Tag: varu dhawan

  • ಫ್ಯಾಶನ್ ಡಿಸೈನರ್ ಕೈ ಹಿಡಿದ ನಟ ವರುಣ್ ಧವನ್

    ಫ್ಯಾಶನ್ ಡಿಸೈನರ್ ಕೈ ಹಿಡಿದ ನಟ ವರುಣ್ ಧವನ್

    ಮುಂಬೈ: ಬಾಲಿವುಡ್ ಖ್ಯಾತ ನಟ ವರುಣ್ ಧವನ್ ಅವರು ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹಿಂದೂ ಸಂಪ್ರದಾಯದಂತೆ ಅಲಿಬಾಗ್‍ನ ಐಷಾರಾಮಿ ‘ದಿ ಮಾನ್ಶನ್’ ಹೋಟೆಲ್‍ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಭಾನುವಾರ ಸಂಜೆ 6.30ರಿಂದ ಮದುವೆ ಕಾರ್ಯ ಆರಂಭವಾಗಿದೆ. ಹೋಟೆಲ್ ಒಳಗಡೆ ಮದುವೆ ನಡೆಯುವ ಸ್ಥಳದಲ್ಲಿ ಆಮಂತ್ರಣ ನೀಡಿದವರ ಹೊರತಾಗಿ ಯಾರಿಗೂ ಒಳ ಪ್ರವೇಶಕ್ಕೆ ಅನುಮತಿಯಿಲ್ಲ. ಹೀಗಾಗಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.

    ಮದುವೆಯಲ್ಲಿ ನವ ದಂಪತಿ ಭಾರೀತಯ ಉಡುಗೆಯಲ್ಲಿ ಮಿಂಚಿದ್ದಾರೆ. ನತಾಶಾ ಲೆಹೆಂಗಾ ಧರಿಸಿ ಸರಳವಾಗಿ ಮೇಕಪ್ ಮಾಡಿದ್ದರು. ಅಲ್ಲದೆ ಕಡಿಮೆ ಆಭರಣಗಳನ್ನು ಧರಸಿದ್ದರು. ಇನ್ನು ಧವನ್ ನೀಲಿ ಬಣ್ಣದ ಶೆರ್ವಾನಿ ಧರಿಸಿದ್ದರು. ಮೇ 2020ರಲ್ಲಿಯೇ ಧವನ್, ದಲಾಲ್ ಮದುವೆ ನಿಶ್ಚಯ ಮಾಡಿದ್ದರು. ಆದರೆ ಮಹಾಮಾರಿ ಕೊರೊನಾದಿಂದಾಗಿ ಮದುವೆಯನ್ನು 2021ಕ್ಕೆ ಮುಂದೂಡಲಾಗಿತ್ತು.

    ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ವರುಣ್ ಮತ್ತು ನತಾಶಾ ದಲಾಲ್ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ವರುಣ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪ್ರೀತಿ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು. ಕ್ರಮೇಣ ಜೋಡಿ ಸಾರ್ವಜನಿಕವಾಗಿ ತಿರುಗಾಡುತ್ತಾ ಕ್ಯಾಮರಾ ಮುಂದೆ ಪೋಸ್ ನೀಡುತ್ತಿದ್ದರು. ಮೊದಲಿಗೆ ವರುಣ್ ಮೂರು ಬಾರಿ ಪ್ರೇಮ ನಿವೇದನೆ ಮಾಡಿದರು ಕೂಡ ಒಪ್ಪಿಗೆ ನೀಡದ ನತಾಶಾ ಅವರು ಕೊನೆಗೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.