Tag: Valley

  • ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    ಶಿಮ್ಲಾ: ಶಾಲಾ ಬಸ್ ಕಣಿವೆಗೆ ಉರುಳಿ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಸೇಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಸ್ ಕುಲುವಿನಿಂದ ಸೈನ್ಜ್ ಕಡೆಗೆ ಸಾಗುತ್ತಿತ್ತು. ನಿಯೋಲಿ-ಶಂಶೇರ್ ಕಣಿವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್ ಕಣಿವೆಗೆ ಉರುಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದು, ಗಂಭೀರ ಗಾಯಗಳಾಗಿರುವವರೂ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ

    ಅಪಘಾತದ ಮಾಹಿತಿ ಸಿಗುತ್ತಲೇ ಕುಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

    ಈ ನಡುವೆ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕುಲುವಿನಲ್ಲಿ ಖಾಸಗಿ ಶಾಲಾ ಬಸ್ ಕಣಿವೆಗೆ ಬಿದ್ದಿರುವ ಸುದ್ದಿ ತಿಳಿದು ಬಂದಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಗಲಿದ ಆತ್ಮಗಳಿಗೆ ಶಾಂತಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಇಂಡೀಗೋದ ನೂರಾರು ಸಿಬ್ಬಂದಿಗೆ ಒಂದೇ ದಿನ ಅನಾರೋಗ್ಯ – ತನಿಖೆಗೆ ಡಿಜಿಸಿಎ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಘಾಟಿಯಲ್ಲಿ ಹೋಗ್ತಿದ್ದಾಗ 100 ಅಡಿ ಆಳದ ಪ್ರಪಾತಕ್ಕೆ ಬಿತ್ತು ಬಸ್- 51 ಮಂದಿ ಸಾವು

    ಘಾಟಿಯಲ್ಲಿ ಹೋಗ್ತಿದ್ದಾಗ 100 ಅಡಿ ಆಳದ ಪ್ರಪಾತಕ್ಕೆ ಬಿತ್ತು ಬಸ್- 51 ಮಂದಿ ಸಾವು

    ಹೈದರಾಬಾದ್: ತೆಲಂಗಾಣ ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ಎಂದೂ ನಡೆಯದ ಭಾರೀ ದುರಂತವೊಂದು ಸಂಭವಿಸಿದ್ದು, ಬಸ್ ಪ್ರಪಾತಕ್ಕೆ ಬಿದ್ದ ಪರಿಣಾಮ 51 ಮಂದಿ ಮೃತಪಟ್ಟಿದ್ದಾರೆ.

    83 ಜನ ಯಾತ್ರಿಗಳಿದ್ದ ಬಸ್ಸುವೊಂದು ಜಗ್ತಿಯಾಲ್ ಜಿಲ್ಲೆಯ ಕೊಂಡಗಟ್ಟು ಬೆಟ್ಟದ ಆಂಜನೇಯ ದೇವಸ್ಥಾನದಿಂದ ಮರಳುತ್ತಿತ್ತು. ಈ ವೇಳೆ ಶನಿವಾರಪೇಟೆ ಗ್ರಾಮದ ಸಮೀಪದ ಘಾಟ್‍ನಲ್ಲಿ ಬ್ರೇಕ್ ಫೇಲ್ ಆದ ಪರಿಣಾಮ ಪ್ರಪಾತಕ್ಕೆ ಜಾರಿ ಬಿದ್ದಿದೆ.

    ಅಪಘಾತದಲ್ಲಿ ಚಾಲಕ ಸೇರಿದಂತೆ 4 ಮಕ್ಕಳು, 21 ಜನ ಮಹಿಳೆಯರು ಹಾಗೂ 21 ಮಂದಿ ಪುರುಷರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು.

    ಚಿಕ್ಕಪುಟ್ಟ ಗಾಯವಾಗಿರುವವನ್ನು ಜಗ್ತಿಯಾಲ್ ಜಿಲ್ಲಾಸ್ಪತ್ರೆಗೆ, ಇನ್ನು ಸ್ಥಿತಿ ಗಂಭೀರವಾಗಿವ ಪ್ರಯಾಣಿಕರನ್ನು ಕರೀಂನಗರ ಹಾಗೂ ಹೈದರಾಬಾದ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬೆಳಗ್ಗೆ 11.45 ಗಂಟೆಗೆ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎ.ಶರತ್ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv