Tag: Varsha Belawadi

  • ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ

    ಬಹುಕಾಲದ ಗೆಳತಿಯೊಂದಿಗೆ ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ವಿನಾಯಕ್ ಜೋಶಿ ತಮ್ಮ ಬಹುಕಾಲದ ಗೆಳತಿ ವರ್ಷಾ ಬೆಳವಾಡಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

    ಇಂದು ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಿತು. 15 ರಿಂದ 55 ವರ್ಷದೊಳಗಿನವರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದರಿಂದ, ಮದುವೆಯಲ್ಲಿ ಸ್ನೇಹಿತರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಸ್ನೇಹಿತರಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಿದ್ದಾರೆ.

    ವರ್ಷಾ ಬೆಳವಾಡಿ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಯಚರಾಗಿದ್ದರು. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೇ ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ ಎಂದು ವಿನಾಯಕ್ ಜೋಶಿ ಈ ಹಿಂದೆ ತಿಳಿಸಿದ್ದರು.

    ವಿನಾಯಕ್ ಜೋಶಿ ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಯಾಲಿಟಿ ಶೋ ‘ಬಿಗ್‍ಬಾಸ್’ ಮೊದಲ ಸೀಸನ್‍ನಲ್ಲಿ ವಿನಾಯಕ್ ಸ್ಪರ್ಧಿಸಿದ್ದರು.

  • ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಜೊತೆ ವಿನಾಯಕ್ ಜೋಷಿ ಮದ್ವೆ

    ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಜೊತೆ ವಿನಾಯಕ್ ಜೋಷಿ ಮದ್ವೆ

    ಬೆಂಗಳೂರು: ಮಹಾಮಾರಿ ಕೊರೊನಾ ಮಧ್ಯೆಯೂ ಸ್ಯಾಂಡಲ್‍ವುಡ್‍ನಲ್ಲಿ ಕೆಲವು ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಮಯೂರಿ ತಮ್ಮ ಬಹುಕಾಲದ ಗೆಳೆಯನನ್ನು ವರಿಸಿದ್ದಾರೆ. ಇದೀಗ ನಟ ವಿನಾಯಕ್ ಜೋಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ನಟ ವಿನಾಯಕ್ ಜೋಶಿ ತಮ್ಮ ಗೆಳತಿ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರನ್ನು ಮದುವೆಯಾಗಲಿದ್ದಾರೆ. ವರ್ಷಾ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ  ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಯಚರಾಗಿದ್ದರು.

    ತಮ್ಮ ಗೆಳತಿಯ ಬಗ್ಗೆ ಮಾತನಾಡಿದ ವಿನಾಯಕ್ ಜೋಶಿ, ನಾವು 7 ವರ್ಷದವರಿದ್ದಾಗ ಒಟ್ಟಿಗೆ ಡ್ಯಾನ್ಸ್ ಮಾಡಿದ್ದೇವೆ. ನಂತರ 25 ವರ್ಷಗಳ ಬಳಿಕ ಮತ್ತೆ ಸಾಮಾನ್ಯ ಸ್ನೇಹಿತರಾಗುವ ಮೂಲಕ ಭೇಟಿಯಾಗಿದ್ದೆವು. ಅಂದಿನಿಂದ ನಾವು ಆಗಾಗ ಭೇಟಿಯಾಗುತ್ತಿದ್ದೇವೆ ಎಂದರು.

    ವರ್ಷಾ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಅನೇಕ ಅಂತರಾಷ್ಟ್ರಿಯ ಪಂದ್ಯಾವಳಿಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೇ ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ ಎಂದು ವಿನಾಯಕ್ ಜೋಶಿ ತಮ್ಮ ಗೆಳತಿಯ ಬಗ್ಗೆ ಮಾತನಾಡಿದರು.

    ವಿನಾಯಕ್ ಜೋಶಿ ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಯಾಲಿಟಿ ಶೋ ‘ಬಿಗ್‍ಬಾಸ್’ ಮೊದಲ ಸೀಸನ್‍ನಲ್ಲಿ ವಿನಾಯಕ್ ಸ್ಪರ್ಧಿಸಿದ್ದರು.

    ಸದ್ಯಕ್ಕೆ ಶೀಘ್ರದಲ್ಲೇ ವಿನಾಯಕ್ ಜೋಶಿ ತಮ್ಮ ಗೆಳತಿ ವರ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ. ಆದರೆ ಮದುವೆ ದಿನಾಂಕ ಮತ್ತು ಸ್ಥಳವನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.