Tag: vanshika anjani kashyapa

  • BREAKING: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಕ್ಕೆ ವನ್ಷಿಕಾ ನಿರೂಪಕಿ

    BREAKING: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಕ್ಕೆ ವನ್ಷಿಕಾ ನಿರೂಪಕಿ

    ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಮತ್ತು ‘ಗಿಚ್ಚಿ ಗಿಲಿ ಗಿಲಿ’ (Gichi Gili Gili) ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ವನ್ಷಿಕಾ ಅಂಜನಿ ಕಶ್ಯಪ ಮತ್ತೆ ಸುದ್ದಿಯಲ್ಲಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಮತ್ತೆ ತೆರೆಯ ಮೇಲೆ ಮಿಂಚಲು ವನ್ಷಿಕಾ ರೆಡಿಯಾಗಿದ್ದಾರೆ.

    ‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಅಭಿಮಾನಿಗಳ ಮುಂದೆ ನಿರೂಪಕಿಯಾಗಿ ಬರಲು ರೆಡಿಯಾಗಿದ್ದಾರೆ. ಹೌದು.. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ಪುಟಾಣಿ ಪ್ರತಿಭೆ ವನ್ಷಿಕಾ (Vanshika anjani kashyapa) ನಿರೂಪಣೆಯ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ: `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ವಿದ್ಯಾಭ್ಯಾಸದ ಜೊತೆ ನಟನೆಯನ್ನು ಸರಿದೂಗಿಸಿಕೊಂಡು ಹೋಗಿರುವ ಬಾಲ ಪ್ರತಿಭೆ ವನ್ಷಿಕಾ, ನಿರೂಪಣೆಯ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಲು ತಯಾರಿ ನಡೆಸುತ್ತಿದ್ದಾರೆ.

    ಇನ್ನೂ ಟಿವಿ ಶೋಗಳ ಮೂಲಕ ರಂಜಿಸಿದ್ದ ವನ್ಷಿಕಾ ಇದೀಗ ‘love.. ಲಿ’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ವಶಿಷ್ಠ ಸಿಂಹ (Vasishta N. Simha) ಮಗಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]