Tag: varisu film

  • ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಸೌತ್ ಮತ್ತು ಬಾಲಿವುಡ್ (Bollywood) ಅಂಗಳದಲ್ಲಿ ಮಿಂಚ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna)  `ವಾರಿಸು’ (Varisu) ಮತ್ತು `ಮಿಷನ್ ಮಜ್ನು’ (Mission Majnu) ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ನಡುವೆ ವಿಶ್ವದ ಪ್ರಸಿದ್ಧ ಫ್ಯಾಷನ್‌ನಲ್ಲಿ ಭಾಗವಹಿಸಲು ನಟಿ ರಶ್ಮಿಕಾ ಇಟಲಿ ಹಾರಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ತಮ್ಮ ಬ್ಯೂಟಿ ಸೀಕ್ರೆಟ್ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ.

    ಅದೃಷ್ಟದ ನಟಿ ರಶ್ಮಿಕಾ ಮಂದಣ್ಣ ಪ್ರತಿಭೆ ಜೊತೆ ಲಕ್ ಕೂಡ ಕೈ ಹಿಡಿದಿದೆ. ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದಿಂದ ಸಿನಿಪಯಣ ಶುರು ಮಾಡಿದ್ದ ನಟಿ ಈಗ ನ್ಯಾಷನಲ್ ಕ್ರಶ್ ಆಗಿ ಬಾಲಿವುಡ್- ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ವರ್ಷದ ಆರಂಭದಲ್ಲಿಯೇ 2 ಸಿನಿಮಾ ಹಿಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

     

    View this post on Instagram

     

    A post shared by Viral Bhayani (@viralbhayani)

    ಜಗತ್ತೀನ 4 ಫ್ಯಾಷನ್ ವೀಕ್‌ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ (Milan Fashion Week) ಭಾಗವಹಿಸಲು (ಫೆ.22)ದಂದು ಇಟಲಿಯತ್ತ ರಶ್ಮಿಕಾ ಪ್ರಯಾಣ ಬೆಳೆಸಿದ್ದಾರೆ. ಹೋಗುವ ಮುನ್ನ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಈ ವೇಳೆ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ರಶ್ಮಿಕಾಗೆ ಪಾಪರಾಜಿಗಳು ಕೇಳಿದ್ದಾರೆ.

    ಪಾಪರಾಜಿಗಳ ಪ್ರಶ್ನೆಗೆ ನಾಚಿದ ರಶ್ಮಿಕಾ, ನನ್ನ ನಗುವೇ ನನ್ನ ಸೌಂದರ್ಯದ ಗುಟ್ಟು ಎಂದಿದ್ದಾರೆ. ನಂತರ ನನ್ನ ಸೌಂದರ್ಯಕ್ಕೆ ನೀವು ಕೂಡ ಕಾರಣ ಎಂದು ಪಾಪರಾಜಿಗಳಿಗೂ ಕ್ರೆಡಿಟ್ ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ವಾರಿಸು’ ನಟಿ ರಶ್ಮಿಕಾ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್!

    `ವಾರಿಸು’ ನಟಿ ರಶ್ಮಿಕಾ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್!

    ಚಿತ್ರರಂಗದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಇತ್ತೀಚಿನ ವಿಜಯ್, ರಶ್ಮಿಕಾ ನಟನೆಯ `ವಾರಿಸು’ (Varisu) ಚಿತ್ರದ `ರಂಜಿತಮೇ’ಸಾಂಗ್ (Ranjiname Song) ಕ್ರೇಜ್ ಎಷ್ಟರ ಮಟ್ಟಿಗೆ ಜೋರಾಗಿದೆ ಅಂದ್ರೆ ತಾಯಿ ಗರ್ಭದಲ್ಲಿರುವ ಮಗು ಕೂಡ ರಶ್ಮಿಕಾ ಹಾಡಿಗೆ ಡ್ಯಾನ್ಸ್ ಮಾಡಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಸ್ಯಾಂಡಲ್‌ವುಡ್ (Sandalwood) ಸೇರಿದಂತೆ ಎಲ್ಲಾ ಭಾಷೆಯ ರಂಗದಲ್ಲೂ ರಶ್ಮಿಕಾ ಮಂದಣ್ಣಗೆ ಬೇಡಿಕೆಯಿದೆ. ಆಕೆ ನಟಿಸುವ ಸಿನಿಮಾ ಮೇಲೆ ಕ್ರೇಜ್ ಇದೆ. ಹೀಗಿರುವಾಗ ದಳಪತಿ ವಿಜಯ್ (Vijay) ಜೊತೆ ವಾರಿಸು (Varisu) ಚಿತ್ರಕ್ಕಾಗಿ `ರಂಜಿತಮೇ’ ಹಾಡಿಗೆ ರಶ್ಮಿಕಾ ಜಬರ್‌ದಸ್ತ್ ಆಗಿ ಸ್ಟೇಪ್ ಹಾಕಿದ್ದಾರೆ. ಈ ಹಾಡು ಏಲ್ಲಡೆ ಸದ್ದು ಮಾಡಿತ್ತು.

    ಈ ಬಿಂದಾಸ್ ಸಾಂಗ್‌ಗೆ ಹುಟ್ಟುವ ಮಗು ಕೂಡ ಕುಣಿಯುತ್ತಿದೆ. ‘ರಂಜಿತಮೇ’ ಸಾಂಗ್ ತಮ್ಮ ಫ್ಯಾಮಿಲಿಗೆ ಬಹಳ ವಿಶೇಷ ಎಂದು ಹೇಳಿ ತಮಿಳು ಕುಟುಂಬವೊಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮ್ಯಾರೇಜ್ ಆಫರ್ ಕೊಟ್ಟವನಿಗೆ ನೋ ನೋ ಎಂದ ಅನುಶ್ರೀ

    ವೀಡಿಯೋದಲ್ಲಿ ಒಬ್ಬ ಮಹಿಳೆ ಬೇಬಿ ಬಂಪ್ ಜೊತೆ ನಗುತ್ತಾ ಸಂಭ್ರಮಿಸುತ್ತಾ ಕಾಣಿಸಿಕೊಂಡಿದ್ದಾರೆ. `ರಂಜಿತಮೇ’ ಸಾಂಗ್ ಪ್ಲೇ ಆಗುತ್ತಿದ್ದಂತೆ ಆಕೆಯ ಹೊಟ್ಟೆಯಲ್ಲಿನ ಮಗು ಕುಣಿದಾಡುವಂತಹ ಚಲನೆ ಗೋಚರಿಸುತ್ತವೆ. ಈ ಹಾಡು ಹಾಕಿದ ಪ್ರತಿಸಾರಿ ನನ್ನ ಮಗು ಹೀಗೆ ಡ್ಯಾನ್ಸ್ ಮಾಡುತ್ತೆ ಎಂದು ಆಕೆ ಸಂಭ್ರಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?

    ಕಾಲಿವುಡ್ (Kollywood) ಅಂಗಳದಲ್ಲಿ ಸದ್ಯ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ವಿಚಾರ ಅಂದ್ರೆ ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯ ಜೀವನದ ಬಗ್ಗೆ ಸದ್ದು ಮಾಡ್ತಿದೆ. ಇಬ್ಬರ ಡಿವೋರ್ಸ್ ವದಂತಿಯ ನಡುವೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸುದ್ದಿಯಲ್ಲಿದ್ದಾರೆ. ವಿಜಯ್ ದಾಂಪತ್ಯ ಕಲಹಕ್ಕೆ ರಶ್ಮಿಕಾ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.

    ತಮಿಳು ನಟ ವಿಜಯ್ ದಳಪತಿ (Vijay) ದಾಂಪತ್ಯ ಚೆನ್ನಾಗಿಲ್ಲ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಿನಿಮಾ ನಗರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಮೂಲಗಳ ಪ್ರಕಾರ, ವಿಜಯ್, ಸಂಗೀತಾ (Sangeetha) ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಿಜಯ್ ಬದುಕಿನ ಈ ಸಮಸ್ಯೆಗೆ ರಶ್ಮಿಕಾ ಮಂದಣ್ಣನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ. ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆನೇ ಐರೆನ್‌ ಲೆಗ್‌ ನಟಿ ಎಂದು ರಶ್ಮಿಕಾ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

    `ವಾರಿಸು’ (Varisu Film) ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ಮಧ್ಯೆ ರಶ್ಮಿಕಾ ಬಗೆಗಿನ ಚರ್ಚೆ ಕೂಡ ಜಾಸ್ತಿಯಾಗುತ್ತಿದೆ. 23 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬೀಳಲು ಕಾರಣವೇನು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. 80% ಅಷ್ಟು ಜನರು ರಶ್ಮಿಕಾನೇ ಕಾರಣ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ವಿಜಯ್, ಸಂಗೀತಾ ದಾಂಪತ್ಯ ಬದುಕು ಚೆನ್ನಾಗಿತ್ತು. ರಶ್ಮಿಕಾ ಬಂದ ಮೇಲೆ ಹೀಗೆಲ್ಲಾ ಆಗಿದೆ. ಒಟ್ನಲ್ಲಿ ಒಂದಲ್ಲಾ ಒಂದು ವಿವಾದದ ಮೂಲಕ ರಶ್ಮಿಕಾ ಸುದ್ದಿಯಲ್ಲಿರುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ ಮಂದಣ್ಣ ನಟನೆಯ ತಮಿಳು ಸಿನಿಮಾಗೆ ಸಂಕಷ್ಟ: ನೋಟಿಸ್ ಜಾರಿ

    ರಶ್ಮಿಕಾ ಮಂದಣ್ಣ ನಟನೆಯ ತಮಿಳು ಸಿನಿಮಾಗೆ ಸಂಕಷ್ಟ: ನೋಟಿಸ್ ಜಾರಿ

    ಳಪತಿ ವಿಜಯ್ (Thalapathy vijay) ಮತ್ತು ರಶ್ಮಿಕಾ(Rashmika Mandanna) ನಟನೆಯ `ವಾರಿಸು’ (Varisu Film) ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ಪ್ರಾಣಿ ದಯಾ ಸಂಘದವರು `ವಾರಿಸು’ ತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚಿತ್ರದಲ್ಲಿ ಅನುಮತಿಯಿಲ್ಲದೇ ಪ್ರಾಣಿಗಳ ಬಳಕೆ ಮಾಡಿದ್ದಕ್ಕೆ ರಶ್ಮಿಕಾ ಸಿನಿಮಾ ವಿರುದ್ಧ ನೋಟಿಸ್ ನೀಡಲಾಗಿದೆ.

    ರಶ್ಮಿಕಾ ಮಂದಣ್ಣ ನಟನೆಯ `ವಾರಿಸು’ ಸಿನಿಮಾ ದೊಡ್ಡ ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಪ್ರಾಣಿ ದಯಾ ಸಂಘದವರು ಚಿತ್ರತಂಡಕ್ಕೆ ನೋಟಿಸ್ ನೀಡಿದೆ. ಅಧಿಕಾರಿಗಳ ಅನುಮತಿ ಇಲ್ಲದೆ ಸಿನಿಮಾತಂಡ ಚಿತ್ರೀಕರಣದಲ್ಲಿ ಆನೆಗಳನ್ನು ಬಳಸಿಕೊಂಡ ಪರಿಣಾಮ ಪ್ರಾಣಿ ದಯಾ ಸಂಘ (Animal Welfare Board) ನೋಟಿಸ್ ನೀಡಿದೆ. ಈ ಬಗ್ಗೆ ಮುಂದಿನ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಅರಣ್ಯಾಧಿಕಾರಿಗಳು ʻವಾರಿಸುʼ ತಂಡಕ್ಕೆ ಸೂಚಿಸಿದ್ದಾರೆ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

    ನಿಯಮಗಳ ಪ್ರಕಾರ ಪ್ರಾಣಿಗಳನ್ನು ಶೂಟಿಂಗ್‌ನಲ್ಲಿ ಬಳಸಬಾರದು. ಪ್ರಾಣಿಗಳನ್ನು ಬಳಸಿದರೆ ಪ್ರತಿಯೊಬ್ಬ ವ್ಯಕ್ತಿಯು ನೋಂದಾಯಿಸಿಕೊಳ್ಳಬೇಕು. ಈ ನಿಯಮವನ್ನ ಚಿತ್ರತಂಡ ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ನಿರ್ಮಾಪಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    `ವಾರಿಸು’ ಸಿನಿಮಾಗೆ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇತ್ತೀಚಿಗಷ್ಟೆ ಸಿನಿಮಾದ ಮೇಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ವಿದೇಶದಿಂದ ತಾಯ್ನಾಡಿಗೆ ವಾಪಾಸ್ ಆಗಿರುವ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಜಯ್‌ಗೆ, ರಶ್ಮಿಕಾ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

    `ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

    ನ್ನಡದ ಚಸ್ಮಾ ಸುಂದರಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ(Rashmika Mandanna), ಇದೀಗ ಸೌತ್ ಮತ್ತು ನಾರ್ತ್ ಇಂಡಸ್ಟ್ರಿಯಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ `ವಾರಿಸು’ (Varisu)  ಸಿನಿಮಾಗಾಗಿ ವಿಜಯ್ ಜೊತೆ ಸೊಂಟ ಬಳುಕಿಸಿದ್ದಾರೆ.

    ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ'(Pushpa) ಶ್ರೀವಲ್ಲಿಯಾಗಿ ಗೆದ್ದಿರುವ ರಶ್ಮಿಕಾ ಮಂದಣ್ಣ, ಸದ್ಯ `ವಾರಿಸು'(Varisu) ಚಿತ್ರದ ವಿಷ್ಯವಾಗಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ವಿಜಯ್ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಕನಸಾಗಿತ್ತು. ಅದೀಗ ನನಸಾಗಿದೆ. ವಿಜಯ್‌ಗೆ(Vijay) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ವಿಜಯ್ ಜೊತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌

    `ವಾರಿಸು’ ಚಿತ್ರದ ರಂಜಿತಮೆ ಸಾಂಗ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ವಿಜಯ್ ಜೊತೆ ಹಾಟ್ ಆಗಿ ಕಾಣಿಸಿಕೊಂಡು ರಶ್ಮಿಕಾ ಸೊಂಟ ಬಳುಕಿಸಿರೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ. ಸಾಂಗ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲ್ಲೇ ವೀಕ್ಷಣೆ ಪಡೆದಿದೆ.

    `ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಂಗ್ ಭರ್ಜರಿ ಹಿಟ್ ಆಗಿತ್ತು. ಇದೀಗ `ವಾರಿಸು’ ಚಿತ್ರದ ಸಾಂಗ್‌ಗೆ ಅದ್ಬುತ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ಈ ಸಿನಿಮಾ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ದಳಪತಿ ವಿಜಯ್ ನಟನೆಯ `ವಾರಿಸು’ ಲುಕ್‌ಗೆ ಫ್ಯಾನ್ಸ್ ಬೋಲ್ಡ್

    ದಳಪತಿ ವಿಜಯ್ ನಟನೆಯ `ವಾರಿಸು’ ಲುಕ್‌ಗೆ ಫ್ಯಾನ್ಸ್ ಬೋಲ್ಡ್

    ಕಾಲಿವುಡ್ ನಟ ದಳಪತಿ ವಿಜಯ್‌ಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ದಳಪತಿ ವಿಜಯ್ ನಟನೆಯ ಮುಂಬರುವ 66ನೇ ಚಿತ್ರದ ಲುಕ್ ಮತ್ತು ಟೈಟಲ್ ಅನ್ನು ರಿವೀಲ್ ಮಾಡಿದೆ ಚಿತ್ರತಂಡ. ಸದ್ಯ ವಿಜಯ್ ನಟನೆಯ ನಯಾ ಲುಕ್ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರಾಕ್ಟ್ ಮಾಡುತ್ತಿದೆ.

    `ಬೀಸ್ಟ್’ ಸೋಲಿನ ನಂತರ ದಳಪತಿ ವಿಜಯ್ ನಟನೆಯ ಮುಂದಿನ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಸೂಪರ್ ಸ್ಟಾರ್ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಜತೆ ವಿಜಯ್ ಲುಕ್ ಕೂಡ ರಿವೀಲ್ ಆಗಿದೆ. `ವಾರಿಸು’ ಚಿತ್ರದ ಟೈಟಲ್ ಮೂಲಕ ವಿಜಯ್ ಸದ್ದು ಮಾಡ್ತಿದ್ದಾರೆ. ವಾರಿಸು ಎಂದರೆ ವಾರಸುದಾರ ಎಂಬ ಅರ್ಥವಿದೆ. `ವಾರಿಸು’ ಟೈಟಲ್ ಜತೆ ದಿ ಬಾಸ್ ರಿಟನ್ಸ್ ಎಂಬ ಅಡಿಬರಹವಿದೆ. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    `ವಾರಿಸು’ ಚಿತ್ರದಲ್ಲಿನ ವಿಜಯ್ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಭಂಗಿಯಲ್ಲಿ ಕುಳಿತಿರುವ ವಿಜಯ್, ದುಬಾರಿ ಸೂಟ್ ಧರಿಸಿ ಮಿಂಚಿದ್ದಾರೆ. ಇದೀಗ ʻವಾರಿಸುʼ ಚಿತ್ರದ ಸೆಕೆಂಡ್‌ ಲುಕ್‌ ಕೂಡ ರಿವೀಲ್‌ ಮಾಡಿದೆ. ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಜಯ್ ತಾಯ್ನಾಡಿಗೆ ಹಿಂದಿರುಗುವ ಶ್ರೀಮಂತ ಕುಟುಂಬದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್‌ಗೆ ಜೋಡಿಯಾಗಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

    Live Tv