Tag: Vande Bharat Trains

  • ತುಂಬದ ವಂದೇ ಭಾರತ್ ರೈಲು, 50%ಗೂ ಅಧಿಕ ಖಾಲಿ – ದತ್ತಾಂಶದೊಂದಿಗೆ ಆರೋಪಿಸಿದ ಕಾಂಗ್ರೆಸ್‌

    ತುಂಬದ ವಂದೇ ಭಾರತ್ ರೈಲು, 50%ಗೂ ಅಧಿಕ ಖಾಲಿ – ದತ್ತಾಂಶದೊಂದಿಗೆ ಆರೋಪಿಸಿದ ಕಾಂಗ್ರೆಸ್‌

    ನವದೆಹಲಿ: ಅತ್ಯಧಿಕ ಪ್ರಯಾಣ ದರ ಹಿನ್ನೆಲೆ ಭಾರತದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳು (Vande Bharat Trains) 50% ಗೂ ಕಡಿಮೆ ಪ್ರಯಾಣಿಕರನ್ನು ಹೊಂದಿವೆ ಎಂದು ಕೇರಳ ಕಾಂಗ್ರೆಸ್ (Kerala Congress) ಘಟಕ ಆರೋಪಿಸಿದೆ. IRCTC ಬುಕ್ಕಿಂಗ್ ದತ್ತಾಂಶ ಉಲ್ಲೇಖಿಸಿದ್ದು, ವಂದೇ ಭಾರತ್ ರೈಲುಗಳು 50% ಖಾಲಿ ಅಥವಾ ಭಾಗಶಃ ಖಾಲಿ ಸೀಟುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.

    ರೈಲು ಹೊರಡುವ ಕೆಲವೇ ಗಂಟೆಗಳ ಮೊದಲು IRCTC ಯಿಂದ ಪಡೆದ ಈ ಡೇಟಾವು ತತ್ಕಾಲ್ ಬುಕಿಂಗ್ ಅನ್ನು ಹೊರತುಪಡಿಸಿ ಕೇವಲ ಸಾಮಾನ್ಯ ವರ್ಗದ ಮೇಲೆ ಕೇಂದ್ರೀಕರಿಸುತ್ತದೆ. ರಜೆಯ ಋತುವಿನಲ್ಲಿ ದೇಶಾದ್ಯಂತ ಜನರ ಹೆಚ್ಚಿನ ಪ್ರಯಾಣದ ಹೊರತಾಗಿಯೂ, ವಂದೇ ಭಾರತ್‌ಗಾಗಿ ಬುಕ್ಕಿಂಗ್‌ಗಳು ಆಶ್ಚರ್ಯಕರವಾಗಿ ಕಡಿಮೆಯಾಗಿವೆ ಎಂದು ಅದು ಹೇಳಿದೆ. ಇದನ್ನೂ ಓದಿ: ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ಈ ಡೇಟಾವು ಆರ್ಥಿಕ ಅಸಮಾನತೆಗಳಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಶ್ರೀಮಂತ ಪ್ರದೇಶಗಳು ವಂದೇ ಭಾರತ ಪ್ರಯಾಣದ ಹೆಚ್ಚಿನ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳು ಈ ದುಬಾರಿ ಸೇವೆಗಳನ್ನು ಪಡೆಯಲು ಹೆಣಗಾಡುತ್ತವೆ. ಇತರ ರೈಲುಗಳಲ್ಲಿ ವೇಟಿಂಗ್ ಲಿಸ್ಟ್‌ಗಳನ್ನು ತೋರಿಸಿದರೆ ವಂದೇ ಭಾರತ್ ರೈಲುಗಳಲ್ಲಿ ಅನೇಕ ಸೀಟುಗಳು ಖಾಲಿ ಉಳಿದಿವೆ ಎಂದು ಕೇರಳ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

    ಮುಂಬೈ-ಸೋಲಾಪುರ ವಂದೇ ಭಾರತ್‌ನಲ್ಲಿ 277 ಸೀಟುಗಳು ಖಾಲಿ ಇವೆ. ಆದರೆ ಇದೇ ಮಾರ್ಗದ ಬಹುತೇಕ ಎಲ್ಲಾ ರೈಲುಗಳು ವೇಟಿಂಗ್ ಲಿಸ್ಟ್‌ನಲ್ಲಿವೆ. ಇದರರ್ಥ ರೈಲುಗಳಿಗೆ ಭಾರಿ ಬೇಡಿಕೆಯಿದೆ. ಆದರೆ ಇದು ದುಬಾರಿ ರೈಲಿಗಳಿಗೆ ಅಲ್ಲ. ವಂದೇ ಭಾರತ್ ರೈಲುಗಳ ಟಿಕೆಟ್ ದರವನ್ನು ಗರೀಬ್ ರಥಕ್ಕೆ ಹೋಲಿಸಿ ಗರೀಬ್ ರಥವು 770 ರೂ.ಗಳಲ್ಲಿ ಟಿಕೆಟ್‌ ದರ ಇದ್ದರೆ ಇದೇ ಪ್ರಯಾಣಕ್ಕೆ ವಂದೇ ಭಾರತ್‌ನ 1,720 ರೂ ನಿಗದಿಪಡಿಸಿದೆ. ಇದು ಸಾಮಾನ್ಯ ಪ್ರಯಾಣಿಕರಿಗೆ ನಿಷೇಧಿಸುತ್ತದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ದರ ವಂದೇ ಭಾರತ್‌ನ ನಿಜವಾದ ಸಮಸ್ಯೆಯಾಗಿದೆ. ನಮ್ಮ ಹೆಚ್ಚಿನ ಜನಸಂಖ್ಯೆಯು ದರ ನಿಭಾಯಿಸಲು ಸಾಧ್ಯವಾದಾಗ ಮಾತ್ರ ವಂದೇ ಭಾರತ್ ಲಾಭ ಜನರಿಗೆ ಆಗಲಿದೆ ಎಂದ ಕಾಂಗ್ರೆಸ್, ತುಂಬಿದ ಸಾಮಾನ್ಯ ರೈಲಿನ ವೀಡಿಯೋ ಪೋಸ್ಟ್ ಮಾಡಿ ಇದು ಸರ್ಕಾರದ ದುರಂತ. ಈ ದುಬಾರಿ ರೈಲುಗಳು ಖಾಲಿಯಾಗಿ ಓಡುವುದನ್ನು ನೀವು ನೋಡುತ್ತೀರಿ ಎಂದು ಟೀಕಿಸಿದೆ.

  • ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ ಸೇರಿ 10 ಮಾರ್ಗಗಳ ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಿಂದ ದೇಶದಾದ್ಯಂತ 10 ಹೈಸ್ಪೀಡ್ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್‌ ರೈಲಿಗೂ ಇದೇ ವೇಳೆ ಚಾಲನೆ ಸಿಕ್ಕಿತು.

    ರೈಲ್ವೇ ಮೂಲಸೌಕರ್ಯ, ಸಂಪರ್ಕ ಮತ್ತು ಪೆಟ್ರೋಕೆಮಿಕಲ್ಸ್ ವಲಯಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ ಅಹಮದಾಬಾದ್‌ನಲ್ಲಿರುವ ಡಿಎಫ್‌ಸಿಯ ಆಪರೇಷನ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. 1,06,000 ಕೋಟಿ ರೂ. ಮೌಲ್ಯದ ರೈಲ್ವೆ ಮತ್ತು ಪೆಟ್ರೋಕೆಮಿಕಲ್ಸ್ ಯೋಜನೆಗಳಿಗೆ ಚಾಲನೆ ಕೊಟ್ಟರು.

    ಅಹಮದಾಬಾದ್‌-ಮುಂಬೈ ಸೆಂಟ್ರಲ್‌, ಸಿಕಂದರಾಬಾದ್‌-ವಿಶಾಖಪಟ್ಟಣಂ, ಮೈಸೂರು-ಡಾ.ಎಂಜಿಆರ್‌ ಸೆಂಟ್ರಲ್‌ (ಚೆನ್ನೈ), ಪಾಟ್ನಾ-ಲಕ್ನೋ, ನ್ಯೂ ಜಲ್ಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಕ್ನೋ-ಡೆಹ್ರಾಡೂನ್‌, ಕಲಬುರಗಿ-ಸರ್‌. ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು, ರಾಂಚಿ-ವಾರಣಾಸಿ, ಖಜುರಾಹೊ-ದೆಹಲಿ ನಡುವಿನ 10 ಹೊಸ ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ.

    ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ವಾರದ 6 ದಿನಗಳಲ್ಲಿ ಸಂಚರಿಸಲಿದೆ. ಈ‌ ಮೂಲಕ ಕಲಬುರಗಿ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.

  • ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ

    ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ

    – ಒಟ್ಟು 6 ವಂದೇ ಭಾರತ್‌ ಎಕ್ಸ್‌ಪ್ರೆಸ್‌, 2 ಅಮೃತ್‌ ಭಾರತ್‌ ರೈಲುಗಳಿಗೆ ಚಾಲನೆ
    – ಕರ್ನಾಟಕಕ್ಕೆ 2 ವಂದೇ ಭಾರತ್‌, 1 ಅಮೃತ್‌ ಭಾರತ್‌ ರೈಲು ಭಾಗ್ಯ

    ಅಯೋಧ್ಯೆ: ಕರ್ನಾಟಕಕ್ಕೆ‌ ಸಂಪರ್ಕ ಕಲ್ಪಿಸಲಿರುವ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಹೊಸ ಮಾದರಿಯ ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ದೇಶದ ವಿವಿಧ ನಗರಳಿಗೆ ಸಂಪರ್ಕಿಸುವ ಒಟ್ಟು 8 ರೈಲುಗಳ ಸಂಚಾರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಯಲ್ಲಿ ವರ್ಚುವಲ್‌ ಆಗಿ ಚಾಲನೆ ನೀಡಿದ್ದಾರೆ.

    ಹೊಸದಾಗಿ ಚಾಲನೆಗೊಂಡ ವಂದೇ ಭಾರತ್‌ ರೈಲುಗಳು ಮಂಗಳೂರು-ಮುಂಡ್ಗಾವ್‌ (ಗೋವಾ) ಮತ್ತು ಬೆಂಗಳೂರು-ಕೊಯಮತ್ತೂರು ನಡುವೆ ಸಂಚರಿಸಿದರೆ, ಅಮೃತ್‌ ಭಾರತ್‌ ರೈಲು (Amrit Bharat Trains) ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿದೆ. ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೈದರಾಬಾದ್‌, ಮೈಸೂರು-ಚೆನ್ನೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು (Vande Bharat Trains) ಸಂಚರಿಸುತ್ತಿವೆ, ಇದೀಗ ಮಂಗಳೂರು-ಮುಂಡ್ಗಾವ್‌ ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆಯೂ ಸಂಚಾರ ಆರಂಭಗೊಂಡಿದೆ.

    ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿರುವ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತದೆ. 22 ಕೋಚ್‌ಗಳನ್ನ ಒಳಗೊಂಡಿದ್ದು, 1,800 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದಾಗಿದೆ. ಅನೇಕ ಐಷಾರಾಮಿ ಸೌಲಭ್ಯಗಳನ್ನೂ ಈ ರೈಲು ಒಳಗೊಂಡಿದೆ. ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

    ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ:
    2 ಅಮೃತ್‌ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

    ಅಯೋಧ್ಯಧಾಮ ಜಂಕ್ಷನ್‌ಗೆ ನಮೋ ಚಾಲನೆ:
    ಒಟ್ಟು 8 ವಿಶೇಷ ರೈಲುಗಳಿಗೆ ಹಸಿರು ನಿಶಾನೆ ತೋರುವುದಕ್ಕೂ ಮುನ್ನವೇ ಮೋದಿ ಅವರು ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌, ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.

    ಏನಿದರ ವಿಶೇಷತೆ?
    ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್‌ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.