Tag: Vamanjoor

  • ಪ್ರವೀಣ್ ಕುಮಾರ್ ಬಿಡುಗಡೆಗೆ ವಿರೋಧ – ವಿಶೇಷ ಸಭೆ ಕರೆದ ಆರಗ ಜ್ಞಾನೇಂದ್ರ

    ಪ್ರವೀಣ್ ಕುಮಾರ್ ಬಿಡುಗಡೆಗೆ ವಿರೋಧ – ವಿಶೇಷ ಸಭೆ ಕರೆದ ಆರಗ ಜ್ಞಾನೇಂದ್ರ

    ಬೆಂಗಳೂರು: 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿದ್ದ ಪ್ರವೀಣ್ ಕುಮಾರ್ ಎಂಬಾತ ಬಿಡುಗಡೆಯಾಗುತ್ತಿದ್ದಾನೆ. ಆದರೆ ಆತನ ಕುಟುಂಬಸ್ಥರೇ ಅಪರಾಧಿಯನ್ನು ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ಪ್ರವೀಣ್ ಕುಟುಂಬಸ್ಥರು ಇಂದು ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಚಿವರು, ಪ್ರವೀಣ್‍ನಿಗೆ 14 ವರ್ಷದ ಹಿಂದೆ ಶಿಕ್ಷೆ ಆಗಿದೆ. ಮೊದಲು ಗಲ್ಲುಶಿಕ್ಷೆ ಆಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷಗೆ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಗಳು ಅದನ್ನು ಎತ್ತಿ ಹಿಡಿದಿದ್ದರು. ಅಪರಾಧಿಯ ಹಿನ್ನೆಲೆ ಈಗ ನಮಗೆ ಗೊತ್ತಾಗ್ತಿದೆ. ಅವರ ಮನೆಯವರು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಬಿಡುಗಡೆ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಹಣದಾಸೆಗಾಗಿ ಉಂಡ ಮನೆಗೇ ದ್ರೋಹ ಬಗೆದ ಅಪರಾಧಿಗೆ ಬಿಡುಗಡೆ ಭಾಗ್ಯ – ಜೈಲಿನಿಂದ ಹೊರಬಿಡದಂತೆ ಗೋಗರೆದ ಕುಟುಂಬಸ್ಥರು

    ಹೊರಗೆ ಬಂದ್ರೆ ಮತ್ತೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ. ಬೆಳಗಾವಿ ಜೈಲಿನಿಂದ ಕೋರ್ಟ್‍ಗೆ ಬರೋವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆಯಾಗಿ ಮಗು ಕೂಡ ಇತ್ತು ಎಂದು ಕುಟುಂಬದವರು ಹೇಳಿದ್ದಾರೆ. ಹಳೆಯ ಕೇಸ್‌ನಲ್ಲಿ 14 ವರ್ಷ ಈತನಿಗೆ ಸನ್ನಡತೆ ಇದೆ. ಹೀಗಾಗಿ ಆತನನ್ನು ಬಿಡುಗಡೆ ಮಾಡುವ ಪ್ರಸ್ತಾಪ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಸಚಿವರು, ನಮಗೆ ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ: ನಿತಿನ್ ಗಡ್ಕರಿ

    ಇದೊಂದು ವಿಶೇಷ ಕೇಸ್. ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡ್ತೀವಿ. ಎರಡು ಕುಟುಂಬಕ್ಕೆ ಭದ್ರತೆ ಕೊಡ್ತೀವಿ. ಕಳೆದ ಕ್ಯಾಬಿನೆಟ್‍ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡಿದವರನ್ನು ಬಿಡಬಾರದು ಎಂದು ನಿಯಮ ಮಾಡಿದ್ದೇವೆ. ಇನ್ನು ಮೇಲೆ ಇಂತಹ ಕೇಸ್‍ನಲ್ಲಿ ಅಪರಾಧಿಯನ್ನು ಬಿಡುಗಡೆ ಮಾಡುವುದಿಲ್ಲ. ಹಿಂದಿನ ನಿಯಮದ ಪ್ರಕಾರ ಈತನಿಗೆ ಬಿಡುಗಡೆಗೆ ಶಿಫಾರಸು ಬಂದಿದೆ. ಇವತ್ತು ಅಧಿಕಾರಿಗಳ ಸಭೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ. 4 ಜನರನ್ನು ಕೊಂದಿದ್ದಾನೆ. ಅವನು ಸೈಕೋ ಅನ್ನಿಸುತ್ತದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣದಾಸೆಗಾಗಿ ಉಂಡ ಮನೆಗೇ ದ್ರೋಹ ಬಗೆದ ಅಪರಾಧಿಗೆ ಬಿಡುಗಡೆ ಭಾಗ್ಯ – ಜೈಲಿನಿಂದ ಹೊರಬಿಡದಂತೆ ಗೋಗರೆದ ಕುಟುಂಬಸ್ಥರು

    ಹಣದಾಸೆಗಾಗಿ ಉಂಡ ಮನೆಗೇ ದ್ರೋಹ ಬಗೆದ ಅಪರಾಧಿಗೆ ಬಿಡುಗಡೆ ಭಾಗ್ಯ – ಜೈಲಿನಿಂದ ಹೊರಬಿಡದಂತೆ ಗೋಗರೆದ ಕುಟುಂಬಸ್ಥರು

    ಮಂಗಳೂರು: 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವದು. ಒಂದೇ ರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದ ತನ್ನ ಸಂಬಂಧಿಕ ನಾಲ್ವರನ್ನು ಭಯಾನಕವಾಗಿ ಕೊಂದು ಹಾಕಿದ್ದ ಘಟನೆ. ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಸುದೀರ್ಘ 28 ವರ್ಷಗಳ ಜೈಲು ವಾಸದ ಬಳಿಕ ಬಿಡುಗಡೆಯಾಗುತ್ತಿದ್ದಾನೆ. ಆದರೆ ಆತನ ಕುಟುಂಬಸ್ಥರೇ ಅಪರಾಧಿಯನ್ನು ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಗೋಗರೆದಿದ್ದಾರೆ.

    ಚಿನ್ನ ಮತ್ತು ಹಣದಾಸೆಗಾಗಿ ಉಂಡ ಮನೆಗೇ ದ್ರೋಹ ಬಗೆದವನ ಕತೆಯಿದು. ವೃತ್ತಿಯಲ್ಲಿ ಟೈಲರ್ ಆಗಿದ್ದ ವ್ಯಕ್ತಿ ಜೂಜಾಟಕ್ಕೆ ಬಿದ್ದು ತನ್ನ ಅತ್ತೆ ಮತ್ತು ಅವರ ಕುಟುಂಬಸ್ಥರನ್ನೇ ಕೊಂದು ಹಾಕಿದ್ದ ಘಟನೆಯದು. ಸುದೀರ್ಘ 28 ವರ್ಷಗಳ ಹಿಂದೆ ಅಂದರೆ, 1993ರ ಫೆಬ್ರವರಿ 23ರಂದು ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ಘಟನೆ ನಡೆದಿತ್ತು. ವಾಮಂಜೂರಿನಲ್ಲಿ ನೆಲೆಸಿದ್ದ ಪ್ರವೀಣ್ ತನ್ನ ಸೋದರತ್ತೆ 75 ವರ್ಷದ ಅಪ್ಪಿ ಶೇರಿಗಾರ್ತಿ, ಆಕೆಯ ಮಗಳು 36 ವರ್ಷದ ಶಕುಂತಳಾ, 9 ವರ್ಷದ ಮೊಮ್ಮಗಳು ದೀಪಿಕಾ ಮತ್ತು ಇನ್ನೊಬ್ಬ ಮಗ 30 ವರ್ಷದ ಗೋವಿಂದನನ್ನು ಭೀಭತ್ಸವಾಗಿ ಕೊಲ್ಲಲಾಗಿತ್ತು. ಅದೇ ಮನೆಯಲ್ಲಿ ಉಂಡು ಮಲಗಿದ್ದ ಪ್ರವೀಣ್ ಕೊಲೆ ಆರೋಪಿಯಾಗಿದ್ದ. ನಂತರ ಕಂಬಿ ಏನಿಸುತ್ತಿದ್ದ. ಇದೀಗ ಸುದೀರ್ಘ 23 ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿದ್ದ ಪ್ರವೀಣನನ್ನು ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ. ಆದರೆ ನಾಲ್ವರನ್ನು ಭೀಕರವಾಗಿ ಕೊಂದಿದ್ದ ಪ್ರವೀಣ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲೇಬಾರದು. ಆತ ಜೈಲಿನಿಂದ ಹೊರಬಂದಲ್ಲಿ ನಮ್ಮನ್ನೂ ಸಾಯಿಸುತ್ತಾನೆ ಎಂಬ ಭೀತಿಯಿದೆ ಎಂದು ಆತನ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ್ದ ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ

    ಕೃತ್ಯ ನಡೆದು ಒಂದೇ ವಾರದಲ್ಲಿ ಆಗಿನ ಎಸ್‍ಐ ಜಯಂತ್ ಶೆಟ್ಟಿ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹತ್ತಿರದ ಸಂಬಂಧಿಕರನ್ನೇ ಚಿನ್ನಕ್ಕಾಗಿ ಕೊಂದಿದ್ದ ಕ್ರೌರ್ಯಕ್ಕಾಗಿ ಆರೋಪಿಗೆ ಮಂಗಳೂರಿನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು ಬಳಿಕ ಸುಪ್ರೀಂ ಕೋರ್ಟ್ ಜೀವಾವಧಿಗೆ ಇಳಿಸಿತ್ತು. ಇದೀಗ ಸನ್ನಡತೆ ಆಧಾರದಲ್ಲಿ ಪ್ರವೀಣ್‍ನನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಪ್ರವೀಣ್‍ನ ಹೆಂಡತಿ ಸೇರಿದಂತೆ ಕುಟುಂಬಸ್ಥರು ಮಂಗಳೂರಿನ ಪೊಲೀಸ್ ಕಮಿಷನರ್‌ ಶಶಿ ಕುಮಾರ್‌ರನ್ನು  ಭೇಟಿಯಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೈಲಿನಿಂದ ಆತ ಹೊರಬಂದಲ್ಲಿ ನಮ್ಮ ಜೀವಕ್ಕೂ ಅಪಾಯವಿದೆ. ಹಣ, ಆಸ್ತಿಗಾಗಿ ಆತ ಏನು ಮಾಡುವುದಕ್ಕೂ ಹೇಸದ ವ್ಯಕ್ತಿ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸ್ ಕಮೀಷನರ್ ಸಂತ್ರಸ್ತರ ಹೇಳಿಕೆಗಳನ್ನು ಪಡೆದು ಪ್ರವೀಣ್‍ನ ಬಿಡುಗಡೆಗೆ ವಿರೋಧವಿದೆ ಎಂದು ವರದಿ ತಯಾರಿಸಿ ಸರ್ಕಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ

    ಆದರೆ ಬೆಳಗಾವಿ ಜೈಲಿನ ಅಧಿಕಾರಿಗಳು ಈಗಾಗಲೇ ಪ್ರವೀಣ್‍ನ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಮತ್ತೆ ತಡೆ ಹೇರುತ್ತಾರೆಯೇ ಎನ್ನುವ ಬಗ್ಗೆ ಕುಟುಂಬಸ್ಥರಲ್ಲೂ ಆತಂಕ ಇದೆ.

    Live Tv
    [brid partner=56869869 player=32851 video=960834 autoplay=true]