Tag: van

  • ಚಲಿಸುವ ವ್ಯಾನ್‍ ನಿಂದ 10 ತಿಂಗ್ಳ ಮಗು ಬಿದ್ದರೂ ಪೋಷಕರಿಗೆ ಗೊತ್ತಾಗ್ಲಿಲ್ಲ- ವಿಡಿಯೋ ನೋಡಿ

    ಚಲಿಸುವ ವ್ಯಾನ್‍ ನಿಂದ 10 ತಿಂಗ್ಳ ಮಗು ಬಿದ್ದರೂ ಪೋಷಕರಿಗೆ ಗೊತ್ತಾಗ್ಲಿಲ್ಲ- ವಿಡಿಯೋ ನೋಡಿ

    ಬೀಜಿಂಗ್: 10 ತಿಂಗಳ ಮಗುವೊಂದು ಚಲಿಸುವ ವ್ಯಾನ್ ನಿಂದ ಬಿಡುವಿಲ್ಲದೆ ವಾಹನಗಳೂ ಓಡಾಡುವ ರಸ್ತೆಯಲ್ಲಿ ಬಿದ್ದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ.

    ಈ ಘಟನೆ ಚೀನಾದ ಜಿಯಾಂಗ್ಸು ನಗರದ ಚಾಂಗ್ಝೌ ನಗರದಲ್ಲಿ ನಡೆದಿದ್ದು, ಮಗು ವ್ಯಾನಿನಿಂದ ಬಿದ್ದರೂ ಪೋಷಕರು ಗಮನಿಸದೆ ಹೋಗಿದ್ದಾರೆ. ಬಿಳಿಯ ವ್ಯಾನ್ ಒಂದು ರಸ್ತೆಯಲ್ಲಿ ತಿರುವು ತೆಗೆದುಕೊಂಡಿದೆ. ಆಗ ವ್ಯಾನಿನ ಹಿಂಭಾಗದ ಸೀಟಿನಲ್ಲಿದ್ದ ಮಗು ರಸ್ತೆಗೆ ಬಿದ್ದಿದೆ. ಆದರೆ ಮಗು ವಾಹನದಿಂದ ಹೊರ ಬಿದ್ದರೂ ಪೋಷಕರು ಅದನ್ನು ಗಮನಿಸದೇ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ರಸ್ತೆಯಲ್ಲಿ ಬಿದ್ದ ತಕ್ಷಣ ಅದೃಷ್ಟವಶಾತ್ ದಾರಿಯಲ್ಲಿ ಸಂಚರಿಸುತ್ತಿದ್ದ ಜನರು ನೋಡಿ ಮಗುವನ್ನು ಎತ್ತಿಕೊಂಡಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿ ಮಗು ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದು, ಹಿಂದಿರುಗಿ ಬಂದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    https://www.youtube.com/watch?v=nGtzwflKNio

  • ಪಾದಚಾರಿಗಳ ಮೇಲೆ ಹರಿದ ವ್ಯಾನ್-10 ಮಂದಿ ದುರ್ಮರಣ

    ಪಾದಚಾರಿಗಳ ಮೇಲೆ ಹರಿದ ವ್ಯಾನ್-10 ಮಂದಿ ದುರ್ಮರಣ

    ಒಟ್ಟಾವಾ: ಪಾದಚಾರಿಗಳ ಮೇಲೆ ವ್ಯಾನ್ ಹರಿದು ಸುಮಾರು 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಕೆನಡಾದ ದೊಡ್ಡ ನಗರ ಟೊರಾಂಟೋದಲ್ಲಿ ಸೋಮವಾರ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು 25 ವರ್ಷದ ಉತ್ತರ ಟೊರಾಂಟೋದ ನಿವಾಸಿ ಅಲೆಕ್ಸ್ ಮಿನಸ್ಸಿಯಾನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ವಾಹನಗಳನ್ನು ಬಾಡಿಗೆ ನೀಡುವ ರೈಡರ್ ಸಂಸ್ಥೆಯ ವಾಹನ ಇದಾಗಿದ್ದು, ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಆರೋಪಿ ಬಿಳಿ ಬಣ್ಣದ ವ್ಯಾನೊಂದನ್ನು ಬಾಡಿಗೆ ಪಡೆದು ಈ ಕೃತ್ಯ ಎಸಗಿದ್ದಾನೆ. ಘಟನೆಯನ್ನು ಉದ್ದೇಶಪೂರ್ವಕವಾಗಿಯೇ ನಡೆಸಲಾಗಿದೆ ಅಂತ ಅಲ್ಲಿನ ಪೊಲೀಸ್ ಅಧಿಕಾರಿ ಮಾರ್ಕ್ ಸೌಂಡರ್ಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ 15 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದ್ದು, ಶಂಕಿತನ ವಿಚಾರಣೆ ಮುಂದುವರೆದಿದೆ.

    ಪಾದಚಾರಿಗಳ ಮೇಲೆ ವಾಹನ ಹರಿದ ಸಂದರ್ಭದಲ್ಲಿ ವ್ಯಾನ್ ವಿಪರೀತ ವೇಗದಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

  • ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವ್ಯಾನ್‍ನಿಂದ ಜಿಗಿದ ಗರ್ಭಿಣಿ ಸಾವು

    ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವ್ಯಾನ್‍ನಿಂದ ಜಿಗಿದ ಗರ್ಭಿಣಿ ಸಾವು

    ಹೈದರಾಬಾದ್: ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ವ್ಯಾನ್‍ನಿಂದ ಜಿಗಿದ ಪರಿಣಾಮ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಮೇದಕ್ ಜಿಲ್ಲೆಯ ತೂಪ್ರನ್ ಬಳಿಯ ರವೆಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ. ಆದ್ರೆ ಭಾನುವರದಂದು ಈ ಘಟನೆ ಬೆಳಕಿಗೆ ಬಂದಿದೆ. ಮೃತ ಗರ್ಭಿಣಿಯನ್ನು ತೂಪ್ರನ್ ಮಂಡಲ್‍ನ ಪೋತುರಜುಪಲ್ಲಿ ನಿವಾಸಿಯಾದ ಕಲಾವತಿ(35) ಎಂದು ಗುರುತಿಸಲಾಗಿದೆ. ಇವರು 7 ತಿಂಗಳ ಗರ್ಭಿಣಿಯಾಗಿದ್ದರು.

    ಕಲಾವತಿ ಅವರು ಕೆಲಸ ಮುಗಿಸಿ ಮನೆಗೆ ಹೋಗಲು 7 ವರ್ಷದ ಮಗಳು ಶ್ರೀಶಾಳೊಂದಿಗೆ ಕೊಂಡಪಲ್ಲಿ ಗ್ರಾಮದಿಂದ ವ್ಯಾನ್‍ವೊಂದನ್ನ ಹತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕಲಾವತಿ ಅವರ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಸಹಾಯಕ್ಕಾಗಿ ಕಲಾವತಿ ಜೋರಾಗಿ ಕಿರುಚಿಕೊಂಡರೂ ಚಾಲಕ ಆಕೆಯ ಗ್ರಾಮದ ಬಳಿ ಬಸ್ ನಿಲ್ಲಿಸಿಲ್ಲ. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳಲು ಕಲಾವತಿ ವ್ಯಾನ್‍ನಿಂದ ಹೊರಗೆ ಜಿಗಿದಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

    ಚಲಿಸುತ್ತಿದ್ದ ವ್ಯನ್‍ನಿಂದ ಹೊರಗೆ ಹಾರಿದ ಕಾರಣ ಕಲವತಿ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಗಳು ಕಲಾವತಿ ಅವರ ಮಗಳು ಶ್ರಿಶಾಳನ್ನು ಕೂಡ ಕೆಲವು ಮೀಟರ್ ದೂರದಲ್ಲಿ ಎಸೆದುಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಶ್ರೀಶಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.

    ರಾಷ್ಟ್ರೀಯ ಹೆದ್ದಾರಿ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸಿರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • 3 ಸಾವಿರ ಕೆ.ಜಿ ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ರೂ ಚಾಲಕ ಬಚಾವ್

    3 ಸಾವಿರ ಕೆ.ಜಿ ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ರೂ ಚಾಲಕ ಬಚಾವ್

    ಫ್ಲೋರಿಡಾ: 3 ಸಾವಿರ ಕೆಜಿಗೂ ಹೆಚ್ಚು ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ದರೂ ಚಾಲಕ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ.

    ಶನಿವಾರ ಬೆಳಿಗ್ಗೆ 7.35ರ ಸುಮಾರಿನಲ್ಲಿ 36 ವರ್ಷದ ಜೀಸಸ್ ಅರ್ಮಾಂಡೋ ಎಸ್ಕೋಬಾರ್ ಎಂಬವರು ಪೊಂಟಿಯಾಕ್ ವ್ಯಾನ್‍ನಲ್ಲಿ ಹೋಗ್ತಿದ್ರು. ಇದೇ ವೇಳೆ ಸ್ಕ್ರ್ಯಾಪ್ ಮೆಟಲ್ ತುಂಬಿದ್ದ ಟ್ರಕ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಆಗ ಟ್ರಕ್‍ನಿಂದ ಗುಜರಿ ಪೈಪ್‍ವೊಂದು ಹಾರಿಕೊಂಡು ಬಂದು ಎಸ್ಕೊಬಾರ್ ಅವರ ವ್ಯಾನ್ ಮೇಲೆ ಬಿದ್ದಿದೆ. ಈ ಪೈಪ್ ಸುಮಾರು 7 ಸಾವಿರ ಪೌಂಡ್(ಅಂದಾಜು 3175 ಕೆಜಿ) ತೂಕವಿತ್ತು ಎಂದು ವರದಿಯಾಗಿದೆ.

    ಪೈಪ್ ಬಿದ್ದ ರಭಸಕ್ಕೆ ಚಾಲಕನ ಸೀಟ್ ಇದ್ದ ಭಾಗದಲ್ಲಿ ವ್ಯಾನಿನ ಮೇಲ್ಛಾವಣಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದ್ರೆ ಪವಾಡವೆಂಬಂತೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಯಾರಾದ್ರೂ ವ್ಯಾನ್‍ನ ಇನ್ಯಾವುದೇ ಸೀಟ್‍ನಲ್ಲಿ ಕುಳಿತಿದ್ದರೆ ಖಂಡಿತ ಸಾವನ್ನಪ್ಪುತ್ತಿದ್ರು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಚಾಲಕ ಬದುಕುಳಿದಿದ್ದಾರೆ ಎಂದು ಕೇಳಿ ಶಾಕ್ ಆಯಿತು ಎಂದು ಇಲ್ಲಿನ ರೀಸೈಕ್ಲಿಂಗ್ ಸೆಂಟರ್‍ನವರೊಬ್ಬರು ಹೇಳಿದ್ದಾರೆ. ನಿಜಕ್ಕೂ ಈ ಅವಘಢದಲ್ಲಿ ಯಾರೂ ಬದುಕಿರಲು ಸಾಧ್ಯವಿಲ್ಲ ಎಂದುಕೊಂಡಿದ್ದೆ ಅಂತ ನಜ್ಜುಗುಜ್ಜಾಗಿದ್ದ ವ್ಯಾನ್ ತೆರವು ಮಾಡಿದ ಲೂಪ್ ಗ್ರೋವರ್ ಹೇಳಿದ್ದಾರೆ.

    ಎಸ್ಕೋಬಾರ್ ಅವರನ್ನ ಭಾನುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಎಸ್ಕೊಬಾರ್ ಬದುಕುಳಿದಿರುವುದಕ್ಕೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಟ್ರಕ್ ಡ್ರೈವರ್ ಆಂಟೋನಿಯೋ ಸ್ಯಾಂಟಿಯಾಗೋ ವಾರ್ಟನ್‍ನ ಬೇಜಬ್ದಾರಿಯುತ ಚಾಲನೆಗೆ ದಂಡ ಹಾಕಲಾಗಿದೆ ಎಂದು ವರದಿಯಾಗಿದೆ.