Tag: Valentines Day

  • ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ಬೆಂಗಳೂರು: ಫೆಬ್ರವರಿ ತಿಂಗಳನ್ನು ಪ್ರೀತಿಯ ಮಾಸ ಎಂದು ಕರೆಯುತ್ತಾರೆ. ಮನಸ್ಸಲ್ಲಿ ಬಚ್ಚಿಟ್ಟ ಪ್ರೀತಿಯನ್ನು ಹೇಳಿಕೊಳ್ಳುವ ಇರುವ ಸಮಯ ಇದಾಗಿದೆ. ನನ್ನ ಹುಡುಗಿಗೆ ಏನ್ ಗಿಫ್ಟ್ ಕೊಡಲಿ ಎಂದು ಹುಡುಗರು ಫುಲ್ ಕನ್ಫ್ಯೂಸ್ ಆಗಿದ್ದರೆ, ಇತ್ತ ಹುಡುಗಿಯರು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬಂಕ್ ಆಗಿ ರೆಡಿಯಾಗಬೇಕು ಎಂದು ಭರ್ಜರಿ ಶಾಪಿಂಗ್ ನಡೆಸಿದ್ದಾರೆ.

    ಈಗ ಲವ್ ಬರ್ಡ್ಸ್ ಕೊಟ್ಟು ಪ್ರಪೋಸ್ ಮಾಡುವುದು ಹೊಸ ಟ್ರೇಂಡ್ ಆಗಿದೆ. ಹೀಗಾಗಿ ಮಾರ್ಕೆಟ್ ನಲ್ಲಿ ಕಲರ್ ಕಲರ್ ಜೋಡಿ ಹಕ್ಕಿಗಳು ಎಂಟ್ರಿ ಕೊಟ್ಟಿದ್ದು, ಪ್ರೇಮಚಿತ್ತಾರ ಮೂಡಿಸಿವೆ. ಇವುಗಳನ್ನೇ ನೀವು ಎಂದುಕೊಂಡು ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆ ಮುದ್ದಾಡುತ್ತಾರೆ.

    ಇವುಗಳ ಜೊತೆಗೆ ಕಪಲ್ ಶೋ ಪೀಸ್, ಪೇರ್ ಲವ್ ಕೋಟ್ಸ್ ಮಗ್, ಸ್ಕ್ರಾಪ್ ಅಲ್ಬಂಗಳಿಗೂ ಲವರ್ಸ್ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಪ್ರಣಯದ ಸಂಕೇತವಾದ ದಿಂಬಿನ ಮೇಲೆ ಲವ್ ಕೋಟ್ಸ್ ಗಳನ್ನು ಬರೆಯಲಾಗಿದೆ. ಸ್ಪೆಷಲ್ ಆಗಿ ಗೊಂಬೆಗಳ ಗ್ರೀಟಿಂಗ್ಸ್ ಗಳಲ್ಲಿ ಪ್ರೇಮ ಪತ್ರ ಮೂಡಿದೆ.

    ಪೋರಟಿಂಥ್‍ಗೆ ಕ್ಯಾಂಡಲ್ ಲೈಟ್ ಡಿನ್ನರ್ ಫಿಕ್ಸ್ ಆಗಿದೆ. ಆ ದಿನ ನಾನು ಬಬ್ಲಿಯಾಗಿ ಕಾಣುವ ಡ್ರೆಸ್ ಹಾಕಬೇಕು ಎಂದು ಹುಡುಗಿಯರು ಫುಲ್ ಶಾಪಿಂಗ್ ಮಾಡುತ್ತಿದ್ದಾರೆ. ಕೆಲ ಹುಡುಗಿಯರು ನಾನು ಧರಿಸುವ ರೆಡ್ ಡ್ರೆಸ್ ನೋಡಿ, ನಮ್ಮ ಹುಡುಗ ಕ್ಲೀನ್ ಬೋಲ್ಡ್ ಆಗಬೇಕು ಎಂದು ಫುಲ್ ಪ್ರಿಪರೇಷನ್ ನಡೆಸಿದ್ದಾರೆ. ಅದಕ್ಕೆ ತಕ್ಕಂತೆ ಮಾರ್ಕೆಟ್‍ನಲ್ಲಿ ಕೆಂಪು ಬಣ್ಣದ ಡ್ರೆಸ್ ಗಳು ಹವಾ ಎಬ್ಬಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಗಾಂಧಿನಗರ: ಪ್ರೇಮಿಗಳ ದಿನದಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ.

    ಯುವಕ, ಯುವತಿಯರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಲಾಫ್ಟರ್ ಥೆರಪಿಸ್ಟ್ ಕಮಲೇಶ್ ಮಸಾಲಾವಾಲಾ ನಡೆಸುತ್ತಿರುವ ಹಾಸ್ಯಮೇವ ಜಯತೆ ಎಂಬ ಸ್ವಯಂಪ್ರೇರಿತ ಸಂಘಟನೆ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸೂರತ್‍ನ ಸುಮಾರು 15 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲಿ ತಾವು ಪ್ರೇಮ ವಿವಾಹವಾಗಲ್ಲ ಎಂದು ಪ್ರಮಾಣ ಮಾಡಲು ಮುಂದಾಗಿದ್ದು, ಸಂಸ್ಕಾರ ಭಾರತಿ, ಪ್ರೆಸಿಡೆನ್ಸಿ ಹೈಸ್ಕೂಲ್ ಸೇರಿ 15 ಶಾಲೆಗಳಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಮಾಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಾರ್ಯಕ್ರಮ ಆಯೋಜಕರು, “ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುತ್ತಾರೆ ಅಲ್ಲದೆ ತಾವು ಪ್ರೀತಿಸಿದವರನ್ನೇ ಮದುವೆಯಾಗುವ ದೃಢ ನಿರ್ಧಾರ ಮಾಡುತ್ತಾರೆ. ಆದರಲ್ಲಿ ಮನೆಬಿಟ್ಟು ಓಡಿ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮದುವೆಯಾದವರ ಸಂಬಂಧ ಬೇಗನೇ ಮುರಿದುಬೀಳುತ್ತವೆ. ಇಂತಹ ನಿರ್ಧಾರ ಮಾಡುವಾಗ ಪೋಷಕರ ಸಲಹೆ ಅವಶ್ಯಕ ಎಂಬ ಸಂದೇಶ ನೀಡಲು ಈ ಹೊಸ ಕಾರ್ಯಕ್ರಮವನ್ನು ನಡೆಸಲು ಹೊರಟಿದ್ದೇವೆ” ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಹ ಆಯೋಜಕರಾಗಿರುವ ಕವಿ ಮುಕುಲ್ ಛೋಕ್ಸಿ ಮಾತನಾಡಿ, “ಹಲವು ಯುವಕರು ಪೋಷಕರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗುತ್ತಾರೆ. ಯಾಕೆ ಪೋಷಕರು ತಮ್ಮ ಮಕ್ಕಳ ಪ್ರೀತಿಯನ್ನು ವಿರೋಧಿಸುತ್ತಾರೆ ಎಂದು ಯುವಕರಿಗೆ ತಿಳಿದಿರೋದಿಲ್ಲ. ಹೀಗಾಗಿ ಈ ರೀತಿ ಪ್ರಮಾಣ ಮಾಡಿದಾಗ ತಮ್ಮ ಪೋಷಕರ ಭಾವನೆಗಳಿಗೆ ಗೌರವ ಕೊಡಲು ಯುವಕರು ನಿರ್ಧಾರ ಮಾಡುತ್ತಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ನಮ್ಮ ಪೋಷಕರಿಗೋಸ್ಕರ ನಾವು ಈ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮಾಡಿರುವಷ್ಟು ತ್ಯಾಗ ಈ ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಹೀಗಾಗಿ ಅವರ ನಿರ್ಧಾರಗಳಿಗೆ ನಾವು ಗೌರವ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಬೆಂಗಳೂರು: ಫೆಬ್ರವರಿ 14 ಬಂದರೆ ಪ್ರೇಮಿಗಳಿಗೆ ಹಬ್ಬ. ಪ್ರತಿ ವ್ಯಾಲೇಂಟೆನ್ಸ್ ಡೇಗೂ ನನ್ನ ಹುಡ್ಗಾನೇ ಗಿಫ್ಟ್ ಕೊಡತ್ತಾನೆ. ಆದರೆ ಈ ವರ್ಷ ನನ್ನ ಹೀರೋಗೆ ಏನಾದ್ರೂ ಕೊಡೋಣ ಎಂದು ಯುವತಿಯರು ಫುಲ್ ರೆಡಿಯಾಗಿದ್ದಾರೆ.

    ಸಿಲಿಕಾನ್ ಸಿಟಿ ಬೆಡಗಿಯರ ಕೈಯಲ್ಲಿ ಪ್ರೇಮ ಚಿತ್ತಾರಗಳು ಮೂಡಿದೆ. ಕೈಯಲ್ಲಿ ಮೆಹಂದಿ ಇದೆ ಎಂದರೆ ಅಲ್ಲೊಂದು ಖುಷಿ, ಸಂತೋಷ ಇದೆ ಎಂದು ಅರ್ಥ. ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಕ್ಕೆ ಮೆಹಂದಿ, ಟ್ಯಾಟೂ ಟ್ರೆಂಡ್ ಹುಟ್ಟಿಕೊಂಡಿದೆ. ಪೋಟ್ ರೇಟ್ ಮದರಂಗಿಯಲ್ಲೇ ತಮ್ಮ ಗೆಳೆಯನ ಹೆಸರನ್ನು ಹಾಕಿಸಿಕೊಳ್ಳುತ್ತಿದ್ದಾರೆ.

    ಇವುಗಳ ಜೊತೆ ಟ್ಯಾಟೂ ಟ್ರೆಂಡ್ ಸಹ ಸ್ಟಾರ್ಟ್ ಆಗಿದ್ದು, ತಮ್ಮ ಇನಿಯನ ನೆನಪಿಗಾಗಿ ಲವ್ ಸಿಂಬಲ್ ಗಳನ್ನು ರಂಗೇರಿಸಿ ಕೊಳ್ಳುತ್ತಿದ್ದಾರೆ. ಜೀವವಿಲ್ಲದ ವಸ್ತುಗಳನ್ನು ಕೊಡುವುದಕ್ಕಿಂತ ತನ್ನ ಕೈಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಈ ಡಿಸೈನ್‍ಗಳು ಕನಿಷ್ಟ 1 ವಾರವಿರುವುದರಿಂದ ಯುವತಿಯರು, ತಾತ್ಕಾಲಿಕ ಹಾಗೂ ಪರ್ಮೇನೆಂಟ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಈ ಡಿಸೈನ್‍ಗಳು ಚೆಲುವೆಯರ ಕೈಗೆ ನ್ಯೂ ಲುಕ್ ನೀಡುತ್ತಿವೆ. ಜೊತೆಗೆ ಪ್ರೀತಿಯನ್ನು ರಂಗೇರಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನ- ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ವೈರಟಿ ಚಾಕ್ಲೇಟ್ಸ್ ಗಳು

    ಪ್ರೇಮಿಗಳ ದಿನ- ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ವೈರಟಿ ಚಾಕ್ಲೇಟ್ಸ್ ಗಳು

    ಬೆಂಗಳೂರು: ಚಾಕ್ಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮ ಪಕ್ಷಿಗಳಿಗಂತೂ ಚಾಕ್ಲೇಟ್ಸ್ ಅಂದರೆ ಹಾಟ್ ಫೇವರೇಟ್. ಹೀಗಾಗಿ ಪ್ರೇಮಿಗಳ ದಿನ ಹಾಗೂ ಚಾಕ್ಲೇಡ್ ಡೇ ಗಾಗಿ ಸ್ಪೆಷಲ್ ಆಗಿ ಚಾಕ್ಲೇಟ್‍ಗಳು ತಯಾರಾಗಿವೆ.

    ನಗರದ ಚಾಕ್ಲೇಟ್ಸ್ ಜಂಕ್ಷನ್ ಸೇರಿದಂತೆ ಬಹುತೇಕ ಶಾಪ್‍ಗಳಲ್ಲಿ ಚಾಕ್ಲೇಟ್ಸ್ ಗಳು ಕಮಾಲ್ ಮಾಡುತ್ತಿವೆ. ಅವುಗಳನ್ನು ಪ್ರೇಮಿಗಳು ಲವ್ ಸಿಂಬಲ್ ಆಗಿ ಬಳಸುತ್ತಿದ್ದಾರೆ. ಪ್ಲೇನ್, ಆರೆಂಜ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿದಂತೆ 70 ಬಗೆಯ ಚಾಕ್ಲೇಟ್‍ಗಳಲ್ಲಿ ಪ್ರೀತಿಯ ಮೊಗ್ಗು ಅರಳಿದೆ ಎಂದು ಮಾಲೀಕರಾದ ಅನುಪಮಾ ಅಮರನಾಥ್ ಹೇಳಿದ್ದಾರೆ.

    ಫೆಬ್ರವರಿ 14ಕ್ಕೆ ಮೊದಲೇ ಪ್ರೇಮಿಗಳ ಹಬ್ಬ ಆರಂಭವಾಗುತ್ತದೆ. ಈ ತಿಂಗಳ ಮೊದಲ ವಾರ, ರೋಜ್ ಡೇ, ಚಾಕ್ಲೇಟ್ಸ್ ಡೇ, ಹಗ್ ಡೇ, ಕಿಸ್ ಡೇಗಳು ಬರುತ್ತವೆ. ಅದರಂತೆ ಶನಿವಾರ ಚಾಕ್ಲೇಟ್ ಡೇ ಆಗಿತ್ತು. ಪ್ರಿಯಕರ ತನ್ನ ತನ್ನ ಪ್ರೇಯಸಿಗೆ ಪ್ರೀತಿಯ ಸಂಕೇತವಾಗಿ ಚಾಕ್ಲೇಟ್ಸ್ ತಿನ್ನಿಸಿ ಐ ಲವ್ ಯೂ ಎಂದು ಹೇಳುತ್ತಾರೆ. ಹೀಗಾಗಿ ಹಾರ್ಟ್ ಶೆಪ್, ಗುಲಾಬಿ, ಲಾಲಿಪಪ್ ಚಾಕ್ಲೇಟ್ ಗಳು ರೆಡಿಯಾಗಿದ್ದು, ಇವುಗಳನ್ನು ನೋಡಿದ ತಕ್ಷಣವೇ ರೊಮ್ಯಾಂಟಿಕ್ ಫೀಲ್ ಬರುತ್ತದೆ ಎಂದು ಗ್ರಾಹಕಿ ಶಾಂತಾ ಹೇಳಿದ್ದಾರೆ.

    ಗರ್ಲ್ ಫ್ರೆಂಡ್‍ಗೆ ಪ್ರಪೋಸ್ ಮಾಡಲು ಚಾಕ್ಲೇಟ್ ಬೊಕ್ಕೆಗಳನ್ನು ತಯಾರಿಸಲಾಗಿದ್ದು, ಭಾರೀ ಡಿಮ್ಯಾಂಡ್ ಬಂದಿದೆ. ಇವುಗಳ ಜೊತೆಗೆ ವಿಶೇಷವಾಗಿ ಪ್ರಣಯ ಪಕ್ಷಿಗಳಿಬ್ಬರ ಭಾವಚಿತ್ರಗಳನ್ನು ಚಾಕ್ಲೇಟ್ಸ್ ನಲ್ಲಿ ಅರಳಿಸಿ, ಲವ್ ಈಸ್ ಗಾಡ್ ಎಂದು ಸಾರಲಾಗುತ್ತಿದೆ ಎಂಬುದಾಗಿ ಕಾಲೇಜು ವಿದ್ಯಾರ್ಥಿನಿ ಸುಕೃತಿ ಹೇಳಿದ್ದಾಳೆ.

    ಒಟ್ಟಿನಲ್ಲಿ ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದಂತೆಯೇ ಪ್ರಿಯಕರ ತನ್ನ ಪ್ರಿಯತಮೆನ್ನು ಒಲಿಸಿಕೊಳ್ಳುವುದಕ್ಕೆ ಡಿಫರೆಂಟ್ ಡಿಫರೆಂಟ್ ಚಾಕ್ಲೇಟ್ ಗಳು ಮಾರ್ಕೆಟ್‍ಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಐಎಎಸ್ ಅಧಿಕಾರಿಗಳು..!

    ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಐಎಎಸ್ ಅಧಿಕಾರಿಗಳು..!

    ದಾವಣಗೆರೆ: ಪ್ರೇಮಿಗಳ ದಿನದಂದೇ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ದಾವಣಗೆರೆ ಜಿಲ್ಲಾಧಿಕಾರಿ ಡಾ.ಭಗಾಧಿ ಗೌತಮ್ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವಥಿ ಇಬ್ಬರ ಮದುವೆ ಫಿಕ್ಸ್ ಆಗಿದೆ. ಇದೇ ಫೆಬ್ರವರಿ 14ರಂದು ಅಂದರೆ ಗುರುವಾರ ಎಸ್.ಅಶ್ವಥಿ ಅವರ ತಮ್ಮ ನಿವಾಸ ಕೇರಳದ ಕ್ಯಾಲಿಕಟ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಫೆಬ್ರವರಿ 17 ರಂದು ಜಿಲ್ಲಾಧಿಕಾರಿ ಡಾ. ಭಗಾಧಿ ಗೌತಮ್ ನಿವಾಸ ಆಂಧ್ರದಲ್ಲಿ ರಿಸೆಪ್ಷನ್ ನಡೆಯಲಿದೆ. ಡಾ.ಭಗಾಧಿ ಗೌತಮ್ ಮತ್ತು ಎಸ್.ಅಶ್ವಥಿ ಪರಸ್ಪರ ಪ್ರೀತಿಸುತ್ತಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಾ. ಭಗಾಧಿ ಗೌತಮ್ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಎಸ್. ಅಶ್ವಥಿ ಜೊತೆಗೆ ಮದುವೆಯ ಮಾತುಕತೆ ನಡೆದಿತ್ತು.

    ರಾಜ್ಯದ ಪ್ರಮುಖ ಐಎಎಸ್ ಅಧಿಕಾರಿ ಮುಂದಾಳತ್ವದಲ್ಲಿ ಎರಡು ಕುಟುಂಬದ ಜೊತೆ ಮದುವೆ ಮಾತುಕತೆ ನಡೆದಿದ್ದು, ಪ್ರೇಮಿಗಳ ದಿನದಂದೇ ಡಾ.ಭಗಾಧಿ ಗೌತಮ್ ಮತ್ತು ಎಸ್.ಅಶ್ವಥಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಐಎಎಸ್ ಜೋಡಿಗಳು ಒಂದಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪ್ರೇಮಿಗಳ ದಿನವೇ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಮದುವೆ

    ಪ್ರೇಮಿಗಳ ದಿನವೇ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಮದುವೆ

    ಬೆಂಗಳೂರು: ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳೆತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ನಟ ಹಾಗೂ ಕಿರುತೆರೆಯ ಹ್ಯಾಂಡ್‍ಸಮ್ ಹುಡುಗ ವಿಜಯ್ ಸೂರ್ಯ ಸದ್ಯದಲ್ಲೇ ಮದುವೆಯಾಗಲಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಅವರು ಜನಪ್ರಿಯತೆ ಗಳಿಸಿದ್ದಾರೆ. ಇದೇ ತಿಂಗಳು ಅಂದರೆ ಫೆಬ್ರವರಿ 14 ರಂದು ಅದು ಪ್ರೇಮಿಗಳ ದಿನದಂತೆ ವಿವಾಹವಾಗುತ್ತಿದ್ದಾರೆ. ಚೈತ್ರಾ ಎಂಬವರನ್ನು ವಿಜಯ್ ಸೂರ್ಯ ಮದುವೆಯಾಗುತ್ತಿದ್ದಾರೆ. ಚೈತ್ರಾ ಅವರ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ವಿಜಯ್ ಸೂರ್ಯ ಅವರ ದೂರದ ಸಂಬಂಧಿಯಾಗಿದ್ದಾರೆ.

    ತಮ್ಮ ಮದುವೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ವಿಜಯ್ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಚೈತ್ರಾ ಮತ್ತು ನಮ್ಮ ಕುಟುಂಬದವರಿಗೆ 9 ವರ್ಷಗಳ ಹಿಂದೆ ಪರಿಚಯವಾಗಿದೆ. ಆದರೆ ನಾನು ಚೈತ್ರಾರನ್ನು ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ. ನಮ್ಮ ತಾಯಿ ಅವರನ್ನು ನೋಡಿ ಇಷ್ಟಪಟ್ಟು ಮದುವೆಯ ಬಗ್ಗೆ ಅವರ ಕುಟುಂಬದವರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಅವರು ಒಪ್ಪಿಗೆ ಸೂಚಿಸಿದ್ದು, ಇಬ್ಬರ ಜಾತಕ ಹೊಂದಾಣಿಕೆಯಾಗಿದ್ದು, ಗುರು-ಹಿರಿಯರು ಈಗ ನಮ್ಮ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.

    23 ವರ್ಷದ ಚೈತ್ರಾ ಅವರು ಪ್ರಬುಧ್ಧವಾಗಿ ಯೋಚಿಸುತ್ತಾರೆ. ನಾನು ನಮ್ಮ ಉದ್ಯೋಗ ಎಲ್ಲರ ಗಮನವನ್ನು ಸೆಳೆಯುತ್ತದೆ ಎಂದುಕೊಂಡಿದ್ದೆ. ಆದರೆ ಚೈತ್ರಾ ನಾನೊಬ್ಬ ನಟ ಎಂದು ಅಷ್ಟಾಗಿ ಚಿಂತಿಸಲಿಲ್ಲ. ‘ವ್ಯಕ್ತಿ ಯಾರು ಎನ್ನುವುದಕ್ಕಿಂತ ವ್ಯಕ್ತಿ ಹೇಗೆ’ ಎಂದು ಚೈತ್ರಾ ನೋಡುತ್ತಾರೆ. ನನ್ನ ನಟನಾ ಫೀಲ್ಡ್, ಅಲ್ಲಿನ ಸುದ್ದಿ, ಗಾಸಿಪ್ ಗಳ ಬಗ್ಗೆ ಮುಂಚಿತವಾಗಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ವೃತ್ತಿಯಂತೆ ನಟನೆಯು ಒಂದು ವೃತ್ತಿ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ನನಗೆ ಇಷ್ಟವಾದರು ಎಂದು ವಿಜಯ್ ಸೂರ್ಯ ತಮ್ಮ ಭಾವಿ ಪತ್ನಿ ಚೈತ್ರಾ ಬಗ್ಗೆ ಮಾತನಾಡಿದ್ದಾರೆ.

    ನಮ್ಮ ಮದುವೆ ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ. ನಮ್ಮ ಮದುವೆ ದಿನಾಂಕವೂ ಒಂದು ವಿಶೇಷ ದಿನ ಎಂದು ಭಾವಿಸುವುದಿಲ್ಲ. ಆದರೆ ನನ್ನ ಮದುವೆ ದಿನವನ್ನು ನಾನು ಮರೆಯುದಿಲ್ಲ ಎಂದು ವಿಜಯ್ ಸೂರ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಬೆಂಗಳೂರು: ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಲವ್ ಮಾಡಿ, ಮದುವೆ ಆದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಅಂತಲೇ ಕರೆಯಿಸಿಕೊಳ್ಳುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ.

    ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡ ಈ ಜೋಡಿ, ಬಳಿಕ ಬೆಳ್ಳಿತೆರೆ ಮೇಲೂ ಯಶಸ್ವಿಯಾಗಿದ್ದಾರೆ. ಈ ಜೋಡಿ ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಸಿಲುಕಿದ್ದವರು. ದಂಪತಿಯಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ `ಪ್ರೇಮಿಗಳ ದಿನ’ ಅಂದರೆ ತುಂಬಾ ಸ್ಪೆಷಲ್. ಆದ್ದರಿಂದ ಈ ಬಾರಿ ಪ್ರೇಮಿಗಳ ದಿನವನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅಮೆರಿಕದ ಚಿಕಾಗೋದಲ್ಲಿ ಆಚರಿಸಿದ್ದಾರೆ.

    ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಒಂದು ಅಪರೂಪದ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಶಕದ ಹಿಂದೆ ಅಂದರೆ 2006 ರಲ್ಲಿ ಕ್ಲಿಕ್ ಆದ ಈ ಫೋಟೋವನ್ನ ರಾಧಿಕಾ ಪಂಡಿತ್ `ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

    “ಈ ಫೋಟೋ ತೆಗೆದಿದ್ದಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಈ ಫೋಟೋನ ಈಗ ನೋಡಿದರೆ ಆಗಲೇ ನಮ್ಮ ಪ್ರೀತಿ ಹೃದಯಾಳದಲ್ಲಿ ಅಡಗಿತ್ತು. ಅದು ನಮ್ಮ ಅರಿವಿಗೆ ಬಂದಿರಲಿಲ್ಲವೇನೋ ಎಂಬ ಭಾವನೆ ಮೂಡುತ್ತದೆ” ಎಂದು ಫೇಸ್ ಬುಕ್ ನಲ್ಲಿ ಬರೆದು ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

    ಸದ್ಯಕ್ಕೆ ರಾಧಿಕಾ ಪಂಡಿತ್ ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ಪ್ರೇಮಿಗಳ ದಿನದಂದು ಪತ್ನಿಯ ಜೊತೆಗಿರಲು ಯಶ್ ಕೂಡ ಅಮೆರಿಕಗೆ ಹೋಗಿದ್ದಾರೆ. ರಾಧಿಕಾ ಪಂಡಿತ್ ಸಹೋದರನಿಗೆ ಹೆಣ್ಣು ಮಗುವಾಗಿದೆ. ರಾಧಿಕಾ ಸಹೋದರ ನೆಲೆಸಿರುವುದು ಚಿಕಾಗೋದಲ್ಲಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ಈಗ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಯಶ್ ಜೊತೆಗಿನ ಫೋಟೋವನ್ನೂ ಕೂಡ ರಾಧಿಕಾ ಹಂಚಿಕೊಂಡಿದ್ದಾರೆ.

  • ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ?: ಜಿಗ್ನೇಶ್ ಮೇವಾನಿ ಪ್ರಶ್ನೆ

    ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ?: ಜಿಗ್ನೇಶ್ ಮೇವಾನಿ ಪ್ರಶ್ನೆ

    ನವದೆಹಲಿ: ಫೆಬ್ರವರಿ 14 ಪ್ರೇಮಿಗಳ ದಿನದಂದು ಪ್ರಧಾನಿ ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ ಎಂದು ಗುಜರಾತ್ ಶಾಸಕ, ದಲಿತ ಮುಖಂಡ ಜಗ್ನೇಶ್ ಮೇವಾನಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.

    ನಮಗೆ ತುಂಬಾ ಜನ ‘ಐ ಲವ್ ಯು’ ಅಂತಾ ಹೇಳಿದ್ದಾರೆ. ಆದ್ರೆ ಮೋದಿ ಅವರಿಗೆ ಇದೂವರೆಗೂ ಯಾರಾದ್ರೂ ‘ಐ ಲವ್ ಯು’ ಎಂದು ಹೇಳಿದ್ದಾರಾ? ನನಗೇನೋ ಅನುಮಾನ. ಈ ಬಗ್ಗೆ ಏನು ಹೇಳ್ತೀರಾ? ಪ್ರೇಮಿಗಳ ದಿನದ ಶುಭಾಶಯ ಅಂತಾ ಜಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸುವ ಆರ್‍ಎಸ್‍ಎಸ್ ಬಗ್ಗೆ ಜಿಗ್ನೇಶ್ ಮೇವಾನಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಇನ್ನೊಂದು ಟ್ವೀಟ್ ನಲ್ಲಿ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆಯ ವಿಡಿಯೋ ಹಾಕಿ ಪ್ರೇಮಿಗಳ ದಿನಕ್ಕೆ ಶುಭ ಕೋರಿದ್ದಾರೆ. ಪ್ರೇಮಿಗಳ ದಿನವನ್ನು ವಿರೋಧಿಸುವ ಸಂಘ ಪರಿವಾರಕ್ಕೆ ಮಾಣಿಕ್ಯ ಮಲರಾಯ ಪೂವಿ ಹಾಡು ತಕ್ಕ ಉತ್ತರ. ಹಾಗೂ ಭಾರತೀಯರು ಪ್ರೀತಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ಸುಂದರ ವಿಡಿಯೋವನ್ನು ನೋಡಿ ಆನಂದಿಸಿ ಅಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜೋಡಿಗಳಿಗೆ ಸಂಘ ಪರಿವಾರದ ಸದಸ್ಯರು ಸ್ಥಳದಲ್ಲಿಯೇ ಮದುವೆ ಮಾಡಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಿಗ್ನೇಶ್ ಮೇವಾನಿ ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದ ವೈರಲ್ ವಿಡಿಯೋ ಹಾಕಿಕೊಂಡು ಟ್ವೀಟ್ ಮಾಡುವ ಮೂಲಕ ಆರ್‍ಎಸ್‍ಎಸ್‍ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್

    ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ತಮ್ಮ ಎಕ್ಸ್ ಪ್ರೆಷನ್‍ನಿಂದಲೇ ಇಂಟರ್ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

  • ಕತ್ತು, ಹೊಟ್ಟೆಗೆ ಚಾಕುವಿನಿಂದ ಇರಿದು ಸ್ನೇಹಿತನಿಂದ್ಲೇ ಯುವಕನ ಬರ್ಬರ ಕೊಲೆ

    ಕತ್ತು, ಹೊಟ್ಟೆಗೆ ಚಾಕುವಿನಿಂದ ಇರಿದು ಸ್ನೇಹಿತನಿಂದ್ಲೇ ಯುವಕನ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ಹಳೆ ದ್ವೇಷ ಮತ್ತು ಒಂದೇ ಹುಡುಗಿಯನ್ನ ಇಬ್ಬರು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನವೇ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದ ಅಮಾನವೀಯ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಂಚಿಗನಹಾಳ ಗ್ರಾಮದಲ್ಲಿ ನಡೆದಿದೆ.

    21 ವರ್ಷದ ಹರೀಶ್ ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ ಯುವಕ. ಮಂಗಳವಾರ ತಡರಾತ್ರಿ ಹರೀಶ್ ಸ್ನೇಹಿತ ಅಂಬರೀಶ್ ಎಂಬವನ ಜೊತೆ ಗ್ರಾಮದ ರಸ್ತೆಯಲ್ಲಿ ನಡದುಕೊಂಡು ಹೊಗುತ್ತಿದ್ದ ವೇಳೆ ಎದುರಿನಿಂದ ಬಂದ ಸಂತೋಷ್, ಹರೀಶ್ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಹರೀಶ್ ಕುಸಿದು ಬಿದ್ದು ಸ್ಥಳದಲ್ಲೇ ಒದ್ದಾಡಿದ್ದಾನೆ. ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಕೂಡಲೇ ಆಸ್ಪತ್ರೆಗೆ ಒಯ್ದಿದ್ದಾರೆ. ಆದ್ರೆ ಹರೀಶ್ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

    ಚಾಕುವಿನಿಂದ ಇರಿದ ಬಳಿಕ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ಹುಬ್ಬಳ್ಳಿ: ನಮ್ಮ ದೇಶ ಹಾಗೂ ಸಂಸ್ಕೃತಿಗೆ ವಿರುದ್ಧವಾಗಿರುವ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲು ಬಿಡುವುದಿಲ್ಲ ಎಂದು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಎಚ್ವರಿಕೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪ್ರೇಮಿಗಳ ದಿನದ ನೆಪದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರೇಮಿಗಳ ದಿನಾಚರಣೆ ಭಾರತೀಯ ಸಂಸ್ಕೃತಿ ವಿರೋಧಿಯಾಗಿದೆ ಎಂದು ಹೇಳಿದರು.

    ನಮ್ಮ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಮಾರು ಹೋಗಬಾರದು ಎಂದ ಅವರು ಪ್ರೇಮಿ ದಿನಾಚರಣೆ ನೆಪದಲ್ಲಿ ಪಾರ್ಕ್, ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್ ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಂತವುಗಳು ಕಂಡು ಬಂದರೆ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನ ನೀಡಿದರು.

    ಪೊಲೀಸ್ ಇಲಾಖೆ ಇಂತಹಗಳಿಗೆ ಅವಕಾಶ ನೀಡಬಾರದು ಎಂದು ವಿಠಲ್ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಅವರ ಪೋಷಕರಿಗೆ ಮಾಹಿತಿ ನೀಡಿ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.