Tag: Valentines Day

  • ಪ್ರೇಮಿಗಳ ದಿನ ಅನ್ನೋದು ವಿಕೃತಿ, ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಪ್ರಮೋದ್ ಮುತಾಲಿಕ್

    ಪ್ರೇಮಿಗಳ ದಿನ ಅನ್ನೋದು ವಿಕೃತಿ, ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಪ್ರಮೋದ್ ಮುತಾಲಿಕ್

    ಧಾರವಾಡ: ಪ್ರೇಮಿಗಳ ದಿನ ಅನ್ನೋದು ವಿಕೃತಿಯಾಗಿದೆ. ಈ ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

     

    ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಾಗಿ ಪ್ರಮೋದ್ ಮುತಾಲಿಕ್ ವೀಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ನಮ್ಮ ದೇಶದಲ್ಲಿ ಶೇ.40 ರಷ್ಟು ಯುವಶಕ್ತಿ ಇದೆ, ಅದು ನಮ್ಮ ದೇಶದ ತಾಕತ್ತು, ಈ ಶಕ್ತಿಯನ್ನು ನಿಷ್ಕ್ರಿಯ ಮಾಡುವ ಕುತಂತ್ರ ನಡೆದಿದೆ ಎಂದು ಹೇಳಿದ್ದಾರೆ.

     

    ಪ್ರೇಮಿಗಳ ದಿನಾಚರಣೆ ಮಾಡುವ ಮೂಲಕ ದೇಶವನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಈ ಆಚರಣೆಯ ಹಿಂದೆ ವಿದೇಶಿ ಶಕ್ತಿ ಕೈವಾಡ ಇದೆ. ನಾನಾ ಡೇ ಆಚರಣೆಗಳ ಮೂಲಕ ಯುವಶಕ್ತಿ ಹಾಳು ಮಾಡುವ ಷಡ್ಯಂತ್ರ ನಡೆದಿದೆ. ಸರರ್ಕಾರ ವ್ಯಾಲೆಂಟೈನ್ಸ್ ಡೇ ನಿಬರ್ಂಧಿಸಬೇಕು. ಇದರ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾ ಇದೆ. ನಮ್ಮ ಸಂಪ್ರದಾಯವನ್ನು ಹಾಳು ಮಾಡುವ ಸಂಚು ಈ ದಿನಾಚರಣೆ ಹಿಂದಿದೆ. ಫೆಬ್ರವರಿ 14 ರಂದು ಎಲ್ಲರೂ ಮಾತಾ-ಪಿತಾ ಪೂಜೆ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.

  • ಮೆಹಂದಿ ಶಾಸ್ತ್ರಕ್ಕೂ ಮುನ್ನ ಫೋಟೋಶೂಟ್ ಮಾಡಿಸ್ಕೊಂಡ ಕ್ಯೂಟ್ ಕಪಲ್

    ಮೆಹಂದಿ ಶಾಸ್ತ್ರಕ್ಕೂ ಮುನ್ನ ಫೋಟೋಶೂಟ್ ಮಾಡಿಸ್ಕೊಂಡ ಕ್ಯೂಟ್ ಕಪಲ್

    ಬೆಂಗಳೂರು: ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿರುವ ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಸದ್ಯ ತಮ್ಮ ಮದುವೆ ಶಾಸ್ತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಶಾಸ್ತ್ರದ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ ಜೋಡಿ ಸಪ್ತಪದಿ ತುಳಿಯಲು ಇನ್ನೂ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಮದುವೆ ಶಾಸ್ತ್ರದಲ್ಲಿ ಇಬ್ಬರು ತಾರೆಯರು ಸಖತ್ ಬ್ಯೂಸಿಯಾಗಿದ್ದಾರೆ. ಅಭಿಮಾನಿಗಳಿಗಾಗಿ ಮದುವೆಯ ಕೆಲವು ಶಾಸ್ತ್ರಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಸೆಲೆಬ್ರಿಟಿ ಜೋಡಿ ಮಿಲನಾ ಹಾಗೂ ಕೃಷ್ಣ ಅವರ ಮೆಹಂದಿ ಕಾರ್ಯಕ್ರಮ ಫೆಬ್ರವರಿ 10ರಂದು ಹಾಸನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರ ಆರಂಭವಾಗುವ ಮುನ್ನ ಈ ಜೋಡಿ ಕ್ಯಾಮೆರಾಗೆ ಸಖತ್ ಕ್ಯೂಟಾಗಿ ಪೆÇೀಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮದುವೆ ಕಾರ್ಯದಲ್ಲಿ ಕಳೆದ ಕೆಲವುದಿನಗಳಿಂದ ತೊಡಗಿಕೊಂಡಿರುವ ಜೋಡಿ ಮದುವೆ ಶಾಸ್ತ್ರದ ಮೊದಲ ವೀಡಿಯೋವನ್ನು ಮಿಲನಾ ನಾಗರಾಜ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಮದುವೆ ಶಾಸ್ತ್ರಗಳು ಪ್ರಾರಂಭ ಎಂದು ಬರೆದುಕೊಂಡಿದ್ದರು. ಮಿಲನಾ ನಾಗರಾಜ್ ಮತ್ತು ಕೃಷ್ಣ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದು ಬಂದಿತ್ತು.

    ಕೃಷ್ಣ ಮತ್ತು ಮಿಲನಾ ಮದುವೆಗೆ ಸ್ಯಾಂಡಲ್‍ವುಡ್‍ನ ಗಣ್ಯರೆಲ್ಲರೂ ಭಾಗಿಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಜೋಡಿ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಇಡೀ ಚಿತ್ರರಂಗದ ಸಮಾಗಮ ಆಗಲಿದೆ.

     

    View this post on Instagram

     

    A post shared by Milana Nagaraj (@milananagaraj)

    ಕೃಷ್ಣ ಮತ್ತುಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಲವ್ ಮಾಕ್‍ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೀಗ ಈ ಜೋಡಿ ಲವ್ ಮಾಕ್‍ಟೇಲ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಲವ್ ಮಾಕ್‍ಟೇಲ್-2 ಸಿನಿಮಾದ ಹಾಡು ಕೂಡ ರಿಲೀಸ್ ಆಗುತ್ತಿದೆ.

  • ವ್ಯಾಲೆಂಟೈನ್ಸ್ ಡೇ ಹುಡಗಿಯರ ಕಾಟ, 5 ದಿನ ರಜೆ ಕೊಡಿ- ಪ್ರಿನ್ಸಿಪಾಲ್‍ಗೆ ವಿದ್ಯಾರ್ಥಿ ಪತ್ರ

    ವ್ಯಾಲೆಂಟೈನ್ಸ್ ಡೇ ಹುಡಗಿಯರ ಕಾಟ, 5 ದಿನ ರಜೆ ಕೊಡಿ- ಪ್ರಿನ್ಸಿಪಾಲ್‍ಗೆ ವಿದ್ಯಾರ್ಥಿ ಪತ್ರ

    ಚಾಮರಾಜನಗರ: ಯುವಕನಿಗೆ ವ್ಯಾಲೆಂಟೈನ್ಸ್ ಡೇ ದಿನ ಹುಡುಗಿಯರ ಕಾಟವಂತೆ. ಅವರ ಕಾಟ ತಪ್ಪಿಸಿಕೊಳ್ಳಲು ಐದು ದಿನ ರಜೆ ಕೊಡಿ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಬರೆದ ರಜೆ ಅರ್ಜಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ದ್ವಿತೀಯ ಬಿ.ಕಾಂ. ಯುವಕ ಪತ್ರ ಬರೆದಿದ್ದಾನೆ. ಹುಡುಗಿಯರ ಕಾಟ ತಾಳಲಾರದೆ ಫೆಬ್ರುವರಿ 14 ರವರೆಗೆ ಐದು ದಿನಗಳ ಕಾಲ ರಜೆ ಬೇಕೆಂದು ಈ ವಿದ್ಯಾರ್ಥಿ ಕೇಳಿರುವ ರಜಾ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದು ವಿಶೇಷ ಎಂದರೆ ಈ ರಜಾ ಅರ್ಜಿ ಮೇಲೆ ಪ್ರಾಂಶುಪಾಲರ ಸೀಲ್ ಹಾಗೂ ಸಹಿಯೂ ಇದ್ದು, ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

    ಪತ್ರದಲ್ಲಿ ಏನಿದೆ?
    ವ್ಯಾಲೆಂಟೈನ್ ಡೇ ಪ್ರಯುಕ್ತ 5 ದಿನಗಳ ಕಾಲ ರಜೆಯನ್ನು ಕೋರಿ ಎಂದು ವಿಷಯ ನಮೂದಿಸಲಾಗಿದ್ದು, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಚರಿಸುತ್ತಿರುವ ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರೆ. 5 ದಿನಗಳ ವರೆಗೆ ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳುತ್ತಿದ್ದೇನೆ ಎಂದು ಬರೆಯಲಾಗಿದೆ.

    ಈ ರಜಾ ಅರ್ಜಿಯನ್ನು ಫೆಬ್ರುವರಿ 9 ರಂದು ಬರೆಯಲಾಗಿದೆ. ಅರ್ಜಿಯ ಕೆಳಗಡೆ ಇನ್ಸಿಟ್ಯೂಟ್ ಹೆಡ್ ಸಹಿ ಎಂಬಲ್ಲಿ ಪ್ರಾಂಶುಪಾಲರ ಸೀಲ್ ಹಾಕಿ ಹಸಿರು ಶಾಯಿಯಲ್ಲಿ ಸಹಿ ಮಾಡಲಾಗಿದೆ. ಆದರೆ ಈ ಪತ್ರಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ವಿದ್ಯಾರ್ಥಿ ಸ್ಪಷ್ಟಪಡಿಸಿದ್ದಾನೆ. ಯಾರೋ ನನ್ನನ್ನ ಹೀಯಾಳಿಸಲು, ಹಾಸ್ಯ ಮಾಡಲು ಈ ರೀತಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನನಗೆ ಮಾನಸಿಕವಾಗಿ ನೋವಾಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ವಿದ್ಯಾರ್ಥಿ ಆಗ್ರಹಿಸಿದ್ದಾನೆ.

    ರಜೆ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸೀಗನಾಯಕ, ವಿದ್ಯಾರ್ಥಿ ಈ ರೀತಿ ಪತ್ರ ಬರೆದಿಲ್ಲ ಎನ್ನುತ್ತಿದ್ದಾನೆ. ಇಂದೇ ಸಭೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧ್ಯಾಪಕರ ಜೊತೆ ಚರ್ಚೆ ನಡೆಸಿ ಕಾಲೇಜು ಶಿಸ್ತು ಸಮಿತಿ ಮುಂದಿಡುತ್ತೇವೆ. ವಿದ್ಯಾರ್ಥಿಯ ಹಿತ ದೃಷ್ಟಿಯಿಂದ ಸತ್ಯಾಂಶ ತಿಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಲವ್ವರ್ಸ್ ರೊಮ್ಯಾನ್ಸ್ ಮಾಡ್ತಿರೋದು ನೋಡಿದ್ರೆ ಕಲ್ಲು ಹೊಡೀಬೇಕು ಅನ್ಸುತ್ತೆ: ರಶ್ಮಿಕಾ

    ಲವ್ವರ್ಸ್ ರೊಮ್ಯಾನ್ಸ್ ಮಾಡ್ತಿರೋದು ನೋಡಿದ್ರೆ ಕಲ್ಲು ಹೊಡೀಬೇಕು ಅನ್ಸುತ್ತೆ: ರಶ್ಮಿಕಾ

    ಬೆಂಗಳೂರು: ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರೋದು ನೋಡಿದರೆ ನನಗೆ ಕಲ್ಲು ಹೊಡೆಯಬೇಕು ಅನ್ನಿಸುತ್ತದೆ ಎಂದು ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ – ಸೀಕ್ರೆಟ್ ಬಿಚ್ಚಿಟ್ಟ ನಿತಿನ್

    ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ನಿತಿನ್ ಅಭಿನಯದ ‘ಭೀಷ್ಮ’ ಸಿನಿಮಾ ಫೆಬ್ರವರಿ 21ರಂದು ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಇಬ್ಬರು ಸಿನಿಮಾ ಪ್ರಚಾರದ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮತ್ತು ನಿತಿನ್ ಮಾಧ್ಯಮಕ್ಕೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ರಶ್ಮಿಕಾ ಲವ್, ಮದುವೆ, ಕ್ರಶ್ ಬಗ್ಗೆ ಮಾತನಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮೊದಲಿಗೆ ನಿರೂಪಕಿ ರಶ್ಮಿಕಾ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗುತ್ತೇನೆ. ಆದರೆ ಎಂಟು ವರ್ಷ ನಾನು ಮದುವೆಯಾಗೋದಿಲ್ಲ. ಇದೇ ಗುಣ ಆಗಬೇಕು ಎಂಬ ಡಿಮ್ಯಾಂಡ್ ಇಲ್ಲ. ಆದರೆ ಒಳ್ಳೆಯ ಹುಡುಗ ಸಿಕ್ಕಿದರೆ ಮದುವೆಯಾಗುತ್ತೇನೆ ಎಂದಿದ್ದಾರೆ.

    ಹೀರೋಯಿನ್ ಆಗುವ ಮೊದಲು ಮತ್ತು ನಂತರ ನಿಮಗೆ ಪ್ರೇಮಿಗಳ ದಿನ ಹೇಗೆ ಅನ್ನಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನನಗೆ ವ್ಯಾಲೆಂಟೈನ್ಸ್ ಡೇ ಅಂದರೆ ಇಷ್ಟ ಇಲ್ಲ. ಪ್ರೇಮಿಗಳು ಕೈ ಕೈ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ಕೋಪ ಬರುತ್ತೆ. ಅದರಲ್ಲೂ ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ನೋಡಿದರೆ ಕಲ್ಲಲ್ಲಿ ಹೊಡಿಯಬೇಕು ಎನ್ನಿಸುತ್ತದೆ. ಯಾಕೆ ಅಂತ ಗೊತ್ತಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.

    ನಾನು ಪ್ರೇಮಿಗಳ ದಿನಾಚರಣೆ ಸೆಲೆಬ್ರೆಷನ್ ಮಾಡಿಲ್ಲ. ನನಗೆ ಯಾರೂ ಪ್ರಪೋಸ್ ಮಾಡಿಲ್ಲ ಎಂದರು. ಇನ್ನೂ ಯಾರ ಮೇಲೆ ಕ್ರಶ್ ಆಗಿದೆ ಎಂಬುದರ ಬಗ್ಗೆ ಕೇಳಿದಾಗ, ನನಗೆ ಚಿಕ್ಕ ವಯಸ್ಸಿನಲ್ಲಿದ್ದಾಗ ದಳಪತಿ ವಿಜಯ್ ಮೇಲೆ ಕ್ರಶ್ ಆಗಿತ್ತು ಎಂದರು.

  • ಅಪ್ಪನಾದ ‘ಅಗ್ನಿಸಾಕ್ಷಿ’ಯ ಸಿದ್ಧಾರ್ಥ್- ಮಗನ ವಿಡಿಯೋ ಹಂಚಿಕೊಂಡ ವಿಜಯ್

    ಅಪ್ಪನಾದ ‘ಅಗ್ನಿಸಾಕ್ಷಿ’ಯ ಸಿದ್ಧಾರ್ಥ್- ಮಗನ ವಿಡಿಯೋ ಹಂಚಿಕೊಂಡ ವಿಜಯ್

    ಬೆಂಗಳೂರು: ಕಿರುತೆರೆ ಖ್ಯಾತ ನಟ ವಿಜಯ್ ಸೂರ್ಯ ಗಂಡು ಮಗುವಿಗೆ ತಂದೆ ಆಗಿದ್ದಾರೆ. ಅಲ್ಲದೆ ಪತ್ನಿ ಹಾಗೂ ಮಗನ ಜೊತೆಗಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ವಿಜಯ್ ತಮಗೆ ಗಂಡು ಮಗುವಾಗಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿ 14ರಂದು ನಟ ವಿಜಯ್ ಸೂರ್ಯ ಅವರು ಚೈತ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚೈತ್ರಾ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ವಿಜಯ್ ಅವರ ದೂರದ ಸಂಬಂಧಿಯಾಗಿದ್ದರು.

    ಇನ್‍ಸ್ಟಾದಲ್ಲಿ ವಿಡಿಯೋ ಹಾಕಿದ ವಿಜಯ್ ಅದಕ್ಕೆ, ಶುಭಾಶಯ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಗಂಡು ಮಗುವಿಗೆ ತಂದೆ ಆಗಿದ್ದೇನೆ ಎಂದು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಜನವರಿ 1ರಂದು ನನ್ನ ಮಗ ಜನಿಸಿದ್ದಾನೆ. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಅಮ್ಮ ಹುಡುಕಿದ ಹುಡುಗಿಯನ್ನೇ ವಿಜಯ್ ಮದುವೆಯಾಗಿದ್ದರು. ವಿಜಯ್ ‘ಅಗ್ನಿಸಾಕ್ಷಿ’ ನಂತರ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಮಾತನಾಡಲಿದ್ದಾರೆ.

  • ತಾಯಂದಿರ ಪಾದ ಪೂಜೆ ಮಾಡಿ ಪ್ರೇಮಿಗಳ ದಿನ ಆಚರಣೆ

    ತಾಯಂದಿರ ಪಾದ ಪೂಜೆ ಮಾಡಿ ಪ್ರೇಮಿಗಳ ದಿನ ಆಚರಣೆ

    ಚಿಕ್ಕೋಡಿ(ಬೆಳಗಾವಿ): ತಾಯಂದಿರ ಪಾದ ಪೂಜೆ ಮಾಡಿ ಪ್ರೇಮಿಗಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗಿದೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ತಾಯಂದಿಯರಿಗೆ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳುವ ಮೂಲಕ ಯುವಕ ಹಾಗೂ ಯುವತಿಯರು ಪ್ರೇಮಿಗಳ ದಿನವನ್ನು ಆಚರಣೆ ಮಾಡಿದ್ದಾರೆ.

    ಈಗಿನ ಜನತೆ ಪ್ರೀತಿ ಪ್ರೇಮ ಎಂದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಇಲ್ಲಿನ ನೂರಕ್ಕೂ ಹೆಚ್ಚು ಯುವಕ-ಯುವತಿಯರು ಕೂಡಿಕೊಂಡು ವಿಶಿಷ್ಟವಾಗಿ ತಾಯಂದಿಯರಿಗೆ ಪಾದ ಪೂಜೆ ಮಾಡಿದ್ದಾರೆ. ಈ ಮೂಲಕ ಪ್ರೀತಿ, ಪ್ರೇಮ ಎಂದು ಕಾಲ ಹರಣ ಮಾಡಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವವರಿಗೆ ತುಕ್ಕಾನಟ್ಟಿ ಯುವಕ ಮತ್ತು ಯುವತಿಯರು ಮಾದರಿಯಾಗಿದ್ದಾರೆ.

  • ಪ್ರೇಮಿಗಳನ್ನು ಅಟ್ಟಾಡಿಸಿದ ಭಜರಂಗದಳದ ಕಾರ್ಯಕರ್ತರು: ವಿಡಿಯೋ

    ಪ್ರೇಮಿಗಳನ್ನು ಅಟ್ಟಾಡಿಸಿದ ಭಜರಂಗದಳದ ಕಾರ್ಯಕರ್ತರು: ವಿಡಿಯೋ

    – ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಬೀರಲು ಬಿಡಲ್ಲ

    ಅಹಮದಾಬಾದ್: ಪ್ರೇಮಿಗಳ ದಿನದೊಂದು ಶಾಲಾ ಕಾಲೇಜುಗಳಿಗೆ ಹೋಗದೆ ಪಾರ್ಕ್ ಹಾಗೂ ರೋಡಿನಲ್ಲಿ ತಿರುಗುತ್ತಿದ್ದ ಯುವತಿ ಮತ್ತು ಯುವಕರನ್ನು ಭಜರಂಗದಳದ ಕಾರ್ಯಕರ್ತರು ಓಡಿಸಿಕೊಂಡು ಹೋಗಿರುವ ಘಟನೆ ಗುಜುರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಅಹಮದಾಬಾದ್ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಯುವಕ-ಯುವತಿಯರನ್ನು ಭಜರಂಗದಳದ ಕಾರ್ಯಕರ್ತರು ಹೆದರಿಸಿ ಓಡಿಸಿದ್ದಾರೆ. ಮೂರು ಗುಂಪುಗಳಾಗಿ ಕೇಸರಿ ಶಾಲು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬೈಕಿನಲ್ಲಿ ಬಂದ ಕಾರ್ಯಕರ್ತರು ವಾಡಜ್ ಮತ್ತು ಉಸ್ಮಾನ್‍ಪುರದಲ್ಲಿ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಪ್ರೇಮಿಗಳನ್ನು ಓಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಭಜರಂಗದಳದ ಉಪಾಧ್ಯಕ್ಷ ನಿಕುಂಜ್ ಪರೇಖ್, ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಬೀರಲು ನಾವು ಬಿಡುವುದಿಲ್ಲ. ಈ ಪ್ರೇಮಿಗಳ ದಿನಾಚರಣೆ ಎಂಬುದು ಪಾಶ್ಚಿಮಾತ್ಯ ಸಂಸ್ಕøತಿಯಾಗಿದೆ. ಅದೂ ಅಲ್ಲದೇ ಇದು ಲವ್ ಜಿಹಾದ್ ಜಾಸ್ತಿ ಆಗಲು ಕಾರಣವಾಗಿದೆ. ಈ ಕಾರಣಕ್ಕೆ ನಾವು ಇದನ್ನು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ರೇಮಿಗಳ ದಿನಾಚರಣೆಯ ನಂತರ ಹಿಂದೂ ಹುಡುಗಿಯರು ಬೇರೆ ಧರ್ಮದ ಹುಡುಗರ ಜೊತೆ ಓಡಿಹೋಗಿ ಮದುವೆಯಾಗುವ ಪ್ರಕರಣಗಳು ಜಾಸ್ತಿಯಾಗಿವೆ. ಈ ಕಾರಣದಿಂದಲೇ ಭಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧ ಮಾಡುತ್ತಿದೆ ಎಂದು ನಿಕುಂಜ್ ಪರೇಖ್ ತಿಳಿಸಿದ್ದಾರೆ.

    ಭಜರಂಗದಳದ ಈ ಕೆಲಸದ ವಿರುದ್ಧ ಯುವಕರು ಆಕ್ರೋಶ ವ್ತಕ್ತಪಡಿಸಿದ್ದು, ಎಲ್ಲರಿಗೂ ಅವರ ವೈಯಕ್ತಿಕ ಜೀವನದಲ್ಲಿ ಅವರಿಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ ಸಂಸ್ಕೃತಿ ಎಂಬ ಹೆಸರಿನಲ್ಲಿ ಇವರು ಈ ರೀತಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಕೆಲ ಯುವಕರ ಕಿಡಿಕಾರಿದ್ದಾರೆ.

  • ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಬೆಂಗಳೂರು: ಚಂದನವನದ ಪ್ರೇಮಲೋಕದ ಕನಸುಗಾರ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ತಮ್ಮ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ.

    ರವಿಚಂದ್ರನ್ ಅವರ ವಿವಾಹ ವಾರ್ಷಿಕೋತ್ಸವದ ಇನ್ನೊಂದು ವಿಶೇಷವೆನೆಂದರೆ, ಪ್ರೀತಿ ಪ್ರೇಮ ಎಂಬ ಪದಕ್ಕೆ ಸಮಾನದ ಅವರ ಮದುವೆ ಪ್ರೇಮಿಗಳ ದಿನದೊಂದು ನೇರವೇರಿದೆ. ಹೌದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಮದುವೆಯಾಗಿದ್ದಾರೆ.

    ನಿರ್ದೇಶಕ ಎನ್ ವೀರಸ್ವಾಮಿ ಪುತ್ರನಾಗಿ 1961 ಮೇ 30ರಂದು ಜನಿಸಿದ ವೀರಸ್ವಾಮಿ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಆರ್ ಸುಮತಿ ಅವರನ್ನು ವಿವಾಹವಾದರು. ಈ ದಂಪತಿ ವಿವಾಹವಾಗಿ ಇಂದಿಗೆ 33 ವರ್ಷಗಳಾಗಿವೆ. ನಟ, ನಿರ್ದೇಶಕ ನಿರ್ಮಾಪಕನಾಗಿ ಮಿಂಚಿದ್ದ ರವಿಚಂದ್ರನ್ ಅವರು ಒಳ್ಳೆಯ ಪತಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಈ ದಂಪತಿಗೆ ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

    ರವಿಚಂದ್ರನ್ ಅವರ ಗಂಡು ಮಕ್ಕಳಿಬ್ಬರು ಅಪ್ಪನ ಹಾಗೇ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಕಳೆದ ವರ್ಷವಷ್ಟೇ ಮಗಳು ಗೀತಾಂಜಲಿಯನ್ನು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳ 29 ರಂದು ಮಗಳು ಗೀತಾಂಜಲಿಯನ್ನು ಉದ್ಯಮಿ ಅಜಯ್ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಂತೆ ಮಗಳು ಮದುವೆಯನ್ನು ಸಖತ್ ಅದ್ಧೂರಿಯಾಗಿ ಮತ್ತು ವಿಶಿಷ್ಟವಾಗಿ ಮಾಡಿದ್ದರು.

    ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಕೋರಿರುವ ಮಗ ಮನೋರಂಜನ್, ನಮ್ಮ ಜೀವನದ ಏಳು ಬೀಳಿನಲ್ಲಿ ನೀವು ಜೊತೆಗೆ ಇದ್ದೀರಿ. ನೀವು ನಮಗೆ ಪ್ರೀತಿ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದೀರಾ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ರವಿಂಚದ್ರನ್ ಅವರು, ರವಿ ಬೋಪಣ್ಣ, ರವಿಚಂದ್ರ, ರಾಜೇಂದ್ರ ಪೊನ್ನಪ್ಪ ಎಂಬ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ವಿಶೇಷವೆನೆಂದರೆ ರವಿ ಬೋಪಣ್ಣ ಹಾಗೂ ರಾಜೇಂದ್ರ ಪೊನ್ನಪ್ಪ ಈ ಎರಡು ಸಿನಿಮಾಗಳನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    https://www.instagram.com/p/B8iE7FOgBDT/

  • ಪ್ರೇಮಿಗಳಿಗೋಸ್ಕರ ಪೊಲೀಸರ ವಿಶೇಷ ತಂಡ ರಚನೆ

    ಪ್ರೇಮಿಗಳಿಗೋಸ್ಕರ ಪೊಲೀಸರ ವಿಶೇಷ ತಂಡ ರಚನೆ

    ಬೆಂಗಳೂರು: ಪ್ರೇಮಿಗಳ ದಿನವಿರುವ ಹಿನ್ನೆಲೆಯಲ್ಲಿ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರೇಮಿಗಳಿಗೋಸ್ಕರ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

    ಬೆಳ್ಳಂಬೆಳಗ್ಗೆ ಮಫ್ತಿಯಲ್ಲಿ ಫೀಲ್ಡ್ ಗೆ ಇಳಿದಿರುವ ಈ ತಂಡದಲ್ಲಿ ಮಹಿಳೆಯರು, ಕ್ರೈಂ ಪೊಲೀಸರು ಸೇರಿದಂತೆ ವಿವಿಧ ತಂಡಗಳು ಕಾರ್ಯ ನಿರ್ವಹಿಸಲಿವೆ. ನಗರದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ವಿವಿಧ ಪಾರ್ಕ್, ಮಾಲ್‍ಗಳು, ಸೇರಿದಂತೆ ಪ್ರೇಮಿಗಳು ಓಡಾಡುವ ಜಾಗಗಳಲ್ಲಿ ಈ ತಂಡ ಕಣ್ಣಿಟ್ಟಿದೆ.

    ಈಗಾಗಲೇ ಕೆಲ ಸಂಘಟನೆಗಳು ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಪ್ರೇಮಿಗಳಿಗೆ ರಕ್ಷಣೆ ಕೊಡುವುದರ ಜೊತೆಗೆ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿದೆ. ಇದರ ಜೊತೆಗೆ ಮಫ್ತಿಯಲ್ಲಿ ಇರುವ ಪೊಲೀಸರು ಪ್ರೇಮಿಗಳ ಮೇಲೂ ಕಣ್ಣಿಟ್ಟಿದ್ದಾರೆ.

    ಪ್ರೇಮಿಗಳ ದಿನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವವರ ಮೇಲೆ ನಿಗಾ ವಹಿಸಿದ್ದು, ಅಸಭ್ಯ ವರ್ತನೆ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಇನ್ನೂ ಸ್ಥಳೀಯ ಪೊಲೀಸರು, ಪಿಂಕ್ ವಾಹನಗಳು ಹೆಚ್ಚಿನ ನಿಗಾ ಇಟ್ಟಿದೆ.

    ವ್ಯಾಲೆಂಟೈನ್ ಡೇ ಪ್ರಯುಕ್ತ ಪೊಲೀಸರು ವಿಶೇಷ ತಂಡ ಫೀಲ್ಡ್ ಗೆ ಇಳಿದಿದ್ದು, ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • 10 ವರ್ಷದ ಪ್ರೀತಿಯನ್ನು ವಿವರಿಸಿದ ರಾಧಿಕಾ

    10 ವರ್ಷದ ಪ್ರೀತಿಯನ್ನು ವಿವರಿಸಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಪ್ರೇಮಿಗಳ ಹಬ್ಬದ ದಿನದಂದು ತಮ್ಮ 10 ವರ್ಷದ ಪ್ರೀತಿಯನ್ನು ವಿವರಿಸಿದ್ದಾರೆ.

    ರಾಧಿಕಾ ಅವರು ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿರುವ 8 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಎಂಟು ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ತಮ್ಮ ಮಗಳು ಐರಾಳ ಕೈಯನ್ನು ಹಿಡಿದುಕೊಂಡಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

    ಈ ಫೋಟೋಗಳನ್ನು ಪೋಸ್ಟ್ ಮಾಡಿದ ರಾಧಿಕಾ ಅದಕ್ಕೆ, “ಇಂದು ನಮ್ಮ 10ನೇ ವರ್ಷದ ಪ್ರೇಮಿಗಳ ದಿನ. 8 ವರ್ಷದ ಫೋಟೋಗಳು ಇದಾಗಿದ್ದು, ಮೊದಲ ಹಾಗೂ ಎರಡನೇ ವರ್ಷದ ಫೋಟೋ ಪೋಸ್ಟ್ ಮಾಡಲು ಆಗಲಿಲ್ಲ. ಆದರೆ ಇದರಲ್ಲಿ ನನ್ನ ಫೇವರೇಟ್ ಫೋಟೋ ಯಾವುದು ಎಂದು ಹೇಳುವುದು ಕಷ್ಟವಾಗುವುದಿಲ್ಲ. ಐರಾಳ ಕೈ ಹಿಡಿದುಕೊಂಡು ನಿಂತಿರುವ ಫೋಟೋ ನನ್ನ ಫೇವರೇಟ್. ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.

    ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು.