Tag: van

  • ನೀವು ಬಸ್ಸು, ಟ್ರಕ್, ವ್ಯಾನ್ ಚಾಲಕರಾಗಬೇಕೇ? – ಇಲ್ಲಿದೆ ಸುವರ್ಣಾವಕಾಶ, ಕೂಡಲೇ ಹೆಸರು ನೋಂದಾಯಿಸಿಕೊಳ್ಳಿ

    ನೀವು ಬಸ್ಸು, ಟ್ರಕ್, ವ್ಯಾನ್ ಚಾಲಕರಾಗಬೇಕೇ? – ಇಲ್ಲಿದೆ ಸುವರ್ಣಾವಕಾಶ, ಕೂಡಲೇ ಹೆಸರು ನೋಂದಾಯಿಸಿಕೊಳ್ಳಿ

    ಬೆಂಗಳೂರು: ನೀವು ಬಸ್ಸು, ಲಾರಿ, ವ್ಯಾನ್ ಚಾಲಕರಾಗಬೇಕೇಂಬ ಕನಸು ಕಾಣುತ್ತಿದ್ದೀರಾ. ಹಾಗಿದ್ರೆ ನಿಮಗೊಂದು ಅವಕಾಶವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಘು ಮತ್ತು ಭಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಲು, ಅರ್ಹತೆ ಹಾಗೂ ದಾಖಲೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

    ಲಘು ವಾಹನ ಚಾಲನಾ ತರಬೇತಿ:
    ವಯೋಮಿತಿ : ಕನಿಷ್ಟ 18 ವರ್ಷ.
    ದಾಖಲೆಗಳು:
    – ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
    – ಆಧಾರ್ ಕಾರ್ಡ್.
    – 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.  ಇದನ್ನೂ ಓದಿ: ರಾಜಮನೆತನ, ಸರ್ಕಾರ ಮಧ್ಯೆ ನಿಲ್ಲದ ಚಾಮುಂಡಿ ಪ್ರಾಧಿಕಾರ ಸಂಘರ್ಷ – ಮೊದಲ ಸಭೆಯಲ್ಲಿ ಏನೇನು ಚರ್ಚೆಯಾಗಿದೆ?

    ಭಾರಿ ವಾಹನ ಚಾಲನಾ ತರಬೇತಿ:
    ವಯೋಮಿತಿ: ಕನಿಷ್ಟ 20 ವರ್ಷ.
    ದಾಖಲೆಗಳು:
    – ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
    – ಆಧಾರ್ ಕಾರ್ಡ್.
    – 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
    – ಲಘು ವಾಹನ ಪರವಾನಗಿ ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡಿರಬೇಕು. ಇದನ್ನೂ ಓದಿ: ಸಿಇಟಿ-ನೀಟ್ ಚಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ – ಕೆಇಎ

    ತರಬೇತಿ ಶುಲ್ಕ ಎಷ್ಟು?

    ವಸತಿ ಸಹಿತ:
    ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 13,000 ರೂ.
    ಭಾರಿ ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 16,700 ರೂ.

    ವಸತಿ ರಹಿತ:
    – ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 7,000 ರೂ.
    – ಭಾರಿ ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 11,000 ರೂ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ

    ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ:
    – ಲಘು ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – 4,250 ರೂ. (ವಸತಿ ಸಹಿತ) / 3,000 ರೂ. (ವಸತಿ ರಹಿತ).
    – ಭಾರಿ ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – 6,000 ರೂ. (ವಸತಿ ಸಹಿತ) / 5,000 ರೂ. (ವಸತಿ ರಹಿತ).

    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
    – 77609 91085
    – 6364858520 (ಕಛೇರಿ ವೇಳೆಯಲ್ಲಿ) ಇದನ್ನೂ ಓದಿ: ಮಾಜಿ ಆಯುಕ್ತ ಅಮಾನತಿನಿಂದ ಮುಡಾ ನಿರ್ಣಯ ತಪ್ಪೆಂದು ಸಾಬೀತು; ಈಗಲಾದ್ರೂ ಸಿಎಂ ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

    ಕಛೇರಿ ವಿಳಾಸ:
    ಚಾಲಕರ ತರಬೇತಿ ಕೇಂದ್ರ,
    ವಡ್ಡರಹಳ್ಳಿ, ಕಡಬಗೆರೆ ಅಂಚೆ,
    ಮಾಗಡಿ ಮುಖ್ಯ ರಸ್ತೆ,
    ಬೆಂಗಳೂರು-562130. ಇದನ್ನೂ ಓದಿ: ಚೆನ್ನೈ ಕಾರ್ಪೊರೇಷನ್ ಸಭೆಯಲ್ಲಿ ಡಿಕೆ ಶಿವಕುಮಾರ್ ಭಾಗಿ

  • ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ – 9 ಮಂದಿ ದುರ್ಮರಣ

    ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ – 9 ಮಂದಿ ದುರ್ಮರಣ

    ಜೈಪುರ: ಮದುವೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ವ್ಯಾನ್‌ಗೆ (Van) ಟ್ರಕ್ (Truck) ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ (Rajsthan) ಜಲಾವರ್ (Jhalawar) ಜಿಲ್ಲೆಯಲ್ಲಿ ನಡೆದಿದೆ.

    ಮೃತರೆಲ್ಲರೂ ರಾಜಸ್ಥಾನದ ಡುಂಗರ್‌ಗಾಂವ್‌ನ ಬಾಬ್ರಿ ಸಮುದಾಯದವರು ಎಂದು ಗುರುತಿಸಲಾಗಿದೆ. ಮೃತರು ಮಧ್ಯಪ್ರದೇಶದ ಖಿಲ್ಚಿಪುರದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಮತದಾನ ವೇಳೆ ಗುಂಡಿನ ದಾಳಿ, ಇವಿಎಂ ಧ್ವಂಸ – ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ

    ಭೀಕರ ಅಪಘಾತದಲ್ಲಿ ಮೂವರು ಪುರುಷರು ಸ್ಥಳದಲ್ಲೇ ಮೃತಪಟ್ಟರೆ, ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಅಕ್ಲೇರಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ

  • ಪಾಕ್‌ನಲ್ಲಿ ಪರ್ವತದಿಂದ ಕಮರಿಗೆ ಬಿದ್ದ ವ್ಯಾನ್‌ – 22 ಮಂದಿ ದುರ್ಮರಣ

    ಪಾಕ್‌ನಲ್ಲಿ ಪರ್ವತದಿಂದ ಕಮರಿಗೆ ಬಿದ್ದ ವ್ಯಾನ್‌ – 22 ಮಂದಿ ದುರ್ಮರಣ

    ಇಸ್ಲಾಮಾಬಾದ್‌: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವ್ಯಾನ್‌ 100 ಅಡಿಗೂ ಹೆಚ್ಚು ಆಳವಿದ್ದ ಕಮರಿಗೆ ಬಿದ್ದು 22 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಪಾಕಿಸ್ತಾನದ ಪರ್ವತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.

    ವ್ಯಾನ್ ನೂರಾರು ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಳಿತಪ್ಪಿದ ರೈಲು – 10 ಸಾವು, 50 ಮಂದಿಗೆ ಗಾಯ

    1,572 ಮೀಟರ್ ಎತ್ತರದಲ್ಲಿರುವ ಕಿಲ್ಲಾ ಸೈಫುಲ್ಲಾ ಬಳಿಯ ಅಖ್ತರ್‌ಜೈ ಎಂಬ ಪರ್ವತ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್‌ ಕಮರಿಗೆ ಉರುಳಿ ಅವಘಡ ಸಂಭವಿಸಿದೆ.

    PAK

    ಝೋಬ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಹಫೀಜ್ ಮಹಮ್ಮದ್ ಖಾಸಿಮ್, ಪ್ರಯಾಣಿಕರಿದ್ದ ವ್ಯಾನ್ ಲೊರಾಲಿಯಾದಿಂದ ಝೋಬ್ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ತಿಳಿಸಿದ್ದಾರೆ.

    “ವಾಹನವು ಅಖ್ತರ್‌ಜೈ ಬಳಿ ಬೆಟ್ಟದ ತುದಿಯಿಂದ ಬಿದ್ದಿದೆ. ಪರ್ವತಗಳಲ್ಲಿನ ಆಳವಾದ ಕಮರಿಗೆ ವ್ಯಾನ್‌ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ನಾವು ಇದುವರೆಗೆ 10 ಶವಗಳನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂದೆ ಇಂತಹ ಅವಘಡಗಳು ಸಂಭವಿಸಿದಂತೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • 13 ವರ್ಷದ ಬಾಲಕ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ – 9 ಮಂದಿ ಬಲಿ, ಹೊತ್ತಿ ಉರಿದ ವಾಹನ

    13 ವರ್ಷದ ಬಾಲಕ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ – 9 ಮಂದಿ ಬಲಿ, ಹೊತ್ತಿ ಉರಿದ ವಾಹನ

    ಹೂಸ್ಟನ್: 13 ವರ್ಷದ ಬಾಲಕನೊಬ್ಬ ಪಿಕಪ್ ಟ್ರಕ್ ಓಡಿಸುತ್ತ ವ್ಯಾನ್‍ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಶ್ಚಿಮ ಟೆಕ್ಸಾಸ್‍ನಲ್ಲಿ ನಡೆದಿದೆ.

    ನ್ಯೂ ಮೆಕ್ಸಿಕೋ ಮೂಲದ ಯೂನಿವರ್ಸಿಟಿ ಆಫ್ ಸೌತ್‍ವೆಸ್ಟ್ ಗಾಲ್ಫ್ ತಂಡದ ಆರು ಸದಸ್ಯರು ತಮ್ಮ ಶಿಕ್ಷಕರೊಂದಿಗೆ ವ್ಯಾನ್‍ನಲ್ಲಿ ರಾತ್ರಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ 13 ವರ್ಷದ ಬಾಲಕ ತನ್ನ ತಂದೆಯೊಂದಿಗೆ ಟ್ರಕ್ ಓಡಿಸುತ್ತ ವೇಗವಾಗಿ ಬಂದಿದ್ದಾನೆ. ನಿಯಂತ್ರಣ ಸಿಗದೇ ವ್ಯಾನ್‍ಗೆ ಬಾಲಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವ್ಯಾನ್‍ನಲ್ಲಿದ್ದ ಸುಮಾರು 9 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    13-Year-Old Drove Truck In Texas Collision That Killed 9, Federal Officials Say

    ಟೆಕ್ಸಾಸ್‍ನ ಆಂಡ್ರ್ಯೂಸ್ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಪಿಕಪ್ ಟ್ರಕ್‍ನಲ್ಲಿ ಸವಾರಿ ಮಾಡುತ್ತಿದ್ದ 13 ವರ್ಷದ ಹುಡುಗ ಮತ್ತು ಅವನ 38 ವರ್ಷದ ತಂದೆ ಕೂಡ ಸಾವನ್ನಪ್ಪಿದ್ದಾರೆ.

    ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಉಪಾಧ್ಯಕ್ಷ ಬ್ರೂಸ್ ಲ್ಯಾಂಡ್ಸ್‍ಬರ್ಗ್ ಈ ಕುರಿತು ಮಾಹಿತಿ ನೀಡಿದ್ದು, ಅಪಘಾತದ ಸಮಯದಲ್ಲಿ ಅಪ್ರಾಪ್ತ ವಯಸ್ಕನು ಪಿಕಪ್ ಟ್ರಕ್‍ನ ಚಕ್ರದ ಹಿಂದೆ ಸಿಕ್ಕಿಕೊಂಡಿದ್ದ. ಅಲ್ಲದೇ 13 ವರ್ಷದ ಬಾಲಕ ಟೆಕ್ಸಾಸ್ ಕಾನೂನನ್ನು ಉಲ್ಲಂಘಿಸುತ್ತಿದ್ದನು. ಟೆಕ್ಸಾಸ್ ನಿವಾಸಿಯು 15 ವರ್ಷ ಕಳೆದ ಮೇಲೆ ಪರವಾನಗಿಯನ್ನು ಪಡೆಯಬಹುದು. 21 ವರ್ಷಕ್ಕಿಂತ ಮೇಲ್ಪಟ್ಟ ನಂತರ ವಾಹನ ಚಾಲನೆ ಮಾಡಲು ಅನುವು ಮಾಡಿಕೊಡಲಾಗುತ್ತೆ. ಆದರೆ 13 ವರ್ಷದ ಬಾಲಕ ಕಾನೂನನ್ನು ಉಲ್ಲಂಘಿಸುತ್ತಿದ್ದಾನೆ ಎಂದು ವಿವರಿಸಿದರು.

    ವರದಿಗಳ ಪ್ರಕಾರ ಎರಡೂ ವಾಹನಗಳು ಹೆಚ್ಚು ವೇಗವಾಗಿ ಬರುತ್ತಿದ್ದು, ನಿಯಂತ್ರಣ ಸಿಗದೇ ಈ ಭಾರೀ ಅಪಘಾತ ನಡೆದಿದೆ. ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದು, ಇಬ್ಬರು ವಿದ್ಯಾರ್ಥಿಗಳು, ಇಬ್ಬರೂ ಕೆನಡಿಯನ್ನರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

  • ಲಾರಿಗೆ ವ್ಯಾನ್ ಡಿಕ್ಕಿ – 4  ಮೀನುಗಾರರು ಸಾವು

    ಲಾರಿಗೆ ವ್ಯಾನ್ ಡಿಕ್ಕಿ – 4 ಮೀನುಗಾರರು ಸಾವು

    ತಿರುವನಂತಪುರಂ: ಮಂಗಳವಾರ ಮುಂಜಾನೆ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದೆ.

    ಕರುಣಾಂಬರಂ (56) ಮತ್ತು ಬಾರ್ಕುಮಾನ್ಸ್ (45), ಜಸ್ಟಿನ್ (56) ಮತ್ತು ತಮಿಳುನಾಡು ಮೂಲದ ಬಿಜು (35) ಮೃತ ದುರ್ದೈವಿಗಳು. ಮೀನುಗಾರರು ಮೀನುಗಾರಿಕೆಗಾಗಿ ವಿಝಿಂಜಂನಿಂದ ಬೇಪೂರ್‍ಗೆ ತೆರಳುತ್ತಿದ್ದ ವ್ಯಾನ್ ನಿಂದಕರ್ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ವ್ಯಾನ್‍ನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಕರುನಾಗಪಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ 12 ಮಂದಿ ತಮಿಳುನಾಡು ಮೂಲದವರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಗಾಯಗೊಂಡ ಇಬ್ಬರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

  • ಭೀಕರ ರಸ್ತೆ ಅಪಘಾತ – ಚಾಲಕ, 5 ಮಂದಿ ವಿದ್ಯಾರ್ಥಿಗಳು ದುರ್ಮರಣ

    ಭೀಕರ ರಸ್ತೆ ಅಪಘಾತ – ಚಾಲಕ, 5 ಮಂದಿ ವಿದ್ಯಾರ್ಥಿಗಳು ದುರ್ಮರಣ

    – ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು
    – ಘಟನೆಯಲ್ಲಿ ನಾಲ್ವರಿಗೆ ಗಾಯ

    ಜೈಪುರ:  REE (Rajasthan Eligibility Exam) ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಹಾಗೂ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೈಪುರದ ಚಕ್ಸು ಹೆದ್ದಾರಿಯಲ್ಲಿ ಇಂದು ನಡೆದಿದೆ.

    ಬರಾನ್‍ನಿಂದ ರೀಟ್ ಪರೀಕ್ಷೆ ಬರೆಯಲು 11 ಪರೀಕ್ಷಾರ್ಥಿಗಳು ವ್ಯಾನ್‍ನಲ್ಲಿ ತೆರಳುತ್ತಿದ್ದ ವೇಳೆ, ಚಕ್ಸುವಿನ ರಾಷ್ಟ್ರೀಯ ಹೆದ್ದಾರಿ 12ರ ನಿಮೋಡಿಯಾ ಬಳಿ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರು ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Do not Disturb : ನಟಿ ರಾಗಿಣಿ ಪ್ರಜ್ವಲ್

    ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಕ್ಸು ಪೊಲೀಸರು, ತನಿಖೆ ಆರಂಭಿಸಿದ್ದಾರೆ.

  • ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

    ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

    ಗದಗ: ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟ ಕಂಡು ಗದಗ-ಬೆಟಗೇರಿ ಅವಳಿ ನಗರದ ಜನರು ಗೊಂದಲಕ್ಕೀಡಾದ ಘಟನೆ ನಡೆದಿದೆ. ನಗರದ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ರಸ್ತೆಯಲ್ಲಿ ನಕಲಿ ಪೊಲೀಸ್ ವಾಹನ ನಿಂತಿದೆ.

    ಈ ಬೊಲೆರೊ ವಾಹನಕ್ಕೆ ಮುಂದೊಂದು ನಂಬರ್, ಹಿಂದೊಂದು ಎರಡೆರಡು ನಂಬರ್ ಪ್ಲೇಟ್ ಇರುವುದನ್ನು ಅನೇಕರು ಗಮನಿಸಿದ್ದಾರೆ. ನೋಡಿದ ಜನರಿಗೆ ಕೆಲಕಾಲ ಗೊಂದಲ ಸೃಷ್ಟಿಯಾಗಿದೆ. ವಾಹನಕ್ಕೆ ಎರಡು ನಂಬರ್ ಇರಲ್ವಲ್ಲಾ, ಏನಿದು ಅಂತ ತಲೆಕೆಡಿಸಿಕೊಂಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ:ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ

    ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ಆಗ ಪೊಲೀಸ್ ಸಿಬ್ಬಂದಿ ಒಂದು ಕ್ಷಣ ಕಂಗಾಲಾಗಿದ್ದರು. ಪರಿಶೀಲಿಸಿದಾಗ ವಾಸ್ತವಿಕತೆ ಬಯಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ಕ್ಷೇತ್ರಪತಿ” ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಈ ಬೊಲೆರೋ ವಾಹನ ಬಳಸಲಾಗಿತ್ತು ಎಂದು ತಿಳಿದು ಬಂದಿದೆ. ಪರವಾನಿಗೆ ಪತ್ರ ನೋಡಿ ನಂತರ ಶೂಟಿಂಗ್ ಸ್ಥಳ ಬಿಟ್ಟು ಎಲ್ಲಂದರಲ್ಲಿ ಓಡಾಡದಂತೆ ವಾಹನ ಚಾಲಕನಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ:ವಿಕೇಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

  • ಹೆದ್ದಾರಿಯಲ್ಲಿ ರೈತನಿಗೆ ಗುದ್ದಿ, ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ವ್ಯಾನ್

    ಹೆದ್ದಾರಿಯಲ್ಲಿ ರೈತನಿಗೆ ಗುದ್ದಿ, ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ವ್ಯಾನ್

    – ಅತಿ ವೇಗಕ್ಕೆ ನಜ್ಜುಗುಜ್ಜಾದ ವ್ಯಾನ್ ಮುಂಭಾಗ
    – ರೈತ, ವಾಹನ ಚಾಲಕ ಸ್ಥಳದಲ್ಲೇ ಸಾವು

    ಚಂಡೀಗಢ: ವ್ಯಾನ್ ರೈತನಿಗೆ ಗುದ್ದಿ, ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಕುಂಡಲಿ ಬಾರ್ಡರ್ ನಲ್ಲಿ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದೆ.

    50 ವರ್ಷದ ರೈತ ಸುರೇಂದ್ರ ಮತ್ತು ಚಾಲಕ ರಾಜೇಶ್ ಅಪಘಾತದಲ್ಲಿ ಮೃತ ದುರ್ದೈವಿಗಳು. ಘಟನೆ ಸಂಬಂಧ ಸುರೇಂದ್ರ ಸಂಬಂಧಿ ಕುಂಡಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರೈತ ತಮ್ಮ ಬೆಂಬಲಿಗರೊಂದಿಗೆ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳುತ್ತಿದ್ದರು.

    ಮಾರ್ಗ ಮಧ್ಯೆ ರೈತರು ತಮ್ಮ ಟ್ರ್ಯಾಕ್ಟರ್ ಹೆದ್ದಾರಿ ಬದಿ ನಿಲ್ಲಿಸಿದ ವೇಳೆ ವೇಗವಾಗಿ ಬಂದ ವ್ಯಾನ್ ರೈತಬನಿಗೆ ಗುದ್ದಿದೆ. ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್ ಟ್ರೊಲಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತ ತೀವ್ರತೆಗೆ ವ್ಯಾನ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಮೃತ ಸುರೇಂದ್ರ ಪಂಜಾಬ್ ರಾಜ್ಯದ ನವಾಶಹರ್ ನಿವಾಸಿ ಎಂದು ತಿಳಿದು ಬಂದಿದೆ.

  • ಭೀಕರ ರಸ್ತೆ ಅಪಘಾತ- 10 ಜನ ಶಬರಿಮಲೆ ಯಾತ್ರಿಗಳ ದುರ್ಮರಣ

    ಭೀಕರ ರಸ್ತೆ ಅಪಘಾತ- 10 ಜನ ಶಬರಿಮಲೆ ಯಾತ್ರಿಗಳ ದುರ್ಮರಣ

    ಚೆನ್ನೈ: ವ್ಯಾನ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ 10 ಜನ ಶಬರಿಮಲೆ ಯಾತ್ರಿಗಳು ಮೃತಪಟ್ಟ ದುರ್ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ತೆಲಂಗಾಣ ಮೂಲದ ಆರ್.ನಾಗರಾಜ್ (35), ಎ ಮಹೇಶ್ (28), ಎಂ.ಕುಮಾರ್ (22), ಶಾಮ್ (22), ಎಸ್.ಪ್ರವೀಣ್ (24), ಕೃಷ್ಣ (35), ಎಂ ಸಾಯಿ (22), ಆಂಜನೇಯಲು (25), ಸುರೇಶ್ (25) ಸೇರಿದಂತೆ ಚಾಲಕ ಕೂಡ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಕೆ.ಪೂಕಾವುಡ್ (28), ಡಿ.ರಾಜು (28), ಎಸ್.ವೆಂಕಟೇಶ್ (25), ಎನ್.ಸೈಲಾಮಲ್ ಹಾಗೂ ನರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆಯ ವಿವರ:
    15 ಜನ ಶಬರಿಮಲೆ ಯಾತ್ರಿಗಳು ರಾಮೇಶ್ವರಕ್ಕೆ ಭೇಟಿ ನೀಡಿ ರಾಮೇಶ್ವರಂ-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮರಳುತ್ತಿದ್ದರು. ಈ ವೇಳೆ ತಿರುಮಯಂನ ಪದುಕೋಟೈ ಸಮೀಪದಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ 10 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಗೊಂಡಿದ್ದ 5 ಜನರನ್ನು ತಿರುಮಯಂನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ಮತ್ತಿನಲ್ಲಿ ವ್ಯಾನ್ ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ KSRP ಪೊಲೀಸ್!

    ಕುಡಿದ ಮತ್ತಿನಲ್ಲಿ ವ್ಯಾನ್ ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ KSRP ಪೊಲೀಸ್!

    ಬೆಂಗಳೂರು: ಕೆಎಸ್ಆರ್ ಪಿ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ಇಲಾಖೆಯ ವ್ಯಾನ್ ನನ್ನು ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗಸಂದ್ರ ಬಳಿ ನಡೆದಿದೆ.

    ಹೊಸೂರು ಮುಖ್ಯರಸ್ತೆಯ ಸಿಂಗಸಂದ್ರ ಬಳಿ ಬುಧವಾರ ಕೆಎಸ್ಆರ್ ಪಿ 9ನೇ ಪಡೆಯ ಡ್ರೈವರ್ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿಯಾಗಿ ಇಲಾಖೆಯ ವ್ಯಾನ್ ಚಲಾಯಿಸಿದ ಪರಿಣಾಮ ಸರಣಿ ಅಪಘಾತವಾಗಿದ್ದು, ಒಂದು ಕಾರು ಹಾಗೂ ಬೈಕ್ ಜಖಂಗೊಂಡಿದೆ.

    ಸ್ಥಳದಲ್ಲಿದ್ದ ಸಾರ್ವಜನಿಕರು ಕುಡುಕ ಪೊಲೀಸಪ್ಪನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಇನ್ನು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿ ಕುಡುಕ ಪೊಲೀಸಪ್ಪ ವ್ಯಾನ್ ಸೈಡಿಗೆ ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.