Tag: Valentines Day

  • ಪ್ರೇಮಿಗಳಿಗೆ ಬಂಪರ್ ಆಫರ್- ಇಷ್ಟು ಹಣ ನೀಡಿದ್ರೆ ಸಾಕು, ಆಕಾಶದಲ್ಲಿ ಹಾರಾಡುತ್ತಾ ನಿಮ್ಮ ಮನದನ್ನೆಗೆ ಪ್ರಪೋಸ್ ಮಾಡ್ಬಹುದು

    ಪ್ರೇಮಿಗಳಿಗೆ ಬಂಪರ್ ಆಫರ್- ಇಷ್ಟು ಹಣ ನೀಡಿದ್ರೆ ಸಾಕು, ಆಕಾಶದಲ್ಲಿ ಹಾರಾಡುತ್ತಾ ನಿಮ್ಮ ಮನದನ್ನೆಗೆ ಪ್ರಪೋಸ್ ಮಾಡ್ಬಹುದು

    ಬೆಂಗಳೂರು: ರಕ್ತದಲ್ಲಿ ಲವ್ ಲೆಟರ್ ಬರೆದು ಪ್ರಪೋಸ್ ಮಾಡೋದು ಓಲ್ಡ್ ಫ್ಯಾಷನ್. ಈಗೇನಿದ್ದರು ವಿಮಾನದಲ್ಲಿ ಹಾರಾಡುತ್ತಾ ಯಾರ ಭಯವೂ ಇಲ್ಲದೆ ನಿಮ್ಮ ಮನದನ್ನೆಗೆ ಪ್ರಪೋಸ್ ಮಾಡೋದು ಲೇಟೆಸ್ಟ್ ಫ್ಯಾಷನ್.

    ಹೌದು. ಜಕ್ಕೂರ್ ಏರೋಡ್ರಮ್‍ನಲ್ಲಿರೋ ಆಲ್ಟಿವಿಯಾ ಏವಿಯೇಷನ್ ಕಂಪನಿ ಪ್ರೇಮಿಗಳಿಗೆ ಹೊಸ ಆಫರ್ ನೀಡಿದೆ. ಫೆಬ್ರವರಿ 14ನೇ ತಾರೀಖು ಪ್ರೇಮಿಗಳು ಕೇವಲ 5 ಸಾವಿರ ರುಪಾಯಿ ನೀಡಿದರೆ ಸಾಕು ಅರ್ಧ ಗಂಟೆಗಳ ಕಾಲ ಆಕಾಶದಲ್ಲಿ ನಿಮ್ಮ ಪ್ರೇಯಸಿ ಜೊತೆ ಹಾರಾಡುತ್ತಾ, ಕೇಕ್ ಕಟ್ ಮಾಡಿ ತಿನ್ನಿಸಿ, ನಿಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು.

    ಈ ಆಫರ್ ಕೇವಲ ಪ್ರೇಮಿಗಳಿಗೆ ಮಾತ್ರ ಇದ್ದು ಬೇರೆ ಯಾರಿಗೂ ಅವಕಾಶವಿಲ್ಲ.

  • ಫೇಸ್‍ಬುಕ್ ಬಳಸೋ ಮಹಿಳೆಯರೇ ಈ ಸ್ಟೋರಿ ಓದಿ- ಯಾರಿಗೋ ನೀವು ಈ ವರ್ಷದ ಲವ್ವರ್ ಆಗ್ಬಹುದು ಎಚ್ಚರ

    ಫೇಸ್‍ಬುಕ್ ಬಳಸೋ ಮಹಿಳೆಯರೇ ಈ ಸ್ಟೋರಿ ಓದಿ- ಯಾರಿಗೋ ನೀವು ಈ ವರ್ಷದ ಲವ್ವರ್ ಆಗ್ಬಹುದು ಎಚ್ಚರ

    ಬೆಂಗಳೂರು: ಫೇಸ್ ಬುಕ್ ಬಳಸೋ ಮಹಿಳೆಯರೇ, ಯುವತಿಯರೇ ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದೆ ಎಚ್ಚರ. ಫೇಸ್ ಬುಕ್‍ನಲ್ಲಿ ಡ್ಯಾಡೀಸ್ ಗೇಮ್ಸ್ ಲಿಂಕ್‍ನಿಂದಾಗಿ ಇಲ್ಲೊಬ್ಬರು ಮದುವೆಯಾಗಿರೋ ಗೃಹಿಣಿ ಮತ್ತೊಬ್ಬರ ಲವ್ವರ್ ಆಗಿ ಮುಜುಗರ ಅನುಭವಿಸಿದ್ದಾರೆ.

    ಕಾಮಾಕ್ಷಿಪಾಳ್ಯದ ನಿವಾಸಿ ಪ್ರಶಾಂತ್ ಗೌಡ ಫೇಸ್ ಬುಕ್‍ನಲ್ಲಿ ಬರುವ ಲಿಂಕ್ ಬಳಸಿ ಅಶ್ವಿನಿ ನನ್ನ ಈ ವರ್ಷದ ಲವ್ವರ್ ಎಂದು ಸ್ಟೇಟಸ್ ಹಾಕಿಕೊಂಡಿದ್ದಾನೆ. ಜನಸ್ಮೃತಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆಯಾಗಿರುವ ಅಶ್ವಿನಿಯವರಿಗೆ ಸ್ನೇಹಿತರು ಈ ಬಗ್ಗೆ ಕರೆ ಮಾಡಿ ಮಾಹಿತಿ ತಿಳಿಸಿ, ಸ್ಕ್ರೀನ್ ಶಾಟ್ಸ್ ತೆಗೆದು ಕಳಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಅಶ್ವಿನಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

    ಮಹಿಳಾ ಸಂಘಟನೆಯ ಅಧ್ಯಕ್ಷರಿಗೆ ಈ ರೀತಿ ಮಾಡಿದರೆ ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿ ಏನು ಎನ್ನುವುದು ಅಶ್ವಿನಿಯವರ ಪ್ರಶ್ನೆ. ಇಂತಹ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ.