Tag: Valentines Day

  • ಗೆಳತಿ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದ ಸಿಧು ಕೊನೆಯ ಫೋಟೋ ವೈರಲ್

    ಗೆಳತಿ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದ ಸಿಧು ಕೊನೆಯ ಫೋಟೋ ವೈರಲ್

    ನವದೆಹಲಿ: ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟ ಪಂಜಾಬ್ ನಟ ದೀಪ್ ಸಿಧು, ಗೆಳತಿ ರೀನಾ ರೈ ಜೊತೆಗೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಕೃಷಿ ಹೋರಾಟದಲ್ಲಿ ಕೆಂಪುಕೋಟೆ ಮೇಲೆ ಸೀಖ್ ಭಾವುಟ ಹಾರಿಸಿದ್ದ ದೀಪ್ ಸಿಧು ಫೆಬ್ರವರಿ 15 ರಂದು ನಿಧನರಾದರು. ದೆಹಲಿ ಬಳಿ ನಡೆದ ರಸ್ತೆ ಅಪಘಾತವೇ ಸಾವನ್ನಪ್ಪಿದ್ದು, ಆತನೊಂದಿಗೆ ಕಾರಿನಲ್ಲಿದ್ದ ಗೆಳತಿ ರೀನಾ ರೈ ಏರ್‌ಬ್ಯಾಗ್‌ನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ, ಫೆಬ್ರವರಿ 14 ರಂದು ರೀನಾ ಹಂಚಿಕೊಂಡ ಅವರ ಪ್ರೇಮಿಗಳ ದಿನದ ಸೆಲೆಬ್ರೆಷನ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

     

    View this post on Instagram

     

    A post shared by Deep Sidhu (@deepsidhu.official)

    ಇಡೀ ಜಗತ್ತು ವಿರುದ್ಧವಾಗಿದ್ದಾಗ ನೀವು ನಿಂತಿದ್ದೀರಿ, ನನ್ನನ್ನು ರಕ್ಷಿಸಿದ್ದೀರಿ, ನನ್ನ ಗೌರವವನ್ನು ಹಿಡಿದಿದ್ದೀರಿ, ನನಗೆ ಶಕ್ತಿಯನ್ನು ನೀಡಿದ್ದೀರಿ, ನನ್ನ ಕಾರಣ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ್ದೀರಿ ಆದರೆ ಅದು ನಿಜವಾಗಿಯೂ ನನ್ನ ಹೃದಯ ಮತ್ತು ಆತ್ಮವನ್ನು ಮುಟ್ಟಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲವು ಯಾವುದೇ ವಿವರಣೆಯನ್ನು ಮೀರಿದೆ. ನಾನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  • ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ- ಶಿವಶೇನೆ

    ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ- ಶಿವಶೇನೆ

    ಭೋಪಾಲ್: ಪ್ರೇಮಿಗಳ ದಿನದಂದು ಭೋಪಾಲ್‍ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಲಾಠಿಗಳಿಗೆ ಪೂಜೆ ಮಾಡಲಾಗಿದೆ. ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡುತ್ತೇವೆ ಎಂದು ಶೀವಸೆನೆ ಕಾರ್ಯಕರ್ತರು ಹೇಳಿದ್ದಾರೆ.

    ಯಾರಾದರೂ ಪ್ರೇಮಿಗಳು ಪಾರ್ಕ್‍ನಲ್ಲಿ ಕಂಡುಬಂದರೆ, ಲಾಠಿಯಿಂದ ಅವರನ್ನು ದಂಡಿಸುತ್ತೇವೆ. ಪ್ರೀತಿಯ ಜೋಡಿಗಳಿಗೆ ಪಾಠ ಕಲಿಸಲು ಶಿವಸೇನೆ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಯುವಕರಿಗೆ ಎಚ್ಚರಿಕೆ ನೀಡಿದರು. ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕ ಎಂದು ಕರೆದಿರುವ ಶಿವಸೇನೆ ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಾಗಿ ಶಿವಸೇನ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಭೋಪಾಲ್‍ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ಶಿವಸೇನೆ, ಭಜರಂಗದಳ ಸೇರಿದಂತೆ ಹಲವು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಿಸುವುದನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.

    ಪ್ರೇಮಿಗಳ ದಿನವನ್ನು ವಿರೋಧಿಸಿದ ಶಿವಸೇನೆ ಕಾರ್ಯಕರ್ತರು, ನಾಳೆ ಲಾಠಿಗಳೊಂದಿಗೆ ನಗರದ ವಿವಿಧ ಭಾಗಗಲ್ಲಿ ಸುತ್ತಲಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದು ಕಂಡು ಬಂದರೆ ಯುವಕ, ಯುವತಿಯರಿಗೆ ಸ್ಥಳದಲ್ಲೇ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

  • ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ವ್ಯಾಲೆಂಟೈನ್ಸ್ ಡೇ ಗೆ ಹೆಚ್ಚು ದಿನ ಉಳಿದಿಲ್ಲ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಯೋಚನೆ ನೀವು ಮಾಡಿಯೇ ಇರುತ್ತೀರಿ. ಆದರೆ ಏನು ನೀಡುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಇರುವ ಒಂದು ಬೆಸ್ಟ್ ಆಪ್ಶನ್ ಕಪಲ್ ರಿಂಗ್ಸ್.

    ಕೇವಲ ಯಾವುದೋ ಒಂದು ಸಾಮಾನ್ಯ ಉಂಗುರ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀಡಿದರೆ ಚೆನ್ನಾಗಿರುತ್ತಾ? ಸ್ವಲ್ಪ ಯೋಚಿಸಿ. ನೀವು ನೀಡುವ ಉಡುಗೊರೆ ವಿಶೇಷವಾಗಿದ್ದರೆ ಮಾತ್ರವೇ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಬಹುದು ಅಲ್ಲವೇ?

    ಇತ್ತೀಚೆಗೆ ಕೆಲವು ಟ್ರೆಂಡ್‌ನಲ್ಲಿರುವ ಕಪಲ್ ರಿಂಗ್‌ಗಳ ಡಿಸೈನ್ ಹೀಗಿವೆ. ಇವುಗಳಲ್ಲಿ ನಿಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಆಯ್ಕೆ ಮಾಡಿ ಅಂತಹುದನ್ನೇ ಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಅವರನ್ನು ಖುಷಿಪಡಿಸಬಹುದು. ಈಗಿನ ಟ್ರೆಂಡ್‌ನಲ್ಲಿರುವ ವಿವಿಧ ಡಿಸೈನ್‌ನ ಕಪಲ್ ರಿಂಗ್ಸ್ ಹೀಗಿವೆ:

    ಕಿಂಗ್ ಆಂಡ್ ಕ್ವೀನ್ ಕಪಲ್ ರಿಂಗ್ಸ್:
    ರಾಜ ಹಾಗೂ ರಾಣಿಯರ ಕಿರೀಟದ ವಿನ್ಯಾಸವಿರುವ ಉಂಗುರಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಪ್ರೇಮಿಗಳ ದಿನದಂದು ಇದನ್ನು ನಿಮ್ಮನ್ನು ಇಷ್ಟ ಪಡುವವರಿಗೆ ನೀಡಿದರೆ ಅವರು ಖಂಡಿತವಾಗಿಯೂ ವಿಶೇಷ ಅನುಭವ ಪಡೆಯುತ್ತಾರೆ. ನಿಜ ಜೀವನದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ರಾಜ ಅಥವಾ ರಾಣಿಯಂತೆ ನೋಡುತ್ತೀರಿ ಎಂಬ ಅರ್ಥವನ್ನೂ ಇದು ನೀಡುತ್ತದೆ.

    ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್:
    ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ ಉಂಗುರಗಳೆಂದರೆ ಅದು ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್. ಎರಡು ಉಂಗುರಗಳನ್ನು ಒಟ್ಟಿಗೆ ತಂದಾಗ ಅಯಸ್ಕಾಂತದ ಸಣ್ಣ ತುಂಣುಕಿನಿಂದಾಗಿ ಉಂಗುರಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಅದೊಂದು ಸಂಪೂರ್ಣ ಹೃದಯದ ಆಕಾರ ಪಡೆಯುತ್ತದೆ. ಉಂಗುರಗಳನ್ನು ಬಿಡಿಸಿದಾಗ ಸಂಪೂರ್ಣ ಹೃದಯವೂ ಬಿಡಿಸಿಕೊಳ್ಳುತ್ತದೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ಪ್ರೀತಿಸುವವರು ಒಟ್ಟಾಗಿದ್ದಾಗ ಮಾತ್ರವೇ ಸಂಪೂರ್ಣವಾಗಲು ಸಾಧ್ಯ ಎಂಬ ವಿಶೇಷ ಸಂದೇಶ ಈ ಉಂಗುರಗಳು ನೀಡುತ್ತವೆ. ವಿಶೇಷ ಸಂದೇಶ ಸಾರುವ ಜೋಡಿ ಉಂಗುರಗಳನ್ನು ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆ ನೀಡುವುದರಿಂದ ಅವರೂ ಸಂತೋಷ ಪಡುತ್ತಾರೆ.

    ಹೆಸರು ಬರೆದ ಜೋಡಿ ಉಂಗುರಗಳು:
    ಉಂಗುರಗಳಲ್ಲಿ ಅಂದದ ಫಾಂಟ್‌ನಲ್ಲಿ ವೈಯಕ್ತಿಕ ಹೆಸರನ್ನು ಕೆತ್ತಿಸಿ, ಅದನ್ನು ಉಡುಗೊರೆ ನೀಡಿದರೆ ಸಂತೋಷ ಯಾರಿಗೆ ತಾನೇ ಆಗಲ್ಲ? ಉಡುಗೊರೆ ಪಡೆದುಕೊಂಡವರು ನೀಡಿದವರ ಹೃದಯದಲ್ಲಿ ಎಷ್ಟು ಮುಖ್ಯವಾದ ಸ್ಥಾನ ಕೊಟ್ಟಿದ್ದಾರೆ ಎಂಬುದು ಮನದಟ್ಟಾಗುವುದು ಖಂಡಿತಾ. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ದೂರದ ಜೋಡಿಗಳ ಉಂಗುರ:
    ನಿಮ್ಮ ಪ್ರೀತಿ ಲಾಂಗ್ ಡಿಸ್ಟೆನ್ಸ್‌ನದ್ದಾ? ಹಾಗಿದ್ದರೆ ಈ ಉಂಗುರಗಳು ನಿಮಗಾಗಿಯೇ ಹೇಳಿ ಮಾಡಿಸಿರುವಂತಹವುಗಳು. ಜೋಡಿಗಳು ದೂರವಿದ್ದರೂ ಹೃದಯದಲ್ಲಿ ವಿಶೇಷ ಸ್ಥಾನ ನೀಡುವುದು ಸಾಮಾನ್ಯದ ಮಾತಲ್ಲ. ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟಕರ. ಹೀಗಿರುವಾಗ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭೂಮಿಯ ನಕ್ಷೆಯ ಚಿತ್ರವಿರುವ ಉಂಗುರವನ್ನೇ ಉಡುಗೊರೆ ಕೊಡಿ. ಅದನ್ನು ತೊಟ್ಟುಕೊಂಡವರು ಪ್ರತಿಬಾರಿ ಉಂಗುರವನ್ನು ಗಮನಿಸಿದಾಗ ನಿಮ್ಮನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ.

    ಜೋಡಿಗಳಿಗೆ ಲವ್ ಬರ್ಡ್ಸ್ ಉಂಗುರಗಳು:
    ನೀವು ಪರಿಸರ ಪ್ರೇಮಿಯೇ? ಪ್ರಾಣಿ-ಪಕ್ಷಿಗಳೆಂದರೆ ನಿಮಗೆ ಹಾಗೂ ನಿಮ್ಮ ಪ್ರೇಮಿಗೆ ಇಷ್ಟವೇ? ಹಾಗಿದ್ದರೆ ಲವ್ ಬರ್ಡ್ಸ್ ಚಿತ್ರವಿರುವ ಉಂಗುರಗಳನ್ನು ನೀಡಿ. ನಿಮ್ಮ ಪ್ರೀತಿ ಪಾತ್ರರು ಇದನ್ನು ಜೀವನದ ಅಮೂಲ್ಯ ಆಭರಣವೆಂದುಪರಿಗಣಿಸುತ್ತಾರೆ.

    ಹೆಸರಿನ ಮೊದಲ ಅಕ್ಷರದ ಕಪಲ್ ರಿಂಗ್‌ಗಳು:
    ಹೆಸರಿನ ಮೊದಲ ಅಕ್ಷರ ಹೊಂದಿರುವ ಕಪಲ್ ರಿಂಗ್ಸ್ ಹಿಂದಿನಿಂದಲೂ ಟ್ರೆಂಡ್ ಹುಟ್ಟಿಸಿರುವ ಉಂಗುರಗಳೇ ಆಗಿವೆ. ಆದರೆ ಅವುಗಳ ವಿನ್ಯಾಸಗಳಲ್ಲಿ ಬದಲಾವಣೆಗಳು ಬಂದಿವೆ. ಹೆಸರಿನ ಮೊದಲ ಅಕ್ಷರದ ಉಂಗುರಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಫ್ಯಾಶನ್‌ಪ್ರೇಮಿಗಳು ಈ ವಿನ್ಯಾಸದ ಉಂಗುರಗಳ ಉಡುಗೊರೆ ನೀಡುವುದು ಬೆಸ್ಟ್ ಚಾಯ್ಸ್. ಇದನ್ನೂ ಓದಿ: ಮದುವೆ ಸಮಯದಲ್ಲಿ ವಧುವಿನಂತೆ ಕಂಗೊಳಿಸಲು ಧರಿಸಬೇಕಾದ ಮುಖ್ಯ ಆಭರಣಗಳು

    ಮ್ಯೂಜಿಕಲ್ ನೋಟ್‌ನ ಜೋಡಿ ಉಂಗುರಗಳು:
    ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ? ಇಷ್ಟ ಇಲ್ಲ ಎನ್ನುವವರನ್ನು ಹುಡುಕುವುದೂ ಕಷ್ಟ. ಸಂಗೀತವನ್ನು ಇಷ್ಟ ಪಡುವ ಜೋಡಿಗಳು ತಮ್ಮ ಪ್ರೇಮಿಗಳಿಗೆ ಸಂಗೀತದ ಟಿಪ್ಪಣಿಗಳನ್ನು ನಮೂದಿಸಿರುವ ವಿನ್ಯಾಸದ ಉಂಗುರ ನೀಡಿದರೆ ಚೆನ್ನಾಗಿರುತ್ತದೆ.

    ನಿಮಗೂ ನಿಮ್ಮ ಪ್ರೇಮಿಗೂ ಈ ರೀತಿಯಾಗಿ ತಮ್ಮ ತಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಉಡುಗೊರೆ ನೀಡಿ, ಈ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿಕೊಳ್ಳಿ.

  • ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೌಂಟ್‍ಡೌನ್ ಶುರುವಾಗಿದೆ. ಸಾಮಾನ್ಯವಾಗಿ ಈ ದಿನದಂದು ಯಾವ ರೀತಿಯ ಡ್ರೆಸ್ ಧರಿಸಬೇಕೆಂದು ಪುರುಷರು ಗೊಂದಲದಲ್ಲಿರುತ್ತಾರೆ. ಈ ವಿಶೇಷ ದಿನದಂದು ನಿಮ್ಮ ಪ್ರೇಯಸಿಯ ಜೊತೆಗೆ ಡೇಟಿಂಗ್ ಹೋಗುವುದರೊಂದಿಗೆ ಅವರನ್ನು ಮತ್ತಷ್ಟು ಇಂಪ್ರೆಸ್ ಮಾಡುವುದು ಪುರುಷರು ಧರಿಸುವ ಡ್ರೆಸ್‍ಗಳಾಗಿದೆ.

    ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ನೀವೆನಾದರೂ ಪ್ಲಾನ್ಸ್ ಹೊಂದಿದ್ದರೆ, ನೀವು ಏನು ಧರಿಸಿದರೆ ಚೆನ್ನಾಗಿ ಕಾಣಿಸಬಹುದು ಎಂದು ಚಿಂತಿಸುತ್ತಿದ್ದರೆ, ನಿಮಗೆ ಒಂದಷ್ಟು ಟಿಪ್ಸ್‌ಗಳನ್ನು ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಡೆನಿಮ್
    ಪುರುಷರಿಗೆ ಡೆನಿಮ್ ಜಾಕೆಟ್ ಸುಂದರವಾಗಿ ಕಾಣಿಸುತ್ತದೆ. ಡೆನಿಮ್ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ, ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಧರಿಸಬಹುದಾಗಿದೆ. ವಿಶೇಷವೆಂದರೆ ಡೆನಿಮ್ ಜಾಕೆಟ್ ಎಲ್ಲಾ ರೀತಿಯ ಶರ್ಟ್ ಹಾಗೂ ಟಿ ಶರ್ಟ್‍ಗಳಿಗೆ ಸೂಟ್ ಆಗುತ್ತದೆ.

    ಸಿಂಪಲ್ ಶರ್ಟ್
    ನಿಮ್ಮ ಗೆಳತಿ ಸರಳತೆಯನ್ನು ಹೆಚ್ಚಾಗಿ ಇಷ್ಟಪಡುವ ವ್ಯಕ್ತಿಯಾಗಿದ್ದರೆ, ನೀವು ಅವರನ್ನು ಇಂಪ್ರೆಸ್ ಮಾಡಲು ಸಿಂಪಲ್ ಆಗಿರುವ ಶರ್ಟ್ ಧರಿಸುವುದು ಉತ್ತಮ. ಜೊತೆಗೆ ಸಿಂಪಲ್ ಆಗಿರುವ ಶರ್ಟ್ ನಿಮಗೆ ಧರಿಸಲು ಆರಾಮದಾಯಕವಾಗಿರುತ್ತದೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ವಿಂಟರ್ ಜಾಕೆಟ್
    ಫೆಬ್ರವರಿ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ಸಾಕಷ್ಟು ಚಳಿ ಇರುತ್ತದೆ. ಈ ವೇಳೆ ನಿಮಗೆ ಜಾಕೆಟ್ ಬಹಳ ಅಗತ್ಯವಾಗಿರುತ್ತದೆ. ನಿಮ್ಮನ್ನು ಚಳಿಯಿಂದ ಜಾಕೆಟ್ ರಕ್ಷಿಸುವುದರ ಜೊತೆಗೆ ಬೆಚ್ಚಗಿರಿಸುತ್ತದೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

    ಬ್ಲೇಜರ್
    ಕೆಲವು ಹುಡುಗಿಯರು ಕ್ಯಾಶುಯಲ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಪುರುಷರನ್ನು ಬಹಳ ಇಷ್ಟಪಡುತ್ತಾರೆ. ನಿಮ್ಮ ಗೆಳತಿ ಕೂಡ ಕ್ಯಾಶುಯಲ್ ಲುಕ್‍ನಲ್ಲಿ ನೋಡಲು ನಿಮ್ಮನ್ನು ಇಷ್ಟಪಟ್ಟರೆ, ನೀವು ಕ್ಲಾಸಿ ಬ್ಲೇಜರ್ ಧರಿಸಲು ಟ್ರೈ ಮಾಡಿ. ಜೊತೆಗೆ ಪಫ್ಯೂಮ್ ಹಾಕಿಕೊಳ್ಳುವುದನ್ನು ಮರೆಯಬೇಡಿ.

    Blazer

  • ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆಗೆ ನಾಚಿ ತಲೆ ತಗ್ಗಿಸಿದ ಪತಿ

    – ಪತಿಯ ಉತ್ತರಕ್ಕಾಗಿ ಕಾಯ್ತಿರೋ ನೆಟ್ಟಿಗರು

    ವಾಷಿಂಗ್ಟನ್: ಪ್ರೇಮಿಗಳ ದಿನಕ್ಕೆ ಪತ್ನಿ ನೀಡಿದ ಕಾಣಿಕೆ ನೋಡಿದ ಪತಿ ಶಾಕ್ ಆಗಿ ತಲೆ ತಗ್ಗಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ. ಪತಿಗೆ ನೀಡಿದ ಉಡುಗೊರೆಯ ಫೋಟೋಗಳನ್ನ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯರು ಮೆಚ್ಚುಗೆ ಸೂಚಿಸಿದ್ರೆ, ಪುರುಷರು ಈ ರೀತಿ ಸಿಕ್ಕಿಕೊಳ್ಳೋದಾ ಅಂತ ಕಮೆಂಟ್ ಮಾಡುತ್ತಿದ್ದಾರೆ.

    ಗ್ಲೆರಿಯಾ ಅಮೆರಿಕಾದ ಪರಿಚಿತ ಟಿಕ್‍ಟಾಕ್ ಸ್ಟಾರ್ ಗಳಲ್ಲಿ ಒಬ್ಬರು. ಇನ್‍ಸ್ಟಾಗ್ರಾಂನಲ್ಲಿ ಪತಿ ಲೈಕ್ ಮಾಡಿರೋ ಸುಂದರ ಮಾದಕ ಚೆಲುವೆಯರ ಫೋಟೋಗಳ ಪ್ರಿಂಟ್ ತಗೆದು ಪ್ಲಕಾರ್ಡ್ ರೀತಿಯಲ್ಲಿ ಮಾಡಿಸಿದ್ದಾರೆ. ಈ ಪ್ಲಕಾರ್ಡ್ ಗಳನ್ನ ಟೇಬಲ್ ಮೇಲೆ ಅಂಟಿಸಿರೋ ಫೋಟೋವನ್ನ ಶೇರ್ ಮಾಡಿಕೊಂಡಿದ್ದು, ನಿಮ್ಮ ಪತಿ/ಗೆಳೆಯನಿಗೆ ನೀವೇನು ಗಿಫ್ಟ್ ನೀಡಿದಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬರೋಬ್ಬರಿ 38 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

    ಪತಿ ಲೈಕ್ ನೀಡಿರುವ ಮಾದಕ ಚೆಲುವೆಯರ ಫೋಟೋ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ನಂತರ ಎಲ್ಲವನ್ನ ಪ್ಲಕಾರ್ಡ್ ರೀತಿ ಮಾಡಿ ಬಾಕ್ಸ್ ನಲ್ಲಿರಿಸಿ ಪತಿಗೆ ಗಿಫ್ಟ್ ನೀಡಿದ್ದಾರೆ. ಪತಿ ಆಶ್ಚರ್ಯದಿಂದ ಗಿಫ್ಟ್ ನೋಡುತ್ತಿರುವ ಫೋಟೋ ಸಹ ವೈರಲ್ ಆಗಿದೆ. ಬಹುತೇಕ ನೆಟ್ಟಿಗರು ಗ್ಲೆರಿಯಾ ಪತಿಗೆ ಗಿಫ್ಟ್ ಕುರಿತು ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ವ್ಲಿ ಸ್ಟಾರ್ ಪ್ರೇಮ್ ಲವರ್ ಬಾಯ್ ಪಾತ್ರದಲ್ಲಿ ಅಭಿನಯಿಸಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ ಟೀಸರ್ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆಯಾಗಿದೆ. ಪ್ರೀತಿ ಮಾತು ತುಂಬಿರೋ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ‘ಪ್ರೇಮಂ ಪೂಜ್ಯಂ’ ಟೀಸರ್.

    ಲೈಫ್ ಜೊತೆ ಒನ್ ಸೆಲ್ಫಿ ಸಿನಿಮಾ ನಂತರ ನೆನಪಿರಲಿ ಪ್ರೇಮ್ ಅಭಿನಯಿಸುತ್ತಿರುವ ಚಿತ್ರ ‘ಪ್ರೇಮಂ ಪೂಜ್ಯಂ’. ಇದು ಲವ್ಲಿ ಸ್ಟಾರ್ ಸಿನಿಮಾ ಕೆರಿಯರ್ ನ ವಿಶೇಷ ಸಿನಿಮಾ ಕೂಡ ಹೌದು. ಕಾರಣ ಇದು ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ. ಪ್ರೇಮ್ ಕೂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಇನ್ನೊಂದು ಸ್ಪೆಷಾಲಿಟಿ ಲವ್ಲಿ ಸ್ಟಾರ್ ಲುಕ್. ಪ್ರತಿ ಸಿನಿಮಾದಲ್ಲೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಪ್ರೇಮ್ ಈ ಸಿನಿಮಾದಲ್ಲೂ ಹೊಸ ಲುಕ್ ನಲ್ಲಿ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಒಂಭತ್ತು ಲುಕ್ ನಲ್ಲಿ ಪ್ರೇಮ್ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ.

    ‘ಪ್ರೇಮಂ ಪೂಜ್ಯಂ’ ಸಿನಿಮಾ ಟೈಟಲ್ ಹೇಳುವಂತೆ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ಹಾಗಂತ ರೆಗ್ಯೂಲರ್ ಪ್ರೇಮಕಥೆ ಇಲ್ಲಿಲ್ಲ. ಹೊಸತನ, ಹೊಸ ಪ್ರಯತ್ನ ಎಲ್ಲವೂ ಪ್ರೇಮಂ ಪೂಜ್ಯಂ ಚಿತ್ರದಲ್ಲಿದೆ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲಿ ಸ್ಟಾರ್ ಪ್ರೇಮ್ ಬಣ್ಣ ಹಚ್ಚಿದ್ರೆ, ನಾಯಕ ನಟಿಯಾಗಿ ಬ್ರಿಂದ ಆಚಾರ್ಯ ಅಭಿನಯಿಸಿದ್ದಾರೆ. ರಾಘವೇಂದ್ರ.ಬಿ.ಎಸ್ ಸಿನಿಮಾ ನಿರ್ದೇಶಕ. ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರಿಗೆ ಸಿನಿಮಾ ಮೇಲೆ ಅಪಾರ ಒಲವು. ಆ ಒಲವಿನಿಂದಲೇ ಇಂದು `ಪ್ರೇಮಂ ಪೂಜ್ಯಂ’ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಿತರಾಗಿದ್ದಾರೆ.

    ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ ಕೃಷಿ ಕೂಡ ನಿರ್ದೇಶಕ ರಾಘವೇಂದ್ರ ಬಿ.ಎಸ್ ಅವರದ್ದೇ. ಕೆಡಂಬಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ರಕ್ಷಿತ್ ಕೆಡಂಬಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಲಿದೆ.

  • ವ್ಯಾಲೆಂಟೈನ್ಸ್ ಡೇ ಬದಲಾಗಿ ಪುಲ್ವಾಮಾ ಬಲಿದಾನ್ ದಿವಸ್ ಆಚರಣೆ

    ವ್ಯಾಲೆಂಟೈನ್ಸ್ ಡೇ ಬದಲಾಗಿ ಪುಲ್ವಾಮಾ ಬಲಿದಾನ್ ದಿವಸ್ ಆಚರಣೆ

    – ಹುತಾತ್ಮ ಯೋಧರಿಗೆ ಪುಷ್ಪ ನಮನ

    ಚಿತ್ರದುರ್ಗ: ಪ್ರೇಮಿಗಳ ದಿನಾಚರಣೆ ಬದಲಾಗಿ ಕೋಟೆನಾಡಿನ ಕಾಲೇಜು ವಿದ್ಯಾರ್ಥಿಗಳಿಂದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಬಲಿದಾನ ದಿವಸ್ ಆಚರಣೆ ಮಾಡಲಾಗಿದೆ.

    ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಲ್ಲಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿವೃತ ಯೋಧರು ಸೇರಿ ಪುಲ್ವಾಮಾದಲ್ಲಿ ವೀರ ಮರಣ ಹೊಂದಿದ 40 ಜನ ವೀರಯೋಧರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

    ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪುಲ್ವಾಮಾ ದಾಳಿ ಕುರಿತು ಮೆಲಕು ಹಾಕಿದ ನಿವೃತ್ತ ಯೋಧ ಸತ್ಯನಾರಾಯಣ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅಮೂಲ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇಂತಹ ಪ್ರೇಮಿಗಳ ದಿನ ಸೇರಿದಂತೆ ದೈನಂದಿನ ಬದುಕಲ್ಲಿ ದುಷ್ಪರಿಣಾಮ ಬೀರುವ ಆಚರಣೆಗಳನ್ನು ಆಚರಿಸುವ ಬದಲಾಗಿ ರಾಷ್ಟ್ರ ಪ್ರೇಮ ಬೆಳಸಿಕೊಂಡು ದೇಶ ಸೇವೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

    ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಸತ್ಯನಾರಾಯಣ್ ಉಪನ್ಯಾಸಕರಾದ ಲೇಪಾಕ್ಷ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.

  • ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಬೆಂಗಳೂರು: ಜ್ಯೂನಿಯರ್‌ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನಾಚರಣೆಯಂದು ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

    ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಿದ್ದಾನೆ.

    ಈ ಸಂಬಂಧ ನಟಿ ಮೇಘನಾ ಅವರು ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್ಲೋಡ್‌ ಮಾಡಿ ಜ್ಯೂನಿಯರ್‌ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. 2017ರ ಅಕ್ಟೋಬರ್‌ 22 ರಂದು ಚಿರು ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜೊತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ. ಜ್ಯೂನಿಯರ್‌ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್‌ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದರು. ಇಂದು ರಾತ್ರಿ 12 ಗಂಟೆಗೆ ನಮ್ಮ ಪ್ರೀತಿಯ ಸಂಕೇತವಾಗಿರುವ ನನ್ನ ಮಗನನ್ನು ಪರಿಚಯಿಸಲು ಚಿರು ಮತ್ತು ನಾನು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದರು.

    2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ಪ್ರೀತಿಸಿ ಮದುವೆಯಾಗಿದ್ದರು. 2020 ಅಕ್ಟೋಬರ್‌ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

     

     

    View this post on Instagram

     

    A post shared by Meghana Raj Sarja (@megsraj)

  • ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ

    ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ

    ಕೋಲಾರ: ಕೊರೊನಾ ಸಂಕಷ್ಟದಲ್ಲಿ ನೆಲಕಚ್ಚಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್ ಸಿಕ್ಕಿದ್ದು, ಗುಲಾಬಿ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಕೊರೊನಾ ಸಂಕಷ್ಟದಿಂದ ಹೂವು ಬೆಳೆಗಾರರಿಗೆ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಾಗಿತ್ತು, ಕಳೆದ ಹತ್ತು ತಿಂಗಳಿಂದ ಯಾವುದೇ ಸಭೆ ಸಮಾರಂಭಗಳಿಲ್ಲದೆ, ಜಾತ್ರೆ ಪೂಜೆಗಳಿಲ್ಲದೆ ಹೂವಿಗೆ ಬೇಡಿಕೆ ಇರಲಿಲ್ಲ. ಅಲ್ಲದೆ ವಿದೇಶಗಳಿಗೆ ರಫ್ತು ಮಾಡಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಕೋಲಾರ ಜಿಲ್ಲೆಯ ರೈತರು ಭಾರೀ ಸಂಕಷ್ಟಕ್ಕೊಳಗಾಗಿದ್ದರು.

    ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನದ ವಿಶೇಷವಾಗಿ ಗುಲಾಬಿ ಹೂವು ಬೆಳೆದ ರೈತರಿಗೆ ಸುಗ್ಗಿ ಹಬ್ಬ ಎನ್ನುವಂತಾಗಿದೆ. ಹತ್ತು ತಿಂಗಳಿಂದ ಮಕಾಡೆ ಮಲಗ್ಗಿದ್ದ ಗುಲಾಬಿ ಹೂವಿಗೆ ಈಗ ಒಳ್ಳೆಯ ಬೆಲೆ ಬಂದಿದೆ ಅನ್ನೋದು ಹೂವು ಬೆಳೆಗಾರರ ಮಾತು. ಅದಕ್ಕಾಗಿಯೇ ಫ್ರೆಬ್ರವರಿ ತಿಂಗಳು ಬಂತೆಂದ್ರೆ ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ. ನಮ್ಮ ದೇಶಕ್ಕಿಂತ ವಿದೇಶಗಳಲ್ಲಿ ಡಿಮ್ಯಾಂಡ್ ಜಾಸ್ತಿ ಇರುತ್ತದೆ. ಅದಕ್ಕಾಗಿ ಈಗ ಗುಲಾಬಿ ಹೂವಿಗೆ ಒಳ್ಳೆಯ ಬೇಡಿಕೆ ಬಂದಿದೆ. ಒಂದು ಹೂವಿನ ಬೆಲೆ 8 ರಿಂದ 10 ರೂಪಾಯಿ ವರಗೆ ಮಾರಾಟವಾಗುತ್ತಿದೆ.

    ಕೋಲಾರ ಜಿಲ್ಲೆಯಲ್ಲಿ ಒಟ್ಟು 540 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವು ಬೆಳೆದರೆ, ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವನ್ನು ರೈತರು ಪಾಲಿ ಹೌಸ್‍ನಲ್ಲಿ ಬೆಳೆಯುತ್ತಾರೆ.

    ಅದರಲ್ಲೂ ದೇಶ ಹಾಗೂ ವಿದೇಶಗಳಲ್ಲೂ ಬಹು ಬೇಡಿಕೆ ಇರುವ ತಾಜ್‍ಮಹಲ್, ಗೋಸ್ಟ್ರೈಕ್, ಅವಲಂಚ್ ವೈಟ್, ಎಲ್ಲೋ, ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು ಆಸ್ಟ್ರೇಲಿಯಾ, ಜಪಾನ್, ಸಿಂಗಪೂರ್, ಮಲೇಶಿಯಾ ಗಳಿಗೆ ರಫ್ತು ಮಾಡುತ್ತಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಹೂವಿಗೆ ಬೇಡಿಕೆ ಇಲ್ಲದೆ ಎಷ್ಟೋ ಜನರು ಹೂವಿನ ತೋಟವನ್ನೇ ನಾಶ ಮಾಡಿದ್ದು, ಶಕ್ತಿ ಇದ್ದವರು ಮಾತ್ರ ತೋಟವನ್ನು ಕಾಪಾಡಿಕೊಂಡಿದ್ದಾರೆ ಅನ್ನೋದು ರೈತರ ಮಾತು. ಹೀಗೆ ತೋಟವನ್ನು ಕಾಪಾಡಿಕೊಂಡವರಿಗೆ ಈಗ ಉಸಿರಾಡೋದಕ್ಕೆ ಒಳ್ಳೆಯ ಬೆಲೆ ಬಂದಿದೆ.

  • ನಾಳೆ ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನ- ಭಜರಂಗದಳ

    ನಾಳೆ ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನ- ಭಜರಂಗದಳ

    ಉಡುಪಿ: ನಾಳೆ ಬಲಿದಾನ ದಿನವಾಗಿದ್ದು, ಯಾರೂ ಪ್ರೇಮಿಗಳ ದಿನ ಆಚರಿಸಬಾರದು ಎಂದು ಭಜರಂಗದಳ ಕರೆ ನೀಡಿದೆ.

    ಭಜರಂಗದಳ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್ ಕೆ.ಆರ್. ಈ ಕುರಿತು ಮಾತನಾಡಿದ್ದು, ಎರಡು ವರ್ಷಗಳ ಹಿಂದೆ ಇದೇ ದಿನ ಪುಲ್ವಾಮಾದಲ್ಲಿ ದಾಳಿಯಾಗಿತ್ತು. ಭಯೋತ್ಪಾದಕರು ನಮ್ಮ ಯೋಧರನ್ನು ಹತ್ಯೆ ಮಾಡಿದ್ದರು. ಹೀಗಾಗಿ ಫೆಬ್ರವರಿ 14 ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನವನ್ನಾಗಿ ಆಚರಿಸಬೇಕು ಎಂದರು.

    ಜಗತ್ತಿಗೆ ಸಂಸ್ಕೃತಿಯನ್ನು ಕಳಿಸಿಕೊಟ್ಟ ದೇಶ ಭಾರತ. ಭಾರತದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿ ನಡೆಯುತ್ತಲೇ ಬಂದಿದೆ. ವ್ಯಾಲೆಂಟೈನ್ಸ್ ಡೇ ಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಪ್ರೇಮಿಗಳ ದಿನಾಚರಣೆ ಮಾಡಿದರೆ ಯುವಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತದೆ. ಪ್ರೇಮಿಗಳ ದಿನಾಚರಣೆಯಿಂದ ಅನೈತಿಕ ಚಟುವಟಿಕೆ ಹೆಚ್ಚುತ್ತದೆ ಎಂದು ಸುನಿಲ್ ಕೆ.ಆರ್. ಹೇಳಿದ್ದಾರೆ.