Tag: Vanitha Vijaykumar

  • 4ನೇ ಬಾರಿ ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಖ್ಯಾತಿಯ ವನಿತಾ ವಿಜಯ್‌ಕುಮಾರ್

    4ನೇ ಬಾರಿ ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಖ್ಯಾತಿಯ ವನಿತಾ ವಿಜಯ್‌ಕುಮಾರ್

    ‘ಬಿಗ್ ಬಾಸ್’ (Bigg Boss) ಖ್ಯಾತಿಯ ವನಿತಾ ವಿಜಯ್‌ಕುಮಾರ್ ಸಿನಿಮಾಗಿಂತ ವೈಯಕ್ತಿಕ ಜೀವನದ ವಿಷ್ಯವಾಗಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ 3 ಬಾರಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ನಟಿ 4ನೇ ಬಾರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ತಮಿಳು ನಟಿ ವನಿತಾ ವಿಜಯ್‌ಕುಮಾರ್ ಅವರದ್ದು ಕಲಾವಿದರ ಕುಟುಂಬ. ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರೋದಕ್ಕಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಜಾಸ್ತಿ. ಮತ್ತೆ ಈಗ 4ನೇ ಬಾರಿ ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ವರ ಯಾರು? ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

    ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಮದುವೆ ಬಗ್ಗೆ ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ‘ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ’ ಎಂದು ವನಿತಾ ಉತ್ತರಿಸಿದ್ದಾರೆ. ಇದು ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಹಾಗಾದ್ರೆ ನಟಿ ಸದ್ಯದಲ್ಲೇ ಗುಡ್ ನ್ಯೂಸ್ ಕೊಡುತ್ತಾರಾ? ಕಾಯಬೇಕಿದೆ.


    ಅಂದಹಾಗೆ, ವನಿತಾ ಅವರು 2000ರಲ್ಲಿ ಆಕಾಶ್ ಎಂಬುವವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟರು. ಆದರೆ 2005ರಲ್ಲಿ ಡಿವೋರ್ಸ್ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ 2007ರಲ್ಲಿ ಉದ್ಯಮಿ ರಂಜನ್ ಆನಂದ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ 2012ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ ಜೊತೆಗಿನ ಮದುವೆ ಕೂಡ ಮುರಿದುಬಿತ್ತು.

  • ಸಿಂಗಲ್ ಆಗಿದ್ದೇನೆ, ಲಭ್ಯವಿದ್ದೇನೆ- ನಾಲ್ಕನೇ ವಿವಾಹದ ಬಗ್ಗೆ ಮೌನ ಮುರಿದ ಬಿಗ್ ಬಾಸ್ ಸ್ಪರ್ಧಿ ವನಿತಾ

    ಸಿಂಗಲ್ ಆಗಿದ್ದೇನೆ, ಲಭ್ಯವಿದ್ದೇನೆ- ನಾಲ್ಕನೇ ವಿವಾಹದ ಬಗ್ಗೆ ಮೌನ ಮುರಿದ ಬಿಗ್ ಬಾಸ್ ಸ್ಪರ್ಧಿ ವನಿತಾ

    ಚೆನ್ನೈ: ತಮಿಳು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‍ಕುಮಾರ್ ಸದಾ ಗಾಸಿಪ್‍ನಲ್ಲಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇವರ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಚರ್ಚೆಯಾಗುವುದು ತಿಳಿದೇ ಇದೆ. ಅದೇ ರೀತಿ ಇದೀಗ ಅವರ ನಾಲ್ಕನೇ ವಿವಾಹದ ವಿಚಾರ ಸದ್ದು ಮಾಡುತ್ತಿದ್ದು, ಈ ಕುರಿತು ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನಟಿ ವನಿತಾ, ನಾನು ಸಿಂಗಲ್ ಹಾಗೂ ಲಭ್ಯವಿದ್ದೇನೆ. ಆದರೆ ವದಂತಿ ಹಬ್ಬಿಸಬೇಡಿ ಹಾಗೂ ನಂಬಬೇಡಿ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಲಾಕ್‍ಡೌನ್ ವೇಳೆ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ವಿವಾಹವಾಗಿದ್ದ ವನಿತಾ ಕೆಲವೇ ತಿಂಗಳ ಬಳಿಕ ಪತಿಯಿಂದ ದೂರ ಆಗಿದ್ದಾರೆ. ಇದಾದ ಬಳಿಕ ಮತ್ತೊಂದು ವಿವಾಹವಾಗಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು.

    ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ವನಿತಾ, ಕಳೆದ ವರ್ಷ ಲಾಕ್‍ಡೌನ್ ನಲ್ಲಿ ಪೀಟರ್ ಪೌಲ್ ಜೊತೆ ಸರಳವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಪತಿ ಪೀಟರ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ವನಿತಾ ಪತಿ ಪೀಟರ್ ಮೋಸ ಮಾಡಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದರು. ಈ ಮೂಲಕ 3ನೇ ವಿವಾಹವನ್ನು ಸಹ ಕಡೆದುಕೊಂಡಿರುವ ಬಗ್ಗೆ ಸ್ಪಷ್ಟಪಡಿಸಿದ್ದರು.

    ಪೀಟರ್‍ನನ್ನು ತುಂಬಾ ಪ್ರೀತಿಸುತ್ತಿದ್ದೆ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದೆ. ಆದರೆ ಆತನಿಗೆ ಕುಡಿತದ ಚಟ ಇರುವುದು ತಿಳಿದಿರಲಿಲ್ಲ. ನನ್ನ ಮಕ್ಕಳಿಗೆ ತಂದೆಯನ್ನು ಬಯಸಿ, ವಿವಾಹವಾಗಿದ್ದೆ. ಆದರೆ ಪೀಟರ್ ಮೋಸ ಮಾಡಿದ ಎಂದು ಹೇಳಿದ್ದರು. ಇದಾದ ಬಳಿಕ ನಟಿ ವನಿತಾ ವಿಜಯ್‍ಕುಮಾರ್ ಅವರು 4ನೇ ವಿವಾಹವಾಗಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ವನಿತಾ ಅವರು ಸ್ಪಷ್ಟನೆ ನೀಡಿ, ಸಿಂಗಲ್ ಆಗಿರುವುದಾಗಿ ತಿಳಿಸಿದ್ದಾರೆ.

  • 3ನೇ ಪತಿಯನ್ನ ಮನೆಯಿಂದ ಹೊರ ಹಾಕಿದ ಬಿಗ್‍ಬಾಸ್ ಸ್ಪರ್ಧಿ

    3ನೇ ಪತಿಯನ್ನ ಮನೆಯಿಂದ ಹೊರ ಹಾಕಿದ ಬಿಗ್‍ಬಾಸ್ ಸ್ಪರ್ಧಿ

    – ಲಾಕ್‍ಡೌನ್‍ನಲ್ಲಿ ಮೂರನೇ ಮದ್ವೆಯಾಗಿದ್ದ ನಟಿ

    ಚೆನ್ನೈ: ಲಾಕ್‍ಡೌನ್ ವೇಳೆ ಸರಳವಾಗಿ ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆಯಾಗಿದ್ದ ಬಿಗ್‍ಬಾಸ್ ಸ್ಪರ್ಧಿ, ನಟಿ, ವನಿತಾ ವಿಜಯಕುಮಾರ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ.

    ಮೂರನೇ ಪತಿ ಪೀಟರ್ ಪೌಲ್ ಸದ್ಯ ಮನೆಯಲ್ಲಿಲ್ಲ ಎಂಬುದನ್ನ ಸ್ವತಃ ವನಿತಾ ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ತಮ್ಮ ಫೇಸ್‍ಬುಕ್ ನಲ್ಲಿ ವನಿತಾ ಪತಿಯನ್ನ ಹೊರ ಹಾಕಿರುವ ಬಗ್ಗೆ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ನಟಿ ಎಲ್ಲ ಊಹಾಪೋಹಗಳಿಗೆ ಗೊಂದಲಮಯವಾಗಿ ಸ್ಪಷ್ಟನೆ ನೀಡಿದ್ದಾರೆ.

    ಮದುವೆ ಆದಾಗ ಪತಿ ಪೀಟರ್ ಓರ್ವ ಕುಡಿತದ ದಾಸ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಸಂಸಾರ ಚೆನ್ನಾಗಿತ್ತು, ಆದ್ರೆ ಪೀಟರ್ ಮದ್ಯ ಸೇವನೆ ಮಾತ್ರ ಬಿಡಲಿಲ್ಲ. ಕುಡಿತ ದಾಸನಾಗಿದ್ದರೂ ನಾನು ಎಲ್ಲವನ್ನ ತಾಳ್ಮೆಯಿಂದ ಫೇಸ್ ಮಾಡಿದ್ದೇನೆ. ಸಮಾಜದಲ್ಲಿ ಮಕ್ಕಳ ಆರೈಕೆಗೆ ಒರ್ವ ಪುರುಷನ ಅವಶ್ಯಕತೆ ಹಿನ್ನೆಲೆ ಮೂರನೇ ಮದುವೆಯಾಗಿದ್ದೇನೆ ಎಂದು ವನಿತಾ ಹೇಳಿಕೊಂಡಿದ್ದಾರೆ.

    ನಿರಂತರ ಮದ್ಯ ಸೇವನೆಯಿಂದಾಗಿ ಪೀಟರ್ ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಒಳ್ಳೆಯ ಚಿಕಿತ್ಸೆ ನೀಡಿದ್ದರಿಂದ ಪೀಟರ್ ಗುಣಮುಖನಾಗಿ ಮನೆಗೆ ಬಂದ. ಆದ್ರೆ ಪೀಟರ್ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಚಟದಿಂದ ಹೊರ ಬರಲೇ ಇಲ್ಲ. ಒಮ್ಮೆ ರಕ್ತ ವಾಂತಿ ಮಾಡಿಕೊಂಡಾಗಿ ಒಂದು ಐಸಿಯುನಲ್ಲಿರಿಸಿ ಚಿಕಿತ್ಸೆ ಸಹ ನೀಡಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಪೀಟರ್ ಮದ್ಯಕ್ಕಾಗಿ ಜನರ ಬಳಿ ಹಣ ಕೇಳಲಾರಂಭಿಸಿದ. ಸಿನಿಮಾದ ಕೆಲ ಸಹದ್ಯೋಗಿಗಳು ಫೋನ್ ಮಾಡಿ ಏನಾಗ್ತಿದೆ ಎಂದು ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಒತ್ತಡ ಮತ್ತು ಆರೋಪಗಳನ್ನ ಹ್ಯಾಂಡಲ್ ಮಾಡಲು ಪೀಟರ್ ನಿಂದ ಸಾಧ್ಯವಾಗಲಿಲ್ಲ.

    ಒಂದು ದಿನ ಗೋವಾ ಪ್ರವಾಸಕ್ಕೆ ತೆರಳಿದಾಗ ಪೀಟರ್ ಸೋದರನ ಸಾವಿನ ಸುದ್ದಿ ಬಂತು. ಪ್ರವಾಸದಲ್ಲಿದ್ದಾಗ ಪೀಟರ್ ತುಂಬು ದುಃಖದಲ್ಲಿದ್ದರು. ಮನೆಯ ಬಗ್ಗೆ ಹೆಚ್ಚು ನೆನಪು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ನನ್ನಿಂದ ಹಣ ಪಡೆದು ಹೋದ ಪೀಟರ್ ನನ್ನನ್ನು ಇದುವರೆಗೆ ನನ್ನ ಸಂಪರ್ಕಿಸಿಲ್ಲ ಎಂದು ಮಾತ್ರ ಹೇಳಿದ್ದಾರೆ.

    ನಟಿ ವನಿತಾ ವಿಜಯಕುಮಾರ್ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದರು. ಜೂನ್ 27ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದರು. ಚೆನ್ನೈನಲ್ಲಿ ಇವರ ವಿವಾಹ ಸಮಾರಂಭ ನಡೆದಿದೆ. ಮದುವೆಯಲ್ಲಿ ಕುಟುಂಬದವರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದು, ಜೋಡಿಗೆ ಶುಭಾಶಯ ಕೋರಿದ್ದಾರೆ. ನಟಿ ವನಿತಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ಮೂರನೇ ಮದುವೆಯಾಗಿತ್ತು.

    ನಟಿ ವನಿತಾ 2000 ರಲ್ಲಿ ಕಿರುತೆರೆ ನಟ ಆಕಾಶ್ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಮಗ ವಿಜಯ್ ಶ್ರೀ ಹರಿ ಹಾಗೂ ಮಗಳು ಜೋವಿಕಾ ಮಕ್ಕಳಿದ್ದರು. ಆದರೆ 2007ರಲ್ಲಿ ವನಿತಾ ವಿಚ್ಛೇದನ ಪಡೆದುಕೊಂಡಿದ್ದರು. ಅದೇ ವರ್ಷ ಉದ್ಯಮಿ ಆನಂದ್ ಜಯರಾಜನ್ ಜೊತೆ ಎರಡನೇ ವಿವಾಹವಾಗಿದ್ದರು. ಅವರಿಗೆ ಜಯನಿತಾ ಜನಿಸಿದ್ದರು. 2012ರಲ್ಲಿ ಅವರಿಂದಲೂ ದೂರವಾಗಿದ್ದರು. ಇನ್ನೂ 2013-2017 ರವರೆಗೆ ನಿರ್ದೇಶಕ ರಾಬರ್ಟ್ ಜೊತೆಗೆ ವನಿತಾ ಲಿವ್‍ಇನ್ ರಿಲೇಷನ್‍ಶಿಪ್‍ನಲ್ಲಿದ್ದರು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈಗ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದಾರೆ.

    https://www.instagram.com/p/CB72v_TiGW-/?utm_source=ig_embed

    “ಪೀಟರ್ ಭೇಟಿ ಮಾಡಿದಾಗ ಪ್ರೀತಿಯಲ್ಲಿ ಬಿದ್ದೆ. ಮದುವೆಯಲ್ಲಿ ನನ್ನ ಕೈ ನೀಡುವಂತೆ ಪೀಟರ್ ಕೇಳಿದರು. ಆಗ ನಾನು ಏನು ಉತ್ತರ ಕೊಡದೆ ಮೂಕವಿಸ್ಮಿತಳಾದೆ. ಈ ವೇಳೆ ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ. ನಂತರ ನನ್ನ ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು” ಎಂದು ವನಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ವನಿತಾ ಕಾಲಿವುಡ್‍ನ ಹಿರಿಯ ನಟ ವಿಜಯ್ ಕುಮಾರ್ ಪುತ್ರಿಯಾಗಿದ್ದು, ತಮಿಳು ಮತ್ತು ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. `ಚಂದ್ರಲೇಖಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಹೆಚ್ಚಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮಿಳಿನ ಬಿಗ್‍ಬಾಸ್ ರಿಯಾಲಿಟಿ ಶೋಗೂ ಹೊಗಿದ್ದರು.