Tag: Varanasi

  • ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅಂತಾರೆ – ರಾಗಾ ವಿರುದ್ಧ ಮೋದಿ ಕೆಂಡಾಮಂಡಲ

    ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅಂತಾರೆ – ರಾಗಾ ವಿರುದ್ಧ ಮೋದಿ ಕೆಂಡಾಮಂಡಲ

    ಗಾಂಧಿನಗರ: ತಲೆ ಕೆಟ್ಟವರು ಮಾತ್ರ ನನ್ನ ಜನರನ್ನ ಕುಡುಕರು ಅನ್ನುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

    ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾರಣಾಸಿಯಲ್ಲಿ ಮದ್ಯ ಸೇವಿಸಿ ರಸ್ತೆಯಲ್ಲೇ ಜನರು ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂಬ ರಾಹುಲ್‌ ಗಾಂಧಿ (Rahul Gandhi) ಹೇಳಿಕೆ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ನ ʻಶಾಹಿ ಪರಿವಾರದ ಯುವರಾಜʼ ವಾರಣಾಸಿಯ (Varanasi) ಜನರನ್ನು ಅವರ ಸ್ವಂತ ನೆಲದಲ್ಲಿ ಅವಮಾನಿಸಿದ್ದಾರೆ. ತಲೆ ಕೆಟ್ಟವರು ಮಾತ್ರ ನನ್ನ ಜನರನ್ನು ಕುಡುಕರು ಅನ್ನುತ್ತಾರೆ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.

    ಮೋದಿಯನ್ನು ನಿಂಧಿಸುತ್ತಾ ಎರಡು ದಶಕ ಕಳೆದಿದ್ದಾರೆ. ಅದು ಫಲಿಸಲಿಲ್ಲ ಅಂತಾ ಈಗ ತಮ್ಮ ಹತಾಶೆಯುನ್ನು ಉತ್ತರ ಪ್ರದೇಶದ ಜನರ ಮೇಲೆ‌ ತೋರಿಸುತ್ತಿದ್ದಾರೆ. ಇದು ಅವರ ವಾಸ್ತವ. ಕುಟುಂಬ ಆರಾಧಕರು ಯುವಕರ ಪ್ರತಿಭೆಗೆ ಹೀಗೆ ಹೆದರುತ್ತಾರೆ. ಅದೇನೆ ಇರಲಿ ಉತ್ತರ ಪ್ರದೇಶದ ಯುವ ಜನತೆಗೆ I.N.D.I.A ಒಕ್ಕೂಟ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ

    ಅಲ್ಲದೇ I.N.D.I.A ಒಕ್ಕೂಟದಲ್ಲಿ ಅಶಾಂತಿಗೆ ಮತ್ತೊಂದು ಕಾರಣವೂ ಇದೆ. ಕಾಶಿ ಮತ್ತು ಅಯೋಧ್ಯೆಗೆ ಹೊಸ ರೂಪ ಬಂದಿರುವುದೇ ಅವರ ಅಶಾಂತಿಗೆ ಕಾರಣ. ಪರಿವಾರವಾದ ಹಾಗೂ ತುಷ್ಟೀಕರಣ ರಾಜಕೀಯದಿಂದಾಗಿ ಉತ್ತರ ಪ್ರದೇಶವು ಹಲವು ದಶಕಗಳಿಂದ ಹಿಂದುಳಿದಿತ್ತು. ಆದರೀಗ ಬದಲಾಗಿದೆ ಎಂದರು.

    ಇದೇ ವೇಳೆ 2024ರ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಈ ಬಾರಿ ಇಡೀ ದೇಶ ಮೋದಿಯವರತ್ತ ಒಲವು ತೋರುತ್ತಿದೆ. ಉತ್ತರ ಪ್ರದೇಶದ ಎಲ್ಲಾ ಸ್ಥಾನಗಳು ಎನ್‌ಡಿಎ ಪಾಲಾಗುತ್ತವೆ. ಇಂಡಿಯಾ ಒಕ್ಕೂಟಕ್ಕೆ ಅದೇ ಚಿಂತೆಯಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತ – IT ವಿರುದ್ಧ ಗಂಭೀರ ಆರೋಪ

  • PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

    PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

    – ಮಸೀದಿ ಜಾಗದಲ್ಲಿ ಸಿಕ್ಕ ಹಿಂದೂ ದೇವಾಲಯದ ಕುರುಹುಗಳೇನು?

    ರಾಮಮಂದಿರ (Ram Mandir) ಆಯ್ತು.. ದೇವಾಲಯದ ವಿಚಾರದಲ್ಲಿ ಈಗ ಹಿಂದೂಗಳಿಗೆ ಮತ್ತೊಂದು ಜಯ ಸಿಕ್ಕಿದೆ. ನೂರಾರು ವರ್ಷಗಳ ಕನಸು ನನಸಾಗಿದೆ. ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಹೌದು, ಐತಿಹಾಸಿಕ ಹಿಂದೂ ದೇವಾಲಯ ಕೆಡವಿ, ಮಸೀದಿ ನಿರ್ಮಿಸಿದ್ದಾರೆ ಎನ್ನಲಾದ ವಿವಾದಿತ ಸ್ಥಳ ಮತ್ತೆ ಹಿಂದೂಗಳ ಕೈವಶವಾಗಿದೆ.

    ಜ್ಞಾನವಾಪಿ ಮಸೀದಿ (Gyanvapi Mosque) ಆವರಣದ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡಿ ಈಚೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿತು. ಈ ಸುದ್ದಿಯನ್ನು ಕೇಳುತ್ತಿದ್ದಂತೆಯೇ ಸಮಸ್ತ ಹಿಂದೂಗಳು ಆನಂದಭಾಷ್ಪ ಸುರಿಸಿದರು. ಆದೇಶ ಹೊರಬಿದ್ದ ಬೆನ್ನಲ್ಲೇ ಜ್ಞಾನವಾಪಿಯಲ್ಲಿ ಹಿಂದೂ ಅರ್ಚಕರು ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು. ‘ಹರಹರ ಮಹದೇವ’ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಜ್ಞಾನವಾಪಿ ಮಸೀದಿಗೆ ಆಗಮಿಸಿ ನಮಾಜ್‌ ಮಾಡಿದ ಮುಸ್ಲಿಮರು

    ರಾಮಮಂದಿರದಂತೆ ಜ್ಞಾನವಾಪಿ ವಿಚಾರದಲ್ಲೂ ನ್ಯಾಯ ಸಿಕ್ಕಿರುವುದು ಹಿಂದೂಗಳ ಖುಷಿಗೆ ಪಾರವೇ ಇಲ್ಲ ಎನ್ನುವಂತಾಗಿದೆ. ಅಷ್ಟಕ್ಕೂ ಏನಿದು ಜ್ಞಾನವಾಪಿ ಮಸೀದಿ ಪ್ರಕರಣ? ಇತಿಹಾಸವೇನು? ವಿವಾದಕ್ಕೆ ಹಿನ್ನೆಲೆ, ಕಾರಣವೇನು?

    ಜ್ಞಾನವಾಪಿ ಮಸೀದಿ ಎಲ್ಲಿದೆ?
    ಜ್ಞಾನವಾಪಿ ಮಸೀದಿಯು ಭಾರತದ ಉತ್ತರ ಪ್ರದೇಶದ ವಾರಣಾಸಿಯಲ್ಲಿದೆ. ಈ ಸ್ಥಳದಲ್ಲಿ ಹಿಂದೂ ದೇವರು ಶಿವನಿಗೆ ಮೀಸಲಾದ ವಿಶ್ವೇಶ್ವರ ದೇವಾಲಯವಿತ್ತು. ಇದನ್ನು 1669 ರಲ್ಲಿ ಮೊಘಲ್ ದೊರೆ ಔರಂಗಜೇಬನು ಕೆಡವಿಸಿದ. ದೇವಾಲಯ ಕೆಡವಿದ ಒಂದು ದಶಕದ ನಂತರ, ಅಂದರೆ 1978 ರಲ್ಲಿ ಮಸೀದಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

    ಮಸೀದಿ ಜಾಗದಲ್ಲಿದ್ದ ದೇವಾಲಯ ಯಾವುದು?
    ಈ ಸ್ಥಳದಲ್ಲಿ ಹಿಂದೂ ದೇವರಾದ ಶಿವನಿಗೆ ಮೀಸಲಾದ ವಿಶ್ವೇಶ್ವರ (ಕಾಶಿ ವಿಶ್ವನಾಥ ದೇವಾಲಯ) ದೇವಾಲಯವಿತ್ತು. ಇದನ್ನು 16ನೇ ಶತಮಾನದ ಉತ್ತರಾರ್ಧದಲ್ಲಿ ಮಹಾರಾಷ್ಟ್ರದ ಬನಾರಸ್‌ನ ಪ್ರಖ್ಯಾತ ಬ್ರಾಹ್ಮಣ ವಿದ್ವಾಂಸ ನಾರಾಯಣ ಭಟ್ಟರ ಜೊತೆ ಅಕ್ಬರನ ಪ್ರಧಾನ ಆಸ್ಥಾನಿಕ ಮತ್ತು ಮಂತ್ರಿ ತೋಡರ್ ಮಲ್ಲ ನಿರ್ಮಿಸಿದರು. ದೇವಾಲಯವು ಬನಾರಸ್ ಅನ್ನು ಬ್ರಾಹ್ಮಣರ ಸಭೆಯ ಕೇಂದ್ರವಾಗಿ ಸ್ಥಾಪಿಸಲು ಕೊಡುಗೆ ನೀಡಿತ್ತು. ಉಪಖಂಡದಾದ್ಯಂತ ವಿದ್ವಾಂಸರನ್ನು ಸೆಳೆದಿತ್ತು.

    ಮಂದಿರದ ಮೇಲೆ ಮಸೀದಿ?
    1669 ಹಿಂದೂ ದೇವಾಲಯವನ್ನು ಮೊಘಲ್ ದೊರೆ ಔರಂಗಜೇಬ್ ಕೆಡವಲು ಆದೇಶಿಸಿದನು. ಜ್ಞಾನವಾಪಿ ಮಂದಿರದ ಒಂದು ಭಾಗ ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ದೇವಾಲಯದ ಸ್ತಂಭವನ್ನು ಮಸೀದಿಯ ಅಂಗಳವಾಗಿ ಉಳಿಯಲು ಹಾಗೆಯೇ ಬಿಡಲಾಯಿತು. ದಕ್ಷಿಣ ಗೋಡೆ, ಅದರ ಕಮಾನುಗಳು, ಬಾಹ್ಯ ಅಚ್ಚುಗಳು ಕಿಬ್ಲಾ ಗೋಡೆಯಾಗಿ ಮಾರ್ಪಟ್ಟಿತು. ಆವರಣದಲ್ಲಿರುವ ಇತರ ಕಟ್ಟಡಗಳನ್ನು ಹಾಗೆಯೇ ಉಳಿಸಲಾಗಿತ್ತು. ನಂತರ ಇದು ವಿವಾದಿತ ಸ್ಥಳವಾಗಿ ಗುರುತಿಸಿಕೊಂಡಿತು ಎನ್ನಲಾಗಿದೆ. ಇದನ್ನೂ ಓದಿ: ಶುಕ್ರವಾರ ಅಂಗಡಿಗಳನ್ನು ಬಂದ್‌ ಮಾಡಿ- ಮುಸ್ಲಿಮರಲ್ಲಿ ಜ್ಞಾನವಾಪಿ ಮಸೀದಿ ಸಮಿತಿ ಮನವಿ

    ಮೊದಲ ಗಲಭೆ ಆಗಿದ್ಯಾವಾಗ?
    ಬ್ರಿಟಿಷರ ಆಡಳಿತದ ಅವಧಿಯಲ್ಲಿ (1809) ಹಿಂದೂ-ಮುಸ್ಲಿಮರ ನಡುವೆ ಮೊದಲ ಗಲಭೆ ನಡೆಯಿತು. ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ನಡುವಿನ ತಟಸ್ಥ ಜಾಗದಲ್ಲಿ ಮಂದಿರ ನಿರ್ಮಿಸಲು ಹಿಂದೂಗಳು ಮುಂದಾದರು. ಇದು ಇದು ಉದ್ವಿಗ್ನತೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ಹೋಳಿ ಹಬ್ಬ ಮತ್ತು ಮೊಹರಂ ಹಬ್ಬವೂ ಒಂದೇ ದಿನ ಬಿದ್ದಿತ್ತು. ಸಂಭ್ರಮದ ವೇಳೆ ಎರಡೂ ಕೋಮಿನವರು ಮುಖಾಮುಖಿಯಾಗಿ ಗಲಭೆ ಉಂಟಾಯಿತು. ನಂತರ ಅದನ್ನು ಬ್ರಿಟಿಷ್ ಆಡಳಿತವು ಶಮನಗೊಳಿಸಿತು. ಈ ಗಲಭೆಯಿಂದ ಹಲವಾರು ಸಾವು-ನೋವುಗಳಾಗಿವೆ ಎಂದು ವರದಿಯಾಗಿದೆ. ಮಂದಿರಕ್ಕಾಗಿ ಹಿಂದೂಗಳ ಹೋರಾಟ ಮುಂದುವರಿಯಿತು.

    ಜೇಮ್ಸ್ ಪ್ರಿನ್ಸೆಪ್ ಚಿತ್ರಕಲೆ ಏನು ಹೇಳುತ್ತೆ?
    ಜ್ಞಾನವಾಪಿ ಮಸೀದಿಯನ್ನು ಬನಾರಸ್‌ನ ವಿಶ್ವೇಶ್ವರ ದೇವಸ್ಥಾನ ಎಂದು ಜೇಮ್ಸ್ ಪ್ರಿನ್ಸೆಪ್ ಎನ್ನುವವರು ಚಿತ್ರಿಸಿದ್ದಾರೆ. ಅಲ್ಲಿ ಕೆಡವಲಾದ ದೇವಾಲಯದ ಮೂಲ ಗೋಡೆ ಇಂದಿಗೂ ಮಸೀದಿಯಲ್ಲಿದೆ. ಪ್ರಿನ್ಸೆಪ್ ಅವರ 1834 ರ ಮಸೀದಿಯ ರೇಖಾಚಿತ್ರದಲ್ಲಿ ದೇವಾಲಯದ ಅರೆ ಕೆಡವಲಾದ ಗೋಡೆ, ಕಂಬಗಳು ಮತ್ತು ಅವಶೇಷಗಳು ಗೋಚರಿಸುತ್ತವೆ.

    290 ಹೋರಾಟಗಾರರಿಗೆ ಜೈಲು ಶಿಕ್ಷೆ
    1959 ರಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಹಿಂದೂ ಮಹಾಸಭಾವು ಮಸೀದಿ ಮಂಟಪದಲ್ಲಿ ರುದ್ರಾಭಿಷೇಕ ಸಮಾರಂಭ ನಡೆಸಿತು. ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಆರೋಪ ಹೊರಿಸಿ ಇಬ್ಬರು ಕಾರ್ಮಿಕರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಮುಂದಿನ ಕೆಲವು ತಿಂಗಳು ಮಸೀದಿ ಮಂಟಪದಲ್ಲಿ ಆಂದೋಲನ ಸೃಷ್ಟಿಗೆ ಕಾರಣವಾಯಿತು. ದೇವಾಲಯ ಮರುಸ್ಥಾಪನೆಗೆ ಒತ್ತಾಯ ಕೇಳಿಬಂತು. ಹೋರಾಟದಲ್ಲಿ ಭಾಗಿಯಾಗಿದ್ದ 290 ಹಿಂದೂಗಳು ಜೈಲುವಾಸ ಅನುಭವಿಸಿದರು. ಈ ಬೆಳವಣಿಗೆ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ನಾಂದಿ ಹಾಡಿತು. ಇದನ್ನೂ ಓದಿ: ಪೂಜೆಗೆ ಅವಕಾಶ ನೀಡಬೇಡಿ : ಸುಪ್ರೀಂ ಮೊರೆ ಹೋಗಿದ್ದ ಜ್ಞಾನವಾಪಿ ಮಸೀದಿ ಸಮಿತಿ – ತಡ ರಾತ್ರಿ ನಡೆದಿದ್ದು ಏನು?

    ಮಸೀದಿ ವಿವಾದ ಕೋರ್ಟ್ ಮೆಟ್ಟಿಲೇರಿದ್ದು ಯಾವಾಗ?
    ಜ್ಞಾನವಾಪಿ ಮಸೀದಿ ವಿವಾದ 1991 ರಲ್ಲಿ ವಾರಣಾಸಿ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ಅರ್ಚಕರಾಗಿದ್ದ ಅರ್ಜಿದಾರರ ಗುಂಪು ನ್ಯಾಯಾಲಯಕ್ಕೆ ಈ ಪ್ರಕರಣದ ಮೊದಲ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಸ್ವಯಂಭು ಜೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಎಂಬವರು, ಕೋರ್ಟ್ ಮುಂದೆ 3 ಬೇಡಿಕೆಗಳನ್ನು ಇಟ್ಟರು. ಜ್ಞಾನವಾಪಿ ಸಂಕೀರ್ಣವನ್ನು ಕಾಶಿ ದೇವಾಲಯದ ಭಾಗವಾಗಿ ಘೋಷಿಸುವುದು, ಈ ಪ್ರದೇಶದಿಂದ ಮುಸ್ಲಿಮರನ್ನು ದೂರ ಇಡುವುದು, ವಿವಾದಿತ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಮಾಡಿದ್ದೇನು?
    ಮಸೀದಿ ಸಮಿತಿಯು 1998 ರಲ್ಲಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ಮಂದಿರ-ಮಸೀದಿ ಭೂ ವಿವಾದವನ್ನು ಸಿವಿಲ್ ನ್ಯಾಯಾಲಯವು ನ್ಯಾಯಾಧಿಕರಣ ಮಾಡಲಾಗುವುದಿಲ್ಲ ಎಂದು ಸಮಿತಿ ಪ್ರತಿಪಾದಿಸಿತು. 22 ವರ್ಷಗಳ ಕಾಲ ಕೆಳ ನ್ಯಾಯಾಲಯದಲ್ಲಿ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತು.

    ಮುಂದೆ ಏನಾಯ್ತು?
    ವಿವಾದಿತ ಪ್ರದೇಶದ ಪುರಾತತ್ವ ಸಮೀಕ್ಷೆಗೆ ಒತ್ತಾಯಿಸಿ 2019 ರಲ್ಲಿ ರಸ್ತೋಗಿ ಎಂಬ ವ್ಯಕ್ತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಮಸೀದಿ ಸಮಿತಿ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ನಲ್ಲಿ ಎರಡೂ ಕಡೆಯಿಂದ ಸಾಕಷ್ಟು ಪೈಪೋಟಿ ನಡೆಯಿತು. ಕೊನೆಗೆ 2022 ರ ಏಪ್ರಿಲ್‌ನಲ್ಲಿ 2021 ರ ಅರ್ಜಿ ಆಧರಿಸಿ, ಜ್ಞಾನವಾಪಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಗೆ ವಾರಣಾಸಿ ನ್ಯಾಯಾಲಯ ಆದೇಶ ಹೊರಡಿಸಿತು. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ

    ಎಎಸ್‌ಐ ಸಮೀಕ್ಷೆ ವರದಿಯಲ್ಲೇನಿದೆ?
    ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಸಂಕೀರ್ಣ ಇರುವ ಜಾಗದ ವೈಜ್ಞಾನಿಕ ಸಮೀಕ್ಷೆ ನಡೆಸಿದ ಎಎಸ್‌ಐ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಳೆದ ವರ್ಷ ಡಿ.18 ರಂದು ಸಲ್ಲಿಸಿತು. ಸುಮಾರು 839 ಪುಟಗಳ ವರದಿಯಲ್ಲಿ ಸಮೀಕ್ಷೆಯ ಅಂಶಗಳು ದಾಖಲಾಗಿವೆ. ವರದಿ ಕೂಡ ಬಹಿರಂಗಗೊಂಡಿದೆ. ಹಿಂದೂ ದೇವಾಲಯದ ಮೇಲೆ ಜ್ಞಾನವಾಪಿ ಮಸೀದಿ ಇರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲಿ ಕನ್ನಡ, ತೆಲುಗು, ದೇವನಾಗರಿ ಲಿಪಿಯ ಶಾಸನಗಳು ಪತ್ತೆಯಾಗಿವೆ. ಜೊತೆಗೆ ಹಿಂದೂ ಧಾರ್ಮಿಕ ಕುರುಹುಗಳು, ಹಿಂದೂ ಮೂರ್ತಿಗಳು ಪತ್ತೆಯಾಗಿವೆ.

    ಕನ್ನಡ ಶಾಸನ ಪತ್ತೆ?
    ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಪ್ರಾಚೀನ ಕಾಲದ ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ. ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಎಎಸ್‌ಐ ವರದಿಯಲ್ಲಿದೆ. ಇದು ವಿಜಯನಗರದ ಪಾಳಯಗಾರರ ಅಥವಾ ಅಧಿಕಾರಿಗಳ ಕಾಲದಲ್ಲಿ ನೀಡಿರುವ ಸೇವಾರ್ಥ ಇರಬಹುದು. ಸುಮಾರು 16ನೇ ಶತಮಾನದ್ದು. ಸಾಮಾನ್ಯವಾಗಿ ದೇವರಿಗೆ ಸೇವಾರ್ಥವನ್ನು ನೀಡುವ ಸಮಯದಲ್ಲಿ ಈ ರೀತಿ ಕಲ್ಲಿನಲ್ಲಿ ಸೇವಾರ್ಥಿಯ ಹೆಸರನ್ನು ಹಾಕಿರುತ್ತಾರೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ 31 ವರ್ಷದ ಬಳಿಕ ವಿಗ್ರಹಗಳಿಗೆ ಪೂಜೆ

  • ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ಲಕ್ನೋ: ಕಾಶಿ (Kashi) ಜ್ಞಾನವ್ಯಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳು ನಡೆಸಿದ್ದ ಕಾನೂನು ಹೋರಾಟಕ್ಕೆ ಮಹತ್ವದ ಜಯ ಸಿಕ್ಕಿದೆ.

    ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ (Varanasi Gyanvapi Mosque) ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾದ ಬೆನ್ನಲ್ಲೇ ಹಿಂದೂಗಳಿಗೆ ಈಗ ಪೂಜಾಧಿಕಾರ ದಕ್ಕಿದೆ. ಈ ಪ್ರಾರ್ಥನಾ ಮಂದಿರದಲ್ಲಿ ಸೀಲ್ ಮಾಡಿರುವ ಬೇಸ್‌ಮೆಂಟ್‌ನಲ್ಲಿ ಇರುವ ಹಿಂದೂ ವಿಗ್ರಹಗಳಿಗೆ ಪೂಜೆ ಮಾಡಲು ವಾರಣಾಸಿ ಕೋರ್ಟ್ (Varanasi Court) ಅನುಮತಿ ನೀಡಿದೆ.  ಇದನ್ನೂ ಓದಿ: ಮೈಸೂರಿಗೂ ಕಾಲಿಟ್ಟ ಧ್ವಜ ದಂಗಲ್- ಪ್ರತಾಪ್ ಸಿಂಹ ವಿರೋಧದ ಬೆನ್ನಲ್ಲೇ ಟಿಪ್ಪು ಬಾವುಟ ತೆರವು

     

    ಮುಂದಿನ ಒಂದು ವಾರದಲ್ಲಿ ಪೂಜೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಕಾಶಿ ವಿಶ್ವನಾಥ ಮಂದಿರಕ್ಕೆ ಸೇರಿದ ಅರ್ಚಕರನ್ನು ಗುರುವಾರ ನೇಮಿಸಬೇಕು. ಹಿಂದೂ ಅರ್ಚಕರು ಪೂಜೆ ಮಾಡಲು ಬ್ಯಾರಿಕೇಡ್ ತೆರವು ಮಾಡಬೇಕು ಎಂದು ಸ್ಥಳೀಯ ಆಡಳಿತಕ್ಕೆ ವಾರಣಾಸಿ ಕೋರ್ಟ್ ನಿರ್ದೇಶನ ನೀಡಿದೆ.

    ಈ ಐತಿಹಾಸಿಕ ತೀರ್ಪು ನೀಡಿದ ವಾರಾಣಸಿ ನ್ಯಾಯಾಲಯದ ನ್ಯಾಯಮೂರ್ತಿ ಎ.ಕೆ. ವಿಶ್ವೇಶ ಅವರು ಇವತ್ತೇ ನಿವೃತ್ತರಾಗಿದ್ದಾರೆ. ಇದನ್ನೂ ಓದಿ: ಭಾರೀ ಬಿಗಿ ಭದ್ರತೆಯಲ್ಲಿ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಕೋರ್ಟ್‍ಗೆ ಹಾಜರು

    ವಾರಣಾಸಿ ಕೋರ್ಟ್ ತೀರ್ಪು ಹಿಂದೂಗಳಲ್ಲಿ ಸಂತಸ ತಂದಿದೆ. ಈ ತೀರ್ಪನ್ನು, 1983ರಲ್ಲಿ ಅಯೋಧ್ಯೆ ರಾಮಮಂದಿರದ ಬೀಗ ತೆರೆಯಲು ಜಸ್ಟೀಸ್ ಕೃಷ್ಣಮೋಹನ್ ಪಾಂಡೆ ನೀಡಿದ್ದ ಆದೇಶಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಮುಂದೊಂದು ದಿನ ಈ ಮಸೀದಿ ಕೂಡ, ಅಯೋಧ್ಯೆ ರಾಮಮಂದಿರದ ರೀತಿಯಲ್ಲಿ ಹಿಂದೂಗಳಿಗೆ ದಕ್ಕಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

     

    ಇದು ಹಿಂದೂಗಳಿಗೆ ದಕ್ಕಿದ ದೊಡ್ಡ ಗೆಲುವು.ಒಂದು ವಾರದಲ್ಲಿ ಪೂಜೆ ಆರಂಭಿಸುತ್ತೇವೆ ಎಂದು ಕಾಶಿವಿಶ್ವನಾಥ ಮಂದಿರ ಟ್ರಸ್ಟ್ ತಿಳಿಸಿದೆ. ಆದರೆ ಈ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಹೋಗಲು ಮಸೀದಿ ಆಡಳಿತ ಮಂಡಳಿ ನಿರ್ಧರಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

    ಹಿಂದೂಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಪ್ರತಿಕ್ರಿಯಿಸಿ, ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳಿಗೆ ಸಿಕ್ಕಿದ ಮೊದಲ ದೊಡ್ಡ ಗೆಲುವು ಎಂದು ಬಣ್ಣಿಸಿದ ಅವರು ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ 31 ವರ್ಷದ ಬಳಿಕ ಪೂಜೆ ಮಾಡಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.

  • ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಹಿಂದೂಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

    ವಾರಣಾಸಿಯ ಜ್ಞಾನವಾಪಿ (Gyanvapi mosque) ʼವಜುಖಾನಾʼ (Wazukhana) ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಮಸೀದಿ ಸಂಕೀರ್ಣದ ವಜುಖಾನಾದ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೋರ್ಟ್ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ಈ ಕಟ್ಟಡದಲ್ಲಿ ಶಿವಲಿಂಗವಿದೆ ಎಂದು ಹಿಂದೂಗಳು ಹೇಳಿಕೊಂಡಿದ್ದರು. ಜ್ಞಾನವಾಪಿಯ ಮುಚ್ಚಿದ ಪ್ರದೇಶವನ್ನು ತೆರೆಯಬೇಕು ಮತ್ತು ತಕ್ಷಣ ಸ್ವಚ್ಛಗೊಳಿಸಬೇಕು ಎಂದು ಹಿಂದೂಗಳು ಮನವಿ ಸಲ್ಲಿಸಿದ್ದರು. ಇದೀಗ ಹಿಂದೂಗಳ ಬೇಡಿಕೆಯನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟ್ ಸ್ವಚ್ಛತೆಗೆ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತೆಗೆ ಕೋರ್ಟ್ ಅನುಮತಿ ನೀಡಿದೆ. ಇದನ್ನೂ ಓದಿ: ಕೃಷ್ಣ ಜನ್ಮಭೂಮಿ-ಶಾಹೀ ಈದ್ಗಾ ಮಸೀದಿ ಕೇಸ್‌; ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

    ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2022 ರಲ್ಲಿ ‘ವಜುಖಾನಾ’ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಇಲ್ಲಿ ‘ಶಿವಲಿಂಗ’ ಆಕಾರದ ಕಲ್ಲು ಪತ್ತೆಯಾಗಿದ್ದು, ನಂತರ ಅದನ್ನು ಮುಚ್ಚಲು ಆದೇಶ ನೀಡಲಾಗಿತ್ತು. 16 ಮೇ 2022 ರಂದು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಕೊಳವೊಂದು ಪತ್ತೆಯಾಗಿತ್ತು. ಇದನ್ನು ಹಿಂದೂಗಳು ‘ಶಿವಲಿಂಗ’ ಎಂದು ವಾದಿಸಿದರೆ, ಮುಸ್ಲಿಮರು ‘ಕಾರಂಜಿ’ ಎಂದು ಪ್ರತಿಪಾದಿಸಿದ್ದರು.

  • ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಲಕ್ನೋ: ವಾರಣಾಸಿಯಲ್ಲಿ (Varanas) ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ ʻಸ್ವರವೇದ ಮಹಾಮಂದಿರʼ (Swarved Mahamandir) ಉದ್ಘಾಟಿಸಿದರು. ಬಳಿಕ ಕೆಲ ಕಾಲ ಬಿಡುವು ಮಾಡಿಕೊಂಡು ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಪ್ರಸಂಗ ಕಂಡುಬಂದಿತು.

    ಸಿಎಂ ಯೋಗಿ ಆದಿತ್ಯನಾಥ್‌ ಅವರೊಂದಿಗೆ ವಾರಣಾಸಿಯ ಶಾಲೆಯೊಂದಕ್ಕೆ (Varanasi School) ಭೇಟಿ ನೀಡಿದ ಮೋದಿ, ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಾ? ತಾವೂ ಮಕ್ಕಳಾಗಿಯೇ ಕಾಲ ಕಳೆದರು. ಈ ವೀಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಮೋದಿ ಶಾಲೆಯೊಳಗೆ ಬರುತ್ತಿದ್ದಂತೆ ವಿಶೇಷ ಗೀತೆಯೊಂದನ್ನು ಹಾಡಿದ ಮಕ್ಕಳು ಗೌರವದಿಂದ ತಲೆಭಾಗಿ ನಮಸ್ಕರಿಸಿದರು. ಬಳಿಕ ಅಲ್ಲಿಯೇ ಮೋದಿ ಮಕ್ಕಳ ಸಾಮರ್ಥ್ಯ ಪರೀಕ್ಷಿಸುವ ಸಣ್ಣ ಪ್ರಯತ್ನ ಮಾಡಿದರು. ಮಕ್ಕಳಿಗೆ ಏನು ಇಷ್ಟ? ಇಂತಹ ಸುಂದರ ಶಾಲೆಯಲ್ಲಿ ಹೇಗೆ ಕಲಿಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಹಾಡಿನ ಮೂಲಕವೇ ಉತ್ತರ ಕೊಟ್ಟು ಪ್ರಧಾನಿಗಳನ್ನು ಸಂತಸಪಡಿಸಿದರು.

    ಈ ವೇಳೆ ಪುಟ್ಟ ಬಾಲಕಿಯೊಬ್ಬಳು ʻನಿಮಗಿಷ್ಟವಾದ ಒಂದು ಕವಿತೆಯೊಂದನ್ನು ಬರೆದಿದ್ದೇನೆ ನಿಮಗೆ ಹೇಗನ್ನಿಸುತ್ತದೆ ಹೇಳಿ? ಎಂದು ಕೇಳಿದಳು, ಅದಕ್ಕೆ ಮೋದಿ ಹೌದಾ.. ಹಾಡು ನೋಡೋಣ ಎಂದು ನಯವಾಗಿಯೇ ಹೇಳಿದರು. ಆಗ ಬಾಲಕಿ ʻಜನಮನ ನಾಯಕ ಶ್ರೇಷ್ಠ ವಿಧಾಯಕ, ವಿಶ್ವ ಚೇತನಕೆ ಅಧಿನಾಯಕ, ಜೈ ಮೋದಿ ಜೈ ಹಿಂದೂಸ್ತಾನ್‌ʼ ಎಂದು ಕವಿತೆ ಹಾಡಿದಳು. ಇದಕ್ಕೆ ಮೋದಿ ವ್ಹಾ ವ್ಹಾ ಎಂದು ಚಪ್ಪಾಳೆ ಬಾರಿಸಿ, ಬೆನ್ನುತಟ್ಟಿದರು.

    ಬಳಿಕ ಮತ್ತೊಂದು ಕೊಠಡಿಯಲ್ಲಿದ್ದ ಮಕ್ಕಳನ್ನು ಭೇಟಿಯಾಗಿ ಸ್ಮಾರ್ಟ್‌ ಕ್ಲಾಸ್‌ ನಿಮಗೆ ಹೇಗೆ ಅನ್ನಿಸುತ್ತಿದೆ? ನೀರಿನ ಸೌಲಭ್ಯ ಚೆನ್ನಾಗಿದೆಯೇ ಎಂದೆಲ್ಲಾ ಪ್ರಶ್ನಿಸಿದರು. ಮಕ್ಕಳು ಅದಕ್ಕೆಲ್ಲ ಸುಲಲಿತವಾಗಿಯೇ ಉತ್ತರ ಕೊಟ್ಟರು. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

  • ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಾರಣಾಸಿಯಲ್ಲಿ (Varanasi) ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ (Meditation Centre) ‘ಸ್ವರವೇದ ಮಹಾಮಂದಿರ’ವನ್ನು (Swarved Mahamandir) ಸೋಮವಾರ ಉದ್ಘಾಟಿಸಿದರು.

    ಉದ್ಘಾಟನೆಯ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಧಾನಿ ಮೋದಿ ಧ್ಯಾನ ಮಂದಿರವನ್ನು ವೀಕ್ಷಿಸಿದರು. ಅಲ್ಲದೇ ಮಂದಿರದ ಒಳವಿನ್ಯಾಸ, ರಚನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಮಂದಿರದಲ್ಲಿ ಏಕಕಾಲದಲ್ಲಿ 20,000 ಜನರು ಧ್ಯಾನಕ್ಕಾಗಿ ಕುಳಿತುಕೊಳ್ಳಬಹುದಾಗಿದೆ. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

    ಈ ಮಹಾಮಂದಿರ ಏಳು ಅಂತಸ್ತಿನ ಮೇಲ್ವಿನ್ಯಾಸವನ್ನು ಒಳಗೊಂಡಿದ್ದು, ಗೋಡೆಗಳ ಮೇಲೆ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ಸ್ವರವೇದ ಮಹಾಮಂದಿರವು ಪ್ರಾಚೀನ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಆಧುನಿಕ ವಾಸ್ತುಶಿಲ್ಪದ ಸಂಯೋಜನೆಯಾಗಿದೆ. ಇದನ್ನೂ ಓದಿ: ಗುಡ್‌ನ್ಯೂಸ್‌ – ಕುನೋ ಪಾರ್ಕ್‌ನಲ್ಲಿ ಇನ್ಮುಂದೆ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ

    ಬಳಿಕ ಮಾತನಾಡಿದ ಮೋದಿ, ಸಂತರ ಒಡನಾಟದಲ್ಲಿರುವ ಕಾಶಿಯ ಜನರು ಒಟ್ಟಾಗಿ ಅಭಿವೃದ್ಧಿ ಮತ್ತು ಆವಿಷ್ಕಾರದ ಹೊಸ ದಾಖಲೆಗಳನ್ನು ರಚಿಸಿದ್ದಾರೆ ಮತ್ತು ಕಾಶಿಯ ಪುನರುಜ್ಜೀವನಕ್ಕಾಗಿ ಸರ್ಕಾರ, ಸಮಾಜ ಮತ್ತು ಸಂತರು ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದು. ಈ ವೇಳೆ ಮಹರ್ಷಿ ಸದಾಫಲ್ ದೇವ್ ಜಿ ಅವರನ್ನು ಸ್ಮರಿಸಿದ ಮೋದಿ ವಾರಣಾಸಿಯ ಈ ಮಹಾನ್ ದೇವಾಲಯ ಸದಾಫಲ್ ದೇವ್ ಜಿಯವರ ಬೋಧನೆ ಮತ್ತು ಬೋಧನೆಗಳ ಸಂಕೇತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್‌ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್‌

    ನಮ್ಮ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವುದನ್ನು ಮರೆತಿದೆ ಮತ್ತು ಈ ದೇಶದಲ್ಲಿ ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೂ ವಿರೋಧವಿದೆ. ಆದರೆ ಈಗ ಕಾಲ ಬದಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂದರು. ಇದನ್ನೂ ಓದಿ: ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್

  • ವಾರಣಾಸಿ ರೋಡ್‍ ಶೋ ವೇಳೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!

    ವಾರಣಾಸಿ ರೋಡ್‍ ಶೋ ವೇಳೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!

    ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು ವಾರಣಾಸಿಯಲ್ಲಿ ನಡೆಯುತ್ತಿದ್ದ ತಮ್ಮ ರೋಡ್ ಶೋ ವೇಳೆ ಅಂಬುಲೆನ್ಸ್ ಗೆ (Ambulance) ದಾರಿ ಮಾಡಿಕೊಡಲು ತಮ್ಮ ಬೆಂಗಾವಲು (Convoy) ವಾಹನವನ್ನು ನಿಲ್ಲಿಸಿದ್ದಾರೆ. ಈ ಮೂಲಕ ಪ್ರಧಾನಿಯವರು ಮಾನವೀಯತೆ ಮೆರೆದಿದ್ದಾರೆ. ಸದ್ಯ ಮೋದಿ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕಳೆದ ವರ್ಷ ಸೆಪ್ಟೆಂಬರ್ 30 ರಂದು ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡಲು ಗುಜರಾತ್‍ನ (Gujrat) ಮುಖ್ಯ ರಸ್ತೆಯಲ್ಲಿ ನಿಂತಿತು. ಅಂದು ಪ್ರಧಾನಿ ಮೋದಿ ಮತ್ತು ಅಧಿಕಾರಿಗಳು ಅಹಮದಾಬಾದ್‍ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದರು. ಇದೇ ರೀತಿ 2022ರ ನವೆಂಬರ್ 9 ರಂದು ಮೋದಿಯವರು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ರೋಡ್ ಶೋ ಬಳಿಕ ಮೈದಾನದಿಂದ ಹಿಂದಿರುಗಿದ ನಂತರ ಅಂಬುಲೆನ್ಸ್ ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದರು.

    ಈ ವರ್ಷ ವಾರಣಾಸಿಗೆ ತಮ್ಮ 2 ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ವಾರಣಾಸಿ ಮತ್ತು ಪೂರ್ವಾಂಚಲ್‍ಗೆ 19,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ 37 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ರಸ್ತೆಗಳು ಮತ್ತು ಸೇತುವೆಗಳು, ಆರೋಗ್ಯ ಮತ್ತು ಶಿಕ್ಷಣ, ಪೊಲೀಸ್ ಕಲ್ಯಾಣ, ಸ್ಮಾರ್ಟ್ ಸಿಟಿ ಮತ್ತು ನಗರಾಭಿವೃದ್ಧಿ ಯೋಜನೆಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ಯೋಜನೆಗಳನ್ನು ಒಳಗೊಂಡಿದೆ.

    ವಾರಣಾಸಿಗೆ ಭೇಟಿ ನೀಡಿದ ಮೊದಲ ದಿನ, ಪ್ರಧಾನಿ ಮೋದಿ ಅವರು ನಮೋ ಘಾಟ್‍ನಲ್ಲಿ ಸಂಜೆ ಕಾಶಿ ತಮಿಳು ಸಂಗಮಂನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಲಿದ್ದಾರೆ. ಸಮಾರಂಭದಲ್ಲಿ ಅವರು ಕನ್ಯಾಕುಮಾರಿ ಮತ್ತು ವಾರಣಾಸಿ ನಡುವೆ ಸಂಚರಿಸಲಿರುವ ಕಾಶಿ ತಮಿಳು ಸಂಗಮಂ ಎಕ್ಸ್ ಪ್ರೆಸ್‍ಗೆ ಚಾಲನೆ ನೀಡಲಿದ್ದಾರೆ. ಡಿಸೆಂಬರ್ 17-31 ರವರೆಗೆ ನಡೆಯಲಿರುವ ಕಾಶಿ ತಮಿಳು ಸಂಗಮಂ ತಮಿಳುನಾಡು ಮತ್ತು ಪುದುಚೇರಿಯ 1,400 ಗಣ್ಯರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ವಾರಣಾಸಿ, ಪ್ರಯಾಗ್ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ತಮಿಳುನಾಡು ಮತ್ತು ಕಾಶಿ ಎರಡರಿಂದಲೂ ಕಲೆ, ಸಂಗೀತ, ಕೈಮಗ್ಗ, ಕರಕುಶಲ ವಸ್ತುಗಳು, ಪಾಕಪದ್ಧತಿ ಮತ್ತು ಇತರ ವಿಶಿಷ್ಟ ಉತ್ಪನ್ನಗಳ ಶ್ರೀಮಂತ ವಸ್ತ್ರವನ್ನು ಪ್ರದರ್ಶಿಸುವ ಪ್ರದರ್ಶನವು ಕಾರ್ಯಸೂಚಿಯಲ್ಲಿದೆ. ಸೋಮವಾರ, ಪ್ರಧಾನಿ ಮೋದಿ ಅವರು ಸೇವಾಪುರಿ ಡೆವಲಪ್‍ಮೆಂಟ್ ಬ್ಲಾಕ್‍ನ ಬಾರ್ಕಿ ಗ್ರಾಮ ಸಭೆಯಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ್ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  • ವಾರಣಾಸಿಯ ಗಂಗಾ ಆರತಿಯಲ್ಲಿ ಭಾಗಿಯಾದ ಸನ್ನಿ ಲಿಯೋನ್

    ವಾರಣಾಸಿಯ ಗಂಗಾ ಆರತಿಯಲ್ಲಿ ಭಾಗಿಯಾದ ಸನ್ನಿ ಲಿಯೋನ್

    ಹಿಂದೂಗಳ ಪವಿತ್ರ ಸ್ಥಳ ವಾರಣಾಸಿಯ (Varanasi) ನೆಲವನ್ನು ಸ್ಪರ್ಶಿಸಬೇಕು ಎನ್ನುವುದು ಹಲವರ ಗುರಿಯಾಗಿರುತ್ತದೆ. ಅದರಲ್ಲೂ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗುವುದು ಪುಣ್ಯದ ಕೆಲಸವೆಂದೇ ಭಾವಿಸಲಾಗಿದೆ. ಇಂತಹ ಗಂಗಾ ಆರತಿ ಪೂಜೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ) ಭಾಗಿಯಾಗಿದ್ದಾರೆ.

    ಸನ್ನಿ ಲಿಯೋನ್ ಜೊತೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ಕೂಡ ಪವಿತ್ರ ಗಂಗಾ ಆರತಿಯ ಪೂಜೆಯಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಪಿಂಕ್ ಸಲ್ವಾರ್ ಧರಿಸಿ, ಕುತ್ತಿಗೆಗೆ ಚಂಡು ಹೂವಿನ ಮಾಲೆ ಹಾಕಿಕೊಂಡಿರುವ ಸನ್ನಿ, ಪೂಜೆಗೆ ಉತ್ಸಾಹದಿಂದಲೇ ಭಾಗಿಯಾಗಿದ್ದಾರೆ.

     

    ತಾವು ಗಂಗಾರತಿ ಪಡೆದ ನಂತರ ಆ ವಿಡಿಯೋವನ್ನು ಸನ್ನಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಭಗವಂತ ಒಳ್ಳೇದು ಮಾಡಲಿ ಎಂದು ಅವರು ಕೇಳಿಕೊಂಡಿದ್ದಾರಂತೆ. ಥರ್ಡ್ ಪಾರ್ಟಿ ಎಂಬ ಮ್ಯೂಸಿಕ್ ಆಲ್ಬಂಗೆ ಅಭಿಷೇಕ್ ಸಿಂಗ್ ಮತ್ತು ಸನ್ನಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

  • ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ (Varanasi) ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ (International Cricket Stadium) ಶಂಕುಸ್ಥಾಪನೆ ಮಾಡಿದ್ದಾರೆ. ಈ ಸಂದರ್ಭ ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ (Sachin Tendulkar), ನರೇಂದ್ರ ಮೋದಿಯವರಿಗೆ ಭಾರತೀಯ ಕ್ರಿಕಟ್ ತಂಡದ ಜೆರ್ಸಿಯನ್ನು (Jersy) ಉಡುಗೊರೆಯಾಗಿ ನೀಡಿದರು.

    ಈ ಸಂದರ್ಭ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ಉಪಸ್ಥಿತರಿದ್ದರು. ಜೆರ್ಸಿ ಹಿಂಭಾಗದಲ್ಲಿ ‘ನಮೋ’ ಎಂದು ಬರೆಯಲಾಗಿದೆ. ತೆಂಡೂಲ್ಕರ್ ಮೋದಿಗೆ ಜೆರ್ಸಿ ಉಡುಗೊರೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಕೂಡಾ ಭಾಗವಹಿಸಿದ್ದು, ಪ್ರಧಾನಿ ಮೋದಿಯವರು ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರಣಾಸಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಅಡಿಪಾಯ ಹಾಕಿದ್ದಾರೆ. ರಾಜ್ಯದ ಪ್ರತಿಯೊಬ್ಬ ಕ್ರೀಡಾ ಉತ್ಸಾಹಿ ಪರವಾಗಿ ನಾನು ಮೋದಿಯವರನ್ನು ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ICC Ranking: ಭಾರತ ನಂ.1 – ಕ್ರಿಕೆಟ್‌ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ವಾರಣಾಸಿಯಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಸಹಾಯದಿಂದ ಒಂದು ಕ್ರೀಡಾಂಗಣ ನಿರ್ಮಾಣ ಹಂತದಲ್ಲಿದೆ. ಇದು ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿದ್ದು, ಬಿಸಿಸಿಐ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಮೊದಲ ಕ್ರೀಡಾಂಗಣ ಇದಾಗಿದೆ. ಯುಪಿಗೆ ಈ ಉಡುಗೊರೆ ನೀಡಿದ್ದಕ್ಕಾಗಿ ಬಿಸಿಸಿಐ ಮತ್ತು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕ್ರೀಡಾಂಗಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ರೂ. ಖರ್ಚು ಮಾಡಿದ್ದು, ಬಿಸಿಸಿಐ ಅದರ ನಿರ್ಮಾಣಕ್ಕೆ 330 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್‌, ರೋವರ್‌ನಿಂದ ಸಿಗ್ನಲ್‌ ಸಿಗ್ತಿಲ್ಲ: ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ (Varanasi) ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ (International Cricket Stadium) ಶಂಕುಸ್ಥಾಪನೆ ನೆರವೇರಿಸಿದರು.

    ಈ ಸಂದರ್ಭ ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿ, ಬಿಸಿಸಿಐ (BCCI) ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಕೂಡಾ ಭಾಗವಹಿಸಿದ್ದರು. ಇದನ್ನೂ ಓದಿ: ಮೂರಲ್ಲ, 6 ಡಿಸಿಎಂ ಹುದ್ದೆಗಳು ಮಾಡಲಿ, ಡಿಕೆಶಿ ಸಿನಿಯರ್ DCM ಆಗಲಿ – ಬಸವರಾಜ್ ರಾಯರೆಡ್ಡಿ

    ಸ್ಟೇಡಿಯಂಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ರೂ. ಹಣವನ್ನು ಖರ್ಚು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅದರ ನಿರ್ಮಾಣಕ್ಕೆ 330 ಕೋಟಿ ರೂ. ವೆಚ್ಚ ಮಾಡಲಿದೆ. ರಜತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ನಿರ್ಮಾಣವಾಗಲಿರುವ ಕ್ರೀಡಾಂಗಣವು ಡಿಸೆಂಬರ್ 2025ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯು ವಾರಣಾಸಿಯ ಘಾಟ್‌ಗಳ ಮೆಟ್ಟಿಲುಗಳನ್ನು ಹೋಲುತ್ತದೆ. ಕಾನ್ಪುರ ಮತ್ತು ಲಕ್ನೋ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕನಿಂದ ನಿಂದನೆಗೊಳಗಾದ ಸಂಸದರನ್ನು ರಾಹುಲ್ ಗಾಂಧಿ ಭೇಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]