Tag: valmiki

  • ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?

    ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?

    – ತನಿಖೆ ನಡೆಸುವಂತೆ ಸಿಬಿಐಗೆ ದೂರು ನೀಡಿದ ಯೂನಿಯನ್‌ ಬ್ಯಾಂಕ್‌
    – ಸಿಐಡಿ ತನಿಖೆಗೆ ಆದೇಶಿಸಿದ್ದ ಕರ್ನಾಟಕ ಸರ್ಕಾರ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಖಾತೆಯಲ್ಲಿ ನಡೆದ ಅವ್ಯವಹಾರ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ (Union Bank) ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಿಬಿಐಗೆ (CBI) ದೂರು ನೀಡಿದೆ. ಇತ್ತ ಕರ್ನಾಟಕ ಸರ್ಕಾರ ಈ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ (CID) ಆದೇಶಿಸಿದೆ. ಇದನ್ನೂ ಓದಿ: 94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    ಸಿಐಡಿ ತನಿಖೆ ನಡೆಸಿದರೂ ಇದು ಆರ್ಥಿಕ ಅಪರಾಧವಾಗಿರುವ ಕಾರಣ ಈ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗಲಿದೆ. ಬ್ಯಾಂಕ್‌ನಲ್ಲಿ 10 ಕೋಟಿ ರೂ.ಗೂ ಅಧಿಕ ಅಕ್ರಮ ಪ್ರಕರಣ ದಾಖಲಾದರೆ ಅದರ ತನಿಖೆ ಸಿಬಿಐ ನಡೆಸಬೇಕು ಎಂದು ಆರ್‌ಬಿಐ (RBI) ನಿಯಮ ಹೇಳುತ್ತದೆ. ಈ ಪ್ರಕರಣದಲ್ಲಿ 94 ಕೋಟಿ ರೂ. ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಕೇಸ್‌ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದ್ದು ಹೊಸ ಸರ್ಕಾರ ಬಂದ ನಂತರ ಈ ವಿಚಾರ ಸ್ಪಷ್ಟವಾಗಲಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಯಾವೆಲ್ಲ ತನಿಖೆಯನ್ನು ಸಿಬಿಐ ಮಾಡುತ್ತೆ?
    ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರ, ಗಂಭೀರ ವಂಚನೆ, ಸಾಮಾಜಿಕ ಅಪರಾಧ ಮತ್ತು ಲಾಭಕೋರತನಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳು, ಹತ್ಯೆಗಳು, ಅಪಹರಣಗಳು ಮುಂತಾದ ಸಾಂಪ್ರದಾಯಿಕ ಅಪರಾಧಗಳ ತನಿಖೆಯನ್ನು ಸಿಬಿಐ ಮಾಡುತ್ತದೆ.

     

    ನಕಲಿ ಭಾರತೀಯ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದ ಅಪರಾಧ, ಬ್ಯಾಂಕ್ ವಂಚನೆಗಳು ಮತ್ತು ಸೈಬರ್ ಅಪರಾಧ, ಮಾದಕವಸ್ತುಗಳು, ಪ್ರಾಚೀನ ವಸ್ತುಗಳು ಸಾಂಸ್ಕೃತಿಕ ಆಸ್ತಿಗಳ ದೊಡ್ಡ ಪ್ರಮಾಣದ ಕಳ್ಳಸಾಗಣೆ ಸೇರಿದಂತೆ ಪ್ರಮುಖ ಹಣಕಾಸು ಹಗರಣಗಳ ತನಿಖೆಯನ್ನು ಸಿಬಿಐ ಮಾಡುತ್ತದೆ. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಒಂದು ವೇಳೆ ಪ್ರಕರಣದ ತನಿಖೆ ನಡೆಸುವಾಗ ವಿದೇಶದಲ್ಲಿ ಅಕ್ರಮ ಹಣ ವರ್ಗಾವಣೆ, ವಿದೇಶದಿಂದ ಅಕ್ರಮ ದೇಣಿಗೆ ಸ್ವೀಕರಿಸಿದ್ದಕ್ಕೆ ದಾಖಲೆಗಳು ಸಿಕ್ಕಿದರೆ ಆಗ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಪ್ರವೇಶ ಮಾಡುತ್ತದೆ.

  • 94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಖಾತೆಯಲ್ಲಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

    ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬ್ಯಾಂಕ್‌, ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ. ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಅಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.  ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಏನಿದು ಪ್ರಕರಣ?
    ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಮೂವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

     

  • ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    – ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ
    – ಹಾಲಿ ನ್ಯಾಯಾಧೀಶರರಿಂದ ಪ್ರಕರಣದ ತನಿಖೆ ನಡೆಸಬೇಕು
    – ಡಿಕೆಶಿ, ರಾಮಲಿಂಗಾ ರೆಡ್ಡಿ ಜೊತೆ ನಾಗರಾಜ್‌ ಇರುವ ಫೋಟೋ ರಿಲೀಸ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಎನ್.ನಾಗರಾಜ್ (N Nagaraj) ಸಂಬಂಧದ ಅಸ್ತ್ರ ಪ್ರಯೋಗವಾಗಿದೆ. ಡೆತ್‌ನೋಟ್‌ನಲ್ಲಿರುವ ಎನ್.ನಾಗರಾಜ್ ಜಾಡು ಹಿಡಿದು ಹೊರಟ ಬಿಜೆಪಿ ಸಚಿವ ನಾಗೇಂದ್ರ (Nagendra) ಜೊತೆ ನಾಗರಾಜುಗೆ ವ್ಯವಹಾರಿಕ ಸಂಬಂಧ ಎಂದು ಗಂಭೀರ ಆರೋಪ ಮಾಡಿದೆ.

    ನಾಗೇಂದ್ರ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್ ಮಾಡಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಜೊತೆ, ಡಿಸಿಎಂ ಜೊತೆ, ರಾಮಲಿಂಗರೆಡ್ಡಿ ಜೊತೆ ಇರುವ ಫೋಟೋ ರಿಲೀಸ್ ಮಾಡಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ

    ಸಿ.ಟಿ.ರವಿ (CT Ravi) ಮಾತನಾಡಿ, ಡೆತ್‌ನೋಟ್‌ನಲ್ಲಿ ಎನ್.ನಾಗರಾಜ್ ಹೆಸರು ಇದೆ. ಆ ಎನ್.ನಾಗರಾಜ್ ನಾಗೇಂದ್ರ ಪರಮಾಪ್ತನಾಗಿದ್ದು ಬ್ಯುಸಿನೆಸ್‌ ಪಾರ್ಟ್‌ನರ್‌ ಆಗಿದ್ದಾನೆ. ಎನ್.ನಾಗರಾಜು ಜೊತೆ ನಾಗೇಂದ್ರಗೆ ವ್ಯವಹಾರ ಇದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೊತೆ ಎನ್.ನಾಗರಾಜ್ ಇರುವ ಫೋಟೋಗಳು ಇವೆ. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲರ ಪಾತ್ರವಿದೆ ಎಂದು ಆರೋಪಿಸಿದರು.

    ಅಂಗೈ ಹುಣ್ಣಿಗೆ ಸಾಕ್ಷಿ ಬೇಕಾ? ಸಚಿವರ ಮೌಖಿಕ ಆದೇಶ ಇಲ್ಲದೇ ಹಣ ವರ್ಗಾವಣೆ ಹೇಗೆ ಆಗುತ್ತೆ? ಎನ್.ನಾಗರಾಜ್ ಗೂ ನಾಗೇಂದ್ರಗೂ ಏನ್ ಸಂಬಂಧ? ಎನ್.ನಾಗರಾಜ್‌ಗೂ ಸಿಎಂಗೂ, ಎನ್. ನಾಗರಾಜ್‌ಗೂ ಡಿಸಿಎಂಗೆ ಏನು ಸಂಬಂಧ ಎಂದು ಸಿ.ಟಿ.ರವಿ ಖಾರವಾಗಿ ಪ್ರಶ್ನಿಸಿದರು.  ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆ ತನಿಖೆ ನಡೆಯಬೇಕು. ಅದಕ್ಕಾಗಿ ಹಾಲಿ ನ್ಯಾಯಾಧೀಶರರಿಂದ ತನಿಖೆ ನಡೆಸಬೇಕು. ಇದೊಂದು ಹಗಲು ದರೋಡೆಯಾಗಿದೆ. ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಜೊತೆ ಹೋಗಿದ್ದಾರೆ. ಡೆತ್ ನೋಟ್‌ನಲ್ಲಿ ನಾಗರಾಜ್ ಹೆಸರು ಉಲ್ಲೇಖವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ರು.

    ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಇದೊಂದು ಕೊಲೆ ಅಂತಾ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದರು. ವರ್ಕ್ ಆರ್ಡರ್ ಮಾಡದೇ ಇದ್ದರೂ ಈಶ್ವರಪ್ಪ ರಾಜೀನಾಮೆ ನೀಡಿದರು. ಅವರ ರಾಜಕೀಯ ಭವಿಷ್ಯವ‌ನ್ನೇ ಮುಗಿಸುವ ಕೆಲಸ ಮಾಡಿದರು. ಈಗ ಬಿ.ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ ಯಾಕೆ? ಬಿ.ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಸರ್ಕಾರಕ್ಕೆ ಮಾನ‌ ಮರ್ಯಾದೆ ಇದೆಯೇ ಎಂದು ಸಿಟಿ ರವಿ ಕಿಡಿಕಾರಿದರು.

     

  • ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    – ಬ್ಯಾಂಕ್‌ ವಿರುದ್ಧ ದೂರು ನೀಡಿದ ಎಂಡಿ ರಾಜಶೇಖರ್
    – ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ
    – ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ (Union Bank of India) ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

    ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಯೂನಿಯನ್ ಬ್ಯಾಂಕ್ ನ ಎಂಡಿ ಹಾಗೂ ಸಿಇಓ ಮನಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಮಣ್ಯಂ,‌ ಸಂಜಯ್‌ ರುದ್ರ, ಪಂಕಜ್ ದ್ವಿವೇದಿ, ಸುಶಿಚಿತ ರಾವ್ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

    ದೂರಿನ ಆಧಾರದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಐಪಿಸಿ ಸೆಕ್ಷನ್‌ 149 (ಒಂದೇ ಉದ್ದೇಶವನ್ನು ಇಟ್ಟುಕೊಂಡು ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯ ಕೃತ್ಯ ಎಸಗಿರುವುದು), 409( ಸರ್ಕಾರಿ ನೌಕರ ಅಥವಾ ಬ್ಯಾಂಕರ್‌ನಿಂದ ನಂಬಿಕೆ ದ್ರೋಹ), 420 (ವಂಚನೆ), 467 (ಬೆಲೆಯುಳ್ಳ ಭದ್ರತಾ ಪತ್ರ ಇತ್ಯಾದಿಗಳ ಸುಳ್ಳು ಸ್ಪಷ್ಟನೆ), 468 (ವಂಚಿಸುವ ಉದ್ದೇಶದಿಂದಲೇ ಸುಳ್ಳು ಸ್ಪಷ್ಟನೆ), 471(ಸುಳ್ಳು ಸ್ಪಷ್ಟನೆಯ ದಾಖಲೆಯನ್ನು ನೈಜವೆಂದು ಬಳಸುವುದು) ಅಡಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!


    ದೂರಿನಲ್ಲಿ ಏನಿದೆ?
    ನಿಗಮದ ಹೆಸರಲ್ಲಿ ವಸಂತನಗರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಖಾತೆ ಇತ್ತು. ಫೆ.19, 2024 ರಂದು ಎಂಜಿ ರಸ್ತೆಯಲ್ಲಿರುವ ಬ್ರ್ಯಾಂಚ್‌ ಖಾತೆಯನ್ನು ವರ್ಗಾವಣೆ ಮಾಡಲಾಗಿರುತ್ತದೆ.

    ಫೆ.26 ರಂದು ಬ್ಯಾಂಕಿನವರು ನಿಗಮದ ಎಂಡಿ ಹಾಗೂ ಲೆಕ್ಕಾಧಿಕಾರಿಗಳ ಸಹಿಯನ್ನು ಪಡೆದುಕೊಂಡಿರುತ್ತಾರೆ. ನಂತರ ಈ ಖಾತೆಗೆ ನಿಗಮ ಮಾರ್ಚ್‌ 3 ರಂದು 25 ಕೋಟಿ ರೂ., ಮಾರ್ಚ್‌ 6 ರಂದು 44 ಕೋಟಿ ರೂ., ಮಾರ್ಚ್‌ 21 ರಂದು 33 ಕೋಟಿ ರೂ., ಮಾರ್ಚ್‌ 22 ರಂದು 33 ಕೋಟಿ ರೂ., ಮಾರ್ಚ್‌ 21 ರಂದು 50 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿತ್ತು. ಒಟ್ಟು 187.33 ಕೋಟಿ ರೂ. ಹಣ ವರ್ಗಾವಣೆಯಾಗಿತ್ತು

    ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ ಜೊತೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿರುವುದಿಲ್ಲ. ಹೀಗಿದ್ದರೂ ನಕಲಿ ದಾಖಲೆ ಸೃಷ್ಟಿಸಿ 94,73,08,500 ರೂ. ಹಣವನ್ನು ವರ್ಗಾವಣೆ ಮಾಡಲಾಗಿದೆ. ಇಷ್ಟೊಂದು ಹಣ ವರ್ಗಾವಣೆಯಾದರೂ ನಿಗಮದ ನೊಂದಾಯಿಸಿದ ಇಮೇಲ್‌, ಮೊಬೈಲಿಗೆ ಯಾವುದೇ ಮಸೇಜ್‌ ಬಂದಿರುವುದಿಲ್ಲ.

     

    ಚಂದ್ರಶೇಖರನ್‌ ಅವರು ಬ್ಯಾಂಕ್‌ ದೃಢೀಕರಣ ಚೆಕ್‌, ಆರ್‌ಟಿಜಿಎಸ್‌, ಬ್ಯಾಂಕ್‌ ಹೇಳಿಕೆಗಳನ್ನು ಸಮನ್ವಯಗೊಳಿಸುವ ಕೆಲಸ ಮಾಡುತ್ತಿದ್ದರು. ಈ ರೀತಿ ಹಣ ವರ್ಗಾವಣೆಯಾದ ವಿಚಾರ ಗೊತ್ತಾದ ಬಳಿಕ ನಿಗಮ ಪ್ರಶ್ನೆ ಮಾಡಿದ್ದಕ್ಕೆ ಬ್ಯಾಂಕ್‌ ತಕ್ಷಣ 5 ಕೋಟಿ ರೂ. ಹಣವನ್ನು ಖಾತೆಗೆ ಹಾಕಿದೆ. ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಕೋರಿದ್ದು ಇಲ್ಲಿಯವರೆಗೆ ಬ್ಯಾಂಕ್‌ ಯಾವುದೇ ಸಿಸಿಟಿವಿ ದೃಶ್ಯ ನೀಡಿಲ್ಲ.

    ಬ್ಯಾಂಕ್‌ನ ಲೋಪದಿಂದಲೇ ಈ ಅಕ್ರಮ ವ್ಯವಹಾರ ನಡೆದಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಡೆದ ಈ ಲೋಪಗಳಿಗೆ ಮುನ್ನೆಚ್ಚರಿಕೆ ತಗೆದುಕೊಳ್ಳುವಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ ಉನ್ನತ ಆಡಳಿತವೇ ಜವಾಬ್ದಾರರಾಗಿದ್ದಾರೆ. ಯಾವುದೇ ಪರಿಶೀಲನೆ ನಡೆಸದೇ ಬ್ಯಾಂಕ್‌ನಿಂದ ಓವರ್ ಡ್ರಾಫ್ಟ್‌ ಸೌಲಭ್ಯವನ್ನು ಸೃಷ್ಟಿಸಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಿಗಮಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಈ ಕೃತ್ಯಕ್ಕೆ ಕಾರಣದವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

     

  • ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು: ಜಿ.ಪರಮೇಶ್ವರ್

    ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ (Valmiki) ವಿಶ್ವವಿದ್ಯಾಲಯ ಆಗಲೇಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ದತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದ್ರು. ಆದರೆ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿವಿಧ ಪಕ್ಷಗಳ ಸಂಸದರ ಜೊತೆ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸವಿದ ಮೋದಿ

    ಆಂಧ್ರಪ್ರದೇಶ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ರೆ, ಯಾರು ಕೂಡಾ ಮಾಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಫೈನ್ 50,000 ಇದ್ರೆ ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು ಹುಷಾರ್!

    ರಾಮನ ಸಂಬಂಧವೇ ಇಲ್ಲದವರಿಗೆ ಎನೇನೋ ಮಾಡುತ್ತಿದ್ದಾರೆ. ವಾಲ್ಮೀಕಿಗೆ ಸಂಬಂಧ ಇಲ್ಲದವರು ಏನೇನೊ ಮಾಡ್ತಾ ಇದ್ದಾರೆ. ನಮಗೆ ವಾಲ್ಮೀಕಿಗೆ ಸಂಬಂಧ ಇದೆ. ಈ ಕಾರಣಕ್ಕೆ ವಾಲ್ಮೀಕಿ ವಿವಿ ಸ್ಥಾಪನೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್

  • ಸುದೀಪ್ ಬಗ್ಗೆ ಬೇಸರ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ

    ಸುದೀಪ್ ಬಗ್ಗೆ ಬೇಸರ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ

    ವಿಧಾನಸಭೆ (Assembly) ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನತಿಯಂತೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ನಟ ಸುದೀಪ್ (Sudeep) ಬಗ್ಗೆ ಸಚಿವ ಹಾಗೂ ವಾಲ್ಮೀಕಿ (Valmiki) ಸಮುದಾಯದ ಮುಖಂಡ ಕೆ.ಎನ್ ರಾಜಣ್ಣ (KN Rajanna) ಬೇಸರ ಹೊರಹಾಕಿದ್ದಾರೆ. ಸಿನಿಮಾ ನಟರು ರಾಜಕಾರಣ ಮಾಡಿದ ಗೌರವ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.

    ಸುದೀಪ್ ಅವರು ನಮ್ಮದೇ ಸಮುದಾಯದವರು. ನಮ್ಮ ಸಮುದಾಯದ ನಾಯಕರ ವಿರುದ್ಧವೇ ಅವರು ಪ್ರಚಾರ ಮಾಡಿದರು. ಅವರೊಬ್ಬ ನಟನಾಗಿ, ನಟಿಸಬೇಕು. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಅವರ ನಡೆ ನನಗೆ ಬೇಸರ ತರಿಸಿದೆ. ತಮ್ಮ ಕ್ಷೇತ್ರ ಬಿಟ್ಟು ಬಂದರೆ ಗೌರವ ಕಡಿಮೆ ಆಗುತ್ತದೆ ಎಂದು ರಾಜಣ್ಣ ಹೇಳಿದ್ದಾರೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್‌ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್‌ ‌

    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Election) ಸುದೀಪ್ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ್ದರು. ಇದನ್ನು ರಾಜಣ್ಣ ಪ್ರಶ್ನಿಸಿದ್ದಾರೆ. ಈ ರೀತಿ ಮಾಡುವುದು ಸರಿಯಾದದ್ದು ಅಲ್ಲ ಎಂದು ಅವರು ಮಾತನಾಡಿದ್ದಾರೆ.

     

    ಸದ್ಯ ಸುದೀಪ್ ಹೊಸ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದು ಸಿನಿಮಾದ ಟೀಸರ್ ಕೂಡ ರೆಡಿಯಾಗಿದೆ. ಸದ್ಯದಲ್ಲೇ ಆ ಟೀಸರ್ ರಿಲೀಸ್ ಮಾಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ. ಅವರ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಕೂಡ ಮೂಡಿದ್ದು, ಇನ್ನಷ್ಟೇ ತಂಡದ ವಿವರಗಳು ಲಭ್ಯವಾಗಲಿವೆ.

  • ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ನ್ನಡದ ಖ್ಯಾತ ನಟ ಸುದೀಪ್ (Sudeep) ಅಭಿಮಾನಿಗಳು (Fans) ವಾಲ್ಮೀಕಿ (Valmiki) ಜಾತ್ರೆಯಲ್ಲಿ (Jatre) ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಗೂ ಸುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಪದೇ ಪದೇ ಆಯೋಜಕರು ಸುದೀಪ್ ಅವರ ಹೆಸರನ್ನು ಹೇಳುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದಿದ್ದಾರೆ. ಸುದೀಪ್ ಅವರಿಗೆ ಆಹ್ವಾನವಿದ್ದರೆ ಯಾವುದೇ ಕಾರಣಕ್ಕೂ ಅವರು ತಪ್ಪಿಸುತ್ತಿರಲಿಲ್ಲ ಎಂದು ನಟನ ಬೆನ್ನಿಗೆ ನಿಂತಿದ್ದಾರೆ.

    ತಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು.

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು.

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ: ಜಗದೀಶ್ ಶೆಟ್ಟರ್

    ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಮೀಸಲಾತಿ ಹೆಚ್ಚಳದ ಘೋಷಣೆ ಇದೊಂದು ಐತಿಹಾಸಿಕ ನಿರ್ಧಾರ. ನಾನು ನಮ್ಮ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಾಲ್ಮೀಕಿ (Valmiki) ಬಿಟ್ಟು ರಾಮನಿಲ್ಲ (Rama). ರಾಮನನ್ನು ಬಿಟ್ಟು ವಾಲ್ಮೀಕಿ ಇಲ್ಲ. ರಾಮನ ವ್ಯಕ್ತಿತ್ವ ಜಗತ್ತಿಗೆ ತೋರಿಸಿದ್ದು, ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi)  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಾಲ್ಮೀಕಿ ಜಯಂತಿ ವಿಶೇಷವಾಗಿದೆ. ಪ್ರತಿ ವರ್ಷ ಮೀಸಲಾತಿ ಹೆಚ್ಚಿಸಲು ಬೇಡಿಕೆ ಇರುತ್ತಿತ್ತು. ಮೀಸಲಾತಿ ಹೆಚ್ಚಳ ಬಗ್ಗೆ ನಾಗಮೋಹನದಾಸ್ ವರದಿ ಕೊಟ್ಟಾಗಿನಿಂದ ಬೇಡಿಕೆ ಇತ್ತು. ಆದರೆ ಯಾವ ಸರ್ಕಾರವೂ ಮೀಸಲಾತಿ ಹೆಚ್ಚಳ ಮಾಡಲು ಧೈರ್ಯ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ನಿಷ್ಪಪ್ರಯೋಜಕ, ಅಪ್ರಯೋಜಕ ಅಂತ ನಾವು ಹೇಳೋದಿಲ್ಲ: ಪ್ರಹ್ಲಾದ್ ಜೋಶಿ ಲೇವಡಿ

    ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಕೋರ್ ಕಮೀಟಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನವಾಗಿತ್ತು. ನಿನ್ನೆ ಸಂಪುಟದಲ್ಲಿ ಬಹಳ ದಿನದ ಬೇಡಿಕೆಗೆ ನಮ್ಮ ಸರ್ಕಾರ ಅಸ್ತು ಎಂದಿದೆ. ಹೀಗಾಗಿ ನಾನು ನಮ್ಮ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದನ್ನೂ ಓದಿ: ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್

    Live Tv
    [brid partner=56869869 player=32851 video=960834 autoplay=true]

  • ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ

    ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ

    ಇಸ್ಲಾಮಾಬಾದ್: ಸುದೀರ್ಘ ನ್ಯಾಯಾಲಯದ ಹೋರಾಟದಲ್ಲಿ ಅಕ್ರಮವಾಗಿ ದೇವಾಲಯ ವಶ ಪಡಿಸಿಕೊಂಡಿದ್ದವರನ್ನು ಹೊರಹಾಕಲಾಗಿದೆ. ಪರಿಣಾಮ ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು ಎಂದು ದೇಶದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಸಂಸ್ಥೆ ತಿಳಿಸಿದೆ.

    ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಇಟಿಪಿಬಿ) ಕಳೆದ ತಿಂಗಳು ಪ್ರಸಿದ್ಧ ಅನಾರ್ಕಲಿ ಬಜಾರ್ ಲಾಹೋರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ. ಕೃಷ್ಣ ದೇವಾಲಯದ ಜೊತೆಗೆ, ವಾಲ್ಮೀಕಿ ದೇವಾಲಯವು ಲಾಹೋರ್‌ನಲ್ಲಿರುವ ಏಕೈಕ ಕ್ರಿಯಾತ್ಮಕ ದೇವಾಲಯವಾಗಿದೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್ 

    ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುವ ಕ್ರೈಸ್ತ ಕುಟುಂಬ ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿತ್ತು ಎಂಬುದು ತಿಳಿದುಬಂದಿದೆ. ಅದನ್ನು ಸಾರ್ವಜನಿಕವಾಗಿಸಲು ಇಟಿಪಿಬಿ ವಶಕ್ಕೆ ಪಡೆದುಕೊಂಡಿದೆ.

    ದೇವಾಲಯವನ್ನು ಹಿಂಪಡೆದ ನಂತರ ಇಟಿಪಿಬಿ ವಕ್ತಾರ ಅಮೀರ್ ಹಶ್ಮಿ ಕುರಿತು ಮಾತನಾಡಿದ್ದು, ಮುಂದಿನ ದಿನಗಳಲ್ಲಿ ‘ಮಾಸ್ಟರ್ ಪ್ಲಾನ್’ ಪ್ರಕಾರ ವಾಲ್ಮೀಕಿ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು. 100ಕ್ಕೂ ಹೆಚ್ಚು ಹಿಂದೂಗಳು, ಕೆಲವು ಸಿಖ್ ಮತ್ತು ಕ್ರಿಶ್ಚಿಯನ್ ನಾಯಕರು ಇಂದು ವಾಲ್ಮೀಕಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಿದರು. ಇಪ್ಪತ್ತು ವರ್ಷಗಳ ಹಿಂದೆ ಕ್ರಿಶ್ಚಿಯನ್ ಕುಟುಂಬ ದೇವಾಲಯವನ್ನು ವಶಪಡಿಸಿಕೊಂಡಿತ್ತು ಎಂದು ವಿವರಿಸಿದರು.

    ದೇವಸ್ಥಾನದ ಭೂಮಿಯನ್ನು ಕಂದಾಯ ದಾಖಲೆ ಇಟಿಪಿಬಿಗೆ ವರ್ಗಾಯಿಸಲಾಗಿದೆ. ಆದರೆ ಕುಟುಂಬ, 2010-2011 ರಲ್ಲಿ ದೇವಾಲಯ ಇರುವ ಜಾಗದ ಮಾಲೀಕ ನಾವು ಎಂದು ಹೇಳಿಕೊಂಡು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಈ ಕುಟುಂಬವು ವಾಲ್ಮೀಕಿ ಹಿಂದೂಗಳಿಗೆ ಮಾತ್ರ ದೇವಾಲಯವನ್ನು ಮಾಡಿದ್ದೇವೆ ಎಂದಿದ್ದರು. ಆದರೆ ಅವರು ಕೊಟ್ಟಿರುವ ದಾಖಲೆಗಳು ನಕಲಿ ಎಂದು ತಿಳಿದು ನ್ಯಾಯಾಲಯವು ಛೀಮಾರಿ ಹಾಕಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ 

    ಹಿನ್ನೆಲೆ:
    1992 ರಲ್ಲಿ, ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಕೋಪಗೊಂಡ ಜನಸಮೂಹವು ಶಸ್ತ್ರಾಸ್ತ್ರಗಳನ್ನು ಹಿಡಿದ ವಾಲ್ಮೀಕಿ ದೇವಾಲಯಕ್ಕೆ ನುಗ್ಗಿತು. ಕೃಷ್ಣ ಮತ್ತು ವಾಲ್ಮೀಕಿ ವಿಗ್ರಹಗಳನ್ನು ಒಡೆದು, ಅಡುಗೆಮನೆಯಲ್ಲಿದ್ದ ಪಾತ್ರೆಗಳು ಒಡೆದು, ಪ್ರತಿಮೆಗಳನ್ನು ಅಲಂಕರಿಸಿದ ಚಿನ್ನವನ್ನು ವಶಪಡಿಸಿಕೊಂಡರು. ದೇವಾಲಯವನ್ನು ಕೆಡವಿ, ಕಟ್ಟಡಕ್ಕೆ ಬೆಂಕಿ ಹಚ್ಚಲಾಯಿತು. ಪರಿಣಾಮ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.

    ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದ ಸಿಖ್ಖರು ಮತ್ತು ಹಿಂದೂಗಳು ಬಿಟ್ಟುಹೋದ ದೇವಾಲಯಗಳು ಮತ್ತು ಭೂಮಿಯನ್ನು ಇಟಿಪಿಬಿ ನೋಡಿಕೊಳ್ಳುತ್ತದೆ. ಇದು ಪಾಕಿಸ್ತಾನದಾದ್ಯಂತ 200 ಗುರುದ್ವಾರಗಳು ಮತ್ತು 150 ದೇವಾಲಯಗಳನ್ನು ನೋಡಿಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]