Tag: vamana film

  • ‘ವಾಮನ’ ಇಂಟ್ಯೂಡಕ್ಷನ್ ಸಾಂಗ್‌ನಲ್ಲಿ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶೋಕ್ದಾರ್ ಧನ್ವೀರ್‌

    ‘ವಾಮನ’ ಇಂಟ್ಯೂಡಕ್ಷನ್ ಸಾಂಗ್‌ನಲ್ಲಿ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶೋಕ್ದಾರ್ ಧನ್ವೀರ್‌

    ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ (Dhanveer Gowda) ನಟನೆಯ ಬಹುನಿರೀಕ್ಷಿತ ‘ವಾಮನ’ (Vamana) ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ನಾಯಕನ ಇಂಟ್ಯೂಡಕ್ಷನ್ ಹಾಡಿಗೆ ಧನ್ವೀರ್ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ್ದಾರೆ.

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ (Chethan Gowda) ಅದ್ಧೂರಿಯಾಗಿ ನಿರ್ಮಿಸಿರುವ ‘ವಾಮನʼ (Vamana) ಸಿನಿಮಾವನ್ನು ಯುವ ನಿರ್ದೇಶಕ ಶಂಕರ್ ರಾಮನ್ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ:‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

    ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ 4 ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್‌ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ ಎಂದರು.

    ನಾಯಕ ಧನ್ವೀರ್ ಮಾತನಾಡಿ, ವಾಮನ ಇದು ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ನ್ನ ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್ ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲಾ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ ಎಂದರು.

    ನಾಯಕಿ ರೀಷ್ಮಾ ನಾಣಯ್ಯ (Reeshma Nanaiah) ಮಾತಾನಾಡಿ, ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್ ನಲ್ಲಿಯೇ ಫೈಟ್ ಇದೆ ಎಂದರು.

    ನಿರ್ಮಾಪಕ ಚೇತನ್ ಗೌಡ ಮಾತನಾಡಿ, ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಿರ್ದೇಶಕರು, ಆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಿಯೂ ಶ್ರಮ ಕೊಡಲಿಲ್ಲ. ನಾನು ಶೂಟಿಂಗ್ ಸ್ಪಾರ್ಟ್‌ಗೆ ಹೋಗಿರುವುದು ಕೇವಲ ನಾಲ್ಕು ದಿನವಷ್ಟೇ. ಅವರ ಮನೆ ಸಿನಿಮಾ ಎನ್ನುವಂತೆ ಎಲ್ಲರು ಕೆಲಸ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಬೇಕೆಂದು ಬಂದಿದ್ದೆ. ಒಳ್ಳೆಯ ಸಿನಿಮಾ ಆಗಿದೆ. ಕನ್ನಡ ಸಿನಿಮಾರಂಗಕ್ಕೆ ನಮ್ಮೊಂದು ಕೊಡುಗೆ ಇರಲಿ ಎಂದು ಮಾಡಿದ್ದೇವೆ. ಕೈ ಹಿಡಿದು ಆಶೀರ್ವದಿಸಿ ಎಂದರು.

    ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah) ಅಭಿನಯಿಸಿದ್ದು, ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ, ಭೂಷಣ್ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂಟಿಂಗ್‌ ಮುಗಿಸಿ ತೆರೆಗೆ ಅಬ್ಬರಿಸಲು ಸಜ್ಜಾದ ಧನ್ವೀರ್‌ ನಟನೆಯ ʻವಾಮನʼ ಸಿನಿಮಾ

    ಶೂಟಿಂಗ್‌ ಮುಗಿಸಿ ತೆರೆಗೆ ಅಬ್ಬರಿಸಲು ಸಜ್ಜಾದ ಧನ್ವೀರ್‌ ನಟನೆಯ ʻವಾಮನʼ ಸಿನಿಮಾ

    ಶೋಕ್ದಾರ್ ಧನ್ವೀರ್ ಗೌಡ (Dhanveer Gowda) ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಸಿನಿಮಾ ‘ವಾಮನ’ (Vamana Film). ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ನಿರ್ದೇಶನ ಮಾಡಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ (Reeshma Nanaih)ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ನಿರ್ದೇಶಕ ಶಂಕರ್ ರಾಮನ್ (Shankar Raman) ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಹಲವು ಸಿನಿಮಾದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ‘ವಾಮನ’ ಸಿನಿಮಾ ಸತತ ಒಂದು ವರ್ಷದ ಜರ್ನಿ. ಇವತ್ತು ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗ್ತಿದೆ ಈ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯುತ್ತಿದ್ದೇವೆ. 72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಕಲಾವಿದರು, ತಾಂತ್ರಿಕ ಬಳಗ ತುಂಬಾ ಸರ್ಪೋಟಿವ್ ಆಗಿದ್ದಾರೆ. ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರುತ್ತಾನೆ. ಒಳ್ಳೆಯವನಾಗಬೇಕಾ..? ಕೆಟ್ಟವನಾಗಬೇಕಾ ಎನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಭಿನ್ನತೆಯಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಇಲ್ಲಿವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು ನಿರ್ಮಾಪಕ ಚೇತನ್ ಗೌಡ ಅವರ ಸಹಕಾರದಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ನಾಲ್ಕು ಸಾಂಗ್, ನಾಲ್ಕು ಫೈಟ್ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಟ ಧನ್ವೀರ್ ಗೌಡ ಮಾತನಾಡಿ ಇವತ್ತು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಈ ಕಥೆ ಮೂಲಕ ಕರ್ನಾಟಕ ಜನತೆಯನ್ನು ರಂಜಿಸಲು ಬರುತ್ತಿದ್ದೇವೆ. ಚಿತ್ರದಲ್ಲಿ ಗುಣ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಪಾತ್ರ. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ ಆ ರೀತಿಯ ಪಾತ್ರ. ಇದು ನನ್ನ ಮೂರನೇ ಸಿನಿಮಾ ಎಲ್ಲರ ಆಶೀರ್ವಾದ ಈ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ದರು.

    ಸತತ 72 ದಿನಗಳ ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದು ನಿರ್ಮಾಪಕ ಚೇತನ್‌ ಗೌಡ ತಿಳಿಸಿದ್ದರು.

    ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ಅಡಿ ಚೇತನ್ ಗೌಡ ‘ವಾಮನ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ, ಅರುಣ್ ಒಳಗೊಂಡ ದೊಡ್ಡ ತಾರಾಬಳಗವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನೃತ್ಯ ನಿರ್ದೇಶಕ ಭೂಷಣ್ ನೃತ್ಯ ಸಂಯೋಜನೆ ಜೊತೆಗೆ ಧನ್ವೀರ್ ಸ್ನೇಹಿತನ ಪಾತ್ರದಲ್ಲೂ ಸಹ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

    `ವಾಮನ’ ಧನ್ವೀರ್‌ಗೆ ಜೊತೆಯಾದ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ

    ʻಏಕ್ ಲವ್ ಯಾʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ನಟಿಸಿದ ಮೊದಲ ಚಿತ್ರದಲ್ಲೇ ಗಮನ ಸೆಳೆದ ನಟಿ ರೀಷ್ಮಾ ವಾಮನ ಧನ್ವೀರ್‌ಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.

    ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ `ವಾಮನ’ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. `ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್‌ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

    ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸ್ತಿದ್ದು, ನಾಯಕನ ಪಯಣದಲ್ಲಿ ನಾಯಕಿ ಹೇಗೆ ಬೆಂಬಲವಾಗಿ ನಿಲ್ಲುತ್ತಾಳೆ ಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು. ಪಕ್ಕ ಔಟ್ ಆ್ಯಂಡ್ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿರುವ `ವಾಮನ’ ಚಿತ್ರದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಕೂಡ ಇದೆ.

    ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ಧನ್ವೀರ್ ಫಸ್ಟ್ ಲುಕ್ ಹಾಗೂ ಮೇಕಿಂಗ್ ಝಲಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಖತ್ ಮಾಸ್ ಅವತಾರದಲ್ಲಿ ಶೋಕ್ದಾರ್ ಮಿಂಚಿದ್ದು, ಶೀಘ್ರದಲ್ಲಿ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಗೆ ಸಜ್ಜಾಗ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

    ಇನ್ನೂ ರೀಷ್ಮಾ ನಾಣಯ್ಯ ನಟನೆಯ ಮುಂಬರುವ ಚಿತ್ರ, ಶ್ರೇಯಸ್ ಜತೆ `ರಾಣಾ’, ಗೋಲ್ಡನ್ ಸ್ಟಾರ್ ಜತೆ `ಬಾನದಾರಿಯಲ್ಲಿ’ ಇದೀಗ ವಾಮನ ಸಿನಿಮಾಗಳಿದ್ದು, ಒಂದಿಷ್ಟು ಸಿನಿಮಾಗಳು ಮಾತುಕತೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಬ್ಯೂಟಿ ರೀಷ್ಮಾ ತಮ್ಮ ಸಿನಿಮಾಗಳ ಮೂಲಕ ಎಷ್ಟರ ಮಟ್ಟಿಗೆ ಸೌಂಡ್ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]