Tag: Valentines Day

  • ಪ್ರೇಮಿಗಳ ದಿನದಂದು ‘ಪ್ರೇಮಪತ್ರದ ಆಫೀಸು’ ತೆರೆದ ಸಿಂಹಪ್ರಿಯಾ

    ಪ್ರೇಮಿಗಳ ದಿನದಂದು ‘ಪ್ರೇಮಪತ್ರದ ಆಫೀಸು’ ತೆರೆದ ಸಿಂಹಪ್ರಿಯಾ

    ನ್ನಡದ ಹೆಸರಾಂತ ನಟ ವಸಿಷ್ಠ ಸಿಂಹ (Vasishtha Simha) ಮತ್ತು ನಟಿ ಹರಿಪ್ರಿಯಾ (Haripriya) ಈ ಬಾರಿಯ ಪ್ರೇಮಿಗಳ ಹಬ್ಬವನ್ನು (Valentine’s Day) ಆಚರಿಸಲು ಬೆಂಗಳೂರು ತೊರೆದಿದ್ದಾರೆ. ಪ್ರಕೃತಿಯ ಮಡಿಲಿಲ್ಲದ್ದುಕೊಂಡು ಅಪರೂಪದ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ. ಸ್ವತಃ ಸಾಹಿತ್ಯ ಪ್ರೇಮಿಯೂ ಆಗಿರುವ ವಸಿಷ್ಠ ಪ್ರೇಮಿಗಳ ದಿನದಂದು ಖ್ಯಾತ ಲೇಖಕ ಶಿವಕುಮಾರ ಮಾವಲಿ (Shivakumar Mavali) ಬರೆದ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕವನ್ನು (Book) ಪತ್ನಿ ಹರಿಪ್ರಿಯಾ ಜೊತೆಯಾಗಿ ಬಿಡುಗಡೆ ಮಾಡಿದ್ದಾರೆ.

    ವರ್ಷಗಳ ಕಾಲ ಪ್ರೇಮಿಗಳಾಗಿದ್ದು ಇತ್ತೀಚಿಗಷ್ಟೆ ದಂಪತಿಗಳಾಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವ್ಯಾಂಲಂಟೈನ್ ಡೇ ಅನ್ನು ಈ ಬಾರಿ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಒಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನೂ ಅವರು ಮೆಲುಕು ಹಾಕಿದ್ದಾರೆ.

    ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕ ಇದಾಗಿದ್ದು, ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಎಂಬ ವಿಶಿಷ್ಟ ಶೀರ್ಷಿಕೆಯನ್ನು ಹೊಂದಿದೆ. ಅಲ್ಲದೇ, ಇದೊಂದು ಕಥಾ ಸಂಕಲನವಾಗಿದೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಶಿವಕುಮಾರ ಮಾವಲಿ , ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವ್ಯಾಂಲಂಟೈನ್ ದಿನಗಳ ನೆನಪು ಮಾಡಿಕೊಂಡಿದ್ದಾರೆ. ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನ ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು.

    ಹರಿಪ್ರಿಯ, ”ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ” ಎಂದು ಹೇಳಿದರೆ, ವಸಿಷ್ಠ ಸಿಂಹ , ” ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ ” ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. ಮಾವಲಿ ಪಬ್ಲಿಕೇಶನ್ ಇಂದ ಪ್ರಕಟವಾಗುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು.

    ‘ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು, ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು’ ಎಂದು ಹರಿಪ್ರಿಯ ಹೇಳಿದರು. ಇದನ್ನೂ ಓದಿ: ಬೆಡ್‌ರೂಮ್‌ನಿಂದಲೇ ವ್ಯಾಲೆಂಟೈನ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ

    ‘ದೇವರು ಅರೆಸ್ಟ್ ಆದ’ ಮತ್ತು ‘ಟೈಪಿಸ್ಟ್ ತಿರಸ್ಕರಿಸಿದ ಕತೆ’ ಎಂಬ ಕತಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ ‘ಸುಪಾರಿ ಕೊಲೆ’ ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ ‘ಒಂದು ಕಾನೂನಾತ್ಮಕ ಕೊಲೆ’ ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ ‘LTTE Murthy Calling’ ಇತ್ತೀಚಿಗಷ್ಟೆ ತಮಿಳಿಗೆ ಅನುವಾದಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ-ಅದಾನಿಯ ಪ್ರೀತಿ ಷಹಜಹಾನ್ – ಮಮ್ತಾಝ್‌ನಂತೆ, ಇದನ್ನ ಜನಕ್ಕೆ ತಿಳಿಸಬೇಕು – ನಲಪಾಡ್

    ಮೋದಿ-ಅದಾನಿಯ ಪ್ರೀತಿ ಷಹಜಹಾನ್ – ಮಮ್ತಾಝ್‌ನಂತೆ, ಇದನ್ನ ಜನಕ್ಕೆ ತಿಳಿಸಬೇಕು – ನಲಪಾಡ್

    ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ (Youth Congress) ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಅಂಡ್ ಟೀಂ ಬೆಂಗಳೂರಿನ (Bengaluru) ವಿವಿಧೆಡೆ ವಿಶೇಷ ರೀತಿಯಲ್ಲಿ ಪ್ರೇಮಿಗಳ ದಿನವನ್ನ (Valentine’s Day) ಆಚರಿಸಿತು.

    `ಮೋದಿ ಲವ್ಸ್ ಅದಾನಿ (Gautam Adani), ಅಮಿತ್ ಶಾ ಲವ್ಸ್ ಅದಾನಿ’ ಪೋಸ್ಟರ್ ಹಿಡಿದುಕೊಂಡು ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ ನಲ್ಲಿ ಪ್ರತಿಭಟನೆ ನಡೆಸಿತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    ಕೈಯಲ್ಲಿ ಪೋಸ್ಟರ್ ಗುಲಾಬಿ ಹಿಡಿದುಕೊಂಡಿದ್ದ ನಲಪಾಡ್, ಮೋದಿ (Narendra Modi), ಅದಾನಿ ಮುಖವಾಡ ಧರಿಸಿಕೊಂಡು ಸಾರ್ವಜನಿಕರು ಹಾಗೂ ಮಳಿಗೆದಾರರಿಗೆ ಗುಲಾಬಿ ಹೂವು ನೀಡಿ ಪ್ರೇಮಿಗಳ ದಿನದ ಶುಭ ಕೋರಿದರು. ಇದನ್ನೂ ಓದಿ: ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನಲಪಾಡ್, ಮೋದಿ ಮತ್ತು ಅದಾನಿ ನಡುವಿನ ಪ್ರೀತಿ ಷಹಜಹಾನ್-ಮಮ್ತಾಝ್ ರೀತಿಯಂತೆ. ಮಮ್ತಾಝ್‌ಗಾಗಿ ಷಹಜಹಾನ್ ತಾಜ್ ಮಹಲ್ ಕಟ್ಟಿಸಿದಂತೆ, ಅದಾನಿಗಾಗಿ ಮೋದಿ ದೇಶದಲ್ಲಿ ರಸ್ತೆಗಳನ್ನ ಮಾಡಿಸುತ್ತಿದ್ದಾರೆ, ದೇಶವನ್ನು ಅವರಿಗೆ ಬೇಕಾದಂತೆ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಅವರ ಪ್ರೀತಿಯನ್ನು ಸಾರ್ವಜನಿಕರಿಗೆ ತಿಳಿಸಲು ನಾವು ಪ್ರೇಮಿಗಳ ದಿನಾಚರಣೆಯ ರ‍್ಯಾಲಿ ಮಾಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನ ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಪ್ರೇಮಿಗಳ ದಿನ ವಿರೋಧಿಸಿ ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ

    ಚೆನ್ನೈ: ಪ್ರೇಮಿಗಳ ದಿನಾಚರಣೆಯನ್ನು (Valentine’s Day) ವಿರೋಧಿಸಿ ಹಿಂದೂ ಸಂಘಟನೆಯೊಂದು ಬೀದಿ ನಾಯಿಗಳಿಗೆ (Dog) ಮದುವೆ (Marriage) ಮಾಡಿಸಿರುವ ಘಟನೆ ತಮಿಳುನಾಡಿನ (Tamil Nadu) ಶಿವಗಂಗಾದಲ್ಲಿ (Sivaganga) ನಡೆದಿದೆ.

    ತಮಿಳುನಾಡಿನ ಹಿಂದೂ ಮುನ್ನಾನಿ ಸಂಘಟನೆ ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ಭಾರತದ ಸಂಸ್ಕೃತಿಗೆ ವಿರೋಧವಾಗಿದೆ ಎಂದು ಹೇಳಿದೆ. ಈ ಹಿಂದೆಯೂ ಸಂಘಟನೆ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಲಾಬಿಗೆ ಫುಲ್ ಡಿಮ್ಯಾಂಡ್- ಒಂದು ಕೆಂಗುಲಾಬಿಗೆ 60 ರೂ.!

    ಸೋಮವಾರ ಹಿಂದೂ ಮುನ್ನಾನಿಯ ಕಾರ್ಯಕರ್ತರು 2 ಬೀದಿ ನಾಯಿಗಳನ್ನು ಕರೆತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.

    ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ಬೀದಿ ನಾಯಿಗಳ ಮದುವೆಯನ್ನು ಮಾಡಲಾಗಿದೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ. ಇದನ್ನೂ ಓದಿ: ರಿಯಲ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ರೀಲ್ ಪೊಲೀಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    ಲಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕೆಂದು ಮನ ಬಯಸುತ್ತದೆ. ಪ್ರೀತಿಯ (Love) ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ (Valentine’s Day)- ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.

    `ಹೇ ಹೃದಯ
    ಅವಳ ಕಿರುನಗೆ ನೆನಪಿದೆಯ
    ಧರೆಯ ಮೇಲೆ ಅಂತಹ ಹೆಣ್ಣಿರುವಳೇ
    ಹೇ ಹೃದಯ
    ಅವಳ ಸಿಹಿ ನುಡಿ ಕೇಳಿದೆಯ
    ಶೃತಿಯಲ್ಲಿರೊ ಹೆಣ್ಣು ಹುಟ್ಟಿರುವಳೇ
    ಅವಳ ನಾನು ಪ್ರೀತಿಸಬೇಕು, ಹೇ ಹೃದಯ…’

    ಎಂಬ ಎಸ್‌ಪಿಬಿ ಅವರ ಧನಿಯಲ್ಲಿ ಮೂಡಿದ ಹಂಸಲೇಖ ಅವರ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲಿನಲ್ಲಿ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲದೇ `ಜಗವೇ ನೀನು ಗೆಳತಿಯೇ…., ಸುಮ್ಮನೆ ಹೀಗೆ ನಿನ್ನನೇ ನೋಡುತಾ ಪ್ರೇಮಿಯಾದೆನೆ..’ ಮತ್ತಿತರ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

    ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ನಂದಿಬೆಟ್ಟ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಫ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬಿಸಿ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡುತ್ತಾರೆ. ಇದನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಪ್ರೇಮವನ್ನೂ ಹೀಗೂ ಅರ್ಥಮಾಡಿಕೊಳ್ಳಬಹುದು ಅಂತಾ ಹೇಳಿಬಿಡ್ತಾರೆ. ಇನ್ನೂ ಕೆಲ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..

    ಹಿಂದೆಲ್ಲಾ ಪ್ರೇಮಕ್ಕಾಗಿ ಹಂಬಲಿಸುತ್ತಿದ್ದ ಯುವ ಸಮೂಹದಲ್ಲಿ ಕೆಲವರು ಪತ್ರಗಳನ್ನು ಬರೆದು ತಿಂಗಳಾನುಗಟ್ಟಲೇ ಅವರ ಮನೆಯ ಬಳಿಯೆಲ್ಲಾ ಅಲೆದು ಸರ್ಕಸ್ ಮಾಡಿ ಸುಸ್ತಾಗುತ್ತಿದ್ದರು. ಕೊನೆಯಲ್ಲಿ `ಅವಳು ನಮ್ಮಂಥವರಿಗೆಲ್ಲ ಸಿಗಲ್ಲ ಬಿಡು’ ಎಂದು ಬೈದುಕೊಂಡು ಸಮಾಧಾನ ಮಾಡಿಕೊಳ್ತಿದ್ರು. ಆದರೀಗ ಆಧುನಿಕತೆ ಬದಲಾಗಿದ್ದು, ಪ್ರೀತಿ ಹೇಳುವುದು ಕ್ಷಣಮಾತ್ರ ಸುಖವಾಗಿದೆ. ವಾಟ್ಸಾಪ್, ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲವರು ಮದುವೆಗೆ ಮುನ್ನ ಒಂದಷ್ಟು ದಿನಗಳು ಮಾತ್ರವೇ ಪ್ರೇಮಕಾಲವೆಂದು ಭಾವಿಸುತ್ತಾರೆ. ಆ ದಿನಗಳಲ್ಲಂತೂ ತಾವೂ ಪ್ರೇಮಿಗಳಾಗಿ ಕೈ-ಕೈ ಹಿಡಿದು ಸುತ್ತಾಡುವುದೇನು? ಭವಿಷ್ಯದ ಬಗ್ಗೆ ವಿಚಾರವನ್ನೂ ವಿನಿಮಯವೇನು ಅಬ್ಬಾ! ಹೇಳಲಸಾಧ್ಯ ನಮ್ಮ ಪಡ್ಡೆ ಹುಡುಗರಂತೂ `ಪ್ರಿಯೆ ನಿನಗಾಗಿ ಚಂದ್ರನನ್ನೇ ತಂದುಕೊಡುವೆ’ ಎಂದೂ ಹೇಳಿ ಮರ ಹತ್ತಿಸುವುದು ಉಂಟೂ.. ಈ ದಿನಗಳು ಮನಸ್ಸುಗಳಲ್ಲಿ ತುಂಬುವ ಮರೆಯದ ಕ್ಷಣಗಳೆಂದರೆ ತಪ್ಪಾಗಲಾರದು.

    ಪ್ರೇಮಿಗಳ ದಿನ ಆಚರಿಸುವುದೇಕೆ?
    ಪ್ರೇಮಿಗಳ ದಿನಾಚರಣೆಯು ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು `ಇಂತಿ ನಿಮ್ಮ ವ್ಯಾಲೇಂಟಿನ್’ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು `ವ್ಯಾಲೇಂಟಿನ್ಸ್ ಡೇ’ (ಪ್ರೇಮಿಗಳ ದಿನ) ಎಂದು ಆಚರಣೆ ಮಾಡುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವ್ಯಾಲೆಂಟೈನ್ಸ್ ಡೇಗೆ ಎಗ್‌ಲೆಸ್ ಬ್ರೌನಿ ಕಪ್‌ಕೇಕ್ ಮಾಡಿ – ಪ್ರೀತಿ ಪಾತ್ರರನ್ನು ಇಂಪ್ರೆಸ್ ಮಾಡಿ

    ವ್ಯಾಲೆಂಟೈನ್ಸ್ ಡೇಗೆ ಎಗ್‌ಲೆಸ್ ಬ್ರೌನಿ ಕಪ್‌ಕೇಕ್ ಮಾಡಿ – ಪ್ರೀತಿ ಪಾತ್ರರನ್ನು ಇಂಪ್ರೆಸ್ ಮಾಡಿ

    ಪ್ರೇಮಿಗಳ ದಿನದ ಸೆಲೆಬ್ರೇಷನ್‌ಗೆ ನೀವು ನಿಮ್ಮ ಪ್ರೀತಿ ಪಾತ್ರರನ್ನು ಖುಷಿಪಡಿಸಲು ಏನಾದರೂ ಸ್ಪೆಷಲ್ ರೆಸಿಪಿ ಮಾಡಬೇಕಲ್ವಾ? ನಾವಿಂದು ವ್ಯಾಲೆಂಟೈನ್ಸ್ ಡೇಗೆ ಒಂದು ಸ್ಪೆಷಲ್ ರೆಸಿಪಿ ಹೇಳಿಕೊಡುತ್ತೇವೆ. ಎಗ್‌ಲೆಸ್ ಬ್ರೌನಿ ಕಪ್‌ಕೇಕ್ (Eggless Brownie Cupcake) ಅನ್ನು ನೀವೂ ಮಾಡಿ, ನಿಮ್ಮ ಪ್ರೀತಿಪಾತ್ರರಿಗೆ ನೀಡಿ ಅವರನ್ನು ಇಂಪ್ರೆಸ್ ಮಾಡಿ.

    ಬೇಕಾಗುವ ಪದಾರ್ಥಗಳು:
    ಕೋಕೋ ಪೌಡರ್ – ಅರ್ಧ ಕಪ್
    ಬಿಸಿ ನೀರು – ಮುಕ್ಕಾಲು ಕಪ್
    ಬ್ರೌನ್ ಶುಗರ್ – 1 ಕಪ್
    ಮಾಗಿದ ಬಾಳೆಹಣ್ಣು – 1
    ತೆಂಗಿನ ಎಣ್ಣೆ – ಅರ್ಧ ಕಪ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ಮೈದಾ ಹಿಟ್ಟು – ಒಂದೂವರೆ ಕಪ್
    ಅಡುಗೆ ಸೋಡಾ – ಅರ್ಧ ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಒಂದು ಬಟ್ಟಲಿಗೆ ಕೋಕೋ ಪೌಡರ್ ಮತ್ತು ಬೆಚ್ಚಗಿನ ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ.
    * ನಂತರ ಸಕ್ಕರೆ ಸೇರಿಸಿ, ಅದು ಕರಗುವವರೆಗೆ ಕಲಕಿ.
    * ಒಂದು ಫೋರ್ಕ್‌ನ ಸಹಾಯದಿಂದ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಅದನ್ನು ಕೋಕೋ ಪೌಡರ್ ಹಾಗೂ ಸಕ್ಕರೆಯ ಮಿಶ್ರಣಕ್ಕೆ ಸೇರಿಸಿ.
    * ಅದಕ್ಕೆ ತೆಂಗಿನ ಎಣ್ಣೆ ಹಾಗೂ ವೆನಿಲ್ಲಾ ಸಾರವನ್ನು ಸೇರಿಸಿ, ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
    * ಈಗ ಮೈದಾ ಹಿಟ್ಟು, ಅಡುಗೆ ಸೋಡಾ ಹಾಗೂ ಉಪ್ಪು ಸೇರಿಸಿ, ಎಲ್ಲವನ್ನೂ ಸ್ವಲ್ಪ ಮಿಶ್ರಣ ಮಾಡಿ.
    * ಈಗ ಕೇಕ್ ತಯಾರಿಸುವ ಲೈನರ್ ಅಥವಾ ಮೌಲ್ಡ್‌ಗಳನ್ನು ತೆಗೆದುಕೊಂಡು, ಅದರಲ್ಲಿ ಹಿಟ್ಟನ್ನು ಸುರಿಯಿರಿ.
    * ಬೇಕಿಂಗ್ ಪಾತ್ರೆಯಲ್ಲಿ ಅವುಗಳನ್ನು ಇಟ್ಟು, ಓವನ್‌ನಲ್ಲಿ ಇರಿಸಿ.
    * 12-15 ನಿಮಿಷಗಳ ನಂತರ ಕಪ್‌ಕೇಕ್‌ಗಳು ಬೆಂದಿದೆಯೇ ಎಂದು ಪರಿಶೀಲಿಸಿ.
    * ಬಳಿಕ ಕೇಕ್‌ಗಳನ್ನು ಓವನ್‌ನಿಂದ ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ.
    * ಇದೀಗ ಎಗ್‌ಲೆಸ್ ಬ್ರೌನಿ ಕಪ್‌ಕೇಕ್ ತಯಾರಾಗಿದ್ದು, ನಿಮ್ಮ ಪ್ರೀತಿಪಾತ್ರರಿಗೆ ನೀಡಿ. ಇದನ್ನೂ ಓದಿ: ಗರಿಗರಿಯಾದ ಗೋಬಿ 65 ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನಕ್ಕೆ ‘ಚೌಕಾಬಾರ’ ಟೀಮ್ ನಿಂದ ರೊಮ್ಯಾಂಟಿಕ್ ಸಾಂಗ್

    ಪ್ರೇಮಿಗಳ ದಿನಕ್ಕೆ ‘ಚೌಕಾಬಾರ’ ಟೀಮ್ ನಿಂದ ರೊಮ್ಯಾಂಟಿಕ್ ಸಾಂಗ್

    ವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಶಾಸಕ ಎಂ ಕೃಷ್ಣಪ್ಪ ಈ ಹಾಡನ್ನು ಬಿಡುಗಡೆ ಮಾಡಿ, ಹಾಡು ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು. ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ ಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.

    ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ ಇಂದು ಬಿಡುಗಡೆಯಾಗಿದೆ. ನಮ್ಮ ಮೇಲೆ ಪ್ರೀತಿಯಿಟ್ಟು ಹಾಡು ಬಿಡುಗಡೆ ಮಾಡಿಕೊಟ್ಟ ಜನಪ್ರಿಯ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ವಿಕ್ರಮ್ ಸೂರಿ. ನಮ್ಮ ಚಿತ್ರದ ರೊಮ್ಯಾಂಟಿಕ್ ಹಾಡು ಇಂದು ಬಿಡುಗಡೆಯಾಗಿದೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಯು.ಎಸ್.ಎ ನಲ್ಲೂ ಮಾರ್ಚ್ ನಲ್ಲೇ ಚಿತ್ರ ತೆರೆ ಕಾಣಲಿದೆ. ಏಪ್ರಿಲ್ ನಲ್ಲಿ ದುಬೈ, ಆಸ್ಟ್ರೇಲಿಯಾ ಮುಂತಾದ ಕಡೆ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.  ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಮ್ಮ ತಂಡಕ್ಕೆ ಧನ್ಯವಾದ ಎಂದರು ನಾಯಕಿ ಹಾಗೂ ನಿರ್ಮಾಪಕಿ ನಮಿತಾ ರಾವ್.

    ಚಿತ್ರದಲ್ಲಿ ಮೂರು ಹಾಡುಗಳಿದೆ. ಇಂದು ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಹಾಡನ್ನು ನಕುಲ್ ಅಭಯಂಕರ್ ಹಾಗೂ ರಮ್ಯ ಭಟ್ ಹಾಡಿದ್ದಾರೆ. ಬಿ.ಆರ್ ಲಕ್ಷ್ಮಣರಾವ್ ಈ ಹಾಡನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್‌ ಶಾ

    ಚಿತ್ರದ ನಾಯಕ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಕಾದಂಬರಿ ಬರೆದಿರುವ ಮಣಿ ಆರ್ ರಾವ್ , ಸಂಭಾಷಣೆ ಬರೆದಿರುವ ರೂಪ ಪ್ರಭಾಕರ್, ಛಾಯಾಗ್ರಾಹಕ ರವಿರಾಜ್ ಹಾಗೂ ಸಂಕಲನಕಾರ ಶಶಿಧರ್ ಸೇರಿದಂತೆ ಹಲವು ತಂತ್ರಜ್ಞರು “ಚೌಕಾಬಾರ” ದ ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.14 ಗೋವುಗಳನ್ನು ಅಪ್ಪಿಕೊಳ್ಳುವ ದಿನ ರದ್ದು

    ಫೆ.14 ಗೋವುಗಳನ್ನು ಅಪ್ಪಿಕೊಳ್ಳುವ ದಿನ ರದ್ದು

    ನವದೆಹಲಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board) ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು (Valentine’s Day) ಆಚರಿಸುವ ಬದಲು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ (Cow Hug Day) ಆಚರಿಸಲು ಕರೆ ನೀಡಿತ್ತು. ಆದರೆ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಈ ನಿರ್ಧಾರವನ್ನು ಮಂಡಳಿ ಹಿಂಪಡೆದಿದೆ.

    ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ದಿನವನ್ನು ಭಾರತದಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕೆಲ ದಿನಗಳ ಹಿಂದೆ ಕರೆ ನೀಡಿತ್ತು. ಹಸುಗಳನ್ನು ಅಪ್ಪಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ, ಆದ್ದರಿಂದ ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ತಿಳಿಸಿತ್ತು.

    ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಪ್ರಧಾನಿಗೆ ಪವಿತ್ರ ಹಸು ಎಂದು ಹೇಳಿ ಕಿಡಿಕಾರಿತ್ತು. ಇದನ್ನೂ ಓದಿ: ಹರಿಯಾಣದ ವೈದ್ಯರಿಗೆ ಡ್ರೆಸ್ ಕೋಡ್ – ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ಬ್ಯಾನ್

    ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಟಿಎಂಸಿಯ ಸಂತನು ಸೇನ್, ಮುಖ್ಯವಾಹಿನಿಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಹಸುವನ್ನಪ್ಪಿಕೊಳ್ಳುವ ದಿನಕ್ಕೆ ಕರೆ ನೀಡಲಾಗಿದೆ. ಇದು ಹುಸಿ ಹಿಂದುತ್ವ ಹಾಗೂ ಹುಸಿ ದೇಶಭಕ್ತಿಯಾಗಿದೆ ಎಂದು ಛೇಡಿಸಿದ್ದರು.

    ನಾನು ರೈತ ಸಮುದಾಯದಿಂದ ಬಂದವನು, ಕೇವಲ ಒಂದು ದಿನವಲ್ಲ, ನಾನು ಪ್ರತಿ ದಿನ ನನ್ನ ಹಸುವನ್ನು ಅಪ್ಪಿಕೊಳ್ಳುತ್ತೇನೆ. ಇದು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳ ಬಗೆಗಿನ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಡಿರುವ ಷಡ್ಯಂತ್ರವಾಗಿದೆ ಎಂದು ಕಾಂಗ್ರೆಸ್‌ನ ರಜನಿ ಪಾಟೀಲ್ ಕಿಡಿಕಾರಿದ್ದರು. ಇದನ್ನೂ ಓದಿ: 2022ರ ಬಜೆಟ್ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಗೆಹ್ಲೋಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್

    ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್

    ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentine’s Day) ಬಂತು ಅಂದ್ರೆ ಸಾಕು, ಟೀನೇಜ್ ಹುಡುಗ-ಹುಡುಗಿಯರಿಗೆ ಹಬ್ಬ. ಆದ್ರೆ ಇದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಅದನ್ನೇ ಪಾಲನೆ ಮಾಡೋದು ಸರಿಯಲ್ಲ ಅಂತಾ ಹಿಂದೂ ಸಂಘಟನೆಗಳು (Hindu Organizations) ಪ್ರತಿ ವರ್ಷದಂತೆ ಈ ವರ್ಷವೂ ಸಮರ ಸಾರಿವೆ. ಅದಕ್ಕೆ ಪೊಲೀಸರು (Police) ಕೂಡ ತಯಾರಿ ಮಾಡಿಕೊಂಡಿದ್ದಾರೆ.

    ಈಗಾಗಲೇ ಪ್ರೇಮಿಗಳ ದಿನಾಚರಣೆ ಮಾಡಬಾರದು. ಇದನ್ನ ತಂದೆ-ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು ಅಂತಾ ಕರೆ ಕೊಡಲಾಗಿದೆ. ಅದಕ್ಕೂ ಮೀರಿ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದು ಅಂತಾ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿವೆ. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್‌

    ಪ್ರತಿ ವರ್ಷದಂತೆ ಈ ವರ್ಷವೂ ಈ ರೀತಿ ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ (Police Department) ಎಚ್ಚೆತ್ತುಕೊಂಡಿದೆ. ನೈತಿಕ ಪೊಲೀಸ್‌ಗಿರಿ ನಡೆಯೋ ಭಯದಲ್ಲಿ ಇರೋ ಪೊಲೀಸರು ಪಾರ್ಕ್‌ಗಳಲ್ಲಿ, ಮಾಲ್‌ಗಳಲ್ಲಿ ಎಚ್ಚರಿಕೆ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಪಾರ್ಕ್ಗಳಲ್ಲಿ ಪ್ರೇಮಿಗಳೇ ಎಚ್ಚರಿಕೆ ವಹಿಸಬೇಕಿದೆ. ಮಾಲ್‌ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮಾಲ್‌ನ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲವ್ ಜಿಹಾದ್ V/S ವ್ಯಾಲೆಂಟೈನ್ಸ್ ಡೇ ಲಿಂಕ್..!

    ಲವ್ ಜಿಹಾದ್ V/S ವ್ಯಾಲೆಂಟೈನ್ಸ್ ಡೇ ಲಿಂಕ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

    ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

    ನವದೆಹಲಿ: ಫೆಬ್ರವರಿ 14 ದಿನಾಂಕ ಹೇಳಿದ ತಕ್ಷಣ ಅದು ಪ್ರೇಮಿಗಳ ದಿನ (Valentine’s Day) ಎಂಬುದು ಪ್ರತಿಯೊಬ್ಬರಿಗೂ ನೆನಪಾಗುತ್ತದೆ. ಈ ನಡುವೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board) ಒಂದು ಹೊಸ ನೋಟಿಸ್ ಅನ್ನು ಬಿಡುಗಡೆ ಮಾಡಿದೆ. ಈ ದಿನ ದನಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ (Cow Hug Day) ಆಚರಿಸಿ ಎಂದು ಕರೆ ನೀಡಿದೆ.

    ಹೌದು, ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಿದರೆ, ಭಾರತದಲ್ಲಿ ದನವನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಮಂಡಳಿ ಕರೆ ನೀಡಿದೆ. ಈ ಮೂಲಕ ಹಸುಗಳನ್ನು ಹೊಂದುವುದರಿಂದಾಗುವ ಅನುಕೂಲ, ಅದು ರಾಷ್ಟ್ರದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ತಿಳಿಸಲು ಮುಂದಾಗಿದೆ.

     

    ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ಎಲ್ಲರಿಗೂ ತಿಳಿದಿದೆ. ಇವು ಪಶು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಮಾತ್ರವಲ್ಲದೇ ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ. ತಾಯಿಯಂತೆ ಪೋಷಿಸುವ ಸ್ವಭಾವ ಹೊಂದಿರುವ ಇವುಗಳನ್ನು ‘ಕಾಮಧೇನು’ ಹಾಗೂ ‘ಗೋಮಾತೆ’ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿದ ಧೋನಿ

    ಈ ಬಗ್ಗೆ ವಿವರಿಸಿರುವ ಪ್ರಾಣಿ ಕಲ್ಯಾಣ ಮಂಡಳಿ, ಈ ನಮ್ಮ ಸಂಪ್ರದಾಯಗಳ ಅಳಿವಿಗೆ ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ. ಇದಕ್ಕಾಗಿ ಭಾವನಾತ್ಮಕ ಶ್ರೀಮಂತಿಕೆ, ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಹೆಚ್ಚಿಸಲು ಜನರು ಹಸುಗಳನ್ನು ತಬ್ಬಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದಿದೆ.

    ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಬಿಡುವಂತೆ ಮಾಡಿದೆ. ಹೀಗಾಗಿ ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಹಸುವನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಬಹುದು. ಇದರಿಂದ ಸಂತೋಷ ಮತ್ತು ಧನಾತ್ಮಕ ಶಕ್ತಿ ತುಂಬಿದ ಜೀವನವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ತನ್ನ ನೋಟಿಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k