Tag: value

  • ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ನವದೆಹಲಿ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವ ಕಳವಳದ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೂ. ಮೌಲ್ಯ ಕುಸಿಯುತ್ತಿಲ್ಲ. ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದರು.

    ರಾಜ್ಯಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ರೂ. ಮೌಲ್ಯ ಕುಸಿತದ ಬಗ್ಗೆ ಮಾತನಾಡಿದ ಸೀತಾರಾಮನ್, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಥಳೀಯ ಕರೆನ್ಸಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಒಂದು ವೇಳೆ ಅಸ್ಥಿರತೆ ಕಂಡುಬಂದಲ್ಲಿ ಮಾತ್ರವೇ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    ಆರ್‌ಬಿಐ ಮಧ್ಯಸ್ಥಿಕೆಯಿಂದ ರೂ. ಮೌಲ್ಯದ ಏರಿಕೆ ಅಥವಾ ಇಳಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದು ಕೇವಲ ಅಸ್ಥಿರತೆಯನ್ನು ತಪ್ಪಿಸಲು ಹಾಗೂ ಅದರ ಹಾದಿಯನ್ನು ಕಂಡುಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು.

    ಭಾರತವೂ ಕೂಡಾ ಇತರ ಹಲವು ದೇಶಗಳಂತೆ. ಅದು ತನ್ನ ಕರೆನ್ಸಿಯ ಮೌಲ್ಯವನ್ನು ಇತರ ದೇಶಗಳೊಂದಿಗೆ ತನಗೆ ಬೇಕಿದ್ದಂತೆ ಏರಿಕೆ ಅಥವಾ ಇಳಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ರೂ. ಮೌಲ್ಯವನ್ನು ಬಲಪಡಿಸಲು ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಂಡು ಆರ್‌ಬಿಐ ಹಾಗೂ ಸಚಿವಾಲಯಗಳೊಂದಿಗೆ ತಕ್ಕಮಟ್ಟಿನ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: NIA ಕಚೇರಿ ವ್ಯಾಪ್ತಿ ಬೆಂಗಳೂರಿಗೆ ವಿಸ್ತರಿಸಲು ಶೋಭಾ ಕರಂದ್ಲಾಜೆ ಮನವಿ

    ಭಾರತೀಯ ರೂ. ತನ್ನ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ವಾಸ್ತವವಾಗಿ ಭಾರತೀಯ ರೂಪಯಿಯನ್ನು ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅದರ ಮೌಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ ಎಂದು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಮುಂಬೈ: ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿಯ ಮೌಲ್ಯ ಗುರುವಾರ ಅಮೆರಿಕನ್ ಡಾಲರ್ ಎದುರು 77.81ರಷ್ಟಕ್ಕೆ ಕುಸಿತವಾಗಿದೆ.

    ಬುಧವಾರ ರೂಪಾಯಿ ಮೌಲ್ಯ 77.68ರಷ್ಟು ಇದ್ದು, ದಿನದ ಅಂತರದ (ಇಂಟ್ರಾ ಡೇ) ದಾಖಲೆಯ ಕನಿಷ್ಠ ಮಟ್ಟ 13 ಪೈಸೆಯಷ್ಟು ಕುಸಿದಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 77.81ಕ್ಕೆ ತಲುಪಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಮೇ 4 ರಂದು ನಡೆದ ನಿಗದಿತ ಸಭೆಯಲ್ಲಿ ಆರ್‌ಬಿಐ 40 ಬಿಪಿಎಸ್ ಹೆಚ್ಚಿಸಿದ್ದು, ಇದು ದರದ ಏರಿಕೆಗೆ ಕಾರಣವಾಗಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 123.43 ಡಾಲರ್ ಇದ್ದು, 0.12 ರಷ್ಟು ಕುಸಿದಿದೆ. ಇದನ್ನೂ ಓದಿ: ಕೋಮು ದ್ವೇಷಭಾಷಣ – ಓವೈಸಿ, ನೂಪುರ್ ಶರ್ಮಾ ವಿರುದ್ಧ FIR

    ದೇಶೀಯ ಈಕ್ವಿಟಿ ಮಾರುಕಟ್ಟೆಯ ಎದುರು 30 ಷೇರುಗಳ ಸೆನ್ಸೆಕ್ಸ್ 10.05 ಪಾಯಿಂಟ್ ಅಥವಾ 0.02 ರಷ್ಟು ಹೆಚ್ಚಿ 54,902.54 ರಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ನಿಫ್ಟಿ 5.65 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಮುನ್ನಡೆ ಸಾಧಿಸಿ ಶೇಕಡಾ 0.03 ತಲುಪಿದೆ.

  • ಚಿನ್ನ, ಪ್ಲಾಟಿನಂಗಿಂತಲೂ ನೀರು ಅಮೂಲ್ಯ, ಅದನ್ನು ಉಳಿಸಿ: ಎಸ್‍ಪಿಬಿ ಮನವಿ

    ಚಿನ್ನ, ಪ್ಲಾಟಿನಂಗಿಂತಲೂ ನೀರು ಅಮೂಲ್ಯ, ಅದನ್ನು ಉಳಿಸಿ: ಎಸ್‍ಪಿಬಿ ಮನವಿ

    ಚೆನ್ನೈ: ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ ಎಂದು ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಮನವಿ ಮಾಡಿದ್ದಾರೆ.

    ತಮಿಳಿನ `ಗೂರ್ಖಾ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‍ಪಿಬಿ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಳಿ ಮನವಿ ಮಾಡಿಕೊಂಡರು. ಹಾಗೆಯೇ ಚಿನ್ನ, ಪ್ಲಾಟಿನಂಗಿಂತಲೂ ನೀರು ಅತ್ಯಮೂಲ್ಯವಾದದ್ದು. ಜೀವಿಸಲು ನೀರು ಬೇಕು. ನೀರಿಗೆ ನಾವು ಬೆಲೆಕಟ್ಟಲು ಸಾಧ್ಯವಿಲ್ಲ. ಚೆನ್ನೈ ಅಂತಹ ಮಹಾನಗರಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ದೇಶದ ಹಲವೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದರು.

    ಹಾಗೆಯೇ ಇಂದು ನಾನು ಮನೆಯಲ್ಲಿ ಅರ್ಧ ಬಕೆಟ್ ನೀರಿಗಾಗಿ ಅರ್ಧ ಗಂಟೆ ಕಾಯುವಂತಾಯಿತು. ಕೊನೆಗೆ ಸ್ಥಾನಕ್ಕೆ ನೀರಿಲ್ಲದಂತಾಯಿತು ಎಂದು ತಾವು ನೀರಿಗಾಗಿ ಎದುರಿಸಿದ ಪರಿಸ್ಥಿತಿಯನ್ನು ಹಂಚಿಕೊಂಡರು.

    ಇಂದು ಹನಿ ನೀರಿಗಾಗಿ ಅದೆಷ್ಟೋ ಜನರು ಪರದಾಟುತ್ತಿದ್ದಾರೆ. ಇಂದು ನೀರಿನ ಸಮಸ್ಯೆ ಕಾಡುತ್ತಿರುವುದಕ್ಕೆ ನಾವುಗಳೇ ಕಾರಣ. ನೀರನ್ನು ಸುಮ್ಮನೆ ಪೋಲು ಮಾಡುವುದನ್ನು ಬಿಡಿ. ನೀರನ್ನು ಉಳಿಸಲು ಕೆಲವು ಸರಳ ವಿಧಾನಗಳು ನಮ್ಮೆಲ್ಲರಿಗೂ ಗೊತ್ತಿರುತ್ತದೆ. ಆದರೆ ನಾವು ಅದನ್ನು ಪಾಲಿಸುವುದಿಲ್ಲ. ಪ್ರತಿದಿನ ನಾನಾ ರೀತಿಯ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು, ವಾರಕ್ಕೆ ಕೇವಲ ಎರಡು ಜೊತೆ ಬಟ್ಟೆ ಧರಿಸಿ. ಇದರಿಂದ ಬಟ್ಟೆ ತೊಳೆಯಲು ಖರ್ಚಾಗುವ ಅನಗತ್ಯ ನೀರು ಉಳಿಯುತ್ತದೆ. ನೀರನ್ನು ಮಿತವಾಗಿ ಬಳಿಸಿ ಎಂದು ಕಳವಳ ವ್ಯಕ್ತಪಡಿಸಿದರು.

    ಚೆನ್ನೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ನೀರಿನ ಸಮಸ್ಯೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಕುಡುಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಎರಡು ದಿನಕೊಮ್ಮೆ ಅಥವಾ ವಾರಕ್ಕೊಮ್ಮೆ ಟ್ಯಾಂಕರ್ ಗಳಲ್ಲಿ ಎಲ್ಲೆಡೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಚೆನ್ನೈನ ದೊಡ್ಡ ದೊಡ್ಡ ಐಟಿ ಕಂಪನಿಗಳಿಗೂ ನೀರಿ ಅಭಾವದ ಬಿಸಿ ಮುಟ್ಟಿದ್ದು, ಹೊರರಾಜ್ಯಗಳಿಂದ ಕೆಲಸಕ್ಕೆ ಬಂದ ಸಿಬ್ಬಂದಿಗಳಿಗೆ ನೀರು ಪೂರೈಸಲಾಗದೆ ರಜೆ ನೀಡಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ಬೆಂಗಳೂರು: ವಿಶ್ವ ಸುಂದರಿ ಆದರೆ ಸಾಕು ಎಲ್ಲರೂ ಅವರನ್ನೇ ನೋಡುತ್ತಾರೆ. ಅದರಲ್ಲೂ ಅವರು ಧರಿಸುವ ಕಿರೀಟದ ಮೇಲೆಯೇ ಪ್ರೇಕ್ಷಕರ ಕಣ್ಣು ಇರುತ್ತದೆ. ಸುಂದರಿಯರು ಧರಿಸುವ ಕೀರಿಟದ ಬೆಲೆ ಎಷ್ಟು? ಅದನ್ನು ಯಾವುದರಿಂದ ತಯಾರಿಸುತ್ತಾರೆ? ಹೇಗೆಲ್ಲಾ ವಿನ್ಯಾಸಗೊಳಿಸುತ್ತಾರೆ? ಎನ್ನುವ ಕುತೂಹಲಕಾರಿ ಪ್ರಶ್ನೆಗಳು ನಿಮಗೆ ಮೂಡುವುದು ಸಹಜ. ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎನ್ನುವುಂತೆ ಕೆಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಮಿಸ್ ವರ್ಲ್ಡ್:

    ಬರೋಬ್ಬರಿ 4.95 ಕೋಟಿ ರೂ. ಮೌಲ್ಯದ ಕಿರೀಟವನ್ನು ಮಾನುಷಿ ಚಿಲ್ಲರ್ ಮುಡಿಗೇರಿಸಿಕೊಂಡಿದ್ದಾರೆ. ವಿಶ್ವಸುಂದರಿಗೆ ತೊಡುವ ಕಿರೀಟಗಳನ್ನು ಚಿನ್ನ, ವಜ್ರ ಹಾಗೂ ಪ್ಲಾಟಿನಂ ನಿಂದ ವಿಶೇಷವಾಗಿ ತಯಾರಿಸಲಾಗುತ್ತದೆ.

    ಮಿಸ್ ಯೂನಿವರ್ಸ್:

    ಈ ಕಿರೀಟವನ್ನು ಝೆಕ್ ಜ್ಯುವೆಲರ್ ನವರು ವಿನ್ಯಾಸ ಮಾಡುತ್ತಾರೆ. ಇದರಲ್ಲಿ ನ್ಯೂಯಾರ್ಕ್ ಸ್ಕೈಲೈನ್ ಪ್ರತಿನಿಧಿಸುವಂತಹ ಉದ್ದನೆಯ ಕ್ರಿಸ್ಟಲ್ ಹರಳುಗಳನ್ನು ಕಿರೀಟದ ಡಿಸೈನ್‍ನೊಳಗೆ ಸೇರಿಸಲಾಗುತ್ತದೆ. ಸಫೈರ್‍ನೊಂದಿಗೆ ವಜ್ರ ಖಚಿತವಾಗಿರುತ್ತದೆ. ಇದರ ಮೌಲ್ಯ ರೂ.1.98 ಕೋಟಿ ರೂ.

    ಮಿಸ್ ಇಂಟರ್‍ನ್ಯಾಷನಲ್:

    ಇದು ನೋಡಲು ಸಿಂಪಲ್ ಆಗಿದ್ದು, ಸುಂದರವಾಗಿರುತ್ತದೆ. ಇದರಲ್ಲಿ ಶುದ್ಧ ಬೆಳ್ಳಿ ಹಾಗೂ ವಜ್ರದ ಹರಳು ಹಾಕಿ ವಿನ್ಯಾಸ ಮಾಡಲಾಗುತ್ತದೆ. ಇದರ ಮೌಲ್ಯ ರೂ.2.30 ಕೋಟಿ ರೂ.

    ಮಿಸ್ ಗ್ರ್ಯಾಂಡ್ ಇಂಟರ್‍ನ್ಯಾಷನಲ್:

    ಸಂಪೂರ್ಣವಾಗಿ ಬಂಗಾರದಿಂದ ಕಿರೀಟವನ್ನು ತಯಾರಿಸಲಾಗುತ್ತದೆ. ಇದು ನೋಡಲು ಯುದ್ಧದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಹಾಗೆ ಇರುತ್ತದೆ. ಇದರ ತಯಾರಿಕೆಗೆ ಹಾರ್ಟ್ ಶೇಪ್‍ನ ಜೇಡ್ ಜೆಮ್ ಸ್ಟೋನ್ ಬಳಸಲಾಗುತ್ತದೆ. ಜೊತೆಗೆ ಹೊಸ ಬ್ಯೂಟಿ ಪೇಜೆಂಟ್‍ನ ಕ್ರೌನ್ ಬಳಸಿ ಚಿನ್ನದಿಂದ ಮಾಡಲಾಗಿರುತ್ತದೆ. ಇದರ ಬೆಲೆ ರೂ.1.98 ಕೋಟಿ ರೂ.

    ಮಿಸ್ ಅರ್ಥ್:

    ಈ ಕಿರೀಟವನ್ನು ಸ್ಟೆರ್ಲಿಂಗ್ ಬೆಳ್ಳಿ ಮತ್ತು ಡೈಮಂಡ್‍ನಿಂದ ರೂಪಿಸಲಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಬೆಲೆ ಬಾಳುವ ರತ್ನಗಳನ್ನು ಕಿರೀಟದಲ್ಲಿ ಜೋಡಿಸಿರುತ್ತದೆ. ಇದರ ಮೌಲ್ಯ ರೂ. 3.55 ಕೋಟಿ ರೂ.