Tag: Valmiki Development Corporation

  • ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು, ವಿರೋಧ ಪಕ್ಷಗಳು ಸಾಕ್ಷಿ ನೀಡಲಿ: ಶಾಸಕ ದದ್ದಲ್

    ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು, ವಿರೋಧ ಪಕ್ಷಗಳು ಸಾಕ್ಷಿ ನೀಡಲಿ: ಶಾಸಕ ದದ್ದಲ್

    ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಎಚ್ಚೆತ್ತ ರಾಯಚೂರು ಗ್ರಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ (Basanagouda Daddal) ತಮ್ಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಸಾರ್ವಜನಿಕರ ಗಮನಕ್ಕೆ ತರಲು ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಹಗರಣ ನಡೆದ ಅವಧಿ ಹಾಗೂ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 187 ಕೋಟಿ ಹಗರಣದ ತನಿಖೆಯಲ್ಲಿ ಎಸ್ಐಟಿ ಐವರನ್ನ ಬಂಧಿಸಿದೆ. ಸಿಬಿಐ ತನಿಖೆಯು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿ ಅಂದಿದ್ದಾರೆ, ನನ್ನ ಹೆಸರು ಹೇಳಿಲ್ಲ- ಶರಣ ಪ್ರಕಾಶ್ ಪಾಟೀಲ್ ಫಸ್ಟ್ ರಿಯಾಕ್ಷನ್

    ನಿಗಮದ ಹಣ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿದ್ದು, ಸಮುದಾಯದ ಅಭಿವೃದ್ಧಿಗೆ ಬಳಸಬೇಕು. ನಿಗಮದ ಹಣ ಯಾರೇ ಕಬಳಿಸಲು ಯತ್ನಿಸಿದ್ದರೂ ತನಿಖೆಯಲ್ಲಿ ಹೊರಬರುತ್ತದೆ. ಸರ್ಕಾರ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ವಿರೋಧ ಪಕ್ಷಗಳು ನನ್ನ ವಿರುದ್ದ ಮಾಡುವ ಆರೋಪಗಳಿಗೆ ಸಾಕ್ಷಿಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಲಿ. ಸಾಕ್ಷಿ ಕೊಟ್ಟರೆ ತನಿಖೆಗೆ ಅನುಕೂಲವಾಗುತ್ತದೆ. ಸತ್ಯಾಂಶ ಹೊರಬರುತ್ತದೆ. ವಿರೋಧ ಪಕ್ಷಗಳು ವೃತಾ ಆರೋಪ ಮಾಡುವುದನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

    ನಾನು ಎಸ್‌ಟಿ ಕ್ಷೇತ್ರದಿಂದ ಚುನಾಯಿತನಾಗಿದ್ದು, ಸಮುದಾಯದ ಹಿತ ಕಾಪಾಡುವುದು ನನ್ನ ಕರ್ತವ್ಯ. ಸಮಾಜದ ಹಿತ ಕಾಪಾಡಲು ನನ್ನನ್ನ ನಿಗಮ ಅಧ್ಯಕ್ಷನಾಗಿ ಸರ್ಕಾರ ನೇಮಿಸಿದೆ. ಪಟ್ಟಭದ್ರಹಿತಾಸಕ್ತಿ ವ್ಯಕ್ತಿಗಳಿಂದ ನಿಗಮದ ಅನುದಾನ ದುರ್ಬಳಕೆಯಾಗಿರುವುದು ನನಗೆ ನೋವುಂಟು ಮಾಡಿದೆ. ಸರ್ಕಾರ ಕೂಲಂಕಷವಾಗಿ ತನಿಖೆ ನಡೆಸುತ್ತದೆ. ಆರೋಪಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ನಂಬಿದ್ದೇನೆ. ಸದರಿ ಪ್ರಕರಣದಲ್ಲಿ ನಿಗಮದ ಅಧ್ಯಕ್ಷನಾಗಿ ನನ್ನ ಪಾತ್ರ ಏನೂ ಇಲ್ಲ. ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ. ಯಾರೇ ಏನೇ ಆರೋಪ ಮಾಡಿದ್ದರೂ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಹೇಳಿದ್ದಾರೆ.

  • ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ- ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ

    ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ- ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Karnataka Maharshi Valmiki Scheduled Tribe Development Corporation Ltd) ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಬಿಜೆಪಿ ಆಗ್ರಹ ಮಾಡಿದೆ.

    ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿಎಂಗೆ ಆಗ್ರಹಿಸಿರುವ ಬಿಜೆಪಿ, ಒಂದು ವೇಳೆ ನಾಗೇಂದ್ರ ರಾಜೀನಾಮೆ ಪಡೆಯದೇ ಹೋದ್ರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.

    ಸಿಎಂ ಸಿದ್ದರಾಮಯ್ಯ ಅವರೇ, ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಸರ್ಕಾರ ಮಾಡಿರುವ ಮಹಾಮೋಸದ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿದೆ. ನಿಮ್ಮಲ್ಲಿ ಅಲ್ಪಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಇನ್ನಾದರೂ ಸಂಬಂಧಪಟ್ಟ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು.

    ಸಚಿವ ನಾಗೇಂದ್ರ ರಾಜಿನಾಮೆ ನೀಡುವವರೆಗೂ ‌ಬಿಜೆಪಿ (BJP) ಹೋರಾಟವನ್ನು ಮುಂದುವರಿಸುತ್ತದೆ ಹಾಗೂ ಇನ್ನೂ ತೀವ್ರಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

  • ನಮ್ಮ ಕಂಪನಿ ಹೆಸರಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ: ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿ ಸ್ಪಷ್ಟನೆ

    ನಮ್ಮ ಕಂಪನಿ ಹೆಸರಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ: ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿ ಸ್ಪಷ್ಟನೆ

    – ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ಕಂಪನಿ ಕಾರ್ಯದರ್ಶಿ ಪ್ರತಿಕ್ರಿಯೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ (Valmiki Development Corporation) ಬಹುಕೋಟಿ ಹಗರಣದ ವಿಚಾರವಾಗಿ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿ (Happiest Minds Technologies) ಪ್ರತಿಕ್ರಿಯಿಸಿದೆ. ನಮ್ಮ ಕಂಪನಿ ಹೆಸರಿನಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿದೆ.

    ಈ ಕುರಿತು ಮಾತನಾಡಿರುವ ಹ್ಯಾಪಿಯೆಸ್ಟ್ ಮೈಂಡ್ಸ್‌ ಟೆಕ್ನಾಲಜಿ ಕಂಪನಿ ಕಾರ್ಯದರ್ಶಿ ಪ್ರವೀಣ್‌ ದಾರ್ಶಂಕರ್‌ ಮಾತನಾಡಿ, ನಮ್ಮದು ಐಟಿ ಕಂಪನಿ. ಈ ಅಕ್ರಮ ಆಗಿರೋದು ನಿನ್ನೆ ನಮಗೆ ಮಾಹಿತಿ ಬಂದಿತ್ತು. ಕೂಡಲೇ ಬ್ಯಾಂಕ್‌ನವರ ಬಳಿ ವಿಚಾರಿಸಿದಾಗ ನಮ್ಮ ಕಂಪನಿ ಹೆಸರಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ ಆಗಿರೋದು ತಿಳಿದು ಬಂತು. ಹೈದಾರಬಾದ್‌ನ ಬಂಜಾರ ಬ್ರಾಂಚ್‌ನಲ್ಲಿ ಖಾತೆ ತೆರೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಿಂದ 17 ಖಾತೆಗಳಿಗೆ ನಗದು ವರ್ಗಾವಣೆ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ನಕಲಿ ಹೆಸರಲ್ಲಿ ನಾವೇ ಡೈರಕ್ಟರ್ ಅಂತಾ ಖಾತೆ ಓಪನ್ ಮಾಡಿದ್ದಾರೆ. ಕೆವೈಸಿ ನಿಯಮ ಉಲ್ಲಂಘನೆ ಆಗಿದೆ. ಆ ಬ್ಯಾಂಕಿನಲ್ಲಿ ನಮ್ಮದು 6 ಅಕೌಂಟ್ ಇದೆ. ಬ್ಯಾಂಕ್‌ನವರು ಹೊಸ ಅಕೌಂಟ್ ಆಗಬೇಕಿದ್ರೂ, ನಮ್ಮನ್ನ ಸಂಪರ್ಕಿಸಿಲ್ಲ. ಫೇಕ್ ಡಾಕ್ಯುಮೆಂಟ್ ಸಿದ್ಧಮಾಡಿ ಹೀಗೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಬ್ಯಾಂಕ್‌ನವರಿಗೆ ನಾವು ದೊಡ್ಡ ಗ್ರಾಹಕರು. ತನಿಖೆ ಮಾಡೋದಾಗಿ ಬ್ಯಾಂಕ್‌ನವರು ಕೂಡ ಹೇಳೋದಾಗಿ ಹೇಳಿದ್ದಾರೆ. ಬ್ಯಾಂಕ್‌ನ್ನು ಯಾರಾದರು ಉದ್ಯೋಗಿ ಒಪ್ಪಂದ ಮಾಡುಕೊಂಡು ಈ ಕೆಲಸ ಮಾಡಿರಬಹುದು. 4.5 ಕೋಟಿ ಅಕೌಂಟ್‌ಗೆ ಬಂದಿದೆ. ಆದರೆ ಅದು ನಮ್ಮ ಅಕೌಂಟ್ ಅಲ್ಲ. ನಾವು ಇಂದು ಪೊಲೀಸರಿಗೆ ದೂರು ಕೊಡಲಿದ್ದೇವೆ. ಭ್ರಷ್ಟ ಕೆಲಸ ಮಾಡಿ ನಮ್ಮ ಮಾನಹಾನಿ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ‘ಪಬ್ಲಿಕ್ ಟಿವಿ’ಗೆ ಸಂಸ್ಥೆ ಕಾರ್ಯದರ್ಶಿ ಪ್ರವೀಣ್ ದಾರ್ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ನಿಗಮದಿಂದ ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ?
    ಟಾಲೆನ್ ಕ್ಯೂ ಸಾಫ್ಟ್ವೇರ್ ಇಂಡಿಯಾ ಪ್ರೈ. ಲಿ. – 5,10,00,000 ರೂ
    ಸಿಸ್ಟಮ್ ಅಂಡ್ ಸರ್ವೀಸ್ ಕಂಪೆನಿ – 4,55,00,000 ರೂ
    ರಾಮ್ ಎಂಟರ್‌ಪ್ರೈಸಸ್ – 5,07,00,000 ರೂ.
    ಸ್ಕಿಲ್ ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸಸ್ ಪ್ರೈ. ಲಿ. – 4,84,00,000 ರೂ.
    ಸ್ವಾಪ್ ಡಿಸೈನ್ ಪ್ರೈ. ಲಿ – 5,15,00,000 ರೂ.
    ಜಿ.ಎನ್ ಇಂಡಸ್ಟ್ರೀಸ್ – 4,42,00,000 ರೂ.
    ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ. ಲಿ. – 4,56,00,000 ರೂ.
    ಸುಜಲ್ ಎಂಟರ್‌ಪ್ರೈಸಸ್ – 5,63,00000 ರೂ.
    ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ. ಲಿ. – 5,88,00,000 ರೂ.
    ಗಿ6 ಬ್ಯುಸಿನೆಸ್ ಸರ್ವಿಸಸ್ – 4,50,01,500 ರೂ.
    ನಿತ್ಯಾ ಸೆಕ್ಯುರಿಟಿ ಸರ್ವಿಸಸ್ – 4,47,50,000 ರೂ.
    ವೋಲ್ಟಾ ಟೆಕ್ನಾಲಜಿ ಸರ್ವಿಸಸ್ – 5,12,50,000 ರೂ.
    ಅಕಾರ್ಡ್ ಬ್ಯುಸಿನೆಸ್ ಸರ್ವಿಸಸ್ – 5,46,85,000 ರೂ.
    ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜಿ ಲಿಮಿಟೆಡ್ – 4,53,15,000 ರೂ.
    ಮ್ಯಾನ್ಹು ಎಂಟರ್‌ಪ್ರೈಸಸ್ – 5,01,50,000 ರೂ.
    ವೈ.ಎಂ ಎಂಟರ್‌ಪ್ರೈಸಸ್ – 4,98,50,000 ರೂ.

  • ವಾಲ್ಮೀಕಿ ನಿಗಮದಿಂದ 17 ಖಾತೆಗಳಿಗೆ ನಗದು ವರ್ಗಾವಣೆ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ವಾಲ್ಮೀಕಿ ನಿಗಮದಿಂದ 17 ಖಾತೆಗಳಿಗೆ ನಗದು ವರ್ಗಾವಣೆ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Corruption Scam) ಸಂಬಂಧ ಸಚಿವ ನಾಗೇಂದ್ರ ತಲೆದಂಡಕ್ಕೆ ಒತ್ತಡ ಹೆಚ್ಚುತ್ತಿರುವ ಹೊತ್ತಲ್ಲೇ ಹತ್ತು ಹಲವು ಕಂಪನಿಗಳಿಗೆ ನಿಗಮದ 80 ಕೋಟಿ ರೂ.ಗಿಂತಲೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಆಗಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

    ಐಟಿ ಕಂಪನಿಗಳು, ಭದ್ರತಾ ಏಜೆನ್ಸಿಗಳು, ಡಿಟೆಕ್ಟಿವ್ ಏಜೆನ್ಸಿಗಳು ಮತ್ತು ಹಲವರ ವೈಯಕ್ತಿಕ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ಇದರೊಂದಿಗೆ ಯೂನಿಯನ್ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾದ ಹಣವನ್ನು ತಡೆಹಿಡಿದು ಮೂಲ ಖಾತೆಗೆ ಮರಳಿಸುವಂತೆ ಕೋರಿ ಆರ್‌ಬಿಎಲ್ ಬ್ಯಾಂಕ್ ಎಂಡಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಎಸಿಎಸ್ ಎನ್.ಮಂಜುನಾಥ್ ಪ್ರಸಾದ್ ಬರೆದ ಪತ್ರವನ್ನು ಬಿಜೆಪಿ ರಿಲೀಸ್ ಮಾಡಿದೆ. ಈ ಹಣ ವರ್ಗಾವಣೆ ನಕಲಿ ದಾಖಲೆಗಳನ್ನು ಆಧರಿಸಿದೆ ಎಂದು ಎಸಿಎಸ್ ಈ ಪತ್ರದಲ್ಲಿ ವಿವರಿಸಿದ್ದಾರೆ.

    ಅಶೋಕ್ ವಾಗ್ದಾಳಿ:
    ಅಕ್ರಮವಾಗಿ ವರ್ಗವಾಗಿರುವ ವಾಲ್ಮೀಕಿ ನಿಗಮದ ಹಣ ದೆಹಲಿ ಕಾಂಗ್ರೆಸ್ ನಾಯಕರನ್ನು ತಲುಪಿದೆ. ಇದೆಲ್ಲಾ ಸಿಎಂಗೆ ಗೊತ್ತಿದ್ದೆ ನಡೆದಿದೆ ಎಂಬ ಗಂಭೀರ ಆರೋಪವನ್ನು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಮಾಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ ಪ್ರಕರಣ ಹೇಸಿಗೆ ಹುಟ್ಟಿಸಿದೆ, ಕ್ಷಮೆಗೆ ಅರ್ಹರಲ್ಲ – ಪ್ರಜ್ವಲ್‌ಗೆ ಶಿಕ್ಷೆ ಆಗಲೇಬೇಕು ಎಂದ ಜೋಶಿ

    ಈ ನಡುವೆ ವಾಲ್ಮೀಕಿ ನಿಗಮದ ಹಗರಣಕ್ಕೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಅಲ್ಲಿ ತೋರಿಸಿರುವ ಬ್ಯಾಂಕ್ ಖಾತೆ ನಮ್ಮ ಸಂಸ್ಥೆಯದ್ದಲ್ಲ ಎಂದು ಹ್ಯಾಪಿಯೆಸ್ಟ್ ಮೈಂಡ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ.

    8 ಕಡೆ ಎಸ್‌ಐಟಿ ದಾಳಿ:
    ತನಿಖಾ ತಂಡ ರಚನೆಯಾದ ಎರಡು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ ಎಸ್‌ಐಟಿ ತಂಡ ಶನಿವಾರ ರಾಜ್ಯದ ವಿವಿಧೆಡೆ ಏಕಕಾಲಕ್ಕೆ 8 ಕಡೆ ದಾಳಿ ನಡೆಸಿದೆ. ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿರುವ ಕೊಡಿಗೇಹಳ್ಳಿಯ ಪದ್ಮನಾಭ ಮನೆಯಲ್ಲಿ ಹಾಗೂ ದಾವಣಗೆರೆಯ ಪರಶುರಾಮ್ ಮತ್ತವರ ಸ್ನೇಹಿತರ ಮನೆಯಲ್ಲಿ ಎಸ್‌ಐಟಿ ದಾಳಿ ನಡೆಸಿದೆ.

  • ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣದಲ್ಲಿ (Valmiki Development Corporation Case) ಬಂಧಿತ ಆರೋಪಿಗಳಾಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್‌ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ ಅವರನ್ನ 6 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ, ಎಸಿಎಂಎಂ ಕೋರ್ಟ್‌ (ACMM Court) ಆದೇಶಿಸಿದೆ.

    ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚಿಸಿತ್ತು. ತಂಡ ರಚನೆಯಾದ ಎರಡು ಗಂಟೆಗಳಲ್ಲೇ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನ ಎಸ್‌ಐಟಿ ಬಂಧಿಸಿ, ಆರೋಪಿಗಳನ್ನ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು.

    ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಎಸ್ಕೇಪ್ ಆಗಿದ್ದರು. ಬೆಂಗಳೂರು ಹೊರವಲಯದಲ್ಲಿ ಅವರನ್ನು ಬಂಧಿಸಲಾಗಿತ್ತು. ಇಂದು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಎಸ್‌ಐಟಿ ತನ್ನ ಕಸ್ಟಡಿಗೆ ಪಡೆಯಿತು. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು

    SIT ತಂಡದಲ್ಲಿ ಯಾರ‍್ಯಾರು ಇದ್ದಾರೆ?
    ಎಸ್‌ಐಟಿಗೆ ಮುಖ್ಯಸ್ಥರಾಗಿ ಮನೀಶ್‌ ಖರ್ಬೀಕರ್‌ರನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತ ವಾರ್ತೆ ಪೊಲೀಸ್‌ ಅಧೀಕ್ಷಕ ಹರಿರಾಮ್‌ ಶಂಕರ್‌, ಸಿಐಡಿ ಪೊಲೀಸ್‌ ಅಧೀಕ್ಷಕ ರಾಘವೇಂದ್ರ ಕೆ. ಹೆಗಡೆ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

    ಏನಿದು ಪ್ರಕರಣ?
    ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ‌ ಡೆತ್‌ನೋಟ್‌ ಬರೆದಿಟ್ಟು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 85 ಕೋಟಿ ರೂ. ಹಗರಣ ನಡೆದಿದೆ, ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

  • ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ

    ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಸಚಿವ ಹೆಚ್‌.ಸಿ.ಮಹದೇವಪ್ಪ (H.C.Mahadevappa) ಹೇಳಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ವಿಚಾರವಾಗಿ ನಾನು ನಿನ್ನೆಯೇ ಎಲ್ಲವನ್ನೂ ಹೇಳಿದ್ದೇನೆ. ಬಿಜೆಪಿ ಇರೋದೆ ಆರೋಪ ಮಾಡಲು. ಆದರೆ ಸತ್ಯಾಸತ್ಯತೆ ಇರಬೇಕಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಕೇಸನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ: ಡಿಕೆಶಿ

    ಬಿಜೆಪಿ ಅವರದ್ದೂ ಕೇವಲ ಆರೋಪ ಅಷ್ಟೆ. ಅದಕ್ಕೆ ಎಸ್‌ಐಟಿ ಮಾಡಲಾಗಿದೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡಲಾಗುತ್ತದೆ. ಇಲ್ಲಿ ರಕ್ಷಣೆ ಮಾಡುವ ವಿಚಾರ ಯಾಕೆ ಬರುತ್ತದೆ. ಅದರಲ್ಲಿ ನಾಗೇಂದ್ರ ಅವರು ಇದ್ದಾರೋ ಇಲ್ವೋ ಗೊತ್ತಿಲ್ಲ. ಅದಕ್ಕಾಗಿಯೇ ತನಿಖೆಗೆ ವಹಿಸಿರೋದು. ಯಾರೆಲ್ಲಾ ಇದ್ದಾರೆ ಅನ್ನೋದು ಕೂಡ ತನಿಖೆಯಿಂದ ಹೊರ ಬರಲಿದೆ. ಎಲ್ಲಾ ಮೌಲ್ಯಯುತ ನಾಯಕರು ಮಾತಾಡ್ತಾ ಇದ್ದಾರೆ ಮಾತಾಡಲಿ. ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಸಿಎಂ, ಡಿಸಿಎಂ ನ್ಯಾಯಾಲಯಕ್ಕೆ ಹಾಜರಾದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಪಾಲನೆ ಮಾಡುವ ಜವಾಬ್ದಾರಿಯುತ ನಾಗರಿಕರು ಎಂದು ಸಾಬೀತು ಮಾಡಿದ್ದಾರೆ ಎಂದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

  • ವಾಲ್ಮೀಕಿ ನಿಗಮ ಕೇಸನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ: ಡಿಕೆಶಿ

    ವಾಲ್ಮೀಕಿ ನಿಗಮ ಕೇಸನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ: ಡಿಕೆಶಿ

    – ಸಿಬಿಐ ತನಿಖೆಗೆ ಹೋದರೆ ನಾವು ಸಹಕರಿಸಲು ಸಿದ್ಧ

    ಬೆಂಗಳೂರು: ವಾಲ್ಮೀಕಿ ನಿಗಮ (Valmiki Development Corporation) ಬಹುಕೋಟಿ ಅಕ್ರಮದಲ್ಲಿ ನಾವು ಯಾರ ರಕ್ಷಣೆ ಮಾಡೋದಿಲ್ಲ. ಬಿಜೆಪಿ ಅವಧಿಯಲ್ಲಿ ವಾಲ್ಮೀಕಿ ನಿಗಮದ ರೀತಿ ಅಕ್ರಮ ನಡೆದಿತ್ತು. ಸದ್ಯ ಸಿಬಿಐಗೆ ಕೇಸ್ ಕೊಡುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

    ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರನ್ನೂ ರಕ್ಷಣೆ ಮಾಡೋದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಿ. ಅವರ ರಾಜಕಾರಣ ಅವರು ಮಾಡ್ತಾರೆ. ಬೇಕಾದಷ್ಟು ವಿಚಾರಗಳಿವೆ. ನಾನು ಯಾವುದನ್ನು ಪ್ರಶ್ನೆ ಮಾಡೋದಿಲ್ಲ. ಬಿಜೆಪಿ ಸರ್ಕಾರದಲ್ಲೂ ಈ ರೀತಿ ವಿಚಾರಗಳು ನಡೆದಿವೆ. ಬಸವರಾಜ್ ಬೊಮ್ಮಾಯಿಗೂ ಗೊತ್ತಿದೆ ಎಲ್ಲರಿಗೂ ಗೊತ್ತಿದೆ. ಎಲ್ಲಾ ವಿಚಾರಣೆಗಳನ್ನು ಮಾಡಬೇಕಿದ್ದು, ನಾವು ಮಾಡ್ತೀವಿ ಎಂದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

    ನಾವು ಯಾರನ್ನೂ ರಕ್ಷಣೆ ಮಾಡಲ್ಲ. ಈಶ್ವರಪ್ಪ ಪ್ರಕರಣದಲ್ಲಿ ಅವರಿಗೆ ನೇರವಾಗಿ ಹೇಳಿದರು. ಇಂಥವರೇ ಎಂದು ಹೇಳಿದರು. ಆದರೆ ಈ ಪ್ರಕರಣದಲ್ಲಿ ಹೇಳಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ ಅಂತ ಹೇಳಿದ್ದಾರೆ. ನಮಗೇನಾದ್ರು ದಾಖಲೆ ಫ್ರೂಫ್ ಇನ್ವಾಲ್ಮೆಂಟ್ ಏನಾದರೂ ಇದ್ರೆ, ನಮ್ಮ‌ ಸರ್ಕಾರ ಏನ್ ಮಾಡಬೇಕೋ ಪಾರದರ್ಶಕವಾಗಿ ತನಿಖೆ ಮಾಡಿಸುತ್ತೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲಿ ಬರೋದಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಅಧಿಕಾರಿಗಳು ಎಲ್ಲೆಲ್ಲಿ ಹೋಗಿ ಏನ್ ಮಾಡಿದ್ದಾರೆ ಅನ್ನೋದನ್ನ ಟ್ರೇಸ್ ಮಾಡ್ತಿದ್ದಾರೆ. ನಮಗೂ ಒಂದರೆಡು ದಿನ ಟೈಂ ಬೇಕು. ಕೆಲವೊಬ್ಬರು ಅರೆಸ್ಟ್ ಆಗಿದ್ದಾರೆ. ಏನ್ ಆಕ್ಷನ್ ತಗೋಬೇಕು ಅಂತಾ ಕೂಡ ಆಗಿದೆ. ಹಿಂದೆಯೆಲ್ಲ ನಾವು ಮಾದರಿಯಾಗಿದ್ದೇವೆ. ಮಿನಿಸ್ಟರ್ ಸಹ ಸಿಎಂ ಜೊತೆ, ನನ್ನ ಜೊತೆ ಮಾತನಾಡಿದ್ದಾರೆ ಎಂದರು. ಇದನ್ನೂ ಓದಿ: ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ

    ಸಿಎಂ ಮೌಖಿಕ ಆದೇಶ ಮೇರೆಗೆ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರವಿ ಅಂತಾ ನನ್ನ ಮೇಲೆ ಆರೋಪ ಮಾಡಿದ್ದಾನೆ. ನಾನು ಅವನು ಇಬ್ಬರು ಪಾರ್ಟ್ನರ್ಸ್. ಇಬ್ಬರು ಆಗಿ ಹಂಚಿಕೊಂಡಿದ್ದೀವಿ ಎಂದು ಸಿ.ಟಿ. ರವಿ ವಿರುದ್ದ ವ್ಯಂಗ್ಯವಾಡಿದರು.

    ಯೂನಿಯನ್ ಬ್ಯಾಂಕ್‌ನಿಂದ ಸಿಬಿಐ ತನಿಖೆಗೆ ಪತ್ರ ಬರೆದ ಬಗ್ಗೆ ಮಾತನಾಡಿ, ಇರ್ಲಿ ಇರಲಿ ತಪ್ಪಿಲ್ಲ. ಒಂದು ಪ್ರೊಸೀಜರ್ ಇದೆ. ಇಷ್ಟು ಕೋಟಿ ಇದ್ದಾಗ ನಾನು ಕೊಡ್ಲಿ ಅಥವಾ ನೀವು ಕೊಡದೇ ಇದ್ದರೂ ಕೂಡ ಅದು ಸಿಬಿಐಗೆ ಹೋಗುತ್ತೆ. ಅದು ಒಂದು ಪ್ರೋಸಿಜರ್. U also know that. ನಮ್ಗೆ ಗೊತ್ತಿಲ್ಲ ಅಂತಾ ತಿಳಿದುಕೊಳ್ಳಬೇಡಿ. ಒಂದಿಷ್ಟು ಅಮೌಂಟ್ ಆದ್ಮೇಕೆ ಯಾವುದಾದರೂ ಬ್ಯಾಂಕ್‌ನಲ್ಲಿ ಹೀಗೆ ಆದ್ರೆ ಯಾವ ಸರ್ಕಾರವೂ ಕೊಡಬೇಕು ಅಂತಿಲ್ಲ. ಅವರು ತಗೋಬೇಕು ಅಂತೇನು ಇಲ್ಲ. ನ್ಯಾಚುರಲ್ ಆಗಿ ಅದು ಸಿಬಿಐ ತನಿಖೆಗೆ ಹೋಗುತ್ತೆ. ನಾವು ಸಹಕರಿಸಲು ಸಿದ್ಧರಿದ್ದೇವೆ. ಆದರೆ ರಾಜಕೀಯ ಇಲ್ಲದೇ ತನಿಖೆ ಮಾಡ್ಲಿ. ಸದ್ಯಕ್ಕೆ ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ. ನಾವೇ ತನಿಖೆ ಮಾಡ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

  • ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

    ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

    ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Valmiki Develoment Corporation) ನಡೆದಿದೆ ಎನ್ನಲಾದ ಹಗರಣದ ತನಿಖೆ ನಡೆಸಲು ಎಸ್‌ಐಟಿ (SIT) ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸರ್ಕಾರ ರಚಿಸಿದೆ. ಇದನ್ನೂ ಓದಿ: ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ

    ನಾಲ್ಕು ಸದಸ್ಯರ ತಂಡ
    ಎಸ್‌ಐಟಿಗೆ ಮುಖ್ಯಸ್ಥರಾಗಿ ಮನೀಶ್‌ ಖರ್ಬೀಕರ್‌ರನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತ ವಾರ್ತೆ ಪೊಲೀಸ್‌ ಅಧೀಕ್ಷಕ ಹರಿರಾಮ್‌ ಶಂಕರ್‌, ಸಿಐಡಿ ಪೊಲೀಸ್‌ ಅಧೀಕ್ಷಕ ರಾಘವೇಂದ್ರ ಕೆ. ಹೆಗಡೆ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

    ಶಿವಮೊಗ್ಗದಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ನಿಗಮದ ಮುಖ್ಯ ನಿಬಂಧಕ ಎ.ರಾಜಶೇಖರನ್‌ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ನೀಡಿರುವ ಕ್ರಿಮಿನಲ್‌ ದೂರು ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾವಣೆ ಮಾಡಬೇಕು. ಎಸ್‌ಐಟಿ ಸಮಗ್ರವಾಗಿ ತನಿಖೆ ನಡೆಸಿ ಪೊಲೀಸ್‌ ಇಲಾಖೆ ಮೂಲಕ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಶಿವಮೊಗದ ತಮ್ಮ ನಿವಾಸದಲ್ಲಿ‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 87 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು.

  • ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ

    ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ

    ಬೆಂಗಳೂರು: ಎಸ್‌ಟಿ ನಿಗಮ ಹಗರಣ ಪ್ರಕರಣದ ತನಿಖೆಗೆ ಎಸ್‌ಐಟಿ (SIT) ರಚನೆ ಬಳಿಕ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ವಾಲ್ಮೀಕಿ ನಿಗಮದ (Valmiki Development Corporation) ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಎಸ್‌ಐಟಿ ಬಂಧಿಸಿದೆ.

    ವಾಲ್ಮೀಕಿ ನಿಗಮದ ಹಗರಣದ ಕುರಿತು ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬಿತ್ತರಿಸಿತ್ತು. ಶುಕ್ರವಾರ ರಾತ್ರಿ ಪದ್ಮನಾಭ್ ಮತ್ತು ಪರಶುರಾಮ್‌ನನ್ನು ಎಸ್‌ಐಟಿ ಬಂಧಿಸಿದ್ದು, ಇಂದು ಮಧ್ಯಾಹ್ನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    ಹಗರಣ ಬೆಳಕಿಗೆ ಬಂದ ಬಳಿಕ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಎಸ್ಕೇಪ್ ಆಗಿದ್ದರು. ಬೆಂಗಳೂರು ಹೊರವಲಯದಲ್ಲಿ ಅವರನ್ನು ಬಂಧಿಸಲಾಗಿದೆ. ಇಂದು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಎಸ್‌ಐಟಿ ತನ್ನ ಕಸ್ಟಡಿಗೆ ಪಡೆಯಲಿದೆ. ಇದನ್ನೂ ಓದಿ: ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರ ನೀಡದೇ ಅಸಹಕಾರ

  • ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    – ಯಾವ್ಯಾವ ಖಾತೆಗೆ ಎಷ್ಟು ಹಣ – ಇಲ್ಲಿದೆ ವಿವರ..
    – ನಿಗಮದ ಹಣ ತೆಲಂಗಾಣ ಚುನಾವಣೆಗೆ? – ಬಿಜೆಪಿ ಆರೋಪ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Corporation) ಹಗರಣ ಬಗೆದಷ್ಟು ಬಯಲಾಗುತ್ತಿದೆ. ನಿಗಮದ ಮುಖ್ಯ ಖಾತೆಯಿಂದ ತೆಗೆದ ಬಹುಕೋಟಿ ಹಣ ಎಲ್ಲೆಲ್ಲಿಗೆ ವರ್ಗಾವಣೆಯಾಯಿತು? ಯಾವ ಕಂಪನಿಗಳಿಗೆ ಎಷ್ಟು ಹಣ ಹೋಗಿದೆ ಎಂಬ ಬಗ್ಗೆ ‘ಪಬ್ಲಿಕ್‌ ಟಿವಿ’ ಎಕ್ಸ್‌ಕ್ಲೂಸಿವ್‌ ವರದಿ ಇಲ್ಲಿದೆ.

    89.62 ಕೋಟಿ ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. 8 ಕ್ಕೂ ಹೆಚ್ಚು ವೈಯಕ್ತಿಕ ಖಾತೆಗಳಿಗೂ ಹಣ ವರ್ಗಾವಣೆ ಆಗಿದೆ. ಬರೋಬ್ಬರಿ 40.10 ಕೋಟಿ ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಕೆಲ ಸಾಫ್ಟವೇರ್ ಕಂಪನಿಗಳ ಖಾತೆಗಳಿಗೂ ಹಣ ಹೋಗಿದೆ. ಅವುಗಳ ಪೈಕಿ ಬೆಂಗಳೂರಿನ ಕಂಪನಿಗಳೇ ಅಧಿಕ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ ಆರ್‌ಬಿಎಲ್‌ನ ಶಾಖೆಯಲ್ಲೂ ಖಾತೆ ಇದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ?
    ಮಾರ್ಚ್ 5
    ಪಿಫ್‌ಮಸ್ ಮ್ಯಾನೇಜ್‌ಮೆಂಟ್ ಪ್ರೈ.ಲಿ- 5.35 ಕೋಟಿ ವರ್ಗಾವಣೆ
    ಝಲಿಯಂಟ್ ಟ್ರೈನಿಂಗ್ ಆ್ಯಂಡ್ ಕನ್ಸಲ್ಟಿಂಗ್ ಸರ್ವೀಸ್- 4.97 ಕೋಟಿ ವರ್ಗಾವಣೆ

    ಮಾರ್ಚ್ 6
    ಹ್ಯಾಪಿಯೆಸ್ಟ್‌ ಮೈಂಡ್ಸ್ ಟೆಕ್ನಾಲಜೀಸ್ ಲಿ- 4.53 ಕೋಟಿ
    ವೈಎಂ ಎಂಟರ್‌ಪ್ರೈಸಸ್- 4.98 ಕೋಟಿ
    ಮನ್ಹು ಎಂಟರ್‌ಪ್ರೈಸಸ್- 25.01 ಕೋಟಿ
    ಅಕಾರ್ಡ್ ಬ್ಯುಸಿನೆಸ್ ಸರ್ವೀಸಸ್- 5.46 ಕೋಟಿ
    ಮೆ.ಟ್ಯಾಲೆಂಕ್ ಸಾಫ್ಟ್‌ವೇರ್ ಇಂಡಿಯಾ ಪ್ರೈ.ಲಿ- 5.10 ಕೋಟಿ

    ಮಾರ್ಚ್ 11
    ನಿತ್ಯ ಸೆಕ್ಯುರಿಟಿ ಸರ್ವೀಸಸ್- 4.47 ಕೋಟಿ
    ವೋಲ್ಟಾ ಟೆಕ್ನಾಲಜಿ ಸರ್ವೀಸಸ್- 5.12 ಕೋಟಿ

    ಮಾರ್ಚ್ 23
    ವಿ6 ಬ್ಯುಸಿನೆಸ್ ಸಲ್ಯೂಷನ್ಸ್- 4.50 ಕೋಟಿ

    ಮಾರ್ಚ್ 30
    ಎಂಟು ವೈಯಕ್ತಿಕ ಖಾತೆಗಳಿಗೆ- 40.10 ಕೋಟಿ

    ನಿಗಮದ ಹಣ ತೆಲಂಗಾಣ ಚುನಾವಣೆಗಾ?
    ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೂ ಹೋಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. ಆರೋಪದ ಬೆನ್ನಲ್ಲೇ 8 ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಬಹಿರಂಗವಾಗಿದೆ. ನಿಗಮದ ಹಣವನ್ನ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡುವುದೇ‌ ಅಕ್ರಮ. ಅಕ್ರಮ ಹಣ ವರ್ಗಾವಣೆಯ ಅರ್ಧದಷ್ಟು ಹಣ ವೈಯಕ್ತಿಕ ಖಾತೆಗಳಿಗೆ ಹೋಗಿದೆ.