Tag: Valmiki Development Corporation Scam

  • ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಕೋಟಿ ಕೋಟಿ ಲೂಟಿ ಆರೋಪ

    ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಕೋಟಿ ಕೋಟಿ ಲೂಟಿ ಆರೋಪ

    – ಎಸ್ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ – ಈರಣ್ಣ ಕಡಾಡಿ

    ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ (Valmiki Scam) ಇದೀಗ ರಾಜ್ಯಸಭೆಯಲ್ಲಿ (Rajya Sabha) ಪ್ರತಿಧ್ವನಿಸಿದ್ದು, ಸಂಸದ ಈರಣ್ಣ ಕಡಾಡಿ (Eranna Kadadi) ವಾಲ್ಮೀಕಿ ಹಗರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

    ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದೆ ಎಂದು ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ (Congress) ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಸನದಿಂದ ಎದ್ದು ಗಲಾಟೆ ಮಾಡಿದರು. ಇದೇ ವಿಚಾರವಾಗಿ ಮಾತನಾಡಲು ನಮಗೂ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ಟಿಬಿ ಡ್ಯಾಂನ 30 ಕ್ರಸ್ಟ್‌ ಗೇಟ್‌ ಓಪನ್‌; 90‌,000 ಕ್ಯುಸೆಕ್‌ ನೀರು ನದಿಗೆ – ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

    ಕರ್ನಾಟಕದ ಅಭಿವೃದ್ಧಿಗೆ ಇಟ್ಟ ಹಣ ಹಾಡಹಗಲೇ ಲೂಟಿ ಮಾಡಿದ್ದಾರೆ. 187 ಕೋಟಿ ರೂ. ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಹಾಗಾಗಿ ಈ ಸದನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಡಾಡಿ ಆಗ್ರಹಿಸಿದರು. ಈರಣ್ಣ ಕಡಾಡಿಯವರ ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ – ಮುಡಾ ಸೈಟ್ ಹಂಚಿಕೆ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

    ಇನ್ನು ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಿತ್ಯ ಒಂದು ಅವ್ಯವಹಾರ ಹೊರಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಬೇನಾಮಿ ಖಾತೆಗೆ ಹಣ ಜಮೆಯಾಗುವುದಲ್ಲದೇ ಮದ್ಯ ಖರೀದಿ ಮಾಡಿದೆ. ಶೋಷಿತ ಜನಾಂಗದ ಹಣವನ್ನು ಚುನಾವಣೆಯಲ್ಲಿ ಅಭ್ಯರ್ಥಿಗಳ ಬಳಕೆಗೆ ಬಳಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ – ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್

    ಮುಡಾದಲ್ಲಿ (MUDA) ಸಿಎಂ ಕುಟುಂಬಸ್ಥರಿಂದ ಅಕ್ರಮವಾಗಿದೆ. ಶೋಷಿತರ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅವರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ನಾನು ರಾಜ್ಯಸಭೆಯಲ್ಲಿ ಮಾತನಾಡಿದ್ದೇನೆ. ಹಣ ದುರುಪಯೋಗದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ಆಗದಂತೆ ನೋಡಿಕೊಂಡಿದೆ. ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ತನಿಖೆಗೆ ಆಗ್ರಹಿಸಿದ್ದೇವೆ. ಎಐಸಿಸಿಗೂ ಕರ್ನಾಟಕದಿಂದ ಹಣ ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದರಿಂದ ಹೊರ ಬರಲು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: KRSನಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಕಾವೇರಿ ಕೊಳ್ಳದಲ್ಲಿ ಪ್ರವಾಹ

  • ಮಾಜಿ ಸಚಿವ ನಾಗೇಂದ್ರ ಇಡಿ ಕಸ್ಟಡಿ ಇಂದಿಗೆ ಅಂತ್ಯ

    ಮಾಜಿ ಸಚಿವ ನಾಗೇಂದ್ರ ಇಡಿ ಕಸ್ಟಡಿ ಇಂದಿಗೆ ಅಂತ್ಯ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ (B Nagendra) ಅವರ ಇಡಿ (ED) ಕಸ್ಟಡಿ ಇಂದಿಗೆ ಅಂತ್ಯವಾಗಿದೆ.

    ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರ ಕಂಡುಬಂದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿ 11 ದಿನಗಳ ಕಾಲ ತನಿಖೆ ನಡೆಸಿದ್ದಾರೆ. ನಾಗೇಂದ್ರ ಅವರನ್ನು ಆರಂಭದಲ್ಲಿ 6 ದಿನ ಕಸ್ಟಡಿಗೆ ಪಡೆದಿದ್ದ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಮತ್ತೆ ಕಸ್ಟಡಿಗೆ ಕೇಳಿದ್ದರು. ಈ ಹಿನ್ನೆಲೆ ನ್ಯಾಯಾಲಯ ನಾಗೇಂದ್ರ ಅವರನ್ನು ಎರಡನೇ ಬಾರಿಗೆ 5 ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ತಮಿಳುನಾಡಿಗೆ ನಾವು ನೀರು ಬಿಟ್ಟಿಲ್ಲ: ಡಿಕೆಶಿ

    ಇಂದು ನಾಗೇಂದ್ರ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನು ನಾಗೇಂದ್ರ ಅವರು ಇಡಿ ಕಸ್ಟಡಿಯಲ್ಲಿ ಇರುವಾಗಲೇ ಅವರ ಪತ್ನಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಉಳಿದಂತೆ ಆರೋಪಿಗಳು ಚುನಾವಣೆ ವೇಳೆ ಎಣ್ಣೆಗೆ ಹಣ ಬಳಸಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ನಾಗೇಂದ್ರ ಉತ್ತರಿಸದ ಕಾರಣ ಮತ್ತೊಮ್ಮೆ ಇಡಿ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದಿನಿಂದ ಸಂಸತ್‌ ಅಧಿವೇಶನ ಆರಂಭ – ನಾಳೆ ಕೇಂದ್ರ ಬಜೆಟ್‌ ಮಂಡನೆ

  • Valmiki Corporation Scam | ನಿಗಮದ ಹಣವನ್ನ ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ – ಇಡಿ ಸ್ಫೋಟಕ ಹೇಳಿಕೆ!

    Valmiki Corporation Scam | ನಿಗಮದ ಹಣವನ್ನ ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ – ಇಡಿ ಸ್ಫೋಟಕ ಹೇಳಿಕೆ!

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನಿಗಮದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ ಎಂದು ಉಲ್ಲೇಖಿಸಿದೆ.

    4 ರಾಜ್ಯಗಳಲ್ಲಿ 23 ಕಡೆ ಇಡಿ ಅಧಿಕಾರಿಗಳ (ED Officers) ತಂಡ ದಾಳಿ ನಡೆಸಿತ್ತು. ಈ ವೇಳೆ ಅನೇಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದ ಇಡಿ ಬುಧವಾರ ಮಾಹಿತಿ ಬಹಿರಂಗಪಡಿಸಿದೆ. ಈ ಪ್ರಕರಣದಲ್ಲಿ ಸುಮಾರು 90 ಕೋಟಿ ರೂ.ಗಳಷ್ಟು ಅಕ್ರಮ ಮಾಡಲು 18 ನಕಲಿ ಬ್ಯಾಂಕ್‌ ಖಾತೆಗಳನ್ನ ಬಳಸಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಮದ್ಯ ಖರೀದಿ ಮಾಡಲು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

    ಅಲ್ಲದೇ, ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬಿ.ಎನ್‌ ನಾಗೇಂದ್ರ ಮತ್ತು ದದ್ದಲ್ ಅವರ ಮನೆಯಲ್ಲಿ ಕೆಲ ಪ್ರಮುಖ ದಾಖಲೆಗಳನ್ನೂ ವಶಕ್ಕೆ ಪಡೆಯಲಾಗಿದೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಕೂಡ ಭಾಗಿ ಆಗಿದ್ದಾರೆ ಅಂತ ಇಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

    ಮೇ 26ರಂದು ನಿಗಮದ ಉದ್ಯೋಗಿ ಚಂದ್ರಶೇಖರನ್‌ ಆತ್ಮಹತ್ಯೆಯ ಬಳಿಕ ರಾಜ್ಯ ಪೊಲೀಸರು ಹಾಗೂ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಅಕ್ರಮದ ಬೆನ್ನತ್ತಿ ಹೊರಟಾಗ ಗಣನೀಯ ಪ್ರಮಾಣದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಲಾಗಿದೆ. ಇದರೊಂದಿಗೆ ಅಕ್ರಮದಲ್ಲಿ ಬಂದ ಇತರೇ ಹಣವನ್ನು ಬಳಸಿಕೊಂಡು ಲ್ಯಾಂಬೋರ್ಗಿನಿ ಸೇರಿದಂತೆ ಐಷಾರಾಮಿ ವಾಹನಗಳನ್ನ ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ ನೀಡುವ ಮೂಲಕ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುತ್ತಿದೆ: ಡಿಕೆಶಿ

    ಮಾಜಿ ಸಚಿವ ನಾಗೇಂದ್ರ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನಗದು ನಿರ್ವಹಣೆಯಲ್ಲಿ ತೊಡಗಿದ್ದ ಸಹವರ್ತಿಗಳ ಬಗ್ಗೆಯೂ ಮಾಹಿತಿ ಬಯಲಾಗಿದೆ. ಅಷ್ಟೇ ಅಲ್ಲದೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರ ನಿವಾಸದಲ್ಲಿ ಅಕ್ರಮ ಹಣ ನಿರ್ವಹಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಆ ನಂತರ ನಾಗೇಂದ್ರ ಅವರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್‌ ಜು.18ರ ವರೆಗೆ ಇಡಿ ಕಸ್ಟಡಿಗೆ ನೀಡಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆ – ಪ್ರಾಯೋಗಿಕ ಸಂಚಾರಕ್ಕೆ ಡಿಕೆಶಿ ಚಾಲನೆ!

  • Valmiki Scam| ಪ್ರಮುಖ ಪಾತ್ರ ವಹಿಸಿದ್ದ ಮತ್ತೋರ್ವ ಆರೋಪಿ ಅರೆಸ್ಟ್

    Valmiki Scam| ಪ್ರಮುಖ ಪಾತ್ರ ವಹಿಸಿದ್ದ ಮತ್ತೋರ್ವ ಆರೋಪಿ ಅರೆಸ್ಟ್

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ಮತ್ತೋರ್ವ ಆರೋಪಿಯನ್ನು ಬಂಧಿಸಿದೆ.

    ಕಾಕಿ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಮೂಲತಃ ವಿಜಯವಾಡದನಾಗಿದ್ದು, 2 ವರ್ಷಗಳಿಂದ ಬೆಂಗಳೂರಿನ ಯಶವಂತಪುರದ ಬಳಿ ಕುಟುಂಬದೊಂದಿಗೆ ನೆಲೆಸಿದ್ದ. ಶ್ರೀನಿವಾಸ್ ಅಕ್ರಮ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈತ ನಗರಕ್ಕೆ ಬಂದ ತಕ್ಷಣ ಎಸ್‌ಐಟಿ ಬಂಧಿಸಿದೆ. ನಂತರ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದೆ.

     

    ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್:
    ಆರೋಪಿ ಶ್ರೀನಿವಾಸ್ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದು, ಈತನ ಪತ್ನಿ ಬೆಂಗಳೂರಿನ ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಆರೋಪಿ ಸುಲಭವಾಗಿ ಹಣ ಮಾಡಲು ಅಡ್ಡದಾರಿ ಹಿಡಿದಿದ್ದ. ಈತನಿಗೆ ಹಲವು ವರ್ಷಗಳಿಂದ ಸತ್ಯನಾರಾಯಣ ವರ್ಮಾನೊಂದಿಗೆ ಸ್ನೇಹವಿತ್ತು. ಈ ಗೆಳೆತನದಿಂದ ಸತ್ಯನಾರಾಯಣ ವರ್ಮಾನ ಅಕ್ರಮ ಹಣ ವರ್ಗಾವಣೆಯಲ್ಲಿ ಶ್ರೀನಿವಾಸ್ ಕೂಡ ಭಾಗಿಯಾಗಿದ್ದ.

    ಈ ಹಿಂದೆ ವಾಲ್ಮೀಕಿ ಪ್ರಕರಣದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಅಭಿವೃದ್ಧಿ ಮಂಡಳಿಯಲ್ಲಿ 14 ಕೋಟಿ ರೂ. ನುಂಗಿದ ಕೇಸ್‌ನಲ್ಲಿ ಸತ್ಯನಾರಾಯಣ ವರ್ಮಾ ಜೊತೆ ಶ್ರೀನಿವಾಸ್ ಕೂಡ ಜೈಲು ಸೇರಿದ್ದ. ಕಳೆದ ಅಕ್ಟೋಬರ್‌ನಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಬಂದು ಮತ್ತೆ ವಾಲ್ಮೀಕಿ ಹಗರಣ ಶುರು ಮಾಡಿದ್ದಾನೆ.

    ವಾಲ್ಮೀಕಿ ಹಗರಣದಲ್ಲಿ ಆರೋಪಿಗೆ 10 ಕೋಟಿ:
    ವಾಲ್ಮೀಕಿ ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ್‌ಗೆ 10 ಕೋಟಿ ರೂ. ಸಂದಾಯವಾಗಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆ ಹಣವನ್ನು ಹವಾಲಾ ಮೂಲಕ ನಗದು ಮಾಡಿಕೊಂಡಿದ್ದ ಎಂದು ಇನ್ನೋರ್ವ ಆರೋಪಿ ಸತ್ಯನಾರಾಯಣ ವರ್ಮಾ ಬಾಯ್ಬಿಟ್ಟಿದ್ದಾನೆ. ಆದರೆ ವಿಚಾರಣೆ ವೇಳೆ ಈತ ತನಗೆ ಯಾವುದೇ ಹಣ ಬಂದಿಲ್ಲ ಎಂದಿದ್ದಾನೆ. ಈ ಹಿನ್ನೆಲೆ ಎಸ್‌ಐಟಿಯಿಂದ ಹಣ ಜಪ್ತಿ ಪ್ರಕ್ರಿಯೆ ಮುಂದುವರಿದಿದೆ.

  • ಇಡಿ ಬಂಧನ ಭೀತಿ – ಅಜ್ಞಾತವಾಸದಲ್ಲಿ ದದ್ದಲ್, ರಾಯಚೂರಿನಲ್ಲಿ ಆಪ್ತರ ಭೇಟಿ

    ಇಡಿ ಬಂಧನ ಭೀತಿ – ಅಜ್ಞಾತವಾಸದಲ್ಲಿ ದದ್ದಲ್, ರಾಯಚೂರಿನಲ್ಲಿ ಆಪ್ತರ ಭೇಟಿ

    – ಮಳೆಗಾಲದ ಅಧಿವೇಶನ ನೆಪದಲ್ಲಿ ವಿಚಾರಣೆಗೆ ಗೈರಾಗ್ತಾರಾ ದದ್ದಲ್?

    ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) 187 ಕೋಟಿ ರೂ. ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಇಡಿ (ED) ಬಂಧನದ ಭೀತಿಯಲ್ಲೇ ಓಡಾಡುತ್ತಿದ್ದಾರೆ. ಯಾರ ಸಂಪರ್ಕಕ್ಕೂ ಸಿಗದ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ (Raichur)  ಬಂದು ಆಪ್ತರನ್ನು ಮಾತ್ರ ಭೇಟಿ ಮಾಡಿ ಹೋಗಿದ್ದಾರೆ.

    ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿಯಲ್ಲಿರುವ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಇಡಿ ವಿಚಾರಣೆಗೆ ಹಾಜರಾಗ್ತಾರಾ? ಅಥವಾ ಯಾರ ಸಂಪರ್ಕಕ್ಕೂ ಸಿಗದೇ ಅಜ್ಞಾತವಾಸದಲ್ಲೇ ಮುಂದುವೆರೆಯುತ್ತಾರಾ? ಅನ್ನೋದು ಸದ್ಯದ ಕುತೂಹಲ. ಆದರೆ ಇಡಿ ಬಂಧನದ ಭೀತಿಯಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಬಂಧಿಸುವಂತೆ ಕೇಳಿಕೊಂಡಿರುವ ದದ್ದಲ್ ಈಗ ಪ್ಲಾನ್ ಬಿ ನಡೆಸಿರುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಇದನ್ನೂ ಓದಿ: ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಇಂದಿನಿಂದ ಆರಂಭವಾಗುವ ಮಳೆಗಾಲದ ಅಧಿವೇಶನ ನೆಪದಲ್ಲಿ ಇಡಿ ವಿಚಾರಣೆಗೆ ಗೈರಾಗುವ ಸಾಧ್ಯತೆಗಳೂ ಇವೆ. ಎರಡು ದಿನಗಳ ಕಾಲ ನಡೆದ ಇಡಿ ದಾಳಿಯಲ್ಲಿ ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ಕಲೆ ಹಾಕಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿರುವ ದದ್ದಲ್ ಇಂದಿನ ಅಧಿವೇಶನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ವಿಚಾರಣೆಗೆ ಗೈರಾದರೆ ಸ್ಪೀಕರ್ ಅನುಮತಿ ಪಡೆದು ದದ್ದಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸುವ ಅವಕಾಶವಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕಿಕ್‌ ಬ್ಯಾಕ್‌: ಹೆಚ್‌ಡಿಕೆ ಬಾಂಬ್‌

    ಯಾರ ಸಂಪರ್ಕಕ್ಕೂ ಸಿಗದ ಬಸನಗೌಡ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ ಬಂದು ಬೆಳಗಾಗುತ್ತಿದ್ದಂತೆ ಹೊರಟು ಹೋಗಿದ್ದು ಯಾಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕುಟುಂಬ ಬಿಟ್ಟು ಏಕಾಂಗಿಯಾಗಿ ರಾಯಚೂರಿಗೆ ಬಂದ ದದ್ದಲ್ ಕೆಲವೇ ಕೆಲವು ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಬೆಳಗ್ಗೆ ಮಂತ್ರಾಲಯ ಮಾರ್ಗವಾಗಿ ಬೆಂಗಳೂರು ಕಡೆಗೆ ಹೊರಟು ಹೋಗಿದ್ದಾರೆ. ತನ್ನ ಕಾರನ್ನು ಬಳಸದೆ ಬೆಂಗಳೂರಿನಿಂದ ಬರುವಾಗ ಆಪ್ತರ ಕಾರನ್ನು ಬಳಸಿದ್ದಾರೆ. ಮಂತ್ರಾಲಯದವರೆಗೂ ಆಪ್ತನ ಕಾರಿನಲ್ಲೇ ತೆರಳಿ ಮಂತ್ರಾಲಯದಿಂದ ಕಾರು ಬದಲಿಸಿ ಬೆಂಗಳೂರು ಕಡೆಗೆ ಹೋಗಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!

    ಭಾನುವಾರ ಬೆಳಗ್ಗೆ ರಾಯಚೂರಿನಿಂದ ಹೊರಟ ಬಸನಗೌಡ ದದ್ದಲ್ ಮಾರ್ಗಮಧ್ಯೆ ಗಿಲ್ಲೆಸುಗೂರಿನಲ್ಲಿ ಕಾರ್ಯಕರ್ತರನ್ನು ಮಾತನಾಡಿಸಿದ್ದಾರೆ. ಗುಡದೂರಿನ ರಾಮರಾವು ತಾತನ ಆಶಿರ್ವಾದ ಪಡೆದು ದದ್ದಲ್ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಬೇರೆ ಯಾರ ಸಂಪರ್ಕಕ್ಕೆ ಸಿಗದೆ ಓಡಾಡಿಕೊಂಡಿರುವ ದದ್ದಲ್ ಇಡಿ ಬಂಧನ ಭೀತಿಯಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಸಿದ್ದಾರೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು

  • ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ನಿರ್ದೇಶನ ಇರಬಹುದು: ಜನಾರ್ದನ ರೆಡ್ಡಿ

    ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ನಿರ್ದೇಶನ ಇರಬಹುದು: ಜನಾರ್ದನ ರೆಡ್ಡಿ

    ಕೊಪ್ಪಳ: ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ (Valmiki Development Corporation scam) ದೇಶದಲ್ಲೇ ನಡೆದ ದೊಡ್ಡ ಹಗರಣವಾಗಿದೆ. ಈ ಹಗರಣದಲ್ಲಿ ರಾಜೀನಾಮೆ ಕೊಡಬೇಕಾಗಿರುವುದು ಸಿಎಂ ಸಿದ್ದರಾಮಯ್ಯನವರ (Siddaramaiah) ಹೊರತು ಬೇರೆ ಯಾರು ಅಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (G.Janardhana Reddy) ಹೇಳಿದ್ದಾರೆ.

    ಗಂಗಾವತಿಯಲ್ಲಿ ಮಾತನಾಡಿದ ಅವರು, ಈ ಹಗರಣದಲ್ಲಿ ನಾಗೇಂದ್ರ ಒಬ್ಬರೇ ಇರಲು ಸಾಧ್ಯವಿಲ್ಲ. ಇನ್ನೂ ಹಲವರು ಇದರ ಹಿಂದೆ ಇದ್ದಾರೆ. ಸಿಎಂ ಹಿಡಿತದಲ್ಲಿರುವ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಖಾತೆಗಳಿಗೆ ಹಣ ಜಮಾ ಮಾಡಿದ್ದಾರೆ. ಇದೆ ಹಣವನ್ನು ವಿವಿಧ ಕಡೆಗಳಲ್ಲಿ ಚುನಾವಣೆಗೆ ಬಳಕೆ ಮಾಡಿದ್ದಾರೆ. ಸಿಎಂ ಅವರ ನಿರ್ದೇಶನವಿಲ್ಲದೆ ಈ ಹಗರಣ ನಡೆದಿದೆ ಎಂದರೆ ಇದನ್ನು ಯಾರು ನಂಬಲು ಸಾಧ್ಯವಿಲ್ಲ. ಇದಕ್ಕೆಲ್ಲ ಸಿಎಂ ಅವರದ್ದೇ ನಿರ್ದೇಶನ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ ಅಂದರ್‌ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್‌

    ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ, ಬೆಲೆ ಏರಿಕೆ ಮಾಡಿ ನಾಚಿಕೆ ಇಲ್ಲದೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕು ಎಂದು ಕಾಂಗ್ರೆಸ್ ಸಚಿವರು ಮಾತನಾಡುತ್ತಿದ್ದಾರೆ. ಜನರ ರಕ್ತ ಕುಡಿದು ಜನರಿಗೆ ಮರಳಿ ಹಣ ಕೊಡುತ್ತಿದ್ದಾರೆ. ರಾಜ್ಯದ ಜನರನ್ನು ಬೀದಿಗೆ ತರುವ ಸ್ಥಿತಿಗೆ ಕಾಂಗ್ರೆಸ್ ತಂದಿದೆ. ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನ ಮುಂದುವರೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ತಿರುಗಿ ಬೀಳುವ ಸ್ಥಿತಿಯಲ್ಲಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಅವರು ಹೇಳಿದ್ದಾರೆ.

    ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನ ವಿಚಾರವಾಗಿ, ಹೊಸ ಅಭ್ಯರ್ಥಿಯ ಪರಿಚಯ ಹಾಗೂ ಕರಡಿ ಸಂಗಣ್ಣ ಅವರ ಗೊಂದಲದ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಾವಿನ ಬಗ್ಗೆ ಭಾವನಾತ್ಮವಾಗಿ ಮಾತಾಡಿರುವುದು, ಎಲ್ಲವೂ ಸೇರಿ ನಮ್ಮ ಅಭ್ಯರ್ಥಿಗೆ ಸೋಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಕ್ರೀದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯಗೆ ಅಮಾಮ್ ಟೋಪಿ ಹಾಕಿ ಸನ್ಮಾನ

  • ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

    ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Development Corporation Scam) ಸಿಎಂ ಸಿದ್ದರಾಮಯ್ಯ (Siddaramaiah), ಸಚಿವ ನಾಗೇಂದ್ರ (B.Nagendra) ರಾಜೀನಾಮೆ ಕೊಡಬೇಕು. ಅಷ್ಟೇ ಅಲ್ಲದೇ ಭ್ರಷ್ಟ ಸರ್ಕಾರವನ್ನು ವಜಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಶಾಸಕರನ್ನು ಒಳಗೊಂಡ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.

    ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ದೊಡ್ಡ ಹಗರಣ ನಡೆದಿದೆ. ವಾಲ್ಮೀಕಿ ನಿಗಮದ ಹಣ ಹೈದರಾಬಾದ್‍ನಲ್ಲಿ ಫೇಕ್ ಅಕೌಂಟ್ ತೆಗೆದು ವರ್ಗಾವಣೆ ಮಾಡಲಾಗಿದೆ. ಇದೊಂದು ದೊಡ್ಡ ಅಕ್ರಮ. ಹಣಕಾಸು ಇಲಾಖೆ ಅನುಮತಿ ಇಲ್ಲದೆ ಇದು ಆಗಲು ಸಾಧ್ಯವಿಲ್ಲ. ಸಿಎಂ ಗಮನಕ್ಕೆ ಬಾರದೇ ಈ ಹಗರಣ ನಡೆದಿಲ್ಲ. ಹೀಗಾಗಿ ಸಿಎಂ ರಾಜೀನಾಮೆ ಪಡೆಯಬೇಕು ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ

    ಸಚಿವರ ರಾಜೀನಾಮೆ ಮಾತ್ರ ಅಲ್ಲ ಸಿಎಂ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಇಂತಹ ದೊಡ್ಡ ಹಗರಣ ನಡೆದಿಲ್ಲ. ಸಿಎಂ, ಸಚಿವರು ಇಬ್ಬರ ರಾಜೀನಾಮೆ ಪಡೆಯಬೇಕು ಎಂದು ರಾಜ್ಯಪಾಲನ್ನು ಒತ್ತಾಯಿಸಿದ್ದೇವೆ ಎಂದರು.

    ಬಿಜೆಪಿಯವರು ಪ್ರತಿಭಟನೆ ಮಾಡಿಕೊಳ್ಳಲಿ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಸಿಎಂ ಹೀಗೆ ಉಡಾಫೆ ಮಾತಾಡಿ ಹೀಗೆ ಆಗಿದೆ. ಗ್ಯಾರಂಟಿ 20 ಸ್ಥಾನ ಗೆಲ್ತೀವಿ ಎಂದು ಹೇಳಿ ಜನ ಈ ಮಟ್ಟಕ್ಕೆ ನಿಮ್ಮನ್ನ ತಂದಿದ್ದಾರೆ. ಎಸ್‍ಟಿ ಸಮುದಾಯಕ್ಕೆ ಮೀಸಲಿದ್ದ ಹಣ ಅಕ್ರಮವಾಗಿದೆ. ಈ ಬಗ್ಗೆ ಸಿಎಂ ಹಾರಿಕೆ ಉತ್ತರ ಕೊಡೋದು ಸರಿಯಲ್ಲ. ಅವರು ಆನೆ ನಡೆದಿದ್ದೇ ದಾರಿ ಅಂದುಕೊಳ್ಳಬಾರದು. ಇದನ್ನ ನಾವು ಇಲ್ಲಿಗೆ ಬಿಡೋದಿಲ್ಲ. ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

    ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ನಿಗಮದ ಬ್ರಹ್ಮಾಂಡದ ಭ್ರಷ್ಟಾಚಾರವಾಗಿದೆ. ಎಸ್‍ಟಿ ಸಮುದಾಯಕ್ಕೆ ಮೀಸಲಿದ್ದ ಹಣ ಇವತ್ತು ಸಿದ್ದರಾಮಯ್ಯ ಜೇಬಿಗೆ ಹೋಗಿದೆ. ಇಂತಹ ನೀಚ ಸರ್ಕಾರ ಯಾವತ್ತು ಬಂದಿಲ್ಲ. ಎಸ್‍ಟಿ ಜನಾಂಗಕ್ಕೆ ಸೇರಬೇಕಾದ ಹಣ ನುಂಗುತ್ತಾರೆ ಎಂದರೆ ಇಂತಹ ಸರ್ಕಾರ ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ. ಚುನಾವಣೆಗಾಗಿ ಈ ಹಣ ಹೈದರಾಬಾದ್‍ಗೆ ಹೋಗಿದೆ. ಇದೆಲ್ಲ ಪ್ರೀ ಪ್ಲ್ಯಾನ್. ರಾಹುಲ್ ಗಾಂಧಿಯಿಂದಲೇ ಈ ಹಗರಣ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಮೂಗಿನ ಅಡಿ ಈ ಅಕ್ರಮ ನಡೆದಿದೆ. ನಿಮ್ಮ ಅನುಮತಿ ಇಲ್ಲದೆ ಹಣ ಹೇಗೆ ಹೋಯ್ತು? ಈ ಅಕ್ರಮದಿಂದ ನಾಗೇಂದ್ರಗೆ ಮಾತ್ರ ಕಮಿಷನ್ ಹೋಗಿಲ್ಲ. ನಾಗೇಂದ್ರ 20% ಸಿದ್ದರಾಮಯ್ಯಗೆ 80% ಶೇರ್ ಹೋಗಿದೆ. ಕಾಂಗ್ರೆಸ್ ಒಂದು ವರ್ಷದ ಸಾಧನೆ ಗ್ಯಾರಂಟಿ ಲೂಟಿ, ದೇಶವೇ ಮೆಚ್ಚುವ ಲೂಟಿ ಗ್ಯಾರಂಟಿ ಇವರದ್ದು. ಪಿಕ್ ಪಾಕೆಟ್ ಮಾಡೋದು ಇವರ ಸಾಧನೆ. ಕಾಂಗ್ರೆಸ್ ಎಂದರೆ ಲೂಟಿಕೋರರ ಪಾರ್ಟಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಪ್ರಕರಣ ಮುಚ್ಚಿ ಹಾಕಲು ಸಿಐಡಿಗೆ ಕೊಟ್ಟಿದ್ರು. ಸಿಬಿಐಗೆ ಬ್ಯಾಂಕ್‍ಗೆ ಪತ್ರ ಬರೆದ ಕೂಡಲೇ ಎಸ್‍ಐಟಿ ರಚನೆ ಮಾಡಿದ್ದಾರೆ. ಎಸ್‍ಐಟಿಗೆ ಕೊಟ್ಟರೆ ಸಿಬಿಐಗೆ ಕೇಸ್ ತೆಗೆದುಕೊಳ್ಳಲು ಆಗೊಲ್ಲ ಎಂಬ ತಂತ್ರ ಮಾಡಿದ್ರು. ಈಗಾಗಲೇ ಸಿಬಿಐ ಎಫ್‍ಐಆರ್ ಹಾಕಿದೆ. ಕರ್ನಾಟಕ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಿಬಿಐಗೆ ಒಪ್ಪಿಸಿ. ಇಲ್ಲದೆ ಹೋದರೆ ಇದರಲ್ಲಿ ನಿಮ್ಮ ಪಾತ್ರ ಇದೆ ಎಂದಾಗುತ್ತದೆ. ಇದು ಟಕಾ ಟಕ್ ಎಟಿಎಂ ಸರ್ಕಾರ ಇದು ಅಂತ ವಾಗ್ದಾಳಿ ನಡೆಸಿದ್ದಾರೆ.

    ಇದೊಂದೆ ನಿಗಮ ಅಲ್ಲ, ಅನೇಕ ನಿಗಮಗಳಲ್ಲಿ ಹಣ ವರ್ಗಾವಣೆ ಆಗಿದೆ. ಎಲ್ಲೆಲ್ಲಿಗೆ ಹಣ ಸಾಗಿಸಿದ್ದಾರೆ ತನಿಖೆ ಆಗಬೇಕು. ಹೈದರಾಬಾದ್ ಕಂಪನಿಗಳಿಗೆ ಹೇಗೆ ಹಣ ಹೋಯ್ತು? ಇದಕ್ಕೆ ಸಿಎಂ ಉತ್ತರ ಕೊಡಬೇಕು. ಹೈದರಾಬಾದ್ ನಕಲಿ ಅಕೌಂಟ್‍ಗೆ ಹೋಗಲು ಸಚಿವರ ಪಿಎ ಕಾರಣ ಎಂದು ಹೇಳ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕು. ಈ ವಿಚಾರವಾಗಿ ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ. ಇದಕ್ಕೂ ಬಗ್ಗದೇ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು

  • ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ದರೋಡೆಕೋರರ ನಾಯಕ ಎಂದು ಬಿಜೆಪಿ (BJP) ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ (Valmiki Development Corporation Scam) ಮಂತ್ರಿಗಳ ಪಾತ್ರ ಇದೆ ಎಂದು ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಬರೆದಿತ್ತು. ಆದರೂ ಇಷ್ಟು ತಡವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಕೈ ಹುಣ್ಣಿಗೆ ಕನ್ನಡಿ ಬೇಕಾ? ಚಂದ್ರಶೇಖರನ್ ಆತ್ಮಹತ್ಯೆ ಆದ ಕೂಡಲೇ ರಾಜೀನಾಮೆ ಪಡೆಯಬೇಕಿತ್ತು. ಕೇಸ್ ಮುಚ್ಚಿ ಹಾಕಲು ರಾಜೀನಾಮೆ ಪಡೆಯಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ: ಡಿಕೆಶಿ

    ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯಪಾಲರ ಭೇಟಿ ಮಾಡಿ ಹಗರಣದ ವಿರುದ್ಧ ದೂರು ನೀಡಿದ್ದೇವೆ. ಈಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಸಚಿವರ ರಾಜೀನಾಮೆ ಮಾತ್ರ ಸಾಲದು, ಸಿಎಂ ಸಹ ರಾಜೀನಾಮೆ ಕೊಡಬೇಕು. ಇದೊಂದು ಹಗಲು ದರೋಡೆ. ಸಿಎಂ ಅನುಮತಿ ಇಲ್ಲದೆ ಇಷ್ಟು ಹಣ ಹೊರಗೆ ಹೋಗಿಲ್ಲ. ಇದು ಒಂದು ಇಲಾಖೆಯ ಭ್ರಷ್ಟಾಚಾರ ಅಲ್ಲ. ಬೇರೆ ಬೇರೆ ಇಲಾಖೆಯ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ. ಇದನ್ನ ನಮ್ಮ ನಾಯಕರು ಪತ್ತೆ ಹಚ್ಚುತ್ತಿದ್ದಾರೆ ಎಂದರು.

    ಎಸ್‍ಟಿ ನಿಗಮದ ಹಣ ಅ ಸಮುದಾಯಕ್ಕಾಗಿ ಬಳಸುವ ಹಣ. ಆ ಸಮುದಾಯದ ಮಂತ್ರಿಯನ್ನು ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದೀರಿ. ದಲಿತರಿಗೆ ಅನ್ಯಾಯ ಮಾಡೋಕೆ ಮಹಾದೇವಪ್ಪ ಅವರನ್ನು ಮಂತ್ರಿ ಮಾಡಿ ಭ್ರಷ್ಟಾಚಾರ ಮಾಡಿಸಿದ್ದಾರೆ. ಸಿದ್ದರಾಮಯ್ಯ ದರೋಡೆಕೋರರ ನಾಯಕ. ಅವರು ನೇರವಾಗಿ ಭ್ರಷ್ಟಾಚಾರ ಮಾಡುವುದಿಲ್ಲ. ಬೇರೆಯವರಿಂದ ಭ್ರಷ್ಟಾಚಾರ ಮಾಡಿಸುತ್ತಾರೆ. ಭೂಗತ ಡಾನ್‍ಗಳು ಮಾಡುವ ತರಹ ಚೇರ್‍ನಲ್ಲಿ ಕುಳಿತು ಭ್ರಷ್ಟಾಚಾರ ಮಾಡಿಸುತ್ತಾರೆ ಎಂದು ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ