Tag: Varalaxmi sarathkumar

  • ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು

    ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು

    ನ್ನಡದ ‘ಮಾಣಿಕ್ಯ’ (Maanikya) ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ತಮಗಾದ ಲೈಂಗಿಕ ಕಿರುಕುಳ ನೆನೆದು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ಪೋಷಕರಿಗೆ ನಟಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ವರಲಕ್ಷ್ಮಿ ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ಇದೀಗ ಅವರು ‘ಡ್ಯಾನ್ಸ್ ಜೋಡಿ ಡ್ಯಾನ್ಸ್’ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ. ಇದರ ಪ್ರೋಮೋ ಇದೀಗ ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಡ್ಯಾನ್ಸ್ ಮೂಲಕ ತೋರಿಸಿದ್ದಾರೆ. ಇದನ್ನು ನೋಡಿ ವರಲಕ್ಷ್ಮಿ ಭಾವುಕರಾಗಿದ್ದಾರೆ.

    ಬಾಲ್ಯದಲ್ಲಿ ನಾನು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ನನ್ನ ಕಥೆಯೂ ನಿನ್ನ ಕಥೆಯೂ ಒಂದೇ ಎಂದಿದ್ದಾರೆ ನಟಿ. ಪೋಷಕರು ಅವರ ಕೆಲಸದಲ್ಲಿ ನಿರತರಾಗಿದ್ದರು. ಹಾಗಾಗಿ ನಾನು ಚಿಕ್ಕವಳಿದ್ದಾಗ ನನ್ನನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆಗ 5ರಿಂದ 6 ಜನ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಿನ್ನ ಸ್ಟೋರಿ ನನ್ನ ಸ್ಟೋರಿ ಎರಡು ಒಂದೆ. ನನಗೆ ಮಕ್ಕಳಿಲ್ಲ ಆದರೆ ನಾನು ಪೋಷಕರಿಗೆ ಹೇಳುವುದಿಷ್ಟೇ, ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ವೇದಿಕೆಯಲ್ಲಿ ವರಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

    ಅಂದಹಾಗೆ, ಇನ್ನೂ ಕಳೆದ ವರ್ಷ ಜುಲೈನಲ್ಲಿ ಉದ್ಯಮಿ ನಿಕೋಲಾಯ್ ಜೊತೆ ನಟಿ ವರಲಕ್ಷ್ಮಿ ಹೊಸ ಬಾಳಿಗೆ ಕಾಲಿಟ್ಟರು. ವಿದೇಶದಲ್ಲಿ ಇಬ್ಬರ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

  • ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಇತ್ತೀಚೆಗೆ ಅದ್ಧೂರಿಯಾಗಿ ಥೈಲ್ಯಾಂಡ್‌ನಲ್ಲಿ ಮದುವೆಯಾಗಿದ್ದರು. ಬಳಿಕ ಚೆನ್ನೈನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ಆಯೋಜಿಸಿದ್ದರು. ಆದರೆ ಮದುವೆ ಫೋಟೋ ಮಾತ್ರ ಎಲ್ಲೂ ಶೇರ್ ಆಗಿರಲಿಲ್ಲ. ಇದೀಗ ನಟಿಯ ಮದುವೆಯ (Wedding) ಸುಂದರ ಫೋಟೋಗಳು ಹೊರಬಿದ್ದಿದೆ.

    ಮದುವೆಯಲ್ಲಿ ನಟಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ವರ ನಿಯೋಲಾಯ್ ಲೈಟ್ ಬಣ್ಣ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಖುಷಿ ಖುಷಿಯಾಗಿ ಮದುವೆಯಾಗಿರುವ ನಟಿಯ ದಾಂಪತ್ಯಕ್ಕೆ ಈಗ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    ವರಲಕ್ಷ್ಮಿ ಮತ್ತು ನಿಕೊಲಾಯ್ (Nicholai) ಹಿಂದೂ ಮತ್ತು ಕ್ರೈಸ್ತ ಎರಡು ಧರ್ಮದ ಪ್ರಕಾರ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಂದಹಾಗೆ, ಜುಲೈ 3ರಂದು ಚೆನ್ನೈನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡದ ನಟ ಸುದೀಪ್ ಭಾಗಿಯಾಗಿದ್ದರು. ಸುದೀಪ್ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಸುದೀಪ್ ಕುಟುಂಬದ ಜೊತೆ ವರಲಕ್ಷ್ಮಿ ಉತ್ತಮ ಒಡನಾಟ ಹೊಂದಿದ್ದಾರೆ.

    ನಟಿಯ ಆತರಕ್ಷತೆಯಲ್ಲಿ ತಮಿಳು ನಟ ಸಿದ್ಧಾರ್ಥ್, ಬಾಲಯ್ಯ, ನಟಿ ತ್ರಿಷಾ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.

    ಇನ್ನೂ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

  • ವರಲಕ್ಷ್ಮಿ ಶರತ್‌ಕುಮಾರ್ ಅದ್ಧೂರಿ ಆರತಕ್ಷತೆ- ಕಿಚ್ಚ ಸುದೀಪ್ ಕುಟುಂಬ ಭಾಗಿ

    ವರಲಕ್ಷ್ಮಿ ಶರತ್‌ಕುಮಾರ್ ಅದ್ಧೂರಿ ಆರತಕ್ಷತೆ- ಕಿಚ್ಚ ಸುದೀಪ್ ಕುಟುಂಬ ಭಾಗಿ

    ಮಿಳಿನ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಬಹುಕಾಲದ ಗೆಳೆಯ ನಿಕೊಲಾಯ್ ಜೊತೆ ಥೈಲ್ಯಾಂಡ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜು.3ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ (Wedding Reception) ಆಯೋಜಿಸಿದ್ದು, ಕನ್ನಡದ ಸ್ಟಾರ್ ನಟ ಸುದೀಪ್ (Sudeep) ಕುಟುಂಬ ಮತ್ತು ಸೌತ್‌ನ ಸ್ಟಾರ್ ಕಲಾವಿದರ ದಂಡೇ ಭಾಗಿಯಾಗಿತ್ತು.

    ಹಿರಿಯ ನಟ ಶರತ್‌ ಕುಮಾರ್‌ ಮತ್ತು ರಾಧಿಕಾ ದಂಪತಿ ಪುತ್ರಿಯ ಮದುವೆ ಆರತಕ್ಷತೆಗೆ ಸುದೀಪ್ ಫ್ಯಾಮಿಲಿ ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ. ಸುದೀಪ್ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಸುದೀಪ್ ಕುಟುಂಬದ ಜೊತೆ ವರಲಕ್ಷ್ಮಿ ಉತ್ತಮ ಒಡನಾಟ ಹೊಂದಿದ್ದಾರೆ. ಮಾಣಿಕ್ಯ, ರನ್ನ, ಮತ್ತು ಇದೀಗ ಬರಲಿರುವ ಮ್ಯಾಕ್ಸ್ ಸಿನಿಮಾದಲ್ಲಿ ವರಲಕ್ಷ್ಮಿ ನಟಿಸಿದ್ದಾರೆ.

    ನಟಿಯ ಆತರಕ್ಷತೆಯಲ್ಲಿ ತಮಿಳು ನಟ ಸಿದ್ಧಾರ್ಥ್, ಬಾಲಯ್ಯ(Balayya), ನಟಿ ತ್ರಿಷಾ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಪವಿತ್ರಾಗೌಡ ದರ್ಶನ್‌ ಪತ್ನಿ ಅಲ್ಲ: ಪೊಲೀಸ್‌ ಆಯುಕ್ತರಿಗೆ ವಿಜಯಲಕ್ಷ್ಮಿ ಪತ್ರ

    ಅಂದಹಾಗೆ, ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

  • ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆ

    ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆ

    ಮಿಳಿನ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಬಹುಕಾಲದ ಗೆಳೆಯನ ಜೊತೆ ಜುಲೈ 2ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ವಿವಾಹ ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ಸಂಭ್ರಮದಲ್ಲಿ ತಮಿಳಿನ ಸ್ಟಾರ್ ಕಲಾವಿದರ ದಂಡೇ ಸಾಕ್ಷಿಯಾಗಲಿದೆ. ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಶಿವಣ್ಣ ಫ್ಯಾನ್ಸ್‌ಗೆ ಸಿಹಿಸುದ್ದಿ- ಏನದು?

    ಹಿರಿಯ ನಟ ಶರತ್‌ಕುಮಾರ್ ಮತ್ತು ರಾಧಿಕಾ ದಂಪತಿ ಪುತ್ರಿ ವರಲಕ್ಷ್ಮಿ ವಿವಾಹ ಪೂರ್ವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದೆ. ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಉದ್ಯಮಿ ನಿಕೋಲಾಯ್ (Nicholai Sachdev) ಜೊತೆ ವರಲಕ್ಷ್ಮಿ ಮದುವೆಗೆ (Wedding) ಭರ್ಜರಿ ತಯಾರಿ ನಡೆಯುತ್ತಿದೆ.

    ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ಪಿಎಂ ನರೇಂದ್ರ ಮೋದಿಗೂ ನಟಿಯ ಕುಟುಂಬ ವಿಶೇಷವಾಗಿ ಆಮಂತ್ರಣ ನೀಡಿದೆ.

    ಅಂದಹಾಗೆ, ಮಾಣಿಕ್ಯ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಪಿಎಂ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ‘ಮಾಣಿಕ್ಯ’ ನಟಿ

    ಪಿಎಂ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ‘ಮಾಣಿಕ್ಯ’ ನಟಿ

    ನ್ನಡದ ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸೌತ್‌ನ ಸ್ಟಾರ್ ನಟ, ನಟಿಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡೋದ್ರಲ್ಲಿ ಬ್ಯುಸಿಯಿದ್ದ ನಟಿ ಈಗ ಕುಟುಂಬ ಸಮೇತ ಪಿಎಂ ಆಫೀಸ್‌ಗೆ ಭೇಟಿ ನೀಡಿ ನರೇಂದ್ರ ಮೋದಿಗೆ (Narendra Modi) ಮದುವೆ ಆಮಂತ್ರಣ (Wedding Invite) ಪತ್ರಿಕೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಗೆಳೆಯನ ದ್ರೋಹದ ಬಗ್ಗೆ ನೋವಿನ ಸಂಗತಿ ಬಿಚ್ಚಿಟ್ಟ ನಿವೇತಾ ಪೇತುರಾಜ್

    ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಭೇಟಿ ಮಾಡಿ ನಮ್ಮ ಮದುವೆಗೆ ಅವರನ್ನು ಆಹ್ವಾನಿಸಿದ್ದು ಎಂತಹ ಸೌಭಾಗ್ಯ. ಧನ್ಯವಾದಗಳು ತುಂಬಾ ಆತ್ಮೀಯ ಮತ್ತು ಸ್ವಾಗತಾರ್ಹ ಎಂದು ನಟಿ ಬರೆದುಕೊಂಡಿದ್ದಾರೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆದಿದ್ದೀರಿ. ನಿಜವಾಗಿಯೂ ನಿಮ್ಮ ಬಗ್ಗೆ ಹೆಚ್ಚು ಗೌರವವಿದೆ. ಇಂತಹ ಕ್ಷಣ ಸಾಧ್ಯ ಮಾಡಿದ ಅಪ್ಪ ಶರತ್ ಕುಮಾರ್ ಮತ್ತು ಅಮ್ಮ ರಾಧಿಕಾ ಶರತ್ ಕುಮಾರ್‌ಗೆ ಧನ್ಯವಾದಗಳು ಎಂದು ಮಾಣಿಕ್ಯ ನಟಿ ವರಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಟಿಯ ನಿವಾಸದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಕಾಲಿವುಡ್ ನಟ ಶರತ್ ಕುಮಾರ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ (Varalaxmi Sarathkumar) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನಟಿ ನಯನತಾರಾ, ಮಾಸ್ ಮಹಾರಾಜ ರವಿತೇಜ ಸೇರಿದಂತೆ ಅನೇಕರಿಗೆ ವರಲಕ್ಷ್ಮಿ ಮದುವೆ (Wedding) ಪತ್ರಿಕೆ ನೀಡಿದ್ದಾರೆ.

    ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ (Nayanathara) ದಂಪತಿ, ರವಿತೇಜ (Ravi Teja), ತಮಿಳು ನಟ ಸಿದ್ಧಾರ್ಥ್ (Siddarth), ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಗೋಪಿ ಚಂದ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಕಲ್ಕಿ ಪ್ರಭಾಸ್‌ಗೆ ಜೊತೆಯಾದ ವಿಜಯ್ ದೇವರಕೊಂಡ

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಕಾಲಿವುಡ್ ನಟ ಶರತ್ ಕುಮಾರ್ (Sarathkumar) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಜನಿಕಾಂತ್ (Rajanikanth) ಮನೆಗೆ ಭೇಟಿ ನೀಡಿ ಮದುವೆ (Wedding) ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ಕುರಿತು ನಟಿ ವರಲಕ್ಷ್ಮಿ (Varalaxmi) ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ನಮ್ಮ ತಲೈವರ್ ರಜಿನಿಕಾಂತ್ ಸರ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮತ್ತು ಲತಾ ಆಂಟಿ ಅವರನ್ನು ಮದುವೆ ಆಹ್ವಾನಿಸಿದೆ. ಧನ್ಯವಾದಗಳು ಸರ್ ಎಂದು ವರಲಕ್ಷ್ಮಿ ಬರೆದುಕೊಂಡಿದ್ದಾರೆ. ಭೇಟಿಯಾಗಿರುವ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿದ್ರು- ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಸಮರ್ಥನೆ

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಎಂಗೇಜ್‌ಮೆಂಟ್ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ಮದುವೆಗೆ ಸಿದ್ಧತೆ ನಡೆಯುತ್ತಿದೆ.

    ಇನ್ನೂ `ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar)  ಅವರು ಸಿನಿಮಾಗಿಂತ ವೈಯಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ನಿಕೋಲಾಯ್ ಜೊತೆ ಎಂಗೇಜ್‌ಮೆಂಟ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಭಾವಿ ಪತಿ ನೆಗೆಟಿವ್ ಆಗಿ ಟ್ರೋಲ್ ಕೂಡ ಆಗಿತ್ತು. ಈ ವಿಚಾರವಾಗಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

    ಡಿವೋರ್ಸ್ ಆಗಿರುವ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ವರಲಕ್ಷ್ಮಿ 2ನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂದೆ (Sarathkumar) ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪು ಇಲ್ಲ. ನನ್ನ ಕಣ್ಣಿಗೆ ನಿಕ್ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದೂ ಕೇರ್ ಮಾಡುವುದಿಲ್ಲ ಹೇಳಿದ್ದಾರೆ.‌ ಇದನ್ನೂ ಓದಿ:ಕಾಮಾಕ್ಯ ದೇವಿಯ ದರ್ಶನ ಪಡೆದ ‘ಗಾಳಿಪಟ 2’ ನಟಿ

    ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು. ನಿಕ್ ತಂದೆ-ತಾಯಿ ಒಂದು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕ್ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.

    ಅಂದಹಾಗೆ, ‘ಮಾಣಿಕ್ಯ’ ಸಿನಿಮಾದ ಬಳಿಕ ಮತ್ತೆ ವರಲಕ್ಷ್ಮಿ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಮಾಕ್ಸ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

  • ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

    ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

    ಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಮದುವೆ ನಿಶ್ಚಿತಾರ್ಥವಾಗಿದೆ. ನಿಕೋಲಾಯ್ ಸಚ್‌ದೇವ್ (Nicholai Sachdev) ಎಂಬುವರ ಜೊತೆ ಮದುವೆ ನಿಶ್ಚಯವಾಗಿದೆ. ಇವರು ಅಥ್ಲೆಟ್ ಆಗಿದ್ದು ವೇಟ್‌ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಈಗಾಗಲೇ ಅವರಿಗೆ ಮದುವೆಯಾಗಿದ್ದು, 15 ವರ್ಷದ ಮಗಳಿದ್ದಾಳೆ ಎನ್ನಲಾಗ್ತಿದೆ. ಇವರ ಜೊತೆ ವರಲಕ್ಷ್ಮಿ ನಿಶ್ಚಿತಾರ್ಥ ಹಲವು ಚರ್ಚೆಗೆ ಕಾರಣವಾಗಿದೆ.

    ನಿಕೋಲಾಯ್ ಅವರು ಖ್ಯಾತ ಮಾಡೆಲ್ ಕವಿತಾ (Kavitha) ಅವರನ್ನು ಮದುವೆಯಾಗಿದ್ದರು. ಅವರಿಗೆ 15 ವರ್ಷದ ಮಗಳೂ ಸಹ ಇದ್ದಾರೆ ಎನ್ನಲಾಗಿದೆ. ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಎಂಗೇಜ್ ಆದರು. ನಿಕೋಲಾಯ್ ಹಾಗೂ ಕವಿತಾ ಡಿವೋರ್ಸ್ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಮಾರ್ಚ್ 1ರಂದು ಗುಡ್ ನ್ಯೂಸ್ ಕೊಟ್ಟಿದ್ದರು. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆದರು. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.

    ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಸದ್ಯ ಧನುಷ್ ನಟನೆಯ ‘ರಾಯನ್’ (Raayan) ಚಿತ್ರದಲ್ಲಿ ವರಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.

    ಸುದೀಪ್ ಜೊತೆ ‘ಮಾಣಿಕ್ಯ’ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ನಟಿಸಿದ್ದಾರೆ.