Tag: Vani vilas Hospital

  • ಬೆಂಗಳೂರಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ

    ಬೆಂಗಳೂರಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ

    ಬೆಂಗಳೂರು: ನಗರದ (Bengaluru)  ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದ 9 ತಿಂಗಳ ಮಗುವಿನಲ್ಲಿ ಕೋವಿಡ್ (Covid 19) ಸೋಂಕು ಪತ್ತೆಯಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಮಗುವನ್ನು ವಾಣಿ ವಿಲಾಸ (Vani Vilas Hospital) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮಗುವಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢವಾಗಿದೆ. ಇದನ್ನೂ ಓದಿ: ಕೋವಿಡ್‌ ಏರಿಕೆ – ಮಾಸ್ಕ್‌ ಕಡ್ಡಾಯಗೊಳಿಸಿದ ಆಂಧ್ರ

    ಮಗುವಿನಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಕೋವಿಡ್ ಮಾನಿಟರ್ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಈ ಬಗ್ಗೆ ಕೇಂದ್ರದಿಂದ ಯಾವುದೇ ಗೈಡ್ ಲೈನ್ಸ್ ಬಂದಿಲ್ಲ. ಜನ ಆತಂಕಪಡುವ ಅಗತ್ಯ ಇಲ್ಲ ಎಂದು ಸಚಿವರು ಹೇಳಿದ್ದಾರೆ.

    ದೇಶಾದ್ಯಂತ 257 ಸಕ್ರಿಯ ಪ್ರರಕಣಗಳಿದ್ದು, ನೆರೆ ರಾಜ್ಯ ಕೇರಳ ಒಂದರಲ್ಲೆ 186 ಕೇಸ್ ಇದ್ದು, 95 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು, 16 ಸಕ್ರಿಯ ಪ್ರಕರಣಗಳಿವೆ. ಆಂದ್ರಪ್ರದೇಶದಲ್ಲಿ ಗುರುವಾರ 19 ಪಾಸಿಟಿವ್ ಕೇಸ್ ದಾಖಲಾಗಿದ್ದು, ಗುಜರಾತ್‍ನಲ್ಲಿ 15 ಕೇಸ್ ದಾಖಲಾಗಿವೆ.

    ಆಂಧ್ರಪ್ರದೇಶ ಮಾಸ್ಕ್ ಕಡ್ಡಾಯಗೊಳಿಸಿದೆ. ಜನರ ಗುಂಪು, ಸಭೆ ಸಮಾರಂಭಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ ನೀಡಲಾಗಿದ್ದು, ರೋಗ ಲಕ್ಷಣ ಇದ್ದರೆ ಟೆಸ್ಟ್ ಮಾಡಿಸಲು ಸಲಹೆ ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

  • ಕೊರೊನಾ ರಿಪೋರ್ಟ್‍ಗಾಗಿ ಗರ್ಭಿಣಿ ನಿತ್ಯ 60 ಕಿಮೀ ಅಲೆದಾಟ

    ಕೊರೊನಾ ರಿಪೋರ್ಟ್‍ಗಾಗಿ ಗರ್ಭಿಣಿ ನಿತ್ಯ 60 ಕಿಮೀ ಅಲೆದಾಟ

    ಬೆಂಗಳೂರು: ಕೊರೊನಾ ಟೆಸ್ಟ್ ವರದಿಗಾಗಿ ಗರ್ಭಿಣಿ ನಿತ್ಯವೂ 60 ಕಿಮೀ ದೂರ ಅಲೆದಾಡುತ್ತಿದ್ದಾರೆ.

    ಹೊಸಕೋಟೆ ನಿವಾಸಿಯಾಗಿರುವ ತುಂಬು ಗರ್ಭಿಣಿ ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನೀಡಿದ್ದರು. ನಗರದ ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಇಂದು ಗರ್ಭಿಣಿ ಹೆರಿಗೆಗೆ ಸಮಯದ ನೀಡಿದ್ದಾರೆ. ಆದರೆ ಕೋವಿಡ್ ವರದಿ ಇಲ್ಲದೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲುವುದಿಲ್ಲ ಎಂದಿದ್ದಾರೆ. ಪರಿಣಾಮ ಕಳೆದ 2 ದಿನಗಳಿಂದ ಗರ್ಭಿಣಿ ಪತಿಯೊಂದಿಗೆ ನಿತ್ಯ 60 ಕಿಮೀ ದೂರ ಪ್ರಯಾಣಿಸುತ್ತಿದ್ದಾರೆ.

    ಗರ್ಭಿಣಿ ಮಹಿಳೆಯರಿಗೆ ಹೆರಿಗೆಗೂ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಇಂತಹವರ ವರದಿಯನ್ನು ಆಸ್ಪತ್ರೆಗಳು ಶೀಘ್ರವೇ ನೀಡಬೇಕು ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ. ಆದರೆ ಆಸ್ಪತ್ರೆಯವರು ಮಾತ್ರ ಕೋವಿಡ್ ರಿಪೋರ್ಟ್ ನೀಡಲು ಅಲೆದಾಟ ನಡೆಸುತ್ತಿದ್ದಾರೆ. ಕಳೆದ ವಾರವೂ ಗರ್ಭಿಣಿ ಮಹಿಳೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಆ ವರದಿಯನ್ನು 1 ವಾರದ ಬಳಿಕ ಆಸ್ಪತ್ರೆ ನೀಡಿತ್ತು. ಆದರೆ ಕೋವಿಡ್ ಟೆಸ್ಟ್ ಪರೀಕ್ಷೆ ಮಾಡಿದ 2 ದಿನದಲ್ಲಿ ನೀಡಿದರೆ ಮಾತ್ರ ಹೆರಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಾಗಿ ವೈದ್ಯರು ಹೇಳಿದ್ದಾರೆ. ಪರಿಣಾಮ ಮಹಿಳೆ ಬುಧವಾರ ಮತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿದ್ದರು.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹಿಳೆ, ಹೊಸಕೋಟೆಯಿಂದ ಬಂದಿದ್ದೇವೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಇಂದು ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಸಮಯ ನೀಡಿದ್ದಾರೆ. ಆದರೆ ನಾವು 4ನೇ ಬಾರಿ ಆಸ್ಪತ್ರೆ ಬಳಿ ಆಗಮಿಸಿದ್ದೇವೆ. ಆದರೆ ರಿಪೋರ್ಟ್ ನೀಡಿ ಎಂದರೇ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ. ಲ್ಯಾಬ್ ಬಳಿ ಹೋಗಿ ಕೇಳಿದರು ಯಾರು ಉತ್ತರಿಸುತ್ತಿಲ್ಲ. ಇಂದು ವರದಿ ತಂದು ಆಸ್ಪತ್ರೆ ಬಂದರೇ ಮಾತ್ರ ನಾವು ದಾಖಲಿಸಿಕೊಂಡು, ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಎಂದು ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

  • ಬೆಂಗ್ಳೂರಿನಲ್ಲಿ ಬರೋಬ್ಬರಿ 5.78 ಕೆಜಿ ತೂಕದ ಮಗು ಜನನ

    ಬೆಂಗ್ಳೂರಿನಲ್ಲಿ ಬರೋಬ್ಬರಿ 5.78 ಕೆಜಿ ತೂಕದ ಮಗು ಜನನ

    ಬೆಂಗಳೂರು: ಸಿಲಿಕಾನ್ ಸಿಟಿಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಮಗು ಡೆಲಿವರಿ ಆಗಿದೆ. ಈ ಮಗುವಿನ ತೂಕ ಭರ್ತಿ 5.78 ಕೆಜಿ ಇದ್ದು, ಬಲಭೀಮನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ವೈದ್ಯಲೋಕಕ್ಕೆ ಸವಾಲಾಗಿದ್ದ ಈ ಕಂದಮ್ಮ ಪಶ್ಚಿಮ ಬಂಗಾಳದ ಸರಸ್ವತಿ ಹಾಗೂ ಯೋಗೇಶ್ ದಂಪತಿ ಪುತ್ರ. ಜನವರಿ 18ರಂದು ಸಿಸೇರಿಯನ್ ಮಾಡಿ ವೈದ್ಯರು ಡೆಲಿವರಿ ಮಾಡಿದ್ದಾರೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಹುಟ್ಟಿದ ದಿನವೇ ಈ ಕಂದಮ್ಮ ಇತಿಹಾಸ ಸೃಷ್ಟಿಸಿದ್ದಾನೆ.

    ಈ ಮಗುವಿನ ತೂಕ ಎರಡು, ಮೂರು ತಿಂಗಳು ಇರುವ ಮಗುವಿಗೆ ಬರಬೇಕಾಗಿತ್ತು. ಆದರೆ ಈ ಮಗು ಮಾತ್ರ ಹುಟ್ಟುತ್ತಲೇ ಬರೋಬ್ಬರಿ 5.78 ಕೆಜಿ ತೂಕವಿದೆ. ತಾಯಿಗೆ ಡಯಾಬಿಟಿಸ್ ಇದ್ದಾಗ ಹೀಗಾಗುವ ಸಾಧ್ಯತೆ ಇರುತ್ತೆ. ಆದರೆ ಸರಸ್ವತಿಗೆ ಡಯಾಬಿಟಿಸ್ ಕೂಡ ಇಲ್ಲ. ದೈತ್ಯ ಮಗು ಹುಟ್ಟಿದಾಗ ಸಾಕಷ್ಟು ರಿಸ್ಕ್ ಹಾಗೂ ಆರೋಗ್ಯ ಸಮಸ್ಯೆ ಇರುತ್ತೆ. ಆದರೆ ವೈದ್ಯಲೋಕಕ್ಕೆ ಅಚ್ಚರಿ ಅನ್ನುವಂತೆ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖುಷಿಯಿಂದ ತಿಳಿಸಿದ್ದಾರೆ.

    ಹುಟ್ಟಿದ ತಕ್ಷಣ ಮಗು ಐಸಿಯುನಲ್ಲಿತ್ತು. ಸದ್ಯ ಮಗುವನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಿ ಈ ಬಲಭೀಮ ಹೆತ್ತವರ ಜೊತೆ ಊರು ಸೇರಲಿದ್ದಾನೆ ಎಂದು ವೈದ್ಯ ಅಧೀಕ್ಷಕಿ ಗೀತಾ ಶಿವಮೂರ್ತಿ ಖುಷಿ ವ್ಯಕ್ತಪಡಿಸಿದ್ದಾರೆ.