Tag: varalakshmi sarathkumar

  • ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್‌ಗೆ (Varalaxmi Sarathkumar) ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್ ಪತ್ನಿ ಪ್ರಿಯಾ (Priya) ಹಾಗೂ ಮಗಳು ಸಾನ್ವಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿತ್ತಾ ತರುಣ್ ಸುಧೀರ್ ಚಿತ್ರತಂಡ?- ಅರಣ್ಯಾಧಿಕಾರಿ ಹೇಳೋದೇನು?

    ವರಲಕ್ಷ್ಮಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ನಡೆದಿದ್ದು, ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ.  ಈ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಭಾಗಿಯಾಗಿ ನಟಿಗೆ ಶುಭಕೋರಿದ್ದಾರೆ.

    ಅಂದಹಾಗೆ, ಮಾಣಿಕ್ಯ, ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿರೋ ವರಲಕ್ಷ್ಮಿಗೆ ನಟನ ಕುಟುಂಬದ ಜೊತೆ ಉತ್ತಮ ಒಡನಾಟವಿದೆ. ಕಳೆದ ವರ್ಷ ಹಸೆಮಣೆ ಏರಿದ ವರಲಕ್ಷ್ಮಿ ಮದುವೆಗೆ ಸುದೀಪ್ ಹಾಗೂ ಪತ್ನಿ ಹಾಜರಿ ಹಾಕಿದ್ದರು.

  • ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ನ್ನಡದ ‘ಮಾಣಿಕ್ಯ’ (Maanikya) ಚಿತ್ರ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalakshmi Sarathkumar) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆಗಿದ್ದಾರೆ. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮಾರ್ಚ್ 1ರಂದು ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.

    ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಸದ್ಯ ಧನುಷ್ ನಟನೆಯ ‘ರಾಯನ್’ ಚಿತ್ರದಲ್ಲಿ ವರಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಕರಿಮಣಿ ಮಾಲೀಕನನ್ನು ಪರಿಚಯಿಸಿದ ದೀಪಿಕಾ ದಾಸ್

    ಸುದೀಪ್ (Sudeep) ಜೊತೆ ‘ಮಾಣಿಕ್ಯ’ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ನಟಿಸಿದ್ದಾರೆ.

  • D50: ಧನುಷ್ ನಿರ್ದೇಶನದ ‘ರಾಯನ್’ ಸಿನಿಮಾದಲ್ಲಿ ಮಾಣಿಕ್ಯ ಚಿತ್ರದ ನಟಿ

    D50: ಧನುಷ್ ನಿರ್ದೇಶನದ ‘ರಾಯನ್’ ಸಿನಿಮಾದಲ್ಲಿ ಮಾಣಿಕ್ಯ ಚಿತ್ರದ ನಟಿ

    ಮಿಳಿನ ಖ್ಯಾತ ನಟ ಧನುಷ್ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾದಲ್ಲಿ ಖ್ಯಾತ ನಟ ಎಸ್.ಜೆ ಸೂರ್ಯ ವಿಲನ್ ಪಾತ್ರ ನಿರ್ವಹಿಸುವ ಬಗ್ಗೆ ಮಾಹಿತಿಯನ್ನು ಸ್ವತಃ ಧನುಷ್ (Dhanush) ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಚಿತ್ರದ ಮತ್ತೊಂದು ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕನ್ನಡದ ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಚಿತ್ರದಲ್ಲಿ ನಟಿಸಿದ್ದಾರೆ.

    ಮಾಣಿಕ್ಯ (Maanikya) ಸಿನಿಮಾದಲ್ಲಿ ಸುದೀಪ್‌ಗೆ (Sudeep) ನಾಯಕಿ ನಟಿಸಿದ್ದ ವರಲಕ್ಷ್ಮಿ ಸದ್ಯ ಧನುಷ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಲುಕ್ ಕೂಡ ರಿವೀಲ್ ಆಗಿದ್ದು, ಹಳ್ಳಿ ಹುಡುಗಿಯ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ & ವೈಟ್ ಶೇಡ್‌ನಲ್ಲಿ ವರಲಕ್ಷ್ಮಿ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಧನುಷ್ ಅವರ ಮಹತ್ವಾಕಾಂಕ್ಷಿ ಈ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾಗೆ ಧನುಷ್ ಅವರೇ ನಿರ್ದೇಶಿಸಿ, ನಟಿಸುತ್ತಿದ್ದು, ಚಿತ್ರಕ್ಕೆ ‘ರಾಯನ್’ ಎಂದು ಹೆಸರಿಡಲಾಗಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ಇತ್ತೀಚೆಗೆ ರಿಲೀಸ್ ಮಾಡಿತ್ತು ಚಿತ್ರತಂಡ. ನಾನಾ ಕಾರಣಗಳಿಂದಾಗಿ ಫಸ್ಟ್ ಲುಕ್ ಕುತೂಹಲ ಮೂಡಿಸಿತ್ತು. ಇದನ್ನೂ ಓದಿ:100 ಕೋಟಿ ಕೊಟ್ರು ನಟಿಸಲ್ಲ ಎಂದು ಆ ಹೀರೋಗೆ ನಯನತಾರಾ ಹೇಳಿದ್ದೇಕೆ?

    2017ರಲ್ಲಿ ತೆರೆಕಂಡ ‘ಪಾ ಪಂಡಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಧನುಷ್. ಅದಾದ ನಂತರ ಇದೀಗ ತಮ್ಮ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿಕೊಂಡಿದ್ದಾರೆ. ಇದು ಧನುಷ್ ಅವರ 50ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಸನ್ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

    ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರಂತೆ ಧನುಷ್. ಶೂಟಿಂಗ್ ಪೂರ್ಣಗೊಳಿಸಿಯೇ ಅವರು ಡಿ.51ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ಈಗ ನಡೆಯುತ್ತಿದೆ.

  • 8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾದ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಕಿಚ್ಚನ ಅಡ್ಡಾದಿಂದ ಹೊಸ ಸುದ್ದಿಯೊಂದು ಸಿಕ್ಕಿದೆ. 8 ವರ್ಷಗಳ ನಂತರ ಮ್ಯಾಕ್ಸ್ ಸುದೀಪ್‌ಗಾಗಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalakshmi Sarath Kumar) ಸಾಥ್ ನೀಡಿದ್ದಾರೆ. ಮಾಣಿಕ್ಯನಿಗೆ ನಟಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ವಿಜಯ್ ಕಾರ್ತಿಕೇಯನ್ (Vijay Karthikeyan) ನಿರ್ದೇಶನದ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿಂದೆ ಮಾಣಿಕ್ಯ (Maanikya) ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಮೋಡಿ ಮಾಡಿದ್ದ ಚೆಲುವೆ ವರಲಕ್ಷ್ಮಿ ಶರತ್‌ಕುಮಾರ್ ಈಗ ‘ಮ್ಯಾಕ್ಸ್’ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗುತ್ತಿದೆ.

    ಸದ್ಯಕ್ಕಂತೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಲ್ಲದೇ, ವರಲಕ್ಷ್ಮಿ ಸೇರ್ಪಡೆ ಬಗ್ಗೆಯೂ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ವರಲಕ್ಷ್ಮಿ ಶರತ್‌ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರಂತೆ. ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ.

    ಇತ್ತೀಚಿಗೆ ರಿಲೀಸ್ ಆಗಿದ್ದ ಮ್ಯಾಕ್ಸ್ (Max Film) ಸಿನಿಮಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ಬಿಗ್ ಬಾಸ್ ಶೋಗೂ (Bigg Boss Kannada) ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಸಿನಿಮಾ ನಾಯಕಿ ವರಲಕ್ಷ್ಮಿ ಶರತ್‌ಕುಮಾರ್‌ಗೆ ಕೋವಿಡ್ ಪಾಸಿಟಿವ್

    ಸುದೀಪ್ ಸಿನಿಮಾ ನಾಯಕಿ ವರಲಕ್ಷ್ಮಿ ಶರತ್‌ಕುಮಾರ್‌ಗೆ ಕೋವಿಡ್ ಪಾಸಿಟಿವ್

    ಸ್ಯಾಂಡಲ್‌ವುಡ್‌ನ `ಮಾಣಿಕ್ಯ’ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿಸಿಪ್ರೇಕ್ಷಕರಿಗೆ ಪರಿಚಿತರಾದ ವರಲಕ್ಷ್ಮಿ ಶರತ್‌ಕುಮಾರ್‌ಗೆ ಕೋವಿಡ್ ದೃಢಪಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ದೃಢಪಟ್ಟಿರೋದರ ಬಗ್ಗೆ ನಟಿ ತಿಳಿಸಿದ್ದಾರೆ.

    ಬಹುಭಾಷಾ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವರಲಕ್ಷ್ಮಿ ಈ ಹಿಂದೆ ಮಾಣಿಕ್ಯ ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದರು. ಸದ್ಯ ದಕ್ಷಿಣ ಭಾರತದ ನಟಿಯಾಗಿ ಮುಂಚೂಣಿಯಲ್ಲಿದ್ದಾರೆ. ಈಗ ಕೋವಿಡ್‌ನಿಂದ ನಟಿ ವರಲಕ್ಷ್ಮಿ ಬಳಲುತ್ತಿದ್ದಾರೆ. ತಮಗೆ ಕೋವಿಡ್ ತಗಲಿರುವುದರ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:ಸಂಚಾರಿ ವಿಜಯ್ ಹೆಸರಿನಲ್ಲಿ ರಕ್ತದಾನ ಮಾಡಿದ ಸ್ನೇಹಿತರು

    ಇನ್ನು ಕೋವಿಡ್‌ಗೆ ಸಂಬಂಧಿಸಿದಂತೆ ನಟಿ ಕೂಡ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ನಟಿ ಅಭಿಮಾನಿಗಳಿಗೆ ಕೋವಿಡ್‌ ಇದೆ, ಮಾಸ್ಕ್ ಧರಿಸಿ, ಕೋವಿಡ್ ಲಕ್ಷಣಗಳಿದ್ದರೆ ವೈದ್ಯರನ್ನ ಕೂಡಲೇ ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ. ನನ್ನನ್ನು ಇತ್ತೀಚೆಗೆ ಭೇಟಿಯಾದವರು ಕೂಡ ವೈದ್ಯರನ್ನು ಸಂಪರ್ಕಿಸಿ ಎಂದು ಈ ವೇಳೆ ತಿಳಿಸಿದ್ದಾರೆ. ಕೋವಿಡ್ ಕುರಿತು ಎಚ್ಚರಿಕೆ ವಹಿಸಿ ಎಂದು ನಟಿ ವರಲಕ್ಷ್ಮಿ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]