ ಕುಮಾರ್ ಹೆಸರನ್ನೂ ಅವರು ಎಳೆತಂದಿದ್ದರು. ಈ ನಡೆ ಡಾ.ರಾಜ್ ಕುಟುಂಬದ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಸ್ವತಃ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಇದೀಗ ಪ್ರತಾಪ್ ಸಿಂಹ ಮಾತು ಬದಲಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಹ, ‘ನನಗೆ ಡಾ.ರಾಜ್ ಕುಮಾರ್ ಕುಟುಂಬದ ಬಗ್ಗೆ ಗೌರವವಿದೆ. ನಾನೂ ಕೂಡ ಶಿವರಾಜ್ ಕುಮಾರ್ ಅಭಿಮಾನಿ. ಅವರ ಕುಟುಂಬವನ್ನು ನಾವು ರಾಜಕೀಯ ಹೊರತಾಗಿ ನೋಡುತ್ತೇವೆ. ಶಿವಣ್ಣ ಕೂಡ ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಧನ್ಯವಾದಗಳನ್ನು ಹೇಳುತ್ತೇನೆ’ ಎಂದಿದ್ದಾರೆ.

    ಇದೇ ವಿಷಯವಾಗಿ ಶಿವರಾಜ್ ಕುಮಾರ್ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದರು. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ್ದರು. ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದರು. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು.

    ಕಳೆದ ಮೂರು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

    ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

  • ರಾಜಕೀಯ ಅಖಾಡಕ್ಕೆ ಅಪ್ಪು ಎಳೆತಂದ ಪ್ರತಾಪ್ ಸಿಂಹ : ನಟ ಶಿವಣ್ಣ ಪ್ರತಿಕ್ರಿಯೆ

    ರಾಜಕೀಯ ಅಖಾಡಕ್ಕೆ ಅಪ್ಪು ಎಳೆತಂದ ಪ್ರತಾಪ್ ಸಿಂಹ : ನಟ ಶಿವಣ್ಣ ಪ್ರತಿಕ್ರಿಯೆ

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರವಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಶಿವಣ್ಣನಿಗೆ ನಿನ್ನೆ ಟಾಂಗ್ ಕೊಟ್ಟಿದ್ದರು ಸಂಸದ ಪ್ರತಾಪ್ ಸಿಂಹ. ಈ ವಿಷಯದಲ್ಲಿ ಪುನೀತ್ ರಾಜ್ ಕುಮಾರ್ ಹೆಸರನ್ನು ಅವರು ಎಳೆತಂದಿದ್ದರು. ಸಿಂಹ ನಡೆಗೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಈ ಕುರಿತಂತೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ ಶಿವಣ್ಣ, ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ (Varuna) ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ (Pratap Simha) ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು. ಇದನ್ನೂ ಓದಿ:‘ಶಾಕುಂತಲಂ’ ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು

    ಕಳೆದ ಮೂರು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

    ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

  • ಶಿವರಾಜ್ ಕುಮಾರ್ ಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ

    ಶಿವರಾಜ್ ಕುಮಾರ್ ಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ

    ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ (Siddaramaiah) ಪರವಾಗಿ ಇಂದು ಶಿವರಾಜ್ ಕುಮಾರ್ (Shivaraj Kumar) ಪ್ರಚಾರ ಮಾಡುತ್ತಿದ್ದಾರೆ. ವರುಣಾ (Varuna) ಕ್ಷೇತ್ರಕ್ಕೆ ಆಗಮಿಸಿರುವ ಶಿವಣ್ಣ, ಬೆಳಗ್ಗೆಯಿಂದಲೇ ಸಿದ್ಧರಾಮಯ್ಯನವರ ಪರವಾಗಿ ಮತಯಾಚನೆ ಮಾಡುತ್ತಿದ್ದರು. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಮಣ್ಣನನ್ನು ಹೊಗಳುವ ಮೂಲಕ ಶಿವಣ್ಣನಿಗೆ ಟಾಂಗ್ ನೀಡಿದ್ದಾರೆ.

    ಪ್ರತಾಪ್ ಸಿಂಹ ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲ್ಯಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

    ಕಳೆದ ಎರಡು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ ಕೂಡ ಮಂಡ್ಯದಿಂದ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ದುನಿಯಾ ವಿಜಯ್ ಕೇವಲ ಸಿದ್ಧರಾಮಯ್ಯನವರ ಪರವಾಗಿಯಷ್ಟೇ ಪ್ರಚಾರ ಮಾಡಲಿದ್ದಾರಂತೆ.

    ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.

  • ಪ್ರತಾಪ್ ಸಿಂಹ ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್

    ಪ್ರತಾಪ್ ಸಿಂಹ ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್

    ಮಡಿಕೇರಿ: ಪ್ರತಾಪ್ ಸಿಂಹ (Prathap Simha) ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ. ವರುಣಾ (Varuna) ಕ್ಷೇತ್ರಕ್ಕೆ ರಮ್ಯಾ ಮತ್ತು ದುನಿಯಾ ವಿಜಿ ಬರಲಿ. ನಾನು ಬರುತ್ತೇನೆ. ಯಾರಿಗೆ ಜೈಕಾರ ಹಾಕುತ್ತಾರೆ ಎನ್ನುವುದನ್ನು ನೋಡಲಿ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗೆ (Siddaramaiah) ಟಾಂಗ್ ನೀಡಿದ್ದಾರೆ.

    ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಸಿದ್ದರಾಮಯ್ಯ ಪರ ದುನಿಯಾ ವಿಜಯ್ ಮತ್ತು ರಮ್ಯಾ ಪ್ರಚಾರದ ವಿಚಾರವಾಗಿ ಕೊಡಗಿನ (Kodagu) ಸೋಮವಾರಪೇಟೆಯಲ್ಲಿ (Somwarpet) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ (MallikarjunKharge) ಬಂದಿದ್ದಾರಾ? ಅವರು ಮೈಸೂರಿಗೆ (Mysuru) ಬಂದು ಕ್ಯಾಂಪೇನ್ ಮಾಡಿ ಅಲ್ಲಿಂದ ಹಾಗೆ ಹೋಗುತ್ತಾರೆ. ಖರ್ಗೆಯವರನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಹಾಗೆಯೇ ಕೊರಟಗೆರೆಯಲ್ಲಿ 2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿ ಒಬ್ಬ ದಲಿತ ನಾಯಕನ್ನು ಮುಗಿಸುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೇ 13ಕ್ಕೆ ಸಿದ್ದರಾಮಯ್ಯ ಸೋಲಿನ ಜೊತೆಗೆ ಮುಸ್ಲಿಮ್‌ ಓಲೈಕೆ ಅಂತ್ಯ : ಪ್ರತಾಪ್‌ ಸಿಂಹ

    ಡಿ.ಕೆ.ಶಿವಕುಮಾರ್ ಅವರು ಸಹಾ ಮೈಸೂರಿಗೆ ಬರುತ್ತಾರೆ ಆದರೆ ವರುಣಾ ಕ್ಷೇತ್ರಕ್ಕೆ ಹೋಗುವುದಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಅದಕ್ಕೆ ಕೆ.ಹೆಚ್.ಮುನಿಯಪ್ಪ, ಆಂಜನೇಯ ಸೇರಿದಂತೆ ಯಾರೂ ವರುಣಾದತ್ತ ಬರೋದಿಲ್ಲ. ಸಿದ್ದರಾಮಯ್ಯ ಮುಸ್ಲಿಂ ಅವರ ಓಲೈಕೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ಕಾಳಜಿ ಇಲ್ಲ. ಅದು ಅವರ ಪಕ್ಷದವರಿಗೂ ಗೊತ್ತು. ಹಾಗಾಗಿ ದುನಿಯಾ ವಿಜಿ ಮತ್ತು ರಮ್ಯಾ ಬರೋದಕ್ಕೂ ಖರ್ಗೆ, ಪರಮೇಶ್ವರ್ ಅವರು ಬರೋದಕ್ಕೂ ಇರುವ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿನಾಶದ ಅಂಚಿನಲ್ಲಿ ಕಾಂಗ್ರೆಸ್ – ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್

    ವರುಣಾ ಕ್ಷೇತ್ರದಲ್ಲಿ ಸೋಮಣ್ಣಗೆ ಜೈಕಾರ ಹಾಕುತ್ತಾರಾ ಅಥವಾ ಸಿದ್ದರಾಮಯ್ಯಗೆ ಜೈಕಾರ ಹಾಕುತ್ತಾರಾ ಎಂಬುದು ನಿಮಗೆ ಗೊತ್ತಾಗುತ್ತದೆ. ವರುಣಾಕ್ಷೇತ್ರದಲ್ಲಿ ಈಗಾಗಲೇ ಒಂದು ಘೋಷವಾಕ್ಯವನ್ನು ಎಲ್ಲರೂ ಹೇಳುತ್ತಿದ್ದಾರೆ. ಸೋಮಣ್ಣಗೆ ವೋಟು, ಸಿದ್ದರಾಮಯ್ಯಗೆ ಏಟು ಎಂದು ಜನಗಳೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

  • ಸೋಮಣ್ಣಗೆ ಲೋ ಬಿಪಿ

    ಸೋಮಣ್ಣಗೆ ಲೋ ಬಿಪಿ

    ಚಾಮರಾಜನಗರ: ಎರಡು ಕಡೆಯಲ್ಲೂ ಸತತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೆ ಲೋ ಬಿಪಿ ಆಗಿ ತಲೆ ಸುತ್ತು ಬಂದ ಪ್ರಸಂಗ ಇಂದು ನಡೆಯಿತು.

    ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೂ ವರುಣಾ (Varuna), ಚಾಮರಾಜನಗರ (Chamarajanagara) ಎರಡು ಕ್ಷೇತ್ರದಲ್ಲೂ ವಿ. ಸೋಮಣ್ಣ (V Somanna) ಅವರು ಬೀರುಸಿನ ನಡೆಸುತ್ತಿದ್ದಾರೆ. ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೊಮಣ್ಣಗೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದಿದೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಸೋಮಣ್ಣ ಅವರನ್ನು ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

    ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ. ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ವೈದ್ಯರು ಬಂದು ಚೆಕ್ ಮಾಡಿದರು. ರಕ್ತದೊತ್ತಡ 70ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ

  • ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

    ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

    ಬೆಂಗಳೂರು: ಕಾಂಗ್ರೆಸ್ (Congress) ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ (Ramya) ಚುನಾವಣೆ ಸಲುವಾಗಿ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

    ಚುನಾವಣೆ (Election) ಸಂದರ್ಭದಲ್ಲಿ ಜನರ ಮತಗಳನ್ನು ತನ್ನತ್ತ ಸೆಳೆಯುವ ಸಲುವಾಗಿ ವಿವಿಧ ಪಕ್ಷಗಳು ಸ್ಟಾರ್ ಪ್ರಚಾರಕರ ಮೂಲಕ ಮತಯಾಚನೆ ಮಾಡಿಸುತ್ತಾರೆ. ಅದರಂತೆ ನಟಿ ರಮ್ಯಾ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಮೇ 4ರಂದು ರಮ್ಯಾ ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

    ಮೇ 6ರಂದು ಬಬಲೇಶ್ವರ (Babaleshwar) ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಪರ ಮತಯಾಚಿಸಲಿದ್ದಾರೆ. ನಂತರ ಬೆಂಗಳೂರಿನ (Bengaluru) ಸರ್ವಜ್ಞ ನಗರದಲ್ಲಿ (Sarvagnanagar) ಕೆ.ಜೆ.ಜಾರ್ಜ್ (K.J.George) ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ ಮಂಡ್ಯ (Mandya) ಜಿಲ್ಲೆಯಲ್ಲೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ