Tag: valuation

  • ಮೌಲ್ಯಮಾಪನ ಬಹಿಷ್ಕಾರ – ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರ ಹೋರಾಟ, ಸರ್ಕಾರಕ್ಕೆ ಡೆಡ್ ಲೈನ್

    ಮೌಲ್ಯಮಾಪನ ಬಹಿಷ್ಕಾರ – ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರ ಹೋರಾಟ, ಸರ್ಕಾರಕ್ಕೆ ಡೆಡ್ ಲೈನ್

    ಬೆಂಗಳೂರು: ವೇತನ ತಾರತಮ್ಯ ಸೇರಿದಂತೆ 20ಕ್ಕೂ ಹೆಚ್ಚು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಯುಸಿ ಉಪನ್ಯಾಸರ ಹೋರಾಟ ತೀವ್ರಗೊಂಡಿದೆ. ಈಗಾಗಲೇ ಎರಡು ಹಂತದ ಹೋರಾಟ ಮಾಡಿರುವ ಉಪನ್ಯಾಸಕರು ಇಂದು ಮೂರನೇ ಹಂತದ ಹೋರಾಟ ಪ್ರಾರಂಭ ಮಾಡಿದ್ದಾರೆ.

    ಇಂದಿನಿಂದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಿದೆ. ಪರೀಕ್ಷಾ ಕೆಲಸಕ್ಕೆ ಹಾಜರಾಗಿರುವ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿ ಪರೀಕ್ಷೆ ಕೆಲಸ ನಿರ್ವಹಣೆ ಮಾಡ್ತಿದ್ದಾರೆ.

    ಫೆಬ್ರವರಿ 24 ವರೆಗೂ ಪರೀಕ್ಷೆ ಗಳು ನಡೆಯಲಿದೆ. ಪರೀಕ್ಷೆ ಮುಗಿಯೋವರೆಗೂ ಕಪ್ಪು ಪಟ್ಟಿ ಧರಿಸಲು ಉಪನ್ಯಾಸರು ನಿರ್ಧಾರ ಮಾಡಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡೋಕೆ ಕಪ್ಪು ಪಟ್ಟಿ ಧರಿಸಿದ್ದು, ಇದಕ್ಕೂ ಸರ್ಕಾರ ಬಗ್ಗದೇ ಹೋದ್ರೆ ಏಪ್ರಿಲ್ ನಲ್ಲಿ ಪ್ರಾರಂಭ ಆಗಲಿರುವ ದ್ವೀತಿಯ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಮಾಡೋದಾಗಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಸರ್ಕಾರ ಉಪನ್ಯಾಸಕರ ಸಂಘದ ಜೊತೆ ಮಾತುಕತೆ ನಡೆಸಬೇಕು ಅಂತ ಆಗ್ರಹಿಸಿದ್ದಾರೆ.

    ಉಪನ್ಯಾಸಕರ ಪ್ರಮುಖ ಬೇಡಿಕೆಗಳು
    ವೇತನ ತಾರತಮ್ಯ ನಿವಾರಣೆಗೆ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹ
    ಉಪನ್ಯಾಸಕರಿಗೆ ನೀಡಬೇಕಾದ 2ನೇ ಇನ್ಕ್ರಿಮೆಂಟ್ ಕೂಡಲೇ ಬಿಡುಗಡೆಗೊಳಿಸಬೇಕು.
    ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು.
    ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಮಾಡಬೇಕು.
    ಉಪನ್ಯಾಸಕರಿಗೆ ನಿಗದಿ ಮಾಡಿರುವ ಬೋಧನಾ ಅವಧಿ ಕಡಿಮೆ ಮಾಡಬೇಕು.

  • ಮೌಲ್ಯಮಾಪಕರ ಎಡವಟ್ಟು – ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡೋರ ಮಗಳು ಫೇಲ್

    ಮೌಲ್ಯಮಾಪಕರ ಎಡವಟ್ಟು – ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡೋರ ಮಗಳು ಫೇಲ್

    ಬೆಂಗಳೂರು: ಮೌಲ್ಯಮಾಪಕರ ಚೆಲ್ಲಾಟಕ್ಕೆ ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡುವವರ ಮಗಳು 509 ಅಂಕ ಪಡೆದರೂ ಫೇಲ್ ಆಗಿದ್ದಾಳೆ.

    ನಾಗವಾರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಶಾಲಿನಿ ಏಪ್ರಿಲ್ 30 ರಂದು ಫಲಿತಾಂಶ ನೋಡಿದಾಗ ಒಟ್ಟು 509 ಅಂಕಗಳನ್ನು ತೆಗೆದಿದ್ದಳು. 509 ಅಂಕ ಪಡೆದಿದ್ದರೂ ಸಹ ಶಾಲಿನಿ ಕನ್ನಡದಲ್ಲಿ ಫೇಲ್ ಆಗಿದ್ದಳು.

    ಫಲಿತಾಂಶ ಬಂದ ಒಂದು ವಾರದಿಂದ ಫೇಲ್ ಆಗಿದ್ದೇನೆ ಎಂದು ಶಾಲಿನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಮಗಳ ಸ್ಥಿತಿಯನ್ನು ನೋಡಿದ ಪೋಷಕರು ಶಾಲಿನಿಯ ಉತ್ತರ ಪತ್ರಿಕೆ ತರಿಸಿಕೊಂಡಿದ್ದರು. ಈ ವೇಳೆ ಮೌಲ್ಯಮಾಪಕರ ಬೇಜವಾಬ್ದಾರಿ ಬೆಳಕಿಗೆ ಬಂದಿದೆ.

    ಆಗಿದ್ದೇನು?
    ಮೌಲ್ಯಮಾಪಕರು ದ್ವಿತೀಯ ಭಾಷೆ ಕನ್ನಡ ಪರೀಕ್ಷೆಯಲ್ಲಿ 75 ಅಂಕಗಳನ್ನು ಪರಿಗಣಿಸದೆಯೇ ಬಿಟ್ಟು ಬಿಟ್ಟಿದ್ದಾರೆ. 17 ಪೇಜ್ ಉತ್ತರ ಬರೆದು 17 ಅಂಕ ಎಂದು ಪರಿಗಣಿಸಿದ್ದಾರೆ. ಕನ್ನಡದಲ್ಲಿ 75 ಅಂಕ ಗಳಿಸಿದರೂ ಮೌಲ್ಯಮಾಪಕರು 17 ಅಂಕ ಮಾತ್ರ ನೀಡಿದ್ದಾರೆ.

    ಸದ್ಯ ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಎಡವಟ್ಟಿಗೆ ಶಾಲಿನಿ ತಂದೆ ಅನ್ಬು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಇಂದಿನಿಂದ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ

    ಇಂದಿನಿಂದ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ

    ಬೆಂಗಳೂರು: ಮುಂಜಾಗ್ರತೆ, ಭಾರೀ ಭದ್ರತೆಯಿಂದ ಯಾವುದೇ ಅವಾಂತರವಿಲ್ಲದೆ ಅಂತ್ಯವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಇಂದಿನಿಂದ ಆರಂಭವಾಗಲಿದೆ.

    ಮೌಲ್ಯಮಾಪನಕ್ಕೆ ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯಾದ್ಯಂತ 48 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಮಂಗಳೂರು, ದಾವಣಗೆರೆ ಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನ ಮಾಡಲಾಗಿದೆ.

    ಈ ಬಾರಿ 21 ಸಾವಿರ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಲಿದ್ದಾರೆ. 15 ದಿನಗಳ ಕಾಲ ಮೌಲ್ಯಮಾಪನ ನಡೆಯಲಿದೆ. ಅಂದುಕೊಂಡಂತೆ ಎಲ್ಲವೂ ನಡೆದ್ರೆ ಮೌಲ್ಯಮಾಪನ ಪ್ರಕ್ರಿಯೆ ಮುಗಿಸಿ ಮೇ 10 ಕ್ಕೆ ಫಲಿತಾಂಶ ನೀಡಲು ಪಿಯುಸಿ ಬೋರ್ಡ್ ನಿರ್ಧರಿಸಿದೆ.