Tag: vanity van

  • ಯಾವ ಫೈವ್‌ಸ್ಟಾರ್ ಹೋಟೆಲ್‌ಗೂ ಕಮ್ಮಿಯಿಲ್ಲ ಶಿಲ್ಪಾ ಶೆಟ್ಟಿಯ ವ್ಯಾನಿಟಿ ವ್ಯಾನ್

    ಯಾವ ಫೈವ್‌ಸ್ಟಾರ್ ಹೋಟೆಲ್‌ಗೂ ಕಮ್ಮಿಯಿಲ್ಲ ಶಿಲ್ಪಾ ಶೆಟ್ಟಿಯ ವ್ಯಾನಿಟಿ ವ್ಯಾನ್

    ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಸಿನಿಮಾಗಳ ಜತೆ ರಿಯಾಲಿಟಿ ಶೋ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಟೌನ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಛಾಪೂ ಮೂಡಿಸಿರುವ ಶಿಲ್ಪಾ ಶೆಟ್ಟಿ ಈಗ ತಮ್ಮ ದುಬಾರಿ ವ್ಯಾನಿಟಿ ವ್ಯಾನ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಯಾವ ಫೈವ್‌ಸ್ಟಾರ್ ಹೋಟೆಲ್ ರೂಮಿಗೂ ಕಮ್ಮಿಯಿಲ್ಲ ಶಿಲ್ಪಾ ಶೆಟ್ಟಿ ಅವರ ವ್ಯಾನಿಟಿ ವ್ಯಾನ್, ಸದ್ಯ ವ್ಯಾನ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಐಷರಾಮಿ ವ್ಯಾನಿಟಿ ವ್ಯಾನ್ ಸಹಜವಾಗಿ ಸೂಪರ್ ಸ್ಟಾರ್‌ಗಳು ಉಪಯೋಗ ಮಾಡುತ್ತಾರೆ. ಆದರೆ ಈ ಸಾಲಿಗೆ ಈಗ ಶಿಲ್ಪಾ ಶೆಟ್ಟಿ ಸೇರಿಕೊಂಡಿದ್ದಾರೆ. ಕಳೆದ ತಿಂಗಳು ಜೂನ್ 8ಕ್ಕೆ ಶಿಲ್ಪಾ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು. ಈ ವೇಳೆಗೆ ಮನೆಗೆ ಹೊಸ ಅತಿಥಿಯನ್ನು ಕೂಡ ಬರಮಾಡಿಕೊಂಡಿದ್ದರು. ಪತ್ನಿಯ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ವ್ಯಾನಿಟಿ ವ್ಯಾನ್ ಅನ್ನೇ ಗಿಫ್ಟ್ ಮಾಡಿದ್ದರು. ಈಗ ಈ ವ್ಯಾನಿಟಿ ವ್ಯಾನ್‌ನಲ್ಲಿರುವ ಸವಲತ್ತು ಹೇಗಿದೆ ಎಂಬ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಶಿಲ್ಪಾ ಶೆಟ್ಟಿ ಖರೀದಿ ಮಾಡಿರುವ ವ್ಯಾನಿಟಿ ವ್ಯಾನ್ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಈ ಒಂದು ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ವಿಡಿಯೋ ಶಿಲ್ಪ ಶೆಟ್ಟಿ ವ್ಯಾನಿಟಿ ವ್ಯಾನ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ತೋರಿಸಿದೆ. ಅಡುಗು ಮನೆ, ಹೇರ್ ವಾಶ್ ಸ್ಟೇಷನ್, ಮೀಟಿಂಗ್ ರೂಮ್, ಬೆಡ್ ರೂಮ್, ಪ್ರೈವೇಟ್ ಚೇಂಬರ್, ಮಿನಿವಾಶ್ ರೂಮ್ ಸೇರಿದಂತೆ ಹಲವು ಸವಲತ್ತುಗಳು ಈ ವ್ಯಾನಿಟಿ ವ್ಯಾನ್‌ನಲ್ಲಿದೆ.‌ ಇದನ್ನೂ ಓದಿ:ಜಗ್ಗೇಶ್ ನಟನೆಯ `ರಾಘವೇಂದ್ರ ಸ್ಟೋರ್ಸ್‌ʼ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ

    ಶಿಲ್ಪಾ ಶೆಟ್ಟಿ ಮೊದಲ ಆಧ್ಯತೆ ಫಿಟ್ನೆಸ್ ಹಾಗೂ ಯೋಗ. ಇವೆರಡೂ ಶಿಲ್ಪ ಶೆಟ್ಟಿ ಹೆಸರಿನ ಜೊತೆ ಸೇರಿಕೊಂಡಿರುತ್ತೆ. ಶಿಲ್ಪ ಶೆಟ್ಟಿಗೆ ಫಿಟ್ನೆಸ್ ಅನ್ನುವುದು ತುಂಬಾನೇ ಮುಖ್ಯ. ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಯೋಗವನ್ನು ಮಾಡಬಹುದಾಗಿದೆ. ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಈ ವ್ಯಾನಿಟಿ ವ್ಯಾನ್ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]