Tag: varuna constituency

  • ಸಿದ್ದರಾಮಯ್ಯ ಬಾದಾಮಿ, ಗೋಡಂಬಿಗೆ ಹೋಗಿ ಈಗ ನಾಟಿಕೋಳಿ, ಮುದ್ದೆ ತಿನ್ನಲು ವರುಣಾಗೆ ಬರ್ತಿದ್ದಾರೆ: ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

    ಸಿದ್ದರಾಮಯ್ಯ ಬಾದಾಮಿ, ಗೋಡಂಬಿಗೆ ಹೋಗಿ ಈಗ ನಾಟಿಕೋಳಿ, ಮುದ್ದೆ ತಿನ್ನಲು ವರುಣಾಗೆ ಬರ್ತಿದ್ದಾರೆ: ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

    ಚಾಮರಾಜನಗರ: ಸಿದ್ದರಾಮಯ್ಯ (Siddaramaiah) ಬಾದಾಮಿ, ಗೋಡಂಬಿ ಕ್ಷೇತ್ರಕ್ಕೆ ಹೋಗಿ ಇದೀಗ ನಾಟಿಕೋಳಿ, ರಾಗಿಮುದ್ದೆ ತಿನ್ನಲು ವರುಣಾಗೆ ಬರುತ್ತಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ (Srinivasa Prasad) ವ್ಯಂಗ್ಯವಾಡಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲುವುದಾಗಿ ಇತ್ತೀಚೆಗೆ ಹೇಳಿದ್ದಾರೆ. ಈಗಾಗಲೇ ಒಂದು ಸುತ್ತು ವರುಣಾ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ. ಅಂತಿಮವಾಗಿ ಬೇರೆಡೆ ಬಿಟ್ಟು ವರುಣಾದಲ್ಲಿ ನಿಲ್ಲುವ ತೀರ್ಮಾನಕ್ಕೆ ಬಂದ ಹಾಗೆ ಕಾಣಿಸುತ್ತಿದೆ. ಅವರನ್ನು ಸೋಲಿಸಲು ನಾವು ಹೋರಾಟ ಮಾಡುತ್ತೇವೆ. ಅವರ ವಿರುದ್ಧ ಅಭ್ಯರ್ಥಿ ಯಾರಾಗ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮೈಲಿಗಲ್ಲು – ರಾಜ್ಯಾದ್ಯಂತ 114 ಕ್ಲಿನಿಕ್‌ಗೆ ಚಾಲನೆ

    ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಒಂದೇ ಚುನಾವಣೆಗೆ ಹೆದರಿ ಬಾದಾಮಿಗೆ ಓಡಿಹೋದ್ರು. ಇದೀಗ ಬಾದಾಮಿ, ಗೋಡಂಬಿ ಕ್ಷೇತ್ರಕ್ಕೆ ಹೋಗಿ ಮತ್ತೆ ರಾಗಿಮುದ್ದೆ, ನಾಟಿಕೋಳಿಗಾಗಿ ಇಲ್ಲಿಗೆ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಝಿಕಾ ವೈರಸ್‌ಗೆ ಹೆಚ್ಚಿದ ಆತಂಕ – ಮಕ್ಕಳ ಸಣ್ಣ ಜ್ವರಕ್ಕೂ ಹೆದರುತ್ತಿದ್ದಾರೆ ಪೋಷಕರು

    ಹೆಚ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ. ನನಗೂ ಅವರಿಗೂ ಈಗ ಸಂಬಂಧವಿಲ್ಲ. ನಮ್ಮ ಬಳಿ ಅವರು ಮಾತನಾಡಿಲ್ಲ. ಮಾತನಾಡುವುದೂ ಇಲ್ಲ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ

    ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ

    ಬೆಂಗಳೂರು: ಶಿಕಾರಿಪುರದಲ್ಲಿ ಯಡಿಯೂರಪ್ಪ ಉತ್ತರಾಧಿಕಾರಿಯನ್ನಾಗಿ ವಿಜಯೇಂದ್ರ ಘೋಷಣೆ ಬೆನ್ನಲ್ಲೇ ವರುಣಾ ಕ್ಷೇತ್ರದ ಸುತ್ತ ನಾನಾ ಚರ್ಚೆಗಳು ನಡೆಯುತ್ತಿದೆ.

    ಈ ಹಿಂದೆಯೇ ಸಿದ್ದರಾಮಯ್ಯಗೆ ವರುಣಾ ರಹಸ್ಯ ತಿಳಿದಿತ್ತು ಎನ್ನಲಾಗಿದೆ. ಎರಡು ಮೂರು ತಿಂಗಳ ಹಿಂದೆ ಆ ಒಂದೇ ಒಂದು ಅನಿರೀಕ್ಷಿತ ಕರೆ ಮಾಡಿ ಸೌಜನ್ಯಯುತವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಮಾತನಾಡುವಾಗ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂಬ ಬಗ್ಗೆ ಬಿಎಸ್‍ವೈ ಸುಳಿವು ಕೊಟ್ಟಿದ್ರು ಎನ್ನಲಾಗಿದೆ. ಅಲ್ಲದೆ ಏರ್‌ಪೋರ್ಟ್‌ ಲಾಂಚ್‌ನಲ್ಲಿ ಸಿಕ್ಕಾಗಲೂ ಕೂಡ ಅದೇ ಸುಳಿವನ್ನು ಮುಂದುರಿಸಿದ್ರು ಆಗಲೇ ಸಿದ್ದರಾಮಯ್ಯ ಕೊಂಚ ನಿರಾಳರಾಗಿ ಆಪ್ತರ ಬಳಿ ವಿಜಯೇಂದ್ರ ಸ್ಪರ್ಧೆ ಮಾಡಲ್ಲ ಎಂದು ಹೇಳಿಕೊಂಡಿದ್ದರು ಎಂಬ ಬಗ್ಗೆ ಆಪ್ತ ಮೂಲಗಳಿಂದ ಗುಸುಗುಸು ಕೇಳಿಬಂದಿದೆ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು

    ವರುಣಾದಲ್ಲಿ ಯಾವ ಸ್ಟಾರ್ ಫೈಟ್ ನಡೆಯಲ್ಲ ಎಂದು ಹೇಳಿದ್ದರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಗಾದ್ರೆ ಎರಡ್ಮೂರು ತಿಂಗಳಿನಿಂದಲೂ ಯಡಿಯೂರಪ್ಪ ಮಾನಸಿಕವಾಗಿ ಸಿದ್ಧವಾಗಿದ್ರಾ? ಶಿಕಾರಿಪುರಕ್ಕೆ ವಿಜಯೇಂದ್ರ ಪಟ್ಟಕ್ಕೆ ಪೂರ್ವ ತಯಾರಿ ನಡೆಸಿದ್ರಾ ಎಂಬ ಪ್ರಶ್ನೆಗಳು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    ಚುನಾವಣಾ ರಾಜಕೀಯದಿಂದ ಬಿಎಸ್‍ವೈ ನಿವೃತ್ತಿ ಮತ್ತು ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಕುರಿತ ಯಡಿಯೂರಪ್ಪ ಘೋಷಣೆಗಳಿಂದ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ರಾಜ್ಯ ಬಿಜೆಪಿ ನಾಯಕರು ಶಾಕ್‍ಗೆ ಒಳಗಾಗಿದ್ದು, ಹೈಕಮಾಂಡ್‍ಗೆ ಮಾಹಿತಿ ರವಾನಿಸಲಾಗಿದೆ. ಬಿಎಸ್‍ವೈ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ತಾವು ರಾಜಕೀಯವಾಗಿ ಸಮರ್ಥರಾಗಿರುವಾಗಲೇ ಪುತ್ರನ ರಾಜಕೀಯ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ಲೆಕ್ಕಾಚಾರ ಯಡಿಯೂರಪ್ಪನವರಿಗೆ ಇದ್ದಂತಿದೆ. ಈ ಬಗ್ಗೆ ಸ್ವಪಕ್ಷದವರಿಂದಲೇ ವಿರೋಧ, ಅಪಸ್ವರ ಕೇಳಿ ಬರುತ್ತಿದೆ. ಇನ್ನೊಂದೆಡೆ ಈ ಬಗ್ಗೆ ಹೈಕಮಾಂಡ್ ಸೂಕ್ಷ್ಮವಾಗಿ ನಿಭಾಯಿಸುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಬಿಟ್ಟು ಹೋಗ್ಬೇಡಿ ಅಂದಿದ್ದೆ: ಸುಧಾಕರ್

    ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಬಿಟ್ಟು ಹೋಗ್ಬೇಡಿ ಅಂದಿದ್ದೆ: ಸುಧಾಕರ್

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತಾಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಲ್ಲಿದ್ದಾಗ 2018ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರಿಗೆ ತಾವು ಕೊಟ್ಟಿದ್ದ ಸಲಹೆಯ ಬಗ್ಗೆ ತಿಳಿಸಿದರು.

    ನಾನು ಕಾಂಗ್ರೆಸ್ ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಟ್ಟು ಹೋಗಬೇಡಿ ಅಂತ ಸಿದ್ದರಾಮಯ್ಯರಿಗೆ ಸಲಹೆ ಕೊಟ್ಟಿದ್ದೆ. ಆದ್ರೆ ಅವರು ನನ್ನ ಮಾತು ಕೇಳಲ್ಲಿಲ್ಲ. ವರುಣಾ ಬಿಟ್ಟು ಹೋದ್ರೆ ಏನಾಗುತ್ತೆ ಅಂತ ನನಗೆ ಮಾಹಿತಿ ಇತ್ತು. ಅವರಿಗೂ ಅದರ ಬಗ್ಗೆ ಮಾಹಿತಿ ಇತ್ತು. ಹಿಂದೆ ಮುಖ್ಯಮಂತ್ರಿಗಳಾಗಿದ್ದವರು ಕ್ಷೇತ್ರ ಬಿಟ್ಟು ಹೋದಾಗ ಏನಾಯ್ತು ಅಂತ ಅವರಿಗೆ ಹೇಳಿದ್ದೆ. ಸಿದ್ದರಾಮಯ್ಯನವರು ನನ್ನ ಮಾತನ್ನು ಕೊನೆಗೂ ಒಪ್ಪಲಿಲ್ಲ. ಅವರು ವರುಣಾ ಕ್ಷೇತ್ರ ತೊರೆದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು ಎಂದು ಸಚಿವ ಸುಧಾಕರ್, ಹಳೆಯದನ್ನು ಸ್ಮರಿಸಿಕೊಂಡರು. ಆ ಮೂಲಕ ವರುಣಾ ಕ್ಷೇತ್ರ ಬಿಟ್ಟು ಹೋಗಿದ್ದರಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಾಯಿತು ಎಂದು ಪರೋಕ್ಷವಾಗಿ ಸುಧಾಕರ್ ಹೇಳಿದಂತಿತ್ತು. ಇಷ್ಟಲ್ಲದೇ ಈಗ ಸಿದ್ದರಾಮಯ್ಯನವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರ ತೀರ್ಮಾನ, ಅವರ ಪಕ್ಷದ ತೀರ್ಮಾನ ಎಂದು ಹೇಳಿ ಸುಮ್ಮನಾದರು ಸುಧಾಕರ್. ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಸೋತಿದ್ದಕ್ಕೆ, ದೊಡ್ಡ ಗೌಡ್ರ ಬದ್ಲು ಚಿಕ್ಕಗೌಡ್ರ ಮೇಲೆ ಮುನಿಸಿಕೊಂಡ್ರಾ ಸಿದ್ದರಾಮಯ್ಯ?

    2018 ರಲ್ಲಿ ವರುಣಾ ತೊರೆದು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಸಿದ್ದರಾಮಯ್ಯನವರಿಗೆ ಕೈ ಹಿಡಿದಿದ್ದು ಬಾದಾಮಿ ಕ್ಷೇತ್ರದ ಮತದಾರರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸಿದ್ದರಾಮಯ್ಯನವರ ಬಲವನ್ನೇ ಉಡುಗಿಸಿಬಿಟ್ಟಿತ್ತು. ಹಲವು ಸಲ ಸಿದ್ದರಾಮಯ್ಯನವರು ಮೈಸೂರಿಗೆ ಹೋದಾಗಲೆಲ್ಲ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಬಹಿರಂಗವಾಗಿಯೇ ಮಾತಾಡಿ ಬೇಸರ ತೋಡಿಕೊಂಡಿದ್ದುಂಟು. ಇದಾದ ತರುವಾಯ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗ ಅದಾಗಲೇ ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರದ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಜನ ಕೆಲ್ಸ ಮಾಡೋರನ್ನ ಮರೆತಿದ್ದಾರೆ, ನನ್ನನ್ನೂ ಸಹ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು : ಸಿದ್ದರಾಮಯ್ಯ

    ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯನವರ ಆಪ್ತರಾಗಿರುವ ಅಲ್ಲಿನ ಶಾಸಕ ಜಮೀರ್ ಅಹಮದ್ ಖಾನ್ ಒತ್ತಾಯ ಹಾಕುತ್ತಲೇ ಇದ್ದಾರೆ. ಸಿದ್ದರಾಮಯ್ಯನವರು ಮೇಲ್ನೋಟಕ್ಕೆ ಬೇಡ ಅಂತಿದ್ದರೂ ಅವರ ನಡೆ, ನುಡಿಗಳು, ಮನಸೊಳಗಡೆ ಅವರು ಚಾಮರಾಜಪೇಟೆ ಕ್ಷೇತ್ರದತ್ತ ಒಲವು ಇಟ್ಟುಕೊಂಡಿರುವುದನ್ನು ಬಿಂಬಿಸುತ್ತಿವೆ. ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಶನಿ, ರಾಹು, ಕೇತು ಸೇರಿ ನನ್ನನ್ನು ಸೋಲಿಸಿದ್ರು ಎಂದ ಸಿದ್ದರಾಮಯ್ಯ!

    ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸಿದರೂ ಆಶ್ಚರ್ಯ ಇಲ್ಲ ಅನ್ನುತ್ತಿವೆ ಅವರ ಆಪ್ತ ಮೂಲಗಳು. ಕಾಂಗ್ರೆಸ್ ನ ಮೇರು ನಾಯಕ ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟದ ಈ ಪಡಿಪಾಟಲು ಅವರ ಹಿಂದಿನ ಆಪ್ತರ ಬಣದಲ್ಲಿದ್ದ ಸುಧಾಕರ್ ಅವರರಲ್ಲೂ ಖಂಡಿತಾ ಕಾಡಿರಲೇಬೇಕು. ಇದೇ ಕಾರಣದಿಂದ ಇವತ್ತು ಮಾಧ್ಯಮಗಳೆದುರು ಮಾತಾಡುವ ನೆಪದಲ್ಲಿ ಸುಧಾಕರ್, ಮತ್ತೆ ಕ್ಷೇತ್ರ ತೊರೆಯಬೇಡಿ ಎಂಬುದಾಗಿ ತಮ್ಮ ಹಿಂದಿನ ನಾಯಕ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸ್ವ ಪಕ್ಷೀಯರಿಂದಲೇ ನನಗೆ ಚಾಮುಂಡೇಶ್ವರಿಯಲ್ಲಿ ಸೋಲು: ಸಿದ್ದರಾಮಯ್ಯ

  • ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಮೈಸೂರು: ವರುಣಾ ಕ್ಷೇತ್ರದ ಟಿಕೆಟ್ ಮಿಸ್ ಹಿನ್ನೆಲೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ.

    ಮಂಗಳವಾರ ರಾತ್ರಿಯೇ ಮೈಸೂರಿನಿಂದ ಹೊರಟಿದ್ದು, ವಾಪಸ್ ಬರುವುದಾಗಿ ಹೇಳಿ ವಿಜಯೇಂದ್ರ ಬೆಂಗಳೂರಿನತ್ತ ಪ್ರವಾಸ ಕೈಗೊಂಡಿದ್ದಾರೆ. ಮೈಸೂರಿನಲ್ಲಿದ್ದರೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಿನ್ನೆ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ ಅವರು, ನಾನು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಏ.22 ರಂದು ಕಡೆ ದಿನ ಪ್ರಚಾರ ಮಾಡಿದ್ದರು. ಏ.22ರ ಪ್ರಚಾರದಲ್ಲಿ ತೋಟದ ಬಸವರಾಜು ಅವರು ವಿಜಯೇಂದ್ರ ಜೊತೆಯಲ್ಲೆ ಇದ್ದರು. ಇದನ್ನೂ ಓದಿ: ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    ತೋಟದ ಬಸವರಾಜು ಅವರು ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿ.ಫಾರಂ ಸಲ್ಲಿಸದೆ ಕೇವಲ ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಏ.22 ರಂದು ವಿಜಯೇಂದ್ರ ಪರವಾಗಿಯೇ ಮತಯಾಚನೆ ಮಾಡಿದ್ದರು. ಆದ್ರೆ ಏ.23ರಂದು ವಿಜಯೇಂದ್ರಗೆ ಟಿಕೆಟ್ ಮಿಸ್ ಆಯಿತು. ಏ.24ರಂದು ತೋಟದ ಬಸವರಾಜರೇ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿ ಬಿ.ಫಾರಂ ಸಲ್ಲಿಕೆ ಮಾಡಲಾಯಿತು. ಹೀಗಾಗಿ ಕಡೆ ದಿನವೂ ಬಸವರಾಜು ವಿಜಯೇಂದ್ರ ಜೊತೆಯಲ್ಲೆ ಇದ್ದರು. ಇದನ್ನೂ ಓದಿ: ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಒಟ್ಟಿನಲ್ಲಿ ಇದೀಗ ಜೊತೆಯಲ್ಲಿದ್ದುಕೊಂಡೇ ತೋಟದ ಬಸವರಾಜು ಅವರು ವಿಜಯೇಂದ್ರ ವಿರುದ್ಧ ಕತ್ತಿ ಮಸೆದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೇ ವಿಜಯೇಂದ್ರ ಟಿಕೆಟ್ ಮಿಸ್ ವಿಚಾರ ಕೂಡ ತೀವ್ರ ಕುತೂಹಲ ಮೂಡಿಸಿದ್ದು, ವಿಜಯೇಂದ್ರ ಮತ್ತೆ ವಾಪಸ್ ಮೈಸೂರಿಗೆ ಆಗಮಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

  • ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಮೈಸೂರು: ಮುಂದಿನ ಚುನಾವಣೆಯಲ್ಲಿ ಮಗನಿಗಾಗಿ ಕ್ಷೇತ್ರ ಬದಲಾಯಿಸುವ ನಿರ್ಧಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಅವರನ್ನು ಸೋಲಿಸಲು ಜೆಡಿಎಸ್ – ಬಿಜೆಪಿ ಪರಸ್ಪರ ಜೊತೆಯಾಗುತ್ತಿವೆ. ಇನ್ನೊಂದು ಕಡೆ ಸಿಎಂ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಸ್ಪರ್ಧಿಸುವ ಸಾಧ್ಯತೆ ಇದೆ.

    ಸಿಎಂ ಪುತ್ರನ ವಿರುದ್ಧ ಲಿಂಗಾಯಿತ ಸಮುದಾಯದ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಜ್ಜಾಗಿದೆ. ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು ಆಗಿರುವ ಶಂಕರ್ ಬಿದರಿ ಹಗೂ ಈಗಾಗಲೇ ಸಿಎಂ ವಿರುದ್ಧ ಸ್ಪರ್ಧಿಸಿ ಸೋತಿರುವ ಕಾ.ಪು. ಸಿದ್ದಲಿಂಗ ಸ್ವಾಮಿ ಸಹ ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಮತಗಳು ನಿರ್ಣಾಯಕ ಮಟ್ಟದಲ್ಲಿವೆ. ಈ ಹಿನ್ನೆಯಲ್ಲಿ ಲಿಂಗಾಯತ ನಾಯಕರು ಹಾಗೂ ವೃತ್ತಿಯಲ್ಲಿ ಇದ್ದಾಗ ಖ್ಯಾತಿ ಗಳಿಸಿರುವ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಸೋತಿರುವ ಕಾ.ಪು. ಸಿದ್ದಲಿಂಗಸ್ವಾಮಿ ಅವರಿಗೆ ಸ್ಥಳೀಯ ಬಿಜೆಪಿ ವಲಯದಲ್ಲೇ ದೊಡ್ಡ ವಿರೋಧವಿದೆ. ಅಲ್ಲದೆ ಸ್ಥಳೀಯ ಜನರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಂಕರ ಬಿದರಿ ಸ್ಪರ್ಧೆ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದೆ ಎಂದು ಹೇಳಲಾಗ್ತಿದೆ.