Tag: valmiki

  • ಕುರುಬರನ್ನು ಎಸ್‌ಟಿಗೆ ಸೇರಿಸಿ ನಮ್ಮನ್ನು ತುಳಿಯುವ ಹುನ್ನಾರ: ಸಿಎಂ ವಿರುದ್ಧ ವಾಲ್ಮೀಕಿ ನಾಯಕ ಒಕ್ಕೂಟ ಆಕ್ರೋಶ

    ಕುರುಬರನ್ನು ಎಸ್‌ಟಿಗೆ ಸೇರಿಸಿ ನಮ್ಮನ್ನು ತುಳಿಯುವ ಹುನ್ನಾರ: ಸಿಎಂ ವಿರುದ್ಧ ವಾಲ್ಮೀಕಿ ನಾಯಕ ಒಕ್ಕೂಟ ಆಕ್ರೋಶ

    ಬಳ್ಳಾರಿ: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರ್ಪಡೆ ಮಾಡಲು ಮುಂದಾಗುತ್ತಿರುವ ಸಿಎಂ ಸಿದ್ದರಾಮಯ್ಯನವರ (Siddaramaiah) ವಿರುದ್ಧ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕ ಒಕ್ಕೂಟ ಅಕ್ರೋಶ ಹೊರಹಾಕಿದೆ.

    ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ಇಂದು ಸಭೆ ನಡೆಸಿ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿತು.

    ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ಸಿಎಂ‌ ಸಿದ್ದರಾಮಯ್ಯ ರಾಜ್ಯದಲ್ಲಿ ಎಸ್‌ಟಿ ನಾಯಕರನ್ನು ತುಳಿಯುವ ಕಾರ್ಯ ಮಾಡುತ್ತಿದ್ದಾರೆ. ರಾಜಣ್ಣ, ನಾಗೇಂದ್ರ ಅವರನ್ನು ಸಿದ್ದರಾಮಯ್ಯ ಬಲಿಪಶು ಮಾಡಿದ್ದಾರೆ ಎಂದು ಸಿಟ್ಟು ಹೊರಹಾಕಿದರು.

    ನಮ್ಮ ಎಸ್‌ಟಿ ಶಾಸಕರು ಸಚಿವರು ಸಿದ್ದರಾಮಯ್ಯನವರಿಗೆ ಹೆದರಿ ಅವರ ವಿರುದ್ದ ಮಾತನಾಡುತ್ತಿಲ್ಲ. ನಾಗೇಂದ್ರಗೆ ಸಚಿವ ಸ್ಥಾನ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಡಿಕೆ ಶಿವಕುಮಾರ್‌ ಬದಲು ನಿನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಸುಳ್ಳು ಭರವಸೆ ಕೊಟ್ಟಿದ್ದಾರೆ ಎಂದು ದೂರಿದರು.  ಇದನ್ನೂ ಓದಿ: KSRTC ಬಸ್‌ಗಳಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್‌, 13 ಕೋಟಿ ದಂಡ ಫೈನ್‌ ಮನ್ನಾಗೆ ಸಾರಿಗೆ ಸಚಿವರ ಪತ್ರ

    ಬುಡಕಟ್ಟು ಸಮಾಜದವರು ಎಸ್‌ಟಿಗೆ ಸೇರಲು ನಮ್ಮ ವಿರೋಧ ಇಲ್ಲ. ಆದರೆ ಸಿದ್ದರಾಮಯ್ಯ ವಾಲ್ಮೀಕಿ ಸಮಾಜವನ್ನು ತುಳಿಯುತ್ತಿದ್ದಾರೆ. ವಾಲ್ಮೀಕಿ ಸಮಾಜ ನಶಿಸಿ ಹೋಗಬೇಕು, ಇವರನ್ನ ಜೀವಂತವಾಗಿ ತುಳಿಯಬೇಕು ಎಂಬ ಕಾರಣಕ್ಕೆ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಸಿದ್ದರಾಮಯ್ಯನವರೇ ಶೇ.50 ಮೀಸಲಾತಿ ನಮಗೆ ಕೊಟ್ಟು ಎಲ್ಲಾ ಸಮಾಜವನ್ನೂ ಸೇರಿಸಿಬಿಡಿ. ಬಳಿಕ ಒಳ ಮೀಸಲಾತಿ ವಾಲ್ಮಿಕಿಗೆ ಕೊಡಿ ಆಗ ನಮ್ಮ‌ವಿರೋಧ ಇರಲ್ಲ. ಕುರುಬ ಸಮಾಜದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆದಿದ್ದಾರೆ. ಕೆಲ ವರ್ಷಗಳಿಂದ ನಮ್ಮ ಸಮಾಜ ಮುಂದೆ ಬರುತ್ತಿದೆ ಅಷ್ಟೇ. ಆದರೆ ಇದನ್ನು ಸಹಿಸದ ಸಿದ್ದರಾಮಯ್ಯ ನಮ್ಮ ಸಮಾಜವನ್ನು ತುಳಿಯಲು ಮುಂದಾಗುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು ಸೇರಿ ಎಲ್ಲರೂ ಸರ್ಕಾರದ ಈ ನಿರ್ಧಾರವನ್ನು ವಿರೋಧ ಮಾಡಬೇಕು ಎಂದು ತಿಮ್ಮಪ್ಪ ಒತ್ತಾಯಿಸಿದರು.

  • ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರಿಸುವ ವಿಚಾರ ಜಾತಿ ಜಟಾಪಟಿಗೆ ವೇದಿಕೆ ಆಗಿದೆ. ಎಸ್‌ಟಿಗೆ ಸೇರ್ಪಡೆ ಮಾಡುವ ಅಂತಿಮ ತೀರ್ಮಾನಕ್ಕೂ ಮುನ್ನವೇ ವಾಲ್ಮೀಕಿ ಸಮುದಾಯ (Valmiki Community) ಮಹತ್ವದ ಸಭೆ ಕರೆದಿದೆ.

    ಸೆಪ್ಟಂಬರ್ 18ರಂದು ಹರಿಹರ ವಾಲ್ಮೀಕಿ ಗುರುಪೀಠದಲ್ಲಿ ಸಭೆ ಕರೆಯಲಾಗಿದ್ದು, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಗೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿ, ಮಾಜಿ ಎಂಎಲ್‌ಸಿ, ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ಸಭೆಗೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

     

    ಸಭೆಯ ಅಜೆಂಡಾ ಏನು?
    ವಾಲ್ಮೀಕಿ ನಾಯಕ ಜಾತಿಗೆ ಇತರೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆ ಮಾಡುತ್ತಿರುವ ಸರ್ಕಾರದ ನಡೆ ಬಗ್ಗೆ ತೀರ್ಮಾನ.

    ನಾಯಕ ತಳವಾರ ಹೆಸರಿನಲ್ಲಿ ಇತರೆ ಜಾತಿಯ ತಳವಾರರು ತೆಗೆದುಕೊಳ್ಳುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಒತ್ತಾಯ.

    ರಾಜ್ಯ ಸರ್ಕಾರ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಜಾತಿ ಕಾಲಂ ನಲ್ಲಿ ಜಾತಿ ಹೆಸರನ್ನು ನಮೂದಿಸುವ ಕುರಿತು ಚರ್ಚೆ.

  • Valmiki Scam | ಹೈದರಾಬಾದ್‌ ಚುನಾವಣೆಗೆ ಮದ್ಯ ಹಂಚಲು ಗಿಫ್ಟ್‌ ಕೂಪನ್‌: ಇಡಿ

    Valmiki Scam | ಹೈದರಾಬಾದ್‌ ಚುನಾವಣೆಗೆ ಮದ್ಯ ಹಂಚಲು ಗಿಫ್ಟ್‌ ಕೂಪನ್‌: ಇಡಿ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಆರೋಪದ ಅಡಿ ಜೈಲು ಸೇರಿರುವ ಮಾಜಿ ಸಚಿವ ನಾಗೇಂದ್ರ (Nagendra) ಅವರು ಲೋಕಸಭಾ ಚುನಾವಣೆಯ (Lok Sabaha Election) ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚಲು ಗಿಫ್ಟ್‌ ಕೂಪನ್‌ ಹಂಚಿಕೆ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದೆ.

    ನಾಗೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಇಡಿ ರಿಮ್ಯಾಂಡ್ ಕಾಪಿ (Remand Copy) ಸಲ್ಲಿಕೆ ಮಾಡಿತ್ತು. ಅದರ ಎಕ್ಸ್‌ಕ್ಲೂಸಿವ್‌ ಕಾಪಿ ಪಬ್ಲಿಕ್‌ ಟಿವಿಗೆ ಈಗ ಲಭ್ಯವಾಗಿದೆ. ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಅಕ್ರಮವಾಗಿ ಬಳಕೆ ಮಾಡಿರುವುದರ ಬಗ್ಗೆ ಈ ಹಿಂದೆ ಇಡಿ ಉಲ್ಲೇಖ ಮಾಡಿತ್ತು. ಈಗ ಇನ್ನೊಂದಿಷ್ಟು ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯಕ್ಕೆ ವಿವರಣೆ ನೀಡಿದೆ. ಇದನ್ನೂ ಓದಿ: ಐಎನ್‌ಎಸ್‌ ಬ್ರಹ್ಮಪುತ್ರ ನೌಕೆಯಲ್ಲಿ ಅಗ್ನಿ ದುರಂತ; ಓರ್ವ ಸಿಬ್ಬಂದಿ ನಾಪತ್ತೆ – ಒಂದು ಕಡೆ ವಾಲಿದ ನೌಕೆ

    ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?
    ನಾಗೇಂದ್ರ ಬಳಿ ಮೂರು ಮೊಬೈಲ್‌ಗಳು ಇದ್ದವು. ಹಗರಣ ಬೆಳಕಿಗೆ ಬಂದ ಬಳಿಕ ನಾಶ ಮಾಡಿದ್ದಾರೆ. ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

    ಹಣದ ರಾಶಿ ಸುರಿದಿರುವುದಕ್ಕೆ ಪೂರಕವಾದ ಡಿಜಿಟಲ್ ಸಾಕ್ಷ್ಯ ಮತ್ತು ಫೋಟೋ ಸಿಕ್ಕಿವೆ. ಆದರೆ ಇದನ್ನು ನಾಗೇಂದ್ರ ಒಪ್ಪಿಕೊಂಡಿಲ್ಲ.

    ಹೈದರಾಬಾದ್‌ನಲ್ಲಿ ಲಿಕ್ಕರ್ ವ್ಯಾಪಾರಿಗಳ ಜೊತೆ ಡೀಲ್ ಮಾಡಿದ್ದಾರೆ. ಹಣವನ್ನು ವ್ಯಾಪಾರಿಗಳಿಂದ ಪಡೆದುಕೊಂಡಿದ್ದು ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

    ಹೈದರಾಬಾದ್‌ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ಕೂಪನ್‌ ನೀಡಲಾಗಿದೆ.1.40 ಕೋಟಿ ರೂ. ಮೌಲ್ಯದ ಕೂಪನ್ ನೀಡಿರೋದಕ್ಕೆ ಪೂರಕ ಸಾಕ್ಷ್ಯ ಸಿಕ್ಕಿದೆ.

     

  • ವಾಲ್ಮೀಕಿ ಹಗರಣ| ಇಬ್ಬರು ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲು

    ವಾಲ್ಮೀಕಿ ಹಗರಣ| ಇಬ್ಬರು ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲು

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ನಡೆದಿದೆ ಎನ್ನಲಾದ 187 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಜಾರಿ ನಿರ್ದೇಶನಾಲಯದ (ED) ಇಬ್ಬರು ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಹಣಕಾಸು ಇಲಾಖೆಯನ್ನು ಸಿಲುಕಿಸುವಂತೆ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರಿಗೆ ಒತ್ತಡ ಹೇರಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರನ್ನು 5 ವಲಯಗಳನ್ನಾಗಿ ವಿಭಜಿಸುವ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಬಿ (Kallesh B) ದೂರು ಆಧರಿಸಿ ಮುರಳಿ ಕಣ್ಣನ್ ಮತ್ತು ಮಿತ್ತಲ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಜುಲೈ 16 ರಂದು ನಡೆದ ವಿಚಾರಣೆ ವೇಳೆ ಕಣ್ಣನ್ 17 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ, ಸಿಎಂ ಸಿದ್ದರಾಮಯ್ಯ ಹಣಕಾಸು ಇಲಾಖೆಯನ್ನು ಹೆಸರು ಹೇಳುವಂತೆ ಕಣ್ಣನ್ ಕೇಳಿಕೊಂಡರು ಎಂದು ಅವರು ಆರೋಪಿಸಿದ್ದಾರೆ.

    ವಾಲ್ಮೀಕಿ ನಿಗಮದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ (SIT) ವಹಿಸಿದ್ದರೆ ಯೂನಿಯನ್‌ ಬ್ಯಾಂಕ್‌ ನೀಡಿದ ದೂರು ಆಧಾರಿಸಿ ಸಿಬಿಐ (CBI) ತನಿಖೆಗೆ ಇಳಿದಿದೆ. ಈ ವೇಳೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಹಿನ್ನೆಲೆಯಲ್ಲಿ ಇಡಿ ಸಹ ತನಿಖೆ ನಡೆಸುತ್ತಿದೆ.

     

  • ವಾಲ್ಮೀಕಿ ನಿಗಮ ಗೋಲ್ಮಾಲ್‌ಗೆ ಸ್ಪೋಟಕಆಡಿಯೋ ಸಾಕ್ಷ್ಯ – ನಾಗೇಂದ್ರ ಕಡೆಯವರಿಂದಲೇ ಅಕ್ರಮ ಆರೋಪ

    ವಾಲ್ಮೀಕಿ ನಿಗಮ ಗೋಲ್ಮಾಲ್‌ಗೆ ಸ್ಪೋಟಕಆಡಿಯೋ ಸಾಕ್ಷ್ಯ – ನಾಗೇಂದ್ರ ಕಡೆಯವರಿಂದಲೇ ಅಕ್ರಮ ಆರೋಪ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಬಯಲಾದ ಆಡಿಯೋ, ವೀಡಿಯೋ ಸಾಕ್ಷ್ಯಗಳು ಹಗರಣದ ಕರ್ಮಕಾಂಡವನ್ನು ಬಟಾಬಯಲು ಮಾಡಿವೆ.

    ಅಧೀಕ್ಷಕ ಚಂದ್ರಶೇಖರ್ (Chandrashekar) ಆತ್ಮಹತ್ಯೆಗೆ (Suicide) 3 ದಿನ ಮೊದಲು ಅಂದ್ರೆ ಮೇ 24ರಂದು ನಿಗಮದ ಎಂಡಿ ಪದ್ಮನಾಭ್ (MD Padmanabhan) ಮತ್ತು ಲೆಕ್ಕಪರಿಶೋಧಕ ಪರಶುರಾಮ್ (Parashuram) ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದರು. ಹಗರಣದಲ್ಲಿ ಯಾರ‍್ಯಾರು ಪಾಲುದಾರರು? ಹಗರಣ ಬಯಲಾದ್ರೆ ಏನಾಗುತ್ತೆ? ಸಿಬಿಐ ತನಿಖೆ ನಡೆದರೆ ಏನಾಗುತ್ತದೆ? ಸ್ಥಳೀಯವಾಗಿಯೇ ತನಿಖೆ ನಡೆಸಿದರೆ ಏನಾಗುತ್ತೆ? ಎಂಬ ಬಗ್ಗೆ ಪದ್ಮನಾಭ್-ಪರಶುರಾಮ್ ಮಾತಾಡಿಕೊಂಡಿದ್ದರು.

    ಎಂಡಿ ತಮ್ಮನ್ನು ಹಗರಣದಲ್ಲಿ ಸಿಲುಕಿಸಬಹುದು ಎಂಬ ಭಯಕ್ಕೆ ಇದೆಲ್ಲವನ್ನು ಅಧೀಕ್ಷಕ ಪರಶುರಾಮ್ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಇದೇ ಆಡಿಯೋ-ವೀಡಿಯೋ ಔಟ್ ಆಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ನಿಖಿಲ್ ಕುಮಾರಸ್ವಾಮಿ

     

    ಆಡಿಯೋ ಸಾಕ್ಷ್ಯ 1 – ಸಚಿವ ನಾಗೇಂದ್ರಗೆ ಗೊತ್ತು!
    ಪರಶುರಾಮ್, ಲೆಕ್ಕ ಪರಿಶೋಧಕ: ಮಿನಿಸ್ಟರ್ ಗಮನಕ್ಕೆ ಇಲ್ವಾ ಸರ್ ಇದು. ನೆಕ್ಕಂಟಿ ನಾಗರಾಜ್ ಅಕೌಂಟ್ ಓಪನ್ ಮಾಡಿರೋದು.
    ಪದ್ಮನಾಭ, ಎಂಡಿ: ಅದು ಗೊತ್ತು ಅವರಿಗೆ, ಅವರೇ ಅಲ್ವಾ, ಎಲ್ಲರನ್ನು ಕರೆಸಿ, ಮಾತನಾಡಿದ್ದು.
    ಪರಶುರಾಮ್, ಲೆಕ್ಕ ಪರಿಶೋಧಕ: ಅಕೌಂಟ್ ಓಪನ್ ಮಾಡೋವಾಗ ಇದ್ದರಲ್ಲ.

    ಆಡಿಯೋ ಸಾಕ್ಷ್ಯ 2 – ಅಧ್ಯಕ್ಷರಿಗೆ ಹೇಳ್ಬೇಡಿ ರಾದ್ದಾಂತ ಆಗುತ್ತೆ!
    ಪರಶುರಾಮ್, ಲೆಕ್ಕ ಪರಿಶೋಧಕ : ಬ್ಯಾಂಕ್‌ನವರು ಈಗ ಕೇಸ್ ಮಾಡ್ತಿವಲ್ಲ ನಮ್ಮ ದುಡ್ಡು ನಮಗೆ ಕೊಡ್ತಾರಾ ಅವರು ಅಂತಾ? ಅಧ್ಯಕ್ಷರಿಗೆ ಹೇಳೋದಾ ಬೇಡ್ವಾ ಅಂತಾ.
    ಪದ್ಮನಾಭ, ಎಂಡಿ : ಹೇಳಿದ್ರೆ ದೊಡ್ಡ ರಾದ್ದಾಂತ ಮಾಡ್ತಾರೆ ಈಗ. ಸೋಮವಾರ, ಮಂಗಳವಾರ, ಬುಧವಾರ ಮೂರು ದಿನ ಬಿಡೋಣ ಈಗ. ಮ್ಯಾನೇಜ್ ಮಾಡಿ ಕಳಿಸಿ. ಅವನಿಗೂ ಅಷ್ಟೇ, ಆಯ್ತಪ್ಪ ಎಲ್ಲಾ ಪ್ರಿಂಟ್ ತೆಗೆಯಕ್ಕೆ ಹೇಳಿದ್ದೀನಿ ಕೊಡ್ತಿನಿ ಅಂತಾ ಹೇಳಿ ಕಳಿಸಿ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

     

    ಆಡಿಯೋ ಸಾಕ್ಷ್ಯ 3 ಹಗರಣ ಬಯಲಾದ್ರೆ ಏನ್ ಹೇಳ್ಬೇಕು?
    ಪರಶುರಾಮ್, ಲೆಕ್ಕ ಪರಿಶೋಧಕ : ನಿಮ್ಮ ಕಾಂಟ್ಯಾಕ್ಟ್‌ನಲ್ಲಿ ಯಾರು ಇದ್ದಾರೆ ಸಾರ್?
    ಪದ್ಮನಾಭ, ಎಂಡಿ : ಅದೇ ನಾಗರಾಜ್ ಬಾಮೈದ
    ಪರಶುರಾಮ್, ಲೆಕ್ಕ ಪರಿಶೋಧಕ : ನಾನು ಅವತ್ತೇ ಹೇಳಿದ್ದೆ ಸಾರ್, ಬೇಡ ಬೇಡ ಅಂತಾ. ಈ ಸೂ… ಮಕ್ಕಳು ಬಂದ್ರಲ್ಲ.
    ಪದ್ಮನಾಭ, ಎಂಡಿ: ನಾವು ಅದನ್ನು ಹೇಳಬಾರದು. ಒಂದೇ ಮಾತಲ್ಲಿ ಹೇಳಬೇಕು. ಮಿನಿಸ್ಟರ್ ಆಫೀಸ್‌ನಿಂದ ಹೇಳಿದ್ರು. ನಾಗರಾಜ್ ಕಡೆಯಿಂದ ಒತ್ತಡ ಬಂತು. ನಾವು ಆಯಿತು ಅಂತಾ, ಇದ್ದ ಅಕೌಂಟ್ ಟ್ರಾನ್ಸ್‌ಫರ್‌ ಮಾಡಿಕೊಟ್ವಿ.

  • ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ – ತನಿಖೆಗೆ ಸಿಬಿಐ ಬಳಿಕ ED ಎಂಟ್ರಿ!

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ – ತನಿಖೆಗೆ ಸಿಬಿಐ ಬಳಿಕ ED ಎಂಟ್ರಿ!

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ (Valmiki Corporation Corruption Scam) ಪ್ರಕರಣಕ್ಕೆ ಈಗ ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ (ED) ಎಂಟ್ರಿ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು, ಯೂನಿಯನ್ ಬ್ಯಾಂಕ್ (Union Bank Of India) ನೀಡಿದ್ದ ದೂರು ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಸಿಬಿಐನಿಂದ ಮಾಹಿತಿ ಪಡೆದುಕೊಂಡಿದೆ. ಜೊತೆಗೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಬಗ್ಗೆಯೂ ಮಾಹಿತಿ ಪಡೆದಿದ್ದು, ಮುಂದಿನ ವಾರದಲ್ಲೇ ಇಡಿ ಇನ್ನಷ್ಟು ತನಿಖೆಯೊಂದಿಗೆ ಎಫ್‌ಐಆರ್‌ ದಾಖಲಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ʻಪಬ್ಲಿಕ್‌ ಟಿವಿʼಗೆ (Public TV) ಮಾಹಿತಿ ನೀಡಿವೆ. ಇದನ್ನೂ ಓದಿ: Exclusive: ನಮ್ಮ ನಾಯಕರು ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ- ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್

    ಈಗಾಗಲೇ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Karnataka Maharshi Valmiki Scheduled Tribe Development Corporation Ltd) ನಡೆದಿರುವ ಹಗರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ. ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಅಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ಅಧಿಕಾರಿಗಳು, ಬ್ಯಾಂಕ್‌ ಉದ್ಯೋಗಿ ವಿರುದ್ಧ ಎಫ್‌ಐಆರ್‌

    ಏನಿದು ಪ್ರಕರಣ?
    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಇತ್ತೀಚೆಗೆ ಶಿವಮೊಗ್ಗದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಮೊದಲ ವಿಕೆಟ್‌ ಪತನವಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಸಚಿವ ನಾಗೇಂದ್ರ (B Nagendra) ರಾಜೀನಾಮೆ ನೀಡಿದ್ದಾರೆ.

    ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ, ಡಿಸಿಎಂ ಮಾತುಕತೆ ನಡೆಸಿದ ಬಳಿಕ ನಾಗೇಂದ್ರ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

     

    ಈಗಾಗಲೇ ಪ್ರಕರಣ ಸಂಬಂಧ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿತ್ತು.

    ಬುಧವಾರ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದರು.

     

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೇ ಸಚಿವ ನಾಗೇಂದ್ರ (B Nagendra) ಸ್ವಯಂ ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ ಸಿದ್ದರಾಮಯ್ಯ,  ಡಿಸಿಎಂ ಶಿವಕುಮಾರ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

     

    ಈಗಾಗಲೇ ಪ್ರಕರಣ ಸಂಬಂಧ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ಬುಧವಾರ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ ಎನ್ನಲಾಗುತ್ತದೆ.

    ಇನ್ನೊಂದು ಕಡೆ ಬಿಜೆಪಿ ಜೂನ್‌ 6ರ ಒಳಗಡೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಇಂದಿಗೆ ಡೆಡ್‌ಲೈನ್‌ ಅಂತ್ಯವಾಗಿದ್ದು ರಾಜೀನಾಮೆ ನೀಡದೇ ಇದ್ದರೆ ಬಿಜೆಪಿ ಉಗ್ರವಾಗಿ ಪ್ರತಿಭಟಿಸುವ ಸಾಧ್ಯತೆಯಿದೆ.

     

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಕೋಟ್ಯಂತರ ರೂಪಾಯಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ.

    ಯೂನಿಯನ್ ಬ್ಯಾಂಕ್‌ ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಬ್ಯಾಂಕಿನ ಮೂವರು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ.

     

    ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವವರು ಸರ್ಕಾರಿ ಅಧಿಕಾರಿಗಳು,‌ ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ

    ಸದ್ಯ ವಿಶೇಷ ತನಿಖಾ ತಂಡ (SIT) ಈ ಕೇಸ್ ಸಿಬಿಐಗೆ ವರ್ಗಾವಣೆ ಆಗುವ‌ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರಾಜ್ಯ ಸರ್ಕಾರ ತನಿಖೆಯನ್ನು ಎಸ್ಐಟಿ ವರ್ಗಾವಣೆ ಮಾಡಲು ನಿರಾಕರಿಸಿದ್ದೆ ಆದಲ್ಲಿ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.

  • ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ- ಸಿಬಿಐ ತನಿಖೆ, ಸಚಿವರ ರಾಜೀನಾಮೆಗೆ ಸಿ.ಟಿ.ರವಿ ಒತ್ತಾಯ

    ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ- ಸಿಬಿಐ ತನಿಖೆ, ಸಚಿವರ ರಾಜೀನಾಮೆಗೆ ಸಿ.ಟಿ.ರವಿ ಒತ್ತಾಯ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರದ ಹಗರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಮತ್ತು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಅವರು ಆಗ್ರಹಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 10 ಕೋಟಿಗಿಂತ ಹೆಚ್ಚು ಮೊತ್ತದ ಹಗರಣ ನಡೆದರೆ ಸ್ವಯಂಪ್ರೇರಿತವಾಗಿ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲು ಅವಕಾಶವಿದೆ. ಇದು 10 ಲಕ್ಷ ರೂಪಾಯಿ ಹಗರಣವಲ್ಲ, 187 ಕೋಟಿ ರೂಪಾಯಿಯ ಹಗರಣ. ನಿಮಗೆ ಸಿಐಡಿ ಮೇಲೆ ನಂಬಿಕೆ ಇರಬಹುದು. ಬೇರೆ ರಾಜ್ಯಗಳಿಗೂ ಹಣದ ವರ್ಗಾವಣೆ, ಕಂಪನಿಗಳ ಖಾತೆಗೆ ವರ್ಗಾವಣೆ ಆಗಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಕೊಡುವುದು ಸೂಕ್ತ ಎಂದು ನುಡಿದರು.

    ಸಾಕ್ಷ್ಯಾಧಾರ ನಾಶಪಡಿಸಲು ಸರಕಾರ ಪ್ರಯತ್ನಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇನ್ನೂ ನೀವು ಸಚಿವರ ರಾಜೀನಾಮೆ ಪಡೆಯದಿದ್ದರೆ, ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂಬುದನ್ನು ಗಮನಿಸಿಯೂ ನೀವು ರಾಜೀನಾಮೆ ಪಡೆಯದೆ ಇರುವುದನ್ನು ನೋಡಿದಾಗ ಬಹಳ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇರಬಹುದು ಎಂಬ ಅನುಮಾನ ನಮಗೆ ಮೂಡಲು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

    ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಈಗಾಗಲೇ ಸಿಬಿಐ ತನಿಖೆ ನಡೆಸಲು ಪತ್ರ ಬರೆದಿದ್ದಾರೆ. ನಾವು ಕೂಡ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದರು. ಮುಖ್ಯಮಂತ್ರಿಯವರು ತಕ್ಷಣ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಬೇಕು ಎಂದು ಸಿ ಟಿ ರವಿ ಒತ್ತಾಯಿಸಿದರು.