Tag: varisu

  • 68ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದುಕೊಂಡ ದಳಪತಿ ವಿಜಯ್

    68ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದುಕೊಂಡ ದಳಪತಿ ವಿಜಯ್

    ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ‘ವಾರಿಸು’ (Varisu) ಸಿನಿಮಾದ ಸೂಪರ್ ಸಕ್ಸಸ್ ನಂತರ ‘ಲಿಯೋ’ (Leo Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ತಮ್ಮ ಮುಂದಿನ 68ನೇ ಚಿತ್ರದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದರು.  ಈ ಚಿತ್ರಕ್ಕೆ ತಮ್ಮ ಸಂಭಾವನೆಯನ್ನ ಕೂಡ ಹೆಚ್ಚಿಕೊಂಡಿದ್ದಾರೆ.

    ಈ ವರ್ಷ ‘ವಾರಿಸು’ ಸಿನಿಮಾದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡರು. ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ರೊಮ್ಯಾನ್ಸ್, ಆ್ಯಕ್ಷನ್ ಧಮಾಕ ಮೂಲಕ ವಿಜಯ್ ಅಬ್ಬರಿಸಿದ್ದರು. ಚಿತ್ರ ಕೂಡ ಕೋಟಿ ಕೋಟಿ ಕಲೆಕ್ಷನ್ ಮಾಡಿ ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿತ್ತು.

    ಇದೀಗ ತ್ರಿಷಾ ಕೃಷ್ಣನ್ (Thrisha Krishnan) ಜೊತೆ ‘ಲಿಯೋ’ (Leo) ಸಿನಿಮಾ ಮಾಡ್ತಿದ್ದಾರೆ ದಳಪತಿ ವಿಜಯ್. ವಾರಿಸು, ಲಿಯೋ ಎರಡು ಚಿತ್ರಕ್ಕೂ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ವಿಜಯ್ ಇದೀಗ ತಮ್ಮ 68ನೇ ಚಿತ್ರಕ್ಕೆ 50 ಕೋಟಿ ರೂಪಾಯಿ ಹೆಚ್ಚಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಚಿತ್ರಕ್ಕೆ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ದಕ್ಷಿಣ ಭಾರತದಲ್ಲಿ 100 ಕೋಟಿ ರೂಪಾಯಿ ಪಡೆಯುವ ಹೀರೋಗಳಿದ್ದಾರೆ. ಆದರೆ ಈಗ ವಿಜಯ್ 150 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

  • ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ನಿರ್ಮಾಪಕ ದಿಲ್ ರಾಜು (Dil Raju) ಅವರು ‘ವಾರಿಸು’ (Varisu) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ನಡುವೆ ಯಶ್ (Actor Yash) ಜೊತೆ ಸಿನಿಮಾ ಮಾಡೋದಾಗಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

    ಸೌತ್ ಸಿನಿರಂಗದ ನಿರ್ಮಾಪಕ ದಿಲ್ ರಾಜು ಸಾಕಷ್ಟು ಸಿನಿಮಾಗಳಿಗೆ ನಿರ್ಮಾಣ ಮಾಡುವ ಮೂಲಕ ಯಶಸ್ಸು ಗಳಿಸಿದ್ದಾರೆ. ವಿಜಯ್- ರಶ್ಮಿಕಾ ನಟನೆಯ ‘ವಾರಿಸು’ ಸಿನಿಮಾ ನಿರ್ಮಾಣ ಮಾಡಿ ಭರ್ಜರಿ ಲಾಭ ಗಿಟ್ಟಿಸಿಕೊಂಡಿದ್ದಾರೆ. 300 ಕೋಟಿ ರೂಪಾಯಿಗೂ ಅಧಿಕ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ.

    ‘ಕೆಜಿಎಫ್ 2’ (KGF 2) ಸಿನಿಮಾ ಸಕ್ಸಸ್ ನಂತರ ಯಶ್ (Yash) ತಮ್ಮ ಮುಂದಿನ ಸಿನಿಮಾಗೆ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ನಡೆ ಬಗ್ಗೆ ಎಲ್ಲೂ ಬಿಟ್ಟು ಕೊಡದೇ ಸೈಲೆಂಟ್ ಆಗಿ ವರ್ಕೌಟ್ ಮಾಡ್ತಿದ್ದಾರೆ. ದಿಲ್ ರಾಜ್, ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಹಿಂಟ್ ಕೊಟ್ಟಿರೋದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಪ್ರಭಾಸ್‌ ನಟನೆಯ ‘ಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌

    ಇತ್ತೀಚೆಗೆ ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ದಿಲ್ ರಾಜುಗೆ ಪ್ರಶ್ನೆ ಕೇಳಿದರು. ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ ಎಂದು ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಹೌದು ಎನ್ನುವ ಉತ್ತರ ನೀಡಿದೆ.

    ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಯಶ್ ಮುಂದಿನ ಸಿನಿಮಾಗೆ ದಿಲ್ ರಾಜು ನಿರ್ಮಾಣ ಮಾಡುತ್ತಾರಾ? ಅಥವಾ ಅಭಿಮಾನಿ ಪ್ರಶ್ನೆಗೆ ಸಹಜವಾಗಿ ದಿಲ್ ರಾಜು ಟೀಂ ಉತ್ತರಿಸಿದ್ರಾ ಎಂದು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡಬೇಕಿದೆ.

  • ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ರಶ್ಮಿಕಾ ಮಂದಣ್ಣ ಹಾಟ್ ಫೋಟೋಶೂಟ್

    ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ರಶ್ಮಿಕಾ ಮಂದಣ್ಣ ಹಾಟ್ ಫೋಟೋಶೂಟ್

    ನ್ನಡದ `ಕಿರಿಕ್ ಪಾರ್ಟಿ’ (Kirik Party) ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್ ಮತ್ತು ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಮಿಂಚ್ತಿದ್ದಾರೆ. ಈಗ ಬಿಟೌನ್ ದುನಿಯಾಗೆ ಇಷ್ಟವಾಗುವ ಹಾಗೇ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಕಿರಿಕ್ ಬ್ಯೂಟಿ ಹಾಟ್ ಲುಕ್ ಈಗ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

    ಲಕ್ಕಿ ನಟಿ ರಶ್ಮಿಕಾ ಸಕ್ಸಸ್ ಇತರೆ ನಟಿಯರಿಗೆ ತಲೆನೋವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಾ ವೃತ್ತಿರಂಗದಲ್ಲಿ ರಶ್ಮಿಕಾ ಮಂದಣ್ಣ ಮುನ್ನುಗ್ಗುತ್ತಿದ್ದಾರೆ. ನಟಿಯ ಸಕ್ಸಸ್ ಕಣ್ಣುಕುಕ್ಕುವಂತಿದೆ. ಸ್ಟಾರ್ ನಟರಿರುವ ಬಿಗ್‌ ಬಜೆಟ್‌ ಚಿತ್ರಕ್ಕೆ ಈಗ ರಶ್ಮಿಕಾನೇ  ನಾಯಕಿಯಾಗಬೇಕು ಎನ್ನುತ್ತಿದ್ದಾರೆ. ಸದ್ಯ ನಟಿ ರಶ್ಮಿಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇತ್ತೀಚಿಗೆ ರಶ್ಮಿಕಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಟಿಯ ಕೈಯಲ್ಲಿರೋ ಪುಷ್ಪ 2, `ಅನಿಮಲ್’ (Animal) ಸಿನಿಮಾಗಳನ್ನು ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಆಗಾಗ ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಕಿರಿಕ್ ಬೆಡಗಿ ಕ್ಯಾಮೆರಾ ಮುಂದೆ ಕಣ್ಣರಳಿಸಿದ್ದಾರೆ.

    ಹೊಸ ಫೋಟೊಶೂಟ್ ಮೇಕಿಂಗ್ ಝಲಕ್ ಅನ್ನು ಇನ್ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣ ಶೇರ್ ಮಾಡಿದ್ದಾರೆ. ರಶ್ಮಿಕಾಗೆ ಬಾಲಿವುಡ್ ನೀರು ಮೈಗತ್ತಿದಂತೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ಫೋಟೊಶೂಟ್‌ಗಳಲ್ಲಿ ಅದು ಗೊತ್ತಾಗುತ್ತಿದೆ. ರಶ್ಮಿಕಾ ಈಗ ಬಾಲಿವುಡ್ ಹೀರೋಯಿನ್ನೇ ಆಗಿಬಿಟ್ಟಿದ್ದಾರೆ. ಹಿಂದಿ ಸಿನಿಮಾ ಈವೆಂಟ್‌ಗಳಲ್ಲಿ ತುಂಡು ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಟ್ರೋಲ್ ಕೂಡ ಆಗಿದ್ದಾರೆ.

    ಸದ್ಯ ಹೊಸ ಫೋಟೊಶೂಟ್‌ನಲ್ಲಿ ಕಿರಿಕ್ ಬೆಡಗಿ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲಿವೇಜ್ ಶೋ, ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಕೊಂಚ ಬೋಲ್ಡ್ ಆಗಿಯೇ ದರ್ಶನ ಕೊಟ್ಟಿದ್ದಾರೆ. ಅಡಿಯಿಂದ ಮುಡಿವರೆಗೆ ಅಂದ ಚೆಂದ ಪ್ರದರ್ಶಿಸುತ್ತಾ ರಂಗೇರಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ `ವಾರಿಸು’ ಟೀಂ ಜೊತೆ ಕೈಜೋಡಿಸಿದ ದಳಪತಿ ವಿಜಯ್

    ಮತ್ತೆ `ವಾರಿಸು’ ಟೀಂ ಜೊತೆ ಕೈಜೋಡಿಸಿದ ದಳಪತಿ ವಿಜಯ್

    ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ನಟನೆಯ ʻವಾರಿಸುʼ (Varisu Film) ಸೂಪರ್ ಸಕ್ಸಸ್ ನಂತರ ಹೊಸ ಚಿತ್ರ `ಲಿಯೋ’ (Liyo) ಪ್ರಾಜೆಕ್ಟ್‌ನಲ್ಲಿ  ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೆ `ವಾರಿಸು ಟೀಂ’ ವಿಜಯ್‌ನ ಭೇಟಿ ಮಾಡಿದ್ದಾರೆ. ತಂಡದ ಹೊಸ ಚಿತ್ರಕಥೆಗೆ ದಳಪತಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    `ಬೀಸ್ಟ್’ ಚಿತ್ರ ಸೋಲಿನಿಂದ ಬೇಸತ್ತ ದಳಪತಿ ವಿಜಯ್‌ಗೆ `ವಾರಿಸು’ ಸಿನಿಮಾ ಸಕ್ಸಸ್ ದೊಡ್ಡ ಮಟ್ಟದಲ್ಲಿ ತಿರುವು ನೀಡಿದೆ. ಇದೇ ಖುಷಿಯಲ್ಲಿ ತಮ್ಮ 67ನೇ ಚಿತ್ರ ʻಲಿಯೋʼ ಪ್ರಾಜೆಕ್ಟ್‌ನತ್ತ ವಿಜಯ್ ಮುಖ ಮಾಡಿದ್ದಾರೆ.

    `ವಾರಿಸು’ ಸಿನಿಮಾ ಕಥೆ, ವಿಜಯ್ -ರಶ್ಮಿಕಾ ರೊಮ್ಯಾನ್ಸ್, ಸಾಂಗ್ಸ್ ಎಲ್ಲವೂ ತೆರೆಯ ಮೇಲೆ ಕಮಾಲ್ ಮಾಡೋದರಲ್ಲಿ ಗೆದ್ದಿತ್ತು. ಇದೀಗ ಮತ್ತೆ ಈ ಟೀಂ ಒಂದಾಗುತ್ತಿದೆ. ಭಿನ್ನ ಕಥೆಯೊಂದಿಗೆ `ವಾರಿಸು’ ನಿರ್ದೇಶಕ ನಟ ವಿಜಯ್ ಭೇಟಿ ಮಾಡಿ ಕಥೆ ಹೇಳಿದ್ದಾರೆ. ವಿಜಯ್ ಕೂಡ ಕಥೆ ಕೇಳಿ ಥ್ರಿಲ್ ಆಗಿ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    `ಲಿಯೋ’ ಚಿತ್ರ ಮುಗಿಯುತ್ತಿದ್ದಂತೆ `ವಾರಿಸು’ ಟೀಂ ಜೊತೆ ವಿಜಯ್ ಹೊಸ ಸಿನಿಮಾ ಮಾಡಲಿದ್ದಾರೆ. ಮತ್ತೆ ಈ ಚಿತ್ರಕ್ಕೆ‌ ವಿಜಯ್‌ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ವಾರಿಸು’ ಚಿತ್ರದಲ್ಲಿ ನಟಿಸಲು ದಳಪತಿ ವಿಜಯ್ ಪಡೆದ ಸಂಭಾವನೆ ಕೇಳಿ ಬೆಚ್ಚಿಬಿದ್ದ ಚಿತ್ರರಂಗ

    `ವಾರಿಸು’ ಚಿತ್ರದಲ್ಲಿ ನಟಿಸಲು ದಳಪತಿ ವಿಜಯ್ ಪಡೆದ ಸಂಭಾವನೆ ಕೇಳಿ ಬೆಚ್ಚಿಬಿದ್ದ ಚಿತ್ರರಂಗ

    ಕಾಲಿವುಡ್ (Kollywood) ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ನಟನೆಯ `ವಾರಿಸು’ ಸಿನಿಮಾ ತೆರೆಗೆ ಅಪ್ಪಳಿಸಿದೆ. ತಮಿಳು ಮಾತ್ರವಲ್ಲದೇ ಪರಭಾಷೆಗಳಲ್ಲೂ ವಿಜಯ್ ಸಿನಿಮಾಗೆ ಭಾರಿ ಡಿಮ್ಯಾಂಡ್‌ಯಿದೆ. ಹೀಗಿರುವಾಗ `ವಾರಿಸು’ (Varisu) ಚಿತ್ರದಲ್ಲಿ ನಟಿಸಲು ವಿಜಯ್ ದುಬಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವಿಜಯ್ ಪೇಮೆಂಟ್ ಕೇಳಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.

    ವಿಜಯ್ (Vijay) ನಟನೆಯ ಸಿನಿಮಾಗಳು ಹಿಂದಿಯಲ್ಲೂ ಡಬ್ ಆಗಿ ಕೋಟಿ ಕೋಟಿ ಗಳಿಕೆ ಮಾಡುತ್ತಾರೆ. ದಳಪತಿ ವಿಜಯ್ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದರೆ ಲಾಭ ಗ್ಯಾರಂಟಿ ಎಂಬ ನಂಬಿಕೆ ನಿರ್ಮಾಪಕರ ವಲಯದಲ್ಲಿ ಇದೆ. ಹಾಗಾಗಿ ವಿಜಯ್ ಅವರು ಕೇಳಿದಷ್ಟು ಸಂಭಾವನೆಯನ್ನು ‘ವಾರಿಸು’ ಚಿತ್ರದಲ್ಲಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ನಟಿಸಿದ್ದಕ್ಕಾಗಿ ವಿಜಯ್ ಅವರು 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಲಿವುಡ್ ಸಿನಿಮಾದಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ

    `ಕೆಜಿಎಫ್: ಚಾಪ್ಟರ್ 2′ (Kgf 2) ಚಿತ್ರದ ಎದುರು ಬೀಸ್ಟ್ ಬಿಡುಗಡೆ ಆಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ಸೂಕ್ತ ಸಮಯದಲ್ಲಿ ರಿಲೀಸ್ ಮಾಡಿದ್ದರೆ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಇನ್ನೂ ಹೆಚ್ಚು ಕಲೆಕ್ಷನ್ ಮಾಡುತ್ತಿತ್ತು. ಇನ್ನು, ಕಿರುತೆರೆ ಪ್ರಸಾರ ಹಕ್ಕು, ಒಟಿಟಿ ರೈಟ್ಸ್ ಇತ್ಯಾದಿಯಿಂದಲೂ ಆ ಚಿತ್ರಕ್ಕೆ ಬಹುಕೋಟಿ ರೂಪಾಯಿ ಆದಾಯ ಬಂದಿತ್ತು.

    ಸದ್ಯ ವಿಜಯ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ `ವಾರಿಸು’ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ವಿಜಯ್ ಸಂಭಾವನೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಂತಾ ಬಗ್ಗೆ ಹೀಗ್ಯಾಕೆ ಹೇಳಿದ್ರು ರಶ್ಮಿಕಾ ಮಂದಣ್ಣ

    ಸಮಂತಾ ಬಗ್ಗೆ ಹೀಗ್ಯಾಕೆ ಹೇಳಿದ್ರು ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) `ವಾರಿಸು’ (Varisu) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಮಂತಾ (Samantha) ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ನಾನು ಯಾವಾಗಲೂ ಸಮಂತಾ ಪರವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.

    `ಪುಷ್ಪ’ (Pushpa) ಸಿನಿಮಾದಲ್ಲಿ ಸಮಂತಾ ಮತ್ತು ರಶ್ಮಿಕಾ ಇಬ್ಬರೂ ಕಮಾಲ್ ಮಾಡಿದ್ದರು. ಈ ಚಿತ್ರದ ಮೂಲಕ ಇಬ್ಬರ ನಡುವೆ ಒಂದೊಳ್ಳೆ ಬಾಡಿಂಗ್ ಕ್ರಿಯೆಟ್ ಆಗಿತ್ತು. ಇದೀಗ `ವಾರಿಸು’ ಚಿತ್ರದ ಪ್ರಚಾರದ ವೇಳೆ ಸಮಂತಾ ಆರೋಗ್ಯದ ಬಗ್ಗೆ ರಶ್ಮಿಕಾ ಮಂದಣ್ಣ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಸಮಂತಾ ವಿಚಾರದಲ್ಲಿ ನಾನು ಪೊಸೆಸಿವ್ ಎಂದು ರಶ್ಮಿಕಾ ಹೇಳಿದ್ದು, ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಜೊತೆಗೆ ಅವರನ್ನು ರಕ್ಷಿಸಲು ಬಯಸುತ್ತೇನೆ. ಸದಾ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

    ಮೈಯೋಸಿಟಿಸ್ ಕಾಯಿಲೆ ಬಗ್ಗೆ ಸಮಂತಾ ಹೇಳಿಕೊಂಡಾಗ ನನಗೆ ತುಂಬಾ ಬೇಸರವಾಗಿತ್ತು. ಸದ್ಯಕ್ಕೆ ಸಮಂತಾ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಶೂಟಿಂಗ್‌ಗೆ ಮರಳುತ್ತಾರೆ ಎಂದು ನಟಿ ರಶ್ಮಿಕಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್: ವಾರಿಸು, ಪುಷ್ಪ 2 ಚಿತ್ರಗಳಿಗೆ ಸಂಕಷ್ಟ

    ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್: ವಾರಿಸು, ಪುಷ್ಪ 2 ಚಿತ್ರಗಳಿಗೆ ಸಂಕಷ್ಟ

    ನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಪ್ಯಾನ್ ಇಂಡಿಯಾ ನಾಯಕಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ರಶ್ಮಿಕಾ ಮತ್ತು ರಿಷಬ್ ವಿವಾದದ ನಂತರ ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್(Rashmika Ban) ಎಂಬ ಕುರಿತಾದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

    ರಶ್ಮಿಕಾ ಮಂದಣ್ಣ ಲಕ್ಕಿ ನಟಿ ನ್ಯಾಷನಲ್ ಲೆವಲ್‌ನಲ್ಲಿ ಪುಷ್ಪ ಕ್ವೀನ್ ಸೌಂಡ್ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ, ರಕ್ಷಿತ್‌ಗೆ ನಾಯಕಿಯಾಗಿ `ಕಿರಿಕ್ ಪಾರ್ಟಿ’ ಯಿಂದ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಚಿತ್ರದ ಸಕ್ಸಸ್ ಬಳಿಕ ರಶ್ಮಿಕಾ ಪರಭಾಷೆಗೆ ಹಾರಿದರು. ಬಳಿಕ ಕನ್ನಡ ಕಡೆ ರಶ್ಮಿಕಾ ಮುಖ ಮಾಡಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ `ಕಿರಿಕ್ ಪಾರ್ಟಿ’ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೋರಿಸಿದ್ದರು. ಅದಕ್ಕೆ ಪ್ರತಿಯುತ್ತರವಾಗಿ ರಿಷಬ್ ಕೂಡ ಟಾಂಗ್ ಕೊಟ್ಟಿದ್ದರು. ಆ ವೀಡಿಯೋ ಸಖತ್ ಟ್ರೋಲ್ ಕೂಡ ಆಗಿತ್ತು. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ಮುಂದೆ ರಶ್ಮಿಕಾ ಸಿನಿಮಾ ಕನ್ನಡಿಗರು ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು ಎಂಬ ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್‌ಗಳು ಹರಿದಾಡುತ್ತಿವೆ.

    ಕನ್ನಡ ನೆಲದಲ್ಲಿ ರಶ್ಮಿಕಾ ನಟನೆಯ ಸಿನಿಮಾ ಬ್ಯಾನ್ ಮಾಡಲಾಗುತ್ತೆ ಎನ್ನುವ ಸುದ್ದಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಶ್ಮಿಕಾ ನಟಿಸಿರುವ ಚಿತ್ರತಂಡಕ್ಕೆ ಭಯ ಶುರುವಾಗಿದೆ ಎನ್ನಲಾಗಿದೆ. ಅದರಲ್ಲೂ ಬಿಗ್ ಬಜೆಟ್ ಚಿತ್ರ `ಪುಷ್ಪ-2′ ಮತ್ತು ದಳಪತಿ ವಿಜಯ್ ನಟನೆಯ `ವರಿಸು’ ಸಿನಿಮಾತಂಡ ಸಂಕಷ್ಟಕ್ಕೆ ಸಿಲುಕಿವೆ ಎನ್ನುವ ಮಾತು ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಸುದ್ದಿಯಾಗಿದೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    ರಶ್ಮಿಕಾ ವಿಚಾರಕ್ಕೆ ಸಿನಿಮಾ ಬ್ಯಾನ್ ಆದರೆ ದೊಡ್ಡ ಹೊಡೆತ ಬೀಳಲಿದೆ. ಅದರಲ್ಲೂ ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ರಶ್ಮಿಕಾ ಕಾರಣಕ್ಕೆ ಸಿನಿಮಾಗೆ ತೊಂದರೆ ಆದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗಿದೆ. ಬ್ಯಾನ್ ಮಾಡುವ ನಿರ್ಧಾರದಿಂದ ರಶ್ಮಿಕಾ ಸಿನಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ಮುಂದೆ ನಿರ್ಮಾಪಕರು ರಶ್ಮಿಕಾರನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಲು ಹಿಂದೇಟು ಹಾಕುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಕಾಲಿವುಡ್ ಸೂಪರ್ ಸ್ಟಾರ್ ವಿಜಯ್, ಇದೀಗ ಮತ್ತೊಂದು ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕಾಸ್ಟ್ಲಿ ಮನೆಯಲ್ಲೇ ವಾಸವಿರುವ ವಿಜಯ್, ಮತ್ತೊಂದು ದುಬಾರಿ ಮನೆಗೆ ಶಿಫ್ಟ್ ಆಗಲು ಬಯಸಿದ್ದಾರಂತೆ. ಕಾರಣ, ಈಗಿರುವ ಮನೆಯಲ್ಲಿ ಅವರಿಗೆ ಹಲವು ತೊಂದರೆಗಳು ಆಗುತ್ತಿವೆಯಂತೆ.

    ವಿಜಯ್ ಅವರು ಸದ್ಯ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಅವರ ಇಡೀ ಕುಟುಂಬ ಅದೇ ಮನೆಯಲ್ಲೇ ವಾಸ ಮಾಡುತ್ತಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟನೆಯ ಕಾರಣದಿಂದಾಗಿ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ದುಬಾರಿ ಅಪಾರ್ಟ್ಮೆಂಟ್ ವೊಂದನ್ನು ವಿಜಯ್ ಖರೀದಿಸಿದ್ದು ಆ ಮನೆಗೆ 35 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    ಸದ್ಯ ವಾರಿಸು ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಜಯ್, ಸದಾ ಶಾಂತವಾಗಿಯೇ ವರ್ತಿಸುವಂತಹ ನಟ ಕೂಡ. ಅಂದಹಾಗೆ ಇವರ ನಟನೆಯ ವಾರಿಸು ಸಿನಿಮಾ ಸದ್ಯ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ ಸಮಂತಾ

    ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ ಸಮಂತಾ

    ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಎಲ್ಲಾ ಬಗೆಯ ಪಾತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾಯಕಿಯಾಗಿ ಡಿಮ್ಯಾಂಡ್‌ಯಿರೋ ಸಮಂತಾಗೆ ನಾಯಕಿಪಟ್ಟನೇ ಬೇಕು ಅಂತಾ ಕೂತವರಲ್ಲ, ಪಾತ್ರಕ್ಕೆ ಪ್ರಾಮುಖ್ಯತೆಯಿದ್ದು, ಭಿನ್ನ ಎಂದೆನಿಸಿದರೆ ಹೊಸ ಬಗೆಯ ಪಾತ್ರಕ್ಕೂ ಸಮಂತಾ ಜೈ ಎನ್ನುತ್ತಾರೆ. ಈಗ ಅಂತಹದ್ದೇ ಭಿನ್ನ ಪಾತ್ರದ ಮೂಲಕ ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲು ಸಮಂತಾ ರೆಡಿಯಾಗಿದ್ದಾರೆ.

    `ದಿ ಫ್ಯಾಮಿಲಿಮೆನ್ 2′, `ಪುಷ್ಪ’ ಸೂಪರ್ ಸಕ್ಸಸ್ ನಂತರ ಸಮಂತಾ ಪಾತ್ರಗಳ ಆಯ್ಕೆಯಲ್ಲಿ ಮತ್ತಷ್ಟು ಸೆಲೆಕ್ಟೀವ್ ಆಗಿದ್ದಾರೆ. ಸ್ಟಾರ್ ನಾಯಕಿಯಾಗಿದ್ದರು, ನಾಯಕಿಯ ಪಟ್ಟನೇ ಬೇಕು ಅಂತಾ ಕೂರದೇ ಪವರ್‌ಫುಲ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಸೂಪರ್ ಸ್ಟಾರ್ ದಳಪತಿ ವಿಜಯ್‌ಗೆ ಖಡಕ್ ಲೇಡಿ ವಿಲನ್ ಆಗಿ ಮಿಂಚಲು ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ನನ್ನ ಪತಿ ಜನಸಂಖ್ಯೆ ನಿಯಂತ್ರಣ ಮಾಡುತ್ತಿದ್ದಾರೆ: ಕರೀನಾ ಕಪೂರ್‌

    ವಂಶಿ ಪೈಡಿಪಲ್ಲಿ ನಿರ್ದೇಶನದ `ವಾರಿಸು’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಜಯ್‌ಗೆ ಎದುರಾಗಿ ಲೇಡಿ ವಿಲನ್ ಆಗಿ ಸಮಂತಾ ಟಕ್ಕರ್ ಕೊಡಲಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ವಿಜಯ್ ಮತ್ತು ಸಮಂತಾ ರೊಮ್ಯಾಂಟಿಕ್ ಜೋಡಿಯಾಗಿ ಸಿನಿರಸಿಕರ ಮನಗೆದ್ದಿದ್ರು. ಈಗ ವಿಜಯ್‌ಗೆ ವಿಲನ್ ಸಮಂತಾ ಬಂದಿರೋದು ಅಭಿಮಾನಿಗಳಲ್ಲಿ ಮತ್ತಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳಿನ ಸ್ಟಾರ್ ದಳಪತಿ ವಿಜಯ್ ಜೊತೆ ಧನ್ಯ ರಾಮ್‌ಕುಮಾರ್ ಎಂಟ್ರಿ?

    ತಮಿಳಿನ ಸ್ಟಾರ್ ದಳಪತಿ ವಿಜಯ್ ಜೊತೆ ಧನ್ಯ ರಾಮ್‌ಕುಮಾರ್ ಎಂಟ್ರಿ?

    ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಈಗ ಕಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಾವ ಸ್ಟಾರ್ ಜತೆ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ತಮಿಳಿನ ಸ್ಟಾರ್ ವಿಜಯ್ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗಳು ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

    `ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಿತರಾದ ಧನ್ಯ ರಾಮ್‌ಕುಮಾರ್, ತಮ್ಮ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡರು. ಇದೀಗ ಸೌತ್ ಸಿನಿಮಾಗಳಲ್ಲಿ ಮಿಂಚಲು ಧನ್ಯ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಾವ ನಟನ ಸಿನಿಮಾದಲ್ಲಿ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿದೆ. ಇದನ್ನೂ ಓದಿ: ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ತಮಿಳಿನ ಸೂಪರ್ ಸ್ಟಾರ್ ವಿಜಯ್ ಪ್ರಾಜೆಕ್ಟ್ನಲ್ಲಿ ಧನ್ಯ ಕಾಣಿಸಿಕೊಳ್ತಿದ್ದಾರಂತೆ. ಅದಕ್ಕೆ ಪೂರಕವೆಂಬಂತೆ ನಟಿ ಧನ್ಯ ಕೂಡ ನಟ ವಿಜಯ್ ನಟನೆಯ ವಾರಿಸು ಪೋಸ್ಟರ್ ಶೇರ್ ಮಾಡಿ ವಿಶ್ ಮಾಡಿದ್ದಾರೆ. ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ. ನಿಮ್ಮ ವಾರಿಸು ಚಿತ್ರದ ಪೋಸ್ಟರ್ ನನಗೆ ತುಂಬಾ ಇಷ್ಟ ಆಯ್ತು. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಹಾಗಾಗಿ ತಮಿಳಿ ವಿಜಯ್ ಚಿತ್ರದಲ್ಲಿ ಧನ್ಯ ನಟಿಸುತ್ತಾರಾ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.

    ಒಟ್ನಲ್ಲಿ ಸೌತ್ ಸಿನಿಮಾರಂಗಕ್ಕೆ ಅಣ್ಣಾವ್ರ ಮನೆತನದ ಕುಡಿ ಮಿಂಚಲಿದ್ದಾರೆ ಎಂಬ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಚಿತ್ರರಂಗದಲ್ಲಿ ಧನ್ಯ ಉತ್ತುಂಗ ಸ್ಥಾನಕ್ಕೆ ಏರಲಿ ಎಂಬುದು ಅಭಿಮಾನಿಗಳ ಆಶಯ.

    Live Tv