Tag: Valmiki Corporation Corruption Case

  • Valmiki Corporation Scam | ಮತ್ತೆ 7.5 ಕೋಟಿ ಹಣ ಜಪ್ತಿ – ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ

    Valmiki Corporation Scam | ಮತ್ತೆ 7.5 ಕೋಟಿ ಹಣ ಜಪ್ತಿ – ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ಗೆ (Valmiki Corporation Scam) ಸಂಬಂಧಿಸಿದಂತೆ ಇತ್ತ ಚಾರ್ಜ್‌ಶೀಟ್‌ ಸಲ್ಲಿಸಿರುವ ವಿಶೇಷ ತನಿಖಾ ತಂಡ (SIT) ತನ್ನ ಭೇಟೆಯನ್ನು ಮುಂದುವರಿಸಿದೆ. ಸೋಮವಾರ (ಆ.5) ಮತ್ತೆ 7.5 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ.

    ಫಸ್ಟ್ ಫಿನಾನ್ಸ್ ಬ್ಯಾಂಕ್ಸ್‌ನ ಅಧ್ಯಕ್ಷ ಸತ್ಯನಾರಾಯಣ ಇಟ್ಕಾರಿ ಬಳಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆರ್‌ಬಿಎಲ್‌ ಬ್ಯಾಂಕ್‌ನಲ್ಲಿದ್ದ (RBL Bank) ಇಟ್ಕಾರಿ ಖಾತೆಯಿಂದಲೇ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಈವರೆಗೆ ಎಸ್‌ಐಟಿ ಒಟ್ಟು 57 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ಹೋರಾಟದ ಬಿಸಿಗೆ ಕಾಂಗ್ರೆಸ್ ಸರ್ಕಾರ ಒಂಟಿ ಕಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

    ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ:
    ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ ಅವರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಸೋಮವಾರ (ಆ.5) ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಗೇಂದ್ರ (BN Nagendra) ಅವರನ್ನು ಹಾಜರುಪಡಿಸಲಾಗಿತ್ತು. ನಾಗೇಂದ್ರ ಅವರು ಜಾಮೀನಿಗೆ ಅರ್ಜಿ ಹಾಕದೇ ಇರುವ ಕಾರಣ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಯಿತು. ಆಗಸ್ಟ್ 14ರ ವರೆಗೂ ಇಬ್ಬರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

    3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ:
    ಈವರೆಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಸುಮಾರು 3,072 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ತನಿಖೆಯ ವೇಳೆ ಸುಮಾರು 45 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ಈ ಬೆನ್ನಲ್ಲೇ ಮತ್ತೊಂದು ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನು ಜಪ್ತಿ ಮಾಡಿದೆ. ಇದನ್ನೂ ಓದಿ: ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತ – ಬಿಜೆಪಿ ಕಾರ್ಯಕರ್ತೆ ಸಾವು

  • Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

    Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ (Valmiki Corporation Corruption Case) ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ. ಎಸ್‌ಐಟಿ ತನಿಖೆ ಮಧ್ಯೆಯೇ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಗಮದ ಮಾಜಿ ಸಚಿವ ಬಿ.ನಾಗೇಂದ್ರರನ್ನ (BN Nagendra) ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT Team) ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದೆ.

    ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು, ಈವರೆಗೂ 37 ಕೋಟಿ ರೂ.ಗಿಂತಲೂ ಅಧಿಕ ಹಣ ಹಾಗೂ 16 ಕೆ.ಜಿಗೂ ಹೆಚ್ಚು ಚಿನ್ನವನ್ನ ವಶಪಡಿಸಿಕೊಂಡಿದೆ. ಹೈದ್ರಾಬಾದ್‌ನಲ್ಲೇ ಬೀಡುಬಿಟ್ಟಿರೋ ಎಸ್‌ಐಟಿ ಸೈಬರ್ ತಜ್ಞರ ತಂಡ, ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ವರ್ಮಾಗೆ ಸಂಬಂಧಿಸಿದ ಕಚೇರಿ ಹಾಗೂ ಕೆಲ ಹಣಕಾಸು ವ್ಯವಹಾರದ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

    ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಬಳಿಕ ನಗದು ಸಂಗ್ರಹ ಮಾಡಿದ್ದ ಹಿನ್ನೆಲೆ, ಎಲ್ಲಾ ಬ್ಯಾಂಕ್ ಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಮೂಲ ಖಾತೆದಾರರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ತಂಡ ಸತ್ಯನಾರಾಯಣ ವರ್ಮನನ್ನ ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನು ಸತ್ಯನಾರಾಯಣ ವರ್ಮಾ ವಿಚಾರಣೆ ಮಾಡಲು ಇಡಿ (ED) ಸಹ ಮುಂದಾಗಿದ್ದು, ಎಸ್‌ಐಟಿ ಕಸ್ಟಡಿ ಮುಗಿಯುತ್ತಿದ್ದಂತೆ ವಶಕ್ಕೆ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಎರಡು ಸ್ಥಳಗಳಲ್ಲಿ ಶೋಧ ನಡೆಸಿದ್ದ ಎಸ್‌ಐಟಿ, 6 ಕೆಜಿ ಚಿನ್ನ ಹಾಗೂ 2.50 ಕೋಟಿ ರೂ. ನಗದು ಹಣವನ್ನ ವಶಪಡಿಸಿಕೊಂಡಿತ್ತು. ಆರೋಪಿ ಸತ್ಯನಾರಾಯಣ ವರ್ಮನಿಂದ 5 ಕೆಜಿ ಚಿನ್ನ ಹಾಗೂ ಕಾಕಿ ಶ್ರೀನಿವಾಸ್‌ನಿಂದ 1 ಕೆಜಿ ಚಿನ್ನವನ್ನ ಜಪ್ತಿ ಮಾಡಿಕೊಂಡಿತ್ತು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

  • Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

    Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

    – 56 ಸಾವಿರ ಕಾರ್ಡ್ ಬಿಪಿಎಲ್‌ಗೆ ಅನರ್ಹ: ಸಚಿವ ಮುನಿಯಪ್ಪ
    – ಪರಿಷತ್‌ನಲ್ಲಿ ನಿರೂಪಕಿ ದಿ. ಅಪರ್ಣಾ ಸೇರಿದಂತೆ ಗಣ್ಯರಿಗೆ ಸಂತಾಪ

    ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಆರಂಭವಾಗಿದೆ. ಪರಿಷತ್‌ನಲ್ಲಿ ಮೊದಲ ದಿನವೇ ಹಗರಣಗಳ ಸದ್ದು ಪ್ರಸ್ತಾಪವಾಗಿದೆ. ಅಧಿವೇಶನದಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಾಲ್ಮೀಕಿ ನಿಗಮದ ಹಗರಣ (Valmiki Corporation Corruption) ವಿಚಾರ ಪ್ರಸ್ತಾಪವಾಗಿದೆ.

    ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಭೋಜೇಗೌಡ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಸಭಾಪತಿ ಘೋಷಣೆ ಮಾಡಿದರು. ಬಳಿಕ ನಿಯಮ 59ರ ಅಡಿ ನಿಲುವಳಿ ಸೂಚನೆಗೆ ಪ್ರಸ್ತಾಪಿಸಲಾಯಿತು.ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ ರವಿ (CT Ravi), ವಾಲ್ಮೀಕಿ ನಿಗಮದ ಹಗರಣ ಕುರಿತು ನಿಲುವಳಿ ಮಂಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್‌ ಸಹ ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣವನ್ನು ಬಳ್ಳಾರಿ ಚುನಾವಣೆ (Bellary Lok Sabha Election) ಹಾಗೂ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ದೊಡ್ಡ ಈ ಬಗ್ಗೆ ದೊಡ್ಡ ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.

    ಇದೇ ವೇಳೆ ಸಿ.ಟಿ ರವಿ ಸಹ, 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ. ಅಹಿಂದ ರಾಜಕಾರಣ ಮಾಡೋರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಣ ನುಂಗಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ನಿಯಮದ ಪ್ರಕಾರ ನಾವು ಎಲ್ಲದಕ್ಕೂ ಸಮಯ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ ಆದ್ಮೇಲೆ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡ್ತೀನಿ ಎಂದು ಹೇಳಿದರು.

    ಬಿಪಿಎಲ್‌ ಕಾರ್ಡ್‌ ವಿಚಾರ ಪ್ರಸ್ತಾಪ:
    ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಆಡಳಿತ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುಗಿಬಿದ್ದರು. ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟರು. ಪಡಿತರ ಚೀಟಿ ವಿವರಣೆ ಮಾಡಿ 3 ವರ್ಷ ಆಗಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ, ಕೂಡಲೇ ಸರ್ಕಾರದಿಂದ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ (BPL Card) ವಿತರಿಸುವ ಕೆಲಸ ಆಗಬೇಕು. ಬಿಪಿಎಲ್‌ ಕಾರ್ಡ್ ಜೊತೆಗೆ ಎಪಿಎಲ್‌ ಕಾರ್ಡನ್ನೂ ಕೊಡಬೇಕು. ಬಿಪಿಎಲ್‌ಕಾರ್ಡ್ ಮತ್ತು ಎಪಿಎಲ್‌ ಕಾರ್ಡ್ ನಿಂದ ಮೆಡಿಕಲ್ ಗೂ ಸಹಾಯ ಆಗಲಿದೆ. ಹೀಗಾಗಿ ಶೀಘ್ರವೇ ಪಡಿತರ ಚೀಟಿ ಕೊಡಿ ಎಂದು ಆಗ್ರಹಿಸಿರು.

    1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ:
    ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಹಿಂದಿನ ಸರ್ಕಾರದಲ್ಲಿ ಚುನಾವಣೆಗೂ ಮುನ್ನ 2.95 ಲಕ್ಷ ಅರ್ಜಿಗಳು ಬಿಪಿಎಲ್‌ಗೆ ಬಂದಿದ್ದವು. ಈಪೈಕಿ 2.35 ಲಕ್ಷ ಕಾರ್ಡ್ ಬಿಪಿಎಲ್‌ಗೆ ಅರ್ಹತೆ ಪಡೆದಿದೆ. 56 ಸಾವಿರ ಕಾರ್ಡ್ ಬಿಪಿಎಲ್‌ ಅರ್ಹತೆ ಪಡೆದಿಲ್ಲ. ಅರ್ಹತೆ ಪಡೆದ 2.35 ಲಕ್ಷ ಕಾರ್ಡ್ ಪೈಕಿ 62 ಸಾವಿರ ಕಾರ್ಡ್ ಗಳಿಗೆ ಈಗಾಗಲೇ ಪಡಿತರ ಕೊಡ್ತಿದ್ದೇವೆ. ಉಳಿದ 1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಶೀಘ್ರವೇ ಪಡಿತರ ಕೊಡುವ ವ್ಯವಸ್ಥೆ ಮಾಡಿಸ್ತೀವಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪಡಿತರ ಚೀಟಿಗೆ ಅರ್ಜಿ ಹಾಕೋರಿಗೆ ಒಂದು ವಾರದಲ್ಲಿ ಪಡಿತರ ಚೀಟಿ ಕೊಡೋ ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು.

    ಅರ್ಪಣಾ ನಿಧನಕ್ಕೆ ಸಂತಾಪ:
    ಪರಿಷತ್‌ ಕಲಾಪ ಆರಂಭಿಸುವುದಕ್ಕೂ ಇತ್ತೀಚೆಗೆ ರಾಜ್ಯದಲ್ಲಿ ನಿಧನಹೊಂದಿದ ರಾಜಕೀಯ ನಾಯಕರು ಹಾಗೂ ಗಣ್ಯಮಾನ್ಯರಿಗೆ ಸಂತಾಪ ಸೂಚಿಸಲಾಯಿತು. ಪಾಟೀಲ ಸುನಂದಾ ನಿಂಗನಗೌಡ, ಟಿ.ಕೆ.ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ.ಭಾನು ಪ್ರಕಾಶ್, ನಾಗಮ್ಮ, ಕೇಶವಮೂರ್ತಿ, ವಿ.ಶ್ರೀನಿವಾಸ್ ಪ್ರಸಾದ್, ಎಂ.ಪಿ ಕೇಶವಮೂರ್ತಿ, ಪಾಡ್ಡನ ಕಲಾವಿದೆ ಗಿಡಿಗೆರೆ ರಾಮಕ್ಕ, ದ್ವಾರಕೀಶ್, ಭಗಾವತ ಸುಬ್ರಮಣ್ಯ ಧಾರೇಶ್ವರ, ಪೇತ್ರಿ ಮಾಧವ ನಾಯಕ್, ಕಮಲಾ ಹಂಪನಾ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

  • ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಯೂ ಇದ್ದಾರೆ – ಕೇಂದ್ರ ಸಚಿವ ಜೋಶಿ ಬಾಂಬ್‌!

    ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಯೂ ಇದ್ದಾರೆ – ಕೇಂದ್ರ ಸಚಿವ ಜೋಶಿ ಬಾಂಬ್‌!

    ಧಾರವಾಡ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Corporation Corruption Case) ಸಂಪೂರ್ಣವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸಹ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಬಾಂಬ್‌ ಸಿಡಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಹೆಚ್‌ಡಿಕೆ‌ ಕಿಡಿ

    ಧಾರವಾಡದಲ್ಲಿ (Dharwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ, 40 ದಿನವಾದರೂ ಎಸ್‌ಐಟಿ ನಾಗೇಂದ್ರ (BN Nagendra) ಮತ್ತು ದದ್ದಲ್‌ಗೆ ನೋಟೀಸ್ ಕೊಟ್ಟಿಲ್ಲ, ಅವರನ್ನು ವಿಚಾರಣೆಗೂ ಕರೆದಿಲ್ಲ. ಈಗ ದದ್ದಲ್‌ನನ್ನ ಬಂಧಿಸಿ ಅಂತ ಹೇಳಿದ್ದಾರೆ. ಬಂಧನಕ್ಕೊಳಗಾಗಿ ಸಿಎಂ ಸಂಪೂರ್ಣ ಆಶ್ರಯದಲ್ಲಿ ರಾಜಾತಿಥ್ಯ ಪಡೆಯಬೇಕೆಂಬ ದುರಾಲೋಚನೆಯೂ ಇದರಲ್ಲಿದೆ. ಸರ್ಕಾರಿ ಖಜಾನೆಯಿಂದ ಹಣ ಹೋಗಿದೆ. ಅತ್ಯಂತ ಹತಾಶಾ ಭಾವನೆಯಿಂದ ಸಿದ್ದರಾಮಯ್ಯ ಶಿಷ್ಯಂದಿರು ಮಾತನಾಡುತ್ತಿದ್ದಾರೆ. ಇವರ ತಲೆಯಲ್ಲಿನ ಬುದ್ಧಿ ತೀರಾ ಖಾಲಿಯಾಗಿದೆ ಅನಿಸುತ್ತಿದೆ ಎಂದ ಅವರು, ಸಿದ್ದರಾಮಯ್ಯ (Siddaramaiah) ಹಿಂದೆಲ್ಲ ನಾಲಿಗೆ ಮೆದುಳಿಗೆ ಸಂಬಂಧವಿಲ್ಲದ ಮಾತು ಅಂತೆಲ್ಲ ಹೇಳುತ್ತಿದ್ದರು, ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಹ ಕೇಳಿದ್ದಾರೆ, ಈಗ ಅವರ ಮಂತ್ರಿಗಳೇ ನಾಲಿಗೆ-ಮೆದುಳಿಗೆ ಸಂಬಂಧ ಇಲ್ಲದಂತೆ ಮಾತನಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.

    ಇಲ್ಲೊಬ್ಬ ಮಂತ್ರಿ ಸಹ ಹಾಗೆಯೇ ಮಾತನಾಡಿದ್ದಾರೆ, ನೀವು ಸಹಿ ಮಾಡಿದೀರಿ, ಅಕೌಂಟ್ ನಿಮ್ಮ ಹೆಸರಿನಲ್ಲಿದೆ, ಬೇರೆ ಅಕೌಂಟ್‌ಗೆ ಹಣ ಹೋಗಿದೆ, ಅಲ್ಲಿಂದ ಪಡೆದು ನುಂಗಿ ನೀರು ಕುಡಿದಿದ್ದಾರೆ ಎಂದ ಅವರು, ಇದರಲ್ಲಿ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದಾರೆ. ಈ ಹಿಂದೆಯೂ ತೆಲಂಗಾಣ ಚುನಾವಣೆಗೆ ಸಾವಿರಾರೂ ಕೋಟಿ ಹಣ ಕಳುಹಿಸಿದ್ದರು, ಇಬ್ಬರು ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕಿತ್ತು. ಅದನ್ನ ಆಗ ನಾನು ಹೇಳಿದ್ದೆ, ಹಣ ಕಳಿಸುತ್ತಿದ್ದಾರೆ ಅಂದಾಗ ಕಾಂಗ್ರೆಸ್ ನವರು ವಿರೋಧಿಸಿದ್ದರು ಎಂದರು.‌ ಇದನ್ನೂ ಓದಿ: ಆಟೋ ಚಕ್ರದಿಂದ ಮೈಗೆ ಚಿಮ್ಮಿದ ಕೆಸರು – ಮರಳಿ ಬರುವವರೆಗೂ ಕಾದು ಚಾಲಕನಿಗೆ ಚಾಕು ಇರಿತ

    ಮುಡಾ ಹಗರಣದಲ್ಲಿಯೂ ಇವರು ಸಿಕ್ಕಿಬಿದ್ದಿದ್ದಾರೆ, 2003-04 ರಲ್ಲಿ ಆ ಭೂಮಿ ಡಿನೋಟಿಫಿಕೇಶನ್ ಆಗಿತ್ತು ಎನ್ನಲಾಗಿದೆ. 2010ರ ವರೆಗೆ ಆ ಭೂಮಿ ಮುಡಾ ಹೆಸರಿನಲ್ಲಿಯೇ ಇದೆ. 2010ರ ನಂತರ ಅನೇಕರಿಗೆ ಫ್ಲಾಟ್‌ ನೀಡಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ದಾನ ಕೊಟ್ಟಿದ್ದಾರೆ ಅಂತಿದ್ದಾರೆ. ಮುಡಾ ಅಭಿವೃದ್ಧಿಪಡಿಸಿ ಫ್ಲಾಟ್‌ ನೀಡಿದೆ, 2013ರ ಚುನಾವಣೆಯಲ್ಲಿ ಅಫಿಡವಿಟ್‌ನಲ್ಲಿ ಏಕೆ ಹಾಕಿಲ್ಲ? 2018ರ ಚುನಾವಣೆಯಲ್ಲಿ ಅದನ್ನು 25 ಲಕ್ಷ ರೂ. ಅಂತ ತೋರಿಸಿದ್ದಾರೆ. 2023ರ ಚುನಾವಣೆಯಲ್ಲಿ ಅದನ್ನು 8.62 ಕೋಟಿ ರೂ. ಅಂತ ತೋರಿಸಿದ್ದಾರೆ, ಇದೀಗ 62 ಕೋಟಿ ರೂ. ಅಂತ ಏಕೆ ಪರಿಹಾರ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೇ ಇಲ್ಲಿ ಫ್ಲಾಟ್‌ ಇದ್ದರೂ ವಿಜಯನಗರದಲ್ಲೇಕೆ ಫ್ಲಾಟ್‌ ತೆಗೆದುಕೊಂಡಿರಿ? ಇವರೆಲ್ಲಾ ಕಳ್ಳರಿದ್ದಾರೆ, ಅಷ್ಟೇ ಎಂದು ಜೋಶಿ‌ ಕಿಡಿ ಕಾರಿದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ – ಮೂವರು ಸಾವು, 14 ಮಂದಿ ಗಂಭೀರ 

  • ಕೆಪಿಸಿಸಿ ಸಭೆ ಹಗರಣ ಮುಚ್ಚಿಹಾಕೋದಕ್ಕಾ? ಸಿಎಂ ರಾಜೀನಾಮೆ ಪಡೆಯೋಕಾ? – ರಾಗಾಗೆ ಅಶ್ವಥ್‌ ನಾರಾಯಣ್‌ ಪ್ರಶ್ನೆ

    ಕೆಪಿಸಿಸಿ ಸಭೆ ಹಗರಣ ಮುಚ್ಚಿಹಾಕೋದಕ್ಕಾ? ಸಿಎಂ ರಾಜೀನಾಮೆ ಪಡೆಯೋಕಾ? – ರಾಗಾಗೆ ಅಶ್ವಥ್‌ ನಾರಾಯಣ್‌ ಪ್ರಶ್ನೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣವನ್ನು (Valmiki Corporation Corruption Scam) ಮುಚ್ಚಿ ಹಾಕೋದಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ (KPCC Office) ಸಭೆ ನಡೆಸಲು ರಾಹುಲ್ ಗಾಂಧಿ ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದೀರಾ? ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್‌ ನಾರಾಯಣ್‌ (Ashwath Narayan) ಅವರು ಪ್ರಶ್ನಿಸಿದರು.

    ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರ್ಕಾರ ಇದು. ನೀವು ಈ ಸರ್ಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ? ಎಂದು ರಾಹುಲ್‌ ಗಾಂಧಿ ಅವರಿಗೆ ಕೇಳಿದರು. ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿದವರು ತನಿಖಾಧಿಕಾರಿ ಎದುರೇ ಸಂಭ್ರಮಾಚರಣೆ ಮಾಡ್ತಾರೆ: ವಕೀಲ ಗೋಪಾಲಗೌಡ ಆರೋಪ

    ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ (Basavanagouda Daddal) ರಾಜೀನಾಮೆ ಪಡೆಯುತ್ತೀರಾ? ಪಕ್ಷದಿಂದ ಉಚ್ಚಾಟಿಸುತ್ತೀರಾ? ಅವರನ್ನ ಬಂಧಿಸುತ್ತೀರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ? ಎಂದು ಪ್ರಶ್ನೆಗಳ ಮಳೆ ಸುರಿಸಿದರು. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!

    ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದಂತಿದೆ, ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕು. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೇ ನಾಗೇಂದ್ರ (BN Nagendra) ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ. ಅವರ ಬಂಧನವೂ ಆಗಬೇಕಿತ್ತು, ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ

    ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ:
    ರಾಜ್ಯದ ಇಡೀ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಿದೆ. ಸಾಕ್ಷಿ ನಾಶಕ್ಕೆ ನಿಮ್ಮಲ್ಲಿ ಏನು ಉತ್ತರ ಇದೆ? ಮುಖ್ಯಮಂತ್ರಿಗಳಿಗೆ ಕಿಂಚಿತ್ತೂ ನೈತಿಕತೆ, ಮೌಲ್ಯ ಇದ್ದರೆ, ಏನಾದರೂ ನಿಮ್ಮ ಅನುಭವಕ್ಕೆ ಗೌರವ ಇದ್ದರೇ ಮೊದಲು ರಾಜೀನಾಮೆ ಕೊಡಿ. ನಿಮ್ಮ ಇಲಾಖೆಯಡಿಯಲ್ಲೇ ಹಗರಣ ಆಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಅಶ್ವಥ್‌ ನಾರಾಯಣ್‌ ಒತ್ತಾಯಿಸಿದರು.

    ಎಲ್ಲರ ಭಾಗಿತ್ವ, ಸರ್ಕಾರದ ಸಹಮತ ಇಲ್ಲದೇ, ಎಲ್ಲರ ಗಮನಕ್ಕೆ ಬಾರದೇ ರಾಜ್ಯದ ಖಜಾನೆಯಿಂದ ಹಣ ವರ್ಗಾವಣೆ ಮಾಡಲು ಹೇಗೆ ಸಾಧ್ಯ? ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್‌ ಅವರು ತಮ್ಮ ಅಫಿಡವಿಟ್‍ನಲ್ಲಿ ಸಾಕ್ಷಿ ನಾಶ ಆಗದಂತೆ ನೋಡಿಕೊಳ್ಳಲು ಕೋರಿದ್ದಾರೆ. ಮೇ 25ನೇ ತಾರೀಕು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೊಠಡಿಯಲ್ಲಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ- ಶಾಸಕ ಬಸವನಗೌಡ ದದ್ದಲ್ ಜೊತೆ ಈ ಪ್ರಕರಣದ ಚರ್ಚೆ ನಡೆದಿದೆ. ಆದ್ದರಿಂದ ಆ ಸಭೆಯ ಸಿಸಿಟಿವಿ ಫೂಟೇಜ್ ಅನ್ನೂ ಸಂರಕ್ಷಿಸುವಂತೆ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವುದಾಗಿ ತಿಳಿಸಿದರು.

  • ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿದ್ದಾರೆ: ಹೆಚ್‌ಡಿಕೆ ಆರೋಪ

    ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿದ್ದಾರೆ: ಹೆಚ್‌ಡಿಕೆ ಆರೋಪ

    ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ (Valmiki Development Corporation) ಕೇವಲ ಮಂತ್ರಿಯಿಂದ ಆಗಿರೋದಲ್ಲ. ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿರುವುದು ಎಂದು ಸಂಸದ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಗಂಭೀರ ಆರೋಪ ಮಾಡಿದರು.

    ಸಚಿವ ನಾಗೇಂದ್ರ (Nagendra) ರಾಜೀನಾಮೆ ಕುರಿತು ಮಾತನಾಡಿ, ಈಗಾಗಲೇ ಪ್ರಕರಣದಲ್ಲಿ ಸುಮಾರು 80.85 ಕೋಟಿ‌ ರವಾನೆ ಆಗಿರೋದು ಗೊತ್ತಿದೆ. ಪ್ರಕರಣದಲ್ಲಿ‌ ಸರ್ಕಾರದ ಈ ನಿರ್ಧಾರ ಮೊದಲೇ ಆಗಬೇಕಿತ್ತು. ಇದು ಕೇವಲ ಮಂತ್ರಿಯಿಂದ ಆಗಿರೋದಲ್ಲ. ಸಿಎಂ, ಡಿಸಿಎಂ ಇಬ್ಬರು ಸೇರಿಯೇ ಮಾಡಿರೋದು. ರಾಜೀನಾಮೆ ಸಂಬಂಧ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಅಂತಾರೆ. ಆದರೆ ಇದು ಡ್ರಾಮಾ. ಮಂತ್ರಿಗೆ ರಾಜೀನಾಮೆ ನೀಡಿ ಅನ್ನೋ ಧೈರ್ಯ ಇವರಿಗಿಲ್ಲ. ಕಾರಣ ಇದರಲ್ಲಿ ದೊಡ್ಡ ಮಟ್ಟದ ಕೈಗಳಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

    ಮಾರ್ಚ್‌ನಲ್ಲಿ ಪ್ರಕರಣ ಆಗಿರೋದನ್ನ‌ ಯಾಕೆ ಮುಚ್ಚಿಟ್ಟಿದ್ದಾರೆ? ಮಾಧ್ಯಮದಲ್ಲಿ ಬರದಿದ್ದರೆ ಮುಚ್ಚಿ ಹಾಕುತ್ತಿದ್ದರು. ಒಳಹೊಕ್ಕು ತನಿಖೆ ಆಗಬೇಕು. ಇವರ ಗಮನಕ್ಕೆ ಬಂದೇ ಅಕ್ರಮ ಆಗಿದೆ. ಹಣ ಒಂದು ಗಂಟೆಯಲ್ಲಿ ಬಿಡುಗಡೆಯಾಗಲು ಸಹಾಯ ಯಾರು ಮಾಡಿದ್ದಾರೆ? ತೆಲಂಗಾಣಕ್ಕೆ ಹೋಗಿರೋ ಹಣ. ಅಲ್ಲಿಗೆ ಹೋಗಿದ್ರೆ ಅದರ ಜವಾಬ್ದಾರಿ ನಿರ್ವಹಿಸಿದವರು ಯಾರು ಎಂದು ಪ್ರಶ್ನಿಸಿದರು.

    ಬೆಂಗಳೂರು ಗ್ರಾಮಾಂತರ ಗೆಲುವು ಜನರ ತೀರ್ಮಾನ. ಯಾವ ತಂತ್ರ ಕುತಂತ್ರ ಮುಖಾಂತರ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ. ವಾಲ್ಮೀಕಿ‌ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ ಎಂದರು.

    ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ದೆಹಲಿಗೆ ಹೋಗಿ ಸಚಿವ ಆಗೋದಕ್ಕಿಂತ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ಸ್ಥಗಿತ ಆಗಿರೋದಕ್ಕೆ ಪರಿಹಾರ ನೀಡಬೇಕು. ಮಂತ್ರಿಸ್ಥಾನ ಸೆಕೆಂಡರಿ. ಕೆಂದ್ರ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ ಮುಜುಗರ ತರಲು ಆಗಲ್ಲ. ಹಾಗಾಗಿ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ

    ಚನ್ನಪಟ್ಟಣ ಉಪಚುನಾವಣೆಗೆ ಇನ್ನೂ ಸಮಯಾವಕಾಶವಿದೆ. ಈ ಬಗ್ಗೆ ನಾನು ಸಿ.ಪಿ.ಯೋಗೇಶ್ವರ್ ಕುಳಿತು ಮಾತನಾಡಿ ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು. ಅಲ್ಲದೇ, ಇಂಡಿಯಾ ಒಕ್ಕೂಟ ವಿಪಕ್ಷದಲ್ಲಿ ಕೂರಲೇಬೇಕಲ್ಲ. ಜನ ಅವರನ್ನ ವಿಪಕ್ಷದಲ್ಲಿ ಕೂರಿ ಅಂತಾನೇ ಹೇಳಿದ್ದಾರೆ. ಕೂರಲೇ ಬೇಕಲ್ಲ ಎಂದು ಟಾಂಗ್‌ ಕೊಟ್ಟರು.

  • ಭವಾನಿ ರೇವಣ್ಣಗೆ ಬಂಧನದ ಭೀತಿ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಭವಾನಿ ರೇವಣ್ಣಗೆ ಬಂಧನದ ಭೀತಿ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಬೆಂಗಳೂರು: ಇಲ್ಲಿನ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಭವಾನಿ ರೇವಣ್ಣ (Bhavani Revanna) ಅವರ ಪ್ರಕರಣದ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನೋಟಿಸ್‌ ಕೊಟ್ಟರೂ ಎಸ್‌ಐಟಿ ವಿಚಾರಣೆಗೆ (SIT Investigation) ಹಾಜರಾಗಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಜವಾಬ್ದಾರಿ ಮುಗಿದಿದೆ. ಇನ್ನುಳಿದ ಜವಾಬ್ದಾರಿ ಎಸ್‌ಐಟಿ ಹಾಗೂ ನ್ಯಾಯಾಲಯದ ಹೆಗಲ ಮೇಲಿದೆ. ನಾವು ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದಿದ್ದಾರೆ. ಪ್ರಜ್ವಲ್‌ ರೇವಣ್ಣ ವಿಚಾರದಲ್ಲೂ ನಮ್ಮ ಜವಾಬ್ದಾರಿ ಮುಗಿದಿದೆ. ವಿದೇಶದಿಂದ ಬಂದು ತನಿಖೆ ಎದುರಿಸುವಂತೆ ನಾನೂ ಹೇಳಿದ್ದೆ, ದೇವೇಗೌಡರೂ ಸಹ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಇನ್ನೇನಿದ್ದರು ಅದರ ಜವಾಬ್ದಾರಿ ಎಸ್‌ಐಟಿ ಮತ್ತು ಕೋರ್ಟ್‌ಗೆ ಸೇರಿದ್ದು ಎಂದು ನುಡಿದಿದ್ದಾರೆ.

    ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (KR Nagara Victim Kidnap Case) ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ಇತ್ತೀಚೆಗಷ್ಟೇ ವಜಾಗೊಂಡಿದ್ದು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

    ಎಲ್ಲ ಮಂಡಳಿ ಹಗರಣಗಳ ತನಿಖೆ ಮಾಡಿಸಲಿ:
    ಇದೇ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕುರಿತು ಮಾತನಾಡಿದ ಅವರು, ಎಸ್ಟಿ ಸಮುದಾಯದ ಹಣವನ್ನ ತೆಲಂಗಾಣದ ಚುನಾವನೆಗೆ ಬಳಸಿದ್ದೀರಾ? ಯಾವ ತನಿಖೆ ಮಾಡಿ ಯಾರ ಮೇಲೆ ಆಕ್ಷನ್ ತಗೊತೀರಾ ಸಿದ್ದರಾಮಯ್ಯ ಅವರೇ? ನಾಚಿಕೆ ಆಗಬೇಕು, ದುಡ್ಡು ದರೋಡೆ ಮಾಡಿ ಹೆಗ್ಗಣ ತಿನ್ನೋ ಕೆಲಸ ಮಾಡ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಎಲ್ಲಾ ಬೋರ್ಡ್‌ಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

    ಪ್ರಧಾನಿಗಳ ಶ್ರಮ ಅಪಾರ:
    ಎಕ್ಸಿಟ್‌ ಪೋಲ್‌ ಅಂಕಿ ಅಂಶಗಳ ಕುರಿತು ಮಾತನಾಡಿದ ಹೆಚ್‌ಡಿಕೆ, ಈ ಚುನಾವಣೆಯಲ್ಲಿ ಪ್ರಧಾನಿಗಳು 200 ಸಭೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸಮಯ ಕೊಟ್ಟು ಪ್ರಚಾರ ಮಾಡಿದ್ದಾರೆ. ಮೋದಿ ಅವರ ಶ್ರಮ ಅಪಾರವಾಗಿದೆ. ಮೈತ್ರಿಗೆ ಒಲವು ತೋರಿದ ಅಮಿತ್‌ ಶಾ ಮತ್ತು ಜೆ.ಪಿ ನಡ್ಡಾ ಅವರ ಸಹಕಾರದಲ್ಲಿ ಕರ್ನಾಟಕದ ಫಲಿತಾಂಶ ಉತ್ತಮವಾಗಿ ಬರುತ್ತದೆ ಅನ್ನೋ ನಿರೀಕ್ಷೆಯಿದೆ. ಮೈತ್ರಿ ಪಕ್ಷಕ್ಕೆ 25 ಸ್ಥಾನ ಬರುವ ವಿಶ್ವಾಸವಿದೆ, ಜೆಡಿಎಸ್‌ ಮೂರು ಕ್ಷೇತ್ರಗಳಲ್ಲೂ ಗೆಲ್ಲಲಿದೆ. 295 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿರುವ ಕಾಂಗ್ರೆಸ್‌ ನಾಯಕರು ಇದೊಂದು ದಿನ ಖುಷಿ ಪಡಲಿ. ಮಂಗಳವಾರ ಎಲ್ಲವೂ ಗೊತ್ತಾಗುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜೈಲಿಗೆ ಶರಣಾದ ಕೇಜ್ರಿವಾಲ್‌ಗೆ ಜೂನ್‌ 5 ರವರೆಗೆ ನ್ಯಾಯಾಂಗ ಬಂಧನ

  • ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

    – ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ ಸಿಬಿಐಗೆ ವಹಿಸಲು ಬಿಗಿ ಪಟ್ಟು

    ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ (Valmiki Corporation Corruption Scam) ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಿರಿಯ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಸಂಬಂಧ ವಿಜಯೇಂದ್ರ (BY Vijayendra) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜೇಂದ್ರ ಎಕ್ಸ್‌ ಖಾತೆಯಲ್ಲಿ ಏನಿದೆ?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ದಿಕ್ಕು ತಪ್ಪಿಸಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಎಸ್ಐಟಿ ರಚನೆ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಆರೋಪಿತರನ್ನು ರಕ್ಷಿಸಲು ಹೊರಟಿದೆ. ಎಸ್.ಐ.ಟಿ ರಚನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದನ್ನು ಭಾರತೀಯ ಜನತಾ ಪಾರ್ಟಿಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

    ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಅವರು ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ಸ್ವತಃ ಸಚಿವ ಬಿ.ಎನ್‌ ನಾಗೇಂದ್ರ ಹೆಸರಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು ಆದರೆ ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.

    ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳದೆ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೇ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ಬಗೆಯ ತನಿಖೆಯನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ, ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ, ಆರೋಪಿತ ಸಚಿವ ಬಿ.ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ತಾರ್ಕಿಕ ಅಂತ್ಯಕ್ಕೆ ನಾವು ಹೋರಾಟವನ್ನು ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.