Tag: Valmiki Corporation

  • Valmiki Scam| ಬಹುಕೋಟಿ ಹಗರಣದ ಮಾಸ್ಟರ್‌ ಮೈಂಡ್‌ ನಾಗೇಂದ್ರ – ಇಡಿ ಚಾರ್ಜ್‌ಶೀಟ್‌ ಸಲ್ಲಿಕೆ

    Valmiki Scam| ಬಹುಕೋಟಿ ಹಗರಣದ ಮಾಸ್ಟರ್‌ ಮೈಂಡ್‌ ನಾಗೇಂದ್ರ – ಇಡಿ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಹಗರಣದ ಮಾಸ್ಟರ್‌ ಮೈಂಡ್‌ ಮಾಜಿ ಸಚಿವ ನಾಗೇಂದ್ರ (Nagendra) ಎಂದು ಆರೋಪ ಹೊರಿಸಿ ಜಾರಿ ನಿರ್ದೇಶನಾಲಯ (ED) ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

    ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಇಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಯಾಗಿದ್ದು ನಾಗೇಂದ್ರ ಅಣತಿಯಂತೆ 187 ಕೋಟಿ ರೂ. ಹಗರಣ ನಡೆದಿದೆ ಎಂದು ಇಡಿ ಉಲ್ಲೇಖಿಸಿದೆ.ಇದನ್ನೂ ಓದಿ: ಶುಭಾ ಪೂಂಜಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್: ನಟಿ ಹೇಳೋದೇನು?

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಹೈದರಾಬಾದ್‌ನಲ್ಲಿದ್ದ ಮಧ್ಯವರ್ತಿ ಸತ್ಯನಾರಾಯಣ ವರ್ಮಾ ಜೊತೆ ನಾಗೇಂದ್ರಗೆ ನಿಕಟ ಸಂಪರ್ಕ ಇತ್ತು. ನಾಗೇಂದ್ರನ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ. 21 ಕೋಟಿ ರೂ. ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

    ನಾಗೇಂದ್ರ, ದದ್ದಲ್‌ ಹೆಸರು ಇರಲಿಲ್ಲ:
    ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ (SIT) ಪೊಲೀಸರು 12 ಮಂದಿ ಆರೋಪಿಗಳ ವಿರುದ್ಧ 3ನೇ ಎಸಿಎಂಎಂ ಕೋರ್ಟ್‌ನಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು. ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ (Nagendra), ಬಸನಗೌಡ ದದ್ದಲ್ (Basanagouda Daddal) ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.

    ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.

     

  • Valmiki Corporation Scam | ಯಾರೋ ಅಯೋಗ್ಯ ಅಧಿಕಾರಿಗಳು ಮಾಡಿದ್ದು – ಡಿಸಿಎಂ ಫುಲ್‌ ಗರಂ

    Valmiki Corporation Scam | ಯಾರೋ ಅಯೋಗ್ಯ ಅಧಿಕಾರಿಗಳು ಮಾಡಿದ್ದು – ಡಿಸಿಎಂ ಫುಲ್‌ ಗರಂ

    – ಬಿಜೆಪಿ ಅವಧಿಯ ಹಗರಣಗಳನ್ನೂ ಬಿಚ್ಚಿಡ್ತೀವಿ ಎಂದ ಡಿಕೆಶಿ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಸಿಎಂ ಹಾಗೂ ಡಿಸಿಎಂ ಯಾರ ಬುಡಕ್ಕೆ ಬರುತ್ತೋ ನೋಡೋಣ. ಯಾರೋ ಅಯೋಗ್ಯ ನನ್ನ ಮಕ್ಕಳು ಅಧಿಕಾರಿಗಳು ಮಾಡಿರೋದು. ನಮಗೇನು 10 ರೂಪಾಯಿ ಸಿಕ್ಕಿಲ್ಲ. ನಾವೇನು ಮಾಡಬಾರದ್ದು ಮಾಡಿದ್ದೇವೆ? ನಾವೇನು ಹಗರಣದಲ್ಲಿ ಭಾಗಿಯಾಗಿದ್ದೇವೆಯೇ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಬಿಜೆಪಿ (BJP) ವಿರುದ್ಧ ಲೇವಡಿ ಮಾಡಿದ್ದಾರೆ.

    ಎಲ್ಲಾ ಬಿಚ್ಚಿಡ್ತೀವಿ:
    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜಕಾರಣ ಗಮನದಲ್ಲಿಟ್ಟುಕೊಳ್ಳದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ತನಿಖೆ ನಡೆಯುವ ಸಂದರ್ಭದಲ್ಲಿ ಚರ್ಚೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ನಾವು ಏನು ಉತ್ತರ ಹೇಳಿಲ್ಲ. ನಾವು ಉತ್ತರ ಕೊಟ್ಟರೇ ಅವರದ್ದೂ ಹೊರಗಡೆ ಬರಲಿದೆ. ಇದಕ್ಕೇ ಬಿಜೆಪಿಗರು ಉತ್ತರ ಕೊಡಲು ಬಿಡುತ್ತಿಲ್ಲ. ನಮ್ಮ ಹತ್ತಿರ ಬಿಜೆಪಿಯವರ ಅವಧಿಯ ನಿಗಮದ ದಾಖಲೆಗಳಿವೆ. ಯರ‍್ಯಾರ ಕಾಲದಲ್ಲಿ ಏನೇನೂ ಆಗಿದೆ ಎಲ್ಲಾ ಬಿಚ್ಚಿಡ್ತೀವಿ ಎಂದು ಅವರು ಕಿಡಿಕಾರಿದ್ದಾರೆ.

    ಬಿಜೆಪಿಯವರ ಬ್ರಹ್ಮಾಂಡ ಭ್ರಷ್ಟಾಚಾರ ಮುಚ್ಚಿ ಹಾಕಲು ಶುಕ್ರವಾರ (ಜು.19) ಸಹ ಪ್ರತಿಭಟನೆ ಮುಂದುವರಿಸುತ್ತಾರೆ. ಅವರು ಏನು ಬೇಕಾದರೂ ಮಾಡಲಿ. ಇನ್ನೂ ಮುಂದೆ ಏನು ಬೇಕಾದರೂ ರಾಜಕಾರಣ ಮಾಡಲಿ, ನಾವು ಸಂವಿಧಾನದ ಪ್ರಕಾರ ಗೌರವಕೊಟ್ಟು ರಾಜಕಾರಣ ಮಾಡ್ತೀವಿ ಎಂದು ಅವರು ಹೇಳಿದ್ದಾರೆ.

    ಜಾರಿ ನಿರ್ದೇಶನಾಲಯದಿಂದ ಒತ್ತಡ ಹಾಕಿ ಸರ್ಕಾರದ ಪ್ರಮುಖರ ಹೆಸರು ಹೇಳಿಸುವ ಬಗ್ಗೆ ಸಚಿವರ ಆರೋಪ ವಿಚಾರವಾಗಿ, ನಮ್ಮ ಸಚಿವರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ಮಾತಾಡಲ್ಲ. ಈ ವೇಳೆ ನಾನು ಇರಲಿಲ್ಲ ಆಸ್ಪತ್ರೆಗೆ ಹೋಗಿದ್ದೆ. ನಾನು ಮಾಹಿತಿ ಪಡೆದು ಮಾತಾಡುತ್ತೇನೆ ಎಂದಿದ್ದಾರೆ.

  • ಗೋವಾ, ಹೈದರಾಬಾದ್‍ನಲ್ಲಿ ಹನಿ ತಿನ್ನಿಸಿ ಬಲೆಗೆ ಕೆಡವಿದ್ದಾರೆ- ಸಿ.ಟಿ ರವಿ ಗಂಭೀರ ಆರೋಪ

    ಗೋವಾ, ಹೈದರಾಬಾದ್‍ನಲ್ಲಿ ಹನಿ ತಿನ್ನಿಸಿ ಬಲೆಗೆ ಕೆಡವಿದ್ದಾರೆ- ಸಿ.ಟಿ ರವಿ ಗಂಭೀರ ಆರೋಪ

    – ವಾಲ್ಮೀಕಿ ಬಹುಕೋಟಿ ಹಗರಣದಲ್ಲಿ ಹನಿಟ್ರ್ಯಾಪ್ ಬಾಂಬ್

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Development Corporation Scam) ಇದೀಗ ಹನಿಟ್ರ್ಯಾಪ್ ಘಾಟು ಎದ್ದಿದೆ. ಗೋವಾ, ಹೈದರಾಬಾದ್‍ನಲ್ಲಿ ಹನಿ ತಿನ್ನಿಸಿ ಬಲೆಗೆ ಬೀಳಿಸಿಕೊಂಡಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು, ಎ13 ಆರೋಪಿ ಸತ್ಯನಾರಾಯಣ ವರ್ಮಾ (Satyanarayan Verma) ಸಹ ಈ ಪ್ರಕರಣದ ಕಿಂಗ್ ಪಿನ್. ಈತನಿಗೆ ರಾಜ್ಯದವರೇ ಸಹಕರಿಸಿದ್ದಾರೆ. ಗೋವಾದಲ್ಲಿ, ಹೈದರಾಬಾದ್ ನಲ್ಲಿ ಹನಿ ತಿನ್ನಿಸಿ ಬಲೆಗೆ ಕೆಡವಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಹುಕೋಟಿ ಹಗರಣಕ್ಕೆ ಟ್ವಿಸ್ಟ್- ಆರೋಪಿ ಸತ್ಯನಾರಾಯಣ್ ವರ್ಮಾ ಗಂಭೀರ ಆರೋಪ

    ಸತ್ಯನಾರಾಯಣ ಇವತ್ತು ಕೋರ್ಟ್ ನಲ್ಲಿ ಏನೇ ಹೇಳ್ತಿದ್ರೂ ನಾವು ಪರ ಮಾತಾಡಲ್ಲ. ಯಾಕಂದರೆ ಕೆಲ ರಾಜ್ಯಗಳಲ್ಲಿ ಇಂಥದ್ದೇ ಪ್ರಕರಣದಲ್ಲಿ ಸತ್ಯನಾರಾಯಣ ವರ್ಮಾನ ಪಾತ್ರ ಇದೆ ಅನ್ನೋ ಮಾಹಿತಿ ನಮಗಿದೆ. ಸತ್ಯನಾರಾಯಣ ಒಬ್ಬ ವೃತ್ತಿ ಪರ ಡ್ಯಾಶ್ ಎಮದಿ ಸಿಟಿ ರವಿ (C.T Ravi) ವಾಗ್ದಾಳಿ ನಡೆಸಿದರು.

    13ನೇ ಆರೋಪಿ ಸತ್ಯನಾರಾಯಣ ವರ್ಮಾ ಶಾಮೀಲು ಇದೆ ಎನ್ನಲಾಗ್ತಿದೆ. ಈಗ ಇದೇ ಸತ್ಯನಾರಾಯಣ ವರ್ಮಾ ನಾಗೇಂದ್ರ ವಿರುದ್ಧ ಬೆದರಿಕೆ ಆರೋಪ ಮಾಡ್ತಾರೆ. ಈ ನಿಟ್ಟಿನಲ್ಲಿ ತನಿಖೆ ಆಗಿದೆಯಾ?. ನಾಗೇಂದ್ರ ಅವರ ಮೌಖಿಕ ಸೂಚನೆ ನೆಕ್ಕುಂಟಿ ನಾಗರಾಜ್ ನಿರ್ದೇಶನದಲ್ಲಿ ಪದ್ಮರಾಜ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ನೆಕ್ಕುಂಟಿ ನಾಗರಾಜ್ ಸಂಬಂಧಿ ನಾಗೇಶ್ ಖಾತೆಗೂ ಹಣ ಹೋಗಿದೆ. ಈಗ ನಾಗೇಶ್ ಖಾತೆ ಸೀಜ್ ಮಾಡಲಾಗಿದೆ. ನಾಗರಾಜ್ ಪತ್ನಿ ಧನಲಕ್ಷ್ಮಿ, ಪುತ್ರಿ ಸಹೋದರ ರವಿಕುಮಾರ್ ಖಾತೆಗೂ ನಿಗಮದ ಹಣ ವರ್ಗಾವಣೆ ಆಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಆಗಿದೆಯಾ?, ನಾಗೇಂದ್ರ ಮತ್ತು ಬಸವರಾಜ್ ದದ್ದಲ್ ವಿರುದ್ಧ ಯಾಕೆ ಎಫ್‍ಐಆರ್ ಹಾಕಿಲ್ಲ ಎಂದು ಪ್ರಶ್ನಿಸಿದರು.

    700 ಖಾತೆಗಳಿಗೆ ನಿಗಮದ ಹಣ ಹೋಗಿದೆ. ಅಲ್ಲಿಂತ ನಂತರ ಎಲ್ಲಿಗೆ ಹೋಯಿತು ಅಂತ ತನಿಖೆ ಆಗಬೇಕು. ಎರಡು ತನಿಖೆ ಬದಲು ಸಿಬಿಐಯಿಂದನೇ ಸಮಗ್ರ ತನಿಖೆ ಮಾಡಿಸಲಿ. ನಿಗಮದ ಅಕ್ರಮ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಇದೇ ವೇಳೆ ಸಿಟಿ ರವಿ ಆಗ್ರಹಿಸಿದರು.

    ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಸರ್ಕಾರದ ಈ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸರ್ಕಾರದಿಂದ ಸಮಗ್ರ ತನಿಖೆಗೆ ಇನ್ನೂ ಯಾಕೆ ಸಿಬಿಐಗೆ ಕೊಟ್ಟಿಲ್ಲ?. ಯೂನಿಯನ್ ಬ್ಯಾಂಕ್ ಪತ್ರ ಬರೆಯಿತು ಅಂತ ಸಿಬಿಐ ಎಂಟ್ರಿ ಆಗಿದೆ. ಆದರೆ ಆವತ್ತೇ ಸಿಬಿಐಗೆ ಸಮಗ್ರ ತನಿಖೆಗೆ ಕೊಡಬೇಕಿತ್ತು. ಸರ್ಕಾರದ ಮೇಲೆ ನಮಗೆ ಅನುಮಾನವಿದೆ. ಛತ್ತೀಸ್‍ಗಢದಲ್ಲೂ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇಂಥದ್ದೇ ಅಕ್ರಮ ಆಗಿದೆ ಅನ್ನೋ ಆರೋಪ ಇದೆ ಎಂದರು.

  • ವಾಲ್ಮೀಕಿ ನಿಗಮದ ಹಗರಣ – ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್ ಆಗ್ರಹ

    ವಾಲ್ಮೀಕಿ ನಿಗಮದ ಹಗರಣ – ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್ ಆಗ್ರಹ

    -ಬಸನಗೌಡ ದದ್ದಲ್, ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಪಡೆಯಲಿ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation) ಭಾರೀ ಹಗರಣ ಸಂಬಂಧ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ (Basanagouda Daddal) ಹಾಗೂ ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆದು, ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್‍ನ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ (N.Ravikumar) ಆಗ್ರಹಿಸಿದ್ದಾರೆ.

    ಮಲ್ಲೇಶ್ವರದ ಬಿಜೆಪಿ (BJP) ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣವಾಗಿದೆ. ಇನ್ನೂ ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದ ವಾಸನೆ ನಮಗೆ ಸಿಗುತ್ತಿದೆ. ಇವುಗಳ ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳನ್ನು ಮತ ಪಡೆಯಲು ನೀಡಿಲ್ಲ, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲಿಸಲ್ಲ: ರಾಮಲಿಂಗಾ ರೆಡ್ಡಿ

    ಅತ್ಯಂತ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ದರು. ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.

    ಕರ್ನಾಟಕದಲ್ಲಿ ಭ್ರಷ್ಟರ ರಕ್ಷಣೆಯ ಖಾತೆಯನ್ನು ಮುಖ್ಯಮಂತ್ರಿಗಳು ಹೊಸದಾಗಿ ಸೇರಿಸಿಕೊಂಡಿದ್ದಾರಾ? ಸಿದ್ದರಾಮಯ್ಯನವರು ಭ್ರಷ್ಟರ ರಕ್ಷಣಾ ಖಾತೆಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು. ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ನಡೆಸಿದ ಸಭೆಯ ಫೂಟೇಜ್‍ನ್ನು ರಕ್ಷಿಸಬೇಕು. ಪರಶುರಾಮ್ ಅವರು ಈ ಫೂಟೇಜ್, ಸಾಕ್ಷ್ಯಾಧಾರವನ್ನು ರಕ್ಷಿಸಲು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಚಿವರ ಮೌಲ್ಯಮಾಪನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಎಂ.ಬಿ ಪಾಟೀಲ್

  • Exclusive: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ- ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್

    Exclusive: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ- ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್

    ಬೆಂಗಳೂರು: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagouda Daddal) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಇಂದು ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಜಾಲವೇ ಇದೆ. ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ. ಎಸ್‍ಐಟಿ ತನಿಖೆ ನಡೆಯುತ್ತಿದೆ. ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಯಾರೇ ಕರೆದರೂ ಹೋಗುತ್ತೇನೆ ಸಹಕಾರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

    ಇಡೀ ಪ್ರಕರಣದಲ್ಲಿ ನನ್ನದು ಯಾವ ಪಾತ್ರವೂ ಇಲ್ಲ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಚುನಾವಣಾ ನೀತಿ ಸಂಹಿತೆ ಬಂತು. ಆದ್ದರಿಂದ ನಾನು ಯಾವುದೇ ಸಭೆ ನಡೆಸಿಲ್ಲ. ನೀತಿ ಸಂಹಿತೆ ಮುಗಿದಿದೆ ಈಗ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದರು.

    ನನ್ನ ಯಾವ ಪಾತ್ರವೂ ಇಲ್ಲಾ. ವಾಟ್ಸಪ್ ಚಾಟ್ ಅಥವಾ ಯಾವುದೇ ಸಾಕ್ಷ್ಯ ಇದ್ದರೂ ಎಲ್ಲವೂ ತನಿಖೆಯಲ್ಲಿ ಬಹಿರಂಗ ಆಗಲಿದೆ. ಇಡಿ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ದದ್ದಲ್‌ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.ಇದನ್ನೂ ಓದಿ: ನಾಗೇಂದ್ರ ಬೆನ್ನಲ್ಲೇ ದದ್ದಲ್, ‌ ಬೋಸರಾಜು ರಾಜೀನಾಮೆಗೆ JDS ಒತ್ತಾಯ

    ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿರುದ್ಧ ಆರೋಪ ಕೇಳಿಬಂದಿತು. ಅಲ್ಲದೇ ದದ್ದಲ್  ಕೂಡ ರಾಜೀನಾಮೆ ನಿಡುವಂತೆ ಜೆಡಿಎಸ್ ಆಗ್ರಹ ಮಾಡಿತ್ತು.

  • ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ

    ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ

    ಬೆಂಗಳೂರು: ನಾನು ನಿರಪರಾಧಿಯಾಗಿದ್ದು, ಯಾವುದೇ ಒತ್ತಡಗಳಿಗೆ ಒಳಗಾಗದೇ ಸ್ವಯಂ ಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ (Nagendra) ತಿಳಿಸಿದ್ದಾರೆ.

    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Karnataka Maharshi Valmiki Scheduled Tribe Development Corporation Ltd) ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ದಿನದಿಂದ ಮಾಧ್ಯಮಗಳಲ್ಲಿ ವರದಿ ಬರುತ್ತಿತ್ತು. ಜನರು ಆತಂಕಗೊಂಡಿದ್ದರು. ವಿಪಕ್ಷಗಳು 10 ದಿನದಿಂದ ಆರೋಪಿಸುತ್ತಿದ್ದರು. ನಾನು ನನ್ನ ಸ್ವ-ನಿರ್ಧಾರದಿಂದ ರಾಜೀನಾಮೆ ಕೊಡುತ್ತಿದ್ದೇನೆ. ಸ್ವ-ಇಚ್ಚೆಯಿಂದ ರಾಜೀನಾಮೆ ಕೊಡ್ತೀನಿ. ಇಂದು ಸಂಜೆ 7.30ಕ್ಕೆ ಸಿಎಂ ಭೇಟಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ರಾಜೀನಾಮೆ ಪತ್ರವನ್ನ ಸಿಎಂಗೆ ಕೊಟ್ಟು ಬರುತ್ತೇನೆ. ಸಿಎಂ, ಡಿಸಿಎಂ ಇಬ್ಬರಿಗೂ ಕೊಡುತ್ತೇನೆ. ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣದಲ್ಲಿ ಎಲ್ಲಿಯೂ ಕೂಡ ನನ್ನ ಹೆಸರು ಪ್ರಸ್ತಾಪ ಆಗಿಲ್ಲ. ನನ್ನ ಆತ್ಮಸಾಕ್ಷಿಯಾಗಿ ನಾನು ರಾಜೀನಾಮೆ ಕೊಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ನಾನು ಮಂತ್ರಿ ಸ್ಥಾನದಲ್ಲಿ ಇದ್ದರೆ ತೊಂದರೆ ಆಗಬಾರದು ಅಂತಾ ರಾಜೀನಾಮೆ ಕೊಡುತ್ತಿದ್ದೇನೆ. ಆರೋಪ ನಿರಾಧಾರವಾಗಿ ನಾನು ನಿದೋಶಿ ಎಂದು ಸಾಬೀತಾದ ಬಳಿಕ ಮುಖ್ಯಮಂತ್ರಿಗಳು ಅವಕಾಶ ಮಾಡಿ ಕೊಡುತ್ತಾರೆ. ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಡಿ ಅಂದಿದ್ದಾರೆ ಎಂದರು.

    ಇಡೀ ಪ್ರಕರಣ ಯಾವುದು ನನ್ನ ಗಮನಕ್ಕೆ ಬಂದಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಆಗಲಿದೆ ಎಂದು ನಾಗೇಂದ್ರ ಹೇಳಿದರು.

  • ವಾಲ್ಮೀಕಿ ನಿಗಮದಲ್ಲಿ ಹಗರಣ – ಹೈದರಾಬಾದ್‌ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ಹಣ ಸೀಝ್‌

    ವಾಲ್ಮೀಕಿ ನಿಗಮದಲ್ಲಿ ಹಗರಣ – ಹೈದರಾಬಾದ್‌ ಸಹಕಾರಿ ಬ್ಯಾಂಕ್‌ನಲ್ಲಿದ್ದ 45 ಕೋಟಿ ಹಣ ಸೀಝ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ (Karnataka Maharshi Valmiki Scheduled Tribe Development Corporation Ltd) ಅಕ್ರಮವಾಗಿ ಸಹಕಾರಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ರೂ. ಹಣವನ್ನು ವಿಶೇಷ ತನಿಖಾ ತಂಡ (SIT) ಸೀಝ್‌ ಮಾಡಿದೆ.

    ನಿಗಮದಿಂದ ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕಿಗೆ ಒಟ್ಟು 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಈಗಾಗಲೇ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಮಾಲೀಕ ಸತ್ಯನಾರಾಯಣ್‌ ಅವರನ್ನು ಬಂಧಿಸಲಾಗಿದೆ.  ಇದನ್ನೂ ಓದಿ: ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಿಸಿದ ಡಿಎಂಕೆ ಕಾರ್ಯಕರ್ತರು

     

    ಸಹಕಾರಿ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ ಪೈಕಿ ಬಹುಪಾಲು ಹಣ ಡ್ರಾ ಮಾಡಲಾಗಿದೆ. ಉಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮನಾಭ, ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಸತ್ಯನಾರಾಯಣ ಬಂಧನ ಮಾಡಿದ ಎಸ್‌ಐಟಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

     

  • ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ಅಧಿಕಾರಿಗಳು, ಬ್ಯಾಂಕ್‌ ಉದ್ಯೋಗಿ ವಿರುದ್ಧ ಎಫ್‌ಐಆರ್‌

    ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ಅಧಿಕಾರಿಗಳು, ಬ್ಯಾಂಕ್‌ ಉದ್ಯೋಗಿ ವಿರುದ್ಧ ಎಫ್‌ಐಆರ್‌

    – ನಿಗಮದಲ್ಲಿ 187 ಕೋಟಿ ಅವ್ಯವಹಾರ ಆಗಿದೆಯೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖ

    ಶಿವಮೊಗ್ಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Valmiki Corporation) ಅವ್ಯವಹಾರ ಆರೋಪ ಹಾಗೂ ನಿಗಮದ ಅಧೀಕ್ಷಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಬ್ಯಾಂಕ್‌ ಉದ್ಯೋಗಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರವುಲ್‌ ಅವರ ವಿರುದ್ಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಧಿಕಾರಿಗಳ ಹೆಸರು ಉಲ್ಲೇಖಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ!

    ಏನಿದು ಪ್ರಕರಣ?
    ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರನ್‌ ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದವರ ಹೆಸರು ಮತ್ತು ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಡೆತ್‌ನೋಟ್‌ನಲ್ಲಿ ಅಧೀಕ್ಷಕ ಉಲ್ಲೇಖಿಸಿದ್ದರು.

    ಚಂದ್ರಶೇಖರನ್‌ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ 6 ಪುಟಗಳ ಡೆತ್‌ನೋಟ್‌ ಇದೀಗ ಸಂಚಲನ ಮೂಡಿಸಿದೆ. ಡೆತ್‌ನೋಟ್‌ನಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ನಿಗಮದಲ್ಲಿ ಅವ್ಯವಹಾರ ಆಗಿದೆ ಎಂದು ಉಲ್ಲೇಖಿಸಿದ್ದಾರೆ. ಇಲಾಖೆಯ ಖಾತೆಯ ಹಣವನ್ನು ನಿಗಮದ ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಬರೆದಿದ್ದಾರೆ. ಇದನ್ನೂ ಓದಿ: ಪಕ್ಷದ ಹಿರಿಯರ ಸಲಹೆ ಕೇಳ್ಬೇಕು: ಸಿಎಂ, ಡಿಸಿಎಂ ವಿರುದ್ಧ ಪರಂ ಅಸಮಾಧಾನ

    ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿರುವ ಅಧಿಕಾರಿಗಳೇ ಅಕ್ರಮ ಎಸಗಿದ್ದಾರೆ. ಇದೇ ಕಾರಣಕ್ಕೆ ನೇಣಿಗೆ ಶರಣಾಗುತ್ತಿರುವೆ. ನಿಗಮಕ್ಕೆ ಸಂಬಂಧಿಸಿದ 187 ಕೋಟಿ ರೂ. ಅವ್ಯವಹಾರಕ್ಕೆ ಕಾರಣರಾದವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿರುವುದಾಗಿ ಉಲ್ಲೇಖಿಸಿದ್ದಾರೆ.