Tag: Vande Bharat Train

  • ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ

    ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ

    3 months agoAugust 10, 2025 2:50 pm

    ಮೋದಿ ಭಾಷಣ ಮುಕ್ತಾಯ

    ವೇದಿಕ ಕಾರ್ಯಕ್ರಮದಿಂದ ತೆರಳಿದ ಪ್ರಧಾನಿ

    3 months agoAugust 10, 2025 2:46 pm

    ಮೋದಿ ಹೇಳಿಕೆ..

    ಭಾರತ ಜಗತ್ತಿನ‌ ಮೂರನೇ ದೊಡ್ಡ ಮೆಟ್ರೋ‌ ಸಂಪರ್ಕ ಇರೋ ದೇಶ

    2014 ವರೆಗೆ 74 ಏರ್‌ಪೋರ್ಟ್‌ಗಳಿದ್ದವು, ಈಗ 160 ಇವೆ

    3 months agoAugust 10, 2025 2:44 pm

    ಮೋದಿ ಮಾತು..

    ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ

    ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ

    3 months agoAugust 10, 2025 2:41 pm

    ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ

    ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ: ಮೋದಿ ಹೇಳಿಕೆ

    3 months agoAugust 10, 2025 2:31 pm

    ಮೋದಿ ಭಾಷಣ..

    ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ

    ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ

    ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ

    ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು

    ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರ್ತಿದೆ

    ಇಂದು ಮೆಟ್ರೋ ಹಳದಿ ಮಾರ್ಗ, ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಡಲಾಗಿದೆ

    3 months agoAugust 10, 2025 2:28 pm

    ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

    ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು ಅಂತ ಕನ್ನಡದಲ್ಲೇ ಹೇಳಿದ ಪ್ರಧಾನಿ

    3 months agoAugust 10, 2025 2:17 pm

    3ನೇ ಹಂತದ ಮೆಟ್ರೋ ಮಾರ್ಗಕ್ಕೆ ಮೋದಿ ಶಂಕುಸ್ಥಾಪನೆ

    ಮೋದಿ ಭಾಷಣಕ್ಕೂ ಮುನ್ನ‌ ಕಿರು ವಿಡಿಯೋ ಪ್ರಸಾರ

    3 months agoAugust 10, 2025 2:00 pm

    ನಮ್ಮ ಮೆಟ್ರೋಗೆ ರಾಜ್ಯದ ಪಾಲು ಹೆಚ್ಚು: ಸಿಎಂ

    ಪ್ರಧಾನಿ ಮೋದಿ ಎದುರು ಕ್ರೆಡಿಟ್‌ ತಗೊಂಡ ಸಿಎಂ ಸಿದ್ದರಾಮಯ್ಯ

    ಈಗಾಗಲೇ 96.10 ಕಿ.ಮೀ ಮೆಟ್ರೋ ರೈಲು ಕೆಲಸ ಮುಗಿದಿದೆ

    ಇದಕ್ಕೆ ರಾಜ್ಯ 25,387 ಕೋಟಿ ರೂ ಕರ್ಚು ಮಾಡಿದೆ

    ಕೇಂದ್ರ 7,468.86 ಕೋಟಿ ಕರ್ಚು ಮಾಡಿದೆ

    ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದ ಸಿಎಂ

    3 months agoAugust 10, 2025 1:53 pm

    ಕಾರ್ಯಕ್ರಮದಲ್ಲಿ ಮೋದಿ-ಡಿಕೆಶಿ ಟಾಕ್

    ಮೋದಿಯವರ ಪಕ್ಕ ಕೂತು ಕಿವಿಯಲ್ಲಿ ಮಾತಾಡಿದ ಡಿಕೆಶಿ

    ಸಿಎಂ ಭಾಷಣಕ್ಕೆ ಎದ್ದು ಹೋದ ಬೆನ್ನಲ್ಲೇ ಮೋದಿ ಪಕ್ಕ ಬಂದು ಕೂತು ಮಾತಾಡಿದ ಡಿಕೆಶಿ

    3 months agoAugust 10, 2025 1:49 pm

    ವೇದಿಕೆ ಮೇಲೆ ಅಕ್ಕಪಕ್ಕ ಕೂತ ಸಿದ್ದರಾಮಯ್ಯ ಮತ್ತು ಹೆಚ್‌ಡಿಕೆ

    3 months agoAugust 10, 2025 1:33 pm

    ಪಂಚಮುಖಿ ಗಣೇಶ ಮೂರ್ತಿ ನೀಡಿ ಮೋದಿಯವರಿಗೆ ಸನ್ಮಾನ

    3 months agoAugust 10, 2025 1:25 pm

    ವೇದಿಕೆಯಲ್ಲಿ ಪ್ರಧಾನಿಯವರ ಜೊತೆ 13 ಗಣ್ಯರಿಗೆ ಸ್ಥಾನ

    ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
    ಕೇಂದ್ರ ಸಚಿವ ಮನೋಹರ ಲಾಲ್
    ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ
    ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ
    ಕೇಂದ್ರದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ
    ಸಿಎಂ ಸಿದ್ದರಾಮಯ್ಯ
    ಡಿಸಿಎಂ ಡಿಕೆ ಶಿವಕುಮಾರ್
    ಸಂಸದ ತೇಜಸ್ವಿ ಸೂರ್ಯ
    ಸಚಿವ ಬೈರತಿ ಸುರೇಶ್
    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
    ವಿಪಕ್ಷ ನಾಯಕ‌ ಆರ್.ಅಶೋಕ್
    ಸಂಸದ ಡಾ.ಸಿ.ಎನ್.ಮಂಜುನಾಥ್

    3 months agoAugust 10, 2025 1:20 pm

    ರಾಷ್ಟ್ರಗೀತೆ, ನಾಡಗೀತೆ ಗಾಯನ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ

    3 months agoAugust 10, 2025 1:19 pm

    ಐಐಐಟಿ ಕಾರ್ಯಕ್ರಮದಲ್ಲಿ ಮೋದಿ.. ಮೋದಿ ಜಯಘೋಷ

    3 months agoAugust 10, 2025 1:14 pm

    ಐಐಐಟಿಗೆ ಇನ್ಫೋಸಿಸ್‌ನ ಸುಧಾಮೂರ್ತಿ, ನಾರಾಯಣ ಮೂರ್ತಿ ಆಗಮನ

    3 months agoAugust 10, 2025 1:11 pm

    ಐಐಐಟಿಗೆ ಆಗಮಿಸಿದ ಪ್ರಧಾನಿ ಮೋದಿ

    3 months agoAugust 10, 2025 1:06 pm

    ಮೆಟ್ರೋದಲ್ಲಿ ಮೋದಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಡಿಕೆಶಿ ಪ್ರಯಾಣ.

    3 months agoAugust 10, 2025 12:54 pm

    ಮೆಟ್ರೋದಲ್ಲಿ ಪ್ರಯಾಣಿಸುತ್ತ ಮಕ್ಕಳ ಜೊತೆ ಮೋದಿ ಸಂವಾದ

    3 months agoAugust 10, 2025 12:48 pm

    ಮೋದಿಗೆ ಡಿಕೆಶಿಯಿಂದ ಮೆಟ್ರೋ ವಿವರಣೆ

    3 months agoAugust 10, 2025 12:44 pm

    12:55 ಕ್ಕೆ ಐಐಐಟಿಗೆ ಆಗಮಿಸಲಿರುವ ಮೋದಿ

    3 months agoAugust 10, 2025 12:41 pm

    3 months agoAugust 10, 2025 12:29 pm

    ಬಹುನಿರೀಕ್ಷಿತ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ

    3 months agoAugust 10, 2025 12:26 pm

    ಮಳೆಯನ್ನೂ ಲೆಕ್ಕಿಸದೇ ಮೋದಿಗಾಗಿ ಕಾದು ನಿಂತ ಜನ.

    3 months agoAugust 10, 2025 12:20 pm

    ರಾಗಿಗುಡ್ಡ‌ ಬಳಿ ಮೋದಿಗೆ ಪುಷ್ಪವೃಷ್ಟಿ

    3 months agoAugust 10, 2025 12:13 pm

    3 months agoAugust 10, 2025 12:09 pm

    ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ

    3 months agoAugust 10, 2025 12:06 pm

    ಬೆಂಗಳೂರಲ್ಲಿ ಮೋದಿಗೆ ಜನರ ಜೈಕಾರ

    3 months agoAugust 10, 2025 12:05 pm

    3 months agoAugust 10, 2025 11:51 am

    3 ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ

    ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲುಗಳಿಗೆ ಹಸಿರು ನಿಶಾನೆ

    * ಬೆಂಗಳೂರು-ಬೆಳಗಾವಿ ವಂದೇ ಭಾರತ್‌ ರೈಲು

    * ನಾಗಪುರ-ಪುಣೆ ವಂದೇ ಭಾರತ್‌ ರೈಲು

    * ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ ವಂದೇ ಭಾರತ್‌ ರೈಲು

    3 months agoAugust 10, 2025 11:40 am

    ಮೋದಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

    ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಉಪಸ್ಥಿತಿ.

    3 months agoAugust 10, 2025 11:36 am

    ಉದ್ಘಾಟನೆಗೆ ಕಾದು ನಿಂತಿರುವ ವಂದೇ ಭಾರತ್‌ ರೈಲು

    3 months agoAugust 10, 2025 11:28 am

    ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ

    ಕೋನಪ್ಪನ ಅಗ್ರಹಾರ ಮೆಟ್ರೋ ಬಳಿ ಜಮಾಯಿಸಿದ ಜನ

    ಫ್ಲೈಓವರ್ ಸಮೀಪ ಜಮಾಯಿಸಿದ ಜನ

    ಮಳೆಯ ನಡುವೆಯೂ ಮೋದಿ ನೋಡಲು ಕಾಯುತ್ತಿರುವ ಕಾರ್ಯಕರ್ತರು

    3 months agoAugust 10, 2025 11:27 am

    ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನಿಂದ ರೈಲ್ವೆ ನಿಲ್ದಾಣ ಕಡೆಗೆ ತೆರಳಿದ ನರೇಂದ್ರ ಮೋದಿ

    3 months agoAugust 10, 2025 11:24 am

    3 months agoAugust 10, 2025 11:21 am

    ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನತ್ತ ಮೋದಿ ಪ್ರಯಾಣ

    3 months agoAugust 10, 2025 11:18 am

    ಜನರತ್ತ ಕೈ ಬೀಸಿದ ಮೋದಿ

    ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಕಾರ್ಯಕರ್ತರ ಜಮಾವಣೆ.

    3 months agoAugust 10, 2025 11:10 am

    ಮೋದಿಗೆ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ

    3 months agoAugust 10, 2025 11:06 am

    3 months agoAugust 10, 2025 10:57 am

    ಮೇಖ್ರಿ ಸರ್ಕಲ್‌ನ HQTCಗೆ ಬಂದಿಳಿದ ಮೋದಿ

    ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮೋದಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ

    3 months agoAugust 10, 2025 10:49 am

    ಬೆಂಗಳೂರಿನ ಹೆಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿ

    ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಂದೇ ಭಾರತ ಬೆಂಗಳೂರು-ಬೆಳಗಾವಿ ನೂತನ ಪ್ರಯಾಣಿಕ ರೈಲಿಗೆ ಚಾಲನೆ ಕೊಡಲಿದ್ದಾರೆ.

  • ಬೆಂಗಳೂರು – ಬೆಳಗಾವಿ ವಂದೇ ಭಾರತ್‌ಗೆ ಇಂದು ಮೋದಿ ಚಾಲನೆ; ಟಿಕೆಟ್ ದರ ಎಷ್ಟು?

    ಬೆಂಗಳೂರು – ಬೆಳಗಾವಿ ವಂದೇ ಭಾರತ್‌ಗೆ ಇಂದು ಮೋದಿ ಚಾಲನೆ; ಟಿಕೆಟ್ ದರ ಎಷ್ಟು?

    – ಕರ್ನಾಟಕದ 11ನೇ ವಂದೇ ಭಾರತ್ ರೈಲಿಗೆ ಮೋದಿ ಗ್ರೀನ್ ಸಿಗ್ನಲ್
    – 8 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ ರೈಲು

    ಬೆಂಗಳೂರು: ಇಂದು ಉತ್ತರ ಕರ್ನಾಟಕ ಜನರ ಕನಸು ನನಸಾಗಲಿದ್ದು, ರಾಜ್ಯ ರೈಲ್ವೆ ಇಲಾಖೆಗೆ ಮತ್ತೊಂದು ವಂದೇ ಭಾರತ್ ರೈಲು ಸೇರ್ಪಡೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲಿಗೆ (Bengaluru-Belagavi Vande Bharat Train) ಇಂದು ಹಸಿರು ನಿಶಾನೆ ನೀಡಲಿದ್ದಾರೆ.

    ರಾಜ್ಯ ರೈಲ್ವೆಗೆ 11ನೇ ಹೊಸ ವಂದೇ ಭಾರತ್ ರೈಲು ಸೇರ್ಪಡೆಯಾಗಲಿದ್ದು, ಕರ್ನಾಟಕದ 11ನೇ ವಂದೇ ಭಾರತ್‌ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಲ್ಲಿ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 11:15ಕ್ಕೆ ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದೆ. ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜ್ಯ ರಾಜಧಾನಿ ಸಂಪರ್ಕಿಸಲಿದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುವ ರೈಲು, ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕಿಸಲಿದೆ. ಪ್ರಯಾಣದ ಅವಧಿ 8:50 ಗಂಟೆ ಇರಲಿದೆ.

    ಇನ್ನು, ಈ ರಾಜ್ಯದ ವಂದೇ ಭಾರತ್ ರೈಲಿನ ಜೊತೆ ಎರಡು ಉತ್ತರ ಭಾರತ ರೈಲಿಗೂ ವರ್ಚುವಲ್ ರೈಲುಗಳ ಮೂಲಕ ಚಾಲನೆ ದೊರೆಯಲಿದೆ. ಬೆಂಗಳೂರು ಟು ಬೆಳಗಾವಿ ರೈಲಿನ ಸಂಖ್ಯೆ-26751. ಇನ್ನೂ ಈ ವಂದೇ ಭಾರತ್ ರೈಲಿನ ಟಿಕೆಟ್ ದರವನ್ನು ಈ ಕೆಳಗೆ ನೀಡಲಾಗಿದೆ.

    ಒಟ್ಟಿನಲ್ಲಿ ಈ ವಂದೇ ಭಾರತ್ ರೈಲು 8 ಗಂಟೆ 50 ನಿಮಿಷಗಳಲ್ಲಿ 611 ಕಿಲೋ ಮೀಟರ್ ದೂರ ಕ್ರಮಿಸಲಿದ್ದು, ರಾಜ್ಯದ ರೈಲ್ವೆ ಇತಿಹಾಸದಲ್ಲಿ ಮೈಲುಗಲ್ಲಾಗಿದೆ.

  • ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

    ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

    ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಕೋರಿಕೆಯಂತೆ ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು (Vande Bharat Train) ಸಂಚಾರ ಸೇರಿದಂತೆ 3 ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆ.10ರಂದು ಚಾಲನೆ ನೀಡಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಆ.10ರ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ:
    ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯದಲ್ಲಿ 3 ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪೂನಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೋದೇವಿ ಕಾರ್ತ ಮಧ್ಯೆ ನೂತನ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ. ಇದನ್ನೂ ಓದಿ: ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ – ಪ್ರಿಯಾಂಕಾ ಗಾಂಧಿ

    ಸಚಿವ ಜೋಶಿ ಕೋರಿಕೆಗೆ ಸ್ಪಂದನೆ:
    ಈ ಹಿಂದೆ ಸಚಿವ ಪ್ರಹ್ಲಾದ್ ಜೋಶಿ ಅವರು ಬೆಂಗಳೂರು-ಬೆಳಗಾವಿ ಮಧ್ಯೆ ನೂತನ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ಭಾನುವಾರ ತಾವೇ ಖುದ್ದು ಈ ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ

    ರೈಲು ಸಂಚಾರದ ವೇಳೆ:
    ಈ ನೂತನ ವಂದೇ ಭಾರತ್ ರೈಲು ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1:50ಕ್ಕೆ ತಲುಪಲಿದೆ. ವಾಪಸ್ ಬೆಂಗಳೂರಿನಿಂದ ಮಧ್ಯಾಹ್ನ 2:20ಕ್ಕೆ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ.

    ಈ ರೈಲು ಸಂಚಾರದಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಹೆಚ್ಚಲಿದ್ದು, ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

  • ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

    ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

    ದಾವಣಗೆರೆ: ವಂದೇ ಭಾರತ್ ರೈಲಿನಲ್ಲಿ (Vande Bharat Train) ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯಲ್ಲಿ (Davangere) ನಡೆದಿದೆ.

    ಧಾರವಾಡದಿಂದ ಬೆಂಗಳೂರಿಗೆ (Bengaluru) ವಂದೇ ಭಾರತ್‌ ರೈಲು ತೆರಳುತ್ತಿತ್ತು. ಈ ವೇಳೆ, ದಾವಣಗೆರೆ ಬಳಿ ಟ್ರೈನ್‌ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಗೇಟ್‌ ಮ್ಯಾನ್‌ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ಮನರಂಜನಾ ಪಾರ್ಕ್ ಕಾಮಗಾರಿ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ಕೂಡಲೇ ಎಚ್ಚೆತ್ತ ಸಿಬ್ಬಂದಿ ರೈಲನ್ನು ದಾವಣಗೆರೆಯಲ್ಲಿ ನಿಲ್ಲಿಸಿದ್ದಾರೆ. ರೈಲ್ವೇ ಪೊಲೀಸರು ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

    ವಂದೇ ಭಾರತ್‌ ರೈಲಿನಲ್ಲಿದ್ದ ಪ್ರಯಾಣಿಕರು, ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ಜುಲೈ 1 ರಿಂದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ – ಗ್ರಾಹಕರಿಗೆ ಏನು ಅನುಕೂಲ?

  • ಜೋಧ್‌ಪುರ| ರೈಲು ಹಳಿ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ  ವಂದೇ ಭಾರತ್ ಡಿಕ್ಕಿ – ತಪ್ಪಿದ ಭಾರೀ ಅನಾಹುತ

    ಜೋಧ್‌ಪುರ| ರೈಲು ಹಳಿ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ವಂದೇ ಭಾರತ್ ಡಿಕ್ಕಿ – ತಪ್ಪಿದ ಭಾರೀ ಅನಾಹುತ

    ಅಹಮ್ಮದಾಬಾದ್: ಅಹ್ಮದಾಬಾದ್- ಜೋಧ್‌ಪುರಗೆ (Ahmedabad-Jodhpur) ಹೋಗುವ ವಂದೇ ಭಾರತ್ ರೈಲು ಹಳಿಗಳ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿರುವ ಘಟನೆ ರಾಜಸ್ತಾನದ ಪಾಲಿ ಎಂಬಲ್ಲಿ ಆಗಸ್ಟ್ 23ಕ್ಕೆ ನಡೆದಿದೆ.

    ರೈಲ್ವೇ ಅಧಿಕಾರಿಗಳ ಪ್ರಕಾರ, ಜವಾಯಿ ಹಾಗೂ ಬಿರೋಲಿಯಾ ನಡುವೆ ರೈಲು ಚಲಿಸುತ್ತಿರುವಾಗ ಎಂಜಿನ್ ಸಿಮೆಂಟ್ ಸ್ಲ್ಯಾಬ್‌ಗೆ  ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

    ಘಟನೆಯ ಬಗ್ಗೆ ವಾಯುವ್ಯ ಅಧಿಕಾರಿ (ಸಿಪಿಆರ್‌ಒ) ಶಶಿಕಿರಣ್ ಮಾತನಾಡಿ, ಘಟನೆಯಿಂದ ರೈಲು ಬರುವಾಗ 8 ನಿಮಿಷ ತಡವಾಗಿ ಬಂದಿದೆ. ಇದರ ಹೊರತಾಗಿ ಯಾವ ಪ್ರಯಾಣಿಕರಿಗೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೋಗ ವೀಕ್ಷಿಸಲು 2 ಗಂಟೆ ಸಮಯ ನಿಗದಿ – ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರು ಆಕ್ರೋಶ

    ಫಲ್ನಾ ಪ್ರದೇಶದ ಹಿರಿಯ ಎಂಜಿನಿಯರ್ (ಎಸ್‌ಎಸ್‌ಇ) ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಫುಟ್‌ಪಾತ್ ನಿರ್ಮಿಸಲು ಬಳಸುವ ಸಿಮೆಂಟ್ ಸ್ಲ್ಯಾಬ್‌  ರೈಲು ಹಳಿಯ ಮೇಲೆ ಇಟ್ಟಿರುವುದು ಕಂಡುಬಂದಿದೆ ಎಂದು ಶಶಿಕಿರಣ್ ಹೇಳಿದರು. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ಈ ರೈಲು ಅಹ್ಮದಾಬಾದ್- ಜೋಧ್‌ಪುರಕ್ಕೆ ಮಂಗಳವಾರ ಹೊರತುಪಡಿಸಿ ವಾರದ 6 ದಿನ ಚಲಿಸುತ್ತದೆ. ಸಬರಮತಿ ನಿಲ್ದಾಣಕ್ಕೆ ಸಂಜೆ 4.45ಕ್ಕೆ ತಲುಪುತ್ತದೆ. ಇದನ್ನೂ ಓದಿ: ಅತ್ತ ದರ್ಶನ್‌ಗೆ ರಾಜಾತಿಥ್ಯ – ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಟ

    ಕಳೆದ ಬಾರಿ ಅಕ್ಟೋಬರ್‌ನಲ್ಲಿ  ಇಂತಹದ್ದೇ ಒಂದು ಘಟನೆ ನಡೆದಿದೆ. ಆಗ ರೈಲ್ವೆ ಅಧಿಕಾರಿಗಳು ತುರ್ತು ನಿರ್ಗಮನ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾರೆ. ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕಲ್ಲು ಹಾಗು ಕಬ್ಬಿಣದ ಅದಿರುಗಳನ್ನು ಹಾಕಿದ್ದರಿಂದ ಈ ಘಟನೆ ನಡೆದಿದೆ ಎಂದು ರಾಜಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ

  • ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು: ಈರಣ್ಣ ಕಡಾಡಿ

    ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು: ಈರಣ್ಣ ಕಡಾಡಿ

    ಬೆಳಗಾವಿ: ಬೆಳಗಾವಿಯಿಂದ-ಪುಣೆ ನಡುವೆ ವಿದ್ಯುದ್ದೀಕರಣದ ಕಾಮಗಾರಿ ಮುಗಿದ ತಕ್ಷಣ ಕುಂದಾನಗರಿಯ ಜನರ ಬಹು ನಿರೀಕ್ಷೆಯ ವಂದೇ ಭಾರತ್ ರೈಲು (Vande Bharat Train) ಸಂಚಾರ ಪ್ರಾರಂಭವಾಗಲಿದೆ ಎಂದು ಹುಬ್ಬಳಿ ನೈರುತ್ಯ ರೆಲ್ವೆ ವಲಯ ಪ್ರಯಾಣಿಕರ ಸಲಹಾ ಮಂಡಳಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Eranna Kadadi) ತಿಳಿಸಿದ್ದಾರೆ.

    ನವದೆಹಲಿಯಲ್ಲಿ (New Delhi) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಬೆಳಗಾವಿ-ಪುಣೆ (Belagavi-Pune) ನಡುವೆ ವಂದೇ ಭಾರತ್ ರೈಲಿನ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿ ಮನವಿ ಮಾಡಿದ ನಂತರ ರೈಲ್ವೆ ಸಚಿವರು ಪುಣೆ- ಬೆಳಗಾವಿ ನಡುವೆ ವಿದ್ಯುದೀಕರಣ ಕಾಮಗಾರಿ ಮುಕ್ತಾಯದ ನಂತರ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಬಗ್ಗೆ ಲಿಖಿತವಾಗಿ ಮಾಹಿತಿಯನ್ನು ನೀಡಿದ್ದಾರೆ ಎಂದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಬೆಳಗಾವಿ ಜಿಲ್ಲೆಯ ರೈಲ್ವೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸಚಿವರ ಗಮನಕ್ಕೆ ತಂದ ಸಂಸದ ಕಡಾಡಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಈ ವೇಳೆ ಬೆಳಗಾವಿ ಕೋರ್ ಡೆವಲಪ್‌ಮೆಂಟ್ ಗ್ರೂಪ್ ಸದಸ್ಯರಾದ ಶೈಲೇಶ್ ಯಲಮಳ್ಳಿ, ಅಶ್ವಿನ್ ಪಾಟೀಲ್, ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಕರ್ನಾಟಕದ GSTಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲಾ ಸೀತಾರಾಮನ್

  • ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?

    ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?

    ಕಾರವಾರ: ಮಂಗಳೂರಿನಿಂದ (Mangaluru) ಗೋವಾ (Goa) ಮಡಗಾಂವ್‌ವರೆಗೆ ಸಂಚರಿಸುವ ವಂದೇ ಭಾರತ್ ರೈಲಿಗೆ (Vande Bharat Train) ನರೇಂದ್ರ ಮೋದಿಯವರು (Narendra Modi) ಚಾಲನೆ ನೀಡಿದ್ದು, ದಕ್ಷಿಣದಿಂದ ಉತ್ತರ ಕರಾವಳಿಯನ್ನು ಸಂಪರ್ಕಿಸುವ ಕರ್ನಾಟಕದ ನಾಲ್ಕನೇ ರೈಲು ಇದಾಗಿದೆ. ಮುಂಬೈ, ಗೋವಾ, ಕರ್ನಾಟಕ ಕರಾವಳಿ, ಕೇರಳ ಭಾಗಕ್ಕೆ ಇದು ಅತೀ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುತ್ತದೆ.

    ಸಮಯ ಏನು?
    ವಂದೇ ಭಾರತ್ ರೈಲು ವಾರದ ಆರು ದಿನ ಸಂಚರಿಸಲಿದ್ದು, ಪ್ರತಿ ದಿನ ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1:15ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ನಂತರ ಸಂಜೆ 6:10ಕ್ಕೆ ಮಡಗಾಂವ್‌ನಿಂದ ಹೊರಟರೆ ರಾತ್ರಿ 10:45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು 530 ಆಸನಗಳನ್ನು ಹೊಂದಿದೆ. ಇದನ್ನೂ ಓದಿ: ಜ.14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ: ಮೋದಿ ಕರೆ

    ತಲುಪುವ ಸಮಯ ಎಷ್ಟು?
    ಈ ರೈಲು ಒಟ್ಟು 319 ಕಿಲೋಮೀಟರ್ ಸಂಚಾರ ಮಾಡಲಿದ್ದು, 4:35 ನಿಮಿಷದಲ್ಲಿ ತನ್ನ ಗುರಿ ತಲುಪುತ್ತದೆ. ಈಗಿರುವ ಎಕ್ಸ್‌ಪ್ರೆಸ್ ರೈಲಿಗಿಂತ 1 ಗಂಟೆಗೂ ಹೆಚ್ಚು ಸಮಯ ವೇಗದಲ್ಲಿ ಗುರಿ ಮುಟ್ಟುತ್ತದೆ. ಇದನ್ನೂ ಓದಿ: ಭಾನುವಾರದಿಂದ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಬಂದ್ – ಸೆಕ್ಷನ್ 144 ಜಾರಿ

    ದರ ಎಷ್ಟು?
    ವಂದೇ ಭಾರತ್ ರೈಲಿನ ಸಿ.ಸಿ ಕ್ಲಾಸ್ ಟಿಕೆಟ್‌ಗೆ 985 ರೂ.ಗಳಾಗಿದ್ದು, ಇ.ಸಿ ಕ್ಲಾಸ್ ಟಿಕೆಟ್‌ಗೆ 1,955 ರೂ.ಗಳಿವೆ. ಎಕ್ಸ್‌ಪ್ರೆಸ್ ರೈಲಿಗೆ ಹೋಲಿಸಿದರೆ ವಂದೇ ಭಾರತ್ ರೈಲಿನ ದರ ದುಪ್ಪಟ್ಟಿದೆ. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್

    ಲಾಭ ಏನು?
    ಮುಂಬೈ/ಕೇರಳ/ಗೋವಾದಿಂದ ಮಂಗಳೂರು, ಕಾರವಾರ, ಉಡುಪಿ, ಕೇರಳಗೆ ತೆರಳುವವರಿಗೆ ಸಮಯ ಉಳಿತಾಯ ಆಗಲಿದೆ. ಇನ್ನು ಗೋವಾ, ಕರ್ನಾಟಕ, ಕೇರಳ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ. ಉತ್ತಮ ಸೌಲಭ್ಯದ ಜೊತೆ ಶುಚಿತ್ವ, ಭದ್ರತೆ, ಪರಿಸರ ಸೌಂದರ್ಯ ಸವಿಯುವವರಿಗೆ ಆರಾಮದಾಯಕ ಪ್ರಯಾಣ ಇದಾಗಿದೆ. ಕಾರವಾರ ಭಾಗದಿಂದ ಉಡುಪಿ, ಮಂಗಳೂರು ಭಾಗದಲ್ಲಿ ವೈದ್ಯಕೀಯ ಸೇವೆಗೆಂದು ತುರ್ತು ಹೋಗುವವರಿಗೆ ಈ ರೈಲು ಅನುಕೂಲಕರವಾಗಿದೆ. ಇದನ್ನೂ ಓದಿ: ನಿಗಮ ಮಂಡಳಿ ನೇಮಕದಲ್ಲಿ ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ

    ನಷ್ಟ ಏನು?
    ಕಾರವಾರ, ಉಡುಪಿಯಲ್ಲಿ ಮಾತ್ರ ವಂದೇ ಭಾರತ್ ರೈಲು ನಿಲ್ದಾಣ ಇರುವ ಕಾರಣ ಕಾರವಾರದ ಪ್ರವಾಸೋದ್ಯಮಕ್ಕೆ ಸಹಾಯ ಆಗದು. ಏಕೆಂದರೆ ಕಾರವಾರದಲ್ಲಿ ಇಳಿದು ಜಿಲ್ಲೆಯ ಬೇರೆ ಸ್ಥಳಗಳಿಗೆ ತೆರಳಲು ಲೋಕಲ್ ರೈಲಿನಲ್ಲಿ ತೆರಳಿದಷ್ಟು ಸಮಯ ಬೇಕಾಗುತ್ತದೆ. ಕುಮಟಾ, ಮುರುಡೇಶ್ವರ ಭಾಗದ ಪ್ರವಾಸೋದ್ಯಮಕ್ಕೆ ಸಹಕಾರಿಯಲ್ಲ. ಇನ್ನು ದರ ದುಪ್ಪಟ್ಟು ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ತುಟ್ಟಿಯಾಗಿದೆ. ಉಡುಪಿ, ಮಂಗಳೂರು, ಗೋವಾ ರಾಜ್ಯಕ್ಕೆ ಹೆಚ್ಚು ಉಪಯೋಗವಾಗಲಿದೆ. ಇದನ್ನೂ ಓದಿ: ನೆಲದ ಕಾನೂನು ಎಲ್ಲರಿಗೂ ಒಂದೆ: ಪ್ರತಾಪ್ ಸಿಂಹ ಸಹೋದರನ ಬಂಧನಕ್ಕೆ ಈಶ್ವರ್ ಖಂಡ್ರೆ ಪ್ರತಿಕ್ರಿಯೆ

  • ಸೀತಾ ಮಾತೆಯ ಊರಿಗೂ ಅಯೋಧ್ಯೆಯಿಂದ ವಿಶೇಷ ರೈಲು!

    ಸೀತಾ ಮಾತೆಯ ಊರಿಗೂ ಅಯೋಧ್ಯೆಯಿಂದ ವಿಶೇಷ ರೈಲು!

    – ಕೇಂದ್ರ ಸರ್ಕಾರದಿಂದ ಅಮೃತ ಭಾರತ ವಿಶೇಷ ರೈಲು ಗಿಫ್ಟ್

    ಅಯೋಧ್ಯೆ: ರಾಮನ ಭಕ್ತರನ್ನು ಖುಷಿ ಪಡಿಸಲು ತನ್ನ ಕೈಯಲ್ಲಿ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಮಮಂದಿರ (Ayodhya Ram Mandir) ಉದ್ಘಾಟನೆ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ವಿಶೇಷ ಅಮೃತ ಭಾರತ ರೈಲು ಓಡಿಸಲು ನಿರ್ಧರಿಸಿದೆ. ಇದರ ಜೊತೆಗೆ ಅಯೋಧ್ಯೆಗೆ ವಂದೇ ಭಾರತ್ (Vande Bharat) ರೈಲು ಕೂಡಾ ಓಡಾಟ ನಡೆಸಲಿದೆ.

    ಇನ್ನೂ ವಿಶೇಷ ಎಂದರೆ ಶ್ರೀರಾಮ ದೇವರ ಪತ್ನಿ ಸೀತಾಮಾತೆಯ ಊರಿನ ಮೂಲಕ ಅಯೋಧ್ಯೆಗೆ ಈ ರೈಲು ಓಡಲಿದೆ. ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಈ ವಿಶೇಷ ಅಮೃತ ಭಾರತ ರೈಲಿನ ಸಂಚಾರ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    ಈ ರೈಲು ಶ್ರೀರಾಮ ಜನ್ಮಸ್ಥಾನ ಅಯೋಧ್ಯೆಯಿಂದ ಸೀತಾಮರ್ಹಿ (ಸೀತಾ ಮಾತೆಯ ಜನ್ಮಸ್ಥಳ) ಮೂಲಕ ದರ್ಭಂಗಾ ತಲುಪಲಿದೆ. ನಾನ್ ಎಸಿ ಹಾಗೂ ಸ್ಲೀಪರ್ ಕ್ಲಾಸ್ ಸೀಟುಗಳ ಸೇವೆ ಈ ರೈಲಿನಲ್ಲಿರಲಿದೆ. ಡಿಸೆಂಬರ್ 30 ರಂದು ಈ ಅಮೃತಭಾರತ್ ರೈಲಿನ ಜೊತೆ ವಂದೇಭಾರತ್ ರೈಲಿಗೆ ಕೂಡಾ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

    ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಿದ್ಧತೆಗಳು ಭಾರೀ ಜೋರಾಗಿ ಮುಂದುವರೆಯುತ್ತಿದೆ. ಮೂಲಸೌಕರ್ಯ ಕಲ್ಪಿಸುವಲ್ಲಿ ಯಾವುದೇ ಸಮಸ್ಯೆಯಾಗದಂತೆ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಅಯೋಧ್ಯೆಯ ರೈಲು ನಿಲ್ದಾಣ ನಿರ್ಮಾಣಕ್ಕೆ 240 ಕೋಟಿ ರೂಪಾಯಿ ಖರ್ಚಾಗಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ವಿಮಾನಯಾನ ಸೇವೆಗೂ ಚಾಲನೆ!: ಡಿಸೆಂಬರ್ 30ರಂದೇ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯೂ ನಡೆಯಲಿದೆ. ಇಂಡಿಗೋ ವಿಮಾನ ಮೊದಲ ಹಂತದಲ್ಲಿ ದೆಹಲಿ ಹಾಗೂ ಅಹಮದಾಬಾದ್‌ಗೆ ಹಾರಾಟ ನಡೆಸಲಿದೆ. 1 ಗಂಟೆ 20 ನಿಮಿಷದಲ್ಲಿ ಈ ವಿಮಾನ ದೆಹಲಿಯಿಂದ ಅಯೋಧ್ಯೆಗೆ ತಲುಪಲಿದೆ.

    ಡಿಸೆಂಬರ್ 22ರಂದು ವಿಮಾನ ನಿಲ್ದಾಣದಲ್ಲಿ ಟ್ರಯಲ್ ರನ್ ನಡೆದಿತ್ತು. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

  • ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

    ಭೋಪಾಲ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ‌ (Vande Bharat Train) ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಮುಂಜಾನೆ ಮಧ್ಯಪ್ರದೇಶದ (Madhya Pradesh) ಕುರ್ವೈ ಕೆಥೋರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

    ರೈಲು ಭೋಪಾಲ್‍ನಿಂದ ದೆಹಲಿಗೆ (Delhi) ತೆರಳುತ್ತಿತ್ತು. ಈ ವೇಳೆ ರೈಲಿನ ಕೋಚ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಲವು ಪ್ರಯಾಣಿಕರು ಸಹ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆಗೆ ಸಿಲುಕಿಕೊಂಡ 75,000ಕ್ಕೂ ಹೆಚ್ಚು ಲೋಡೆಡ್ ಟ್ರಕ್‌ಗಳು

    ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೇ ಅಧಿಕಾರಿಗಳು ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಅಲ್ಲದೇ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್‍ನಲ್ಲಿ ಮಧ್ಯಪ್ರದೇಶದ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಉದ್ಘಾಟಿಸಿದ್ದರು. ಇದನ್ನೂ ಓದಿ: ಕ್ಯಾಸಿನೋಗಾಗಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]