Tag: Vartur Prakash

  • ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ

    ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ

    ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು 2.1 ಕೆ.ಜಿ ಚಿನ್ನಾಭರಣದ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶ್ವೇತಾಗೌಡ ವಂಚಿಸಿ, ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣದ ಸುಳಿವು ಸಿಕ್ಕಿದೆ.ಇದನ್ನೂ ಓದಿ: ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್‌

    ಐಶ್ವರ್ಯಾ ಗೌಡಳ ವಂಚನೆ ಪ್ರಕರಣ ಸದ್ದು ಮಾಡುವ ಮೊದಲೇ ಶ್ವೇತಾಗೌಡಳ ವಂಚನೆ ಪ್ರಕರಣ ಸದ್ದು ಮಾಡಿತ್ತು. ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿದ್ದಕ್ಕೆ ಆಕೆಯನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಆರೋಪಿ ಶ್ವೇತಾಗೌಡ ಅರೆಸ್ಟ್ ಆಗಿದ್ದರೂ ಕೂಡ, ಚಿನ್ನದ ಮೂಲ ಗೊತ್ತಾಗಿರಲಿಲ್ಲ. ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ ಹೋಗಿ ಹುಡುಕಾಡಿದರೂ ಕೂಡ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಜೋಧಪುರದಲ್ಲಿ ಮೋಹನ್ ಲಾಲ್ ಎಂಬಾತನನ್ನು ಬಂಧಿಸಿದ ಕರೆತಂದಾಗ ಚಿನ್ನ ಎಲ್ಲಿದೆ ಎಂಬ ಮಾಹಿತಿ ಬಯಲಾಗಿದೆ.

    ನವರತ್ನ ಜ್ಯುವೆಲರಿ ಮಾಲೀಕರಿಗೆ 2 ಕೆ.ಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡಳನ್ನ ಹಾಗೂ ವರ್ತೂರು ಪ್ರಕಾಶ್‌ರನ್ನು ತನಿಖಾಧಿಕಾರಿ ಎಸಿಪಿ ಗೀತಾ ವಿಚಾರಣೆ ನಡೆಸಿದ್ದರು. ಅಲ್ಲದೆ ಪ್ರಕರಣದಲ್ಲಿ ಶ್ವೇತಗೌಡ ಸೇರಿ ಚೆನ್ನರಾಮ್ ಹಾಗೂ ಮೋಹನ್ ಲಾಲ್‌ರನ್ನ ಬಂಧಿಸಿದ್ದರು. ನವರತ್ನ ಜ್ಯುವೆಲರಿ ಮಾಲೀಕ ಸಂಜಯ್ ಭಾಷಾ ಬಳಿ ಪಡೆದಿದ್ದ 2ಕೆ.ಜಿ 945 ಗ್ರಾಂ ಚಿನ್ನದಲ್ಲಿ 800 ಗ್ರಾಂ ರಿಕವರಿ ಆಗಿತ್ತು. ಉಳಿದ 2 ಕೆ.ಜಿ 145 ಗ್ರಾಂ ಚಿನ್ನದ ಸುಳಿವೇ ಸಿಕ್ಕಿರಲಿಲ್ಲ. ಶ್ವೇತಾ ವಿಚಾರಣೆ ವೇಳೆ ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್‌ಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಳು.

    ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್ ಬಂಧಿಸಿ ವಿಚಾರಣೆ ನಡೆಸಿದಾಗ ಚೆನ್ನಾರಾಮ್‌ನ ಸಂಬಂಧಿ ಮೋಹನ್ ಲಾಲ್ ಚಿನ್ನಾಭರಣ ಪಡೆದಿರೋದಾಗಿ ಮಾಹಿತಿ ನೀಡಿದ್ದ. ಮೋಹನ್ ಲಾಲ್‌ನ ಜೋಧಪುರದಿಂದ ಬಂಧಿಸಿ ಕರೆತಂದಾಗ ಬಾಗಲಗುಂಟೆಯ ತೋಟದ ಗುಡ್ಡದಹಳ್ಳಿಯ ಬೇರಾರಾಮ್ ಬಳಿಯಿದೆ ಎಂದು ಮಾಹಿತಿ ನೀಡಿದ್ದಾನೆ.

    ಬೇರಾ ರಾಮ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ನಂಬರ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರು ಬಿಟ್ಟು ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದಾನೆ. ಸದ್ಯ ನಾಪತ್ತೆಯಾಗಿರುವ ಬೇರಾ ರಾಮ್‌ಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.ಇದನ್ನೂ ಓದಿ: ಮುದುಕಾಗುತ್ತಿರುವ ಚೀನಾ – ಮದುವೆಯಿಂದ ದೂರ ಉಳಿಯುತ್ತಿರುವ ಯುವಜನತೆ!

     

     

  • 3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

    3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

    -ರಾಜಕಾರಣಿ, ನಟ-ನಟಿಯರ ಜೊತೆ ಪೋಟೋ ತೆಗೆಸಿಕೊಂಡು ದುರ್ಬಳಕೆ ಆರೋಪ

    ಬೆಂಗಳೂರು: ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

    ಆರೋಪಿಯನ್ನು ಬಾಗಲಗುಂಟೆ (Bagalagunte) ನಿವಾಸಿ ಶ್ವೇತಾಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್‌ ಪ್ರವಾಸ

    ಕೆಲ ದಿನಗಳ ಹಿಂದೆ ಕಮರ್ಷಿಯಲ್ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್ ಮಾಲೀಕ ಸಂಜಯ್ ಭಾಷ್ನಾ ಅವರನ್ನು ಶ್ವೇತಾಗೌಡ ಭೇಟಿಯಾಗಿದ್ದಳು. ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ ಎಂದಿದ್ದಳು. ಇದಕ್ಕೆ ಸಂಜಯ್ ಸಹ ಸಮ್ಮಿತಿಸಿದ್ದರು. ಆಕೆಯ ಮಾತು ನಂಬಿ ಆರಂಭದಲ್ಲಿ ಎರಡು ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು.

    ಹೀಗೆ ವಿಶ್ವಾಸಗಳಿಸಿದ ಶ್ವೇತಾ, ಕೊನೆಗೆ ನವರತ್ನ ಜ್ಯುವೆಲರ್ಸ್ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು.

    ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಲಾಯಿತು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಆರೋಪಿ ಮಾಜಿ ಸಚಿವರ ಮನೆ ವಿಳಾಸ ನೀಡಿರುವ ಆರೋಪದ ಆಧಾರದ ಮೇಲೆ ವರ್ತೂರು ಪ್ರಕಾಶ್ ವಿಚಾರಣೆಗೆ ಪೊಲೀಸರು ನಿರ್ಧರಿಸಿದ್ದಾರೆ. ಈ ಬಗ್ಗೆ ವರ್ತೂರು ಪ್ರಕಾಶ್ ಮಾತನಾಡಿ, ಫೋನ್‌ನಲ್ಲಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸಿಟಿ ರವಿ ಕೇಸ್‌ – ಪ್ರತಿಷ್ಠಿಗೆ ಬಿದ್ದು ಏನೋ ಮಾಡಲು ಹೋಗಿ ಯಡವಟ್ಟು ಮಾಡಿತಾ ಸರ್ಕಾರ?

     

  • ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್ – ನಾಲ್ವರ ಬಂಧನ

    ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್ – ನಾಲ್ವರ ಬಂಧನ

    – ಗೋವಾ ಪ್ರವಾಸದಲ್ಲಿ ಅಪಹರಣಕಾರರು

    ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಂಧಿಸಿದಂಯೆ ಕೋಲಾರ ಪೊಲೀಸರು ಬೆಂಗಳೂರು ಮೂಲದ ನಾಲ್ವರನ್ನ ಬಂಧಿಸಿದ್ದಾರೆ. ಕೆಲ ಆರೋಪಿಗಳ ಅಪಹರಣದಲ್ಲಿ ಸಿಕ್ಕ ಹಣದಿಂದ ಗೋವಾ ಕಡೆ ಟೂರ್ ನಲ್ಲಿರುವ ವಿಷಯ ಬೆಳಕಿಗೆ ಬಂದಿದೆ.

    ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರ ಪೊಲೀಸರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಪ್ರಕರಣ ವರ್ಗಾವಣೆಯಾದ ಬಳಿಕ ಸತತ ನಾಲ್ಕು ತಂಡಗಳಾಗಿ ಅಪಹರಣಕಾರರಿಗಾಗಿ ಬಲೆ ಬೀಸಿರುವ ಪೊಲಿಸರಿಗೆ ಎಲ್ಲಾ ಆರೋಪಿಗಳು ಸುಳಿವು ಸಿಕ್ಕಿದೆ. ಆದ್ರೆ ಅಪಹರಣದ ಕಿಂಗ್‍ಪಿನ್ ಎನ್ನಲಾದ ಪ್ರಮುಖ ಆರೋಪಿ ತಮಿಳುನಾಡಿನ ಹೊಸುರು ಮೂಲದ ಕವಿರಾಜ್ ಗಾಗಿ ತೀವ್ರ ಶೋಧಕಾರ್ಯ ನಡಯುತ್ತಿದೆ. ಸದ್ಯದಲ್ಲಿಯೇ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಕೋಲಾರಕ್ಕೆ ಆಗಮಿಸಿ ಮಾಹಿತಿ ನೀಡಲಿದ್ದಾರೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಮಾಹಿತಿ ನೀಡಲು ಎಸ್.ಪಿ.ಕಾರ್ತಿಕ್ ರೆಡ್ಡಿ ಹಿಂದೇಟು ಹಾಕಿದ್ದಾರೆ. ಇದೇ ವೇಳೆ ಇನ್ನೆರಡು ದಿನಗಳಲ್ಲಿ ಪ್ರಕರಣವನ್ನ ಭೇದಿಸಲಿದ್ದೇವೆ ಎಂದು ಸಹ ಹೇಳಿದ್ದಾರೆ.