Tag: Valatty

  • ಕೆ.ಆರ್.ಜಿ ಪಾಲಾಯ್ತು ಮಲಯಾಳಂ ‘ವಾಲಟ್ಟಿ’ ಸಿನಿಮಾ ರೈಟ್ಸ್

    ಕೆ.ಆರ್.ಜಿ ಪಾಲಾಯ್ತು ಮಲಯಾಳಂ ‘ವಾಲಟ್ಟಿ’ ಸಿನಿಮಾ ರೈಟ್ಸ್

    ಲಯಾಳಂನಲ್ಲಿ (Malayalam) ಬಹು ನಿರೀಕ್ಷೆ ಹುಟ್ಟುಹಾಕಿರುವ ಸಿನೆಮಾ ವಾಲಟ್ಟಿ (Valatty). ಇದೊಂದು ವಿಭಿನ್ನ ಹಾಗೂ ಶ್ವಾನಗಳ ಕುರಿತಾದ ಎಮೋಷನಲ್ ಸಿನೆಮಾ ಆಗಿದ್ದು, ಈಗಾಗಲೇ ಪೋಸ್ಟರ್ ಇಂದ ಎಲ್ಲರ ಗಮನ ಸೆಳೆದಿತ್ತು.ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಇಂದು (ಜುಲೈ 10) ವಾಲಟ್ಟಿ – ಎ ಟೀಲ್ ಆಫ್ ಟೇಲ್ಸ್ ಸಿನೆಮಾದ ಟ್ರೈಲರ್ ಬಿಡುಗಡೆ ಮಾಡಿದೆ.

    ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಈ ಅದ್ಭುತ ಚಿತ್ರದಲ್ಲಿ ಹೃದಯ ಬೆಚ್ಚಗಾಗಿಸುವ ಎಲಿಮೆಂಟ್ಸ್ ತುಂಬಿವೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ, ಇದರಲ್ಲಿ ಒಟ್ಟು 9 ನಾಯಿಗಳು ಇದ್ದು, ಸತತವಾಗಿ 2 ವರ್ಷ ಆಕ್ಟಿಂಗ್ ತರಬೇತಿ ಪಡೆದಿವೆ. ನಾಯಿಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಮೋಘವಾದ ಸಾಹಸಮಯ ದೃಶ್ಯಗಳನ್ನೂ ನೋಡಬಹುದು.

    ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಮೇಕಿಂಗ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಪ್ರೇಕ್ಷಕರು ಡೈಲಾಗ್ಸ್ ಗೆ ಫಿದಾ ಆಗಿದ್ದಾರೆ. ವಾಲಟ್ಟಿ ಕನ್ನಡ ಡೈಲಾಗ್ ಡಬ್ಬಿಂಗ್ ಜವಾಬ್ದಾರಿಯನ್ನು ರತ್ನನ್ ಪ್ರಪಂಚ ಸಿನೆಮಾದ ನಿರ್ದೇಶಕ ರೋಹಿತ್ ಪಡಕ್ಕಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಈಗಾಗಲೇ ಅಂಗಾಮಲಿ ಡೈರೀಸ್ ಹಾಗೂ ಹೋಮ್ ಎಂಬ ವಿಭಿನ್ನ ಸಿನೆಮಾಗಳನ್ನು ಮಾಡಿ ಹೊಸ ರೀತಿಯ ಸಿನಿಮಾಗಳಿಗೆ ಬುನಾದಿ ಹಾಡಿದ್ದ ವಿಜಯ್ ಬಾಬುರವರು ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್ ಚಿತ್ರವನ್ನು ಮಲಯಾಳಂನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.

     

    ನಿರ್ದೇಶಕ ದೇವನ್ (Devan) ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ‘ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್’ ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಜುಲೈ 21 ರಂದು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದ್ದು, ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ (KRG) ಸ್ಟುಡಿಯೋಸ್ ವಿಶ್ವದಾದ್ಯಂತ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಪಡೆದುಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲಯಾಳಂ ಸಿನಿಮಾದ ವಿತರಣಾ ಹಕ್ಕು ಪಡೆದ ಕೆಆರ್‌ಜಿ ಸ್ಟುಡಿಯೋಸ್

    ಮಲಯಾಳಂ ಸಿನಿಮಾದ ವಿತರಣಾ ಹಕ್ಕು ಪಡೆದ ಕೆಆರ್‌ಜಿ ಸ್ಟುಡಿಯೋಸ್

    ವಾಲಟ್ಟಿ (Valatty) ಚಿತ್ರವು ಅದ್ಭುತವಾಗಿ ಸಾಗುವ ಸಾಕು ನಾಯಿಗಳ ಗ್ಯಾಂಗ್ ಬಗ್ಗೆ ಹೃದಯ ಬೆಚ್ಚಗಾಗುವ ಕಥೆಯಾಗಿದ್ದು, ಅಮೋಘ ಸಾಹಸಮಯ ದೃಶ್ಯಗಳನ್ನು ಹೊಂದಿದೆ. ಈ ಚಿತ್ರದ ರೋಚಕ ವಿಷಯವೆಂದರೆ ಅದು ಮಲಯಾಳಂನ (Malayalam) ಜನಪ್ರಿಯ ನಟರಾದ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಮತ್ತು ಇತರರು ನಾಯಿ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

    ಇಡೀ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ ಮತ್ತು ಇತರ ಸಾಕು ಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರೋ ಸಿನಿಮಾ. ನೋಡುಗರ ಮನಸೆಳೆಯುವ ತಾಜಾ ದೃಶ್ಯಗಳಲ್ಲದೇ, ಪ್ರೀತಿ, ಕಾಮಿಡಿ ಹಾಗೂ ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ಕೆಆರ್‌ಜಿ ಸ್ಟುಡಿಯೋಸ್‌ನ (KRG Studios) ಸಂಸ್ಥಾಪಕ ಕಾರ್ತಿಕ್ ಗೌಡ (Karthik Gowda), ಈ ಚಿತ್ರವು ಖಚಿತವಾಗಿ ಗೆಲ್ಲಲಿದೆ ಎಂದು ಹೇಳಿದ್ದಾರೆ. ಅನನ್ಯ ಮತ್ತು ತಾಜಾ ಕಥೆ ಹೇಳುವ ಮೂಲಕ ಕಿರಿಯ ಮತ್ತು ಹಿರಿಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎನ್ನುವುದು ಕಾರ್ತಿಕ್ ಮಾತು. ದಿಲ್ ರಾಜು ಅವರು ತೆಲುಗಿನಲ್ಲಿ, ಅನಿಲ್ ತದಣಿ ಹಿಂದಿಯಲ್ಲಿ ಹಂಚಿಕೆಯ ಜವಾಬ್ದಾರಿಯನ್ನು ಹೊತ್ತಿದ್ದು, ಓವರ್ ಸೀಸ್ ಡಿಸ್ಟ್ರಿಬ್ಯುಶನ್ ಅನ್ನು ಹೋಮ್ ಸ್ಕ್ರೀನ್ ಎಂಟರ್ಟೇನ್ಮೆಂಟ್ ವಹಿಸಿಕೊಂಡಿದೆ.

    ವಾಲಟ್ಟಿಯನ್ನು ವಿಜಯ್ ಬಾಬು ಪ್ರಸ್ತುತಪಡಿಸಿದ್ದು ಫ್ರೈಡೇ ಫಿಲ್ಮ್ ಹೌಸ್ ನಿರ್ಮಿಸಿದ್ದಾರೆ. ನಿರ್ದೇಶಕ ದೇವನ್ ಅವರು ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗುತ್ತದೆ ಮತ್ತು ಒಂದು ವಾರದ ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳುತ್ತಿದೆ.