Tag: Vamika

  • ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್

    ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್

    ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸಿನಿಮಾ ಕೆಲಸದ ನಿಮಿತ್ತ ಮಗಳು ವಮಿಕಾ ಜೊತೆ ಕೋಲ್ಕತ್ತಾಗೆ ಹಾರಿದ್ದಾರೆ. ಮಗಳ ಜೊತೆ ಅನುಷ್ಕಾ ಟ್ರಾವೆಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹಿಂದಿ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ ಅನುಷ್ಕಾ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನ ಮದುವೆಯಾದ ಮೇಲೆ ಕೊಂಚ ಚಿತ್ರರಂಗದಿಂದ ದೂರ ಸರಿದಿದ್ದರು. ಮಗಳ ಆರೈಕೆಯಲ್ಲಿ ಬ್ಯುಸಿಯಾದರು. ಈಗ ಮತ್ತೆ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ತಾವು ಮಗಳ ಜೊತೆ ಕೋಲ್ಕತ್ತಾದಲ್ಲಿ ಬೀಡು ಬಿಟ್ಟಿರುವ ಫೋಟೋ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)


    ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ನಟಿ ಅನುಷ್ಕಾ, ಚಿತ್ರದ ಪ್ರಾಜೆಕ್ಟ್‌ವೊಂದಕ್ಕಾಗಿ ಕೋಲ್ಕತ್ತಾಗೆ ಬಂದಿದ್ದಾರೆ. ತಮ್ಮ ಕೆಲಸದ ಬಳಿಕ ಮಗಳು ವಮಿಕಾ ಜೊತೆ ಕೋಲ್ಕತ್ತಾದ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಫೋಟೋ ಶೇರ್ ಮಾಡಿದ್ದಕ್ಕೆ ಗರಂ ಆದ ಅನುಷ್ಕಾ ಶರ್ಮಾ

    ಮಗಳ ಫೋಟೋ ಶೇರ್ ಮಾಡಿದ್ದಕ್ಕೆ ಗರಂ ಆದ ಅನುಷ್ಕಾ ಶರ್ಮಾ

    ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊನ್ನೆಯಷ್ಟೇ ಮಗಳನ್ನು ಬಿಟ್ಟು ವಿದೇಶ ಪ್ರವಾಸದಲ್ಲಿದ್ದರು. ಅದರಲ್ಲೂ ಬೀಚ್ ಮತ್ತಿತರ ಬಳಿ ಈ ದಂಪತಿ ಮೋಜುಮಸ್ತಿ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಈ ವೇಳೆಯಲ್ಲಿ ಮಗಳು ವಮಿಕಾ ಇಲ್ಲದೇ ಇರುವುದಕ್ಕೆ ಅನೇಕರು ‘ಮಗಳು ಎಲ್ಲಿ’ ಎಂದು ಪ್ರಶ್ನೆ ಮಾಡಿದ್ದರು. ಮಗು ಒಂಟಿಯಾಗಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದರು.

    ಮಗಳ ಫೋಟೋವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿದಕ್ಕೆ ಮತ್ತು ಅನುಮತಿ ಇಲ್ಲದೇ ಮಗಳ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ ಅನುಷ್ಕಾ ಶರ್ಮಾ. ನನ್ನ ಮಗಳನ್ನು ನಾನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಅಲ್ಲದೇ, ಮಗಳ ಫೋಟೋ ತಗೆಯದಂತೆ ಹಲವಾರು ಬಾರಿ ವಿನಂತಿಸಿದ್ದೇನೆ. ಆದರೂ, ಫೋಟೋ ಕ್ಲಿಕ್ ಮಾಡುತ್ತಾರೆ. ಈ ವಿಷಯದಲ್ಲಿ ನನಗೆ ಅಸಾಮಾಧನವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್

    ಮಗಳ ಆರೈಕೆಯ ಬಗ್ಗೆ ಯಾರೂ ನಮಗೆ ಪಾಠ ಮಾಡಬೇಕಿಲ್ಲ. ನಿಮಗಿಂತಲೂ ಹೆತ್ತವರಿಗೆ ಮಕ್ಕಳ ಬಗ್ಗೆ ಕಾಳಜಿ ಇರುತ್ತದೆ. ಈ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ನೇರವಾಗಿಯೇ ಅನುಷ್ಕಾ ಶರ್ಮಾ ಹೇಳಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

  • ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆ ಅರ್ಧಶತಕವನ್ನು ಮಗಳು ವಮಿಕಾಗೆ ಸಮರ್ಪಿಸಿದ್ದಾರೆ. ವಿರಾಟ್ ಕೋಹ್ಲಿ ಅವರ ಮಗಳು ವಮಿಕಾ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿದೆ. ಈ ವಿಚಾರವಾಗಿ ವಿರುಷ್ಕಾ ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಹಲವು ದಿನಗಳಿಂದ ರನ್ ಬರ ಅನುಭವಿಸುತ್ತಿದ್ದರು. ಬಳಿಕ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಅರ್ಧಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ಈ ವೇಳೆ ಪುತ್ರಿ ವಮಿಕಾ ಕಿರುನಗೆ ಬೀರುತ್ತಾ ಕೊಹ್ಲಿಯನ್ನು ನೋಡಿದ್ದಳು. ಕೊಹ್ಲಿ ತನ್ನ ಬ್ಯಾಟ್‍ನ್ನು ಮಗುವನ್ನು ಎತ್ತಿ ಆಡಿಸಿದಂತೆ ಮಾಡಿ ನನ್ನ ಅರ್ಧಶತಕ ನನ್ನ ಮಗಳಿಗೆ ಎಂಬಂತೆ ಸನ್ನೆ ಮಾಡಿ ಸಂಭ್ರಮಿಸಿದ್ದರು. ಈ ವೀಡಿಯೋದಲ್ಲಿ ಮಗಳ ವಮೀಕಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಮಗಳ ವಿಚಾರಗಿ ಗೌಪ್ಯತೆ ಕಾಪಾಡಿಕೊಂಡಿದ್ದ ಈ ಜೋಡಿ ಇದೀಗ ವೀಡಿಯೋ ವೈರಲ್ ಆಗಿರುವ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

    ಎಲ್ಲರಿಗೂ ಹಾಯ್ ನಿನ್ನೆ ಸ್ಟೇಡಿಯಂನಲ್ಲಿ ನಮ್ಮ ಮಗಳ ಫೋಟೋವನ್ನು ಸೆರೆಹಿಡಿಯಲಾಯಿತು ಮತ್ತು ಅದನ್ನು ವೈರಲ್ ಮಾಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆ. ನಮಗೆ ಗೊತ್ತಿಲ್ಲದಂತೆಯೇ ಅದನ್ನು ಚಿತ್ರಿಸಲಾಗಿದೆ. ನಮ್ಮನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ ಮತ್ತು ಮನವಿ ಮೊದಲಿನಂತೆಯೇ ಇರಲಿದೆ. ವಮಿಕಾಳ ಫೋಟೋ ಕ್ಲಿಕ್ ಮಾಡದಿದ್ದರೆ, ಪ್ರಕಟ ಮಾಡದಿದ್ದರೆ ಅದಕ್ಕಾಗಿ ಧನ್ಯವಾದಗಳು ಎಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನ್‍ಸ್ಟಾಗ್ರಾಮ್ ಸ್ಟೋರಿ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:  ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

    ಕೊಹ್ಲಿ ಪುತ್ರಿ ವಮಿಕಾಗೆ ಜನವರಿ 11 ರಂದು 1 ವರ್ಷವಾಗಿದೆ. 2021 ಜನವರಿ 11 ರಂದು ವಮಿಕಾ ಹುಟ್ಟಿದ್ದಳು. ಈ ವರ್ಷ ಕೊಹ್ಲಿ ಆಫ್ರಿಕಾದಲ್ಲಿ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಇಷ್ಟು ದಿನಗಳ ಕಾಲ ಫೋಟೋದಲ್ಲಿ ಮಗಳ ಮುಖ ಕಾಣಿಸಿಕೊಳ್ಳದಂತೆ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದರು. ಇಂದು ವಮಿಕಾ ಮುಖ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿನಲ್ಲಿ ಸುಂದರವಾಗಿ ಸೆರೆಯಾಗಿ ವೈರಲ್ ಆಗಿದೆ.

  • ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

    ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

    ಕೇಪ್‍ಟೌನ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆ ಅರ್ಧಶತಕವನ್ನು ಮಗಳು ವಮಿಕಾಗೆ ಸಮರ್ಪಿಸಿದ್ದಾರೆ.

    ವಿರಾಟ್ ಕೊಹ್ಲಿ ಹಲವು ದಿನಗಳಿಂದ ರನ್ ಬರ ಅನುಭವಿಸುತ್ತಿದ್ದರು. ಬಳಿಕ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸಿ ಅರ್ಧಶತಕ ಸಿಡಿಸಿ ಮಿಂಚಿದರು. ಅರ್ಧಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ವೇಳೆ ಪುತ್ರಿ ವಮಿಕಾ ಕಿರುನಗೆ ಬೀರುತ್ತಾ ಕೊಹ್ಲಿಯನ್ನು ನೋಡಿದಳು. ಕೊಹ್ಲಿ ತನ್ನ ಬ್ಯಾಟ್‍ನ್ನು ಮಗುವನ್ನು ಎತ್ತಿ ಆಡಿಸಿದಂತೆ ಮಾಡಿ ನನ್ನ ಅರ್ಧಶತಕ ನನ್ನ ಮಗಳಿಗೆ ಎಂಬಂತೆ ಸನ್ನೆ ಮಾಡಿ ಸಂಭ್ರಮಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

    ಕೊಹ್ಲಿ ಈ ರೀತಿ ಸಂಭ್ರಮಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಈ ಪಂದ್ಯದಲ್ಲಿ 65 ರನ್ (84 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

    ಕೊಹ್ಲಿ ಪುತ್ರಿ ವಮಿಕಾಗೆ ಜನವರಿ 11 ರಂದು 1 ವರ್ಷವಾಗಿದೆ. 2021 ಜನವರಿ 11 ರಂದು ವಮಿಕಾ ಹುಟ್ಟಿದ್ದಳು. ಈ ವರ್ಷ ಕೊಹ್ಲಿ ಆಫ್ರಿಕಾದಲ್ಲಿ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಇಷ್ಟು ದಿನಗಳ ಕಾಲ ಫೋಟೋದಲ್ಲಿ ಮಗಳ ಮುಖ ಕಾಣಿಸಿಕೊಳ್ಳದಂತೆ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದರು. ಇಂದು ವಮಿಕಾ ಮುಖ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿನಲ್ಲಿ ಸುಂದರವಾಗಿ ಸೆರೆಯಾಗಿ ವೈರಲ್ ಆಗಿದೆ.

  • ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ದಂಪತಿ ಮುದ್ದು ಮಗಳಾದ, ವಮಿಕಾ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪುತ್ರಿ ವಮಿಕಾ ಜೊತೆ ಕಾಲಕಳೆಯುತ್ತಿರುವ ಕೊಹ್ಲಿ ಫೋಟೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪುತ್ರಿ ಜೊತೆ ಆಟವಾಡುತ್ತಿರುವ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೂ ವಮಿಕಾ ಮುಖದ ಫೋಟೋ ರಿವೀಲ್ ಮಾಡಿಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಮಿಕಾ ಮುಖ ಕಾಣುತ್ತಿಲ್ಲ. ಈ ಹಿಂದಿನಂತೆ ರಹಸ್ಯ ಉಳಿಸಿಕೊಂಡೇ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

     

    View this post on Instagram

     

    A post shared by AnushkaSharma1588 (@anushkasharma)

    ಐಪಿಎಲ್ ಟೂರ್ನಿ ಮುಗಿಸಿದ ಕೊಹ್ಲಿ ಕ್ವಾರಂಟೈನ್‍ಲ್ಲಿದ್ದರು. ಹೀಗಾಗಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭೇಟಿಯಾಗಿರಲಿಲ್ಲ. ಕ್ವಾರಂಟೈನ್ ಮುಗಿಸಿದ ಕೊಹ್ಲಿ ಮತ್ತೆ ಜೊತೆಯಾಗಿದ್ದಾರೆ. ಕೊಹ್ಲಿ ಸದ್ಯ ಪಂದ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಪಂದ್ಯಕ್ಕಾಗಿ ಕೌಂಟ್‍ಡೌನ್ ಆರಂಭಗೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು

  • ವಿರುಷ್ಕಾ ಪ್ರೀತಿಯ ಪುತ್ರಿಗೆ 6 ತಿಂಗಳು- ಕ್ಯೂಟ್ ಫೋಟೋ ಹಂಚಿಕೊಂಡ ಅನುಷ್ಕಾ

    ವಿರುಷ್ಕಾ ಪ್ರೀತಿಯ ಪುತ್ರಿಗೆ 6 ತಿಂಗಳು- ಕ್ಯೂಟ್ ಫೋಟೋ ಹಂಚಿಕೊಂಡ ಅನುಷ್ಕಾ

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರೀತಿಯ ಪುತ್ರಿ ವಮಿಕಾ ಜನನವಾಗಿ 6 ತಿಂಗಳಾಗಿದ್ದು, ಕ್ಯೂಟ್ ಫೋಟೋಗಳ ಮೂಲಕ ಅನುಷ್ಕಾ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ.

    ಮಗು ಜನನವಾಗಿ ಜುಲೈ 11ಕ್ಕೆ ಮಗು 6 ತಿಂಗಳಾಗಿದ್ದು, ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ

     

    View this post on Instagram

     

    A post shared by AnushkaSharma1588 (@anushkasharma)

    ಇತ್ತೀಚೆಗಷ್ಟೇ ಮಗುವನ್ನು ಎತ್ತಿಕೊಂಡು ಯುಕೆಯ ರಸ್ತೆಯಲ್ಲಿ ನಿಂತಿದ್ದ ಫೋಟೋವನ್ನು ಹಂಚಿಕೊಂಡಿದ್ದ ಅನುಷ್ಕಾ, ಇದೀಗ ಮಗುವಿಗೆ 6 ತಿಂಗಳು ತುಂಬಿರುವ ಸಂತಸದ ಸುದ್ದಿಯನ್ನು ಹೊರ ಹಾಕಿದ್ದಾರೆ. ಕೇಕ್‍ನ ಅರ್ಧ ಫೋಟೋ ಹಾಗೂ ವಮಿಕಾ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ತಾವು ಕಳೆದ ಸಂತಸದ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಅವಳ ಒಂದು ನಗು ನಮ್ಮ ಸುತ್ತಲಿನ ಜಗತ್ತಿನ್ನೇ ಬದಲಿಸಿತು. ಇವಳು ನಮ್ಮತ್ತ ನೋಡಿದಾಗಲೆಲ್ಲ, ನಾವಿಬ್ಬರೂ ಇನ್ನೂ ಹೆಚ್ಚಿನ ಪ್ರೀತಿಯಿಂದ ಜೀವಿಸಬಹುದು. ನಮ್ಮ ಮೂವರಿಗೂ ಹ್ಯಾಪಿ 6 ಮಂಥ್ಸ್ ಎಂದು ಬರೆದುಕೊಂಡಿದ್ದಾರೆ.

    ಇದೇ ವರ್ಷ ಜನವರಿ 11ರಂದು ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮಗಳಿಗೆ ವಿರುಷ್ಕಾ ದಂಪತಿ ವಮಿಕಾ ಎಂದು ಹೆಸರಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಅನುಷ್ಕಾ ಮಗುವಿನೊಂದಿಗಿನ ಫೋಟೋಗಳನ್ನು ಆಗಾಗ ಇನ್‍ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಯುಕೆಯ ರಸ್ತೆಯಲ್ಲಿ ಮಗುವನ್ನು ಎತ್ತಿಕೊಂಡಿದ್ದ ಚಿತ್ರವನ್ನು ಸಹ ಹಂಚಿಕೊಂಡಿದ್ದರು.