Tag: Varanasi

  • ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನ ಬಾಕಿ ಇರುವಾಗಲೇ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

    ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್‌, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ಇವಿಎಂಗಳನ್ನು ಈ ರೀತಿ ಸಾಗಿಸುತ್ತಿದ್ದರೆ ನಾವು ಎಚ್ಚರದಿಂದಿರಬೇಕು. ಇದು ಕಳ್ಳತನ. ನಮ್ಮ ಮತಗಳನ್ನು ಉಳಿಸಬೇಕು. ನಾವು ಇಂತಹ ಘಟನೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಅದಕ್ಕೂ ಮೊದಲು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಜನರಲ್ಲಿ ಮನವಿ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುತ್ತದೆ. ಹೀಗಾಗಿ ಬಿಜೆಪಿಗೆ ಭಯವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂಗಳನ್ನು ಟ್ಯಾಂಪರಿಂಗ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂಬ ಗ್ರಹಿಕೆಯನ್ನು ಸೃಷ್ಟಿಸಲು ಬಯಸುತ್ತವೆ. ಇದು ಪ್ರಜಾಪ್ರಭುತ್ವದ ಹೋರಾಟವಾಗಿದೆ. ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಇವಿಎಂ ಸಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ತಮ್ಮ ಶಕ್ತಿಯಿಂದ ಸಮಾಜವನ್ನು ಪರಿವರ್ತಿಸಬಲ್ಲರು: ರಾಹುಲ್

    ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದಿದೆ. ಮಾ.7ರಂದು ಕೊನೆಯ ಹಂತದ ಮತದಾನ ನಡೆಯಿತು. ಮಾ.10 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಮಾಜವಾದಿ ಪಕ್ಷ ಪ್ರಬಲ ಎದುರಾಳಿಯಾಗಿದೆ.

  • ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ

    ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ

    ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 60 ಕೆಜಿ ಚಿನ್ನ ದಾನ ಮಾಡಿದ್ದಾರೆ. ಗರ್ಭಗುಡಿ ಅಲಂಕಾರಕ್ಕೆ ಈಗಾಗಲೇ 37 ಕೆಜಿ ಚಿನ್ನವನ್ನು ಬಳಕೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಈ ಕುರಿತು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ  ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ವಿನ್ಯಾಸದ ಚಿನ್ನದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    2021ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಿದ್ದರು. ಅದಕ್ಕೂ ಮೊದಲೇ ದಾನಿಯು ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಾವು 60 ಕೆಜಿ ಚಿನ್ನವನ್ನು ದೇವಸ್ಥಾನಕ್ಕೆ ದಾನವಾಗಿ ನೀಡುವುದಾಗಿ ಹೇಳಿದ್ದರು. ದೇವಾಲಯದ ಅಧಿಕಾರಿಗಳು ಅವರು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇವಾಲಯದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸುವ ಯೋಜನೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

    ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳು ಬಾಗಿಲಿನ ಹೊರಗಿನಿಂದ ದೇವರನ್ನು ನೋಡುವ ಮೂಲಕ ಪ್ರಾರ್ಥನೆ ಸಲ್ಲಿಸುವಾಗ ಗೋಡೆಗಳ ಮೇಲೆ ಚಿನ್ನದ ಲೇಪನದ ದೃಶ್ಯವನ್ನು ನೋಡಬಹುದು.

  • ಭಕ್ತರಿಗೆ ಊಟ ಬಡಿಸಿದ ರಾಹುಲ್, ಪ್ರಿಯಾಂಕಾ

    ಭಕ್ತರಿಗೆ ಊಟ ಬಡಿಸಿದ ರಾಹುಲ್, ಪ್ರಿಯಾಂಕಾ

    ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರವಿದಾಸ್ ಜಯಂತಿಯ ಅಂಗವಾಗಿ ವಾರಣಾಸಿಯ ರವಿದಾಸ್ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.

    15-16ನೇ ಶತಮಾನದ ಪೂಜ್ಯ ಕವಿ ಮತ್ತು ಸಮಾಜ ಸುಧಾರಕ ರವಿದಾಸ್ ಅವರ ಜನ್ಮಸ್ಥಳ ಸೀರ್ ಗೋವರ್ಧನಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರು ಭೇಟಿ ನೀಡಿ ನೀಡಿದ್ದರು. ಬಾಬತ್‍ಪುರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮಾಜಿ ಶಾಸಕ ಅಜಯ್ ರೈ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ನಂತರ ನಗರದ ಗುರು ರವಿದಾಸ್ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವಸ್ಥಾನದ ಭಕ್ತರಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಊಟವನ್ನು ಬಡಿಸಿದರು.

    ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನತೆ ಮತ್ತು ಘನತೆಗಾಗಿ ಪ್ರತಿಪಾದಿಸಿದ ಸಂತ ರವಿದಾಸ್ ಅವರನ್ನು ದಲಿತ ಐಕಾನ್ ಎಂದು ಪರಿಗಣಿಸಲಾಗಿದೆ. ಅವರು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ್ದರು. ಲಿಂಗ ಅಥವಾ ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸಿದರು. ಇದನ್ನೂ ಓದಿ: ರಾಷ್ಟ್ರ ದ್ರೋಹಿ: ನಾನಲ್ಲ ರಾಷ್ಟ್ರದ್ರೋಹಿ ನೀನು – ವಿಧಾನಸಭೆಯಲ್ಲಿ ಡಿಕೆಶಿ vs ಈಶ್ವರಪ್ಪ

    ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕರೋಲ್ ಬಾಗ್‍ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಭಕ್ತರೊಂದಿಗೆ ಸಂವಾದ ನಡೆಸಿ, ಶಾಬಾದ್ ಕೀರ್ತನೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಸಂತ ರವಿದಾಸ್‌ಗೆ ಪ್ರಾರ್ಥನೆ ಸಲ್ಲಿಸಿದ ಮೋದಿ – ವೀಡಿಯೋ ವೈರಲ್

  • ಸೋನು, ನೇಹಾ ಗೌಡ ವಾರಣಾಸಿ ಟ್ರಿಪ್

    ಸೋನು, ನೇಹಾ ಗೌಡ ವಾರಣಾಸಿ ಟ್ರಿಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ಸಹೋದರಿಯರಾದ ನೇಹಾ ಗೌಡ ಮತ್ತು ಸೋನು ಗೌಡ ಅವರು ವಾರಣಾಸಿ ಟ್ರಿಪ್ ಮಾಡಿ ಬಂದಿದ್ದಾರೆ. ಅಲ್ಲಿ ಅವರು ಕಳೆದಿರುವ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಲುಕು ಹಾಕಿದ್ದಾರೆ.

    ವಾರಣಾಸಿಗೆ ಹೋಗುವ ಯೋಜನೆ ಮಾಡುತ್ತಲೇ ಇದ್ದೆವು. ಆದರೆ ಸಮಯ ಕೂಡಿ ಬರುತ್ತಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಟಿಕೆಟ್ ಬುಕ್ ಮಾಡಿ ಹೊರಟೆವು. ವಾರಣಾಸಿಯ ಘಾಟ್‍ಗಳ ಸೌಂದರ್ಯ ಇದಾಗಿದೆ. 84 ಘಾಟ್‍ಗಳು ಮತ್ತು ಸುಮಾರು 2000ಕ್ಕೂ ಹೆಚ್ಚು ದೇವಾಲಯಗಳಿವೆ ಎಂದು ಬರೆದುಕೊಂಡು ಸೇನಾ, ಸೋನು ಇಬ್ಬರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸ ವೀಡಿಯೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Neha Gowda (@neharamakrishna)

    ನೇಹಾ ಗೌಡ ಮತ್ತು ಸೋನು ಗೌಡ ಇಬ್ಬರು ಸಹ ವಾರಣಾಸಿಗೆ ಟ್ರಿಪ್ ಹೋಗಿ ಬಂದಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ನೇಹಾ ಗೌಡ, ಸೋನು ಗೌಡ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಅಕ್ಕ-ತಂಗಿಯರ ವಾರಣಾಸಿ ಟ್ರಿಪ್ ಫೋಟೋ ನೋಡಿದ ಅಭಿಮಾನಿಗಳು ಸಹೋದರಿಯರ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

     

    View this post on Instagram

     

    A post shared by Neha Gowda (@neharamakrishna)

    ನೇಹಾ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾವಾಗುತ್ತಿದ್ದ ಜನಪ್ರಿಯ ಧಾರಾವಾಹಿಯಲ್ಲಿ ನಟಿಸುವ ಮೂಲಕವಾಗಿ ಮನೆ ಮಾತಾಗಿದ್ದಾರೆ. ಸೋನು ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸೋನು ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದರು.

  • ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಲಕ್ನೋ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿರುವ ದೃಶ್ಯ ವಾರಣಾಸಿಯಲ್ಲಿ ನಡೆದಿದೆ.

    ವಾರಣಾಸಿಯ ಕಾಶಿಯ ಕೊತ್ವಾಲಾ ಎಂದೂ ಕರೆಯಲಾಗುವ ಭೈರವನ ಈ ಸಮವಸ್ತ್ರದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಕಾಶಿಯ ಪ್ರಸಿದ್ಧ ದೇವರು ಬಾಬಾ ಕಾಲ ಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ದೇವರ ಮೂರ್ತಿಯ ತಲೆಯ ಮೇಲೆ ಪೊಲೀಸ್ ಕ್ಯಾಪ್ ಹಾಗೂ ಎದೆ ಮೇಲೆ ಬ್ಯಾಡ್ಜ್‍ನ್ನು ಹಾಕಲಾಗಿದ್ದು, ಕಾಲಭೈರವನ ಬಲಗೈಯಲ್ಲಿ ಲಾಠಿ ಸಹ ಇದೆ.

    ಈ ದೇಗುಲಕ್ಕೆ ಬರುತ್ತಿರುವ ಭಕ್ತರು ಕಾಲಭೈರವ ತನ್ನ ಈ ಅವತಾರದಲ್ಲಿ ಪೊಲೀಸ್ ಆಗಿ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾನೆ. ಬಾಬಾ ಕಾಲ ಭೈರವ ಕಾಶಿಯ ಕೊತ್ವಾಲ್ ಆಗಿದ್ದಾನೆ. ಈಗ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾನೆ. ಇದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಾನೆ ಎಂದು ನಂಬಿದ್ದಾರೆ. ಇದನ್ನೂ ಓದಿ: ‌ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ

    ಭಕ್ತರೆಲ್ಲರೂ ಸೇರಿ ಕೊರೊನಾ ಸೋಂಕಿನಿಂದ ದೇಶದ ಜನರನ್ನು ರಕ್ಷಿಸಲು ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಸುಖ, ಸಮೃದ್ಧಿ ಜೊತೆಗೆ ಜನರು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಇಲ್ಲಿನ ಭಕ್ತರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

  • ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿಯಾಗಲು ಬಂದಿದ್ದ ದಿವ್ಯಾಂಗ ಮಹಿಳೆಯೊರ್ವರ ಕಾಲಿಗೆ ಬಗ್ಗಿ ನಮಸ್ಕರಿಸಿದ್ದಾರೆ.

    ಡಿ.13 ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಮೋದಿ ವಾರಣಾಸಿಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಅವರು ಬಂದಿದ್ದರು. ಮಹಿಳೆಯನ್ನು ನೋಡಿದ ಪ್ರಧಾನಿ ತಕ್ಷಣವೇ ಆಕೆಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ ವೇಳೆ ಅವರು ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದು ಮೋದಿಯವರೇ ಆಕೆಯ ಕಾಲಿಗೆ ನಮಸ್ಕಾರಿಸಿದ್ದಾರೆ. ಅಂಗವಿಕಲ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ದೃಶ್ಯವು ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುವುದರ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕೂಡ ಟ್ವಿಟ್ಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಬಳಿಕ ಮಾತನಾಡಿದ ಶಿಖಾ ಸಹೋದರ ವಿಶಾಲ್ ರಸ್ತೋಗಿ, ಶಿಖಾ ಹುಟ್ಟಿನಿಂದಲೇ ಅಂಗವಿಕಲಳು. ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ. ಮನೆಯಲ್ಲಿ ದಿವ್ಯಾಂಗ ಇರುವವರನ್ನು ದುರ್ಬಲರು ಎಂದು ಪರಿಗಣಿಸಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಮಹಿಳೆ ಕಾಲಿಗೆ ನಮಸ್ಕರಿಸಿದ ಮೋದಿ ಅವರ ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

    ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

    ಲಕ್ನೋ: ಈ ಬಾರಿ ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ನಿ ಜೊತೆಗೆ ಇಂದು ವಾರಣಾಸಿಯಲ್ಲಿರುವ ಕಾಶಿಗೆ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿದ್ದಾರೆ.

    Bommai

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶಿ ವಿಶ್ವನಾಥ ಕಾರಿಡಾರ್ ಬಹಳ ಅದ್ಭುತವಾಗಿ ನಿರ್ಮಾಣಗೊಳಿಸಲಾಗಿದೆ. ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುವುದನ್ನು ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಯೋಗಿ ಅವರು ಬೆಂಬಲ ನೀಡಿದ್ದಾರೆ. ದಕ್ಷಿಣ ಭಾರತದಿಂದ ಹಲವಾರು ಜನರು ಈ ಕ್ಷೇತ್ರಕ್ಕೆ ಬರುತ್ತಾರೆ. ಇದು ಅವರೆಲ್ಲರಿಗೂ ಸಂತಸ ತರುವಂತಹ ವಿಚಾರವಾಗಿದೆ ಎಂದು ಹೇಳಿದರು. ದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    ವಾರಾಣಸಿಯ ವಿಶ್ವನಾಥನ ಸನ್ನಧಿಯಲ್ಲಿ ಇಂದು ಬೆಳಗ್ಗೆ ರಾಜ್ಯಗಳ ಅಭಿವೃದ್ಧಿ, ಯೋಜನಾ ಅನುಷ್ಠಾನ, ಕೊರೊನಾ ನಿಯಂತ್ರಣ, ಆಡಳಿತದಲ್ಲಿ ಪಾರದರ್ಶಕತೆ ಸೇರಿ ಹಲವು ವಿಚಾರಗಳ ಬಗ್ಗೆ ಮೋದಿ ನೇತೃತ್ವದಲ್ಲಿ ರಾಜ್ಯದ 12 ರಾಜ್ಯಗಳ ಸಿಎಂಗಳ ಜೊತೆಗೆ ಚರ್ಚೆ ನಡೆಸಲಿದ್ದು, ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಅರುಣಾಚಲಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ತ್ರಿಪುರಾ, ಮಣಿಪುರ, ಉತ್ತರ ಪ್ರದೇಶ, ಉತ್ತರಾಖಂಡ್ ಮುಖ್ಯಮಂತ್ರಿಗಳು ಸೇರಿದಂತೆ 9 ಡಿಸಿಎಂಗಳು ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಒಟ್ಟಾರೆ ಹಾನಗಲ್ ಬೈ ಎಲೆಕ್ಷನ್ ಸೋಲು, 40% ಕಮೀಷನ್ ಆರೋಪ, ಬಿಟ್ ಕಾಯಿನ್ ದಂಧೆ ಆರೋಪಗಳಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಪರಿಷತ್ ಎಲೆಕ್ಷನ್‍ನಲ್ಲಿ 12ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಿಎಂ ಅಸ್ತಿತ್ವ ಇನ್ನಷ್ಟು ಭದ್ರವಾಗಲಿದೆ.

  • ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.

     

    ಈಗಾಗಲೇ ಮೋದಿ ಅವರು ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಾರಾಣಿಸಿಯ ಜನರು ಹೂ ಮಳೆ ಸುರಿಸಿ, ಮೋದಿ, ಮೋದಿ, ಹರ್ ಹರ್ ಮಹಾದೇವ್ ಎಂದು ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಮೋದಿಯವರು ಕಾವಿ ವಸ್ತ್ರವನ್ನು ಧರಿಸಿ ಗಂಗಾ ನದಿಯಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡಿ, ಜಪ ಮಾಲೆ ಹಿಡಿದು ಜಪ ಮಾಡಿದ್ದಾರೆ.

    ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ:
    ಕಾಶಿ ವಿಶ್ವನಾಥ ಕಾರಿಡಾರ್ ವಿಶ್ವನಾಥ ದೇಗುಲ ಮತ್ತು ಪವಿತ್ರ ಗಂಗಾ ನದಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಈ ಮೊದಲು ದೇಗುಲ ಮತ್ತು ಪವಿತ್ರ ಗಂಗಾ ನದಿಗೆ ನೇರವಾದ ಸಂಪರ್ಕವಿರಲಿಲ್ಲ. ದೇಗುಲದ ಮೂರು ದಿಕ್ಕುಗಳಲ್ಲಿ ಮನೆಗಳು, ಕಟ್ಟಡಗಳು, ಆವರಿಸಿದ್ದವು. ಇದೀಗ ಕಿಕ್ಕಿರಿದ ಪ್ರದೇಶ, ಜನಸಂದಣಿಯಿಂದ ಯಾವುದೇ ಅಡೆತಡೆಗಳಿಲ್ಲದೆ ಗಂಗೆಯ ಲಲಿತಾ ಘಾಟ್‍ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು. ದೇಗುಲದಲ್ಲಿ ನಿಂತೇ ಪ್ರಸಿದ್ಧ ಗಂಗಾರತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಕಾರಿಡಾರ್ ದೇಗುಲ ಮತ್ತು ಲಲಿತಾ ಘಾಟ್‍ಗೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲದೇ ದೇಗುಲ ಚೌಕ, ವಾರಾಣಸಿ ನಗರ ಗ್ಯಾಲರಿ, ಮ್ಯೂಸಿಯಂ, ವಿವಿಧ ಉದ್ದೇಶಿತ ಸಭಾಂಗಣ, ಹಾಲ್, ಭಕ್ತರಿಗೆ ಸೌಲಭ್ಯ ಒದಗಿಸುವ ಕೇಂದ್ರವಾಗಿದೆ. ಸಾರ್ವಜನಿಕ ತಂಗುದಾಣ, ಅರ್ಚಕರಿಗೆ ವಸತಿ ಮತ್ತು ಆಧ್ಯಾತ್ಮ ಗ್ರಂಥಾಲಯ ಮುಂತಾದ ಸೌಕರ್ಯಗಳನ್ನು ಕಾರಿಡಾರ್ ಒಳಗೊಂಡಿದೆ.

    ಕಾರಿಡಾರ್‌ನಲ್ಲಿ ಏನಿದೆ?:
    * ಯೋಜನೆಯಡಿ 24 ಕಟ್ಟಡ ನಿರ್ಮಾಣ
    * ಸುಮಾರು 50 ಅಡಿ ಉದ್ದ ಕಾರಿಡಾರ್ ಗಂಗಾ ಮಣಿಕರ್ಣಿಕಾ, ಲಲಿತಾ ಘಾಟ್ ಮತ್ತು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇಗುಲವನ್ನು ಸಂಪರ್ಕಿಸುತ್ತದೆ. ಯಾತ್ರಾರ್ಥಿಗಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.
    * ವಾರಾಣಸಿ ಸಂಸ್ಕ್ರತಿ ಪ್ರತಿಬಿಂಬಿಸುವ ಮ್ಯೂಸಿಯಂ ಮತ್ತು ಸಭಾಂಗಣ ಮತ್ತು ಹೋಮ ಹವನದಂತಹ ಧಾರ್ಮಿಕ ಕಾರ್ಯ ನಡೆಸಲು ಯೋಗಶಾಲೆಗಳು ಇವೆ.
    * ಆರ್ಚಕರು, ಸ್ವಯಂ ಸೇವಕರು ಮತ್ತು ಯಾತ್ರಾರ್ಥಿಗಳಿಗೆ ವಿಶೇಷ ವಸತಿಯನ್ನು ಮಾಡಲಾಗಿದೆ.

    * ಗಂಗಾ ನದಿ ಕಣ್ತುಂಬಿಕೊಳ್ಳುವ ಗ್ಯಾಲರಿ ಇದ್ದು, ದೇಗುಲದ 7000 ಚದರ ಮೀ. ಪ್ರದೇಸ 10,000 ಜನರಿಗೆ ಧ್ಯಾನಕ್ಕೆ ಮೀಸಲು ಇಡಲಾಗಿದೆ. 7 ದ್ವಾರ ಕೆಫೆಟೇರಿಯಾ, ಆಧ್ಯಾತ್ಮ ಗ್ರಂಥಾಲಯ, ಫುಡ್ ಸ್ಟ್ರೀಟ್ ವ್ಯವಸ್ಥೆ ಇದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಕಾಶಿ ದೇಗುಲ 3000 ಚದರಡಿ ವ್ಯಾಪ್ತಿಯಲ್ಲಿತ್ತು. ಮಹತ್ವಾಕಾಂಕ್ಷಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯೇ ಮೊದಲ ಹಂತದ ವೆಚ್ಚ399 ಕೋಟಿ ಆಗಿದ್ದು, 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲದ ವ್ಯಾಪ್ತಿ ವಿಸ್ತರಿಸಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾ ಘಾಟ್ ತಲುಪಬಹುದಾಗಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಮೋದಿ ಕಾಶಿ ಪರಿವರ್ತನೆ ಮಾಡಿದ್ದು ಹೇಗೆ?:
    ಮೋದಿ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾದ ಬೆನ್ನಲ್ಲೇ ಕಾಶಿ ಸ್ವರೂಪವನ್ನೇ ಬದಲಿಸಿದರು. ಈ ಹಿಂದಿನ ಹಳೆಯ ಕಾಶಿಯಲ್ಲಿ ಕಿರಿದಾದ ರಸ್ತೆಗಳಿದ್ದವು. ಅಸ್ವಚ್ಛತೆ ಎಲ್ಲಾ ಕಡೆ ಎದ್ದು ಕಾಣುತ್ತಿತ್ತು. ಇದನ್ನು ಬದಲಿಸಿದ ಅವರು ರಸ್ತೆಗಳ ಅಗಲೀಕರಣ ಮಾಡಿಸಿದರು. ನೈರ್ಮಲೀಕರಣಕ್ಕೆ ಕ್ರಮ ಕೈಗೊಂಡರು. ಮಲಿನವಾಗಿದ್ದ ಗಂಗಾ ನದಿಯನ್ನು “ನಮಾಮಿ ಗಂಗೆ” ಯೋಜನೆ ಅಡಿ ಸ್ವಚ್ಛಗೊಳಿಸಿದಉ. ಈಗ ‘ವಿಶ್ವನಾಥ ಕಾರಿಡಾರ್’ ಯೋಜನೆ ಜಾರಿಗೊಳಿಸಿ ದೇಗುಲದ ಗತವೈಭವ ಮರುಕಳಿಸಿದ್ದಾರೆ.

  • ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ನಿಮಿತ್ತ ಆಗಮಿಸಿರುವ ಪ್ರಧಾನಿಯವರು, ಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆಗ ದೇವಸ್ಥಾನದ ಅರ್ಚಕರು ಮೋದಿಗೆ ದೃಷ್ಟಿ ನಿವಾರಣೆ ಮಾಡಿದ್ದಾರೆ.

    ಕಾಲಭೈರವೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಮೋದಿ ಸಲ್ಲಿಸಿದ್ದಾರೆ. ಹೂವಿನ ಮಾಲೆ ಹಾಕಿ ಆರತಿ ಬೆಳಗಿ ಮೋದಿ ತಲೆ ಬಾಗಿ ನಮಸ್ಕರಿಸಿದ್ದಾರೆ. ಈ ವೇಳೆ ದೇವಸ್ಥಾನದ ಅರ್ಚಕರು ಮೋದಿ ಅವರ ಹಣೆಗೆ ತಿಲಕ ಇಟ್ಟು ಆಶಿರ್ವದಿಸಿದ್ದಾರೆ. ಮೋದಿ ಅವರ ಈ ವಿಶೇಷ ಪೂಜೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜೊತೆಯಾಗಿದ್ದರು. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಸುಮಾರು 900 ಕೋಟಿ.ರೂ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಮೋದಿಯವರ ಕನಸಿನ ಯೋಜನೆಯಾಗಿದ್ದು, ಸುಮಾರು 5 ಸಾವಿರ ಚದರಿ ಅಡಿ ಪ್ರದೇಶಕ್ಕೆ ದೇಗುಲ ವ್ಯಾಪ್ತಿ ವಿಸ್ತಾರವಾಗಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಓಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾಘಾಟ್‍ಗೆ ತಲುಪಬಹುದಾಗಿದೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ

  • ಅಜ್ಜಿ ಜೊತೆ ಮದುವೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ

    ಅಜ್ಜಿ ಜೊತೆ ಮದುವೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ

    ಲಕ್ನೋ:  ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಪ್ರಕರಣ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇದೀಗ ಬೆಳಕಿಗೆ ಬಂದಿದೆ.

    ಆರೋಪಿಯನ್ನು ನಿಸಾರ್(27) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ನೇಕಾರ. ಈ ಘಟನೆ ಸಿಗ್ರಾದ ಲಲ್ಲಾಪುರದಲ್ಲಿ ನಡೆದಿದೆ.

    ಮದುವೆಗೆಂದು ತನ್ನ ಅಜ್ಜಿಯ ಜೊತೆ 6 ವರ್ಷದ ಬಾಲಕಿ ಲಲ್ಲಾಪುರಕ್ಕೆ ಹೋಗಿದ್ದಳು. ನಿಸ್ಸಾರ್ ಆ ಬಾಲಕಿಯನ್ನು ತನ್ನೊಂದಿಗೆ ಕೆರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದ ಪ್ರಯಾಣಿಕನಿಗೆ ಕೊರೊನಾ

    ಭಾನುವಾರ ಈ ಘಟನೆ ನಡೆದಿದ್ದು, ಆರೋಗ್ಯದಲ್ಲಿ ಏರುಪೇರಾದಾಗ ಈ ಅಮಾನವೀಯ ಕೃತ್ಯವನ್ನು ಬಾಲಕಿಯು ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿಸಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಯುತ್ತಿದೆ. ಇದನ್ನೂ ಓದಿ: ನೌಕಾಪಡೆಯ ನೂತನ ನೌಕಸೇನಾಧಿಪತಿಯಾಗಿ ಆರ್. ಹರಿ ಕುಮಾರ್ ಅಧಿಕಾರ ಸ್ವೀಕಾರ

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.